Tag: Teachers are divine beings who shape future citizens.

  • ಭವಿಷ್ಯದ ಪ್ರಜೆಗಳನ್ನು ಅಣಿಗೊಳಿಸುವ ಶಿಕ್ಷಕರು ದೈವಿಸಭೂತರು

    ಭವಿಷ್ಯದ ಪ್ರಜೆಗಳನ್ನು ಅಣಿಗೊಳಿಸುವ ಶಿಕ್ಷಕರು ದೈವಿಸಭೂತರು

    ಚಿಕ್ಕಮಗಳೂರು: ಸಮಾಜಕ್ಕೆ ಭವಿಷ್ಯದ ಪ್ರಜೆಗಳನ್ನು ಅಣಿಗೊಳಿಸುವ ಗುರುಗಳು ದೈವಸಭೂತರು. ಗುರುಗಳ ಹಾಕಿಕೊಟ್ಟ ಮಾರ್ಗದರ್ಶನ, ಸನ್ನಡತೆ, ಸದ್ವಿಚಾರದಡಿ ವಿದ್ಯಾರ್ಥಿಗಳು ಸಾಗಿ ದರೆ ದೇಶದಲ್ಲಿ ಉತ್ತಮ ನಾಗರೀಕರಾಗಿ ರೂಪುಗೊಳ್ಳಬಹುದು ಎಂದು ಕನ್ನಡ ಪೂಜಾರಿ ಹಿರೇಮಗಳೂ ರು ಕಣ್ಣನ್ ಹೇಳಿದರು.

    ನಗರದ ಜ್ಯೋತಿನಗರದ ಸಮೀಪದ ಮಲೆನಾಡು ವಿದ್ಯಾಸಂಸ್ಥೆಯ ಎಸ್.ಎಸ್.ಆರ್. ಪ್ರಾಯೋಗಿಕ ಪ್ರೌಢಶಾಲೆಯಲ್ಲಿ ಶನಿವಾರ ಹಳೇ ವಿದ್ಯಾರ್ಥಿಗಳಿಂದ ಆಯೋಜಿಸಿದ್ಧ ಗುರುವಂದನ ಹಾಗೂ ೨೫ನೇ ವರ್ಷ ದ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಹಳೇ ವಿದ್ಯಾರ್ಥಿಗಳು ಹಾಗೂ ಹಿರಿಯ ಶಿಕ್ಷಕರ ಸಮ್ಮೀಲನವು ಅಪರೂಪವಾಗಿದೆ. ಹಿಂದಿನ ಗೆಳೆಯ ಮತ್ತು ಗೆಳತಿಯರ ಬಾಂಧವ್ಯವು ಇಂದಿಗೂ ಚಿರಸ್ಥಾಯಿಯಾಗಿ ಉಳಿದುಕೊಂಡಿರುವುದು ಹೆಮ್ಮೆಯ ಸಂಗ ತಿ. ಹಣವಿದ್ದಲ್ಲಿ ಜೀವನ ಸಾಗಿಸಬಹುದಷ್ಟೇ ಹೊರತು. ಪ್ರೀತಿ, ವಿಶ್ವಾಸ ಹಾಗೂ ಹಳೇ ನೆನಪುಗಳನ್ನು ಮೆಲು ಕು ಹಾಕಲು ಸಾಧ್ಯವಿಲ್ಲ ಎಂದರು.

    ಗುರುಗಳ ಆರ್ಶೀವಾದಿಂದ ವಿದ್ಯಾರ್ಥಿಗಳು ಬದುಕಿನಲ್ಲಿ ಸೋಲಾನುಭವಿಸಲು ಸಾಧ್ಯವಿಲ್ಲ. ಶಿಕ್ಷಕರ ಕೃಪೆಗೆ ಪಾತ್ರರಾಗಿ ಬದುಕುವುದೇ ನಿಜವಾದ ಧರ್ಮವಾಗಿದೆ. ಆ ನಿಟ್ಟಿನಲ್ಲಿ ಹಳೇ ವಿದ್ಯಾರ್ಥಿಗಳು ವಿದ್ಯಾ ಭ್ಯಾಸದ ಪೂರೈಸಿದ ಶಾಲೆಯನ್ನು ಉಳಿಸಿ, ಬೆಳೆಸುವ ಜೊತೆಗೆ ಪರರಿಗೂ ಶಾಲೆಯ ವೈಶಿಷ್ಟತೆಯ ಬಗ್ಗೆ ತಿಳಿ ಹೇಳಬೇಕು ಎಂದು ಕಿವಿಮಾತು ಹೇಳಿದರು.

    ಹಳೇ ವಿದ್ಯಾರ್ಥಿಗಳು ಮಾತನಾಡಿ ಶಾಲೆಯಲ್ಲಿ ನಡೆದ ತುಂಟಾಟ, ಕಿಟಲೇ, ಸಣ್ಣಪುಟ್ಟ ತಪ್ಪುಗಳಿಗೆ ಶಿಕ್ಷಕರಿಂದ ತಿಂದಥ ಪೆಟ್ಟುಗಳನ್ನು ಮೆಲುಕುಹಾಕಿ ಖುಷಿಪಟ್ಟರು. ಶಿಕ್ಷಕರು ನೀಡಿದಂಥ ಪೆಟ್ಟು ಕಲ್ಲಿನ ಬಂಡೆ ಯನ್ನು ಸುಂದರ ವಿಗ್ರಹರೂಪದಲ್ಲಿ ತಯಾರಾಗುವಂತೆ ಮಾಡಿ ಸಮಾಜಕ್ಕೆ ಮಾದರಿಯಾಗುವಂತೆ ಮಾಡಿ ದೆ ಎಂದು ಹೇಳಿದರು.

    ಇತ್ತೀಚಿನ ಶಿಕ್ಷಣ ವ್ಯವಸ್ಥೆಯು ಹಿಂದಿನ ಪದ್ಧತಿಯಲ್ಲಿಲ್ಲ. ಮಕ್ಕಳಿಗೆ ಒತ್ತಡದಿಂದ ಕಳೆಯುವಂಥ ಸ್ಥಿತಿ ನಿರ್ಮಾಣವಾಗಿದೆ. ಬೆದರುಗೊಂಬೆಯಂತೆ ತಯಾರಾಗಿ ತೆರಳುವಂತಾಗಿದೆ. ಕೆಜಿಗಟ್ಟಲೇ ನೋಟ್‌ಪುಸ್ತಕಗ ಳನ್ನು ಹೊರಬೇಕಾಗಿದೆ. ಹೀಗಾಗಿ ಮಕ್ಕಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಸ್ಥಳೀಯ ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸಲು ಪಾಲಕರು ಮುಂದಾಗಬೇಕು ಎಂದರು.

    ಇದೇ ವೇಳೆ ಶಾಲೆಯಲ್ಲಿನ ಹಳೇ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಗೌರವಯುತವಾಗಿ ಸನ್ಮಾನಿಸಿದರು. ಬಳಿಕ ಹಿರಿಯ ವಿದ್ಯಾರ್ಥಿಗಳು ಪರಸ್ಪರ ಪರಿಚಯ, ಅನಿಸಿಕೆಗಳನ್ನು ಹಂಚಿಕೊಂಡರು. ಎಸ್.ಎಸ್.ಆರ್. ಪ್ರಾಯೋಗಿಕ ಪ್ರೌಢಶಾಲೆ ಮುಖ್ಯಶಿಕ್ಷಕ ಬಿ.ಕೆ.ಸದಾಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

    ಈ ಸಂದರ್ಭದಲ್ಲಿ ಶಿಕ್ಷಕರಾದ ಕೆ.ಎಸ್.ಸೀತಾಲಕ್ಷ್ಮೀ, ಬಿ.ಎಲ್.ಜಗದೀಶ್, ಹೆಚ್.ಎನ್.ಸತೀಶ್, ಹೆಚ್. ಬಿ.ಹನುಮಂತಪ್ಪ, ಶಶಿಕಲಾ, ಬಿ.ಸಿ.ಯೋಗೀಶ್, ಹಳೇ ವಿದ್ಯಾರ್ಥಿಗಳಾದ ಎನ್.ಕೆ.ಮಂಜುನಾಥ್, ಡಿ.ಆರ್. ಅರುಣ್, ಮಂಜುನಾಥ್, ಮಧುಕುಮಾರ್, ಅಶೋಕ್ ಮತ್ತಿತರರಿದ್ದರು. ಬಿಂದಿಯಾ ಪ್ರಾರ್ಥಿಸಿದರು. ಬಿ.ಆರ್.ದಿವ್ಯ ಸ್ವಾಗತಿಸಿದರು. ಎಂ.ಎಂ.ಕವೀಶ್ ಪ್ರಾಸ್ತಾವಿಕ ನುಡಿದರು. ಜಿ.ಎಸ್.ಉಮಾ ನಿರೂಪಿಸಿ, ವಂ ದಿಸಿದರು.

    Teachers are divine beings who shape future citizens.