ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ಪ್ರಕಟಗೊಂಡಿದೆ. ಐಪಿಸಿ ಸೆಕ್ಷನ್ 376(2)(k) ಅತ್ಯಾ1ಚಾರ ಅಪರಾಧಕ್ಕೆ ಜೀವಾವಧಿ ಶಿಕ್ಷೆಯಾಗಿದೆ.
ಈ ಮೂಲಕ ಜೀವನ ಪರ್ಯಂತ ಜೈಲಿನಲ್ಲೇ ಇರುವ ಶಿಕ್ಷೆ ಪ್ರಕಟವಾಗಿದೆ. 376(2)(n) ಸೆಕ್ಷನ್ ಗೆ ಜೀವಾವಧಿ. 354 ಗೆ 3 ವರ್ಷ, 354(b) 3 ವರ್ಷ ಕಠಿಣ ಕಾರಗೃಹ ಶಿಕ್ಷೆ, ಒಟ್ಟು 11.35 ಲಕ್ಷ ದಂಡ ಜೊತೆಗೆ ಸಂತ್ರಸ್ತೆಗೆ ಪರಿಹಾರ ನೀಡುವಂತೆ ಕೋರ್ಟ್ ಆದೇಶ ಹೊರಬಿದ್ದಿದೆ.
ಈ ಮೂಲಕ ಪ್ರಜ್ವಲ್ ರೇವಣ್ಣಗೆ ಬಹುದೊಡ್ಡ ಶಿಕ್ಷೆಯಾಗಿದೆ.
ಯಾವ ಸೆಕ್ಷನ್‌ಗೆ ಎಷ್ಟು ದಂಡ?
ಐಪಿಸಿ 376(2)(k), ಜೀವಾವಧಿ, 5 ಲಕ್ಷ
ಐಪಿಸಿ 376(2)(n), – ಜೀವಾವಧಿ, 5 ಲಕ್ಷ
ಐಪಿಸಿ 354(a) – 3 ವರ್ಷ ಕಠಿಣ ಜೈಲು, 25 ಸಾವಿರ ದಂಡ
ಐಪಿಸಿ 354(b) – 7 ವರ್ಷ ಕಠಿಣ ಜೈಲು, 50ಸಾವಿರ ದಂಡ, ದಂಡ ಪಾವತಿಸದಿದ್ದಲ್ಲಿ 6 ತಿಂಗಳು ಸರಳ ಜೈಲು
ಐಪಿಸಿ 354(c) – 3 ವರ್ಷ ಕಠಿಣ ಜೈಲು
ಐಪಿಸಿ 506 – 2 ವರಗಷ ಕಠಿಣ ಜೈಲು 10 ಸಾವಿರ ದಂಡ
ಐಪಿಸಿ 201 – 3ವರಗಷ ಕಠಿಣ ಜೈಲಿ, 25 ಸಾವಿರ ದಂಡ
IT ACt 66(E) – 3 ವರ್ಷ ಕಠಿಣ, 25 ಸಾವಿರ ದಂಡ
ಕೆ ಆರ್ ನಗರದ ಮನೆಗೆಲಸದವಳ ಮೇಲಿನ ಅತ್ಯಾ1ಚಾರ ಪ್ರಕರಣದ ವಿಚಾರಣೆ ನಡೆಸಿ ಶುಕ್ರವಾರ ದೋಷಿ ಎಂದು ಪ್ರಕಟಿಸಿದ್ದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಶನಿವಾರ ಮಧ್ಯಾಹ್ನ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದೆ. ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ಅವರು ಈ ಆದೇಶ ಪ್ರಕಟಿಸಿದ್ದಾರೆ.
ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376(2)(n) ಮತ್ತು 376(2)(k) ಅಡಿಯಲ್ಲಿ ಆರೋಪಗಳು ದಾಖಲಾಗಿದೆ. ಈ ಕಲಂಗಳು ನಿರಂತರ ಅತ್ಯಾ1ಚಾರ ಮತ್ತು ನೌಕರಿ ಮಾಡುತ್ತಿರುವ ಮಹಿಳೆಯ ಮೇಲೆ ನಡೆದ ಅತ್ಯಾ1ಚಾರಕ್ಕೆ ಸಂಬಂಧಪಟ್ಟದ್ದಾಗಿದೆ.
ಮೊದಲ ಪ್ರಕರಣದಲ್ಲಿ ಮಾತ್ರವೇ ಪ್ರಜ್ವಲ್ ವಿರುದ್ಧ ತೀರ್ಪು ಪ್ರಕಟಗೊಂಡಿದ್ದು, ಇನ್ನೂ ಮೂರು ಪ್ರಕರಣಗಳು ಇದೇ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.
ಇನ್ನು ಈ ಮೂರು ಪ್ರಕರಣದ ಒಂದು ಪ್ರಕರಣದಲ್ಲಿ ಪ್ರಜ್ವಲ್ ತಂದೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಮತ್ತು ತಾಯಿ ಭವಾನಿ ರೇವಣ್ಣ ವಿರುದ್ಧ ಕೂಡ ಆರೋಪ ಇದ್ದು, ಪ್ರಕರಣ ವಿಚಾರಣೆ ಹಂತದಲ್ಲಿದೆ.
Former Hassan MP Prajwal Revanna sentenced to life imprisonment
