March 19, 2025
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಸೀತಾಳಯ್ಯನಗಿರಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ

ಸೀತಾಳಯ್ಯನಗಿರಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವ

ಚಿಕ್ಕಮಗಳೂರು:  ನಾಡಿನ ಪ್ರಸಿದ್ಧ ಸೀತಾಳಯ್ಯನಗಿರಿಯ ಶ್ರೀ ಮಲ್ಲಿಕಾರ್ಜುನ ಸ್ವಾಮಿ ಜಾತ್ರಾ ಮಹೋತ್ಸವ ಮತ್ತು ರಥೋತ್ಸವವು ಎಂಟೂರು ಗ್ರಾಮಸ್ಥರು ಹಾಗೂ ಎರಡೂರು ಮಠದ ಸಾರಥ್ಯ ದಲ್ಲಿ ಅತ್ಯಂತ ವಿಜೃಂಭ್ರಮಣೆಯಿಂದ ಸಾವಿರಾರು ಭಕ್ತಾಧಿಗಳ ಸಮ್ಮುಖದಲ್ಲಿ ಅತ್ಯಂತ ಶ್ರದ್ದಾಭಕ್ತಿಯಿಂದ ಯಶಸ್ವಿಗೊಂಡಿತು.

ತಳ್ಳಿಹಳ್ಳ, ಕಟ್ರುಮನೆ, ಇಳೆಹೊಳೆ, ಜಕ್ಕನಹಳ್ಳಿ, ಉಳುವಾಗಿಲು, ಕಬ್ಬಿನಹಳ್ಳಿ, ಹಿರೇಕೊಳಲೆ, ಬ್ಯಾಗದಹಳ್ಳಿ, ನರಗನಹಳ್ಳಿ, ಚಿಕ್ಕಕೊಳಲೆ ಗ್ರಾಮಸ್ಥರು ಹಾಗೂ ಮುಳ್ಳಪ್ಪಸ್ವಾಮಿ, ಸೀತಾಳಯ್ಯನಗಿರಿ ಮತ್ತು ಹೊಸಪುರ ನಾರಕಂತೆ ಮಠದ ಸಹಭಾಗಿತ್ವದಲ್ಲಿ ವಿವಿಧ ಗ್ರಾಮಗಳ ದೇವರ ಅಡ್ಡೆ ಹೊತ್ತಿ ಕುಣಿಸುತ್ತಾ ಗ್ರಾಮಸ್ಥರು ದೇ ವಾಲಯ ಸುತ್ತಲು ಮೆರವಣಿಗೆ ನಡೆಸಿದರು.

ಪ್ರತಿ ಗ್ರಾಮದಿಂದ ಸುಮಾರು ೪೦ಕ್ಕೂ ಹೆಚ್ಚು ಗ್ರಾಮಸ್ಥರು ಪೂರ್ವಿಕರ ಶೈಲಿಯ ಸಾಂಪ್ರದಾಯಿಕ ವಸ್ತ್ರ, ಪಂಚೆ, ಶಲ್ಯ, ಕೋಟು ಹಾಗೂ ಪೇಟಾ ಧರಿಸಿ ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಗ್ರಾಮಗಳ ದೇವರನ್ನು ಮೆರವಣಿಗೆ ಬಳಿಕ ಶ್ರೀ ಮಲ್ಲಿಕಾರ್ಜುನ ಸನ್ನಿಧಿಧಾನಕ್ಕೆ ಎಂಟೂರು ಗ್ರಾಮಸ್ಥರು ಗರ್ಭಗುಡಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.

ಹೊಸಪುರದ ನಾರಕಂತೆ ಮಠದಲ್ಲಿ ಇರಿಸಿರುವ ಶ್ರೀ ಮಲ್ಲಿಕಾರ್ಜುನ ಸ್ವಾಮಿ ವಿಗ್ರಹ ಮೂರ್ತಿಯನ್ನು ಕರೆತಂದು ಶ್ರೀ ಸೀತಾಳಯ್ಯನಗಿರಿಯಲ್ಲಿ ವಿಶೇಷಪೂಜೆ ಸಲ್ಲಿಸಿ ರಥಕ್ಕೆ ಕುಳ್ಳಿರಿಸಲಾಯಿತು. ಸಾವಿರಾರು ಭಕ್ತ ಗಣ ರಥವನ್ನು ಎಳೆಯುತ್ತಿದ್ಧಂತೆ ಅಕ್ಕಪಕ್ಕ ನೆರೆದಿದ್ದ ಭಕ್ತಾಧಿಗಳು ರಥಕ್ಕೆ ಬಾಳೆ ಹಣ್ಣು ತೂರಿ ಭಕ್ತಿ ಪರಮಾ ಶರಾದರು.

ಮಹಿಳೆಯರು, ಮಕ್ಕಳು ಹಾಗೂ ವೃದ್ದರು ದೂರದಿಂದಲೇ ಭವ್ಯ ರಥದಲ್ಲಿ ಅಲಂಕೃತಗೊಂಡಿದ್ಧ ಶ್ರೀ ಮಲ್ಲಿಕಾರ್ಜುನ ಸ್ವಾಮಿಗೆ ಭಕ್ತಿಪೂರ್ವವಾಗಿ ನಮಸ್ಕರಿಸಿದರು ಸಂಜೆ ರಥೋತ್ಸವ ಪೂರ್ಣಗೊಂಡ ನಂತರ ಗ್ರಾಮದೇವರುಗಳು ಮರಳಿ ಗ್ರಾಮಕ್ಕೆ ವಾಪಸಾದವು. ನಾಳೆ ಸೀತಾಳಯ್ಯನಗಿರಿ ಯಲ್ಲಿ ಓಕುಳಿ ಪೂರ್ಣಗೊ ಂಡು ಜಾತ್ರಾಮಹೋತ್ಸವ ಪೂರ್ಣಗೊಳ್ಳಲಿದೆ.

Seethalayyanagiri Sri Mallikarjuna Swamy Chariot Festival

Related posts

ಪೊಲೀಸರಿಗೆ ಸಾರ್ವಜನಿಕರ ಸಹಕಾರವಿದ್ದಲ್ಲಿ ಸಾಮಾಜ ಸುಸ್ಥಿರ

Team Suddigara

ಮೊರಾರ್ಜಿ ಪ್ರಾಂಶುಪಾಲರ ಅಮಾನತ್ತಿಗೆ ಸಚಿವರಿಗೆ ಮನವಿ

Team Suddigara

ನನಗೆ ಯಾರ ಬೆಂಬಲವೂ ಬೇಡ, ಪಕ್ಷ ಹೇಳಿದಂತೆ ನಾನು ಕೆಲಸ ಮಾಡುತ್ತೇನೆ

Team Suddigara

Leave a Comment

[t4b-ticker] [t4b-ticker]