ಚಿಕ್ಕಮಗಳೂರು: ನಗರದ ಬಸವನಹಳ್ಳಿ ಶ್ರೀ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ೧೩೬ ನೇಯ ವ?ದ ರಾಮನವಮಿ ಉತ್ಸವ ಏಪ್ರಿಲ್ ೬ ರಿಂದ ೧೬ ರವರೆಗೆ ವಿವಿಧ ಸಂಗೀತ, ನೃತ್ಯ ಮತ್ತು ಹರಿಕಥಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಶ್ರೀರಾಮೋತ್ಸವ ಸಮಿತಿ ಅಧ್ಯಕ್ಷ ಕೆ.ಎನ್ ಪ್ರಭಾಕರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಇಂದು ಈ ವಿ?ಯ ತಿಳಿಸಿದ ಅವರು ದೇಗುಲದಲ್ಲಿ ಪ್ರತಿನಿತ್ಯ ಬೆಳಿಗ್ಗೆ ೭ ರಿಂದ ೯ ರವರೆಗೆ ಸೂರ್ಯ ನಮಸ್ಕಾರ, ನವಗ್ರಹ ಜಪ, ರಾಮಾಯಣ ಮತ್ತು ವೇದ ಪಾರಾಯಣ, ದೇವರಿಗೆ ಅಭಿ?ಕ ಸೇರಿದಂತೆ ಪೂಜಾ ಕಾರ್ಯಕ್ರಮಗಳು ನಡೆಯುವುದು. ನಿತ್ಯ ಸಂಜೆ ೬ ಗಂಟೆಗೆ ಪ್ರಾಕಾರೋತ್ಸವ, ಅನಂತರ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದು ವಿವರಿಸಿದರು.
ದೇವಾಲಯದಲ್ಲಿ ಏಪ್ರಿಲ್ ೬ ರಂದು ಬೆಳಿಗ್ಗೆ ೯ಕ್ಕೆ ರಾಮನವಮಿ ಪ್ರಯುಕ್ತ ವಸಂತ ಸೇವೆ, ಸಂಜೆ ೭:೩೦ ಕ್ಕೆ ವಿದುಷಿ ಡಾ.ಸುಮಿತ್ರಾನಂದ್ ಅವರಿಂದ ಹರಿಕಥೆ, ೭ ರಂದು ಸಂಜೆ ೭ಕ್ಕೆ ಬೆಂಗಳೂರಿನ ವಿದ್ವಾನ್ ಲಕ್ಷ್ಮೀನಾರಾಯಣ ಭಟ್ ವೃಂದದಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ, ೮ ರಂದು ಬೆಂಗಳೂರಿನ ವಿದುಷಿ ಸಂಸ್ಕೃತಿ ಕೃ? ಮತ್ತು ಸಂಗಡಿಗರಿಂದ ಭರತನಾಟ್ಯ ಪ್ರದರ್ಶನ, ೯ ರಂದು ಬೆಂಗಳೂರಿನ ವಿದುಷಿ ಅಹಿಕಾ ನಾಗದೀಪ್ ತಂಡದವರಿಂದ ವೀಣಾವಾದನ, ೧೦ ರಂದು ಬೆಂಗಳೂರಿನ ವಿದ್ವಾನ್ ಶ್ರೀಕಂಠಭಟ್ ಮತ್ತು ತಂಡದವರಿಂದ ಶಾಸ್ತ್ರೀಯ ಸಂಗೀತ, ೧೧ರಂದು ಖ್ಯಾತ ಗಾಯಕ ಡಾ.ವಿದ್ಯಾಭೂ?ಣ ಅವರಿಂದ ಹಾಡುಗಾರಿಕೆ, ೧೨ ರಂದು ಬೆಂಗಳೂರಿನ ವಿದ್ವಾನ್ ಎಂ.ಎಸ್.ದೀಪಕ್ ತಂಡದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿವೆ ಎಂದು ಮಾಹಿತಿ ನೀಡಿದರು.
ದೇವಸ್ಥಾನದಲ್ಲಿ ಏಪ್ರಿಲ್ ೧೩ ರಂದು ಬೆಳಿಗ್ಗೆ ೯ಕ್ಕೆ ಶ್ರೀ ರಾಮತಾರಕ ಹೋಮದೊಂದಿಗೆ ಶ್ರೀರಾಮ ಪಟ್ಟಾಭಿ?ಕ ನಡೆಯಲಿದ್ದು, ಅಂದೇ ಬೆಳಿಗ್ಗೆ ೧೧ ಗಂಟೆಗೆ ಗಮಕ ವಿದ್ವಾಂಸ ರಾಮಸುಬ್ರಾಯ ಶೇಟ್ ಅವರಿಂದ ರಾಮಾಯಣ ಗಮಕ ವಾಚನದ ಬಗ್ಗೆ ಉಪನ್ಯಾಸ ಏರ್ಪಡಿಸಲಾಗಿದೆ ಎಂದರು.
ದೇಗುಲದ ಆವರಣದಲ್ಲಿ ಏಪ್ರಿಲ್ ೧೪ ರಂದು ಸಂಜೆ ೭ ಗಂಟೆಗೆ ಮೈಸೂರಿನ ವಿದ್ವಾನ್ ಹನುಮಂತರಾಜು ಸಂಗಡಿಗರಿಂದ ಲಯ, ನಾದ, ತಾಳ, ವಾದ್ಯ ಕಛೇರಿ ಏರ್ಪಡಿಸಲಾಗಿದೆ. ೧೫ ರಂದು ಮೈಸೂರಿನ ವಿದುಷಿ ಆರ್.ನಿತ್ಯಶ್ರೀ ವೃಂದದಿಂದ ಶಾಸ್ತ್ರೀಯ ಸಂಗೀತ, ೧೬ ರಂದು ಚಿಕ್ಕಮಗಳೂರಿನ ಕು.ಅರ್ಪಿತಾ ತಂಡದವರಿಂದ ಶಾಸ್ತ್ರೀಯ ಕಾರ್ಯಕ್ರಮದೊಂದಿಗೆ ಒಟ್ಟು ೧೧ ದಿನಗಳ ರಾಮೋತ್ಸವ ಕಾರ್ಯಕ್ರಮ ಮುಕ್ತಾಯಗೊಳ್ಳುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ಎನ್.ಆರ್.ರಾಮಕೃ?, ಸದಸ್ಯರುಗಳಾದ ಪ್ರಸಾದ್, ಸೋಮಶೇಖರ್, ಹೆಚ್.ಎಸ್ ಗೋಪಿನಾಥ್, ಬಾಲಕೃ? ಎನ್.ಎ ಇದ್ದರು.
Ram Navami festival at Venugopalaswamy temple
