ಚಿಕ್ಕಮಗಳೂರು: ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮದಡಿ ಆಯೋಜಿಸುವ ಸ್ಪರ್ಶ್ ಕುಷ್ಠರೋಗ ಜಾಗೃತಿ ಅಭಿಯಾನವನ್ನು ಜನವರಿ ೩೦ರಿಂದ ಫೆಬ್ರವರಿ ೧೩ರ ವರೆಗೆ ಪ್ರತಿ ವಷ?ದಂತೆ ಈ ವ?ವು ಗುಣಾತ್ಮಕವಾಗಿ ಆಚರಿಸಿ ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೀರ್ತನ ಹೆಚ್.ಎಸ್ ಹೇಳಿದರು.
ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಇಂದು ಮಾಹಿತಿ ಶಿಕ್ಷಣ ಸಂಪರ್ಕ ಭಿತ್ತಿ ಚಿತ್ರವನ್ನು ಬಿಡುಗಡೆ ಮಾಡುವ ಮೂಲಕ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಆಂದೋಲನದ ಉದ್ಧೇಶ ಹಾಗೂ ಮಾಹಿತಿಯನ್ನು ಜಿಲ್ಲೆಯ ಪ್ರತಿಯೊಬ್ಬ ಸಾರ್ವಜನಿಕರಿಗೆ ತಲುಪಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದು ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಸೂಚಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್ ಬಾಬು ಈ ಸಂದರ್ಭದಲ್ಲಿ ಮಾತನಾಡಿ ಕುಷ್ಠರೋಗವು ಮೈಕೋಬ್ಯಾಕ್ಟಿರಿಯಂ ಲೆಪ್ರೆ ಎಂಬ ಬ್ಯಾಕ್ಟಿರಿಯಾದಿಂದ ಹರಡುವ ಸೋಂಕು ರೋಗವಾಗಿದ್ದು, ಆರೋಗ್ಯ ಇಲಾಖೆ ವತಿಯಿಂದ ಉಚಿತವಾಗಿ ನೀಡಲಾಗುವ ಬಹು ಔಷದ ಚಿಕಿತ್ಸೆಯಿಂದ ಗುಣಪಡಿಸಬಹುದಾಗಿದೆ. ಇದು ಚರ್ಮ ಮತ್ತು ನರಕ್ಕೆ ಸಂಬಂಧಿಸಿದ ಕಾಯಿಲೆಯಾಗಿದ್ದು ಚಿಕಿತ್ಸೆ ಪಡೆಯದೆ ಉದಾಸಿನ ಮಾಡಿದಲ್ಲಿ ಅಂಗವಿಕಲತೆ ಮತ್ತು ವಿರೂಪಕತೆ ಉಂಟಾಗುತ್ತದೆ ಎಂದರು.
ಆದ್ದರಿಂದ ಯಾವುದೇ ರೀತಿಯ ತಿಳಿ, ಬಿಳಿ, ತಾಮ್ರ ವರ್ಣದ ಸ್ಪರ್ಶ ಜ್ಞಾನವಿಲ್ಲದ ಮಚ್ಚೆಗಳು ಕಂಡುಬಂದಲ್ಲಿ ಆರೋಗ್ಯ ಇಲಾಖೆಯ ವೈದ್ಯರು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಸಮುದಾಯ ಆರೋಗ್ಯ ಅಧಿಕಾರಿಗಳು ಮತ್ತು ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಕು?ರೋಗವೇ ಎಂಬುದರ ಬಗ್ಗೆ ಪರೀಕ್ಷಿಸಿಕೊಂಡು, ರೋಗ ಖಚಿತಗೊಂಡಲ್ಲಿ ಆರೋಗ್ಯ ಇಲಾಖೆಯು ಒದಗಿಸುವ ಉಚಿತ ಬಹು ಔ?ದ ಚಿಕಿತ್ಸೆಯನ್ನು ಪಡೆದು ಸಂಪೂರ್ಣ ಗುಣಮುಖರಾಗಬಹುದು ಎಂದು ತಿಳಿಸಿದರು.
ಜಿಲ್ಲಾ ಕು?ರೋಗ ನಿರ್ಮೂಲನ ಅಧಿಕಾರಿಗಳಾದ ಡಾ.ಬಾಲಕೃ? ಟಿ.ಪಿ, ಮಾಹಿತಿ ನೀಡಿ ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು ೧೨ ಕು?ರೋಗಿಗಳಿದ್ದು (ಚಿಕ್ಕಮಗಳೂರು ೦೪, ಕಡೂರು ೦೪, ತರೀಕೆರೆ ೦೩ ಮತ್ತು ಮೂಡಿಗೆರೆಯಲ್ಲಿ ೦೧) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಆರ್‌ಸಿಹೆಚ್ ಅಧಿಕಾರಿಕಾರಿಗಳು ಡಾ. ಮಂಜುನಾಥ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳು ಡಾ. ಶಶಿಕಲಾ ಎಂ ಹಾಗೂ ಜಿಲ್ಲಾ ಕು? ನಿರ್ಮೂಲನ ಘಟಕದ ಸಿಬ್ಬಂದಿಗಳಾದ ಜೀವಿತ, ಶಶಿಧರ್ ಹೆಚ್.ಎನ್, ಹ?, ಗಂಗಯ್ಯ ಸಿ.ಎಂ ಉಪಸ್ಥಿತರಿದ್ದರು.
Sparsh Leprosy Awareness Campaign organized under the Leprosy Eradication Program

Leave a Reply