ಚಿಕ್ಕಮಗಳೂರು: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿದಾಗ ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಿ ಸಮತೋಲನ ಕಂಡುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು.
ಅವರು ಇಂದು ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿ.ಪಂ, ತಾ.ಪಂ, ನಗರಸಭೆ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ವಿದ್ಯಾಭಾರತಿ ವಿದ್ಯಾಸಂಸ್ಥೆ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ತಾಲ್ಲೂಕು ಮಟ್ಟದ ಕ್ರೀಡಾಕೂಟ ೨೦೨೫-೨೬ ನ್ನು ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಗಳಲ್ಲಿ ಸೋಲು-ಗೆಲುವ ಸಹಜ, ಕ್ರೀಡಾ ಮನೋಭಾವದಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದು ಮುಖ್ಯ. ಗೆದ್ದವರು ಬೀಗದೆ ಸೋತವರು ಭಾಗದೆ ಕ್ರೀಡಾ ಸಾಧನೆಗಳು ಜನರ ಮೆಚ್ಚುಗೆ ಗಳಿಸಲಿ ಎಂದು ಶುಭ ಹಾರೈಸಿದರು.
ಗ್ರಾಮೀಣ ಗುಂಪು ಕ್ರೀಡೆಗಳಾದ ಖೋಖೋ, ಕಬ್ಬಡ್ಡಿ, ವಾಲಿಬಾಲ್, ಥ್ರೋಬಾಲ್ ಮುಂತಾದ ಕ್ರೀಡೆಗಳು ಈ ಕ್ರೀಡಾಕೂಟದಲ್ಲಿ ಇದ್ದು, ಒಬ್ಬ ನಾಯಕ ಕ್ರೀಡಾಪುಟುವಿನ ಮೈಮರೆವು ತಂಡದ ಸೋಲಿಗೆ ಕಾರಣವಾಗುತ್ತದೆ ಎಂಬುದನ್ನು ಅರಿತು ಎಚ್ಚರಿಕೆಯಿಂದ ಆಟ ಆಡಬೇಕು ಎಂದು ಸಲಹೆ ನೀಡಿದರು.
ಪಠ್ಯೇತರ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚು ತೊಡಗಿಸಿಕೊಳ್ಳುತ್ತಿದ್ದಾರೆ. ಈ ನಿಟ್ಟಿನಲ್ಲಿ ಆಟ ಆಡುವಾಗ ಪೋಷಕರು, ಶಿಕ್ಷಕರು, ಪ್ರೇಕ್ಷಕರು, ತೀರ್ಪುಗಾರರು ಪ್ರತಿ ಕ್ಷಣವನ್ನು ಗಮನಿಸುತ್ತಿದ್ದಾರೆ ಎಂಬುದನ್ನು ಅರಿಯಬೇಕೆಂದರು.
ಉತ್ತಮ ಕ್ರೀಡಾಪಟುಗಳಾಗಬೇಕಾದರೆ ಪೌಷ್ಠಿಕ ಆಹಾರ, ದಿನನಿತ್ಯ ವ್ಯಾಯಾಮ ಅಭ್ಯಾಸ, ಕ್ರೀಡೆಯ ಬಗ್ಗೆ ಆಸಕ್ತಿ ಇದ್ದಾಗ ಮಾತ್ರ ಎದುರಾಳಿಯನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದು ಹೇಳಿದರು.
ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ದೈರ್ಯದಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಯಗಳಿಸಿ ರಾಜ್ಯ, ರಾಷ್ಟ್ರಕ್ಕೆ ಕೀರ್ತಿ ತರಬೇಕೆಂದು ಶುಭ ಹಾರೈಸಿದರು. ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ತೀರ್ಪುಗಾರರಿಗೆ ಗೌರವವನ್ನು ಕೊಡಬೇಕು. ಈ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಿಡಿಪಿಐ ತಿಮ್ಮರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ, ನಗರಸಭೆ ಉಪಾಧ್ಯಕ್ಷೆ ಲಲಿತಾ ಬಾಯಿ ಸೇರಿದಂತೆ ವಿವಿಧ ಶಿಕ್ಷಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಶಿಕ್ಷಕರು ಭಾಗವಹಿಸಿದ್ದರು.ಮೊದಲಿಗೆ ವಿದ್ಯಾಭಾರತಿ ಶಾಲೆಯ ಕಾರ್ಯದರ್ಶಿ ಡಾ. ಅಪ್ಸರ್ ಅಹಮದ್ ಹಿಂದೂಸ್ಥಾನಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಶಾಲಾ ಪ್ರಾಂಶುಪಾಲೆ ಶಾಹಿರಾ ಫಾತಿಮಾ, ಡಿಡಿಪಿಐ ತಿಮ್ಮರಾಜು, ಕ್ಷೇತ್ರದ ಶಿಕ್ಷಣಾಧಿಕಾರಿ ರುದ್ರಪ್ಪ, ಜಿ.ಮಹೇಶ್ ಅಕ್ಷರದಾಸೋಹ ನಿರ್ದೆಶಕರು ನೀಲಕಂಠಪ್ಪ, ಪ್ರೌಡಶಾಲ ಸಹಶಿಕ್ಷರು ಅಧ್ಯಕ್ಷರು ಮಂಜುನಾಥ್, ಪ್ರೌಡಶಾಲೆ ಕಾರ್ಯದರ್ಶಿ ಉಮೇಶ್, ಪ್ರಶಾಂತ್, ಟಿ.ಕೆ.ಜಿ ಅರಸು ಶಿಕ್ಷಕರ ಸಂಯೋಜಕರು, ಜಗದೀಶ್ ಶಿಕ್ಷಣ ಸಂಯೋಜನೆ, ವಿರೇಶ್ ಕೌಲಗಿ ಜಾನಕಮ್ಮ, ಭಾಗ್ಯ ಪ್ರವಿಣ್ ಪಿಂಟೊ ಶಂಕರೆಗೌಡ, ಪರಮೇಶ್ ಮುರಬತ್ ಗ್ರೇಡ್‌ವನ್ ಉಪಸ್ಥಿತರಿದ್ದರು.
Sports contribute to mental-physical balance.
