ಚಿಕ್ಕಮಗಳೂರು: ಜಿಲ್ಲಾಧ್ಯಂತ ವಿವಿಧ ಜನ ಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕರನ್ನು ರಕ್ಷಿಸುವುದರ ಜೊತೆಗೆ ಕಾನೂನು ಸುವ್ಯವಸ್ತೆಯನ್ನು ಕಾಪಾಡುತ್ತಿರುವ ಜಿಲ್ಲಾ ಪೊಲೀಸರನ್ನು ಪ್ರತಿಯೊಬ್ಬರು ಗೌರವಿಸಬೇಕು ಎಂದು ಡಾ. ಕೆ ಮಧುಕರ್ ಶೆಟ್ಟಿ ಯುವ ಬಳಗದ ಜಿಲ್ಲಾಧ್ಯಕ್ಷ ಚೌಡಪ್ಪ ಹೇಳಿದರು.
ಅವರು ಇಂದು ನಗರದ ಪ್ರೆಸ್ ಕ್ಲಬ್‌ನಲ್ಲಿ ಪ್ರತಿಕಾ ಗೋಷ್ಠಿಯಲ್ಲಿ ಮಾತನಾಡಿ ಇತ್ತೀಚೆಗೆ ಜಿಲ್ಲೆಯಲ್ಲಿ ಜನ ಸ್ನೇಹಿಯಾಗಿ ಕಾರ್ಯಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜವಬ್ದಾರಿಯುತ ಕೆಲಸಗಳು ನಡೆಯುತ್ತಿರುವುದು ಸಂತೋ?ದ ವಿಚಾರ. ಪ್ರತಿ ಶಾಲೆಗಳಲ್ಲಿ ರಸ್ತೆ ಸುರಕ್ಷತಾ ಮಾಸಾ ಕಾರ್ಯಕ್ರಮಗಳು, ಜನವರಿ ೨೮ ರಂದು ಸುಮಾರು ೧೦ ಕೆ.ಜಿ ಗಾಂಜಾ ವಶಪಡಿಸಿಕೊಂಡಿರುವುದು ಸೇರಿದಂತೆ ವಿವಿಧ ಕಾನೂನು ವಿರೋಧಿ ಚಟುವಟಿಕೆಗಳನ್ನು ನಿಗ್ರಹಿಸುತ್ತಿರುವ ಪೊಲೀಸರ ಕಾರ್ಯ ಉತ್ತಮವಾದುದು ಎಂದರು.
ಬಸವನಹಳ್ಳಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಅಂತರಾಷ್ಟ್ರೀಯ ಕಳ್ಳರನ್ನು ಹಿಡಿದು ೨೫ ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿರುವುದು. ಬೇಲೂರು ರಸ್ತೆಯಲ್ಲಿ ಹಾಗೂ ಎಂ.ಜಿ ರಸ್ತೆ ಮತ್ತು ಐ.ಜಿ ರಸ್ತೆಯಲ್ಲಿ ಕರ್ಕಶ ಶಬ್ದದವನ್ನು ಮಾಡುತ್ತಾ ಜನ ಸಾಮಾನ್ಯರಿಗೆ ತೊಂದರೆ ನೀಡುತ್ತಿದ್ದ ಕೆಲವು ಪುಡರಿಗಳನ್ನು ಟ್ರಾಫಿಕ್ ಪೋಲಿಸ್ ಧನಂಜಯ್ ಬಿ.ಸಿ ತಂಡವು ನಿಗ್ರಹಿಸಿರುವುದು ಉತ್ತಮ ಕಾರ್ಯವಾಗಿದೆ ಎಂದು ತಿಳಿಸಿದರು.
ಖಾಸಗಿ ಬಸ್ಸುಗಳಲ್ಲಿ ಕರ್ಕಶ ಶಬ್ದದಿಂದ ಜನ ಸಾಮ್ಯಾನರಿಗೆ ತೊಂದರೆ ಮಾಡುತ್ತಿದ ಅಂತಹ ಬಸ್ಸುಗಳನ್ನು ಗುರುತಿಸಿ ಅವರ ಮೇಲೆ ಶಿಸ್ತು ಕ್ರಮ ಕೈಗೊಂಡಿರುವುದು, ಜನ ಸಾಮ್ಯಾನರ ಮೊಬೈಲ್ ಕಳ್ಳತನ ದೂರು ಬಂದಾಗ ಜನ ಸ್ನೇಹಿಯಾಗಿ ಕೆಲಸ ಮಾಡಿ ಅವುಗಳನ್ನು ಹಿಂದಿರುಗಿಸುವಂತ ಕಾರ್ಯಗಳ ಬಗ್ಗೆ ಪ್ರಶಂಸೆ ವ್ಯಕ್ತ ಪಡಿಸಿದರು.
ಸಾರ್ವಜನಿಕರು ಪೊಲೀಸ್ ಇಲಾಖೆಯ ಜೊತೆ ನಿಂತ್ತು ಯಾವುದೇ ತೊಂದರೆ ಸಂಭವಿಸಿದ ಸಂದರ್ಭದಲ್ಲಿ ೧೧೨ ಕ್ಕೆ ಕರೆಮಾಡಿ ಪೊಲೀಸ್‌ರಿಗೆ ವಿಚಾರಗಳನ್ನು ತಲುಪ್ಪಿಸುವುದರ ಮೂಲಕ ಡ್ರಗ್ಸ್ ವಿಚಾರಗಳ ಬಂದಾಗ ಸಮಾಜಗಾತುಕ ಹಾಗೂ ಕಿಡಿಗೇಡಿಗಳ ವಿಚಾರಗಳನ್ನು ಪೊಲೀಸರಿಗೆ ತಿಳಿಸುವಂತ ಕಾರ್ಯಗಳು ಮಾಡುವುದರಿಂದ ಪೊಲೀಸ್‌ರ ಪರ ಜನ ಸಾಮ್ಯಾನರು ಕೈಜೋಡಿಸಬೇಕು ಇದರಿಂದ ಅಪರಾಧಗಳು ಕಡಿಮೆಯಾಗುತ್ತದೆ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಡಾ. ಕೆ ಮಧುಕರ್ ಶೆಟ್ಟಿ ಯುವ ಬಳಗದ ಜಿಲ್ಲಾ ಉಪಾಧ್ಯಕ್ಷ ಲೋಕೇಶ್ ನಾಯಕ, ಮಂಜುನಾಥ್, ಪೀತೇಶ್, ನವೀನ್ ಎತ್ತಿನಮನೆ ಉಪಸ್ಥಿತರಿದ್ದರು.
The public should respect the people-friendly service of the police.

Leave a Reply