ನಾನು ಯಾವುದೇ ಹುದ್ದೆಯ ಆಕಾಂಕ್ಷಿಯಲ್ಲ

ಚಿಕ್ಕಮಗಳೂರು: ಇದುವರೆಗೆ ನಾನು ಅಪೇಕ್ಷೆ ಪಟ್ಟು ಪಕ್ಷದಲ್ಲಿ ಯಾವುದೇ ಹುದ್ದೆ ಪಡೆದಿಲ್ಲ. ಹಾಗೆ ಈಗಲೂ ನಾನು ಯಾವುದೇ ಹುದ್ದೆಯ ಆಕಾಂಕ್ಷಿಯೂ ಅಲ್ಲ. ಪಕ್ಷ ಯಾರಿಗೆ ಜವಾಬ್ದಾರಿ ಕೊಡುತ್ತದೆಯೋ ಅವರ ಜೊತೆಗೆ ಕೆಲಸ ಮಾಡುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷ ಕಟ್ಟಲು ನಾವು ಒಂದು ಟೀಮ್ ಆಗಿ ಕೆಲಸ ಮಾಡಬೇಕು. ಹೀಗಾಗಿ ನಾವು ಟೀಮ್ ಆಗಿ ಕೆಲಸ ಮಾಡುತ್ತೇವೆ. ಬಿ.ವೈ.ವಿಜಯೇಂದ್ರ ಅವರು ನಮ್ಮ ರಾಜ್ಯಾಧ್ಯಕ್ಷರು ಎಂದು ತಿಳಿಸಿದರು.

ನಾವು ವಿಚಾರದ ಜೊತೆ ಇದ್ದೇವೆ. ಪಕ್ಷ ಸಂಘಟನೆಗೆ ನಾವು ಸದಾ ಸಿದ್ದರಿದ್ದೇವೆ. ಒಂದು ತಂಡವಾಗಿ ನಾವು ಪಕ್ಷ ಸಂಘಟನೆ ಮಾಡುತ್ತೇವೆ ಎಂದು ಹೇಳಿದರು. ಬಿ.ವೈ.ವಿಜಯೇಂದ್ರ ಅವರು ನಮ್ಮ ರಾಜ್ಯಾಧ್ಯಕ್ಷರು. ಪಕ್ಷ ಕಟ್ಟಲು ನಾವು ಒಂದು ಟೀಮ್ ಆಗಿ ಕೆಲಸ ಮಾಡುತಿದ್ದೇವೆ. ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ತಿಳಿಸಿದರು.

ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಇತ್ತೀಚೆಗೆ ದೆಹಲಿ ಹೋಗಿ ವರಿಷ್ಟರ‌ನ್ನು ಭೇಟಿ ಮಾಡಿಲ್ಲ. ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ಅಧಿಕಾರವಲ್ಲ ಅದೊಂದು ಜವಾಬ್ದಾರಿ. ಯಾವ ಕಾಲಕ್ಕೆ ಯಾರಿಗೆ ಜವಾಬ್ದಾರಿ ನೀಡಬೇಕು ಎಂಬುದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ. ಯಾರೆ ಅಧ್ಯಕ್ಷರಾದರು ಅವರ ಜೊತೆ ಇದ್ದು ನಾನು ಕೆಲಸ ಮಾಡುತ್ತೇವೆ.

ರಾಜಣ್ಣ ಅವರು ಯಾವ ಉದ್ದೇಶದಿಂದ ಕ್ರಾಂತಿ ಪದ ಬಳಸಿದ್ದಾರೆಯೋ ಗೊತ್ತಿಲ್ಲ. ಒಂದು ವೇಳೆ ಅದು ಸಂಕ್ರಾಂತಿ ಆದರೆ ಎಲ್ಲರಿಗೂ ಒಳ್ಳೆಯದೇ ಆಗುತ್ತದೆ. ಅದು ಸಂಕ್ರಾಂತಿ ಆಗದಿದ್ದರೆ ನಾಡಿಗೂ ಒಳ್ಳೆಯದಾಗುವುದಿಲ್ಲ. ಜೊತೆಗೆ ಯಾರಿಗೂ ಒಳ್ಳೆಯದಾಗುವುದಿಲ್ಲ. ಆದರೆ ಪ್ರತಿದಿನ ಭ್ರಷ್ಟಾಚಾರ, ಹಗರಣ ಪ್ರತಿ ದಿನ ಕಾಡುತ್ತಿವೆ. ಇದು ಮುಂದುವರೆದರೆ ಜನರೇ ಕ್ರಾಂತಿಗೆ ಮುನ್ನುಡಿ ಬರೆಯಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

I am not a candidate for any position.

Comments

Leave a Reply

Your email address will not be published. Required fields are marked *