ಜೂ.14 ಕ್ಕೆ ವಿರೂಪಾಕ್ಷಲಿಂಗಶ್ರೀಗಳ 80ನೇ ಜನ್ಮದಿನೋತ್ಸವ

ಚಿಕ್ಕಮಗಳೂರು: ಹುಲಿಕೆರೆ ದೊಡ್ಡಮಠದ ಶ್ರೀ ಷ.ಬ್ರ.ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ೮೦ನೆಯ ಜನ್ಮದಿನೋತ್ಸವ ಜೂನ್ ೧೪ರಂದು ಶ್ರೀಮದ್ರಂಭಾಪುರಿ ಜಗದ್ಗುರುಗಳವರ ದಿವ್ಯ ಸಾನಿಧ್ಯದಲ್ಲಿ ೨೦ಶಿವಾಚಾರ್ಯರ ಸಮ್ಮುಖದಲ್ಲಿ ಆಯೋಜಿಸಲಾಗಿದೆ.

ಶನಿವಾರ ಬೆಳಗಿನಜಾವ ಹುಲಿಕೆರೆ ಶ್ರೀಮಠದಲ್ಲಿ ಕರ್ತೃಗದ್ದುಗೆಗೆ ಬಿಲ್ವಾರ್ಚನೆ, ರುದ್ರಾಭಿಷೇಕ, ಪುಣ್ಯಾಹ, ನವಗ್ರಹ-ಮೃತ್ಯುಂಜಯ-ಗಣಪತಿಹೋಮ ಮತ್ತಿತರರ ಧಾರ್ಮಿಕ ಕಾರ್‍ಯಕ್ರಮಗಳು ಜರುಗಲಿವೆ. ಗಾಯಕ ಹುಲಿಕೆರೆ ಪುಲಿಕೇಶಿ ಅವರಿಂದ ಸುಗಮ ಸಂಗೀತ ಹಾಗೂ ಅಂತರರಾಷ್ಟ್ರೀಯ ಭರತನಾಟ್ಯ ಕಲಾವಿದರಾದ ನಾಟ್ಯ ಮಯೂರಿ ಪಿ.ನಿತ್ಯಾ ಮತ್ತು ಎಸ್.ಶೃತಿ ಅವರಿಂದ ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್‍ಯಕ್ರಮಗಳು ನೆರವೇರಲಿದೆ.

ಶ್ರೀಮದ್ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ೧೦೦೮ ಜಗದ್ಗುರು ಪ್ರಸನ್ನರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ದಿವ್ಯಸಾನಿಧ್ಯದಲ್ಲಿ ಪೂರ್ವಾಹ್ನ ೧೧ಗಂಟೆಗೆ ಹುಲಿಕೆರೆ ಜಾತ್ರಾ ಮೈದಾನದಲ್ಲಿ ಶ್ರೀವಿರೂಪಾಕ್ಷಲಿಂಗ ಶಿವಾಚಾರ್ಯರ ಜನ್ಮದಿನೋತ್ಸವ ನಿಮಿತ್ತ ಧರ್ಮ ಜಾಗೃತಿ ಕಾರ್‍ಯಕ್ರಮ ಆಯೋಜಿಸಲಾಗಿದೆ. ವೀರಾಪುರಮಠದ ಶ್ರೀ ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯರು ರಚಿಸಿರುವ ‘ವರಯೋಗಿ’ ಅಭಿನಂದನಾ ಗ್ರಂಥವನ್ನು ಹುಲಿಕೆರೆಶ್ರೀಗಳಿಗೆ ಸಮರ್ಪಿಸಲಾಗುವುದು.

ಅಖಿಲಭಾರತ ಶಿವಾಚಾರ್ಯ ಸಂಸ್ಥೆಯ ಗೌರವಾಧ್ಯಕ್ಷರಾದ ಎಡೆಯೂರು ಶ್ರೀರೇಣುಕ ಶಿವಾಚಾರ್ಯ ನೇತೃತ್ವದಲ್ಲಿ ಹುಲಿಕೆರೆ ಶ್ರೀಮಠದ ಕಿರಿಯಶ್ರೀಗಳಾದ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು ಉಪನ್ಯಾಸ ನೀಡುವರು. ಶಾಸಕ ಎಚ್.ಡಿ.ತಮ್ಮಯ್ಯ ಅಧ್ಯಕ್ಷತೆಯಲ್ಲಿ ಸಂಸದ ಕೋಟಾಶ್ರೀನಿವಾಸ ಪೂಜಾರಿ ಸಮಾರಂಭ ಉದ್ಘಾಟಿಸುವರು. ಮೈಸೂರಿನ ಸಂಶೋಧಕ ಗಿರಿಜಾಪತಿ ಉಪನ್ಯಾಸ ನೀಡಲಿದ್ದಾರೆ. ವಿಧಾನಪರಿಷತ್ ಸದಸ್ಯರುಗಳಾದ ಎಸ್.ಎಲ್.ಭೋಜೇಗೌಡ ಮತ್ತು ಸಿ.ಟಿ.ರವಿ, ಮಾಜಿಸದಸ್ಯೆ ಗಾಯತ್ರಿಶಾಂತೇಗೌಡ, ಅಪೇಕ್ಸ್ ಬ್ಯಾಂಕ್‌ಅಧ್ಯಕ್ಷ ಬೆಳ್ಳಿಪ್ರಕಾಶ್, ಮಾಲಿನ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಸೇರಿದಂತೆ ವಿವಿಧ ಗಣ್ಯರು ಶ್ರೀಗಳಿಗೆ ಗೌರವ ಸಮರ್ಪಿಸುವರು.

ವೀರಾಪುರ ಶ್ರೀಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯರು, ಕೆ.ಬಿದರೆ ದೊಡ್ಡಮಠದ ಶ್ರೀಪ್ರಭುಕುಮಾರ ಶಿವಾಚಾರ್ಯರು, ಹುಣಸಘಟ್ಟದ ಶ್ರೀಗುರುಮೂರ್ತಿ ಶಿವಾಚಾರ್ಯರು, ಶಂಕರದೇವರಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಬಿಳಕಿ ಶ್ರೀರಾಚೋಟೇಶ್ವರ ಶಿವಾಚಾರ್ಯರು, ಯಳನಾಡು ಮಠದ ಡಾ.ಶ್ರೀ ಜ್ಞಾನಪ್ರಭುಸಿದ್ದರಾಮ ಸ್ವಾಮೀಜಿ, ತಾವರೆಕೆರೆ ಡಾ.ಶ್ರೀ ಅಭಿನವಸಿದ್ದಲಿಂಗ ಶಿವಾಚಾರ್ಯರು, ತರೀಕೆರೆ ಶ್ರೀಜಗದೀಶ ಶಿವಾಚಾರ್ಯರು, ಬೀರೂರಿನ ಶ್ರೀರುದ್ರಮುನಿ ಶಿವಾಚಾರ್ಯರು, ಹಣ್ಣೆಮಠದ ಶ್ರೀಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯರು, ಬೇರುಗಂಡಿಮಠದ ಶ್ರೀರೇಣುಕಮಹಾಂತ ಶಿವಾಚಾರ್ಯರು, ನಂದೀಪುರದ ಶ್ರೀ ನಂದೀಶ್ವರ ಶಿವಾಚಾರ್ಯರು, ಮಾದಿಹಳ್ಳಿಯ ಶ್ರೀಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಕರಡಿಗವಿಮಠದ ಶ್ರೀಶಿವಯೋಗಿ ಶಿವಶಂಕರ ಶಿವಾಚಾರ್ಯರು, ಕುಪ್ಪೂರು ಗದ್ದುಗೆಮಠದ ಶ್ರೀತೇಜೇಶ್ವರ ಶಿವಾಚಾರ್ಯರು, ಫಲಹಾರಸ್ವಾಮಿ ಮಠದ ಶ್ರೀ ಮರುಘೇಂದ್ರ ಶಿವಾಚಾರ್ಯರು. ಹಾರನಹಳ್ಳಿ ಶ್ರೀಕೋಡಿಮಠದ ಉತ್ತರಾಧಿಕಾರಿ ಚೇತನದೇವರು, ಕೂಡ್ಲಿಮಠದ ಶ್ರೀಮಹಾಂತ ಸ್ವಾಮೀಜಿ ಮತ್ತು ಹಿರಿಕೊಡ್ಲಿಮಠದ ಶ್ರೀ ಸದಾಶಿವ ಶಿವಾಚಾರ್ಯರು ಸೇರಿದಂತೆ ನಾಡಿನ ಇಪ್ಪತ್ತಕ್ಕೂ ವಿವಿಧ ಮಠಾಧೀಶರು ಪಾಲ್ಗೊಳ್ಳುವರು.

ಕಿರಿಯಶ್ರೀಗಳಾದ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರ ೨ನೆಯ ವರ್ಷದ ಪಟ್ಟಾಧೀಕಾರ ಮಹೋತ್ಸವ ಹಾಗೂ ಹಿಂದಿನ ಶ್ರೀಗಳಾದ ಲಿಂಗೈಕ್ಯಬಸವರಾಜದೇಶಿಕೇಂದ್ರ ಶಿವಾಚಾರ್ಯರ ಪುಣ್ಯಾ ಸ್ಮರಣಾರಾಧನೆಯು ಶನಿವಾರ ನೆರವೇರಲಿದೆ. ಶ್ರೀಮಠದ ಅಭಿವೃದ್ಧಿಗೆ ನೆರವನಿತ್ತ ಸುಮಾರು ೧೦೦ಕ್ಕೂ ಹೆಚ್ಚು ಸದ್ಭಕ್ತರಿಗೆ ಗುರುರಕ್ಷೆ ನೀಡಿ ಗೌರವಿಸಲಾಗುವುದೆಂದು ಹುಲಿಕೆರೆದೊಡ್ಡಮಠದ ಚ್.ಸಿ.ಮಹಾಲಿಂಗಯ್ಯ ತಿಳಿಸಿದ್ದಾರೆ.

Virupaksha Lingasree’s 80th birthday celebration on June 14

Comments

Leave a Reply

Your email address will not be published. Required fields are marked *