ಚಿಕ್ಕಮಗಳೂರು: ಅಹಿಂದಾ ಹೆಸರಿನಲ್ಲಿ ಅಧಿಕಾರ ಪಡೆದ ಸಿದ್ದರಾಮಯ್ಯ ನೇತೃತ್ವದ ರಾಜ್ಯಸರ್ಕಾರ ಮುಸ್ಲೀಮರ ಮತಬ್ಯಾಂಕ್‌ಗಾಗಿ ಸಂವಿಧಾನ ವಿರೋಧಿ ನೀತಿ ಅನುಸರಿಸಿ ನಿರಂತರವಾಗಿ ಹಿಂದೂಗಳನ್ನು ಶೋಷಿಸುತ್ತಿದೆ. ಪರಿಶಿಷ್ಟರಿಗೆ ಮೀಸಲಿಟ್ಟ ಕೋಟಿಗಟ್ಟಲೇ ಹಣವನ್ನು ಎಗ್ಗಿಲ್ಲದೇ ಗ್ಯಾರಂಟಿಗೆ ಬಳಸಿಕೊಂಡು ಪರಿಶಿಷ್ಟರನ್ನು ಮೂಲೆಗುಂಪು ಮಾಡುತ್ತಿದೆ ಎಂದು ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ನಗರದ ಬಸವನಹಳ್ಳಿ ಮುಖ್ಯರಸ್ತೆಯ ಶಂಕರ ಮಠದ ಸಮೀಪ ಗುರುವಾರ ನಡೆದ ಜನಾಕ್ರೋಶ ಸಭೆ ಯನ್ನುದ್ದೇಶಿಸಿ ಅವರು ಮಾತನಾಡಿ ಹಣದ ಕೊರತೆಯಿಂದ ರಾಜ್ಯಸರ್ಕಾರ ದಿನೇ ದಿನೇ ಗ್ಯಾರಂಟಿ ಯೋ ಜನೆ ಪೂರೈಸಲು ದಿನಬಳಕೆ ವಸ್ತುಗಳು ಏರಿಸಿ ಸಾರ್ವಜನಿಕರ ನೆಮ್ಮದಿ ಜೀವನಕ್ಕೆ ಪೆಟ್ಟು ನೀಡುತ್ತಿದೆ ಎಂದು ಆರೋಪಿಸಿದರು.
ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ರಾಜ್ಯಸರ್ಕಾರ ಮೈಸೂರು ಮಹಾರಾಜರ ಆಳ್ವಿಕೆಯ ಮಾದರಿಯಂತೆ ಹೇಳುತ್ತಿದ್ದಾರೆ. ಮೈಸೂರು ಮಹಾರಾಜರು ಕನ್ನಾಂಬಾಡಿ ಅಣೆಕಟ್ಟು, ಮೈಸೂರು ವಿವಿ, ಉ ಕ್ಕುಕಾರ್ಖಾನೆ, ಕಾಫಿ ಕ್ಯೂರಿಂಗ್ ಸೇರಿದಂತೆ ಜನೋಪಯೋಗಿ ಕಾರ್ಯ ಮಾಡಿದ್ದಾರೆ.
ಆದರೆ ಸಿದ್ದರಾ ಮಯ್ಯ ಸರ್ಕಾರ ಬೆಲೆಏರಿಕೆ, ಹನಿಟ್ರಾಪ್, ಶೇ.೬೦ರಷ್ಟು ಕಮೀಷನ್, ಪ್ರೇನ್‌ಡ್ರೈವ್‌ನಂಥ ಒಂದಿಲ್ಲೊಂದು ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಹಲಾಲ್ ಕಟ್ ಮತ್ತು ಹಲಾಲ್‌ಕೋರರ ಸರ್ಕಾರ ಎಂದು ರಾಜ್ಯದ ಜನತೆ ಹೇಳುತ್ತಿದ್ದಾರೆ. ಸರ್ಕಾರಿ ಇಲಾಖೆಗಳಲ್ಲಿ ಲಂಚದ ಹಾವಳಿ, ಶೈಕ್ಷಣಿಕ ಸಾಲಿನ ಬಜೆಟ್‌ನಲ್ಲಿ ೧.೧೬ ಲಕ್ಷ ಕೋಟಿ ಸಾಲವೆಸಗಿದ ಕುಖ್ಯಾತಿ ಸರ್ಕಾರವಿದು.
ಹಸಿ-ಒಣ ಕಸಕ್ಕೂ ತೆರಿಗೆ ವಿಧಿಸುವ ಈ ಸರ್ಕಾ ರ ಮುಂದೆ ಗಾಳಿಗೂ ತೆರಿಗೆ ವಿಧಿಸಿ ಲಾಭ ಮಾಡಿಕೊಳ್ಳುತ್ತದೆ ಎಂದು ಹೇಳಿದರು.
ದೇಶವನ್ನು ಒಡೆಯುವ ಸಮಾಜಕ್ಕೆ ಮೀಸಲಾತಿ ನೀಡುವ ಸೊಕ್ಕು ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಬಂ ದಿದೆ. ಮುಂದೆ ಜಿಲ್ಲೆಯ ರತ್ನಗಿರಿ ಬೋರೆ, ನೆಲ್ಲೂರು ಮಠ, ದತ್ತಪೀಠವನ್ನು ದರ್ಗಾವನ್ನಾಗಿಸಲು ಪ್ರಯತ್ನಿ ಸುತ್ತಿದೆ. ಆದರೆ ಹಿಂದೂಪರ ಸಂಘಟನೆಗಳ ಹೋರಾಟದಿಂದ ಯಾವುದು ಫಲಪ್ರಧವಾಗಲ್ಲ. ಹಿಂದೂಗಳ ಆಸ್ತಿ ಹಿಂದೂಗಳಾಗಿ ಉಳಿಯಲಿದೆ ಎಂದು ತಿಳಿಸಿದರು.
ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ ವಂಚನೆ, ಮೋಸ, ಸುಳ್ಳೇಳಿ ಅಧಿಕಾರ ಗಿಟ್ಟಿಸಿಕೊಂಡು ಸಿದ್ದರಾಮಯ್ಯರ ಅಸಲಿ ಸತ್ಯ ಬಯಲಾಗುತ್ತಿದೆ. ಬಿಜೆಪಿ ವಿರುದ್ಧ ಶೇ.೪೦ ಕಮೀಷನ್ ಎಂಬ ಆರೋಪ ಮಾಡಿದ್ದ ಕಾಂಗ್ರೆಸ್‌ಗೆ ಖುದ್ದು ಲೋಕಾಯುಕ್ತ ಹಾಗೂ ನಾಗಮೋಹನ್‌ದಾಸ್ ಈ ಪ್ರಕರಣ ಸತ್ಯಕ್ಕೆ ದೂರವಾಗಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಪರಿಶಿಷ್ಟ ಹಣಲೂಟಿವೆಸಗಿ ದ್ರೋಹವೆಸಗಿತ್ತು. ಇದೀಗ ಮುಸ್ಲೀಮರಿಗೆ ವಕ್ಫ್ ಹೆಸರಿನಲ್ಲಿ ಮಂಕುಬೂದಿ ಎರಚುತ್ತಿದೆ. ಲೋಕಸಭೆ ಅಧಿವೇಶನದಲ್ಲಿ ವಕ್ಫ್ ಮಸೂದೆ ವಿರುದ್ಧವಾಗಿ ರಾಹುಲ್ ಗಾಂಧಿ, ಸೋನಿಯಾ ಧ್ವನಿಗೂಡಿಸಲಿಲ್ಲ. ಅಲ್ಲದೇ ಖರ್ಗೆ ಸಂವಿಧಾನ ಅಪಚಾರವೆಸಗಿದರೆ ರಕ್ತ ಪಾತವಾಲಿದೆ ಎಂದಿದ್ದರು. ಆದರೀಗ ರಾಹುಲ್ ಸಂವಿಧಾನ ಅಂಬೇಡ್ಕರ್ ರಚನೆಯಲ್ಲ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ವಿಧಾನ ಪರಿಷತ್ ಸದಸ್ಯ ರವಿಕುಮಾರ್, ಧನಂಜಯ್ ಸರ್ಜೆ, ಮಾಜಿ ಶಾಸಕರಾದ ಡಿ.ಎನ್.ಜೀವರಾಜ್, ಡಿ.ಎಸ್. ಸುರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ, ನಗರಾಧ್ಯಕ್ಷ ಕೆಂಪನಹಳ್ಳಿ ಪುಷ್ಪರಾಜ್, ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್, ಮುಖಂಡರುಗಳಾದ ಪುಣ್ಯಪಾಲ್, ರವೀಂದ್ರ ಬೆಳವಾಡಿ, ಕುರುವಂಗಿ ವೆಂಕಟೇಶ್, ಹಿರೇಮಗಳೂರು ಪುಟ್ಟಸ್ವಾಮಿ, ಕೋಟೆ ರಂಗನಾಥ್, ಸಿ.ಹೆಚ್.ಲೋಕೇಶ್, ಹೆಚ್.ಕೆ.ಕೇಶವ ಮೂರ್ತಿ ಮತ್ತಿತರರು ಹಾಜರಿದ್ದರು. ಇದೇ ವೇಳೆ ಶಂಕರಮಠದಿಂದ ಕಾಲ್ನಡಿಗೆಯಲ್ಲಿ ಕಾರ್ಯಕರ್ತರು ಯಾತ್ರೆನಡೆಸಿದರು.
Price hikes are hurting the public’s peace and quiet.
