Category: ಚಿಕ್ಕಮಗಳೂರು

  • ಶೃಂಗೇರಿ ಕಿಲ್ಲರ್ ಕಾಡಾನೆ ಸೆರೆ ಹಿಡಿಯುವಲ್ಲಿ  ಅರಣ್ಯ ಇಲಾಖೆ ಯಶಸ್ವಿ

    ಶೃಂಗೇರಿ ಕಿಲ್ಲರ್ ಕಾಡಾನೆ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿ

    ಚಿಕ್ಕಮಗಳೂರು: ಜಿಲ್ಲೆಯ ಶೃಂಗೇರಿ ತಾಲೂಕಿನ ಕೆರೆಕಟ್ಟೆ ಸಮೀಪದ ಕೆರೆಗದ್ದೆ ಗ್ರಾಮದಲ್ಲಿ ಇಬ್ಬರನ್ನು ಬಲಿ ಪಡೆದು, ಬೆಳೆ ನಾಶ ಮಾಡಿ ಆತಂಕ ಸೃಷ್ಟಿ ಮಾಡಿದ್ದ ಕಾಡಾನೆ ಕೊನೆಗೂ ‌ಸೆರೆಯಾಗಿದೆ. ಭಾನುವಾರ ಸಂಜೆಯಿಂದ ಕಾರ್ಯಾಚರಣೆ ನಡೆಸಿದ್ದ ಅರಣ್ಯ ಇಲಾಖೆ ಕೊನೆಗೂ ಹಂತಕ ಆನೆಯನ್ನು ಲಾಕ್ ಮಾಡಿದೆ.

    ಹಂತಕ ಕಾಡಾನೆ ‌ಸೆರೆ ಕಾರ್ಯಾಚರಣೆಗಾಗಿ ದುಬಾರೆ ಆನೆ ಶಿಬಿರದಿಂದ ಏಕಲವ್ಯ ಟೀಮ್ ಶೃಂಗೇರಿ ತಾಲೂಕಿನ ಕೆರೆ ಕಟ್ಟೆ ಕ್ಯಾಂಪ್ಗೆ ಬಂದಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿರುವ ಶೃಂಗೇರಿ ತಾಲೂಕಿನ ಭಗವತಿ ಪ್ರದೇಶದ ಸಮೀಪದಲ್ಲೇ ಕುಮ್ಕಿ ಆನಗೆಳಿದ್ದವು. ಇದೇ ಪ್ರದೇಶದ ಸಮೀಪ ಕಾಡಾನೆ ಓಡಾಟ ನಡೆಸಿದ್ದು ಭಾನುವಾರ ಸಂಜೆಯ ಕಾರ್ಯಾಚರಣೆ ವೇಳೆ ತಿಳಿದುಬಂದಿದೆ.

    ಕಿಲ್ಲರ್ ‌ಸಲಗದ ಓಡಾಟದ ಸುಳಿವು ‌ ಸಿಗುತ್ತಿದ್ದಂತೆ ಅಲರ್ಟ್ ಆದ ಅರಣ್ಯ ಇಲಾಖೆಯ ಸಿಬ್ಬಂದಿ, ರಾತ್ರಿ ವೇಳೆ ಕಾರ್ಯಾಚರಣೆ ನಡೆಸಿದ್ದಾರೆ. ಭಗವತಿ ಪ್ರದೇಶದ ಬಳಿ ಕಾಡಾನೆಗೆ ಪಶು ವೈದ್ಯರು ಡಾಟ್ ಮಾಡಿದ್ದಾರೆ. ಏಕಲವ್ಯ ನೇತೃತ್ವದ ಹರ್ಷ, ಅಜೇಯ, ಧನಂಜಯ, ಪ್ರಶಾಂತ ಕುಮ್ಕಿ ಆನೆಗಳು ಕಾರ್ಯಾಚರಣೆ ನಡೆಸಿದ್ದು, ಹಂತಕ ಕಾಡಾನೆಯನ್ನು ಲಾಕ್ ಮಾಡಲಾಗಿದೆ. ಸೋಮವಾರ ಬೆಳಗ್ಗೆ ನಡೆಯಬೇಕಿದ್ದಕಾರ್ಯಾಚರಣೆಯನ್ನು ಭಾನುವಾರ ರಾತ್ರಿಯೇ ನಡೆಸಿದ ಅರಣ್ಯ ಇಲಾಖೆ ಕಾಡಾನೆ ಸೆರೆ ಕಾರ್ಯಚರಣೆ ಯಶಸ್ವಿಯಾಗಿದೆ.

    Forest Department successful in capturing Sringeri killer elephant

  • ದತ್ತಮಾಲಾ ಕಾರ್ಯಕ್ರಮ ಶಾಂತಿಯುತ ತೆರೆ

    ದತ್ತಮಾಲಾ ಕಾರ್ಯಕ್ರಮ ಶಾಂತಿಯುತ ತೆರೆ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ದತ್ತಪೀಠ ಸೇವಾ ಸಮಿತಿಯಿಂದ ಇದೇ ಮೊದಲ ಬಾರಿಗೆ ದತ್ತಮಾಲೆಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಭಾನುವಾರ ಚಂದ್ರದ್ರೋಣ ಪರ್ವತ ಸಾಲಿನಲ್ಲಿರುವ ಇನಾಂದತ್ತಾತ್ರೇಯಸ್ವಾಮಿ ಬಾಬಾಬುಡನ್ ದರ್ಗಾದಲ್ಲಿ ದತ್ತಮಾಲಾ ಕಾರ್ಯಕ್ರಮ ಶಾಂತಿಯುತವಾಗಿ ನಡೆಯಿತು.

    ನಗರದ ಶಂಕರಮಠದಲ್ಲಿ ಅಕ್ಟೋಬರ್ ೩೧ರಂದು ದತ್ತಮಾಲೆಯನ್ನು ೪೦ಕ್ಕೂ ಹೆಚ್ಚು ಮಂದಿ ಧರಿಸಿದ್ದರು. ಸಂಜೆ ವ್ರತವನ್ನು ಆಚರಿಸಿಕೊಂಡು ಬಂದಿದ್ದರು. ನವೆಂಬರ್ ೧ ರಂದು ಹಲವು ಮನೆಗಳಿಗೆ ತೆರಳಿ ಪಡಿ ಸಂಗ್ರಹಿಸಿಸಂಜೆ ಅಕ್ಕಿ,ಬೆಲ್ಲ, ತೆಂಗಿನ ಕಾಯಿಯನ್ನು ದತ್ತಾತ್ರೇಯ ಚಿತ್ರಪಟದ ಮುಂದಿಟ್ಟು ಪೂಜೆ ಸಲ್ಲಿಸಿ ಇರುಮುಡಿ ಕಟ್ಟಿದರು.

    ಭಾನುವಾರ ಬೆಳಿಗ್ಗೆ ಇರುಮುಡಿಯನ್ನು ಹೊತ್ತು ವಾಹನದಲ್ಲಿ ಸಾಗಿದರು. ದಾರಿಮಧ್ಯೆದಲ್ಲಿ ಸಿಗುವ ಹೊನ್ನಮ್ಮನ ಹಳ್ಳದಲ್ಲಿ ಮಿಂದು ಅಲ್ಲಿಗೆ ಸಾಗಿದ ದತ್ತಭಕ್ತರು ದತ್ತಾತ್ರೇಯರ ನಾಮಸ್ಮರಣೆಯನ್ನು ಮಾಡುತ್ತಾ ದತ್ತಪೀಠದ ಆವರಣ ತಲುಪಿದರು. ಅಲ್ಲಿ ಸರದಿ ಸಾಲಿನಲ್ಲಿ ತೆರಳಿ ಇರುಮುಡಿಯನ್ನು ಸಮರ್ಪಿಸಿ ದತ್ತಾತ್ರೇಯರ ಪಾದುಕೆಗಳ ದರ್ಶನ ಪಡೆದರು.

    ಕಳೆದ ವರ್ಷ ಶ್ರೀರಾಮಸೇನೆ ಸಂಘಟನೆಯ ನೇತೃತ್ವದಲ್ಲಿ ದತ್ತಪೀಠ ಸೇವಾ ಸಮಿತಿಯಲ್ಲಿರುವ ಮುಖಂಡರೇ ದತ್ತಮಾಲೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗಮಿಸಿದ್ದರು. ದತ್ತಜಯಂತಿಯನ್ನು ವಿಶ್ವಹಿಂದೂಪರಿಷತ್ ಮತ್ತು ಬಜರಂಗದಳದವರೊಂದಿಗೆ ತೆರಳಿ ದತ್ತಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮುಂದಿನ ದಿನಗಳಲ್ಲಿ ವಿಶ್ವಹಿಂದೂಪರಿಷತ್ ನೇತೃತ್ವದಲ್ಲಿ ನಡೆಯುವ ದತ್ತಜಯಂತಿಯಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಹೇಳಿಕೆ ನೀಡಿದ್ದರು.

    ಶ್ರೀರಾಮಸೇನೆ ವಿಶ್ವಹಿಂದೂಪರಿಷತ್‌ನೊಂದಿಗೆ ವಿಲೀನಗೊಳಿಸಲು ರಾಷ್ಟ್ರೀಯ ಅಧ್ಯಕ್ಷರು ಮುಂದಾಗಿರುವ ಹಿನ್ನಲೆಯಲ್ಲಿ ಶ್ರೀರಾಮಸೇನೆಯಲ್ಲಿದ್ದ ಮುಖಂಡರುಗಳು ಒಟ್ಟಾಗಿ ಹೊಸದಾಗಿ ದತ್ತಪೀಠ ಸೇವಾ ಸಮಿತಿಯನ್ನು ರಚಿಸಿಕೊಂಡಿದ್ದು, ಇದೇ ಮೊದಲಬಾರಿಗೆ ಸಮಿತಿ ಮುಂದಾಳತ್ವದಲ್ಲಿ ಸಮಿತಿ ಜಿಲ್ಲಾ ಸಂಚಾಲಕ ರಂಜಿತ್‌ಶೆಟ್ಟಿ ನೇತೃತ್ವದಲ್ಲಿ ದತ್ತಮಾಲಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

    ಇಂದು ದತ್ತಪೀಠ ಸೇವಾ ಸಮಿತಿಯಿಂದ ನಡೆದ ದತ್ತಮಾಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ದತ್ತಭಕ್ತರು ಇರುಮುಡಿಯನ್ನು ಅರ್ಪಿಸುವ ಮೂಲಕ ಕಾರ್ಯಕ್ರಮವನ್ನು ಶಾಂತಿಯುತವಾಗಿ ಮುಕ್ತಾಯಗೊಳಿಸಿದರು.ವಿಶ್ವಧರ್ಮ ಸಂಸ್ಥಾನ ಸಂಸ್ಥಾಪಕ ಯೋಗಿ ಸಂಜಿತ್‌ಸುವರ್ಣ, ಧರ್ಮ ಚಿಂತಕ ರಾಜೇಂದ್ರಕುಮಾರ್, ನವೀನ್,ರಂಜಿತ್, ಜ್ಞಾನೇಂದ್ರಜೈನ್ ಇದ್ದರು.

    Dattamala program peaceful opening

  • ಮಕ್ಕಳು ಜಗತ್ತು ಬೆಳಗುವ ದೀಪಗಳಾಗಲಿ

    ಮಕ್ಕಳು ಜಗತ್ತು ಬೆಳಗುವ ದೀಪಗಳಾಗಲಿ

    ಚಿಕ್ಕಮಗಳೂರು: ದೀಪ ತಾನು ಉರಿದು ಬೇರೆಯವರಿಗೆ ಬೆಳಕನ್ನು ನೀಡುತ್ತದೆ. ಅದೇ ರೀತಿ ನಮ್ಮ ಮಕ್ಕಳು ಜಗತ್ತನ್ನು ಬೆಳಗುವ ದೀಪಗಳಾಗಬೇಕೇ ಹೊರತು ಬೇರೆಯವರ ಮನೆಗೆ ಬೆಂಕಿ ಹಚ್ಚುವ ಕಿಡಿಗಳಾಗಬಾರದು ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಅಭಿಪ್ರಾಯಪಟ್ಟರು.

    ನಗರದ ಹೊರವಲಯದ ಇಂತಹವರದಲ್ಲಿರುವ ಶ್ರೀ ಕಾಮಧೇನು ಗೋ ಶಾಲೆಯಲ್ಲಿ ಜೈ ಸಮಾಜದ ಗೋಬಕ್ತರಿಂದ ಆಯೋಜಿಸಲಾಗಿದ್ದ ದೀಪಾವಳಿ ಸ್ನೇಹ ಮಿಲನ ಗೋಮಾತೆಯೊಂದಿಗೆ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ಕನ್ನಡ ಮಣ್ಣಿನ ಶಕ್ತಿಯೇ ಅನನ್ಯವಾದುದು. ಈ ಮಣ್ಣಿನ ಹೆಣ್ಣು ತನ್ನ ಮಕ್ಕಳು ಆಚಾರಕ್ಕೆ ಅರಸರಾಗಲಿ, ನೀತಿಗೆ ದೊರೆಯಾಗಲಿ, ಜಗಕ್ಕೆ ಜ್ಯೋತಿಯಾಗಲಿ ಎಂದು ಬಯಸುತ್ತಾರೆ. ಇಂಥ ತಾಯಂದಿತ ಉದಾತ್ತ ಗುಣಗಳನ್ನು ಮಕ್ಕಳು ತಮ್ಮಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

    ಭಾರತೀಯ ಸಂಸ್ಕೃತಿಯಲ್ಲಿ ಹಸುವಿಗೆ ಅನಾದಿಕಾಲದಿಂದಲೂ ವಿಶೇಷ ಸ್ಥಾನಮಾನ ನೀಡಲಾಗಿದೆ. ನಮ್ಮ ದೇಶದ ಚರಿತ್ರೆ ಮತ್ತು ಸಂಸ್ಕೃತಿಯನ್ನು ವಿಸ್ತರಿಸಿರುವಾಗ ದಾರ್ಶನಿಕರು ನೀಡುವ ಪರಮೋಚ್ಚ ಉದಾಹರಣೆ ಗೋಮಾತೆಯಾಗಿತ್ತು. ಇದಲ್ಲದೆ ಸತ್ಯ ಪರಿಪಾಲನೆಗೆ ನಮ್ಮ ಹಿರಿಯರು ಉದಾಹರಣೆ ನೀಡಿದ್ದು ಗೋ ಮಾತೆಯನ್ನೇ ಎಂಬುದು ವಿಶೇಷವಾಗಿದೆ ಎಂದು ಹೇಳಿದರು.

    ಗೋವುಗಳನ್ನು ಕಸಾಯಿ ಖಾನೆಗೆ ಸಾಧಿಸುವವರು ಒಂದು ಹೃದಯವನ್ನು ಸುಡುವವರು. ಅದೇ ಗೋವನ್ನು ಸಂರಕ್ಷಿಸುವವರು ಇನ್ನೊಂದು ಜೀವವನ್ನು ಬದುಕಿಸಿದ ಜ್ಯೋತಿಯಾಗುತ್ತಾರೆ. ಮನುಕುಲ ಶರೀರಕವಾಗಿ ಸದೃಢ ಹಾಗೂ ಆರೋಗ್ಯಯುತವಾಗಿದೆ ಎಂದರೆ ಅದಕ್ಕೆ ಗೋಮಾತೆಯೇ ಕಾರಣ. ಹೀಗಾಗಿ ಗೋ ಸಂಕುಲ ಉಳಿಸಿ ಬೆಳೆಸಲು ಪ್ರತಿಯೊಬ್ಬರು ಪಣತೊಡಬೇಕು ಎಂದು ಕರೆ ನೀಡಿದರು.

    ಮನುಷ್ಯನನ್ನು ಹೊರತುಪಡಿಸಿ ಮರ, ಗಿಡ, ನದಿ, ಪ್ರಾಣಿ, ಪಕ್ಷಿ ಹೀಗೆ ಪ್ರತಿಯೊಂದು ಜೀವಸಂಕುಲವೂ ಪರೋಪಕಾರಿ ಗುಣ ಹೊಂದಿವೆ. ಅದರಲ್ಲಿಯೂ ಗೋಮಾತೆಯಂತೂ ಪರೋಪಕಾರಕ್ಕೆ ಉತ್ತಮ ನಿದರ್ಶನವಾಗಿದೆ. ಮನುಷ್ಯನ ಹುಟ್ಟಿನಿಂದ ಹಿಡಿದು ಸಾವಿನವರೆಗೆ ಗೋಮಾತೆ ಆತನ ಉದ್ದಾರಕ್ಕೆ ಶ್ರಮಿಸುತ್ತದೆ.‌ ಇಂಥ ಗೋ ಮಾತೆಯನ್ನು ಸಾಯಿಸುವ ಮಟ್ಟಕ್ಕೆ ಇಳಿಯುವುದು ಮನುಷ್ಯನ ನೀಚ ತನವನ್ನು ತೋರಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

    ಹಾಲಿನ ಮೌಲ್ಯವರ್ಧನೆ ಮಾಡಿದಾಗ ಅದು ಮೊಸರಾಗುತ್ತದೆ. ಮೊಸರನ್ನು ಮೌಲ್ಯವರ್ಧನೆ ಮಾಡಿದಾಗ ಬೆಣ್ಣೆ, ಬೆಣ್ಣೆಯಿಂದ ತುಪ್ಪವಾಗುತ್ತದೆ. ತುಪ್ಪ ಹಳೆಯದಾದಷ್ಟೂ ಅದರ ಮೌಲ್ಯ ಹೆಚ್ಚುತ್ತದೆ. ಇದೇ ರೀತಿ ವ್ಯಕ್ತಿಯನ್ನು ಒಂದು ಸಂಸ್ಕಾರಕ್ಕೆ ಒಳಪಡಿಸಿದಾಗ ಆತ ಒಬ್ಬ ಮನುಷ್ಯನಾಗುತ್ತಾನೆ. ಆ ಮನುಷ್ಯನಿಗೆ ನಿರಂತರವಾಗಿ ಸಂಸ್ಕಾರ ನೀಡುತ್ತಾ ಹೋದಂತೆ ಆತನ ಮೌಲ್ಯವು ಹೆಚ್ಚಾಗುತ್ತದೆ ಎಂದು ಪ್ರತಿಪಾದಿಸಿದರು.

    ಒಬ್ಬ ತಾಯಿ ತನಗೆ ಎಷ್ಟೇ ಮಕ್ಕಳಿದ್ದರೂ ಎಲ್ಲರಿಗೂ ಸಮಾನವಾದ ಪ್ರೀತಿ ನೀಡುತ್ತಾಳೆ. ಆದರೆ ಅದೇ ಮಕ್ಕಳು ತಮ್ಮ ತಂದೆ ತಾಯಿಯರಿಗೆ ಸಮಾನ ಪ್ರೀತಿ ನೀಡುತ್ತಾರೆಯೇ ಎಂಬ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದರು.

    ಕಾರ್ಯಕ್ರಮದಲ್ಲಿ ಗೋಶಾಲೆಯ ಗೋವುಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಆರ್ ಎಸ್ ಎಸ್ ಮುಖಂಡ ಮಲ್ಲಿಕಾರ್ಜುನ್, ಕಾಮದೇನು ಗೋ ಸೇವಾ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಭಗವಾನ್ ರಾಮಪಂತ್, ಬಾಣವರದ ಮಹಾವೀರ ಗೋಶಾಲೆಯ ಮುಖ್ಯಸ್ಥ ಭರತ್ ಜೈನ್ ಸೇರಿದಂತೆ ಜೈನ ಸಂಘದ ವಿವಿಧ ಮುಖಂಡರು ಉಪಸ್ಥಿತರಿದ್ದರು.

    Let children be the lights that illuminate the world

  • ಕಳಸದಲ್ಲಿ ಸಡಗರ ತಂದ ಗಿರಿಜಾಕಲ್ಯಾಣ ಉತ್ಸವ

    ಕಳಸದಲ್ಲಿ ಸಡಗರ ತಂದ ಗಿರಿಜಾಕಲ್ಯಾಣ ಉತ್ಸವ

    ಕಳಸ: ಪಟ್ಟಣದಲ್ಲಿ ಭಾನುವಾರ ಬೆಳ್ಳಂಬೆಳಿಗ್ಗೆ ಜನಸಂದಣಿಯ ದೃಶ್ಯ. ಪಟ್ಟಣದ ಕಳಸೇಶ್ವರ ದೇವಸ್ಥಾನದಲ್ಲಿ ಕಳಸೇಶ್ವರ ಮತ್ತು ಗಿರಿಜೆಯು ಒಟ್ಟಿಗೇ ಇರುವ ದೃಶ್ಯ ಕಣ್ತುಂಬಿಕೊಳ್ಳಲು ಭಕ್ತರು ಉತ್ಸಾಹದಿಂದ ನೆರೆದಿದ್ದರು.

    ಕಳೆದ ವಾರ ಆರಂಭಗೊಡಿದ್ದ ಗಿರಿಜಾ ಕಲ್ಯಾಣದ ವಿಧಿಗಳು ಸಂಪ್ರದಾಯಬದ್ಧವಾಗಿ ನೆರವೇರಿದ್ದವು. ಭಕ್ತರು ಎಲ್ಲ ವಿಧಿಗಳಲ್ಲೂ ಗಂಡು–ಹೆಣ್ಣಿನ ಕಡೆಯವರಂತೆ ಪಾಲ್ಗೊಂಡು ದೇವರ ಮದುವೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

    ವಾರವಿಡೀ ಗಿರಿಜಾಂಬಾ ದೇವಸ್ಥಾನ ಮತ್ತು ಕಳಸೇಶ್ವರ ದೇವಸ್ಥಾನದ ಪರಿಸರದಲ್ಲಿ ಹಬ್ಬದ ಸಡಗರ, ಭಕ್ತರ ಲವಲವಿಕೆ ಇತ್ತು. ಶನಿವಾರ ಮಧ್ಯರಾತ್ರಿಯ ನಂತರ ಗಿರಿಜೆಯನ್ನು ಕಳಸೇಶ್ವರನ ಸನ್ನಿಧಿಗೆ ಕರೆತಂದ ನಂತರ ಭಾನುವಾರ ಬೆಳಗಿನ ಜಾವ 3 ಗಂಟೆಗೆ ಕಲಶೇಶ್ವರ ಮತ್ತು ಗಿರಿಜೆಯ ಕಲ್ಯಾಣ ನಡೆಯಿತು.

    ದೇವರ ವಿವಾಹವಾದ ನಂತರ ಒಂದು ದಿನ ಮಾತ್ರ ಕಳಸೇಶ್ವರ ಗಿರಿಜೆಯನ್ನು ಒಟ್ಟಿಗೆ ಕೂರಿಸುವ ಸಂಪ್ರದಾಯ ಇದೆ. ಕಾಶಿಯಲ್ಲಿ 12 ವರ್ಷಕ್ಕೊಮ್ಮೆ ಕಲ್ಯಾಣ ನಡೆದರೆ ಕಳಸದಲ್ಲಿ ಮಾತ್ರ ಪ್ರತಿ ವರ್ಷವೂ ಈಶ್ವರ ಮತ್ತು ಪಾರ್ವತಿ ನಡುವೆ ಕಲ್ಯಾಣ ನೆರವೇರುತ್ತದೆ. ಕಳಸವು ಇದೇ ಕಾರಣಕ್ಕೆ ದಕ್ಷಿಣ ಕಾಶಿ ಎಂದೇ ಹೆಸರಾಗಿದೆ.

    ಕಲ್ಯಾಣವನ್ನು ಕಣ್ತುಂಬಿಕೊಳ್ಳಲು ಭಕ್ತರು ಪ್ರತಿ ವರ್ಷವೂ ಕಳಸಕ್ಕೆ ಧಾವಿಸುತ್ತಾರೆ. ಭಾನುವಾರ ಕಳಸೇಶ್ವರ ದೇವಸ್ಥಾನದಲ್ಲಿ ಭಕ್ತರು ದೇವರ ಜೋಡಿಗೆ ನಮಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಕೋರಿಕೆ ಸಲ್ಲಿಸಿದರು. ಆನಂತರ ವಿವಾಹದ ಸಿಹಿಯೂಟವನ್ನು 3 ಸಾವಿರಕ್ಕೂ ಹೆಚ್ಚು ಜನರು ಸವಿದರು.

    ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯು ಕಲ್ಯಾಣದ ವಿಧಿಗಳನ್ನು ಮತ್ತು ವಿವಾಹ ಮಹೋತ್ಸವದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿತ್ತು.

    Girijakalyana Utsava

  • ರಾಜ್ಯದ ಮುಖ್ಯಮಂತ್ರಿಯಾಗಿ ಯಾರ ಹೆಸರನ್ನೂ ನಾನು ಪ್ರಶಸ್ತಿಗೆ ಶಿಫಾರಸ್ಸು ಮಾಡಿಲ್ಲ

    ರಾಜ್ಯದ ಮುಖ್ಯಮಂತ್ರಿಯಾಗಿ ಯಾರ ಹೆಸರನ್ನೂ ನಾನು ಪ್ರಶಸ್ತಿಗೆ ಶಿಫಾರಸ್ಸು ಮಾಡಿಲ್ಲ

    ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಯಾರ ಹೆಸರನ್ನೂ ನಾನು ಪ್ರಶಸ್ತಿಗೆ ಶಿಫಾರಸ್ಸು ಮಾಡಿಲ್ಲ. ಆಯ್ಕೆ ಸಮಿತಿ ತೀರ್ಮಾನವೇ ಅಂತಿಮವಾಗಿ ಆಯ್ಕೆ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ “70ನೇ ಕರ್ನಾಟಕ ರಾಜ್ಯೋತ್ಸವವನ್ನು ಉದ್ಘಾಟಿಸಿ 70 ಮಂದಿ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿ ಮಾತನಾಡಿ  ಕರ್ನಾಟಕ ಉದಯವಾಗಿ 70 ವರ್ಷಗಳಾಗಿರುವುದನ್ನು ಪರಿಗಣಿಸಿ 70 ಮಂದಿ ಸಾಧಕರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದರು.

    ಅರ್ಜಿ ಹಾಕಿದವರನ್ನು ಪರಿಗಣಿಸದೇ ಆಯಾ ಕ್ಷೇತ್ರದ ಪರಿಣಿತರನ್ನೇ ಗುರುತಿಸಿ ಆಯ್ಕೆ ಮಾಡಬೇಕು ಎನ್ನುವುದು ನಮ್ಮ ತೀರ್ಮಾನವಾಗಿತ್ತು. ಪುರಸ್ಕೃತರೆಲ್ಲರೂ ಶತಾಯುಶಿಗಳಾಗಿ ನಿಮ್ಮ ನಿಮ್ಮ ಕ್ಷೇತ್ರಗಳಲ್ಲಿ ಇನ್ನಷ್ಟು ಸಾಧನೆ ಮಾಡಿ ನಿಮ್ಮದೆಲ್ಲಾ ಸಾರ್ಥಕ ಬದುಕು ಆಗಲಿ ಎಂದು ಹಾರೈಸಿದರು.

    ಒಂದೇ ವಿಭಾಗದಲ್ಲಿ ಒಬ್ಬರಿಗಿಂತ ಹೆಚ್ಚು ಸಾಧಕರ ಹೆಸರು ಇದ್ದ ಸಂದರ್ಭದಲ್ಲಿ ಮಾತ್ರ ಪ್ರಾದೇಶಿಕ ನ್ಯಾಯ, ಸಾಮಾಜಿಕ ನ್ಯಾಯದ ಕಾರಣಕ್ಕಾಗಿ ಆ ಅರ್ಹರಲ್ಲೇ ಒಬ್ಬರ ಹೆಸರನ್ನು ಅಂತಿಮಗೊಳಿಸಲಾಗಿದೆ ಎಂದರು.

    ಮಾಧ್ಯಮಗಳು ಯಾರ ಆಯ್ಕೆ ಬಗ್ಗೆಯೂ ತಕರಾರು ಮಾಡಿಲ್ಲ. ಆದ್ದರಿಂದ ಅರ್ಹರಿಗೇ ಪ್ರಶಸ್ತಿ ಸಿಕ್ಕಿದೆ ಎಂದು ಭಾವಿಸುತ್ತೇನೆ ಎಂದು ಮೆಚ್ಚುಗೆ ಸೂಚಿಸಿದರು. ಪ್ರಶಸ್ತಿ ಪುರಸ್ಕೃತರಾದ ಕೋಣಂದೂರು ಲಿಂಗಪ್ಪ ಅವರನ್ನು ಉಲ್ಲೇಖಿಸಿ ಸಮಾಜವಾದಿ ಹೋರಾಟದ ದಿನಗಳನ್ನು ಸ್ಮರಿಸಿದರು.

    I have not recommended anyone for the award as the Chief Minister of the state.

  • ಒಂಟಿ ಸಲಗ ಸೇರಿಯಲು ಸರ್ಕಾರ ಆದೇಶ

    ಒಂಟಿ ಸಲಗ ಸೇರಿಯಲು ಸರ್ಕಾರ ಆದೇಶ

    ಚಿಕ್ಕಮಗಳೂರು: ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಗೆ ಒಳಪಡುವ ಪರಿಸರದಲ್ಲಿ ಮಾನವ ಜೀವಕ್ಕೆ ಅಪಾಯಕಾರಿಯಾಗಿ ತಿರುಗಾಡುತ್ತಿರುವ ಒಂಟಿ ಸಲಗ ಸೇರಿಯಲು ಆದೇಶ ಹೊರಡಿಸಲಾಗಿದೆ.

    ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಕಾರ್ಕಳ ವನ್ಯಜೀವಿ ವ್ಯಾಪ್ತಿಯ ಕೆರೆಕಟ್ಟೆ ವನ್ಯಜೀವಿ ವಲಯದ ಅರಣ್ಯ ಪ್ರದೇಶಗಳಲ್ಲಿ ಒಂಟಿ ಕಾಡಾನೆಯು ಸಂಚರಿಸುತ್ತಿದೆ .

    ಕಳೆದ 10ರಿಂದ 15 ವರ್ಷಗಳಿಂದ ಆಗುಂಬೆ, ಕೆರೆಕಟ್ಟೆ ಕುದುರೆಮುಖ ಪ್ರದೇಶಗಳಲ್ಲಿ ಒಂಟಿ ಸಲಗ ಓಡಾಡಿಕೊಂಡು ಹಲವಾರು ಕಡೆಗಳಲ್ಲಿ ದಾಳಿ ಮಾಡಿ ಬೆಳೆಗಳನ್ನು ಹಾಳು ಮಾಡಿದ್ದೆ ಅಲ್ಲದೆ ತುಂಗಭದ್ರಾ ಮೀಸಲು ಅರಣ್ಯದ ಮುಡುಬಾ ಸುತ್ತುಗಟ್ಟಿನ ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ಮಾಡಿ ಹತ್ಯೆ ಮಾಡಿದೆ.

    ಕಾಡಾನೆಯನ್ನು ಸೆರೆ ಹಿಡಿಯದಿದ್ದಲ್ಲಿ ಇನ್ನೂ ಇಂತಹ ಘಟನೆಗಳು ಪುನರಾವರ್ತನೆಯಾಗುವ ಸಾಧ್ಯತೆಗಳಿದ್ದು ಸೆರೆ ಹಿಡಿಯುವ ಅತೀ ಅವಶ್ಯಕತೆ ಇದು ಈ ಕಾಡಾನೆ ಸೆರೆ ಹಿಡಿಯಲು ಬೇರೆ ಪಳಗಿದ ಆನೆಗಳ ಸಹಾಯ ಪಡೆಯಬೇಕಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರು.

    ಕಾಡಾನೆಯನ್ನು ಸೆರೆ ಹಿಡಿಯಲು ಆನೆ ಶಿಬಿರದಿಂದ ಪಳಗಿದ ಆನೆ ಮತ್ತು ಮಾವುತರನ್ನು ನಿಯೋಜಿಸಬೇಕು ಹಾಗೂ ಸೆರೆ ಹಿಡಿದ ಕಾಡಾನೆಯನ್ನು ಯಾವ ಸ್ಥಳಕ್ಕೆ ಬಿಡಬೇಕು ಎಂದು ನಿರ್ದೇಶನ ನೀಡುವಂತೆ ಅವರು ಕೋರಿದ್ದರು ಈ ಹಿನ್ನೆಲೆಯಲ್ಲಿ ಕೆರೆಕಟ್ಟೆ ವನ್ಯಜೀವಿ ವಲಯದಲ್ಲಿ ಎರಡು ಮಾನವ-ಪ್ರಾಣಹಾನಿಗೆ ಕಾರಣವಾದ ಗಂಡಾನೆಯನ್ನು ಸೆರೆಹಿಡಿಯಲು ಆದೇಶ ಹೋರಡಿಸಲಾಗಿದೆ.

    ಆನೆ ಗುರುತಿಸಿ ಸೆರೆ ಹಿಡಿದು ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದ ದೊಡ್ಡ ಹರವೆ ಆನೆ ಶಿಬಿರಕ್ಕೆ ಸ್ಥಳಾಂತರಿಸಲು ಅನುಮತಿ ನೀಡಲಾಗಿದೆ. ಕಾಡಾನೆಗಳ ಸೆರೆಹಿಡಿಯುವ ಕಾರ್ಯಾಚರಣೆಯಲ್ಲಿ TEAM E ‘ಏಕಲವ್ಯ” ಪ್ರಶಾಂತ, ಧನಂಜಯ, ಹರ್ಷ, ಆನೆಗಳನ್ನು ದೊಡ್ಡ ಹರವೆಯಿಂದ TEAM – B ಯಿಂದ “ಅಜಯ”, ದುಬಾರೆ ಮತ್ತು ಹಾರಂಗಿ ಆನೆ ಶಿಬಿರದಿಂದ ಆನೆಗಳನ್ನು ಬಳಸಿಕೊಂಡು ಈ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯ ಕ್ಷೇತ್ರ ಸಿಬ್ಬಂದಿ ಮತ್ತು ಸ್ಥಳೀಯ ಜನರಿಗೆ ಯಾವುದೇ ಅಪಾಯವಾಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿದೆ.

    ಆನೆ ಸೆರೆಹಿಡಿಯಬೇಕೆಂಬ ಒತ್ತಾಯ ತೀವ್ರವಾಗಿತ್ತಲ್ಲದೆ ಜನ ಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಪಕ್ಷಭೇದ ಮರೆತು ಜನಾಕ್ರೋಶ ವ್ಯಕ್ತವಾಗಿತ್ತು.

    Government orders to join at once

  • ಕನ್ನಡಿಗರೆಲ್ಲಾ ಒಂದಾಗುವುದರ ಮೂಲಕ ಜ್ಞಾನ ಸಂಪಾದನೆಗೆ ಎಲ್ಲಾ ಭಾಷೆಗಳು ಬೇಕು

    ಕನ್ನಡಿಗರೆಲ್ಲಾ ಒಂದಾಗುವುದರ ಮೂಲಕ ಜ್ಞಾನ ಸಂಪಾದನೆಗೆ ಎಲ್ಲಾ ಭಾಷೆಗಳು ಬೇಕು

    ಚಿಕ್ಕಮಗಳೂರು: ಕನ್ನಡತನಕ್ಕೆ ಸವಾಲನ್ನು ಒಡ್ಡುತ್ತಿರುವ ಇಂಗ್ಲಿಷ್ ಭಾಷೆಯ ವಿರುದ್ಧ ಕನ್ನಡಿಗರೆಲ್ಲಾ ಒಂದಾಗುವುದರ ಮೂಲಕ ಜ್ಞಾನ ಸಂಪಾದನೆಗೆ ಎಲ್ಲಾ ಭಾಷೆಗಳು ಬೇಕು. ಇಂಗ್ಲಿಷ್ ಮುಂತಾದ ಹಲವು ಭಾಷೆಗಳನ್ನು ವ್ಯವಹಾರಕ್ಕಾಗಿ ಕಲಿತು ಬಳಸೋಣ. ಆದರೆ, ಆದರೆ ನಮ್ಮ ಮಾತೃಭಾಷೆ ಕನ್ನಡವನ್ನು ಪ್ರೀತಿಯಿಂದ ಅಪ್ಪಿಕೊಳ್ಳೋಣ, ಉಳಿಸೋಣ, ಬೆಳೆಸೋಣ. ಮುಂದಿನ ಪೀಳಿಗೆಗೆ ಹೆಮ್ಮೆಯಿಂದ ನೀಡೋಣ ಎಂದು ರಾಜ್ಯ ಇಂಧನ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅಭಿಪ್ರಾಯಿಸಿದರು.

    ಅವರು ಇಂದು ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ ಏರ್ಪಡಿಸಿದ್ದ ೭೦ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿ ಜನತೆಗೆ ರಾಜ್ಯೋತ್ಸವ ಸಂದೇಶ ನೀಡಿದರು.

    ಕನ್ನಡ ಭಾಷೆ ಕ್ರಿ.ಪೂ ದಿಂದಲೂ ಅಸ್ತಿತ್ವ ಪಡೆದುಕೊಂಡಿದ್ದು, ಕನ್ನಡ ನುಡಿ ಮೊದಲು ಬೆಳಕಿಗೆ ಬಂದಿದು ಚಿಕ್ಕಮಗಳೂರು ಸಮೀಪ ಇರುವ ಬೇಲೂರು ತಾಲ್ಲೂಕಿನ ಹಲ್ಮಿಡಿ ಶಾಸನದಲ್ಲಿ ಪ್ರಸಿದ್ಧಿಯಾಗಿದೆ. ಕನ್ನಡ ಸಾಹಿತ್ಯ ಲೋಕಕ್ಕೆ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯಗಳು ಪ್ರಕಾರಗಳು ವಿಶೇಷ ಬೇರುಗಳನ್ನು ತಂದುಕೊಟ್ಟಿದೆ. ನಮ್ಮ ಕನ್ನಡದ ಜನಪದಿಗರು ಜಾನಪದ ಗೀತೆಗಳ ಮೂಲಕ ಈ ನೆಲದ ಸೊಗಡನ್ನು ಹೆಚ್ಚಿಸಿದ್ದಾರೆಂದು ಹೇಳಿದರು.

    ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ‘ಎಲ್ಲಾದರೂ ಇರು, ಎಂತಾದರು ಇರು ಎಂದೆಂದಿಗು ನೀ ಕನ್ನಡವಾಗಿರು’ ಎನ್ನುವಂತೆ ಎಲ್ಲರು ಕನ್ನಡ ತನ ಉಳಿಸಲು ಕಂಕಣಬದ್ಧರಾಗಬೇಕು. ಸರ್ಕಾರ ೨೦೨೩ ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರಿಗೆ ಲಿಂಗತಾರತಮ್ಯವನ್ನು ಸರಿದೂಗಿಸುವ ಜಾತ್ಯಾತೀತವಾಗಿ ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಅಡ್ಡಿ ಆತಂಕವಿಲ್ಲದೆ ವಿರೋಧಿಗಳ ನಿರಂತರ ವಿರೋಧದ ನಡುವೆಯು ಅತ್ಯಂತ ಸಮರ್ಪಕವಾಗಿ ಅನುಷ್ಠಾನಗೊಳಿಸಲಾತ್ತಿದೆ ಎಂದರು.

    ಪಂಚ ಗ್ಯಾರಂಟಿಗಳನ್ನು ಜಾರಿಗೆ ತಂದರೂ ಅಭಿವೃದ್ಧಿ ವಿಷಯದಲ್ಲಿ ಸರ್ಕಾರ ರಾಜಿ ಮಾಡಿಕೊಳ್ಳದೆ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತುಕೊಟ್ಟಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿಯೂ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು. ಜಿ.ಪಂ ವತಿಯಿಂದ ಹೆಣ್ಣುಮಕ್ಕಳ ಭದ್ರಬಾಲ್ಯ ಸುರಕ್ಷತೆಯ ಬಗ್ಗೆ ಕಾಳಜಿ ಉಳ್ಳ ವಿನೂತನ ವಿಶೇಷ ಕಾರ್ಯಕ್ರಮವಾಗಿದ್ದು, ಇದನ್ನು ಈ ಬಾರಿಯ ಮೈಸೂರು ದಸರಾದಲ್ಲಿ ಸ್ತಬ್ದಚಿತ್ರ ಪ್ರದರ್ಶನದಲ್ಲಿ ತೃತೀಯ ಸ್ಥಾನ ಲಭಿಸಿದೆ ಎಂದು ಹೇಳಿದರು.

    ಜಿಲ್ಲೆಯ ೫ ವಿಧಾನಸಭಾ ಕ್ಷೇತ್ರಗಳ ಶಾಸಕರುಗಳಿಗೆ ತಲಾ ೫೦ ಕೋಟಿ ರೂ.ನಂತೆ ೨೫೦ ಕೋಟಿ ರೂಗಳ ವಿಶೇಷ ಅನುದಾನ ಬಿಡುಗಡೆ ಮಾಡಲಾಗಿದ್ದು, ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ತಿಳಿಸಿದರು. ನಗರದಲ್ಲಿ ನೂತನವಾಗಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದ್ದು, ೧೬ ಕೋಟಿ ರೂ ವೆಚ್ಚದಲ್ಲಿ ಕಡೂರಿನಲ್ಲಿ ಪ್ರಜಾಸೌಧ ಕಟ್ಟಡ ಮಂಜೂರಾಗಿ ಟೆಂಡರ್ ಪ್ರಕ್ರಿಯೆ ಚಾಲನೆಯಲ್ಲಿದೆ ಎಂದು ತಿಳಿಸಿದರು.

    ಭೂಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳನ್ನು ಡಿಜಿಟಲೀಕರಣ ಪ್ರಕ್ರಿಯೆ ಜಿಲ್ಲೆಯ ೯ ತಾಲ್ಲೂಕುಗಳ ಪೈಕಿ ಒಟ್ಟು ೭ ತಾಲ್ಲೂಕುಗಳಲ್ಲಿ ಪೂರ್ಣಗೊಂಡಿದ್ದು, ಇನ್ನುಳಿದ ೨ ತಾಲ್ಲೂಕುಗಳಲ್ಲಿ ಶೀಘ್ರವಾಗಿ ಮುಕ್ತಾಯಗೊಳಿಸಲು ಕ್ರಮವಹಿಸಲಾಗುವುದೆಂದರು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ತರೀಕೆರೆಯ ಅಮೃತಾಪುರ, ಕಡೂರಿನ ಸಿಂಗಟಗೆರೆ, ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಶಾಲೆಗಳ ನಿರ್ಮಾಣ ಮತ್ತು ಚಿಕ್ಕಮಗಳೂರು ತಾಲ್ಲೂಕಿಗೆ ೨ ವಿದ್ಯಾರ್ಥಿ ನಿಲಯಗಳ ಕಟ್ಟಡ ನಿರ್ಮಾಣ ಹಾಗೂ ಪ.ಜಾ ಕಾಲೋನಿಗಳ ಮೂಲಕಭೂತ ಸೌಕರ್ಯ ಅಭಿವೃದ್ಧಿಗೆ ೧೨೦.೧೩ ಕೋಟಿ ರೂ ಬಿಡುಗಡೆಯಾಗಿದೆ ಎಂದರು.

    ಕನ್ನಡ ನಮ್ಮ ಮಾತೃಭಾಷೆ, ಕನ್ನಡಾಂಭೆಯ ಮಕ್ಕಳಾದ ನಾವು ನ.೧ ರಂದು ಕನ್ನಡ ರಾಜ್ಯೋತ್ಸವ ಆಚರಿಸುವ ಮೂಲಕ ಕನ್ನಡಾಂಭೆಗೆ ಗೌರವ ಸಲ್ಲಿಸುವುದು ಮಾತ್ರವಲ್ಲ, ಕನ್ನಡ ಭಾಷಾಭಿಮಾನ ಬೆಳೆಸಿಕೊಳ್ಳಬೇಕೆಂದು ಕರೆನೀಡಿದರು. ಕನ್ನಡ ರಾಜ್ಯೋತ್ಸವದ ಅಂಗವಾಗಿ ವಿವಿಧ ಇಲಾಖೆಗಳು ಮತ್ತು ಶಾಲಾ ಕಾಲೇಜುಗಳಿಂದ ಸ್ತಬ್ದಚಿತ್ರಗಳ ಪ್ರದರ್ಶನ ನಡೆಯಿತು. ಪೊಲೀಸ್ ಮತ್ತು ಶಾಲಾ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಹೆಚ್.ಡಿ. ತಮ್ಮಯ್ಯ ವಹಿಸಿದ್ದರು. ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ, ಎಸ್.ಎಲ್ ಭೋಜೇಗೌಡ, ಭದ್ರಾ ಕಾಡಾ ಅಧ್ಯಕ್ಷ ಡಾ. ಕೆ.ಪಿ ಅಂಶುಮಂತ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಶಿವಾನಂದಸ್ವಾಮಿ, ಜಿಲ್ಲಾಧಿಕಾರಿ ಸಿ.ಎನ್ ಮೀನಾನಾಗರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ ಅಮಟೆ, ಜಿ.ಪಂ ಸಿಇಓ ಹೆಚ್.ಎಸ್. ಕೀರ್ತನ, ತಹಶೀಲ್ದಾರ್ ರೇಷ್ಮ, ನಗರಸಭಾಧ್ಯಕ್ಷೆ ಶೀಲಾದಿನೇಶ್, ಉಪಾಧ್ಯಕ್ಷೆ ಲಲಿತಾನಾಯ್ಕ್, ಪೌರಾಯುಕ್ತ ಬಿ.ಸಿ. ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.

    All languages ​​are needed to acquire knowledge through the unity of all languages

  • ಇಂದಿರಾಗಾಂಧಿ-ಸರ್ದಾರ್ ವಲ್ಲಭಬಾಯಿ ಪಟೇಲರ ಸ್ಮರಣೆ

    ಇಂದಿರಾಗಾಂಧಿ-ಸರ್ದಾರ್ ವಲ್ಲಭಬಾಯಿ ಪಟೇಲರ ಸ್ಮರಣೆ

    ಚಿಕ್ಕಮಗಳೂರು:  ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಇಂದಿರಾಗಾಂಧಿಯವರ ಮತ್ತು ಮಾಜಿ ಉಪ ಪ್ರಧಾನಿ ಸರ್ದಾರ್ ವಲ್ಲಭಬಾಯಿ ಪಟೇಲ್ ಇವರುಗಳ ಸ್ಮರಣೆಯನ್ನು ಮಾಡುವ ಮೂಲಕ ಅವರ ಆಶಯಗಳನ್ನು ಈಡೇರಿಸಲು ಪ್ರತಿಯೊಬ್ಬರೂ ಪಣತೊಡಬೇಕೆಂದು ಕೆಪಿಸಿಸಿ ವಕ್ತಾರ ಹೆಚ್.ಹೆಚ್.ದೇವರಾಜ್ ಕರೆ ನೀಡಿದರು.

    ಅವರು ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಜಿಲ್ಲಾ ಕಾಂಗ್ರೆಸ್ ಹಾಗೂ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ಮಾಜಿ ಪ್ರಧಾನಮಂತ್ರಿ ದಿವಂಗತ ಇಂದಿರಾಗಾಂಧಿಯವರ ಪುಣ್ಯ ಸ್ಮರಣೆ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲರ ೧೫೦ ನೇ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.

    ಇಂದಿರಾಗಾಂಧಿಯವರು ಕೈಗೊಂಡ ದಿಟ್ಟ ನಿರ್ಧಾರ ಹಾಗೂ ಹೋರಾಟಗಳಿಂದ ದೇಶದಲ್ಲಿ ಹಲವಾರು ಕ್ರಾಂತಿಕಾರಕ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವುಗಳನ್ನು ಮುನ್ನೆಡೆಸಿಕೊಂಡು ಹೋಗಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಹೇಳಿ ಇಂದಿರಾಗಾಂಧಿಯವರು ಅಂದು ಜಾರಿಗೆ ತಂದ ೨೧ ಅಂಶಗಳ ಕಾರ್ಯಕ್ರಮಗಳು ಪ್ರಸ್ತುತವಾಗಿ ಕಾರ್ಯನಿರ್ವಹಿಸುತ್ತಿವೆ. ಉಳುವವನೆ ಭೂ ಒಡೆಯ ಕಾರ್ಯಕ್ರಮ ಜನಮಾನಸದಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.

    ಈ ರಾಷ್ಟ್ರವನ್ನು ನೂರಾರು ಸಂಸ್ಥಾನಗಳಿಂದ ಒಗ್ಗೂಡಿಸುವಲ್ಲಿ ಕಾರಣಕರ್ತರಾದ ಮಾಜಿ ಉಪ ಪ್ರಧಾನಿ ಹಾಗೂ ಉಕ್ಕಿನ ಮನುಷ್ಯ ಎಂದೇ ಕರೆಸಿಕೊಂಡಿದ್ದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ಭಾರತ ಸದಾ ಏಕೀಕರಣ ಶಕ್ತಿಯಾಗಿ ಹೊರಹೊಮ್ಮಲು ಕಾರಣಕರ್ತರಾಗಿದ್ದಾರೆ ಎಂದು ಹೇಳಿದರು.

    ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರೂ ಆದ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ಬಂದ ನಂತರ ಭಾರತ ದೇಶದಲ್ಲಿ ಇಷ್ಟೊಂದು ಕ್ರಾಂತಿಕಾರಕ ಬದಲಾವಣೆಗಳು ಕಂಡಿರುವುದು ಇಂದಿರಾಗಾಂಧಿಯವರು ಪ್ರಧಾನಮಂತ್ರಿ ಆದ ಸಂದರ್ಭದಲ್ಲಿ ಮಾತ್ರ ಎಂದು ಹೇಳಿದರು.

    ಜನರ ಹಿತಕ್ಕಾಗಿ ಯಾರು ದುಡಿದಿರುತ್ತಾರೋ ಅವರನ್ನು ರಾಷ್ಟ್ರ ಗುರುತು ಮಾಡುತ್ತದೆ. ಇಂದಿರಾಗಾಂಧಿ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲರಂತಹ ಮಹಾನ್ ನಾಯಕರನ್ನು ನೆನಪು ಮಾಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು. ಇಂದಿರಾಗಾಂಧಿಯವರು ತನ್ನ ಅಧಿಕಾರದ ಅವಧಿಯಲ್ಲಿ ಉತ್ತಮವಾದ ಜನಪರವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಅವುಗಳು ಇಂದು ಉಳಿದಿವೆ. ಅವುಗಳನ್ನು ನಾವುಗಳು ಜೀವನದಲ್ಲಿ ಬಳಸಿಕೊಳ್ಳುವಂತೆ ಮನವಿ ಮಾಡಿದರು.

    ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿರಾಗಾಂಧಿಯವರು ದೇಶದ ಉಳಿವಿಗೆ ತನ್ನ ಪ್ರಾಣವನ್ನು ತ್ಯಜಿಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ದೇಶದ ಐಕ್ಯತೆ, ಅಖಂಡತೆಗಾಗಿ ಹೋರಾಡಿದ್ದಾರೆ. ಅವರ ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ಎಲ್ಲರೂ ಸಾಗಬೇಕು ಎಂದು ತಿಳಿಸಿದರು.

    ಸವಿತಾ ಸಮಾಜದವರು ತಮ್ಮ ಜೀವಿತ ಕಾಲವೆಲ್ಲ ಈ ಸಮಾಜದ ಎಲ್ಲಾ ಧರ್ಮದವರಿಗೂ ತಮ್ಮ ವೃತ್ತಿ ಸೇವೆ ಮಾಡುತ್ತಾ ಬರುತ್ತಿದ್ದು, ಅವರಿಲ್ಲದಿದ್ದರೆ ಮಾನವ ಕಾಡು ಪ್ರಾಣಿಗಳ ಹಾಗೆ ವಿಚಿತ್ರವಾಗಿರಬೇಕಿತ್ತು. ಇದನ್ನು ಅರಿಯದ ಸಿ.ಟಿ.ರವಿ ಸವಿತಾ ಸಮಾಜಕ್ಕೆ ಅವಹೇಳನಕಾರಿ ಪದಗಳನ್ನು ಬಳಸಿ ನೋವುಂಟು ಮಾಡಿದ್ದು, ಸಿ.ಟಿ.ರವಿ ಸವಿತಾ ಸಮಾಜದ ಕ್ಷಮೆ ಕೇಳುವಂತೆ ಒತ್ತಾಯಿಸಿದರು.

    ಜವಾಬ್ದಾರಿ ಸ್ಥಾನದಲ್ಲಿರುವ ಸಿ.ಟಿ.ರವಿಯವರು ಈ ಹಿಂದೆ ಬೆಳಗಾವಿ ಅಧಿವೇಶನದಲ್ಲೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೂ ಕೆಟ್ಟ ಪದವನ್ನು ಬಳಸುವ ಮೂಲಕ ನನ್ನ ಬಾಯಿ ಸರಿಯಿಲ್ಲ ಎಂಬಂತೆ ಸಾಬೀತು ಪಡಿಸಿದ್ದು, ಮತ್ತೊಮ್ಮೆ ಸವಿತಾ ಸಮಾಜಕ್ಕೂ ಅವಹೇಳಕಾರಿ ಪದ ಬಳಸಿ ತನ್ನ ಮನಃಸ್ಥಿತಿ ಮತ್ತು ಯೋಗ್ಯತೆ ಏನು ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದರು.

    ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇಂದಿರಾಗಾಂಧಿಯವರ ಮತ್ತು ಸರ್ದಾರ್ ವಲ್ಲಭಬಾಯಿ ಪಟೇಲರ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪಾರ್ಚನೆ ಮಾಡಿದರು. ಕಾರ್ಯಕ್ರಮದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಪಿ.ತನೋಜ್ ಕುಮಾರ್ ನಾಯ್ಡು, ಚಿಕ್ಕಮಗಳೂರು ತಾಲ್ಲೂಕು ಪ್ರಚಾರ ಸಮಿತಿ ಅಧ್ಯಕ್ಷ ಬೆಟ್ಟಗೆರೆ ಪ್ರವೀಣ್, ಮುಖಂಡರಾದ ಹೆಚ್.ಇ.ಪ್ರಕಾಶ್, ರಾಘವೇಂದ್ರ, ಬಲ್ಬ್ ರಾಮಣ್ಣ, ಸೋಮಶೇಖರ್, ಸಂತೋಷ್, ರಾಜಶೇಖರ್, ಸುನೀಲ್, ರಸೂಲ್ ಖಾನ್, ಬಾಬು, ಸುರೇಶ್ ಕುಮಾರ್, ನಾಗೇಶ್ ರಾಜ್ ಅರಸ್, ತಂಬಿ, ಜಿಯಾ ಸೇರಿದಂತೆ ಮತ್ತಿತರರು ಇದ್ದರು.

    Indira Gandhi-Sardar Vallabhbai Patel’s Memorial

  • ಸರ್ದಾರ್ ವಲ್ಲಭಬಾಯಿ ಪಟೇಲ್ ದೇಶದ ಏಕತೆಗೆ ಕಾರಣಕರ್ತರು

    ಸರ್ದಾರ್ ವಲ್ಲಭಬಾಯಿ ಪಟೇಲ್ ದೇಶದ ಏಕತೆಗೆ ಕಾರಣಕರ್ತರು

    ಚಿಕ್ಕಮಗಳೂರು:  ಭಾರತದ ಉಕ್ಕಿನ ಮನುಷ್ಯ ಎಂದೇ ಪ್ರಖ್ಯಾತಿ ಪಡೆದ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ದೇಶದ ಏಕತೆಗೆ ಕಾರಣಕರ್ತರಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ ವಿಕ್ರಮ್ ಅಮಟೆ ಹೇಳಿದರು.

    ಜಿಲ್ಲಾ ಪೊಲೀಸ್ ಇಲಾಖೆಯಿಂದ ಇಂದು ನಗರದ ಜಿಲ್ಲಾ ಪೊಲೀಸ್ ಕಚೇರಿ ಮುಂಭಾಗದ ಸರ್ಕಲ್ ಬಳಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ೧೫೦ನೇ ಜನ್ಮದಿನ-ರಾಷ್ಟ್ರೀಯ ಏಕತಾ ದಿನಾಚರಣೆಯಲ್ಲಿ ಅವರು ಮಾತನಾಡಿ ಭಾರತದ ಏಕೀಕರಣಕ್ಕೆ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರನ್ನು ‘ಭಾರತದ ಏಕೀಕರಣದ ರೂವಾರಿ’ ಎಂದು ಕರೆಯಲಾಗುತ್ತದೆ. ಅವರಲ್ಲಿನ ದೇಶಪ್ರೇಮ ಮಾದರಿಯಾಗಿದೆ ಎಂದರು.

    ರಾ?ದ ಏಕತೆ ಮತ್ತು ಸಾರ್ವಭೌಮತೆಯನ್ನು ಕಾಪಾಡಿದ ಹಾಗೂ ಅವುಗಳನ್ನು ತಮ್ಮ ಕಾರ್ಯಗಳ ಮೂಲಕವೇ ಎತ್ತಿ ಹಿಡಿದ ದೇಶದ ಮೊದಲ ಉಪಪ್ರಧಾನಿ ಹಾಗೂ ಗೃಹ ಸಚಿವ ಸರ್ದಾರ್ ವಲ್ಲಭಬಾಯಿ ಪಟೇಲರ ಜೀವನ ಮತ್ತು ಆದರ್ಶಗಳು ಈ ಕಾಲಕ್ಕೂ ಪ್ರಸ್ತುತ ಮತ್ತು ಅನುಕರಣೀಯ. ಸ್ವಾತಂತ್ರ್ಯಾನಂತರ ಹರಿದು ಹಂಚಿಹೋಗಿದ್ದ ಸಂಸ್ಥಾನಗಳನ್ನು ಭಾರತದ ಒಕ್ಕೂಟದಲ್ಲಿ ಸೇರಿಸಿ ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದವರು ಸರ್ದಾರ್ ವಲ್ಲಭಭಾಯಿ ಪಟೇಲ್. ಅದು ಸುಲಭದ ಕೆಲಸವಾಗಿರಲಿಲ್ಲ.

    ಸಂಸ್ಥಾನಗಳ ರಾಜಮಹಾರಾಜರೊಂದಿಗೆ ಮಾತುಕತೆ ನಡೆಸುವ ಹೊಣೆಗಾರಿಕೆಯನ್ನು ಪ್ರಧಾನಿ ಜವಾಹರಲಾಲ್ ನೆಹರು ಅವರು ಪಟೇಲ್ ಹಾಗೂ ಭಾರತದ ಕೊನೆಯ ವೈಸರಾಯ್ ಮೌಂಟ್ ಬ್ಯಾಟನ್‌ರ ರಾಜಕೀಯ ಸಲಹೆಗಾರ ವಿ.ಪಿ.ಮೆನನ್ ಅವರಿಗೆ ವಹಿಸಿದರು. ಪರಿಣಾಮಕಾರಿ ಕಾರ್ಯತಂತ್ರ ಮತ್ತು ದೂರದೃಷ್ಟಿಯೊಂದಿಗೆ ಈ ಕೆಲಸಕ್ಕೆ ಅಣಿಯಾದ ಪಟೇಲರು ತಮ್ಮ ಜಾಣ್ಮೆ ಮತ್ತು ಕಠಿಣ ನಿಲುವುಗಳಿಂದಲೇ ಅನೇಕ ಜಟಿಲ ಪರಿಸ್ಥಿತಿಗಳನ್ನು ತಿಳಿಗೊಳಿಸಿದರು ಎಂದರು.

    ಗುಜರಾತಿನ ಏಕಥಾನ್ ಎಂಬ ನಗರದಲ್ಲಿ ಇಂದು ಪ್ರಧಾನ ಮಂತ್ರಿಯವರು ರಾಷ್ಟ್ರೀಯ ಏಕತಾ ದಿನವನ್ನು ಆಚರಿಸುತ್ತಾರೆ ಹಾಗೂ ಬೃಹತ್ ಮಟ್ಟದಲ್ಲಿ ಪೊಲೀಸ್ ಪೆರೇಡ್ ನಡೆಯುತ್ತದೆ ಎಂದು ತಿಳಿಸಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಅನಂತರ ತಾಲ್ಲೂಕು ಕಚೇರಿಯವರೆಗೆ ನಡೆದ ಮ್ಯಾರಥಾನ್‌ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಪೌರಾಯುಕ್ತ ಬಿ.ಸಿ.ಬಸವರಾಜ್ ಚಾಲನೆ ನೀಡಿದರು.

    ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಟಿ.ಜಯಕುಮಾರ್, ಉಪಾಧೀಕ್ಷಕ ಶೈಲೇಂದ್ರ, ಪೊಲೀಸ್ ಮತ್ತಿತರ ಇಲಾಖೆಯ ಅಧಿಕಾರಿಗಳು, ವಿದ್ಯಾರ್ಥಿಗಳು, ಮತ್ತಿತರರು ಇದ್ದರು.

    Sardar Vallabhbai Patel is the cause of unity of the country

  • ಪ್ರತ್ಯಕ್ಷ – ಪರೋಕ್ಷವಾಗಿ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ

    ಪ್ರತ್ಯಕ್ಷ – ಪರೋಕ್ಷವಾಗಿ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ

    ಚಿಕ್ಕಮಗಳೂರು:  ಸವಿತಾ ಸಮಾಜಕ್ಕೆ ನನ್ನಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನೋವಾಗಿದ್ದರೆ ಕ್ಷಮೆ ಕೋರುತ್ತೇನೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

    ಸವಿತಾ ಸಮಾಜದ ಬಗ್ಗೆ ನಿಷೇಧಿತ ಪದ ಬಳಸಲಾಗಿದೆ ಎನ್ನುವ ಆರೋಪಗಳು ಬಂದಿದ್ದ ಹಿನ್ನೆಲೆಯಲ್ಲಿ ನಗರದ ನೆಹರೂ ರಸ್ತೆ ಕ್ರಾಸ್‌ನಲ್ಲಿರುವ ಸವಿತಾ ಸಮಾಜದ ಸಭಾಂಗಣದಲ್ಲಿ ಸಮಾಜದ ಮುಖಂಡರುಗಳನ್ನು ಖುದ್ದಾಗಿ ಭೇಟಿ ಮಾಡಿ ಅವರು ಮಾತನಾಡಿ ಸವಿತ ಸಮಾಜದ ನೋವು, ಸಂಕಟ, ಕೋಪ, ಹತಾಷೆಯನ್ನು ಅರ್ಥ ಮಾಡಿಕೊಂಡು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ನನ್ನಿಂದ ಯಾರಿಗೂ ನೋವಾಗಬಾರದು. ನನ್ನಿಂದ ಸಮಾಜಕ್ಕೆ ನೋವಾಗಿದ್ದರೆ ನನಗೆ ಹಾಗೂ ನನ್ನ ಹೆತ್ತ ತಂದೆ, ತಾಯಿಗೆ ಆದ ನೋವು. ಹಾಗೆ ಆಗಿದ್ದರೆ ಮೊದಲು ನಾನು ಕ್ಷಮೆ ಕೇಳುತ್ತೇನೆ ಎಂದು ತಿಳಿಸಿದರು.

    ಅನುಭವಿಸಿದವರಿಗೆ ನೋವಿನ ಸಂಕಟ ಗೊತ್ತಾಗುತ್ತದೆ. ಅಲ್ಲದೆ ಸವಿತಾ ಸಮಾಜ ನನ್ನ ಮೇಲೆ ಅಭಿಮಾನವನ್ನೂ ಇಟ್ಟಿದೆ. ಕಳೆದ ಶನಿವಾರ ನಾನು ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿದ್ದೆ. ಅಲ್ಲಿ ಸ್ಥಳೀಯ ಟಿವಿ ಚಾನೆಲ್‌ನವರು ಇದ್ದರು. ಯಾವುದರಲ್ಲೂ ಸುದ್ದಿ ಆಗಲಿಲ್ಲ. ನಾಲ್ಕು ದಿನಗಳ ನಂತರ ಒಬ್ಬರು ರಾಜಕೀಯವಾಗಿ ನನ್ನ ಜೊತೆ ಇದ್ದು, ಈಗ ಇಲ್ಲದಿರುವ ಒಬ್ಬರ ಸುದ್ದಿ ವಾಹಿನಿಯಲ್ಲಿ ಸುದ್ದಿ ಪ್ರಕಟವಾಯಿತು. ಅಲ್ಲಿಂದಲೇ ವಾಟ್ಸ್ ಆಪ್ ಗ್ರೂಪ್‌ಗಳಲ್ಲಿ ಸವಿತಾ ಸಮಾಜಕ್ಕೆ ಅಪಮಾನ ಮಾಡಿದ ಸಿ.ಟಿ.ರವಿ ಎಂದು ಟ್ರೋಲ್‌ಗಳು ಆರಂಭವಾಯಿತು ಎಂದರು.

    ನನಗೆ ಎದೆ ಬಗೆದು ತೋರಿಸುವಷ್ಟು ಸಾಮರ್ಥ್ಯವಿಲ್ಲ. ನನ್ನ ಭಾವನೆಗಳನ್ನ ಮಾತಿನಲ್ಲಿ ಹೇಳಬಹುದು. ಆ ಸುದ್ದಿ ಗೊತ್ತಾಗುತ್ತಿದ್ದಂತೆ ನಾವು ಸವಿತಾ ಸಮಾಜದವರು ನಮ್ಮ ಆತ್ಮ ಬಂಧುಗಳು, ಅವರಿಗೆ ಅಪಮಾನ ಮಾಡಿಲ್ಲ. ಮಾಡುವುದೂ ಇಲ್ಲ ಎಂದು ಅಂದೇ ಸ್ಪಷ್ಟನೆ ನೀಡಿದ್ದೇನೆ ಎಂದರು.

    ನಾಲ್ಕು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ನನ್ನನ್ನು ಸವಿತಾ ಸಮಾಜದವರು ನೋಡುತ್ತಿದ್ದಾರೆ. ಎಂದಿಗೂ ನಾನೂ ಸಮಾಜಕ್ಕೆ ಅಪಮಾನವಾಗುವ ಪದವನ್ನು ಬಳಸಿಲ್ಲ. ಈ ಕಾರಣಕ್ಕೆ ನನ್ನ ಮೇಲೆ ಬಂದಿರುವ ಆರೋಪವನ್ನು ನಂಬಬೇಕೋ, ಬೇಡವೋ ಎನ್ನುವ ಸಂಕಟ ನಿಮ್ಮನ್ನು ಕಾಡುತ್ತಿದೆ. ಬೇರೆ ಯಾರನ್ನೋ ಆದರೆ ಇವರಿಗೆ ಯಾವಾಗ ಬುದ್ಧಿ ಬರುತ್ತದೋ ಎಂದುಕೊಳ್ಳುತ್ತಿದ್ದಿರಿ. ಆದರೆ ನಮ್ಮ ರವಿಯೇ ಹೀಗೆ ಮಾತನಾಡಿದರಲ್ಲ ಎನ್ನುವ ಸಂಕಟ ನಿಮಗಾಗಿದೆ ಎನ್ನುವದನ್ನು ಅರ್ಥಮಾಡಿಕೊಂಡಿದ್ದೇನೆ. ಅದಕ್ಕಾಗಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನೋವಾಗಿದ್ದರೆ ಅದಕ್ಕಾಗಿ ಕ್ಷಮಾಪಣೆ ಕೋರುತ್ತೇನೆ ಎಂದರು.

    ಈ ವಿಚಾರದಲ್ಲಿ ರಾಜಕೀಯವಾಗಿ ದುರ್ಬಳಕೆ ಮಾಡಿಕೊಳ್ಳಲು ಎತ್ತಿಕಟ್ಟುವ ಪ್ರಯತ್ನ ಮಾಡಿದರು. ಹೌಸಿಂಗ್ ಬೋರ್ಡ್‌ನ ಒಂದು ಹೋಂಸ್ಟೇನಲ್ಲಿ ಸೇರಿಸಿ ಹೀಗೆ ಮಾಡಬೇಕು, ಹಾಗೇ ಮಾಡಬೇಕೆಂದು ಷಡ್ಯಂತ್ರ ಮಾಡಿದರು. ಏನು ಖರ್ಚು ಬರುತ್ತೆ ಎಲ್ಲವನ್ನೂ ನಾವೇ ನೋಡಿಕೊಳ್ಳುತ್ತೇವೆ ಎಂದು ಒತ್ತಡ ಹೇರಿದರು. ಇಷ್ಟಾದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಪ್ರೀತಿಯನ್ನೇ ತೋರಿಸಿ, ಪ್ರೀತಿಯಿಂದಲೇ ನಿಮ್ಮ ನೋವನ್ನು ಹಂಚಿಕೊಂಡಿದ್ದೀರಿ. ಯಾವುದೋ ಒಂದು ಕಾಲದಲ್ಲಿ ನಿಮ್ಮ ಮಗನೋ, ಅಣ್ಣ, ತಮ್ಮನೋ ಆಗಿದ್ದೆ ಎನ್ನಿಸುತ್ತದೆ. ಹಾಗಾಗಿ ಯಾವ ಸಂದರ್ಭದಲ್ಲೂ ನನ್ನನ್ನು ಬಿಟ್ಟು ಕೊಡದೆ ಪ್ರೀತಿ ತೋರಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

    ಆರ್‍ಯ ನಯನಜ ಜಿಲ್ಲಾ sಸವಿತಾ ಸಮಾಜ ಅಧ್ಯಕ್ಷ ಎಸ್.ಎನ್.ಮಹಾಲಿಂಗಪ್ಪ, ಕಾರ್ಯದರ್ಶಿ ಎನ್.ಶ್ರೀಧರ್, ನಗರ ಆರ್‍ಯ ನಯನಜ ಜಿಲ್ಲಾ sಸವಿತಾ ಸಮಾಜ ಸಂಘದ ಅಧ್ಯಕ್ಷ ಸಿ.ಎಂ.ಯೋಗೀಶ್, ಯುವ ಘಟಕದ ಅಧ್ಯಕ್ಷ ಧನ್‌ರಾಜ್, ಮಹಿಳಾ ಮುಖಂಡರಾದ ಸುನಂದ, ಸವಿತಾ ಸೇವಾ ಟ್ರಸ್ಟ್ ಅಧ್ಯಕ್ಷ ಸಿ.ವೆಂಕಟೇಶ್, ಯಶ್ವಿನ್ ಇತರರು ಇದ್ದರು.

    I apologize if I have caused any direct or indirect pain.