ಮೂಡಿಗೆರೆ : ಶ್ರೀ ಕ್ಷೇತ್ರ ಧರ್ಮಸ್ಥಳ ಮತ್ತು ಶ್ರೀ ಕ್ಷೇತ್ರ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಾಲಂi ಖಾಸಗಿ ದೇವಾಲಯವಾ ಗಿದ್ದರೂ ಸಾರ್ವಜನಿಕ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಶ್ರೀಕ್ಷೇತ್ರ ಹೊರನಾಡಿನ ಧರ್ಮಕರ್ತರು ೧೯೯೨ ರಿಂದಲೂ ಜಾರಿಗೆ ತಂದಿರುವ ವಿವಿಧ ಯೋಜನೆಗಳು ದಿನದಿಂದ ದಿನಕ್ಕೆ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು. ಇಂಥಹ ಧಾರ್ಮಿಕ ಕಾರ್ಯವನ್ನು ಇತರೆ ಪುಣ್ಯ ಕ್ಷೇತ್ರಗಳು ಅಳವಡಿಸಿಕೊಂಡಲ್ಲಿ ಸರ್ಕಾರದ ಹೊರೆ ಇಳಿಸಿದಂತಾಗುತ್ತದೆ ಎಂದ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನ ಮೋಟಮ್ಮ ತಿಳಿಸಿದರು
ಕಳಸ ತಾಲ್ಲೂಕಿನ ಶ್ರೀಕ್ಷೇತ್ರ ಹೊರನಾಡು ಆಧಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೆಶ್ವರಿ ದೇವಾಲಯದ ಲಲಿತಕಲಾ ಮಂಟಪದಲ್ಲಿ ಶ್ರೀ ಕ್ಷೇತ್ರದ ಗ್ರಾಮೀಣಾಭಿವೃದ್ದಿ ಯೋಜನೆಗಳಡಿ ಯಲ್ಲಿ ಪರಿಕರಕ ಮತ್ತು ಹಣ್ಣಿನ ಗಿಡಗಳ ವಿತರಣಾ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದ ಅವರು. ಶ್ರೀ ಕ್ಷೇತ್ರವು ಹಲವಾರು ವರ್ಷ ಗಳಿಂದ ಜನಪಯೋಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ/ಜಿ.ಭೀಮೇಶ್ವರ ಜೋಷಿ ಮಾತನಾಡಿ. ಕರ್ನಾಟಕದಲ್ಲಿ ಪ್ರಪ್ರಥಮ ಶಾಲಾ ಮಕ್ಕಳಿಗೆ ಬಿಸಿಊಟ ಯೋಜನೆ ೧೯೫೮ ರಿಂದಲೇ ಶ್ರೀಕ್ಷೇತ್ರ ಪ್ರಾರಂಬಿಸಿದ್ದು ಮಾತ ಅನ್ನಪೂರ್ಣೇಶ್ವರಿ ಆಶಿರ್ವಾದ ಎಂದರೆ ತಪ್ಪಾಗಲಾರದು ಅಂದಿನಿಂದ ಇಂದಿನವರೆಗೂ ಮತ್ತು ಮುಂದೆಯೂ ಈ ಯೋಜನೆ ಮುಂದುವರೆಸಿಕೊಂಡು ಹೋಗುವುದಾಗಿ ಹಾಗೂ ಬಿಸಿ ಊಟಕ್ಕೆ ವಿದ್ಯಾರ್ಥಿಗಳ ಅನುಕೂಲ ವಾಗುವ ದೃಷ್ಠಿಯಿಂದ ತಟ್ಟೆ ಲೋಟಗಳನ್ನು ವಿತರಿಸುತ್ತಿದ್ದು. ತಮ್ಮ ಕ್ಷೇತ್ರದಲ್ಲಿ ೧೯೯೨ ರಿಂದ ೨೦೨೫ ರವರೆಗೆ ಧಾರ್ಮೀಕ ಯೋಜನೆ, ಧನ್ವಂತರಿ ಯೋಜನೆ, ಶೈಕ್ಷಣಿಕ ಯೋಜನೆ, ಸಾಮಾಜಿಕ ಯೋಜನೆ, ಸಾಂಸ್ಕೃತಿಕ ಯೋಜನೆ, ಸಾಮೂಹಿಕ ಉಪನಯನ, ಸಪ್ತಪದಿ ಯೋಜನೆ, ಗೃಹಲಕ್ಷ್ಮೀ ಯೋಜನೆ, ಆನಂದ ಜ್ಯೋತಿ ಯೋಜನೆ, ಅನ್ನದಾಸೋಹ ಯೋಜನೆಗಳಡಿಯಲ್ಲಿ ಕ್ಷೇತ್ರ ವತಿಯಿಂದ ೨೦ ಕೋಟಿರೂ ಗಳನ್ನು ವ್ಯಯಿಸಲಾಗಿದ್ದು. ಇನ್ನು ಮುಂದಿನ ದಿನಗಳಲ್ಲೂ ಸಹ ಯೋಜನೆಗಳನ್ನು ಹೆಚ್ಚಿನ ರೀತಿಯಲ್ಲಿ ಮುಂದುವರೆಸಿಕೊಂಡು ಬರುವುದಾಗಿ ತಿಳಿಸಿದರು.
ಈ ಬಾರಿ ಅನ್ನದಾಸೋಹ ಯೋಜನೆಯಡಿಯಲ್ಲಿ ಸರ್ಕಾರಿ ಹಿರಿಯ ಮತ್ತು ಕಿರಿಯ ೧೦೧ ಶಾಲೆಗಳಿಗೆ ಹಗೂ ೧೭ ದೇವಸ್ಥಾನಗಳಿಗೆ ೧೫ ಸಾವಿರ ತಟೆಟಗಳುಹಾಗೂ ಲೋಟಗಳು, ಶೈಕ್ಷಣಿಕ ಅಭಿವೃದ್ದಿ ಯೋಜನೆಯಡಿಯಲ್ಲಿ ೩೭ ಸರ್ಕಾರಿ ಶಾಳೆಗಳಿಗೆ ೧೨ ಸಾವಿರ ನೋಟ್ ಪುಸ್ತಕಗಳು, ಶೈಕ್ಷಣಿಕ ಅಭಿವೃದ್ದಿ ಯೋಜನೆಯಡಿಯಲ್ಲಿ ಕಳಸ ತಾಲ್ಲೂಕಿನ ಪ್ರೌಢಶಾಲೆಗಳು, ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜುಗಳಲ್ಲಿ ೨೦೨೪ -೨೫ ನೇ ಸಾಲಿನಲ್ಲಿ ಅತಿ ಹೆಚ್ಚು ಅಂಕಗಳಿಸಿದ ೧೫ ವಿಧ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕೃಷಿ ಸಮೃದ್ಧಿ ಯೋಜನೆಯಡಿಯಲ್ಲಿ ೫೦ ಫಲಾನುಭವಿ ರೈತರಿಗೆ ಕಲ್ಪವೃಕ್ಷ ಸಸಿಗಳನ್ನು ವಿತರಿಸುವುದರೊಂದಿಗೆ, ಹೊರನಾಡು ಸರ್ಕಾರಿ ಹಿರಿಯ ಮತುತ ಪ್ರೌಢಶಾಲೆಯ ವಿಧ್ಯಾರ್ಥಿಗಳ ವಾರ್ಷಿಕ ಶಾಲಾ ಶುಲ್ಕ ಹಾಗೂ ಧ್ವನಿವರ್ಧಕ ಮತ್ತು ಪ್ರೊಜೆಕ್ಟರ್ ವಿತರಿಸಲಾಗಿದ್ದು. ಅರಣ್ಯ ಮತ್ತು ಪ್ರಕೃತಿ ಸಂರಕ್ಷಣಾ ಯೋಜನೆಯ ಅಂಗವಾಗಿ ೧೦ ಸಾವಿರ ಗಿಡಗಳನ್ನು ವಿತರಿಸಲಾಗಿದೆ ಎಂದರು.
ಮುಖ್ಯ ಅತಿಥಿ ರೋಟರಿ ಸಂಸ್ಥೆ ಜಿಲ್ಲಾ ಗೌರ್‍ನರ್ -೨೦೨೫-೨೬ ಮಾತನಾಡಿ ಶ್ರೀಕ್ಷೇತ್ರದ ಧರ್ಮಕರ್ತರು ಮತ್ತವರ ಸಹೋದರರ ಸೇವೆ ಅಮೋಘವಾಗಿದ್ದು. ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಸಮಾಜಕ್ಕೆ ಅನನ್ಯ ಸೇವೆಯನ್ನು ಸಲ್ಲಿಸುತ್ತಿದೆ. ಎಂದರು.
ಹೊರನಾಡು ಗ್ರಾಮ ಪಂಚಾಯತಿ ಅಧ್ಯಕ್ಷ ಮಧುಪ್ರಸಾದ್ ಜೈನ್ ಮಾತನಾಡಿ ಹೊರನಾಡು ಅಕ್ಕಪಕ್ಕದಲ್ಲಿ ಕುಗ್ರಾಮವಾಗಿದ್ದು. ಆ ಗ್ರಾಮಗಳಿಗೆ ಬೆಳಕನ್ನು ನೀಡುವ ಮೂಲಕ ಜನರ ಕಷ್ಟ ಸುಖಗಳಿಗೆ ಶ್ರೀಕ್ಷೇತ್ರ ಹಲವು ಅಭಿವೃದ್ದಿಗಳನ್ನು ಮಾಡವುದರ ಮೂಲಕ ಅಲ್ಲಿಯ ಜನರಿಗೆ ಜೀವನಾಧಾರವಾಗಿದೆ ಎಂದರೆ ತಪ್ಪಾಗಲಾರದು ಎಂದರು.
ವೇದಿಕೆಯಲ್ಲಿ ರಾಮನಾರಾಯಣ ಜೋಷಿ,ರಾಜಗೋಪಾಲ್ ಜೋಷಿ, ಗಿರಿಜಾಶಂಕರ್ ಜೋಷಿ ಉಪಸ್ಥಿತರಿದ್ದರು.
Working as a social worker from Horanadu Sri Kshetra





