May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಅಪ್ಪು ಉದ್ಯಾನವ ಉದ್ಘಾಟನೆ

ಚಿಕ್ಕಮಗಳೂರು: ನಗರದ ಹೌಸಿಂಗ್ ಬೋರ್ಡ್‌ನ ೫ ನೇ ಹಂತದಲ್ಲಿ ಗೃಹಮಂಡಳಿ ಅಭಿವೃದ್ಧಿ ವೇದಿಕೆ ವತಿಯಿಂದ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಅಭಿವೃದ್ಧಿಪಡಿಸಲಾಗಿರುವ ಅಪ್ಪು ಉದ್ಯಾನವನವನ್ನು ಶಾಸಕ ಎಚ್.ಡಿ.ತಮ್ಮಯ್ಯ ಭಾನುವಾರ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ನಗರದ ಹೌಸಿಂಗ್ ಬೋರ್ಡ್ ಮತ್ತು ಕಲ್ಯಾಣ ನಗರ ಬಡಾವಣೆಗಳು ಅತೀ ವೇಗವಾಗಿ ಬೆಳೆಯುತ್ತಿವೆ.,  ಸ್ತೀರ್ಣದಲ್ಲೂ ವಿಶಾಲವಾಗಿರುವುದರಿಂದ ವಾರ್ಡ್ ಸದಸ್ಯರು ಹಾಗೂ ಶಾಸಕರುಗಳಿಗೆ ಅಭಿವೃದ್ಧಿ ಪಡಿಸುವುದು ಸವಾಲಿನ ಕೆಲಸವಾಗಿರುತ್ತದೆ. ಕಳೆದ ೨೦ ವರ್ಷ ಶಾಸಕರಾಗಿದ್ದಾಗ ಸಿ.ಟಿ.ರವಿ ಅವರು ಕೈಗೊಂಡಿದ್ದ ಅಭಿವೃದ್ಧಿ ಕೆಲಸಗಳನ್ನು ಯಾವುದೇ ಪಕ್ಷ ಬೇಧವಿಲ್ಲದೆ, ಮತ್ಸರವಿಲ್ಲದೆ ಅಭಿನಂದಿಸುತ್ತೇವೆ ಎಂದರು.

ನಾವು ಆಯ್ಕೆಯಾಗಿ ಎರಡು ವರ್ಷಗಳಾಗಿದೆ. ಈಗಾಗಲೇ ಆಧ್ಯತೆ ಮೇರೆಗೆ ಕಲ್ಯಾಣ ನಗರ ಮತ್ತು ಗೃಹ ಮಂಡಳಿ ಬಡಾವಣೆಯನ್ನು ಅಭಿವೃದ್ಧಿಗೆ ಕೈಗೆತ್ತಿಕೊಂಡಿದ್ದೇವೆ. ಅದರ ಫಲಿತಾಂಶ ಬರಲು ಇನ್ನೆರಡು ವರ್ಷ ಕಾಯಬೇಕಾಗುತ್ತದೆ. ಆ ಸಂದರ್ಭದಲ್ಲಿ ನಾವು ಮಾಡಿದ ಕೆಲಸವನ್ನು ನೆನಪಿಸಿಕೊಳ್ಳಬೇಕು ಎಂದು ಕೋರಿದರು.

ಉದ್ಯಾನವನಗಳನ್ನು ಸಾರ್ವಜನಿಕ ಪಾಲುದಾರಿಕೆಯಲ್ಲಿ ಅಭಿವೃದ್ಧಿಪಡಿಸುವುದು ಹೆಮ್ಮೆಯ ವಿಚಾರ. ಈಗಾಗಲೆ ಎರಡೂ ಬಡಾವಣೆಯಲ್ಲಿ ಅಭಿವೃದ್ಧಿಗಾಗಿ ನಾಗರೀಕ ಸಮಿತಿಗಳನ್ನು ಮಾಡಿಕೊಂಡಿವೆ. ಇವೆರಡೂ ಸ್ವಚ್ಛತೆ ವಿಚಾರದಲ್ಲೂ ನಗರಸಭೆಗೆ ಸಾಕಷ್ಟು ಸಹಕಾರ ನೀಡುತ್ತಿವೆ. ಇದು ನಗರದ ೩೫ ವಾರ್ಡ್‌ಗಳಿಗೂ ಮಾದರಿ ಎಂದರು.

ಕಣಿವೆ ಯಿಂದ ಕತ್ರಿಮಾರಮ್ಮ ದೇವಸ್ಥಾನದ ವರೆಗೆ ಬೀದಿ ದೀಪ ಅಳವಡಿಸುವ ಕಾಮಗಾರಿ ತಾಂತ್ರಿಕ ಕಾರಣದಿಂದಾಗಿ ಮುಂದಕ್ಕೆ ಹೋಗಿದೆ. ಸಧ್ಯದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಸಣ್ಣ ಕೆಲಸಕ್ಕೂ ನಗರಸಭೆ ಸದಸ್ಯರು, ಆಯುಕ್ತರು, ಶಾಸಕರು, ಸರ್ಕಾರವನ್ನು ಹುಡುಕಿಕೊಂಡು ಹೋಗುವ ಸಂದರ್ಭದಲ್ಲಿ ಇಲ್ಲಿನ ನಾಗರೀಕ ಸಮಿತಿ ತಾವೇ ಆಸಕ್ತಿ ವಹಿಸಿ ಅಪ್ಪು ಉದ್ಯಾನವನವನ್ನು ಅಭಿವೃದ್ಧಿ ಪಡಿಸಿ ನಂತರ ನಮ್ಮನ್ನು ಕರೆಸಿದ್ದಾರೆ. ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ನಗರಸಭೆ ನಿಧಿಯಲ್ಲಿ ಬೇಲಿ ಮತ್ತು ಇಂಟರ್ ಲಾಕಿಂಗ್ ಬ್ರಿಕ್ಸ್‌ಗಳನ್ನು ಹಾಕಿಸಿಕೊಡಲು ಸೂಚಿಸಿದ್ದೇವೆ. ನಂತರದ ನಿರ್ವಹಣೆಯನ್ನು ಸಮಿತಿ ಮಾಡಲಿದೆ. ಜನರ ಸಹಭಾಗಿತ್ವ ಕೊಡುತ್ತಿರುವುದರಿಂದ ಈಗ ನಗರಸಭೆ ಸಹಕಾರಿಯಾಗಿ ನಿಲ್ಲಬೇಕಿದೆ ಎಂದರು. ಸರ್ಕಾರ ನೀತಿ ರೂಪಿಸಿ, ನೆರವನ್ನೂ ಕೊಡಬಹುದು ಆದರೆ ಎಲ್ಲವನ್ನೂ ಮಾಡಲಿಕ್ಕೆ ಆಗದು. ಜನರ ಸಹಭಾಗಿತ್ವವೂ ಇದ್ದಲ್ಲಿ ಯಶಸ್ವಿಯಾಗಲು ಸಾಧ್ಯವಿದೆ ಎಂದು ಹೇಳಿದರು.

ನಮ್ಮ ದೇಶಕ್ಕೆ ಹತ್ತಾರು ವರ್ಷಗಳ ವೈಭವದ ಇತಿಹಾಸವೂ ಇದೆ. ಹಾಗೇ ಭವಿಷ್ಯವೂ ಇದೆ. ರಾಷ್ಟ್ರವಾಗಿ, ಸಮಾಜವಾಗಿ ನಾವು ಒಂದಾಗಿ ನಿಲ್ಲದಿದ್ದರೆ ನಾವು ಸುಲಭದ ತುತ್ತಾಗುತ್ತೇವೆ ಎನ್ನುವುದಕ್ಕೆ ಇತಿಹಾಸದ ಪಾಠವೂ ಇದೆ ಎಂದರು.

ನಗರಸಭಾ ಸದಸ್ಯೆ ಕವಿತಾ ಶೇಖರ್ ಮಾತನಾಡಿ, ಬಡಾವಣೆಯ ಸ್ಮಶಾನದ ಅಭಿವೃದ್ಧಿಗೆ ಜಾಗ ಮೀಸಲಿಡಲಾಗಿದೆ. ಅದಕ್ಕೆ ಸೂಕ್ತ ಅನುದಾನವನ್ನು ಕೊಟ್ಟು ಪೂರ್ಣಗೊಳಿಸಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ಗೃಹಮಂಡಳಿ ಅಭಿವೃದ್ಧಿ ವೇದಿಕೆ ಮುಖಂಡ ನಿವೃತ್ತ ಪ್ರಾಧ್ಯಾಪಕ ಶೇಖರ್ ಮಾತನಾಡಿ, ವೇದಿಕೆಯಿಂದ ಬಡಾವಣೆಯಲ್ಲಿ ಹತ್ತಾರು ಅಭಿವೃದ್ಧಿ ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇದೀಗ ಅಪ್ಪು ಉದ್ಯಾನವನವನ್ನು ಅಭಿವೃದ್ಧಿ ಪಡಿಸಲಾಗಿದೆ. ಇನ್ನೂ ಹತ್ತಾರು ಸಮಾಜ ಸೇವೆಯಲ್ಲಿ ವೇದಿಕೆ ತೊಡಗಿಸಿಕೊಳ್ಳಲಿದೆ ಎಂದರು.

ವೇದಿಕೆಯ ಮತ್ತೋರ್ವ ಪ್ರಮುಖರಾದ ಪ್ರಾಧ್ಯಾಪಕ ಡಾ.ಕೆ.ಎನ್.ಲಕ್ಷ್ಮೀಕಾಂತ್ ಸ್ವಾಗತಿಸಿದರು. ನಗರಸಭೆ ನಾಮನಿರ್ದೇಶಿತ ಸದಸ್ಯ ಕೀರ್ತಿಶೇಟ್, ಆಯುಕ್ತ ಬಿ.ಸಿ.ಬಸವರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಎಐಟಿ ಕಾಲೇಜಿನ ಸುಬ್ಬರಾವ್, ಸಮಿತಿ ಸದಸ್ಯರಾದ ಗೋಪಾಲಗೌಡ, ದಿನೇಶ್, ನಂಜುಡಪ್ಪ, ಸಂತೋಷ್, ನಿಶಾಂತ್, ರವಿ, ರವಿಕುಮಾರ್, ಗಂಗಾಧರ್, ವಿಜಯ್‌ಕುಮಾರ್, ಲೋಕೇಶ್, ನಂಧೀಶ್, ಲೋಕೇಶ್, ರಂಗಣ್ಣ ಉಪಸ್ಥಿತರಿದ್ದರು ದೊಡ್ಡಮಲ್ಲಪ್ಪ ನಿರೂಪಿಸಿ, ನಂಜುಂಡಪ್ಪ ವಂದಿಸಿದರು.

Inauguration of Appu Park in memory of Puneeth Rajkumar

Related posts

ಸೇವಾ ಪಾಕ್ಷಿಕ ಅಭಿಯಾನ : ಯುವಮೋರ್ಚಾದಿಂದ ಸಸಿನೆಟ್ಟು ಆಚರಣೆ

Team Suddigara

ಸ್ಪೂರ್ತಿದಾಯಕ ಉಪನ್ಯಾಸ ಆಧ್ಯಾತ್ಮಿಕ ಬಂಧುಗಳಿಗೆ ಆತ್ಮಸಾಕ್ಷಾತ್ಕಾರ

Team Suddigara

ಮಂಗನ ಕಾಯಿಲೆ ಪ್ರಕರಣ ಸಾರ್ವಜನಿಕರು ಆತಂಕಕ್ಕೊಳಗಾಗದೆ ಮುನ್ನೆಚರಿಕೆ ವಹಿಸಬೇಕು

Team Suddigara

Leave a Comment