- ಅರಸೀಕೆರೆ ತಾಲೂಕ್ ಟಿ,ಕೋಡಿಹಳ್ಳಿ ಗ್ರಾಮದ ಶ್ರೀ ದೇವಮ್ಮ ದೇವಿ ಮಹಾ ದಿವ್ಯ ರಥೋತ್ಸವ ಭಾನುವಾರ ಅತ್ಯಂತ ವಿಜೃಂಭಣೆಯಿಂದ ನೆರವೆರಿತು.
ತಳಿರು ತೋರಣ ವಿವಿಧ ಹೂವುಗಳಿಂದ ವಿಶೇಷವಾಗಿ ಅಲಂಕರಿಸಿದ ರಥದಲ್ಲಿ ಗ್ರಾಮದ ಶ್ರೀ ದೇವಮ್ಮ ದೇವಿ,ಹಾಗೂ ತಳಲೂರು ಗ್ರಾಮದ ಬನ್ನಿಮಹಾಕಾಳಿ ಅಮ್ಮನವರನ್ನು ಕೂರಿಸಿ ಗ್ರಾಮದ ಧೂತರಾಯಸ್ವಾಮಿ,ಚಲುವರಾಯಸ್ವಾಮಿ,ಕೆಂಚಯರಾಯಸ್ವಾಮಿ.ದೇವರುಗಳ ಸಮ್ಮುಖದಲ್ಲಿ ಸಾವಿರಾರು ಭಕ್ತರು ಜಯಘೋಷದೊಂದಿಗೆ ರಥವನ್ನು ಎಳೆದರು.
ರಥೋತ್ಸವಕ್ಕೂ ಮುನ್ನ ದೇವಿಯವರ ಮಧುವಣಿಗೆಶಾಸ್ತ್ರ,ಕಂಕಣ ಬಂಧನ,ಅಮ್ಮನವರಿಗೆ,ರುದ್ರಾಭಿಷೇಕ,ಧ್ವಜಾರೋಹಣ,ಕಳಸಾರೋಹಣ,
ಸೂರ್ಯಮಂಡಲೋತ್ಸವ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳು ಜರುಗಿದವು.
ಭಕ್ತರು ರಥದ ಗಾಲಿಗೆ ತೆಂಗಿನಕಾಯಿ ಹೊಡೆಯುವುದು, ರಥದ ಗಾಲಿಗೆ ಎಣ್ಣೆ ಹಚ್ಚುವ ಮೂಲಕ ಹರಕೆ ತೀರಿಸಿದರು.
ರಥದ ಕಳಸಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಕೋರಿಕೆ ಹಿಡೆರುವಂತೆ ದೇವರಲ್ಲಿ ಪ್ರಾರ್ಥಿಸಿದ್ದು ವಿಶೇಷವಾಗಿತ್ತು.
ಬಂದಂತಹ ಭಕ್ತಾಧಿಗಳಿಗೆ ಪಾನಕ ಫಲಹಾರ ಅನ್ನಸಂತರ್ಪಣೆ ಕಾರ್ಯ ನೆರವೆರಿತು.

Leave a Reply