ಮೂಡಿಗೆರೆ: ಕಮಲ ಕೆರೆಯ ಕೆಸರಿನಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ದೇಶ ಹಾಗೂ ರಾಜ್ಯದಲ್ಲಿ ಅಧಿಕಾರದಲ್ಲಿದ್ದರೆ ಇನ್ನೂ ಚಂದ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಅವರು ಶುಕ್ರವಾರ ಕಾಂಗ್ರೆಸ್ ಅಭ್ಯರ್ಥಿ ನಯನ ಮೋಟಮ್ಮ ಅವರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ ಕನಕಪುರ ಕ್ಷೇತ್ರ ನನಗೆಷ್ಟು ಮುಖ್ಯವೋ ಮೂಡಿಗೆರೆ ಕ್ಷೇತ್ರವು ಅಷ್ಟೇ ಮುಖ್ಯ, ಇಂದಿರಾ ಗಾಂಧಿ ಅವರನ್ನು ಗೆಲ್ಲಿಸಿ ದೇಶದಲ್ಲಿ ಬದಲಾವಣೆ ತಂದಿದ್ದ ಈ ಕ್ಷೇತ್ರದಲ್ಲಿ ಮತ್ತೆ ಕಾಂಗ್ರೆಸ್ ಗೆಲ್ಲಿಸಿ ರಾಜ್ಯದಲ್ಲಿ ಬದಲಾವಣೆ ತರಬೇಕಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಈ ದೇಶದ ದೊಡ್ಡ ಶಕ್ತಿ, ಈ ಶಕ್ತಿಯನ್ನು ಬಿಜೆಪಿ ತುಳಿಯುವ ಪ್ರಯತ್ನ ನಡೆಸುತ್ತಿದೆ. ಇದು ಅವರಿಗೆ ಸಾಧ್ಯವಾಗದ ಮಾತು. ಕೇಂದ್ರ ಸರ್ಕಾರ ಚುನಾವಣೆ ಸಮಯದಲ್ಲಿ ಬೇಕಾಬಿಟ್ಟಿ ಹೇಳಿಕೆ ನೀಡುತ್ತಿದೆ. ಭರವಸೆಗಳ ಮಹಾಪೂರವನ್ನು ಹರಿಸುತ್ತದೆ. ಅವೆಲ್ಲವೂ ಶುದ್ಧ ಸುಳ್ಳು. ಅವರು ಚುನಾವಣೆಯಲ್ಲಿ ಕೊಟ್ಟ ಭರವಸೆಯನ್ನು ಇದುವರೆಗೂ ಈಡೇರಿಸಿಲ್ಲ ಅಂತ ಪಕ್ಷವನ್ನು ಜನ ತಿರಸ್ಕರಿಸಬೇಕು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ರಾಜ್ಯದಲ್ಲಿ ಬಂದು ಮಲಗಿದ್ದಾರೆ.
ಗ್ರಾಮ ಪಂಚಾಯಿತಿ ಅಧ್ಯಕ್ಷರಂತೆ ಗ್ರಾಮದಲ್ಲೆಲ್ಲ ತಿರುಗಾಡುತ್ತಾ ಮತಯಾಚಿಸುತ್ತಿದ್ದಾರೆ. ಇಂತಹ ದುರ್ಗತಿ ಒಬ್ಬ ಪ್ರಧಾನಿಗೆ ಮತ್ತು ಗೃಹ ಮಂತ್ರಿಗೆ ಬರಬಾರದಿತ್ತು. 440 ರೂ ಇದ್ದ ಅಡಿಗೆ ಅನಿಲಕ್ಕೆ 1200ಕ್ಕೇರಿಸಲಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೆರಿದೆ. ದೇಶದ ಸಂಪತ್ತನ್ನು ಖಾಸಗಿಯವರಿಗೆ ಹಸ್ತಾಂತರಿದೆ. ಒಡೆದಾಳುವ ನೀತಿ, ರಾಜ್ಯದಲ್ಲಿ ಹದಗೆಟ್ಟ ಕಾನೂನು ಸುವ್ಯವಸ್ಥೆಯಿಂದ ಬಿಜೆಪಿ ಛೀರಿಗೊಳಗಾಗಿದೆ. ಇಂತಹ ಜನ ವಿರೋಧಿ ಪಕ್ಷವಾದ ಬಿಜೆಪಿಯನ್ನು ಜನ ತಿರಸ್ಕರಿಸಲಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಹತಾಶರಾಗಿದ್ದಾರೆ. ಈ ಕಾರಣದಿಂದ ಅವರಿಬ್ಬರು ರಾಜ್ಯದಲ್ಲಿ ಬಿಡು ಬಿಟ್ಟಿದ್ದಾರೆ ಎಂದು ಲೇವಾಡಿ ಮಾಡಿದರು.
ಬಿಜೆಪಿಯ ಹಿಂದಿನ ಶಾಸಕ ಎಂ.ಪಿ.ಕುಮಾರಸ್ವಾಮಿ ಕಳೆದ 2ವರ್ಷದಿಂದ ತನ್ನ ಮನೆಯ ಬಾಗಿಲು ತಟ್ಟಿ ಟಿಕೆಟ್ ನೀಡುವಂತೆ ದುಂಬಾಲು ಬಿದ್ದಿದ್ದರು. ನಮ್ಮಲ್ಲಿಯೇ ಉತ್ತಮ ಅಭ್ಯರ್ಥಿ ಇರುವಾಗ ಬೇರೆ ಪಕ್ಷದವರನ್ನು ಕರೆತಂದು ಟಿಕೆಟ್ ನೀಡುವ ಅಗತ್ಯವಿಲ್ಲ. ಇಲ್ಲಿಗೆ ಬರಬೇಡ ಎಂದು ಹೇಳಿ ಕಳುಹಿಸಿದ್ದೆ ಅದರಿಂದ ಅವರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಚಿಕ್ಕಮಗಳೂರು ಕ್ಷೇತ್ರದಲ್ಲಿ ಹೆಚ್.ಡಿ.ತಮ್ಮಯ್ಯ ಅವರಿಗೆ ಟಿಕೆಟ್ ನೀಡುವಂತೆ ಜನರಿಂದ ಭಾರಿ ಒತ್ತಡ ಇತ್ತು ಹಾಗಾಗಿ ತಮ್ಮಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಜಯಗಳಿಸುವುದು ನಿಶ್ಚಿತ, 4ಬಾರಿ ಶಾಸಕರಾಗಿರುವ ಸಿ.ಟಿ.ರವಿ ಅವರನ್ನು ಜನ ಮನೆಯತ್ತ ಅಟ್ಟಲಿದ್ದಾರೆ ಎಂದು ಲೇವಾಡಿ ಮಾಡಿದರು.
ಕಾರ್ಯಕ್ರಮದಲ್ಲಿ ಅಭ್ಯರ್ಥಿ ನಯನ ಮೋಟಮ್ಮ, ಮಾಜಿ ಉಪಸಭಾಪತಿ ಬಿ.ಎಲ್.ಶಂಕರ್, ಕೆಪಿಸಿಸಿ ಕಾರ್ಯಧ್ಯಕ್ಷ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವರಾದ ಮೋಟಮ್ಮ, ಬಿ.ಬಿ.ನಿಂಗಯ್ಯ, ಮುಖಂಡರಾದ ಗಾಯತ್ರಿ ಶಾಂತೇಗೌಡ, ಕೆ.ಮಹಮ್ಮದ್, ರೇಖಾ ಹುಳಿಯಪ್ಪಗೌಡ, ಎಚ್.ಎಚ್.ದೇವರಾಜ್, ಡಾ.ಅಂಶುಮಂತ್, ಹೆಚ್.ಜಿ.ಸುರೇಂದ್ರ, ಸಚಿನ್ ಮೀಗ, ಎಂ.ಎನ್.ಅಶ್ವಥ್, ಎಂ.ಎಸ್.ಅನಂತ್, ಮರಗುಂದ ಪ್ರಸನ್ನ ಮತ್ತಿತರದಿದ್ದರು,
It is better if they are in power at the center and in the state