Tag: Allegation of love jihad case in Ajjampur taluk

  • ಅಜ್ಜಂಪುರ ತಾಲೂಕಿನಲ್ಲಿ ಲವ್ ಜಿಹಾದ್ ಪ್ರಕರಣದ ಆರೋಪ

    ಅಜ್ಜಂಪುರ ತಾಲೂಕಿನಲ್ಲಿ ಲವ್ ಜಿಹಾದ್ ಪ್ರಕರಣದ ಆರೋಪ

    ಚಿಕ್ಕಮಗಳೂರು: ಕಾಫಿನಾಡಲ್ಲೊಂದು ಲವ್ ಜಿಹಾದ್ ನಡೆದಿರುವ ಬಗ್ಗೆ ಆರೋಪವಿದ್ದು, ಅಪ್ರೋಜ್ ಎಂಬಾತ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿಕೊಂಡು ಹೋದ ಘಟನೆ ಅಜ್ಜಂಪುರ ತಾಲೂಕಿನ ದಂದೂರು ಗ್ರಾಮದಲ್ಲಿ ನಡೆದಿದೆ.

    ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಹಾಸ್ಟೆಲ್ ನಲ್ಲಿದ್ದು ಪ್ಯಾರಾ ಮೆಡಿಕಲ್ ಓದುತ್ತಿದ್ದ 17 ವರ್ಷದ ಅಪ್ರಾಪ್ತಯನ್ನು ಯುವಕ ಅಪ್ರೋಜ್ ಪ್ರೀತಿ ಹೆಸರಲ್ಲಿ ಕರೆದೊಯ್ದಿದ್ದಾನೆ ಎಂದು ಆರೋಪಿಸಲಾಗಿದೆ.

    ಭಾಲಕಿಯ ಪೋಷಕರಿಗೆ ಆಕೆ ಅಪ್ರೋಜ್ ಎಂಬ ಯುವಕನ ಜೊತೆ ಓಡಾಡುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು, ಆ ನಂತರ ಪೋಷಕರು ಆಕೆಯನ್ನು ಕಾಲೇಜು ಬಿಡಿಸಿ ಮನೆಗೆ ಕರೆತಂದು ಸಂಬಂಧಿಕರ ಮನೆಯಲ್ಲಿರಲು ಬಿಟ್ಟಿದ್ದರು.

    ಮೂರು ತಿಂಗಳಿಂದ ಸಂಬಂಧಿಕರ ಮನೆಯಲ್ಲಿ ವಾಸವಾಗಿದ್ದ ಅಪ್ರಾಪ್ತ ಬಾಲಕಿಯನ್ನು ಅಪ್ರೋಜ್ ಆ ಮನೆಯಿಂದ ಅಪಹರಿಸಿದ್ದಾನೆ ಎಂದು ಆರೋಪಿಸಲಾಗಿದೆ. ದೋರನಾಳು ಗ್ರಾಮದಲ್ಲಿ ಸಂಬಂಧಿಯೊಬ್ಬರ ಸಾವಿಗೆ ಸಂಬಂಧಿಕರು ಹೋಗಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.

    ಅಪ್ರೋಜ್ ಮೇಲೆ ಆರೋಪಿಸಿ ಬಾಲಕಿಯ ತಂದೆಯಿಂದ ಅಜ್ಜಂಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಆರೋಪಿ ಚಿಕ್ಕಮಗಳೂರು ಪೋಕೋ ಕೋರ್ಟ್ ಗೆ ಹಾಜರಾಗುವ ಸಾಧ್ಯತೆ ಇದೆ.

    Allegation of love jihad case in Ajjampur taluk