ಚಿಕ್ಕಮಗಳೂರು: ನನ್ನ ಸಮ್ಮುಖದಲ್ಲಿ ಮುಖ್ಯವಾಹಿನಿ ಪ್ರಕ್ರಿಯೆ ನಡೆಯಲಿ ನಾನು ಸಾಕ್ಷಿಯಾಗುತ್ತೇನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರಿಂದ ಚಿಕ್ಕಮಗಳೂರಿನಲ್ಲಿ ನಡೆಯಬೇಕಿದ್ದ ನಕ್ಸಲ್ ಮುಖ್ಯವಾಹಿನಿ ಪ್ರಕ್ರಿಯೆ ಬೆಂಗಳೂರಿಗೆ ವರ್ಗಾವಣೆಯಾಗಿದೆ ಎಂದು ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡ ಕೆ.ಎಲ್.ಅಶೋಕ್ ತಿಳಿಸಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಮುಖ್ಯವಾಹಿನಿಗೆ ಬರುತ್ತಿರುವ ನಕ್ಸಲರು ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯದವರು ಇರುವುದರಿಂದ ನನ್ನ ಸಮ್ಮುಖದಲ್ಲಿ ನಡೆಯಲಿ ಗೃಹ ಕಚೇರಿ ಕೃಷ್ಣಗೆ ಬರುವಂತೆ ತಿಳಿಸಿದ್ದರಿಂದ ಇಲ್ಲಿಂದ ಬೆಂಗಳೂರಿಗೆ ನಕ್ಸಲ ರನ್ನು ಕರೆದೊಯ್ಯಲಾಗಿದೆ ಎಂದ ಅವರು, ನಾಗರಿಕರು ಮತ್ತು ಕುಟುಂಬಸ್ಥರನ್ನು ಬೆಂಗಳೂರಿಗೆ ಕರೆದೊಯ್ಯಲಾಗಿದೆ ಎಂದರು.
ಮುಂಡಗಾರು ಲತಾ ಅವರ ಹಿರಿಯ ಸಹೋದರ ಶೇಷೆಗೌಡ ಮಾತನಾಡಿ, ನಮ್ಮ ತಂದೆ ತಾಯಿಗೆ ಲತಾ ಕೊನೆಯ ಮಗಳು. ತಂದೆ ತಾಯಿಯೂ ನಮ್ಮನ್ನು ಅಗಲಿದ್ದಾರೆ. ವ್ಯವಸ್ಥೆಯ ವಿರುದ್ಧ ಹೋರಾಡಲು ೨೪ವರ್ಷಗಳ ಹಿಂದೆ ಮನೆ ಬಿಟ್ಟು ಹೋಗಿದ್ದಳು, ಈಗ ಮುಖ್ಯವಾಹಿನಿಗೆ ಬರುತ್ತಿರುವುದು ಸಂತೋಷ ತಂದಿದೆ. ಅವರ ಮೇಲಿರುವ ಕೇಸುಗಳನ್ನು ಸರ್ಕಾರ ತಕ್ಷಣ ಇತ್ಯಾರ್ಥಗೊಳಿಸಬೇಕು. ಅವರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಹೇಳಿದರು.
ತಮಿಳುನಾಡು ರಾಜ್ಯದ ವೆಲ್ಲೂರು ರಾಣೀಪೇಟ್ ಕೆ.ವಸಂತ ಅವರ ಪೋಷಕರಾದ ತಾಯಿ ತಮಿಳ್ ಸೆಲ್ವಿ, ತಂದೆ ಕುಮಾರ್ ತಮ್ಮ ಅನಿಸಿಕೆ ಹಂಚಿಕೊಂಡು ಕಡು ಬಡತನದಲ್ಲಿ ಮಗ ವಸಂತ ಮೆಕನಿಕಲ್ ಇಂಜಿನಿಯರಿಂಗ್ ಪೂರೈಸಿದ ಕೆಲಸದ ಸಂದರ್ಶಕ್ಕಾಗಿ ಕೊಯಮತ್ತೂರಿಗೆ ಹೋಗಿ ಬರುವುದಾಗಿ ತಿಳಿಸಿ ಹೋದವನು ಮನೆಗೆ ಬಂದಿರಲಿಲ್ಲ. ಹೋರಾಟಕ್ಕೆ ಇಳಿದಿದ್ದಾನೆಂದು ತಿಳಿಯಿತು. ಅಲ್ಲಿಂದ ಇಲ್ಲಿಯವರೆಗೂ ನಾವು ಅವನ ಮುಖವನ್ನು ನೋಡಿಲ್ಲ. ಮುಖ್ಯವಾಹಿನಿಗೆ ಬರುತ್ತಾ ನೆಂದು ತಿಳಿದು ತಮಿಳುನಾಡಿನಿಂದ ಬಂದಿದ್ದೇವೆ. ಮಗನನ್ನು ಅನೇಕ ವರ್ಷಗಳ ಬಳಿಕ ನೋಡುತ್ತಿರುವುದು ಖುಷಿಯಾಗುತ್ತಿದೆ ಎಂದು ತಾಯಿ ತಮಿಳ್ ಸೆಲ್ವಿ ಕಣ್ಣಿರಿಟ್ಟರು.
ಮಾಜಿ ನಕ್ಸಲ್ ಕನ್ಯಾಕುಮಾರಿ ಪತಿ ಶಿವು ಮಾತನಾಡಿ, ಆರು ಮಂದಿ ನಕ್ಸಲರು ಶರಣಾಗುತ್ತಿರುವ ವಿಷಯ ತಿಳಿದು ಅವರನ್ನು ಸ್ವಾಗತಿಸಲು ಬಂದಿದ್ದೇನೆ. ೮ ವರ್ಷಗಳಿಂದ ಯಾವುದು ಏನು ಆಗಿಲ್ಲ. ಈಗ ಶರಣಾಗುತ್ತಿರುವವರ ಕೇಸ್‌ಗಳು ೩-೪ ವರ್ಷ ಗಳಲ್ಲಿ ಕ್ಲಿಯರ್ ಆಗುವ ಮೂಲಕ ಬೇಗನೆ ಹೊರಗೆ ಬರುತ್ತಾರೆಂಬ ನಂಬಿಕೆ ಇದೆ. ಜೈಲಿನಲ್ಲಿರುವ ಪತ್ನಿ ಜತೆಗೆ ೫ವರ್ಷದ ನನ್ನ ಮುಗು ಅವರೊಂದಿಗೆ ಇತ್ತು. ಈಗ ನಬ್ಬ ಬಳಿ ಇದ್ದು ಜೋಪಾನವಾಗಿ ನೋಡಿಕೊಳ್ಳುತ್ತಿದ್ದೇನೆ. ಜೀವನ ಸಾಗಿಸಲು ಕೆಲಸಕ್ಕೆ ಹೋಗಬೇಕು. ಜತೆಗೆ ಮಗುವನ್ನು ನೋಡಿಕೊಳ್ಳಬೇಕು. ಮಗುವನ್ನು ನೋಡಿಕೊಳ್ಳಬೇಕು, ಜೈಲಿನಲ್ಲಿರುವ ಪತ್ನಿಯನ್ನು ನೋಡಿ ಕೊಳ್ಳಬೇಕಿದೆ ಎಂದರು.
Naxalites surrender at Chief Minister’s insistence Bengaluru is a disgrace

Leave a Reply