ಯತ್ನಾಳ್ ಉಚ್ಚಾಟನೆ ಬೆಳವಣಿಗೆ ದುರಾದೃಷ್ಟಕರ

ಚಿಕ್ಕಮಗಳೂರು: ದೇಶ ಮತ್ತು ಪಕ್ಷ ದೊಡ್ಡದು, ನಾವು ಪಕ್ಷಕ್ಕಿಂತ ದೊಡ್ಡವರಲ್ಲ, ಯತ್ನಾಳ್ ೪ ದಶಕಗಳ ಒಡನಾಡಿ, ಈ ಬೆಳವಣಿಗೆ ದುರಾದೃಷ್ಟಕರವೆಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

ಬಿಜೆಪಿಯಿಂದ ಯತ್ನಾಳ್ ಆರು ವರ್ಷ ಉಚ್ಚಾಟನೆಹೊಂದಿರುವ ವಿಷಯಕ್ಕೆ ಸಂಬಂಧಿಸಿದಂತೆ ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,ಪ್ರತಿಯೊಬ್ಬರಲ್ಲೂ ಸಾಮರ್ಥ್ಯ,ದೌರ್ಬಲ್ಯ ಇದ್ದೇ ಇರುತ್ತದೆ. ನಾನು ವಿಶ್ಲೇಷಣೆ ಮಾಡಲು ಇಚ್ಚಿಸುವುದಿಲ್ಲ,ಏಕ್ ಹೈ ತೋ ಸೇಫ್ ಹೇ ಎನ್ನುವುದು ಪಕ್ಷ,ಸಮಾಜ,ದೇಶ ಎಲ್ಲರಿಗೂ ಅನ್ವಯಿಸುತ್ತದೆ ಎಂದು ತಿಳಿಸಿದರು.

ಸಂದರ್ಭಕ್ಕೆ ಗ್ರಹಿಸಿ ಮಾತನಾಡೋದು ಸ್ವಾಭಾವಿಕ,ಯತ್ನಾಳ್ ಕೂಡ ಓರ್ವ ಬಲಿಷ್ಠ ನಾಯಕ, ಅದರ ಬಗ್ಗೆ ಅನುಮಾನ ಬೇಡ.ಪಕ್ಷ ಹಲವು ಕಾರಣಕ್ಕೆ ಒಂದು ಅನಿವಾರ್ಯ ನಿರ್ಧಾರಕ್ಕೆ ಬಂದಿರುತ್ತದೆ.ಎಲ್ಲರೂ ಒಟ್ಟಿಗೆ ಹೋಗುವ ವಾತಾವರಣ ನಿರ್ಮಾಣವಾಗಿದ್ದರೆ ಖುಷಿ ಪಡುವುದರಲ್ಲಿ ನಾನೇ ಮೊದಲಿಗ ಎಂದರು.

ಶಾಸಕ ಬಸವನಗೌಡಪಾಟೀಲ್ ಯತ್ನಾಳ್ ಯಾವತ್ತೂ ಬಿಜೆಪಿ ಬಗ್ಗೆ ಮಾತನಾಡಲಿಲ್ಲ ಎಂಬ ಮಾತಿನ ಹಿನ್ನೆಲೆಯಲ್ಲಿ ಈಗ ನಾನು ಮತನಾಡಿದರೆ ಅವರವರ ಭಾವಕ್ಕೆ ಗ್ರಹಿಸುತ್ತಾರೆ.ಸತ್ಯ ಹೇಳಿದರೆ ಗ್ರಹಿಸುವವರು ಸತ್ಯವನ್ನೇ ಗ್ರಹಿಸುತ್ತಾರೆ ಎನ್ನುವಂತಿಲ್ಲ, ಸಂದರ್ಭಕ್ಕೆ ತಕ್ಕಂತೆ ತಮಗೆ ಬೇಕಾದಂತೆ ಗ್ರಹಿಸುತ್ತಾರೆ. ನಿಷ್ಠೆಯ ಮಾತು ಬಂದಾಗ ಪಕ್ಷಕ್ಕಿಂತ ದೊಡ್ಡದು ಎಂದು ನಾವು ಯಾವುದನ್ನೂ ಭಾವಿಸಿಲ್ಲ,ಅದಕ್ಕಿಂತ ದೊಡ್ಡದಿದ್ದರೆ ಅದು ದೇಶ ಮಾತ್ರ ಎಂದರು.

ರಾಜ್ಯದಲ್ಲಿ ನಡೆದಿರುವ ಹನಿಟ್ರ್ಯಾಪ್ ವಿಷಯ ಕುರಿತು ಕೇಳಿದಾಗ ಕಾಂಗ್ರೆಸ್ ಪಕ್ಷ ಕೊಲೆಗಡುಕರ ಪಕ್ಷ ಎನ್ನುವುದು ನಿಜವಾಯಿತ್ತಲ್ಲ.ಕಾರ್ಖಾನೆಯೂ ಅವರದ್ದು,ಕೊಲೆಗೆ ಬಂದಿದ್ದರು ಎನ್ನುವ ಮಾತನ್ನು ಅವರೇ ಹೇಳಿದ್ದಾರೆಂದು ತಿಳಿಸಿದರು.

ಆಡಳಿತ ಪಕ್ಷದವರದ್ದು, ಫೋನ್ ಟ್ಯಾಪ್ ಮಾಡುತ್ತಾರೆ ಅಂದಿದ್ದರು. ನಾನು ಅಂದೇ ಹೇಳಿದ್ದೇ, ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳುವುದಕ್ಕೆ ಏನು ಬೇಕಾದರೂ ಮಾಡಿಸುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿ ಈ ರೀತಿಯ ಹೊಲಸು ರಾಜಕಾರಣ ಕರ್ನಾಟಕಕ್ಕೆ ಶೋಭೆ ತರುವುದಿಲ್ಲವೆಂದರು.

Yatnal’s expulsion is an unfortunate development.

Comments

Leave a Reply

Your email address will not be published. Required fields are marked *