ಚಿಕ್ಕಮಗಳೂರು: ಕಾರು ಹಾಗೂ ಟಿಟಿ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾದ ರಭಸಕ್ಕೆ ಟಿಟಿ ವಾಹನ ಪಲ್ಟಿಯಾಗಿ ಕಾರಿನಲ್ಲಿದ್ದ ಮಗು ಸೇರಿದಂತೆ ಇಬ್ಬರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಕಡೂರು ಪಟ್ಟಣದ ಬೆಂಗಳೂರು ಟು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ೨೦೬ ರಲ್ಲಿ ನಡೆದಿದೆ.
ಭೀಕರ ಅಪಘಾತವು ಕಡೂರು ತಾಲೂಕಿನ ಮತಿಘಟ್ಟ ಕ್ರಾಸ್ ಬಳಿ ನಡೆದಿದ್ದು, ಕಾರಿನಲ್ಲಿದ್ದ ಗಿರಿಧರ್ (೪೬) ಮಯಾಂಕ್(೩) ಸ್ಥಳದಲ್ಲೇ ಸಾವನಪ್ಪಿದ್ದಾರೆ. ಹೊನ್ನಾವರದಿಂದ ಸಂಬಂಧಿಕರ ಮದುವೆಗೆ ಗಿರಿಧರ್ ಕುಟುಂಬ ತೆರಳುವಾಗ ಘಟನೆ ನಡೆದಿದ್ದು, ಟಿಟಿ ವಾಹನದಲ್ಲಿದ್ದ ಕೇರಳ ಮೂಲದ ೭ ಪ್ರವಾಸಿಗರಿಗೆ ಗಂಭೀರ ಗಾಯಗಳಾಗಿವೆ.
ಕೇರಳದಿಂದ ಚಿಕ್ಕಮಗಳೂರಿಗೆ ಟಿಟಿ ವಾಹನ ಪ್ರವಾಸಕ್ಕೆ ಬರುತ್ತಿತ್ತು. ಗಂಭೀರ ಗಾಯಗೊಂಡ ಕೇರಳ ಮೂಲದ ೭ ಪ್ರವಾಸಿಗರನ್ನು ಶಿವಮೊಗ್ಗ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Accident between car and TT vehicle