ಚಿಕ್ಕಹಳ್ಳ ಗ್ರಾಮದ ಕೆಲವರಿಂದ ಜಿಲ್ಲಾಡಳಿತಕ್ಕೆ ಸುಳ್ಳು ಮಾಹಿತಿ

ಚಿಕ್ಕಮಗಳೂರು: ತಾಲೂಕಿನ ಸತ್ತಿಹಳ್ಳಿ ಗ್ರಾಮಪಂಚಾಯಿತಿ ಚಿಕ್ಕಹಳ್ಳ ಗ್ರಾಮಕ್ಕೆ ಸರಕಾರದಿಂದ ಮಂಜೂರಾದ ರಸ್ತೆಯಿದ್ದರೂ ಸಂಚರಿಸಲು ರಸ್ತೆಯೇ ಇಲ್ಲ ಎಂದು ಗ್ರಾಮದ ಕೆಲವರು ಜಿಲ್ಲಾಡಳಿತಕ್ಕೆ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಗ್ರಾಮಸ್ಥ ಪ್ರದೀಪ್ ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಇಂದು ಈ ವಿಷಯ ತಿಳಿಸಿದ ಅವರು, ಚಿಕ್ಕಹಳ್ಳ ಗ್ರಾಮಸ್ಥರು ಸಂಚರಿಸಲು ಇರುವ ರಸ್ತೆ ಸುಸ್ಥಿತಿಯಲ್ಲಿದೆ. ಆದರೆ, ಸ್ವಲ್ಪ ದೂರವಾಗುತ್ತದೆ. ಈ ಕಾರಣದಿಂದ ಗ್ರಾಮಸ್ಥರಾದ ಕಾಳೇಗೌಡ, ದೀಕ್ಷಿತ್ ಮತ್ತಿತರರು ನಮ್ಮ ಒತ್ತುವರಿ ಜಮೀನಿನಲ್ಲಿ ಪರ್‍ಯಾಯ ರಸ್ತೆ ಕೇಳುತ್ತಿದ್ದಾರೆ. ಹೀಗಾಗಿ ಜಿಲ್ಲಾಡಳಿತ ಈ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಹಾಲಿ ಇರುವ ರಸ್ತೆಗೆ ೨೦೦೩-೦೪ ರಲ್ಲಿ ಜಿಲ್ಲಾ ಪಂಚಾಯಿತಿಯಿಂದ ಅನುದಾನ ಬಿಡುಗಡೆಯಾಗಿ ರಸ್ತೆ ಅಭಿವೃದ್ಧಿಪಡಿಸಿದ್ದಾರೆ. ರಸ್ತೆ ವಿಚಾರದಲ್ಲಿ ಹೈಕೋರ್ಟಿನಲ್ಲಿ ನಮ್ಮ ಪರವಾದ ಆದೇಶ ಬಂದಿದೆ. ಈಗ ಸಾರ್ವಜನಿಕ ರಸ್ತೆಯಿದ್ದರೂ ರಸ್ತೆಯೇ ಇಲ್ಲ ಎಂದು ಸುಳ್ಳು ಹೇಳಿ ಸಮಾಜ ಮತ್ತು ಜಿಲ್ಲಾಡಳಿತದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಅಲ್ಲದೆ ನಮ್ಮ ಜಮೀನಿನಲ್ಲೇ ಪರ್‍ಯಾಯ ರಸ್ತೆ ಬೇಕು ಎಂದು ನಮಗೆ ತೊಂದರೆ ನೀಡುವ ಉದ್ದೇಶ ಹೊಂದಿದ್ದಾರೆ ಎಂದರು.

ರಸ್ತೆ ವಿಚಾರವಾಗಿ ಅಶಾಂತಿ ಮೂಡಿಸುವ ಮೂಲಕ ನಮ್ಮ ಮೇಲೆ ದೌರ್ಜನ್ಯ ಎಸಗಲು ಮುಂದಾಗಿದ್ದಾರೆ. ಈ ವಿಚಾರಗಳನ್ನು ಪರಿಶೀಲಿಸಿ ಇವರ ವಿರುದ್ಧ ಕಾನೂನುಕ್ರಮ ತೆಗೆದುಕೊಳ್ಳುವ ಮೂಲಕ ನಮಗೆ ನ್ಯಾಯ ಒದಗಿಸಬೇಕು ಎಂದು ವಿನಂತಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗಜೇಂದ್ರ, ಅರವಿಂದ್, ಲಕ್ಷ್ಮಣಗೌಡ ಇದ್ದರು.

Some people from Chikkahalla village provided false information to the district administration.

Comments

Leave a Reply

Your email address will not be published. Required fields are marked *