ಚಿಕ್ಕಮಗಳೂರು: ಜಿಂದಗಿ ಖ್ಯಾತಿಯ ರಗಡ್ ಸ್ಟಾರ್ ರಾಜೀವ್ ಹಾಗೂ ಖ್ಯಾತ ಖಳನಟ ರವಿಶಂಕರ್ ಅಭಿನಯದ ಕ್ಯಾಪಿಟಲ್ ಸಿಟಿ ಸಿನಿಮಾ ಜುಲೈ 4 ರಂದು ಅತಿಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ, ಎಂದು ಚಿತ್ರತಂಡ ಮಾಧ್ಯಮ ಘೋಷ್ಠಿಯಲ್ಲಿ ತಿಳಿಸಿದರು.
ಜಿಂದಗಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದೇನೆ. ಸುದೀಪ್ ನಟನೆಯ ಮಸ್ತ ಮಜಾ ಮಾಡಿ ನೋಡಿ, ಶಿವರಾಜ್ ಕುಮಾರ್ ಅಭಿನಯದ ನಂದಾ ಅತಿಹೆಚ್ಚು ಸಕ್ಸಸ್ ನೀಡಿದ ನಿರ್ದೇಶಕ ಅನಂತ್ ರಾಜು ಕ್ಯಾಪಿಟಲ್ ಸಿಟಿಗೆ ಆಕ್ಷನ್ ಕಟ್ ಹೇಳಿದ್ದಾರೆ. ಅಕ್ಕ- ತಮ್ಮ, ತಂದೆ- ಮಗಳ ಸೆಂಟಿಮೆಂಟ್ ನೊಂದಿಗೆ ಬೆಂಗಳೂರಿನ ಭೂಗತ ಲೋಕದ ಕಥೆಯನ್ನು ಕ್ಯಾಪಿಟಲ್ ಸಿಟಿ ಯಲ್ಲಿ ಪ್ರೇಕ್ಷಕರಿಗೆ ಹೆಚ್ಚು ಎಂಟರ್ ಟೇನ್ ಮೆಂಟ್ ನೀಡಲಿದೆ, ಎಂದು ರಗಡ್ ಸ್ಟಾರ್ ರಾಜೀವ್ ಹೇಳಿದರು.
ಕ್ಯಾಪಿಟಲ್ ಸಿಟಿ ನನ್ನ 11 ನೇ ಸಿನಿಮಾ. ಈ ಸಿನಿಮಾ ಆಕ್ಷನ್ ಓರಿಯೆಂಟೆಡ್ ಸಿನಿಮಾವಾದರು ಸಮಾಜಕ್ಕೆ ಅತ್ಯತ್ತುಮ ಸಂದೇಶವಿದೆ. ಕ್ಯಾಪಿಟಲ್ ಸಿನಿಮಾ 5 ಭಾಷೆಗಳಲ್ಲಿ ಮೂಡಿ ಬಂದಿದ್ದು ಮೊದಲು ಕನ್ನಡದಲ್ಲಿ ಬಿಡುಗಡೆ ಮಾಡಲಿದ್ದೇವೆ. ನಂತರ 5 ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು ಮೊದಲು ಕನ್ನಡಿಗರು ಸಿನಿಮಾ ನೋಡಿ ಎಂದು ಅನಂತರಾಜು ತಮ್ಮ ಸಿನಿಮಾ ಬಗ್ಗೆ ಮಾತನಾಡಿದರು.
ಕ್ಯಾಪಿಟಲ್ ಸಿನಿಮಾದಲ್ಲಿ ರವಿಶಂಕರ್, ತೆಲುಗಿನ ಸುಮಂತ್ , ಶರತ್ ಲೋಹಿತಾಶ್ವ, ಕಾಮೆಡಿ ಕಿಲಾಡಿಗಳು ಖ್ಯಾತಿಯ ರಿತೇಶ್ ಸೇರಿದಂತೆ ದೊಡ್ಡ ತಾರ ಬಳಗವಿದೆ. ಕನ್ನಡ ಭಾಷೆಯಲ್ಲಿ 200 ಕ್ಕೂ ಹೆಚ್ಚು ಚಿತ್ರಂದಿರಗಳಲ್ಲಿ ರಿಲೀಸ್ ಆಗಲಿದ್ದು ಪ್ರೇರಣಾ ಸಿನಿಮಾದ ನಾಯಕಿಯಾಗಿ ಪ್ರತಿಭೆ ತೋರಿಸಿದ್ದಾರೆ.
ಕ್ಯಾಪಿಟಲ್ ಸಿಟಿ ಸಿನಿಮಾ ನಿರ್ಮಾಣಕ್ಕೆ ಇನ್ ಫಿನಿಟಿ ಕ್ರಿಯೇಷನ್ಸ್ ಬ್ಯಾನರ್ ಹಲವು ನಿರ್ಮಾಪಕರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಶಿವಪ್ಪ ಕುಡ್ಲೂರು ಈ ಸಿನಿಮಾಕ್ಕೆ ಕೈ ಜೋಡಿಸಿ ಖಳನಟನಾಗಿ ಅಭಿನಯಿದ್ದಾರೆ. ಬಾಬು ರೆಡ್ಡಿ, ಆನೇಕಲ್ ನಾಗರಾಜ್, ಕೃಷ್ಣಮೂರ್ತಿ, ಕೆ.ಟಿ.ಮುನಿರಾಜು,ಹಾಗೂ ಗುಣಶೇಖರನ್ ಕ್ಯಾಪಿಟಲ್ ಸಿನಿಮಾದಲ್ಲಿ ಅಭಿನಯಿಸಿ, ನಿರ್ಮಾಣದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಾಸನದ ಹುಲಿ ವಸಂತ ಮಾಧವನ್ ಸಿನಿಮಾದಲ್ಲಿ ಅಭಿನಯಿಸಿ, ಸಹ ನಿರ್ಮಾಪಕರಾಗಿದ್ದಾರೆ. ಹಾಸನದ ಕೆ.ಎಮ್.ಶ್ರೀನಿವಾಸ್ ಕ್ಯಾಪಿಟಲ್ ಸಿಟಿ ಸಿನಿಮಾದ ಪ್ರಮೋಷನ್ ನಲ್ಲಿ ಭಾಗವಹಿಸಿದ್ದಾರೆ.
“Capital City” movie release on July 4th
