ಚಿಕ್ಕಮಗಳೂರು: ರಾಷ್ಟ್ರದಲ್ಲಿ ಭಾಜಪ ತನ್ನ ಬೇರುಗಳನ್ನು ಭದ್ರವಾಗಿ ನೆಲೆಯೂರಿಸಲು ಸಾಧ್ಯವಾಗಿದ್ದರೆ ಅದು ಡಾ|| ಶ್ಯಾಮಪ್ರಸಾದ್ ಮುಖರ್ಜಿಯವರ ತ್ಯಾಗ ಮತ್ತು ಬದ್ಧತೆಯಿಂದ ಎಂದು ಬಿಜೆ ಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್ ಹೇಳಿದರು.
ನಗರದ ಕೆಂಪನಹಳ್ಳಿ ಸಮೀಪದಲ್ಲಿ ಬಿಜೆಪಿ ನಗರ ಮಂಡಲದಿಂದ ನಡೆದ ಡಾ|| ಶ್ಯಾಮ ಪ್ರಸಾದ್ ಮುಖರ್ಜಿ ಜನ್ಮದಿನ ಅಂಗವಾಗಿ ಭಾನುವಾರ ಸಸಿ ನೆಟ್ಟು ಅವರು ಮಾತನಾಡಿ ಭಾರತೀಯ ಸಂಸ್ಕೃತಿಯ ಆಧಾರದ ಮೇಲೆ ದೇಶವನ್ನು ಪುನರ್ ನಿರ್ಮಾಣ ಮಾಡುವ ಹಾಗೂ ಜಗ ತ್ತಿನಲ್ಲಿ ಭಾರತವನ್ನು ಪ್ರಬಲ ರಾಷ್ಟ್ರವನ್ನಾಗಿಸುವ ಗುರಿ ಇಟ್ಟುಕೊಂಡು, ಆ ಮಹಾನ್ ಕಾರ್ಯಕ್ಕೆ ತಮ್ಮ ಬದು ಕನ್ನು ಸವೆಸಿದ ಮುಖರ್ಜಿ ಅವರು ಶ್ರೇಷ್ಟ ವಿದ್ವಾಂಸರು, ರಾಜನೀತಿ ತಜ್ಞರಾಗಿದ್ದರು ಎಂದರು.
ನೆರೆದೇಶದ ಹಿಂದುಗಳ ಮೇಲೆ ನಡೆದ ದೌರ್ಜನ್ಯಕ್ಕೆ ಕಿಡಿಕಾಡಿದ ಅವರು ಮಂತ್ರಿ ಮಂಡಲಕ್ಕೆ ರಾಜೀ ನಾಮೆ ನೀಡಿದ್ದರು. ನೀತಿ, ತತ್ವದ ಆಧಾರದ ಮೇಲೆ ಮಂತ್ರಿ ಪದವಿ ತ್ಯಾಗ ಮಾಡಿದ ಸ್ವಾತಂತ್ರ್ಯ ಭಾರತದ ಪ್ರಮುಖ ನಾಯಕರು ಎಂದ ಅವರು ಭಾರತೀಯ ರಾಜಕೀಯ ಕ್ಷೇತ್ರಕ್ಕೆ ಮುಖರ್ಜಿಯವರು ನೀಡಿದ ಕೊ ಡುಗೆ ಅಪಾರವಾಗಿದೆ ಎಂದರು.
ದೇಶದ ಪರಿಸ್ಥಿತಿ ಅಧೋಗತಿಗೆ ಇಳಿದಾಗ, ರಾಜಕೀಯ ಅಸ್ಥಿರತೆ, ಆಡಳಿತ ದೋಷ ಕಂಡಾಗ ಅವಿರ ತವಾಗಿ ಶ್ರಮಿಸಿ ರಾಷ್ಟ್ರದಲ್ಲಿ ಜನಸಂಘ ಎಂಬ ಹೊಸ ಪಕ್ಷಕ್ಕೆ ನಾಂದಿ ಹಾಡಿದವರು ಮುಖರ್ಜಿ. ೧೯೫೩ ರಲ್ಲಿ ಕಾಶ್ಮೀರವನ್ನು ಭಾರತದಲ್ಲಿ ಉಳಿಸಲು ನಡೆಸಿದ ಹೋರಾಟದಲ್ಲಿ ಮುಖರ್ಜಿಯವರು ನಿಗೂಢ ರೀತಿಯಲ್ಲಿ ಸಾವನ್ನಪ್ಪಿದರು ಎಂದರು.
ನಗರಸಭೆ ಸದಸ್ಯೆ ಲಲಿತಾ ರವಿನಾಯ್ಕ್ ಮಾತನಾಡಿ ಮುಖರ್ಜಿಯವರ ಆದರ್ಶ, ತ್ಯಾಗ, ಬಲಿದಾನ ವ್ಯರ್ಥವಾಗದಂತೆ ದೇಶದ ಅಖಂಡತೆಯನ್ನು ಉಳಿಸಿ, ದೇಶವನ್ನು ಕಟ್ಟಿಬೆಳೆಸುವ ಪ್ರಯತ್ನ ಪ್ರತಿಯೊಬ್ಬರು ಮಾಡಿದಾಗ ಮುಖರ್ಜಿಯವರ ಶ್ರಮಕ್ಕೆ ಪ್ರತಿಫಲ ದೊರೆಯಲಿದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರುಗಳಾದ ರವಿನಾಯ್ಕ್, ಇಂದಿರಾ, ಜಯಪ್ರಕಾಶ್, ವಿಶಾಲ, ಚೇತನ್, ವಿನಯ್, ರಂಗಸ್ವಾಮಿ, ನವೀನ್, ಮರಿಯಪ್ಪ ಮತ್ತಿತರರಿದ್ದರು.
Shyama Prasad Mukherjee’s Birthday – Planting a sapling and celebrating
