ಚಿಕ್ಕಮಗಳೂರು: ಭಾರತೀಯರ ಮನದಾಳದಲ್ಲಿ ಸ್ಥಿರಸ್ಥಾಯಿಯಾಗಿ ಉಳಿದಿರುವ ಅಹಲ್ಯ ಬಾಯಿ ಹೊಳ್ಕರ್ ಉತ್ತಮ ಆಡಳಿತ, ಜನಾನುರಾಗಿ ಕಾರ್ಯ ಮತ್ತು ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃ ತಿಕ ಅಭಿವೃದ್ಧಿಗಳಿಂದಾಗಿ ಮಾದರಿಯಾಗಿದ್ದಾರೆ ಎಂದು ಭಾಜಪ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂ ಜುಳಾ ಹೇಳಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾದಿಂದ ಶನಿವಾರ ನಡೆದ ಲೋಕಮಾ ತೆ ಅಹಲ್ಯ ಬಾಯಿ ಹೊಳ್ಕರ್ ೩೦೦ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಮಹರಾಷ್ಟ್ರದಲ್ಲಿ ಜನಿಸಿ ಮಧ್ಯಪ್ರದೇಶದ ಸೊಸೆಯಾಗಿ ತೆರಳಿದ ಅಹಲ್ಯ ಬಾಯಿ ಸತತ ಮೂರು ದಶಕ ದಿಂದ ರಾಜ್ಯದ ಆಳ್ವಿಕೆಯನ್ನು ನಿಭಾಯಿಸಿ ನಾರಿ ಶಕ್ತಿಯನ್ನು ಎತ್ತಿಹಿಡಿದವರು. ಅತಿ ಕಡಿಮೆ ವಯಸ್ಸಿನಲ್ಲಿ ಬಾಲ್ಯ ವಿವಾಹವಾಗಿ ಪತಿಯನ್ನೇ ಕಳೆದು ಅಹಲ್ಯರವರು ಇಡೀ ರಾಜ್ಯಭಾರವನ್ನು ಹತೋಟಿಗೆ ತಂದು ಬಾ ಲ್ಯವಿವಾಹ ಕನಿಷ್ಟ ಪದ್ಧತಿಯನ್ನು ಹೋಗಲಾಡಿಸಿದರು ಎಂದರು.
ಮಹಿಳಾ ಸಬಲೀಕರಣಕ್ಕಾಗಿ ನೇಯ್ಗೆ ವೃತ್ತಿ, ಹತ್ತಿ ಬೆಳೆ ಕೃಷಿ ಹಾಗೂ ಆಭರಣ ತಯಾರಿಸುವ ತರಬೇ ತಿಗಳನ್ನು ಹೆಣ್ಣುಮಕ್ಕಳಿಗೆ ಒದಗಿಸಿ ಸ್ವಾವಲಂಬಿ ಬದುಕಿಗೆ ಭದ್ರಬುನಾದಿ ಹಾಕಿದ್ದರು. ಅಲ್ಲದೇ ರಾಜ್ಯದ ಆಳ್ವಿಕೆ ಯಲ್ಲೂ ಮಹಿಳಾ ಸೈನ್ಯವನ್ನು ಬಲಿಷ್ಟಗೊಳಿಸಿ ವಿರೋಧಿ ಪಡೆಗಳ ಆಕ್ರಮಣದಿಂದ ಗೆಲುವು ಸಾಧಿಸಿದ ಕೀರ್ತಿ ಅವರಿಗೆ ದಕ್ಕಿದೆ ಎಂದು ಹೇಳಿದರು.
ದೇಶದ ಹನ್ನೇರಡು ಜ್ಯೋರ್ತಿಲಿಂಗ ಜೀರ್ಣೋದ್ದಾರ, ನಾಡಿನ ಕರಾವಳಿ ಪ್ರದೇಶದ ದೇವಾಲಯ ನಿರ್ಮಾಣಕ್ಕೆ ಸಹಕಾರ ನೀಡಿ ಭವಿಷ್ಯದ ಪ್ರಜೆಗಳಿಗೆ ಭಾರತೀಯ ಸಂಸ್ಕೃತಿ ಜೀವತುಂಬಿದವರು. ಆ ಹಿನ್ನೆಲೆ ಯಲ್ಲಿ ಕೇಂದ್ರ ಸರ್ಕಾರ ಅಹಲ್ಯರ ಹೆಸರಿನಲ್ಲಿ ವಿಮಾನ ನಿಲ್ದಾಣ, ವಿಶ್ವವಿದ್ಯಾಲಯ ಮತ್ತು ಗ್ರಂಥಾಲಯಗ ಳನ್ನು ನಿರ್ಮಿಸಿ ಗೌರವಿಸಿದೆ ಎಂದರು.
ಕೇಂದ್ರದ ನರೇಂದ್ರ ಮೋದಿ ಸರ್ಕಾರ ಸ್ತ್ರೀಸಮಾಜ ಶೈಕ್ಷಣಿಕ, ಆರ್ಥಿಕ ಪ್ರಗತಿ ಹೊಂದಲು ಸ್ತ್ರೀಶಕ್ತಿ ಸಂಜೀವಿನಿಯಡಿ ಸ್ವಾವಲಂಬಿ ಉತ್ಪನ್ನಗಳಿಗೆ ಒತ್ತು ನೀಡಿದ ಪರಿಣಾಮ ಸಂಜೀವಿನಿ ಒಕ್ಕೂಟದಿಂದ ೫೦೦ ಕೋಟಿ ವಹಿವಾಟು ನಡೆಸಿ ಸಾಧನೆ ಮಾಡಿವೆ. ಆದರೆ ರಾಜ್ಯಸರ್ಕಾರ ಶಕ್ತಿ ಯೋಜನೆಯಿಂದ ಮಹಿಳೆಯರು ಬಸ್‌ಗಳಲ್ಲಿ ಗಲಾಟೆ ಮಾಡಿಕೊಳ್ಳುವ ಸ್ಥಿತಿ ನಿರ್ಮಿಸಿದೆ ಎಂದು ಆರೋಫಿಸಿದರು.
ಇಂದಿಗೂ ಕೆಲವು ಜಿಲ್ಲೆಗಳಲ್ಲಿ ಸರ್ಕಾರಿ ಬಸ್‌ಗಳು ಮಹಿಳಾ ಉದ್ಯೋಗಿಗಳು, ಕುಟುಂಬಸ್ಥರು ಕಂಡು ಬಂದರೆ ನಿಲುಗಡೆಗೊಳಿಸುತ್ತಿಲ್ಲ. ಮಹಾನಗರ ಬೆಂಗಳೂರಿನಲ್ಲಿ ೧೦ ನಿಮಿಷಕ್ಕೊಮ್ಮೆ ಬರುವ ಬಸ್‌ಗಳು ೪೦ ನಿಮಿಷ ತಡವಾಗುತ್ತಿವೆ ಎಂದ ಅವರು ಕೇಂದ್ರವು ಹೆಣ್ಣುಮಕ್ಕಳು ಸ್ವಬದುಕಿಗೆ ಆಧಾರವಾದರೆ, ರಾಜ್ಯಸರ್ಕಾ ರ ಮಹಿಳೆಯರಿಗೆ ಗ್ಯಾರಂಟಿಗಳಿಂದ ಪರಸ್ಪರ ಬಾಂಧವ್ಯ ಮುರಿಯುತ್ತಿದೆ ಎಂದರು.
ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಂತಾ ಅನಿಲ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಅಹಲ್ಯರವರು ಕಡಿಮೆ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡರೂ ದೃತಿಗೆಡದೇ ರಾಜ್ಯದ ಆಳ್ವಿಕೆಯನ್ನು ಚಾಕ್ಯತೆಯಿಂದ ನಿರ್ವಹಿಸಿ ಮಹಿಳಾ ಲೋಕಕ್ಕೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಆ ನಿಟ್ಟಿನಲ್ಲಿ ಜಿಲ್ಲಾ ಗ್ರಾಮಾಂತರ ಮಂಡಲ, ಶಕ್ತಿ ಕೇಂದ್ರಗಳಲ್ಲಿ ಅಹಲ್ಯ ಬಾಯಿ ಜಯಂತಿಗಳನ್ನು ಆಚ ರಿಸುವ ಮೂಲಕ ಇತಿಹಾಸದ ಪುಟಗಳನ್ನು ತೆರೆದು ಜನತೆಗೆ ಮುಟ್ಟಿಸುವ ಕೆಲಸ ಮಾಡಬೇಕು. ಅಹಲ್ಯರ ಬದುಕಿನ ಸಂಕಷ್ಟಗಳ ನಡುವೆಯು ಪ್ರಜೆಗಳ ರಕ್ಷಣೆ, ಸ್ವಾವಲಂಬಿ ಜೀವನಕ್ಕೆ ಹೆಜ್ಜೆಯಿಟ್ಟ ವಿವರಗಳನ್ನು ಮುಂ ದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ ರಾಷ್ಟ್ರದಲ್ಲಿ ಮಹಾಪುರುಷರು ಸಾಧನೆಗೈ ಯಲು ತಾಯಿ, ಮಡದಿ ಬೆನ್ನಿಂದ ಶಕ್ತಿಯಾಗಿ ನಿಂತಿರಲು ಸಾಧ್ಯವಾಗಿದೆ. ಹೀಗಾಗಿ ನಾರಿಯ ಶಕ್ತಿ ಅತ್ಯಂತ ಪರಿಣಾಮಕಾರಿಯಾಗಿದೆ. ಅದೇ ರೀತಿ ಅಹಲ್ಯರ ಜೀವನಚರಿತ್ರೆಗಳನ್ನು ಪಾಲಕರು ಸೇರಿದಂತೆ ಮಕ್ಕಳು ಕೆಲ ಕಾಲ ಓದಬೇಕು ಎಂದು ತಿಳಿಸಿದರು.
ಇದೇ ವೇಳೆ ವಾಗ್ಮಿ ಸುಮಾ ಪ್ರಸಾದ್ ಅವರು ಅಹಲ್ಯ ಬಾಯಿ ಹೊಳ್ಕರ್ ಜೀವನ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಭಾಜಪ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪ ಸುವರ್ಣ, ಕಾರ್ಯಕಾರಿಣಿ ಸದಸ್ಯೆ ವಿಜಯಲಕ್ಷ್ಮೀ, ಮಹಿಳಾ ಮೋರ್ಚಾ ಜಿಲ್ಲಾ ಪ್ರಭಾರಿ ನಾರಾಯಣ ಗೌಡ, ಜಿಲ್ಲಾ ಉಪಾಧ್ಯಕ್ಷೆ ವೀಣಾಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಶೃತಿ ರೋಹಿತ್, ರಾಜೇಶ್ವರಿ ರಾಜಶೇ ಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಾ.ನರೇಂದ್ರ, ಪುಣ್ಯಪಾಲ್, ಬೆಳವಾಡಿ ರವೀಂದ್ರ, ಸಾಮಾ ಜಿಕ ಜಾಲತಾಣ ಪ್ರಮುಖ್ ಚೈತ್ರಗೌಡ ಮತ್ತಿತರರು ಉಪಸ್ಥಿತರಿದ್ದರು.
Ahalya’s good governance is a model for society
