ಶೃಂಗೇರಿ: ‘ಶೃಂಗೇರಿ ಕ್ಷೇತ್ರವನ್ನು ಆರ್ಥಿಕವಾಗಿ ಅಭಿವೃದ್ಧಿ ಮಾಡುವ ಸಂಕಲ್ಪ ಮಾಡಿದ್ದೇನೆ. ಆದರಿಂದ ಈ ಕ್ಷೇತ್ರದಲ್ಲಿ ಸುಧಾಕರ್ ಶೆಟ್ಟಿಯವರನ್ನು ಬೆಂಬಲಿಸಿ ಗೆಲ್ಲಿಸುವ ಮೂಖಂತರ, ರಾಜ್ಯದಲ್ಲಿ ಎಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯನ್ನಾಗಿಸಬೇಕು ’ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೆಗೌಡ ಹೇಳಿದರು.
ಶೃಂಗೇರಿಯ ಗೌರೀಶಂಕರ್ ಸಭಾಂಗಣದಲ್ಲಿ ಜೆಡಿಎಸ್ ಪಕ್ಷ ಶುಕ್ರವಾರ ಆಯೋಜಿಸಿದ ಚುನಾವಣಾ ಪ್ರಚಾರ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿ ‘ರೇವಣ್ಣ ಲೋಕೋಪಯೋಗಿ ಮಂತ್ರಿಯಾಗಿದ್ದಾಗ ಈ ಕ್ಷೇತ್ರಕ್ಕೆ ನೀಡಿದ ರಸ್ತೆಯ ಸವಲತ್ತು ಯಾವ ರಾಜಕಾರಣಿಯು ಮಾಡಿಲ್ಲ. ಎಚ್.ಜಿ ಗೋವಿಂದೆ ಗೌಡರು ಶೃಂಗೇರಿಯಲ್ಲಿ ಬಹಳಷ್ಟು ಅಭಿವೃದ್ಧಿ ಮಾಡಿದ್ದಾರೆ ಎಂದರು.
ರೈತರ ಸಾಲ ಮನ್ನ ಮಾಡಿದ ಮೊದಲ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ. ಕಾಂಗ್ರೆಸ್ ಮತ್ತು ಬಿಜೆಪಿಯವರು ಅಸೂಯೆಯಿಂದ ಮನಸ್ಥಿತಿ ಕಳೆದುಕೊಂಡು ನಮ್ಮ ಪಕ್ಷದ ಬಗ್ಗೆ ಹೀನಾಯವಾಗಿ ಮಾತನಾಡುತ್ತೀದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕಾದರೆ ಜೆಡಿಎಸ್ ಪಕ್ಷಕ್ಕೆ ಮತ ನೀಡಿ ಪಕ್ಷವನ್ನು ಅಧಿಕಾರಕ್ಕೆ ತರಬೇಕು. ಪಂಜಾಬ್ನಲ್ಲಿ ಒಂದು ಜಾತಿಯ ಭತ್ತಕ್ಕೆ ದೇವೆಗೌಡ ಎಂದು ಹೆಸರಿಟ್ಟಿದ್ದಾರೆ. ಈ ನಾಮಕರಣ ಭಾರತ ರತ್ನ ಪ್ರಶಸ್ತಿಗಿಂತ ದೊಡ್ಡದು ಎಂದರು.
ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಅಭ್ಯರ್ಥಿ ಸುಧಾಕರ್ ಶೆಟ್ಟಿ ಮಾತನಾಡಿ, ‘ಜೆಡಿಎಸ್ ಪಕ್ಷದಲ್ಲಿ ಕಾರ್ಯಕರ್ತರೇ ನಾಯಕರು. ಜೆಡಿಎಸ್ ಪಕ್ಷ ಅಧಿಕಾರದಲ್ಲಿದ್ದಾಗ ಈ ಕ್ಷೇತ್ರದಲ್ಲಿ ಶಿಕ್ಷಣದ ಕ್ರಾಂತಿಯನ್ನು ಮೂಡಿಸಿದ್ದಾರೆ. ಪ್ರತಿ ಗ್ರಾಮದಲ್ಲಿ ಹೈಟೆಕ್ ಆಸ್ಪತ್ರೆಯನ್ನು ನಿರ್ಮಿಸಲು ಗುರಿ ಇಟ್ಟುಕೊಂಡಿದ್ದೇನೆ. ಕೋವಿಡ್ ಹರಡುತ್ತೀರುವಾಗ ಲಾಕ್ಡೌನ್ನಿಂದ ಜನರು ಮನೆಯಲ್ಲಿರುವಾಗ ಹಾಲಿ ಮತ್ತು ಮಾಜಿ ಶಾಸಕರು ಒಂದು ರೂಪಾಯಿಯನ್ನು ಖರ್ಚು ಮಾಡಿ ಅವರ ನೆರವಿಗೆ ಬಂದಿಲ್ಲ. ಅಮ್ಮ ಪೌಂಡೇಶನ್ ಮೂಖಂತರ ಜನರಿಗೆ ಆಹಾರ ಕಿಟ್ ಮತ್ತು ಆರೋಗ್ಯ ಕಿಟ್ನ್ನು ನಾನು ನೀಡಿದ್ದೇನೆ. ಆದರಿಂದ ಮತದಾರರು ಈ ಸಲ ಚುನಾವಣೆಯಲ್ಲಿ ನನಗೆ ಮತ ನೀಡಿ ಗೆಲ್ಲಿಸಿ ಜನರ ಸೇವೆ ಮಾಡಲು ಅವಕಾಶ ಮಾಡಿಕೋಡಬೇಕು’ ಎಂದರು.
ಸಭೆಯ ಅಧ್ಯಕ್ಷತೆಯನ್ನು ತಾಲ್ಲೂಕು ಜೆಡಿಎಸ್ ಘಟಕದ ಅಧ್ಯಕ್ಷ ಟಿ.ಟಿ ಕಳಸಪ್ಪ ವಹಿಸಿದ್ದರು. ಮುಖಂಡರಾದ ಎಚ್.ಜಿ ವೆಂಕಟೇಶ, ಎಚ್.ಟಿ ರಾಜೇಂದ್ರ, ಜಿ.ಜಿ ಮಂಜುನಾಥ್, ಭಂಡಿಗಡಿ ದಿವಾರ್ ಭಟ್, ವಿವೇಕಾನಂದ, ರಾಮಸ್ವಾಮಿ, ಚಂದ್ರಶೇಖರ್, ಗೋವಿಂದೆ ಗೌಡರು, ಕುಂಚೂರು ವಾಸಪ್ಪ, ಉದಯ ಸುವರ್ಣ, ಭರತ್ ಗಿಣಿಕಲ್, ದೇವೆಂದ್ರ ಎಚ್.ಜಿ, ಡಾ.ಅಣ್ಣದೊರೆ ಇದ್ದರು.
I have resolved to develop the Sringeri constituency economically