Category: ಚಿಕ್ಕಮಗಳೂರು

  • ಜೆಪಿಕೆ ಇಂಡಸ್ಟ್ರೀಸ್ ಸ್ವಾವಲಂಬಿ ಬದುಕಿಗೆ ನೆರವಾಗಿದೆ

    ಜೆಪಿಕೆ ಇಂಡಸ್ಟ್ರೀಸ್ ಸ್ವಾವಲಂಬಿ ಬದುಕಿಗೆ ನೆರವಾಗಿದೆ

    ಚಿಕ್ಕಮಗಳೂರು: ಬಡತನ ಮುಕ್ತ, ನಿರುದ್ಯೋಗ ಮುಕ್ತ ಸ್ವಾವಲಂಬಿ-ಸ್ವಾಭಿಮಾನಿ, ಆತ್ಮನಿರ್ಭರ ಭಾರತವಾಗಬೇಕೆಂಬುದು ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

    ಅವರು ಇಂದು ನಗರದ ಆರ್‌ಜಿ ರಸ್ತೆಯಲ್ಲಿರುವ ಜೋಳ್‌ದಾಳ್ ನಿಲಯದ ಆವರಣದಲ್ಲಿ ಜೆಪಿಕೆ ಇಂಡಸ್ಟ್ರೀಸ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಜೆಪಿಕೆ ಇಂಡಸ್ಟ್ರೀಸ್‌ನಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯ ಜೊತೆಗೆ ತರಬೇತಿ ನೀಡಿ ಉದ್ಯೋಗ ನೀಡಲು ಯೋಜನೆ ರೂಪಿಸಲಾಗಿದ್ದು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ. ಪ್ರತಿಯೊಬ್ಬ ಭಾರತೀಯನೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಚಿಂತನೆ ನಡೆದಿರುವ ಈ ಸಂದರ್ಭದಲ್ಲಿ ಇದು ಯಶಸ್ವಿಯಾದರೆ ಆತ್ಮನಿರ್ಭರ ಭಾರತ ಆಗಲು ಸಾಧ್ಯ ಎಂದರು.

    ಜೆಪಿಕೆ ಇಂಡಸ್ಟ್ರೀಸ್ ಸಾವಿರಾರು ಯುವಕರಿಗೆ ಉದ್ಯೋಗ ನೀಡುವ ಉದ್ದಿಮೆಯಾಗಿ ಬೆಳೆಯಲಿ, ಜಿಲ್ಲೆಯ ನಿರುದ್ಯೋಗ ಸಮಸ್ಯೆಗೆ ಪರಿಹಾರ ರೂಪಿಸುವ ಕಾರ್ಯ ಮಾಡಲಿ ಎಂದು ಶುಭ ಹಾರೈಸಿದರು.

    ಆಶಾಕಿರಣ ಚಾರಿಟಬಲ್ ಟ್ರಸ್ಟ್‌ನ ಮುಖ್ಯ ಟ್ರಸ್ಟಿ ಡಾ. ಜೆ.ಪಿ ಕೃಷ್ಣೇಗೌಡ ಮಾತನಾಡಿ, ಜಿಲ್ಲೆಯಲ್ಲಿ ಈ ರೀತಿಯ ಇಂಡಸ್ಟ್ರೀಸ್ ಇಲ್ಲ, ಆದಿಚುಂಚನಗಿರಿ ಪೀಠದ ಪರಮಪೂಜ್ಯ ಶ್ರೀಶ್ರೀಶ್ರೀ ನಿರ್ಮಲಾನಂದನಾಥ ಮಹಾಸ್ವಾಮಿಗಳು ಉದ್ಘಾಟಿಸಿ ಎಲ್ಲರಿಗೂ ಶುಭವಾಗಲಿ ಎಂದು ಆಶೀವರ್ದಿಸಿದ್ದಾರೆ ಎಂದರು.

    ಜೆಪಿಕೆ ಇಂಡಸ್ಟ್ರೀಸ್ ನನ್ನ ಪುತ್ರಿಯ ಕನಸಾಗಿತ್ತು, ನೂರು ಜನ ಸಂದರ್ಶನಕ್ಕೆ ಹಾಜರಾಗಿದ್ದರು. ಈಗ ೨೦ ಜನರಿಗೆ ಉದ್ಯೋಗ ನೀಡಿದ್ದೇವೆ. ಅಗತ್ಯವಿದ್ದರೆ ಮುಂದೆ ನೋಡಿಕೊಂಡು ವಿಸ್ತರಿಸುತ್ತೇವೆ. ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

    ಆಶ್ರಯ ಫೌಂಡೇಶನ್ ಉಪಾಧ್ಯಕ್ಷೆ ಡಾ. ವರ್ಷ ಅಭಿಷೇಕ್ ಮಾತನಾಡಿ, ಜೆಪಿಕೆ ಇಂಡಸ್ಟ್ರೀಸ್ ಚಿಕ್ಕಮಗಳೂರಿನಲ್ಲಿ ಮೊದಲ ಬಾರಿಗೆ ಚಿಕ್ಕದಾಗಿ ಆರಂಭಿಸಿದ್ದೇವೆ. ಮುಂದೆ ದೊಡ್ಡ ಉದ್ಯಮವಾಗಿ ಬೆಳೆಸಬೇಕೆಂದು ಕನಸು ಇದ್ದು, ಜಿಲ್ಲೆಯ ಜನರಿಗೆ ಶಕ್ತಿ ತುಂಬಿ ಸಬಲೀಕರಣ ಮಾಡಲು ಗುರಿಹೊಂದಲಾಗಿದೆ ಎಂದು ಹೇಳಿದರು.

    ಎಲ್ಲರ ಸಹಕಾರದೊಂದಿಗೆ ಪ್ರಾರಂಭಿಸಿರುವ ಈ ಇಂಡಸ್ಟ್ರೀಸ್‌ನಲ್ಲಿ ಮುಂದೆ ಸಾವಿರಾರು ಮಹಿಳೆಯರು ಮತ್ತು ಪುರುಷರಿಗೆ ಉದ್ಯೋಗ ನೀಡುವ ಬೃಹತ್ ಉದ್ದಿಮೆಯಾಗಿ ಬೆಳೆಯುವಂತೆ ಮಾಡುತ್ತೇವೆ ಎಂದರು. ಜೆಪಿಕೆ ಇಂಡಸ್ಟ್ರೀಸ್‌ನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದ ಆದಿಚುಂಚನಗಿರಿ ಪೀಠದ ಶ್ರೀ ಜಗದ್ಗುರು ಡಾ. ನಿರ್ಮಲಾನಂದನಾಥ ಸ್ವಾಮೀಜಿಯವರು ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

    ಈ ಸಂದರ್ಭದಲ್ಲಿ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ, ಶಾಸಕ ಟಿ.ಡಿ ರಾಜೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ಆಶ್ರಯ ಪೌಡೇಷನ್‌ನ ಸಾಗರ್, ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್‌ಶೆಟ್ಟಿ, ಮುಖಂಡರಾದ ದೀಪಕ್ ದೊಡ್ಡಯ್ಯ, ಮಹೇಶ್, ಡಾ. ಗೌರಿ ಮತ್ತಿತರರು ಉಪಸ್ಥಿತರಿದ್ದರು.

    JPK Industries has helped in self-reliant living

  • ಶೃಂಗೇರಿ ಶಾರದಾ ಪೀಠಕ್ಕೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭೇಟಿ

    ಶೃಂಗೇರಿ ಶಾರದಾ ಪೀಠಕ್ಕೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಭೇಟಿ

    ಚಿಕ್ಕಮಗಳೂರು: ‘ಮಂಡ್ಯದ ಮೈಷುಗರ್ ಶಾಲೆಗೆ ₹25 ಕೋಟಿ ಠೇವಣಿ ಇಡುವುದಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದರು. ಅವರು ಮೊದಲು ತಮ್ಮ ನಾಲಿಗೆ ಸರಿಯಾಗಿ ಇಟ್ಟುಕೊಂಡು ಬೇರೆಯವರ ಬಗ್ಗೆ ಮಾತನಾಡಲಿ’ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿರುಗೇಟು ನೀಡಿದರು.

    ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ‘ನನ್ನ ವೇತನದ ಹಣವನ್ನು ಶಿಕ್ಷಕರಿಗೆ ಕೊಡುತ್ತಿದ್ದೇನೆ. ಇದು ಪಾಪದ ಹಣವಲ್ಲ. ನಾನೇನು ಕಮಿಷನ್ ತೆಗೆದುಕೊಂಡಿಲ್ಲ. ವರ್ಗಾವಣೆಯಿಂದ ಹೊಡೆದುಕೊಂಡ ಹಣವಲ್ಲ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ಕುಮಾರಸ್ವಾಮಿ ಅವರು ಇಡೀ ರಾಷ್ಟ್ರದಲ್ಲಿ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆಯೇ, ಎಷ್ಟು ಕಾರ್ಖಾನೆಗಳಿಂದ ಕಮಿಷನ್ ತೆಗೆದುಕೊಂಡಿದ್ದಾರೆ’ ಎಂದು ಪ್ರಶ್ನಿಸಿದರು.

    ‘ಎಲ್ಲೋ ಮಾಧ್ಯಮಗಳ ಮುಂದೆ ಹೇಳಿಕೆ ನೀಡಿ ಹಿಟ್‌ ಆ್ಯಂಡ್ ರನ್‌ ಮಾಡುವುದಲ್ಲ. ಎದುರಿಗೆ ಬಂದು ಮಾತನಾಡಲು ಹೇಳಿ. ದಿನಾಂಕ ನಿಗದಿ ಮಾಡಲು ಹೇಳಿ ಒಂದೇ ವೇದಿಕೆಯಲ್ಲಿ ಚರ್ಚೆ ಮಾಡೋಣ. ಮುಖ್ಯಮಂತ್ರಿಯಾಗಿದ್ದಾಗ ಏನು ಮಾಡಿದ್ದಾರೆ, ಕೇಂದ್ರದ ಮಂತ್ರಿಯಾಗಿ ಏನು ಮಾಡುತ್ತಿದ್ದಾರೆ ಎಲ್ಲವೂ ಗೊತ್ತಾಗಲಿದೆ’ ಎಂದರು.

    ‘ಶಾಲೆಗೆ ₹25 ಕೋಟಿ ಠೇವಣಿ ಇಡುವುದಾಗಿ ಅವರೇ ತಾನೇ ಮಾಧ್ಯಮಗಳಿಗೆ ಹೇಳಿದ್ದು. ಯಾವ ನಾಲಿಗೆಯಲ್ಲಿ ಹೇಳಿದರು, ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೆ ಏಕೆ ಹೇಳಬೇಕಿತ್ತು. ಈಗ ಪಾಪದ ಹಣವಲ್ಲ, ಸಂಬಳದ ಹಣದಲ್ಲಿ ಕೊಡುತ್ತೇನೆ ಎನ್ನುತ್ತಾರೆ. ನಾನು ಅವರ ಜತೆಯಲ್ಲೇ ಇದ್ದವನು, ಯಾವ ಹಣದಲ್ಲಿ ಕೊಡುತ್ತಾರೆ ಎಂಬುದು ನಗಗೆ ಗೊತ್ತಿಲ್ಲವೇ’ ಎಂದು ಪ್ರಶ್ನಿಸಿದರು.

    ‘ಅವರು ಏನೇನು ಮಾಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲವೇ, ನನ್ನ ಬಗ್ಗೆ ಹೇಳಲು ಅವರ ಬಳಿ ಹತ್ತು ವಿಷಯಗಳಿದ್ದರೆ ನನ್ನ ಬಳಿ ಸಾವಿರ ಇವೆ. ಎಚ್.ಡಿ.ದೇವೇಗೌಡರ ಬಳಿ ನಾನೂ ಕಲಿತಿದ್ದೇನೆ. ಅವರ ಮಗ ಕುಮಾರಸ್ವಾಮಿ ಎಂಬ ಕಾರಣಕಷ್ಟೇ ಸುಮ್ಮನಿದ್ದೇನೆ’ ಎಂದರು.

    ‘ನವೆಂಬರ್‌ನಲ್ಲಿ ರಾಜಕೀಯ ಕ್ರಾಂತಿಯೂ ಇಲ್ಲ, ಏನೂ ಇಲ್ಲ. ಮುಖ್ಯಮಂತ್ರಿ ಮತ್ತು ಉಪಮುಖ್ಯ ಮಂತ್ರಿ ಅನೊನ್ಯವಾಗಿ ದ್ದಾರೆ. ಯಾವುದೇ ತೀರ್ಮಾನವಿದ್ದರೂ ಹೈಕಮಾಂಡ್ ತೆಗೆದುಕೊಳ್ಳುತ್ತದೆ’ ಎಂದು ಸ್ಪಷ್ಟಪಡಿಸಿದರು.

    ಶಾರದಾ ಮಠಕ್ಕೆ ಭೇಟಿ : ಶೃಂಗೇರಿ ಶಾರದಾ ಪೀಠಕ್ಕೆ ಗುರುವಾರ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಪತ್ನಿ ಧನಲಕ್ಷ್ಮಿ ಅವರು ಭೇಟಿ ನೀಡಿ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದರು.

    ನಂತರ ಶಕ್ತಿ ಗಣಪತಿ, ತೋರಣ ಗಣಪತಿ ಮತ್ತು ಶಂಕರಚಾರ್ಯ ದೇವಾಲಯ ಮತ್ತು ಮಠದ ಎಲ್ಲಾ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ನರಸಿಂಹವನದ ಗುರು ನಿವಾಸಕ್ಕೆ ತೆರಳಿ ಮಠದ ಉಭಯ ಗುರುಗಳಾದ ಭಾರತೀತೀರ್ಥ ಸ್ವಾಮೀಜಿ, ವಿಧುಶೇಖರಭಾರತೀ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.

    ಈ ಸಂದರ್ಭದಲ್ಲಿ ಶಾಸಕ ಟಿ.ಡಿ.ರಾಜೇಗೌಡ, ಯುವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೊಡತಲು ಕೆ.ಎಂ ರಮೇಶ್ ಭಟ್, ಮೇಗಳಬೈಲ್ ಚಂದ್ರಶೇಖರ್, ಉಮೇಶ್ ಪುದವಾಳ್, ಲಕ್ಷ್ಮೀಶ ಅಣ್ಕುಳಿ, ರಾಜ್‍ಕುಮಾರ್ ಹೆಗ್ಡೆ, ಸುನಿಲ್ ಮಾತೋಳ್ಳಿ ಇದ್ದರು.

    Agriculture Minister N. Chaluvarayaswamy visits Sringeri Sharada Peetha

  • ಓದಿನ ಪ್ರಾಯದಲ್ಲಿ ದ್ವೇಷ – ಅಸೂಯೆಗೆ ಆಸ್ಪದ ಕೊಡದಿರಿ

    ಓದಿನ ಪ್ರಾಯದಲ್ಲಿ ದ್ವೇಷ – ಅಸೂಯೆಗೆ ಆಸ್ಪದ ಕೊಡದಿರಿ

    ಚಿಕ್ಕಮಗಳೂರು: ಓದಿನ ಪ್ರಾಯದಲ್ಲಿ ದ್ವೇಷ, ಅಸೂಯೆಗೆ ಆಸ್ಪದ ಕೊಡದೇ, ಮ ನದಾಳದಲ್ಲಿ ಜ್ಞಾನದೇಗುಲ ಸ್ಥಾಪಿಸಿ, ಕಲಿಕೆಗೆ ಒತ್ತು ನೀಡಬೇಕು. ರಾಷ್ಟ್ರ ಮೊದಲೆಂಬ ಚಿಂತನೆ ಮೈಗೂಡಿಸಿ ಕೊಂಡು ಜಗತ್ತಿನ ಎದುರು ಭಾರತವನ್ನು ಸದೃಡಗೊಳಿಸಬೇಕು ಎಂದು ಶ್ರೀ ಆದಿಚುಂಚನಗಿರಿ ಮಹಾಸಂ ಸ್ಥಾನದ ಮಠದ ಶ್ರೀ ನಿರ್ಮಲನಂದ ಸ್ವಾಮೀಜಿ ಹೇಳಿದರು.

    ನಗರದ ಎಐಟಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಗುರುವಾರ ಪ್ರಥಮ ವರ್ಷದ ಇಂಜಿನಿಯರ್ ವಿದ್ಯಾರ್ಥಿಗಳಿಗೆ ಎಐಟಿ ಕಾಲೇಜು ವತಿಯಿಂದ ಆಯೋಜಿಸಿದ್ಧ ‘ಫ್ರೆಶರ್ಸ್ ಡೇ-೨೦೨೫’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆರ್ಶೀವಚನ ನೀಡಿದರು.

    ಮಕ್ಕಳು ಶಿಕ್ಷಣವಂತರಾಗಲು ಪಾಲಕರ ಶ್ರಮ ಬಹಳಷ್ಟಿದೆ. ಯುವಪೀಳಿಗೆ ಕೌಶಲ್ಯತೆ, ಕ್ರಿಯಾತ್ಮಕ ಚಟು ವಟಿಕೆ, ಶ್ರದ್ದೆ ಹಾಗೂ ಕಠಿಣ ಪರಿಶ್ರಮದಿಂದ ವ್ಯಾಸಂಗ ನಡೆಸಿದರೆ ಕುಟುಂಬ ಸೇರಿದಂತೆ ಭಾರತವು ಬಲಿಷ್ಟ ವಾಗಲಿದೆ. ಜೊತೆಗೆ ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರದ ಗುಣಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

    ಪ್ರಸ್ತುತ ಕಾಲಘಟ್ಟದಲ್ಲಿ ವಿಜ್ಞಾನ ಕ್ಷೇತ್ರ ಮುಗಿಲೆತ್ತರಕ್ಕೆ ಬೆಳೆದುನಿಂತಿದೆ. ಜ್ಞಾನ, ತಂತ್ರಜ್ಞಾನ ವ್ಯಾಸಂಗಕ್ಕೆ ಸಮರ್ಪಕವಾಗಿ ವಿದ್ಯಾರ್ಥಿಗಳು ಬಳಸಿಕೊಂಡು ಸಾಧನೆ ಮಾಡಬೇಕು. ಕಲಿಕೆಯೆಂಬ ಹೋರಾಟದಲ್ಲಿ ಕೇ ವಲ ಅಂಕಗಳಿಗಷ್ಟೇ ಸೀಮಿತರಾಗದೇ, ಗುರು-ಹಿರಿಯರು ಧ್ಯೇಯಗಳನ್ನು ಎತ್ತಿಹಿಡಿಯವಂತ ಕೆಲಸವಾದರೆ ಸಾರ್ಥಕ ಬದುಕು ನಿಮ್ಮದಾಗಲಿದೆ ಎಂದು ತಿಳಿಸಿದರು.

    ಪೂಜ್ಯ ಬಾಲಗಂಗಾಧರನಾಥ ಶ್ರೀಗಳು ೧೯೮೦ರ ವೇಳೆಯಲ್ಲಿ ನಾಡಿನ ಮಕ್ಕಳು ಅನಕ್ಷರತೆಯಿಂದ ಕೊರ ಗಬಾರದೆಂಬ ದೃಷ್ಟಿಯಿಂದ ಅಂದಿನ ಗ್ರಾಮೀಣ ಪ್ರದೇಶದ ಚಿಕ್ಕಮಗಳೂರಿನಲ್ಲಿ ಕಾಲೇಜು ಸ್ಥಾಪಿಸಿದ ಪರಿ ಣಾಮ ಲಕ್ಷಾಂತರ ಮಕ್ಕಳು ವಿದ್ಯಾವಂತರಾಗಿದ್ದಾರೆ. ಅಲ್ಲದೇ ಪೂಜ್ಯರು ದೇಶಗಟ್ಟಿಗೊಳಿಸುವ ಸಲುವಾಗಿ ವಿದ್ಯಾದಾನಕ್ಕೆ ಒತ್ತುಕೊಟ್ಟು ರಾಷ್ಟ್ರದ ಬೆಳವಣಿಗೆಗೆ ಶ್ರಮಿಸಿದವರು ಎಂದರು.

    ಬಡವರು, ಕೂಲಿ ಕಾರ್ಮಿಕರು ವಿದ್ಯೆಯಿಂದ ವಂಚಿತರಾಗಬಾರದೆಂಬ ದೃಷ್ಟಿಯಿಂದ ಶ್ರೀಗಳು ಮುಂ ದಾಲೋಚಿಸಿ ಜಿಲ್ಲೆಯಲ್ಲಿ ಪರಿಣಿತ ಪ್ರಾಧ್ಯಾಪಕರನ್ನು ನೇಮಿಸಿಕೊಂಡು ಕಾಲೇಜು ಸ್ಥಾಪಿಸಿ ವಿದ್ಯೆಯನ್ನು ಕರು ಣಿಸಿದ ಮಹಾಚೇತನ. ಅವರ ಸನ್ಮಾರ್ಗದಲ್ಲಿ ವಿದ್ಯಾರ್ಥಿವೃಂದ ಸಾಗಬೇಕು. ದೊಡ್ಡಮಟ್ಟಿನಲ್ಲಿ ಸಾಧನೆ ಮಾ ಡಿ ಜಗತ್ತಿನ ಮುಂದೆ ಭಾರತ ಶಕ್ತಿಯುತಗೊಳಿಸಬೇಕು ಎಂದು ತಿಳಿಸಿದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ವಿವೇಕವಾಣಿಯಂತೆ ನಿಮ್ಮ ಬಾಳಿಗೆ, ನೀವೇ ಶಿಲ್ಪಿ ಗಳಾಗಲು ವಿದ್ಯಾರ್ಥಿಗಳು ಸಂಕಲ್ಪ ಮಾಡಿಕೊಳ್ಳಬೇಕು. ಕಲಿಕೆಯಲ್ಲಿ ಸತತ ಪರಿಶ್ರಮದಿಂದ ನಿಗಧಿತ ಗುರಿ ಯನ್ನು ಹೊಂದಿರಬೇಕು. ದೇಶಕ್ಕಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಆತ್ಮನಿರ್ಭಾರತೆಯೊಂದಿಗೆ ಕೈಜೋಡಿಸಿ ದಾಗ ವಿಶ್ವದ ಮುಂದೆ ಭಾರತ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದರು.

    ಸಮಾಜಕ್ಕೆ ಬೇಕಾದ ಆದರ್ಶ, ವ್ಯಕ್ತಿತ್ವಗಳನ್ನು ಸೃಷ್ಟಿಸುವುದರಲ್ಲಿ ಎಐಟಿ ವಿದ್ಯಾಸಂಸ್ಥೆ ಮಹತ್ತರ ಪಾತ್ರ ವನ್ನು ವಹಿಸುತ್ತಿದೆ. ದೃಢಸಂಕಲ್ಪ ಜೊತೆಗೆ ಸತತ ಪರಿಶ್ರಮ ಸೇರಿದಾಗ ಅಂದುಕೊಂಡದ್ದನ್ನು ಸಾಧಿಸಲು ಸಾಧ್ಯ. ಭಾರತವಿಂದು ವಿಶ್ವಗುರುವಾಗುವತ್ತ ಹೆಜ್ಜೆ ಹಾಕುತ್ತಿದೆ. ಈ ವೇಳೆ ಜಗತ್ತಿಗೆ ಉದ್ಯೋಗದಾತರಾಗುವ ಹೊಣೆ ಭಾರತದ ಯುವಜನತೆ ಮೇಲಿದೆ ಎಂದು ತಿಳಿಸಿದರು.

    ಸಿ.ಎಸ್.ಐ.ಆರ್. ಮುಖ್ಯ ವಿಜ್ಞಾನಿ ಡಾ|| ದಿನೇಶ್ ಎನ್.ನಾಗೇಗೌಡ ಮಾತನಾಡಿ ಜೀವನದ ಪ್ರತಿ ಕ್ಷೇತ್ರ ಗಳಲ್ಲೂ ಸವಾಲುಗಳಿವೆ. ಹಾಗೇಯ ವಿದ್ಯಾಕ್ಷೇತ್ರದಲ್ಲೂ ಏರು-ಪೇರುಗಳಿವೆ. ಬುದ್ದಿವಂತಿಕೆ, ಚಾಣಕ್ಯತನ ಹಾ ಗೂ ನಿರಂತರ ವ್ಯಾಸಂಗವೇ ಇಂಜಿನಿಯರ್‌ಗಳಿಗೆ ಭದ್ರಬುನಾದಿ ಹಾಗೂ ಭವಿಷ್ಯದಲ್ಲಿ ಬದುಕು ಕಟ್ಟಿಕೊಳ್ಳ ಲು ಸಾಧ್ಯವಾಗಲಿದೆ ಎಂದು ಹೇಳಿದರು.

    ನಾಡಿನ ಕನ್ನಬಾಂಡಿ ಕಟ್ಟೆ ನಿರ್ಮಾತೃ ವಿಶ್ವೇಶ್ವರಯ್ಯ, ಬೇಲೂರು ಚೆನ್ನಕೇಶವ ದೇವಾಲಯ ಶಿಲ್ಪಿ ಜಕ ಣಾಚಾರಿಯವರು ಅಂದಿನ ಕಾಲದಲ್ಲೇ ಯಾವುದೇ ತಂತ್ರಜ್ಞಾನವಿಲ್ಲದೇ ಬುದ್ದಿಶಕ್ತಿಯಿಂದ ದೊಡ್ಡ ಇಂಜಿನಿ ಯರ್‌ಗಳಾಗಿ ಇಡೀ ವಿಶ್ವವೇ ಮೆಚ್ಚುವಂತ ಕೆಲಸವನ್ನು ಮಾಡಿದ್ದಾರೆ. ಅದರಂತೆ ಡಾ|| ಜೆ.ಪಿ.ಜೆ.ಅಬ್ದುಲ್ ಕಲಾಂ ಕೂಡಾ ಇಂಜಿನಿಯರ್‌ರಾಗಿ ಕಾರ್ಯನಿರ್ವಹಿಸಿದ್ದರು ಎಂದು ಸ್ಮರಿಸಿದರು.

    ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಶೃಂಗೇರಿ ಶಾಖಾ ಮಠದ ಶ್ರೀ ಗುಣನಾಥ ಸ್ವಾಮೀಜಿ, ಆದಿಚುಂಚನಗಿರಿ ಯೂನಿವರ್ಸಿಟಿ ರಿಜಿಸ್ಟರ್ ಡಾ|| ಸಿ.ಕೆ.ಸುಬ್ಬರಾಯ್, ಕಾಲೇಜು ಪ್ರಾಂಶುಪಾಲ ಡಾ|| ಸಿ.ಟಿ. ಜಯದೇವ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ.ರಾಜಶೇಖರ್, ವಕೀಲ ಪ್ರದೀಪ್‌ನಾಗರಾಜ್, ಕಾಲೇಜಿ ನ ವಿವಿಧ ವಿಭಾಗದ ಮುಖ್ಯಸ್ಥರಾದ ಡಾ|| ಜಿ.ಎಂ.ಸತ್ಯನಾರಾಯಣ್, ಡಾ|| ವೀರೇಂದ್ರ, ಡಾ|| ಸಂಪತ್, ಡಾ|| ಸುನೀತ, ಡಾ|| ದಿನೇಶ್, ಡಾ|| ಗೌತಮ್ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    Don’t give room to hatred and jealousy during school age.

  • ರೈತರಿಗೆ ಬಿಜೆಪಿ ದೀಪಾವಳಿ ಉಡುಗೊರೆಯಾಗಿ ಪರಿಹಾರದ ದ್ರೋಹ

    ರೈತರಿಗೆ ಬಿಜೆಪಿ ದೀಪಾವಳಿ ಉಡುಗೊರೆಯಾಗಿ ಪರಿಹಾರದ ದ್ರೋಹ

    ಚಿಕ್ಕಮಗಳೂರು: ಪ್ರಧಾನಮಂತ್ರಿ ಪಸಲ್ ಭೀಮ ಯೋಜನೆ ಅಡಿ ಮಹಾರಾಷ್ಟ್ರದ ರೈತರಿಗೆ ಕೇಂದ್ರ ಸರ್ಕಾರ ₹3, ₹2.30 ಪರಿಹಾರ ನೀಡಿದ್ದು, ಆ ಮೂಲಕ ಬಿಜೆಪಿಯ ನಿಜ ಬಣ್ಣ ಬಯಲಾಗಿದೆ ಎಂದು ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ಟೀಕಿಸಿದರು.

    ರೈತರಿಗೆ ಇಷ್ಟು ಕಡಿಮೆ ಪರಿಹಾರ ನೀಡಲಾಗಿದೆ. ಈ ಘಟನೆ ಬಗ್ಗೆ ಪ್ರಧಾನ ಮಂತ್ರಿಯಾಗಲಿ, ಬಿಜೆಪಿ ನಾಯಕರಾಗಲಿ ಮಾತನಾಡುತ್ತಿಲ್ಲ. ಇದು ನಕಲಿ ದೇಶ ಭಕ್ತಿಯನ್ನು ಸಾರುತ್ತದೆ ಎಂದು ಸುದ್ದಿಗೋಷ್ಠಿಯಲ್ಲಿ  ಬುಧವಾರ ಹೇಳಿದರು.

    ಅತಿವೃಷ್ಟಿ ಸಂಕಷ್ಟದಲ್ಲಿ ಇರುವ ರೈತರಿಗೆ ಬಿಜೆಪಿ ದೀಪಾವಳಿಯ ಉಡುಗೊರೆಯಾಗಿ ಇಂತಹ ದ್ರೋಹ ಬಗೆದಿದೆ. ₹3 ಪರಿಹಾರ ಚೆಕ್‌ ನೀಡುವಾಗ ನಕಲಿ ದೇಶ ಭಕ್ತರು ಎಲ್ಲಿದ್ದರು. ಈ ಹಿಂದೆ ಇದೇ ರೈತರು ನಡೆಸಿದ ಹೋರಾಟ ಹತ್ತಿಕ್ಕುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಿತು. ದೆಹಲಿಯಲ್ಲಿ ಮುಳ್ಳುತಂತಿ, ತಡೆಗೋಡೆ, ಜಲಫಿರಂಗಿಗಳನ್ನು ಉಪಯೋಗಿಸಿತ್ತು. ಇದ್ದನ್ನು ರೈತರು ಇನ್ನೂ ಮರೆತಿಲ್ಲ ಎಂದರು.

    ಹೋರಾಟದಲ್ಲಿ ಮಡಿದ ರೈತರಿಗೆ ಒಂದು ಸಾಂತ್ವನದ ಮಾತು ಹೇಳಿದ ಪ್ರಧಾನಿ ನಡೆ ಜನ ವಿರೋಧಿ ಮತ್ತು ರೈತ ವಿರೋಧಿಯಾಗಿದೆ. ಪ್ರತಿ ಮಾತಿನಲ್ಲೂ ದೇಶಭಕ್ತಿ ಎಂದು ಹೇಳಿಕೊಳ್ಳುವ ಆರ್‌ಎಸ್‌ಎಸ್‌ ಮುಖಂಡರು ಕೂಡ ಮಾತನಾಡಿಲ್ಲ. ಇದನ್ನು ಕಂಡರೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ರೈತ ವಿರೋಧಿಗಳು ಎಂದು ಹೇಳಿದರು.

    ಬಿಜೆಪಿ ಮತ್ತು ಆರ್‌ಎಸ್‌ಎಸ್ ಧಾರ್ಮಿಕ ಅಸಹನೆ ಉಂಟುಮಾಡುತ್ತಿವೆ. ಸಂವಿಧಾನದ ಪ್ರಕಾರ ಭಾರತದ ಎಲ್ಲಾ ಸಂಘಟನೆಗಳು ನೋಂದಾಯಿಸಿಕೊಂಡು ಲೆಕ್ಕಪತ್ರಗಳನ್ನು ಜನರ ಮುಂದಿಡಬೇಕು. ಹಿಂದುಳಿದರವ, ರೈತರ, ಕಾರ್ಮಿಕರ ಮತ್ತು ದಲಿತರ ನೋವು ಆರ್‌ಎಸ್‌ಎಸ್,  ಬಿಜೆಪಿಗೆ ಬೇಕಿಲ್ಲ. ಭಾವನಾತ್ಮಕವಾಗಿ ಸಮಾಜ ಒಡೆಯುವ ಕೆಲಸವನ್ನು ನಿರಂತರವಾಗಿ ಮಾಡುತ್ತಿರುವುದು ಖಂಡನೀಯ ಎಂದರು.

    ಆಫ್ಘಾನಿಸ್ತಾನದ ವಿದೇಶಾಂಗ ಸಚಿವ ಮುತ್ತಾಕಿ ದೆಹಲಿ ಭೇಟಿ ಸಂದರ್ಭದಲ್ಲಿ ಮಹಿಳಾ ಪತ್ರಕರ್ತರನ್ನು ಹೊರಗಿಟ್ಟ ವಿಚಾರ ಹಾಗೂ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಮೂರ್ತಿ ಗವಾಯಿ ಅವರ ಮೇಲೆ ಚಪ್ಪಲಿ ಎಸೆತ ಘಟನೆಯನ್ನು ಆರ್‌ಎಸ್‌ಎಸ್ ಮತ್ತು ಬಿಜೆಪಿ ಏಕೆ  ಖಂಡಿಸಲಿಲ್ಲ ಎಂದು ಪ್ರಶ್ನಿಸಿದರು.

    ಕಾಂಗ್ರೆಸ್ ಮುಖಂಡ ತನೂಜ್‌ಕುಮಾರ್, ರೋಬಿನ್ ಮೋಸಸ್, ಚಂದ್ರಶೇಖರ್, ಶಾಂತಕುಮಾರ್, ವಿಜಯಕುಮಾರ್, ಹಿರೇಮಗಳೂರು ರಾಮಚಂದ್ರ ಉಪಸ್ಥಿತರಿದ್ದರು.

    BJP’s Diwali gift to farmers is a betrayal of relief

  • ಜಿಲ್ಲೆಯಲ್ಲಿ ₹2,500 ಕೋಟಿ ಮೊತ್ತದ ಕಾಮಗಾರಿ ಪ್ರಗತಿ

    ಜಿಲ್ಲೆಯಲ್ಲಿ ₹2,500 ಕೋಟಿ ಮೊತ್ತದ ಕಾಮಗಾರಿ ಪ್ರಗತಿ

    ಚಿಕ್ಕಮಗಳೂರು: ಎರಡೂವರೆ ವರ್ಷಗಳ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ₹2,500 ಕೋಟಿ ಮೊತ್ತದ ಕಾಮಗಾರಿ ಪ್ರಗತಿಯಲ್ಲಿದೆ. ಅಭಿವೃದ್ಧಿ ಸಹಿಸದ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರು ಹತಾಶರಾಗಿ ಮನಸೋಇಚ್ಛೆ ಮಾತನಾಡುತ್ತಿದ್ದಾರೆ’ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಪಿ ಅಂಶುಮಂತ್‌ ಹೇಳಿದರು.

    ‘ಪಂಚ ಗ್ಯಾರಂಟಿ ಫಲಾನುಭವಿಗಳಿಗೆ ₹2000 ಕೋಟಿ ದೊರೆತಿದೆ. ನಾವು ಜನಪರ ಎಂಬುದನ್ನು ಸಾಬೀತು ಮಾಡಿದ್ದೇವೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಜಿಲ್ಲೆಯ ಪ್ರತಿ ಕ್ಷೇತ್ರಕ್ಕೆ ₹ 50 ಕೋಟಿಯಂತೆ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ₹250 ಕೋಟಿ ಅನುದಾನ ನೀಡಲಾಗಿದೆ. ಮೆಡಿಕಲ್ ಕಾಲೇಜಿಗೆ ₹430 ಕೋಟಿ, ಮೆಸ್ಕಾಂ ಉಪ ಕೇಂದ್ರ ನಿರ್ಮಿಸಲು ₹150 ಕೋಟಿ, ಕೊಪ್ಪದಲ್ಲಿ ತಾಯಿ–ಮಗು ಆಸ್ಪತ್ರೆಗೆ ₹12 ಕೋಟಿ, ಜಯಪುರ ಆಸ್ಪತ್ರೆಗೆ ₹13 ಕೋಟಿ, ಜಯಪುರ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆರಿಸಿ 30 ಹಾಸಿಗೆಗಳ ಕಾಮಗಾರಿಗೆ ₹12 ಕೋಟಿ, ತರೀಕೆರೆ ತಾಲ್ಲೂಕಿನ ಲಕ್ಕವಳ್ಳಿ ಆಸ್ಪತ್ರೆಗೆ ₹9 ಕೋಟಿಯನ್ನು ಸರ್ಕಾರ ಮಂಜೂರು ಮಾಡಿದೆ ಎಂದು ವಿವರಿಸಿದರು.

    ಶೃಂಗೇರಿಯ 100 ಹಾಸಿಗಳ ಆಸ್ಪತ್ರೆಗೆ ₹37 ಕೋಟಿ, ಗ್ರಾಮೀಣ ಪ್ರದೇಶಗಳ ಆರೋಗ್ಯ ದೃಷ್ಟಿಯಿಂದ ₹65 ಲಕ್ಷ ವೆಚ್ಚದ 25 ಕಟ್ಟಡಗಳಿಗೆ ₹1.62 ಕೋಟಿ ಮಂಜೂರಾಗಿದೆ ಎಂದರು.

    ಜಿಲ್ಲೆಯಲ್ಲಿ ಎರಡು ಟೆಕ್ಸ್‌ಟೈಲ್ ಪಾರ್ಕ್ ನಿರ್ಮಿಸಲು ಜಾಗ ಗುರುತಿಸ ಲಾಗಿದೆ. ಜಿಲ್ಲೆಯ ಬಯಲು ಭಾಗದ ವಿವಿಧ ಕೆರೆಗಳಿಗೆ ನೀರು ತುಂಬಿಸು ಯೋಜನೆಗೆ ₹800 ಕೋಟಿ ಬಿಡುಗಡೆ ಯಾಗಿದೆ. ತರೀಕೆರೆ, ಅಜ್ಜಂಪುರ ಹಾಗೂ ಹೊಸದುರ್ಗ ಸೇರಿದಂತೆ 400ಕ್ಕೂ ಹೆಚ್ಚು ಹಳ್ಳಿಗಳಿಗೆ ಕುಡಿಯುವ ನೀರನ್ನು ಪೂರೈಸಲು ₹250 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ ಎಂದರು.

    ಲೋಕೋಪಯೋಗಿ ಇಲಾಖೆಯಲ್ಲಿ 89 ವಿವಿಧ ಕಾಮಗಾರಿಗಳಿಗೆ ಒಟ್ಟು ₹150 ಕೋಟಿ, ನಗರದಲ್ಲಿ ನೂತನವಾಗಿ ಬಸ್ ನಿಲ್ದಾಣ ನಿರ್ಮಾಣಕ್ಕೆ ₹20 ಕೋಟಿ, ತರೀಕೆರೆ ಬಸ್ ನಿಲ್ದಾಣ ನಿರ್ಮಾಣಕ್ಕೆ ₹9.15 ಕೋಟಿ, ಕಡೂರು ಬಸ್ ನಿಲ್ದಾಣ ನಿರ್ಮಾಣಕ್ಕೆ ₹5.98 ಕೋಟಿ ಬಿಡುಗಡೆಯಾಗಿದೆ ಎಂದರು.

    ಕಡೂರಿಗೆ ₹16 ಕೋಟಿ ಮೊತ್ತದ ಹಾಗೂ ಅಜ್ಜಂಪುರದಲ್ಲಿ ₹10 ಕೋಟಿ ವೆಚ್ಚದ ಪ್ರಜಾಸೌಧ ಕಟ್ಟಡ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ. ಶೀಘ್ರದಲ್ಲೇ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

    ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣ ಸಿಂಥೆಟಿಕ್ ಅಥ್ಲೆಟಿಕ್ ಟ್ರ್ಯಾಕ್ ನಿರ್ಮಾಣ ಕಾಮಗಾರಿಗೆ ₹7 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ. ಜಿಲ್ಲಾ ಆಟದ ಮೈದಾನದ ಅಭಿವೃದ್ಧಿಗೆ ₹1 ಕೋಟಿ ಹಾಗೂ ಕಡೂರು ಕ್ರೀಡಾಂಗಣ ಅಭಿವೃದ್ಧಿಗೆ ಕ್ರಿಯಾ ಯೋಜನೆ ಸಿದ್ಧವಾಗಿದೆ. ಗುಣಮಟ್ಟದ ಶಿಕ್ಷಣ ನೀಡಲು ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಕಾರ್ಯ ಪ್ರವೃತ್ತವಾಗಿದ್ದು, ಜಿಲ್ಲೆಗೆ ಮೊದಲ ಹಂತದಲ್ಲೇ ಒಟ್ಟು 15 ಶಾಲೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

    ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಘಟಕ ಅಧ್ಯಕ್ಷ ಶಿವಾನಂದಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜೇಗೌಡ, ಜಿಲ್ಲಾ ಕಾಂಗ್ರೆಸ್ ವಕ್ತಾರ ರೋಬಿನ್ ಮೋಸಿಸ್, ಕಾಂಗ್ರೆಸ್ ನೀತಿ, ಸಂಶೋಧನೆ ಹಾಗೂ ತರಬೇತಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಶಿವಕುಮಾರ್‌ ಹಿರೇಗೌಜ ಉಪಸ್ಥಿತರಿದ್ದರು.

    Work worth ₹2500 crore in progress in the district

  • ರೈತರನ್ನು ಗೌರವಿಸಿದಾಗ ಜೀವನಕ್ಕೆ ನಿಜ ಅರ್ಥ

    ರೈತರನ್ನು ಗೌರವಿಸಿದಾಗ ಜೀವನಕ್ಕೆ ನಿಜ ಅರ್ಥ

    ಚಿಕ್ಕಮಗಳೂರು: ರೈತಗೀತೆಯೊಂದಿಗೆ ಸಮಾಜದಲ್ಲಿ ಪ್ರತಿಯೊಬ್ಬರೂ ಅನ್ನದಾತ ರೈತನನ್ನು ಗೌರವಿಸಿದಾಗ ಜೀವನಕ್ಕೆ ನಿಜ ಅರ್ಥ ಬರುತ್ತದೆ ಎಂದು ನಗರಸಭಾಧ್ಯಕ್ಷೆ ಶೀಲಾದಿನೇಶ್ ಹೇಳಿದರು.

    ಅವರು ಇಂದು ಕುವೆಂಪು ಕಲಾಮಂದಿರದಲ್ಲಿ ಜಿಲ್ಲಾಡಳಿತ, ಜಿ.ಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೇರಾ ಯುವ ಭಾರತ್, ಜಿಲ್ಲಾ ಎನ್‌ಎಸ್‌ಎಸ್ ಘಟಕ, ರಾಜ್ಯ ಯುವ ಸಂಘಗಳ ಒಕ್ಕೂಟ, ಕನ್ನಡ ಜಾನಪದ ಪರಿಷತ್, ಜಿಲ್ಲಾ ಘಟಕ ಮತ್ತು ಮಹಿಳಾ ಘಟಕ, ಕರ್ನಾಟಕ ಜಾನಪದ ಪರಿಷತ್ ಹಾಗೂ ಎಲ್ಲಾ ಯುವ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಯುವಜನೋತ್ಸವ-೨೦೨೫-೨೬ ರ ಕಾರ್ಯಕ್ರಮದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದರು.

    ಯುವಜನೋತ್ಸವದ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರು ಬೀಗದೆ ಸೋತವರು ಭಾಗದೆ ಸ್ಪರ್ಧಾ ಮನೋಭಾವದಿಂದ ಭಾಗವಹಿಸುವುದು ಅಗತ್ಯ ಎಂದ ಅವರು, ವಿಜೇತ ತಂಡಗಳಿಗೆ ಬಹುಮಾನ ವಿತರಿಸಲು ಹೆಮ್ಮೆ ಎನಿಸುತ್ತಿದೆ ಎಂದರು.

    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್ ಮಹೇಶ್ ಮಾತನಾಡಿ, ಸಾವಿರಾರು ಯುವಕರ ಸಾಮರ್ಥ್ಯ, ಪ್ರತಿಭೆಯನ್ನು ಬಡಿದೆಚ್ಚರಿಸಿ ಮುಖ್ಯ ವಾಹಿನಿಗೆ ತರಲು ಈ ಯುವಜನೋತ್ಸವ ಸಹಕಾರಿಯಾಗಲಿ ಎಂದು ಹೇಳಿದರು.

    ಹಿಂದೆ ಯುವಜನ ಮೇಳ, ಯುವಜನೋತ್ಸವದ ಕಾರ್ಯಕ್ರಮಗಳು ಗಲಾಟೆ-ಗದ್ದಲ ಇಲ್ಲದೆ ಅಂತ್ಯವಾಗುತ್ತಿರಲಿಲ್ಲ. ಆದರೆ, ಇಂದು ನಡೆದ ಯುವಜನೋತ್ಸವ ಕಾರ್ಯಕ್ರಮ ಯಾವುದೇ ತೊಂದರೆ ಗಲಾಟೆಗಳಿಲ್ಲದೆ ಯಶಸ್ವಿಯಾಗಿ ಮುಗಿದಿರುವುದು ಸಾರ್ಥಕ್ಯ ಭಾವನೆ ಎಂದರು

    ರೈತ ನಾಯಕರು ಗೀತೆಯನ್ನು ಹಾಡಿ ಎಲ್ಲರಲ್ಲೂ ಉತ್ಸಾಹ ಮೂಡಿಸಿದ್ದಾರೆ. ವಿಜ್ಞಾನ ಕೇಂದ್ರಕ್ಕೆ ಅವಕಾಶ ಮಾಡಿಕೊಟ್ಟ ಪರಿಣಾಮ ಹಲವಾರು ವಸ್ತುಪ್ರದರ್ಶನವಾಗಿರುವುದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು. ಪ್ರಸ್ತುತ ಔಚಿತ್ಯದ ಬಗ್ಗೆ ವಿದ್ಯಾರ್ಥಿಗಳು ಅಗತ್ಯತೆ ಕುರಿತು ಅಸಂಪ್ರದಾಯಿಕ ಇಂಧನ ಬಳಕೆ ಮತ್ತು ಪರಿಸರ ಕಾಪಾಡುವ ಎಲ್ಲಾ ಪ್ರಾಜೆಕ್ಟ್‌ಗಳು ಒಂದಕ್ಕಿಂತ ಇನ್ನೊಂದು ವಿಭಿನ್ನವಾಗಿ ನೋಡುಗರ ಗಮನ ಸೆಳೆದಿದೆ ಎಂದರು.

    ಮುಂದಿನ ಭವಿಷ್ಯದ ದಿನಗಳಲ್ಲಿ ಯುವಕರ ಪ್ರತಿಭೆಗಳು ಹೆಚ್ಚು ಹೆಚ್ಚು ಅನಾವರಣಗೊಳ್ಳಲಿ, ಈ ರೀತಿಯ ನೂರಾರು ವೇದಿಕೆಗಳು ನಿಮಗೆ ಅವಕಾಶ ಕಲ್ಪಿಸಲಿ ಎಂದು ಶುಭ ಹಾರೈಸಿದರು.

    ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಮಂಜುಳಾ ಹುಲ್ಲಳ್ಳಿ ಅವರು, ಸ್ವಾಮಿ ವಿವೇಕಾನಂದರ ಸವಿನೆನಪಿಗಾಗಿ ಜಿಲ್ಲಾಮಟ್ಟದ ಯುವಜನೋತ್ಸವ ಆಯೋಜಿಸಲಾಗಿದ್ದು, ಇಲ್ಲಿ ವಿಜೇತರಾಗಿ ಪ್ರಥಮ ಸ್ಥಾನ ಪಡೆದ ತಂಡಗಳು ರಾಜ್ಯಮಟ್ಟಕ್ಕೆ ಕಳುಹಿಸಲಾಗುವುದು. ಅಲ್ಲಿ ಜಯಗಳಿಸಿದ ತಂಡವನ್ನು ರಾಷ್ಟ್ರಮಟ್ಟಕ್ಕೆ ಹೋಗಲು ಜ.೧೨ ರಂದು ವಿಶಿಷ್ಟ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ ಶಿವಾನಂದಸ್ವಾಮಿ ಮಾತನಾಡಿದರು.

    ಯುವಜನೋತ್ಸವ ಕಾರ್ಯಕ್ರಮದಲ್ಲಿ ನೆಡೆದ ನೃತ್ಯ ಪ್ರದರ್ಶನದಲ್ಲಿ ಪ್ರಥಮ ಸ್ಥಾನ ಜೈ ಭೀಮ್ ಕಲಾ ತಂಡ ಕೂದುವಳ್ಳಿ, ದ್ವಿತೀಯ ಸ್ಥಾನ ದುರ್ಗಾದೇವಿ ಕಲಾತಂಡ ಚಿಕ್ಕಮಗಳೂರು, ತೃತೀಯ ಸ್ಥಾನ ಜೆ.ಸಿ.ಬಿ.ಎಮ್ ಕಾಲೇಜು ತಂಡ ಶೃಂಗೇರಿ, ಜನಪದ ಗೀತೆಯಲ್ಲಿ ಪ್ರಥಮ ಸ್ಥಾನ ಕೆ.ಪಿ ಪೂರ್ಣಚಂದ್ರ ತೇಜಸ್ವೀ ಜಾನಪದ ಕಲಾತಂಡ ಮೂಡಿಗೆರೆ, ದ್ವಿತೀಯ ಸ್ಥಾನ ಮಿತ್ರ ಜಾನಪದ ಕಲಾತಂಡ ಮೂಡಿಗೆರೆ, ತೃತೀಯ ಸ್ಥಾನ ಜನಮನ ಜಾನಪದ ಕಲಾತಂಡ, ವಿಜ್ಞಾನ ಪ್ರದರ್ಶನ ಪ್ರಥಮ ಸ್ಥಾನ ಡಿ ಎಕ್ಸ್‌ಪರ್ಟ್ಸ್ ಚಿಕ್ಕಮಗಳೂರು, ದ್ವಿತೀಯ ಸ್ಥಾನ ಜೂನಿಯರ್ ಕಾಲೇಜು ತಂಡ, ತೃತೀಯ ಸ್ಥಾನ ಟಿ.ಎಂ.ಎಸ್ ಕಾಲೇಜು ತಂಡ, ಕಥೆ ಬರವಣಿಗೆಯಲ್ಲಿ ಪ್ರಥಮ ಸ್ಥಾನ ಗಗನ.ಎಸ್. ದ್ವಿತೀಯ ಸ್ಥಾನ ತನ್ಮಯಿ ಪ್ರೇಮ್‌ಕುಮಾರ್ ತೃತೀಯ ಸ್ಥಾನ ಕೆ.ಪಿ ಸಂಗೀತ, ಕವಿತೆ ಬರವಣಿಗೆಯಲ್ಲಿ ಪ್ರಥಮ ಸ್ಥಾನ ತನ್ಮಯಿ ಪ್ರೇಮ್‌ಕುಮಾರ್, ದ್ವಿತೀಯ ಲಕ್ಷ್ಮೀ ಎಂ.ಎಂ, ತೃತೀಯ ಸಂಜಯ್ ಕೆ, ಘೋಷಣೆ ಭಾಷಣ ಪ್ರಥಮ ವರುಣ್.ಡಿ.ಆರ್ಯ, ದ್ವಿತೀಯ ಆಲಿಯಾ, ತೃತೀಯ ಪೂಜಾ, ಚಿತ್ರಕಲೆಯಲ್ಲಿ ಪ್ರಥಮ ಸ್ಥಾನ ಸಂಜಯ್ ಕೆ.ಎಸ್, ದ್ವಿತೀಯ ಸ್ಥಾನ ದೃತಿ, ತೃತೀಯ ಸ್ಥಾನ ಅಭಿಷೇಕ್ ಎ.ಜಿ ಪ್ರಶಸ್ತಿಯನ್ನು ಪಡೆದಿದ್ದಾರೆ.

    Life has true meaning when farmers are respected.

  • ಶ್ರಮಿಕ ಕಟ್ಟಡ ಕಾರ್ಮಿಕರು ನೊಂದಾಯಿಸಿಕೊಂಡು ಸರ್ಕಾರದ ಸೌಲಭ್ಯ ಪಡೆಯಿರಿ

    ಶ್ರಮಿಕ ಕಟ್ಟಡ ಕಾರ್ಮಿಕರು ನೊಂದಾಯಿಸಿಕೊಂಡು ಸರ್ಕಾರದ ಸೌಲಭ್ಯ ಪಡೆಯಿರಿ

    ಚಿಕ್ಕಮಗಳೂರು: ಕಾಯಕ ಜೀವಿಗಳಾದ ಶ್ರಮಿಕ ಕಟ್ಟಡ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿಸಿಕೊಂಡು ಸದಸ್ಯತ್ವ ಪಡೆದು ಸುರಕ್ಷಿತ ಕಿಟ್ ಸೇರಿದಂತೆ ಹಲವು ಸರ್ಕಾರಿ ಸೌಲಭ್ಯಗಳನ್ನು ಪಡೆಯಿರಿ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಕರೆನೀಡಿದರು.

    ಅವರು ಇಂದು ಕೆಎಂ ರಸ್ತೆಯ ಕಾರ್ಮಿಕ ಭವನದಲ್ಲಿ ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಚಿಕ್ಕಮಗಳೂರು ತಾಲ್ಲೂಕಿನ ನೊಂದಾಯಿತ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಏರ್ಪಡಿಸಲಾಗಿದ್ದ ೨೦೨೪-೨೫ ನೇ ಸಾಲಿನ ಶ್ರಮ ಸಾಮರ್ಥ್ಯ ಯೋಜನೆಯಡಿ ವಿವಿಧ ವೃತ್ತಿಗಳ (ಟ್ರೈನಿಂಗ್ ಕಂ ಟೂಲ್‌ಕಿಟ್) ಸುರಕ್ಷತಾ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ಕಟ್ಟಡ ಕಾರ್ಮಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದು ಕಾರ್ಮಿಕ ಇಲಾಖೆ ಮೂಲಕ ತರಬೇತಿ ನೀಡಲು ಮುಂದಾಗಿದ್ದು, ಸುಮಾರು ೧೦ ಲಕ್ಷಕ್ಕಿಂತ ಮೇಲ್ಪಟ್ಟ ಕಟ್ಟಡ ನಿರ್ಮಿಸುವ ಮಾಲಿಕರಿಂದ ಶೆ.೧ ರಷ್ಟು ಸೆಸ್‌ನ್ನು ಸರ್ಕಾರ ಪಡೆದುಕೊಂಡು ಅದನ್ನು ನೇರವಾಗಿ ಕಾರ್ಮಿಕರಿಗೆ ಸಹಾಯ ಮಾಡಲು ಉದ್ದೇಶ ಹೊಂದಲಾಗಿದೆ ಎಂದರು.

    ಸಂವಿಧಾನದ ಆಶಯದಂತೆ ಸಮಾಜದ ಕಟ್ಟಕಡೆಯ ವ್ಯಕ್ತಿಗಳಿಗೆ ಸರ್ಕಾರದ ಯೋಜನೆಗಳು ತಲುಪಿ, ಸಮ ಸಮಾಜ ನಿರ್ಮಾಣವಾಗಬೇಕು ಎಂಬ ಡಾ. ಬಿ.ಆರ್ ಅಂಬೇಡ್ಕರ್‌ರವರ ಕನಸು ನನಸು ಮಾಡಲು ಕೇಂದ್ರ ಮತ್ತು ರಾಜ್ಯಸರ್ಕಾರಗಳು ಶ್ರಮಿಸುತ್ತಿವೆ ಎಂದು ಹೇಳಿದರು.

    ಒಟ್ಟು ೪೬೮ ಫಲಾನುಭವಿಗಳಿಗೆ ಎರಡು ವರ್ಷದ ಅವಧಿಯಲ್ಲಿ ೩,೫೮,೮೧,೨೪೩ ರೂಗಳನ್ನು ಡಿಬಿಟಿ ಮೂಲಕ ಕಾರ್ಮಿಕರ ಖಾತೆಗೆ ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿ ೨೫೦೦ ಜನರಿಗೆ ತಲಾ ೨,೫೦೦ ರೂ ಬೆಲೆಯ ಕಿಟ್ ವಿತರಣೆ ಮಾಡಲಾಗುತ್ತಿದೆ. ಒಟ್ಟು ೬೨.೫೦ ಲಕ್ಷ ರೂ ಬೆಲೆಬಾಳುವ ಟೂಲ್‌ಕಿಟ್‌ನ್ನು ವಿತರಣೆ ಮಾಡುತ್ತಿದ್ದೇವೆ ಎಂದರು.

    ಜಿಲ್ಲೆಯ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಕಳೆದ ಎರಡು ವರ್ಷದಲ್ಲಿ ೧೧೪೮ ಕಟ್ಟಡ ಕಾರ್ಮಿಕರು ನೊಂದಾಯಿಸಿಕೊಂಡಿದ್ದು, ಒಟ್ಟು ಈ ತಾಲ್ಲೂಕಿನಲ್ಲಿ ೪೫ ಸಾವಿರ ಕಾರ್ಮಿಕರು ನೊಂದಾಯಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಅರ್ಹ ಕಟ್ಟಡ ಕಾರ್ಮಿಕರನ್ನು ಗುರ್ತಿಸಿ ಸದಸ್ಯತ್ವ ನೀಡಿ ಕಟ್ಟಡ ಕಾರ್ಮಿಕರಲ್ಲದವರು ಸದಸ್ಯರಾಗಿ ಸರ್ಕಾರದ ಇಲಾಖೆಯಿಂದ ದೊರೆಯುವ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ಇದನ್ನು ತಡೆಯಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

    ಕಳೆದ ಎರಡು ವರ್ಷದಲ್ಲಿ ೨೧೧ ಫಲಾನುಭವಿಗಳಿಗೆ ೨,೨೫,೬೦,೦೦೦ ರೂಗಳನ್ನು ಮದುವೆ ಸಹಾಯಕ್ಕೆ ವಿತರಿಸಲಾಗಿದೆ. ಪ್ರತಿ ಕುಟುಂಬಕ್ಕೆ ವೈದ್ಯಕೀಯ ಸಹಾಯಧನ ೫೪೧೦೦ ರೂಗಳನ್ನು ನೀಡಲಾಗಿದೆ. ದೊಡ್ಡ ಆರೋಗ್ಯ ಸಮಸ್ಯೆಗಳಿಗೆ ೪೮ ಫಲಾನುಭವಿಗಳಿಗೆ ೨೪,೪೭,೧೪೩ ರೂಗಳನ್ನು ವೈದ್ಯಕೀಯ ಸಹಾಯ ಹಸ್ತ ನೀಡಲಾಗಿದೆ ಎಂದು ವಿವರಿಸಿದರು.

    ಕಟ್ಟಡ ಕಾರ್ಮಿಕರು ಆಕಸ್ಮಿಕ ಮರಣ ಹೊಂದಿದ ಸಂದರ್ಭದಲ್ಲಿ ಇಲಾಖೆಯಿಂದ ೯೦ ಮೃತ ಕುಟುಂಬಗಳಿಗೆ ೬೭.೫೦ ಲಕ್ಷ ರೂ ಅಂತ್ಯಕ್ರಿಯೆಗೆ ಧನಸಹಾಯ ನೀಡಲಾಗಿದೆ. ಅಪಘಾತದಲ್ಲಿ ಆಕಸ್ಮಿಕ ಮರಣ ಹೊಂದಿದ ಪ್ರತಿ ಕುಟುಂಬಕ್ಕೆ ೫ ಲಕ್ಷ ರೂಗಳಂತೆ ೪ ಫಲಾನುಭವಿಗಳಿಗೆ ೨೦ ಲಕ್ಷ ರೂಗಳನ್ನು ನೀಡಲಾಗಿದೆ ಎಂದರು.

    ೬೦ ವರ್ಷ ಪೂರೈಸಿದ ಕಾರ್ಮಿಕರಿಗೆ ೩ ಸಾವಿರ ರೂ ಮಾಸಿಕ ಪಿಂಚಣಿ ಜಾರಿಮಾಡಲಾಗಿದೆ. ಈ ಸೌಲಭ್ಯ ಆರ್ಥಿಕವಾಗಿ ದುರ್ಬಲವಾಗಿರುವ ದೈಹಿಕ ಸಾಮರ್ಥ್ಯ ಇಲ್ಲದವರಿಗೆ ನೇರವಾಗಿ ಸಂದಾಯ ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಹಾಯಕ ಕಾರ್ಮಿಕ ಆಯುಕ್ತ ಸುಭಾಷ್ ಎಂ ಆಲದಕಟ್ಟಿ ವಹಿಸಿದ್ದರು. ಹಿರಿಯ ಕಾರ್ಮಿಕ ನಿರೀಕ್ಷಕ ಪ್ರಭಾಕರ್, ಪ್ರವೀಣ್‌ಕುಮಾರ್, ವಸಂತಕುಮಾರ್, ಜಯರಾಮ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‌ಬಾಬು, ಕುಟುಂಬ ಕಲ್ಯಾಣಾಧಿಕಾರಿ ಡಾ. ಶಶಿಕಲಾ ಉಪಸ್ಥಿತರಿದ್ದರು.ಮೊದಲಿಗೆ ಕಾರ್ಮಿಕ ಅಧಿಕಾರಿ ಬಿ.ಸಿ. ಸುರೇಶ್ ಸ್ವಾಗತಿಸಿದರು.

    Laborers construction workers register and get government benefits

  • ಸಂಡೂರಿನಲ್ಲಿ ಕೌಶಲ್ಯ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು

    ಸಂಡೂರಿನಲ್ಲಿ ಕೌಶಲ್ಯ ವಿಶ್ವವಿದ್ಯಾಲಯ ಸ್ಥಾಪಿಸಲಾಗುವುದು

    ಬೆಂಗಳೂರು:  ನೂತನ ಕೌಶಲ್ಯ ವಿಶ್ವವಿದ್ಯಾಲಯವನ್ನು ಸಂಡೂರಿನಲ್ಲಿ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

    ಅವರು ಇಂದು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆಯ ವತಿಯಿಂದ ಹಮ್ಮಿಕೊಳ್ಳಲಾಗಿದ್ದ “ಬೆಂಗಳೂರು ಕೌಶಲ್ಯ ಶೃಂಗಸಭೆ” ಉದ್ಘಾಟಿಸಿ ಮಾತನಾಡಿದರು.

    ಕರ್ನಾಟಕ ಇಂದು ಒಂದು ವಿಶಿಷ್ಟ ಜನಸಂಖ್ಯೆಯ ಹೊರಳು ಹಾದಿಯಲ್ಲಿದೆ.ನಮ್ಮ ಜನಸಂಖ್ಯೆಯ ಶೇ. 60 ಕ್ಕಿಂತ ಹೆಚ್ಚು ಜನರು 35 ವಯೋಮಾನದೊಳಗಿದ್ದಾರೆ. ಮುಂದಿನ ದಶಕದಲ್ಲಿ ಸುಮಾರು 1.2 ಕೋಟಿ ಯುವಕರು ಕಾರ್ಯಪಡೆಯನ್ನು ಪ್ರವೇಶಿಸುತ್ತಾರೆ. ಈ ಯುವಪೀಳಿಗೆಯನ್ನು ಸರಿಯಾದ ಕೌಶಲ್ಯ, ಮನಸ್ಥಿತಿ ಮತ್ತು ಆತ್ಮವಿಶ್ವಾಸದಿಂದ ಸಜ್ಜುಗೊಳಿಸಿದರೆ ಇದು ಅಸಾಧಾರಣ ಅವಕಾಶ. ಉದ್ಯಾನ ನಗರಿ ಎನ್ನುವ ಹೆಗ್ಗಳಿಕೆಯಿಂದ ಸ್ಟಾರ್ಟ್ಅಪ್ ರಾಜಧಾನಿಯಾಗಿ ರೂಪಾಂತರಗೊಂಡಿರುವ ಬೆಂಗಳೂರು ನಗರ ಈಗ ಭಾರತದ ಕೌಶಲ್ಯ ರಾಜಧಾನಿಯಾಗಿರುವುದು ಹೆಮ್ಮೆಯ ವಿಷಯ ಎಂದರು.

    ಕಳೆದ ವರ್ಷದ ಆಯವ್ಯಯದಲ್ಲಿ ಘೋಷಿಸಲಾಗಿದ್ದ ಕರ್ನಾಟಕ ಕೌಶಲ್ಯಾಭಿವೃದ್ಧಿ ನೀತಿ 2025-32 ನ್ನು ಇಂದು ಬೆಂಗಳೂರು ಸ್ಕಿಲ್ ಸಮಿಟ್ 2025 ಕಾರ್ಯಕ್ರಮದ ಮೂಲಕ ಕಾರ್ಯರೂಪಕ್ಕೆ ತರಲಾಗುತ್ತಿದೆ. ಈ 7 ವರ್ಷದ ಕಾರ್ಯತಂತ್ರದ ನೀಲನಕ್ಷೆಗೆ 4,432 ಕೋಟಿ ರೂ. ಅನುದಾನದ ಬೆಂಬಲ ನೀಡಲಾಗಿದ್ದು , ಕರ್ನಾಟಕವನ್ನು ಕೌಶಲ್ಯಭರಿತ ಹಾಗೂ ಭವಿಷ್ಯದ ಸವಾಲುಗಳಿಗೆ ಸನ್ನದ್ಧರಾಗಿಸುವುದು ಹಾಗೂ ಕಾರ್ಮಿಕ ಶಕ್ತಿಯ ಜಾಗತಿಕ ಕೇಂದ್ರವನ್ನಾಗಿ ರೂಪಿಸುವುದು ನಮ್ಮ ಉದ್ದೇಶ. 2032 ಕ್ಕೆ ಸುಮಾರು 30 ಲಕ್ಷ ಯುವಕರಿಗೆ ಕೌಶಲ್ಯ ತರಬೇತಿ, ಐಟಿಐ ಗಳಲ್ಲಿ ಮಹಿಳೆಯರ ಪ್ರವೇಶವನ್ನು ಶೇ. 33 ಕ್ಕೆ ಹೆಚ್ಚಳ ಹಾಗೂ ಐಎಂಸಿಕೆ(International Migration Centre-Karnataka) ದ ಮೂಲಕ ಜಾಗತಿಕ ಉದ್ಯೋಗಾವಕಾಶಗಳ ವೃದ್ಧಿಯನ್ನು ಸಾಧಿಸುವ ಗುರಿಯನ್ನು ಹೊಂದಿರುವುದಾಗಿ ತಿಳಿಸಿದರು.

    ಜಾಗತಿಕ ಮಟ್ಟಕ್ಕೆ ಕಾರ್ಮಿಕ ಶಕ್ತಿಯನ್ನು ಸಿದ್ಧಪಡಿಸಲು ಕರ್ನಾಟಕ ಸ್ಕಿಲ್ ಒಲಂಪಿಕ್ಸ್ ಎಂಬ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ. ಕೌಶಲ್ಯ ಸ್ಪರ್ಧೆಯಲ್ಲಿ 48 ಪದಕಗಳನ್ನು ಪಡೆದು ಭಾರತದಲ್ಲಿ ಕರ್ನಾಟಕ ಎರಡನೇ ಸ್ಥಾನವನ್ನು ಪಡೆದಿದೆ ಹಾಗೂ 4 ಅಂತರಾಷ್ಟ್ರೀಯ ಪದಕಗಳನ್ನು ತನ್ನದಾಗಿಸಿಕೊಂಡಿದೆ. ಐಟಿಐಗಳು ಹಾಗೂ ಜಿಟಿಟಿಸಿಗಳ ಮೂಲಕ ಸುಮಾರು 33,212 ಯುವಕರಿಗೆ ತರಬೇತಿಯನ್ನು ನೀಡಲಾಗಿದ್ದು,. ಶಾಲಾ ಮಕ್ಕಳಿಗೆ ‘ನನ್ನ ವೃತ್ತಿ , ನನ್ನ ಆಯ್ಕೆ’ ಕಾರ್ಯಕ್ರಮದಡಿ, 35000 ಮಕ್ಕಳಿಗೆ ತರಬೇತಿ ನೀಡಲಾಗಿದೆ. ಈ ವರ್ಷ,ಯೋಜನೆಯನ್ನು 500 ಶಾಲೆಗಳಿಗೆ ವಿಸ್ತರಿಸಿ 2.3 ಲಕ್ಷ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಗುರಿಯಿದೆ ಎಂದರು.

    ಬೆಂಗಳೂರು ಕೌಶಲ್ಯ ಶೃಂಗಸಭೆ ಕರ್ನಾಟಕದ ಕೌಶಲ್ಯ ಪಯಣದಲ್ಲಿ ಒಂದು ಮೈಲಿಗಲ್ಲು. ಕರ್ನಾಟಕವನ್ನು ವಿಶ್ವದಲ್ಲೇ ಕೌಶಲ್ಯಗಳಿಗೆ ಹೆಸರಾದ ರಾಜ್ಯವನ್ನಾಗಿಸುವುದು ನಮ್ಮ ಗುರಿ. ಇಎಸ್ ಡಿಎಂಎಐ/ಎಂಎಲ್ ಏರೋಸ್ಪೇಸ್, ಹಸಿರು ಇಂಧನ, ಒಳಗೊಳ್ಳುವಿಕೆ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಉದ್ಯೋಗಕ್ಕೆ ತಯಾರಾಗಿರುವ ಕಾರ್ಮಿಕಪಡೆಯನ್ನು ಸಿದ್ದಮಾಡುವತ್ತ ಗಮನವನ್ನು ಕೇಂದ್ರೀಕೃತಗೊಳಿಸಿದೆ ಎಂದರು. 2032ರ ಹೊತ್ತಿಗೆ ಕರ್ನಾಟಕವನ್ನು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಜ್ಯವಾಗಿಸಬೇಕು

    2032ರ ಹೊತ್ತಿಗೆ ಕರ್ನಾಟಕವನ್ನು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯ ರಾಜ್ಯವನ್ನಾಗಿಸುವುದು ನಮ್ಮ ಗುರಿ. ಈ ಗುರಿಯನ್ನು ಸಾಧಿಸಲು ನಮಗಿರುವ ಪ್ರಬಲ ಅಸ್ತ್ರವೆಂದರೆ ನಮ್ಮ ಜನ – ಕೌಶಲ್ಯಭರಿತ, ಭವಿಷ್ಯಕ್ಕೆ ತಯಾರಾದ ಹಾಗೂ ನಾವೀನ್ಯತೆವುಳ್ಳ ಕಾರ್ಮಿಕಶಕ್ತಿ ಎಂದರು.

    ಕೌಶಲ್ಯಾಭಿವೃದ್ಧಿಯಲ್ಲಿ ಕರ್ನಾಟಕ ಸದಾ ಮುಂಚೂಣಿಯಲ್ಲಿರುವ ರಾಜ್ಯವಾಗಿದ್ದು, ದೇಶದಲ್ಲಿ ಪ್ರತ್ಯೇಕವಾಗಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯನ್ನು ಪ್ರಾರಂಭಿಸಿದ ರಾಜ್ಯಗಳಲ್ಲಿ ಒಂದಾಗಿದೆ. ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯ ಮೂಲಕ ಕೌಶಲ್ಯವನ್ನು ರಾಜ್ಯದ ಮೂಲೆ ಮೂಲೆಗೂ ಕೊಂಡೊಯ್ದಿದ್ದೇವೆ. 5 ಲಕ್ಷ ಯುವಜನರನ್ನು ತಲುಪುವ ಗುರಿ ಹೊಂದಿದ್ದರೂ ನಾವು ಅದಕ್ಕೂ ಹೆಚ್ಚು ಜನರನ್ನು ತಲುಪಿದ್ದೇವೆ. ಯುವಯುಗ ಯೋಜನೆಯಡಿ ಸುಧಾರಿತ ಡಿಜಿಟಲ್ ಕೌಶಲ್ಯವನ್ನು 1.10 ಲಕ್ಷ ಜನರಿಗೆ ಒದಗಿಸುವ ಮೂಲಕ ಕರ್ನಾಟಕ ಕೈಗಾರಿಕಾ ಕ್ರಾಂತಿಯನ್ನು 4 ನೇ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

    ಕಳೆದ ಎರಡು ವರ್ಷಗಳಲ್ಲಿ ರಾಜ್ಯಾದ್ಯಂತ 34 ಮೆಗಾ ಉದ್ಯೋಗ ಮೇಳಗಳನ್ನು ಹಮ್ಮಿಕೊಂಡಿದ್ದು 1.43 ಲಕ್ಷ ಉದ್ಯೋಕಾಂಕ್ಷಿಗಳು ಭಾಗವಹಿಸಿದ್ದಾರೆ. 27, 123 ಜನರಿಗೆ ಉದ್ಯೋಗಾವಕಾಶಗಳು ಲಭಿಸಿವೆ. ಬದಲಾಗುತ್ತಿರುವ ಜಾಗತಿಕ ಆರ್ಥಿಕತೆಗೆ ತಕ್ಕಂತೆ ರಾಜ್ಯದ ಕೌಶಲ್ಯ ದೃಷ್ಟಿಯನ್ನು ಪರಿವರ್ತಿಸಲಾಗಿದೆ ಎಂದು ಅವರು ತಿಳಿಸಿದರು.

    Skill University to be established in Sandur

  • ಸಮಗ್ರ ವಿದ್ಯಾಭ್ಯಾಸಕ್ಕೆ ಮಕ್ಕಳಿಗೆ ಗ್ರಂಥಾಲಯ ಕೊಠಡಿ

    ಸಮಗ್ರ ವಿದ್ಯಾಭ್ಯಾಸಕ್ಕೆ ಮಕ್ಕಳಿಗೆ ಗ್ರಂಥಾಲಯ ಕೊಠಡಿ

    ಚಿಕ್ಕಮಗಳೂರು:  ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಇನ್ನಷ್ಟು ಹೆಚ್ಚಿಸುವ ಸಲುವಾಗಿ, ಶಾಲಾವರಣದಲ್ಲಿ ಗ್ರಂಥಾಲಯ ಕೊಠಡಿ ನಿರ್ಮಾಣ ಮಾಡಿ ವಿದ್ಯಾಭ್ಯಾಸಕ್ಕೆ ಅನುವು ಕಲ್ಪಿಸಲಾಗುತ್ತಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

    ಶಾಂತಿನಗರದ ಪಿಎಂಶ್ರೀ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಮಂಗಳವಾರ ಪ್ರಧಾ ನ ಮಂತ್ರಿ ಪಿಎಂಶ್ರೀ ಯೋಜನೆಯಡಿ ೧೭.೭೦ ಲಕ್ಷ ರೂ.ವೆಚ್ಚದಲ್ಲಿ ನೂತನ ಗ್ರಂಥಾಲಯ ಕೊಠಡಿ ಕಾಮ ಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿ ಬಡಕುಟುಂಬದ ಮಕ್ಕಳಿಗೆ ಒಳ್ಳೆಯ ಶಿಕ್ಷಣ, ಆರೋಗ್ಯ ಮತ್ತು ಆಹಾರ ಭದ್ರತೆ ಒದಗಿಸುವುದು ಜನಪ್ರ ತಿನಿಧಿ ಹಾಗೂ ಸರ್ಕಾರದ ಕರ್ತವ್ಯವಾಗಿದೆ. ಅದರಂತೆ ಮಕ್ಕಳ ಸಮಗ್ರ ವಿದ್ಯಾರ್ಜನೆಗೆ ಶಾಲೆಯಲ್ಲೇ ಗ್ರಂಥಾ ಲಯ ನಿರ್ಮಿಸಿದರೆ ಭವಿಷ್ಯದ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಲು ಸಹಕಾರಿ ಎಂದು ಹೇಳಿದರು.

    ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಲು, ಪಾಲಕರು ಮಕ್ಕಳನ್ನು ಮೊದಲು ಶಿಕ್ಷಿತರಾಗಿಸಬೇಕು. ಅಂಬೇ ಡ್ಕರ್ ತತ್ವದಡಿ ಶಿಕ್ಷಣ ಎಂಬುದು ಹುಲಿ ಹಾಲಿನಂತೆ, ಹಾಲು ಕುಡಿದ ಹುಲಿಮರಿ ಘರ್ಜಿಸಿದಂತೆ, ಶಿಕ್ಷಣ ಪಡೆದ ವಿದ್ಯಾರ್ಥಿಗಳು ಹುಲಿಮರಿಯಂತೆ ಘರ್ಜಿಸಬೇಕು. ಹಾಗಾಗಿ ಮಕ್ಕಳಿಗೆ ಶಿಕ್ಷಣವಂತರಾಗಿಸುವುದು ಪಾಲಕರ ಕರ್ತವ್ಯ ಎಂದರು.

    ಶಿಕ್ಷಣ ಕೇವಲ ಸರ್ಕಾರಿ ನೌಕರಿಗಲ್ಲ ಅಥವಾ ಬದುಕಿಗಲ್ಲ, ಶಿಕ್ಷಣ ಉತ್ತಮ ಸಂಸ್ಕಾರ, ಬುದ್ದಿವಂತಿಕೆ ಹಾಗೂ ಅರಿವು ಮೂಡಿಸುವ ಸಾಧನ. ಹೀಗಾಗಿ ಮಕ್ಕಳು ಸಂಸ್ಕಾರವಂತರಾದರೆ ಪಾಲಕರು, ಶಿಕ್ಷಣ ಕಲಿಸಿ ದ ಗುರುಗಳ ಜೊತೆಗೆ ಸವಲತ್ತು ಕಲ್ಪಿಸುವ ಸರ್ಕಾರಕ್ಕೂ ಹೆಸರು ಬರಲಿದೆ. ಜೊತೆಗೆ ಮಕ್ಕಳು ದೇಶದ ಸತ್ರ್ಪ ಜೆಗಳಾಗಿ ಹೊರಹೊಮ್ಮುತ್ತಾರೆ ಎಂದು ತಿಳಿಸಿದರು.

    ಭಾರತವು ಇಡೀ ಪ್ರಪಂಚವನ್ನೇ ತಿರುಗುವಂತೆ ಮಾಡಿರುವ ರಾಷ್ಟ್ರ. ಈ ನಡುವೆ ಪಿಎಂಶ್ರೀ ಯೋಜನೆ ಪ್ರಧಾನಿಗಳು ವಿಶೇಷವಾಗಿ ದೇಶಾದ್ಯಂತ ಅನುಷ್ಟಾನಗೊಳಿಸಿದ್ದು ಸಮರ್ಪಕವಾಗಿ ಸದ್ಬಳಕೆ ಮಾಡಿಕೊ ಳ್ಳಬೇಕು. ಜೊತೆಗೆ ಶಾಲಾಭಿವೃದ್ದಿ ಸಮಿತಿ, ಶಿಕ್ಷಕರು, ನಗರಸಭೆ ಸದಸ್ಯರು ಮಕ್ಕಳಲ್ಲಿ ರಾಷ್ಟ್ರಭಕ್ತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

    ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಮಾತನಾಡಿ ವಿದ್ಯಾರ್ಥಿಗಳಿಗೆ ಗ್ರಂಥಾಲಯ ನಿರ್ಮಾಣಗೊಂಡರೆ ಭವಿ ಷ್ಯದಲ್ಲಿ ಎದುರಾಗುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಸುಲಭವಾಗಿ ಎದುರಿಸಲು ಸಹಕಾರಿ. ಹೀಗಾಗಿ ಪ್ರಧಾನ ಮಂತ್ರಿಗಳ ಈ ಯೋಜನೆ ವಿದ್ಯಾರ್ಥಿಗಳ ಶ್ರೇಯೋಭಿವೃದ್ದಿಗೆ ಸಾಕಷ್ಟು ಅನುಕೂಲವಾಗಲಿದೆ ಎಂದರು.

    ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಮಣಿಕಂಠ, ಮುನೀರ್‌ಅಹ್ಮದ್, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಹಾಜಮ್, ಉಪಾಧ್ಯಕ್ಷೆ ಶೃತಿ, ಸಿಡಿಎ ಸದಸ್ಯೆ ಗುಣವತಿ, ಸದಸ್ಯ ತಬಸೂಮ್, ಷರೀಫ್, ಪಿಎಂಶ್ರೀ ಸ.ಕ.ಹಿ.ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಎಸ್.ಟಿ.ಚಂದ್ರಯ್ಯ, ಜಿ.ಪಂ. ಸಹಾಯಕ ಕಾರ್ಯಪಾಲಕ ಅಭಿಯಂತ ಚೇತನ್, ಗುತ್ತಿಗೆದಾರ ಪ್ರದೀಪ್, ಶಿಕ್ಷಣ ಸಂಯೋಜಕಿ ಜಾನಕಮ್ಮ, ಸಿಆರ್‌ಪಿ ರಮ್ಯಶ್ರೀ ಮತ್ತಿತ ರರು ಹಾಜರಿದ್ದರು.

    Library room for children for holistic education

  • ರಾಜ್ಯದಲ್ಲಿ ಒಂದು ಲಕ್ಷ ಯುವಕರಿಗೆ ವಿಪತ್ತು ನಿರ್ವಹಣಾ ತರಬೇತಿ

    ರಾಜ್ಯದಲ್ಲಿ ಒಂದು ಲಕ್ಷ ಯುವಕರಿಗೆ ವಿಪತ್ತು ನಿರ್ವಹಣಾ ತರಬೇತಿ

    ಚಿಕ್ಕಮಗಳೂರು: ಕರಾವಳಿ, ಬಯಲು ಸೀಮೆ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಅತಿವೃಷ್ಠಿ, ಪ್ರವಾಹ, ಬರಗಾಲದಂತಹ ಪ್ರಾಕೃತಿಕ ವಿಕೋಪಗಳು ಸಾಮಾನ್ಯ. ರಾಜ್ಯದಲ್ಲಿ ಒಂದು ಲಕ್ಷ ಯುವಕರಿಗೆ ವಿಪತ್ತು ನಿರ್ವಹಣಾ ತರಬೇತಿ ನೀಡಲಾಗುವುದು ಎಂದು ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪ್ರಧಾನ ಆಯುಕ್ತ ಪಿ.ಜಿ.ಆರ್.ಸಿಂಧ್ಯಾ ಹೇಳಿದರು.

    ನಗರದ ಸ್ಕೌಟ್ ಮತ್ತು ಗೈಡ್ಸ್‌ ಸಭಾಂಗಣದಲ್ಲಿ ಕುವೆಂಪು ವಿಶ್ವವಿದ್ಯಾಲಯ ಹಾಗೂ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರಿಗೆ ಆಯೋಜಿಸಿದ್ದ ಸಾಮಾನ್ಯ ಮಾಹಿತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

    ಪ್ರಕೃತಿ ವಿಕೋಪ ಸಂಭವಿಸಿದಾಗ ಸ್ಥಳೀಯ ಯುವಕರು ಕೂಡಲೇ ಸ್ಪಂದಿಸಬೇಕು. ಪರಿಹಾರ ಕಾರ್ಯದಲ್ಲಿ ಆಡಳಿತದೊಂದಿಗೆ ಕೈ ಜೋಡಿಸಬೇಕು. ಕಾರ್ಯಕ್ಷಮತೆಯಲ್ಲಿ ಅವರನ್ನು ಸಜ್ಜಾಗಿಸಲು 18 ರಿಂದ 25 ವಯಸ್ಸಿನ ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರ ತರಬೇತಿ ಕೊಡಿಸುತ್ತಿದೆ.  ಪ್ರತಿ ವಿದ್ಯಾರ್ಥಿಗೆ ₹10 ಸಾವಿರ  ಅನುದಾನ ನೀಡುತ್ತಿದೆ ಎಂದರು. ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯಿಂದ ರಾಜ್ಯದ ಐದು ಜಿಲ್ಲೆಗಳಲ್ಲಿ 10 ಸಾವಿರ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗಿದೆ ಎಂದು ಹೇಳಿದರು.

    ಸರ್ಕಾರ ಎಲ್ಲಾ ಪದವಿಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಡ್ಡಾಯವಾಗಿ ಘಟಕ ಸ್ಥಾಪಿಸಲು ಆದೇಶಿಸಿದೆ. ಸದಾ ಸಿದ್ಧರಾಗಿರುವ ಒಂದು ಸೇವಾ ಪಡೆ ನಿರ್ಮಿಸಲು ಕಾಲೇಜುಗಳ ಆಡಳಿತ ಮಂಡಲಿ, ಪ್ರಾಂಶುಪಾಲರು ಹಾಗೂ ಉತ್ಸುಕ ಪ್ರಾಧ್ಯಾಪಕರು ಈ ರಾಷ್ಟ್ರೀಯ ಅಭಿಯಾನದಲ್ಲಿ ಕೈ ಜೋಡಿಸಬೇಕು ಎಂದು ತಿಳಿಸಿದರು.

    ಜಿಲ್ಲಾ ಮುಖ್ಯ ಆಯುಕ್ತ ಎಂ.ಎನ್.ಷಡಕ್ಷರಿ ಮಾತನಾಡಿ, ‘ಯುವಕರು ದುಶ್ಚಟ ಹಾಗೂ ಆಕರ್ಷಣೆಗೆ ಒಳಗಾಗದೆ ಸಮಾಜ ಕಟ್ಟುವ ಕೆಲಸ ಮಾಡಬೇಕು. ದೇಶದಲ್ಲಿ ಶೇ 60ರಷ್ಟು ಯುವಕರಿದ್ದು, ಅವರ ನಿರ್ಣಾಯಕ ವಯೋಮಾನದಲ್ಲಿ ಇರುವ ಜವಾಬ್ದಾರಿ ನಮ್ಮ ಮೇಲಿದೆ. ಕಾಲೇಜಿನ ಪ್ರಾಧ್ಯಾಪಕರು ಸಿಕ್ಕಿರುವ ಈ ಅವಕಾಶ ಉಪಯೋಗಿಸಿಕೊಳ್ಳಬೇಕು’ ಎಂದರು.

    ‘ಜಿಲ್ಲೆಯಲ್ಲಿ ಸುಮಾರು 90 ಪದವಿ ಕಾಲೇಜುಗಳಿದ್ದು, ಎಲ್ಲರೂ ಕಡ್ಡಾಯವಾಗಿ ರೋವರ್ಸ್‌ ಮತ್ತು ರೇಂಜರ್ಸ್‌ ಘಟಕಗಳನ್ನು ಕಡ್ಡಾಯವಾಗಿ ಪ್ರಾರಂಭಿಸಬೇಕು’ ಎಂದು ಪದವಿ ಪೂರ್ವ ಕಾಲೇಜಿನ ಉಪನಿರ್ದೇಶಕಿ ಮಂಜುಳಾ ತಿಳಿಸಿದರು. ಸಂಬಂಧಪಟ್ಟ ಶಾಲೆಯ ಪ್ರಾಂಶುಪಾಲರು ಆಸಕ್ತಿ ವಹಿಸಿ ಕಾಲೇಜುಗಳಲ್ಲಿ ಪಠ್ಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.

    ಕುವೆಂಪು ವಿಶ್ವವಿದ್ಯಾನಿಲಯದ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳ ನೋಡಲ್ ಅಧಿಕಾರಿ ರವೀಂದ್ರಗೌಡ ಮಾತನಾಡಿ, ‘ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಬಿ.ಇಡಿ ಕಾಲೇಜುಗಳು ಸೇರಿ ಎಲ್ಲಾ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಘಟಕಗಳು ಪ್ರಾರಂಭಿಸಬೇಕು’ ಎಂದು ತಿಳಿಸಿದರು.

    ನೀಲಕಂಠಾಚಾರ್, ಸಂಧ್ಯಾರಾಣಿ, ಎಂ.ಎನ್.ಷಡಕ್ಷರಿ ಅವರು ತರಬೇತಿ ನೀಡಿದರು. ಜಿಲ್ಲಾ ಗೈಡ್ಸ್ ಆಯುಕ್ತೆ ಡಿ.ಎಸ್. ಮಮತಾ, ಸ್ಕೌಟ್ ಆಯುಕ್ತ ಫಣಿರಾಜ್, ಜಿಲ್ಲಾ ಸಹಾಯಕ ಆಯುಕ್ತ ಜಿ.ಎಂ. ಗಣೇಶ್ ಉಪಸ್ಥಿತರಿದ್ದರು.

    Disaster management training for one lakh youth in the state