ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KARNATAKA SCHOOL EXAMINATION AND ASSESSMENT BOARD- KSEAB) ಪ್ರಕಟಣೆಯಲ್ಲಿ ತಿಳಿಸಿದೆ. ಇಂದು 11 ಗಂಟೆಯ ನಂತರ ಫಲಿತಾಂಶ ಜಾಲಾತಾಣದಲ್ಲಿ ಲಭ್ಯವಾಗಲಿದೆ. www.karresults.nic.in ಲಭ್ಯವಾಗಲಿದೆ. ಕರ್ನಾಟಕ SSLC ಬೋರ್ಡ್ ಪರೀಕ್ಷೆಯಲ್ಲಿ ಈ ಬಾರಿ ಒಟ್ಟು 8 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದರು.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷ ರಾಮನಾಥ್ ಮಾತನಾಡಿ, ಶೇಕಡಾ 83.89 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇಕಡಾ 87.87 ರಷ್ಟು ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ8,35,102 ಜನ ವಿದ್ಯಾರ್ಥಿಗಳ ಹಾಜರು ಆಗಿದ್ದರು. 7,00,619 ವಿದ್ಯಾರ್ಥಿಗಳು ಉತ್ತಿರ್ಣರಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಗ್ರಾಮೀಣ ಭಾಗದಲ್ಲಿ ಶೇ.87 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ನಗರ ಪ್ರದೇಶದ ಮಕ್ಕಳಿಗಿಂತ ಗ್ರಾಮೀಣ ಪ್ರದೇಶದಲ್ಲಿನ ಹೆಚ್ಚಿನ ಫಲಿತಾಂಶ ಲಭ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಶೇ.87 ಹಾಗೂ ನಗರ ಪ್ರದೇಶದಲ್ಲಿ ಶೇ.79 ಫಲಿತಾಂಶ ಸಿಕ್ಕಿದೆ. ಸರ್ಕಾರಿ ಶಾಲೆಗಳಲ್ಲಿ ಶೇಕಡ 86.74 ಉತ್ತಮ ಫಲಿತಾಂಶ ಲಭ್ಯವಾಗಿದೆ. ಅನುದಾನ ರಹಿತ ಶಾಲೆಗಳಲ್ಲಿ ಶೇ.90.89 ಫಲಿತಾಂಶ ಲಭ್ಯವಾಘಿದೆ. ಅನುದಾನಿತ ಶಾಲೆಯಲ್ಲಿ 85.64% ಫಲಿತಾಂಶ ಸಿಕ್ಕಿದೆ. ಕನ್ನಡದಲ್ಲಿ 14,983 ವಿದ್ಯಾರ್ಥಿಗಳು 125 ಅಂಕ ಪಡೆದಿದ್ದಾರೆ.
- ನಾಲ್ಕು ವಿದ್ಯಾರ್ಥಿಗಳು ಶೇ.100 ಫಲಿತಾಂಶ: (625 ಕ್ಕೆ 625 ಅಂಕ ಟಾಪರ್ಸ್).
- 625- ಭೂಮಿಕ ಪೈ, ನ್ಯೂ ಮೆಕಾಲೆ ಇಂಗ್ಲೀಷ್ ಸ್ಕೂಲ್, ಹೊಸೂರು ರೋಡ್ , ಬೆಂಗಳೂರು
- 625 – ಯಶಸ್ಸ್ ಗೌಡ, ಬಾಲಗಂಗಾಧರ ಸ್ವಾಮಿ ಹೈಸ್ಕೂಲ್ ಚಿಕ್ಕಬಳ್ಳಾಪುರ
- 625 – ಅನುಪಮ ಶ್ರೀಶೈಲ್ ಹಿರಿಹೋಳಿ, ಶ್ರೀಕಂಠೇಶ್ವರ ಪ್ರೌಢಶಾಲೆ, ಸೌದತ್ತಿ, ಬೆಳಗಾವಿ ಜಿಲ್ಲೆ
- 625- ಭೀಮನಗೌಡ ಹನುಮಂತ ಗೌಡ ಬೀರಾದರ್ ಪಾಟೀಲ್, ಆಕ್ಸ್ಫರ್ಡ್ ಇಂಗ್ಲೀಷ್ ಹೈಸ್ಕೂಲ್, ಮುದ್ದೆಬೀಹಾಳ
61,003 ವಿದ್ಯಾರ್ಥಿಗಳು ಶೇ.90ರಿಂದ 100 ಶೇಕಾಡವಾರು ಅಂಕ ಪಡೆದಿದ್ದಾರೆ. 1,517 ಸರ್ಕಾರಿ ಶಾಲೆಗಳು 100ಕ್ಕೆ 100 ರಿಸರ್ಲ್ಟ್ ಪಡೆದಿದ್ದಾರೆ. ಯಾವುದೇ ಸರ್ಕಾರಿ ಶಾಲೆಯಲ್ಲಿ ಶೂನ್ಯ ಫಲಿತಾಂಶ ಇಲ್ಲ. ಆದರೆ, ಖಾಸಗಿ ಮತ್ತು ಅನುದಾನಿತ ಶಾಲೆಗಳು ಸೇರಿ ಒಟ್ಟು 34 ಶಾಲೆಗಳಲ್ಲಿ ಶೂನ್ಯ ಫಲಿತಾಂಶವಾಗಿದೆ.
ಚಿತ್ರದುರ್ಗ ಜಿಲ್ಲೆ ಹೆಚ್ಚಿನ ಫಲಿತಾಂಶ ಲಭ್ಯವಾಗಿದ್ದು, ಶೇ.96 ಫಲಿತಾಂಶದೊಂದಿಗೆ ಪ್ರಥಮ ಸ್ಥಾನದಲ್ಲಿದೆ. ಮಂಡ್ಯ ಜಿಲ್ಲೆಯು ಶೇಕಡಾ 96.74 ಫಲಿತಾಂಶ ಪಡೆದಿದ್ದು, 2ನೇ ಸ್ಥಾನ ಪಡೆದಿದೆ. ಹಾಸನ 96,.68 ಸ್ಥಾನದೊಂದಿಗೆ 3ನೇ ಸ್ಥಾನ ಪಡೆದಿದೆ. ಉಳಿದಂತೆ ಕೊನೆಯ ಸ್ಥಾನದಲ್ಲಿ ಯಾದಗಿರಿ ಜಿಲ್ಲೆಯಿದ್ದು, ಶೇ.75.49 ಫಲಿತಾಂಶವನ್ನು ಪಡೆದುಕೊಂಡಿದೆ.
ಪರೀಕ್ಷಾ ಫಲಿತಾಂಶ ನೋಡಲು ವಿದ್ಯಾರ್ಥಿಗಳು ಅನುಸರಿಸಬೇಕಾದ ಮಾಹಿತಿ ಇಲ್ಲಿದೆ.
ಅಧಿಕೃತ ವೆಬ್ಸೈಟ್ www.karresults.nic.in ಗೆ ಭೇಟಿ
ಮುಖಪುಟದಲ್ಲಿ ಕರ್ನಾಟಕ SSLC 2023 ಫಲಿತಾಂಶ ಲಿಂಕ್ ಅನ್ನು ಒತ್ತಿರಿ
ತೆರೆಯುವ ಹೊಸ ಪುಟದಲ್ಲಿ ನಿಮ್ಮ ನೋಂದಣಿ ಸಂಖ್ಯೆಯನ್ನು ನಮೂದಿಸಿ ಮತ್ತು ವಿವರಗಳನ್ನು ಸಲ್ಲಿಸಿ
ಫಲಿತಾಂಶವನ್ನು ಪರಿಶೀಲಿಸಿ ಮತ್ತು ಡೌನ್ಲೋಡ್ ಮಾಡಿಟ್ಟುಕೊಳ್ಳಿ
Karnataka SSLC Result 2023 Declared: Chikmagalur 17th