Category: ಚಿಕ್ಕಮಗಳೂರು

  • ದೇವಗೊಂಡನಹಳ್ಳಿಯ ಮೃತನ ಕಟುಂಬಕ್ಕೆ 5 ಲಕ್ಷ ರೂ ಚೆಕ್ ವಿತರಣೆ

    ದೇವಗೊಂಡನಹಳ್ಳಿಯ ಮೃತನ ಕಟುಂಬಕ್ಕೆ 5 ಲಕ್ಷ ರೂ ಚೆಕ್ ವಿತರಣೆ

    ಚಿಕ್ಕಮಗಳೂರು: ತಾಲ್ಲೂಕು ಲಕ್ಯಾ ಹೋಬಳಿ ದೇವಗೊಂಡನಹಳ್ಳಿಯ ಸೀತಮ್ಮ ಮತ್ತು ಲಕ್ಷ್ಮಣ್‌ಗೌಡ ಎಂಬುವವರ ಪುತ್ರ ಮೂರ್ತಿ ಎಂಬಾತ ದನ ಮೇಯಿಸಲು ಹೋಗಿದ್ದಾಗ ಆಕಸ್ಮಿಕ ಹಳ್ಳದ ನೀರಿನಲ್ಲಿ ಕೊಚ್ಚಿಹೋಗಿದ್ದ ಕುಟುಂಬಕ್ಕೆ ಸಿಎಂ ಪರಿಹಾರ ನಿಧಿಯಿಂದ ೫ ಲಕ್ಷ ರೂ ಚೆಕ್‌ನ್ನು ಶಾಸಕ ತಮ್ಮಯ್ಯ ಹಸ್ತಾಂತರಿಸಿದರು.

    ಇಂದು ಮೃತನ ಕುಟುಂಬಕ್ಕೆ ತೆರಳಿದ ಅವರು, ಕಂದಾಯ ಸಚಿವ ಕೃಷ್ಣಭೈರೇಗೌಡರ ಆದೇಶದಂತೆ ಚೆಕ್‌ನ್ನು ತಹಶೀಲ್ದಾರ್ ಮೂಲಕ ಇಂದು ವಿತರಿಸಿದರು.

    ಮೃತನ ಕುಟುಂಬಕ್ಕೆ ಸಾಂತ್ವಾನ ಹೇಳಿದ ಅವರು, ಮಗನ ಅಗಲಿಕೆಯಿಂದಾಗುವ ಆರ್ಥಿಕ ಸಂಕಷ್ಟವನ್ನು ಭರಿಸುವ ವ್ಯವಸ್ಥೆಯನ್ನು ರಾಜ್ಯಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ ಎಂದರು.

    ಸಂಬಂಧಿಕರು ಹಾಗೂ ಸಂಕಷ್ಟ ಹೇಳಿಕೊಂಡು ಬರುವವರ ಮಾತಿಗೆ ಮರುಳಾಗದೆ ಈ ಹಣವನ್ನು ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇಟ್ಟು ಇದರಿಂದ ಬರುವ ಬಡ್ಡಿಯಲ್ಲಿ ಜೀವನ ಸಾಗಿಸಲು ಸಲಹೆ ನೀಡಿದರು.

    ಸರಳ ಕಾರ್ಯಕ್ರಮಗಳ ಮೂಲಕ ಕುಟುಂಬಕ್ಕೆ ಹಣ ಉಳಿತಾಯ ಮಾಡಿಕೊಳ್ಳಿ ಎಂದು ಮಹಾನ್ ದಾರ್ಶನಿಕರು ಹೇಳಿರುವುದನ್ನು ಈ ಸಂದರ್ಭದಲ್ಲಿ ಉಲ್ಲೇಖಿಸಿದರು.

    ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ರೇಷ್ಮಾಶೆಟ್ಟಿ, ಗ್ರಾ.ಪಂ ಸದಸ್ಯರಾದ ಯೋಗೀಶ್, ಗೌರಮ್ಮ, ನಾಗೇಗೌಡ, ಲಕ್ಷ್ಮಮ್ಮ, ಗ್ರಾಮಸ್ಥರಾದ ಸಗನೇಗೌಡ, ಕೆಂಗೇಗೌಡ, ಸಣ್ಣೇಗೌಡ, ಅಚ್ಚುತರಾವ್, ಮೊಗಣ್ಣಗೌಡ ಮತ್ತಿತರರು ಉಪಸ್ಥಿತರಿದ್ದರು.

    Distribution of Rs 5 lakh check to the family of the deceased in Devagondanahalli

  • ಸ್ಥಗಿತಗೊಂಡಿರುವ ನೀರಾವರಿ ಕಾಮಗಾರಿ ಪುನರಾರಂಭಿಸಲು ಪ್ರತಿಭಟನೆ

    ಸ್ಥಗಿತಗೊಂಡಿರುವ ನೀರಾವರಿ ಕಾಮಗಾರಿ ಪುನರಾರಂಭಿಸಲು ಪ್ರತಿಭಟನೆ

    ಚಿಕ್ಕಮಗಳೂರು:  ಸ್ಥಗಿತಗೊಂಡಿರುವ ನೀರಾವರಿ ಕಾಮಗಾರಿಯನ್ನು ಪುನರಾರಂ ಭಿಸಲು ಆಗ್ರಹಿಸಿ ಸೋಮವಾರ ನಾಗೇನಹಳ್ಳಿ ಹಾಗೂ ಬೆರಟಿಕೆರೆ ನೀರು ತುಂಬಿಸುವ ಹೋರಾಟ ಸಮಿತಿ ವತಿಯಿಂದ ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ರೈತ ಮುಖಂಡರುಗಳು ಬೃಹತ್ ಪ್ರತಿಭಟನೆ ನಡೆಸಿದರು.

    ಈ ವೇಳೆ ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಹೆಚ್.ಸಿ.ಕಲ್ಮರುಡಪ್ಪ ಮಾತನಾಡಿ ಹಲವಾ ರು ವರ್ಷಗಳಿಂದ ಹುಲಿಕೆರೆ, ಬೆರಟಿಕೆರೆ ಹಾಗೂ ನಾಗೇನಹಳ್ಳಿ ಗ್ರಾಮದ ನೀರಿನ ಕಟ್ಟೆಗಳು ಬರಗಾಲಕ್ಕೆ ತು ತ್ತಾಗಿದ್ದವು. ಇದನ್ನು ಮನಗಂಡ ಜಿಲ್ಲಾಡಳಿತ ಟ್ಯಾಂಕರ್ ಮೂಲಕ ಗ್ರಾಮಗಳಿಗೆ ಕುಡಿಯುವ ನೀರನ್ನು ಸದ್ಯ ದ ಮಟ್ಟಿಗೆ ಒದಗಿಸುತ್ತಿದೆ ಎಂದು ಹೇಳಿದರು.

    ಇದೇ ಗ್ರಾಮದ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ತಾತ್ಕಾಲಿಕ ಲಭ್ಯವಾದರೆ. ಜಾನುವಾರುಗಳು, ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರಿಲ್ಲದೇ ಪರಿತಪಿಸುವಂತಾಗಿದೆ. ಅಯ್ಯನಕೆರೆ ಕೋಡಿ ನೀರು ಕಳೆದ ಎರ ಡೂವರೆ ತಿಂಗಳಿನಿಂದ ಹರಿಯತ್ತಿದ್ದರೂ, ಸ್ಥಳೀಯ ರೈತರ ಕೃಷಿ ಚಟುವಟಿಕೆಗೆ ನೀಡದೇ ಸರ್ಕಾರ ವಂಚಿಸು ತ್ತಿರುವ ಕಾರಣ ಗ್ರಾಮವೇ ಬರಗಾಲಕ್ಕೆ ತುತ್ತಾಗುತ್ತಿದೆ ಎಂದರು.

    ಸದಾಕಾಲ ಬರಗಾಲಕ್ಕೆ ತುತ್ತಾಗಿರುವ ಗ್ರಾಮಗಳಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಯೋಜನೆಯಾಗಿದ್ದು, ಯಾವುದೇ ನೀರಾವರಿ ಉದ್ದೇಶವಿರುವುದಿಲ್ಲ. ಈ ಯೋಜನೆಯು ಅಯ್ಯನಕೆರೆ ಕೋ ಡಿ ಬಿದ್ದು ಹರಿದ ಸ್ವಲ್ಪ ಪ್ರಮಾಣದ ನೀರನ್ನು ಬಳಸುವ ಯೋಜನೆಯಾಗಿದ್ದು ಕೆರೆಗಳು ತುಂಬಿದ ನಂತರ ಪುನಃ ವೇದಾಹಳ್ಳಕ್ಕೆ ಹರಿಯುವುದರಿಂದ ಯಾರಿಗೂ ಸಮಸ್ಯೆಯಿಲ್ಲ ಎಂದು ತಿಳಿಸಿದರು.

    ಹುಲಿಕೆರೆ, ಬೆರಟಿಕೆರೆ ಮತ್ತು ನಾಗೇನಹಳ್ಳಿ ಕಟ್ಟೆಗೆ ನೀರು ತುಂಬಿಸುವ ಯೋಜನೆಗೆ ಸರ್ಕಾರದಿಂದ ಅ ನುಮೋದನೆ ದೊರೆತಿದ್ದು ಅಂದಾಜು ೯.೯೦ ಕೋಟಿ ರೂ. ಮಂಜೂರಾಗಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣ ಗೊಂಡಿದೆ. ಆದರೆ ಪ್ರಗತಿಯಲ್ಲಿ ಕಾಮಗಾರಿಯನ್ನು ಕೆಲವರ ತಪ್ಪು ಮಾಹಿತಿಯಿಂದ ಸ್ಥಗಿತಗೊಂಡಿರುವುದ ರಿಂದ ರೈತರಿಗೆ ಬಹಳಷ್ಟು ಸಮಸ್ಯೆ ಎದುರಾಗಿದೆ ಎಂದು ತಿಳಿಸಿದರು.

    ರೈತ ಸಂಘದ ಮಾಜಿ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಮಾತನಾಡಿ ಜಿಲ್ಲೆ ಪಂಚನದಿಗಳ ಉಗಮ ಸ್ಥಾನವಾ ಗಿದೆ. ನೂರಾರು ಟಿಎಂಸಿ ನೀರು ವಿವಿಧ ಜಿಲ್ಲೆ ಸೇರಿದಂತೆ ಆಂಧ್ರಪದೇಶ ಮತ್ತು ತಮಿಳುನಾಡಿಗೆ ಹರಿಯು ತ್ತಿದೆ. ಆದರೆ ಬಯಲುಸೀಮೆ ರೈತರಿಗೆ ಅಲ್ಪಪ್ರಮಾಣದ ನೀರನ್ನು ಒದಗಿಸದೇ ಸರ್ಕಾರ ರೈತರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಹೇಳಿದರು.

    ಕೇವಲ ಮಳೆಯಾಶ್ರಯದಲ್ಲಿ ಬೆಳೆ ಬೆಳೆಯುತ್ತಿದ್ದ ರೈತರಿಗೆ ನೀರಿನ ಬೆಲೆ ಗೊತ್ತಾಗಿದೆ. ಪ್ರಸ್ತುತ ಆಧುನಿ ಕ ಬೇಸಾಯಕ್ಕೆ ನೀರಿನ ಬಳಕೆ ಅತ್ಯವಶ್ಯವಾಗಿದ್ದು ಆ ನಿಟ್ಟಿನಲ್ಲಿ ಸರ್ಕಾರ ಕಟ್ಟುನಿಟ್ಟಿನ ಕಾನೂನು ರೂಪಿಸಿ ಸ್ಥಳೀಯರಿಗೆ ನೀರೋದಗಿಸುವ ಮೊದಲ ಆದ್ಯತೆ ನೀಡಬೇಕು. ಅಯ್ಯನಕೆರೆ ಬೊಗಸೆ ನೀರಿಗಷ್ಟೆ ಆಸೆಪಟ್ಟಿರು ವ ರೈತರಿಗೆ ಜನಪ್ರತಿಧಿಗಳು ಜವಾಬ್ದಾರಿ ಹೊತ್ತು ನ್ಯಾಯ ಒದಗಿಸಿಕೊಡಬೇಕು ಎಂದು ಹೇಳಿದರು.

    ಕೆಪಿಸಿಸಿ ವಕ್ತಾರ ರವೀಶ್ ಕ್ಯಾತನಬೀಡು ಮಾತನಾಡಿ ರೈತರು ಸಂಘಟಿತರಾಗಿ ಹೋರಾಟ ರೂಪಿಸಿದಾ ಗ ಮಾತ್ರ ನೀರಾವರಿ ಯೋಜನೆ ಪೂರ್ಣಗೊಳ್ಳಲು ಸಾಧ್ಯ. ಹೀಗಾಗಿ ಜನಪ್ರತಿನಿಧಿಗಳ ಸುಳ್ಳು ಮಾತಿಗೆ ಹಾ ಗೂ ಹಾಡಿಹೊಗಳಿಕೆಗೆ ಮಾರುಹೋಗದಿರಿ. ಒಟ್ಟಿನಲ್ಲಿ ಗ್ರಾಮದ ಕೆರೆಗಳು ನೀರು ತುಂಬಿಸಿ ಜನ-ಜಾನುವಾ ರು, ಪ್ರಾಣಿ-ಪಕ್ಷಿಗಳಿಗೆ ತಲುಪುವಂತಾಗುವುದು ಗುರಿಯಾಗಬೇಕು ಎಂದರು.

    ರೈತ ಸಂಘದ ಜಿಲ್ಲಾಧ್ಯಕ್ಷ ಮಹೇಶ್ ಮಾತನಾಡಿ ಬಯಲುಸೀಮೆಯಿಂದ ಬೆಂಗಳೂರಿನವರೆಗೆ ಹರಿ ಯುತ್ತಿರುವ ನೀರನ್ನು ಸರ್ಕಾರ ಸ್ಥಳೀಯರಿಗೆ ಬೊಗಸೆಯಷ್ಟು ಉಳಿಸಿಕೊಡಬೇಕು. ಒಂದು ತಿಂಗಳಿನ ಗಡು ವಿನೊಳಗೆ ನೀರಾವರಿ ಯೋಜನೆ ಪುನರಾರಂಭಿಸದಿದ್ದರೆ, ಶಾಸಕರ ಹಾಗೂ ಜಿಲ್ಲಾಡಳಿತ ಕಚೇರಿ ಎದುರು ಜಾನುವಾರು ಸಮೇತ ರೈತರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಇದೇ ವೇಳೆ ಪ್ರತಿಭಟನಾ ಸ್ಥಳಕ್ಕೆ ಅಪರ ಜಿಲ್ಲಾಧಿಕಾರಿ ನಾರಾಯಣಕನಕ ರಡ್ಡಿ ಹಾಗೂ ತಹಶೀಲ್ದಾರ್ ರೇಷ್ಮಾ ಭೇಟಿ ನೀಡಿ ರೈತರ ಸಮಸ್ಯೆ ಆಲಿಸಿ, ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡರು ಗಳಾದ ವಿಜಯ್‌ಕುಮಾರ್, ರುದ್ರಮೂರ್ತಿ, ಮೋಹನ್‌ಕುಮಾರ್, ಅಣ್ಣಾನಾಯ್ಕ್, ಉಮೇಶ್, ಸಚಿ ನ್‌ಎತ್ತಿನಮನೆ, ಚಂದ್ರುಹುಲಿಕೆರೆ, ಮುಳ್ಳಪ್ಪ, ಪುಷ್ಪರಾಜ್ ಮತ್ತಿತರರು ಹಾಜರಿದ್ದರು.

    Protest to resume stalled irrigation works

  • ಜೀವನದ ಕತ್ತಲೆ ಹೋಗಲಾಡಿಸುವುದೇ ದೀಪಾವಳಿ

    ಜೀವನದ ಕತ್ತಲೆ ಹೋಗಲಾಡಿಸುವುದೇ ದೀಪಾವಳಿ

    ಚಿಕ್ಕಮಗಳೂರು:  ಜೀವನದಲ್ಲಿ ತುಂಬಿರುವ ಕತ್ತಲೆಯನ್ನು ಹೋಗಲಾಡಿಸಿ, ಬೆಳ ಕನ್ನು ಚೆಲ್ಲುವುದೇ ದೀಪಾವಳಿ ಹಬ್ಬದ ಮುಖ್ಯ ಉದ್ದೇಶ ಎಂದು ಶ್ರೀ ಶಕ್ತಿ ಮದ್ಯವ್ಯಸನಿಗಳ ಸಮಗ್ರ ಪುನರ್ವ ಸತಿ ಕೇಂದ್ರದ ಯೋಜನಾ ನಿರ್ದೇಶಕ ಡಾ.ಅನೀತ್‌ಕುಮಾರ್ ಹೇಳಿದರು.

    ನಗರದ ಪ್ರಜಾಕುಮಾರೀಸ್ ಸಂಸ್ಥೆಯಲ್ಲಿ ಭಾನುವಾರ ದೀಪಾವಳಿ ಹಬ್ಬದ ಪ್ರಯುಕ್ತ ಆಯೋಜಿಸಿದ್ಧ ‘ದಿವ್ಯ ಬೆಳಕು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಮನದಲ್ಲಿ ತುಂಬಿರುವ ಕಲ್ಮಶವನ್ನು ತ್ಯಜಿಸಿ ಸೌಹಾರ್ದತೆಯಿಂದ ಬಾಳುವ ಪರಿಪಾಠ ಎಲ್ಲರೂ ರೂಢಿಸಿಕೊಳ್ಳಬೇಕು ಎಂದರು.

    ಮಾನವ ಅನೇಕ ವ್ಯಾಮೋಹ, ಸೆಳೆತಕ್ಕೆ ಒಳಗಾಗಿ ಶ್ರೀರಾಮನ ಗುಣಗಳನ್ನು ಅಳವಡಿಸಿಕೊಳ್ಳುವ ಬದ ಲು ರಾವಣನ ಗುಣದಂತೆ ವರ್ತಿಸುತ್ತಿದ್ದಾನೆ. ಇದರಿಂದ ಹೊರಬಂದು ಸದ್ವಿಚಾರ, ಸನ್ನಡತೆ ಹಾಗೂ ಒಳಿತ ನ್ನು ಬಯಸುವ ಮಾನವ ಗುಣಗಳನ್ನು ಮನಸ್ಸಿನಲ್ಲಿ ಅಚ್ಚಳಿಯದೇ ಸ್ಥಾಪಿಸಬೇಕು ಎಂದು ಹೇಳಿದರು.

    ರೋಟರಿ ಅಧ್ಯಕ್ಷ ಎನ್.ಪಿ.ಲಿಖಿತ್ ಮಾತನಾಡಿ ಕೆಟ್ಟತನವನ್ನು ದೂರಗೊಳಿಸಲು ಭಗವಾನ್ ಶ್ರೀಕೃಷ್ಣ ಮತ್ತು ಶ್ರೀರಾಮರು ಕೆಟ್ಟಶಕ್ತಿಯನ್ನು ಸಂಹಾರಗೊಳಿಸಿ ಮಾನವ ಕುಲಕ್ಕೆ ಒಳಿತನ್ನು ಬಯಸಿದವರು. ಆ ಭಗ ವಂತನ ಆದರ್ಶಗಳನ್ನು ಇಟ್ಟುಕೊಂಡು ಬಾಳುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ತಿಳಿಸಿದರು.

    ಅಣುವ್ರತ್ ಸಮಿತಿ ಅಧ್ಯಕ್ಷೆ ಮಂಜು ಬನ್ಸಾಲಿ ಮಾತನಾಡಿ ದೀಪಾವಳಿ ಹಬ್ಬವೆಂದರೆ ಪಟಾಕಿ ಸಿಡಿಸಿ ಸಂಭ್ರಮಿಸುವುದ್ದಲ್ಲ. ಪ್ರೀತಿ, ವಿಶ್ವಾಸ ಹಾಗೂ ಸೌಹಾರ್ದತೆಯಿಂದ ಬಾಳುವುದು. ಹಿರಿಯರು ಕಟ್ಟಿಕೊಟ್ಟಿರುವ ಹಬ್ಬದ ಆಚರಣೆಗಳನ್ನು ಚಾಚುತಪ್ಪದೇ ಪಾಲಿಸುವ ಮೂಲಕ ಭಾರತೀಯ ಸಂಸ್ಕೃತಿಯ ಹಬ್ಬವನ್ನು ಎಲ್ಲೆಡೆ ಪಸರಿಸಬೇಕು ಎಂದು ತಿಳಿಸಿದರು.

    ಬ್ರಹ್ಮಕುಮಾರೀಸ್ ಸಂಸ್ಥೆ ಜಿಲ್ಲಾ ಸಂಚಾಲಕಿ ಭಾಗ್ಯ ಮಾತನಾಡಿ ಬ್ರಹ್ಮಕುಮಾರೀಸ್ ಪಿತಾಮಹಾ ಬಾ ಬಾರವರ ಆರ್ಶೀವಾದದ ಜೊತೆಗೆ ನಾವೆಲ್ಲರೂ ಆಧಾತ್ಮಕ ಚಿಂತನೆ ಹೊಂದಬೇಕು. ರಾವಣನ ನಕಾರಾತ್ಮಕ ಚಿಂತನೆಗಳನ್ನು ಬದಿಗಿರಿ, ಶ್ರೀರಾಮನ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವುದೇ ದೀಪಾವಳಿಯ ಧ್ಯೇ ಯವಾಗಿದೆ ಎಂದು ಹೇಳಿದರು.

    ಇದೇ ವೇಳೆ ಮಕ್ಕಳಿಂದ ಆದಿಲಕ್ಷ್ಮೀ, ಧಾನ್ಯಲಕ್ಷ್ಮೀ, ವಿಜಯಲಕ್ಷ್ಮೀ, ಗಜಲಕ್ಷ್ಮೀ, ಲಕ್ಷ್ಮೀ, ಧನಲಕ್ಷ್ಮೀ, ಧನ್ಯಲಕ್ಷ್ಮೀ, ಸಂತಾನಲಕ್ಷ್ಮೀ, ಸರಸ್ವತಿ ವೇಷಭೂಷಣದಲ್ಲಿ ಪಾಲ್ಗೊಂಡು ಸಭಿಕರನ್ನ ರಂಜಿಸಿದರು. ಅಲ್ಲದೇ ಶ್ರೀ ಕೃಷ್ಣ, ನಾರಾಯಣ ಹಾಗೂ ರಾಧೆ ವೇಷಧಾರಿಗಳು ನೋಡುಗರನ್ನು ಮನಸೂರೆಗೊಂಡವು. ಬಳಿಕ ಅಷ್ಟ ಲಕ್ಷ್ಮೀಯರಿಗೆ ಮಹಿಳೆಯರು ಆರತಿ ಎತ್ತಿ, ಪೂಜಿಸಿದರು.

    ಬಳಿಕ ಶ್ರೀರಾಮಾಯಣ ಹಾಗೂ ಭಗವಂತ ಮತ್ತು ಮಾಯೆ ಕುರಿತು ನಾಟಕ ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ವೈನ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷ ಬಿ.ರಾಜಪ್ಪ, ಕನ್ನಡಸೇನೆ ಮಹಿಳಾ ಘಟ ಕದ ಜಿಲ್ಲಾಧ್ಯಕ್ಷೆ ಚೈತ್ರಗೌಡ, ನಿವೃತ್ತ ಅಧಿಕಾರಿ ದಯಾನಂದ್, ವೈದ್ಯ ಡಾ|| ರಶ್ಮಿ, ಜ್ಞಾನರಶ್ಮಿ ಶಾಲೆ ಸಂಸ್ಥಾಪಕ ನಂದಕುಮಾರ್, ಮುಖಂಡ ಗೌತಮ್ ಅಚ್ಚ ಮತ್ತಿತರರು ಉಪಸ್ಥಿತರಿದ್ದರು.

    Foundation stone laid for the third phase of Bhadra Upa Valley Project

  • ಭದ್ರಉಪ ಕಣಿವೆ ಯೋಜನೆಯ ಮೂರನೇ ಹಂತದ ಕಾಮಗಾರಿಗೆ ಶಂಕುಸ್ಥಾಪನೆ

    ಭದ್ರಉಪ ಕಣಿವೆ ಯೋಜನೆಯ ಮೂರನೇ ಹಂತದ ಕಾಮಗಾರಿಗೆ ಶಂಕುಸ್ಥಾಪನೆ

    ಚಿಕ್ಕಮಗಳೂರು: ಭದ್ರ ಉಪ ಕಣಿವೆ ಯೋಜನೆಯ ಮೂರನೇ ಹಂತದ ಕಾಮಗಾರಿಗೆ ನವೆಂಬರ್ ತಿಂಗಳ ಅಂತ್ಯಕ್ಕೆ ಶಂಕುಸ್ಥಾಪನೆ ನೆರವೇರಿಸುತ್ತೇವೆ. ಈ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಡಿ.ಕೆ. ಶಿವಕುಮಾರ್ ಸೇರಿದಂತೆ ವಿವಿಧ ಸಚಿವರು ಉಪಸ್ಥಿತರಿರಲಿದ್ದಾರೆ ಎಂದು ಶಾಸಕ ಎಚ್.ಡಿ. ತಮ್ಮಯ್ಯ ತಿಳಿಸಿದರು.

    ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಈಶ್ವರ ಹಳ್ಳಿ ಹಾಗೂ ಕಳಸಾಪುರ ಕೆರೆಗೆ ಬಾಗಿನ ಅರ್ಪಣೆ ಮಾಡಿ ಮಾತನಾಡಿದ ಅವರು, ಇನ್ನು ಎರಡು ವ?ದ ಒಳಗಾಗಿ ರಣಘಟ್ಟ ಯೋಜನೆ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸುತ್ತೇವೆ. ಇದರೊಂದಿಗೆ ಭದ್ರ ಉಪಕರಣಗಳು ಯೋಜನೆಯ ಮೂರನೇ ಹಂತದ ಕಾಮಗಾರಿ ಪೂರ್ಣಗೊಂಡಲ್ಲಿ ಎಲ್ಲಾ ಕೆರೆಗಳನ್ನು ಪ್ರತಿ ವ? ತುಂಬಿಸಬಹುದು ಎಂದು ಅಭಿಪ್ರಾಯಪಟ್ಟರು.

    ಗಾಳಿ, ನೀರು, ಭೂಮಿಯನ್ನು ತಾಯಿಗೆ ಹೋಲಿಸಿ ಪೂಜೆ ಮಾಡುವುದು ಭಾರತದಲ್ಲಿ ಮಾತ್ರ. ಹಿಂದಿನಿಂದಲೂ ನಮ್ಮ ಹಿರಿಯರು ಈ ಸಂಸ್ಕಾರ ಬೆಳೆಸಿಕೊಂಡು ಬಂದಿದ್ದಾರೆ. ಹೀಗಾಗಿಯೇ ಇಂದು ನಾವು ತುಂಬಿದ ಕೆರೆಗಳಿಗೆ ಬಾಗಿನ ಅರ್ಪಣೆ ಮಾಡುತ್ತಿದ್ದೇವೆ. ಇಡೀ ಪ್ರಪಂಚದಲ್ಲಿ ಕೃಷಿಯನ್ನೇ ಅವಲಂಬಿಸಿರುವ ದೇಶ ಯಾವುದಾದರೂ ಇದ್ದರೆ ಅದು ಭಾರತ ಮಾತ್ರ. ಕೃಷಿ ಎಂದರೆ ರೈತ. ರೈತ ಎಂದರೆ ಕೃಷಿ. ರೈತನೇ ನಮ್ಮ ದೇಶದ ಬೆನ್ನೆಲುಬು. ಹೀಗಾಗಿ ರೈತರ ಶ್ರೇಯೋಭಿವೃದ್ಧಿಗಾಗಿ ಪ್ರತಿಯೊಬ್ಬ ಜನ ಪ್ರತಿನಿಧಿಗಳು ಶ್ರಮಿಸಬೇಕು ಎಂದು ಹೇಳಿದರು.

    ಮಳೆ ಬಂದ ಸಂದರ್ಭದಲ್ಲಿ ಕರಗಡ ಯೋಜನೆ ಮೂಲಕ ಈಶ್ವರಹಳ್ಳಿ ಹಾಗೂ ಕಳಸಾಪುರ ಭಾಗದ ಕೆರೆಗಳಿಗೆ ನೀರು ತುಂಬಿಸಲಾಗುತ್ತಿದೆ. ಈ ಯೋಜನೆಗಾಗಿ ಮಲ್ಲಿಕಾರ್ಜುನ ಧರ್ಮೇಗೌಡ, ಸಿ.ಟಿ.ರವಿ, ಗಾಯತ್ರಿ ಶಾಂತೇಗೌಡ ಅವರ ಕೊಡುಗೆ ದೊಡ್ಡ ಮಟ್ಟದಲ್ಲಿ ಇದೆ. ಕರಗಡ ಯೋಜನೆಯಿಂದ ಕೇವಲ ೩ ಕೆರೆಗಳನ್ನು ಮಾತ್ರ ತುಂಬಿಸಲು ಸಾಧ್ಯ. ಆದರೆ ಎತ್ತಿನಹೊಳೆ ಯೋಜನೆಯಿಂದಾಗಿ ದೇವನೂರು ಹಾಗೂ ಬೆಳವಡಿ ಭಾಗದ ಕೆರೆಗಳು ಭರ್ತಿಯಾಗಿವೆ. ರಣಘಟ್ಟ ಹಾಗೂ ಭದ್ರ ಉಪಕಣಿವೆ ಯೋಜನೆಗಳು ಪೂರ್ಣಗೊಂಡಲ್ಲಿ ಈ ಭಾಗದಲ್ಲಿ ಬರಗಾಲದ ಪ್ರಶ್ನೆಯೇ ಬರುವುದಿಲ್ಲ ಎಂದರು.

    ದೇವಿ ಕೆರೆಯ ನಾಲೆ ಸರಿಯಾಗಿ ಇಲ್ಲದಿರುವ ಕಾರಣದಿಂದಾಗಿ ಕೆರೆ ಭರ್ತಿಯಾಗುತ್ತಿಲ್ಲ. ಹೀಗಾಗಿ ಕಟ್ಟಿನ ಹೊಳೆಯಿಂದ ದೇವಿಕೆರೆ ವರೆಗೆ ನೀರು ಹರಿಸಲು ನೂತನ ಕಾಲುವೆ ನಿರ್ಮಾಣಕ್ಕಾಗಿ ಸರ್ಕಾರ ೯.೯ ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಈ ಕಾಮಗಾರಿ ಪೂರ್ಣಗೊಂಡ ಬಳಿಕ ದೇವಿಕೆರೆಯು ಭರ್ತಿಯಾಗಲಿದೆ ಎಂದು ಮಾಹಿತಿ ನೀಡಿದರು.

    ರಾಜ್ಯ ಸರ್ಕಾರ ಅಭಿವೃದ್ಧಿ ರಥದ ಜೊತೆ ಜೊತೆಗೆ ರೈತರ ಬಾಳನ್ನು ಹಸನು ಮಾಡುವ ರಥವನ್ನು ಎಳೆಯುತ್ತಿದೆ. ನಾನೂ ಸಹ ನೀರಾವರಿ ಯೋಜನೆಗಳು ಶಾಶ್ವತವಾಗಿರಬೇಕು ಎಂಬ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಜನಪ್ರತಿನಿಧಿಗಳು ಯಾವಾಗಲೂ ರೈತರ ಪರವಾಗಿ ಕೆಲಸ ಮಾಡಬೇಕು. ನಾವು ಮಾಡಿದ ಪುಣ್ಯ ನಮ್ಮ ಖಾತೆಗೆ ಸೇರುತ್ತದೆ ಎಂಬುದನ್ನು ಮನಗಾಣಬೇಕು ಎಂದು ತಿಳಿಸಿದರು.

    ವಿಧಾನ ಪರಿ?ತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಪ್ರಕೃತಿಗೆ ನಮಿಸುವುದು ಹಾಗೂ ಸ್ಮರಿಸುವುದು ಭಾರತೀಯ ಸನಾತನ ಸಂಸ್ಕೃತಿಯ ಒಂದು ಭಾಗ. ಕರಗಡ ಏತ ನೀರಾವರಿ ಯೋಜನೆಯಿಂದ ಕೆರೆ ತುಂಬಿಸುವ ಯೋಜನೆ ಜಾರಿ ಮಾಡಿದ್ದೇವೆ. ಈ ಯೋಜನೆಯನ್ನು ಸರಿಯಾಗಿ ನಿರ್ವಹಣೆ ಮಾಡಿ ನೀರು ಹರಿಸಿದರೆ ಕೇವಲ ೩೫ ದಿನಗಳಲ್ಲಿ ಈ ಕೆರೆಗಳು ಭರ್ತಿಯಾಗುತ್ತಿದ್ದವು. ಆದರೆ ಸರಿಯಾಗಿ ನಿರ್ವಹಣೆ ಮಾಡದ ಕಾರಣದಿಂದಾಗಿ ಅಕ್ಟೋಬರ್ ತಿಂಗಳ ಕೊನೆಗೆ ಕೆರೆ ತುಂಬಿದೆ. ಅದು ಮಳೆಯ ಕಾರಣದಿಂದಾಗಿ. ಒಂದು ವೇಳೆ ಮಳೆ ಬಾರದೆ ಇದ್ದಿದ್ದಲ್ಲಿ ಇಂದು ಕೆರೆಗೆ ಬಾಗಿನ ಅರ್ಪಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಈಶ್ವರ ಹಳ್ಳಿ ಹಾಗೂ ಕಳಸಾಪುರ ಭಾಗಗಳಿಗೆ ೨೦೧೮ ರಿಂದ ೨೩ರ ವರೆಗೆ ೬೫ ಕೋಟಿ ರೂ ವೆಚ್ಚದಲ್ಲಿ ವಿವಿಧ ಕಾಮಗಾರಿ ಮಾಡಿದ್ದೇವೆ. ಮಾಗಡಿ-ಜಾವಗಲ್ ರಸ್ತೆಯನ್ನು ೨೫ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

    ೧೨೮೧ ಕೋಟಿ ರೂ. ವೆಚ್ಚದಲ್ಲಿ ಭದ್ರಾ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಭದ್ರಾ ಉಪಕಣಿವೆ ಯೋಜನೆ ಆರಂಭಿಸಲಾಗಿದೆ. ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಎರಡನೇ ಹಂತದ ಕಾಮಗಾರಿ ಪ್ರಗತಿಯಲ್ಲಿದೆ. ಇದೀಗ ಮೂರನೇ ಹಂತದ ಕಾಮಗಾರಿಗೆ ಟೆಂಡರ್ ಅಂತಿಮಗೊಂಡಿದೆ. ಇನ್ನು ರಣಘಟ್ಟ ಯೋಜನೆಯಲ್ಲಿ ೯೦೦ ಮೀಟರ್ ಟನಲ್ ಕಾಮಗಾರಿ ಬಾಕಿ ಇದೆ ಎಂದು ವಿವರಿಸಿದರು.

    ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಜಿಪಂ ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪ ಗೌಡ, ಬೆಳವಾಡಿ ರವೀಂದ್ರ, ಈಶ್ವರಹಳ್ಳಿ ಮಹೇಶ್, ಪ್ರಮುಖರಾದ ಶಂಕರನಾಯ್ಕ, ಕೆಂಗೇಗೌಡ, ಅಚ್ಚುತರಾಯರು, ಅಮೀರ್, ಮಧು, ಯೋಗೀಶ್, ಶಿವಮ್ಮ, ಚಂದ್ರಶೇಖರ್ ಮತ್ತಿತರರಿದ್ದರು.

    Foundation stone laid for the third phase of Bhadra Upa Valley Project

  • ನ.26 ರಿಂದ ಡಿ.4 ರವರೆಗೆ ದತ್ತಜಯಂತಿ ಆಚರಣೆ

    ನ.26 ರಿಂದ ಡಿ.4 ರವರೆಗೆ ದತ್ತಜಯಂತಿ ಆಚರಣೆ

    ಚಿಕ್ಕಮಗಳೂರು: : ಜಿಲ್ಲೆಯ ಚಂದ್ರದ್ರೋಣ ಪರ್ವತದಲ್ಲಿ ದತ್ತಮಾಲೆ ಹಾಗೂ ದತ್ತಜಯಂತಿಯು ನ.೨೬ ರಿಂದ ಡಿ.೪ ರವರೆಗೆ ಶ್ರದ್ಧಾಭಕ್ತಿಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್, ಬಜರಂಗದಳ ಪ್ರಾಂತ ಸಂಯೋಜಕ ಎಸ್.ಆರ್ ಪ್ರಭಂಜನ್ ತಿಳಿಸಿದರು.

    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದತ್ತಜಯಂತಿ ನಾಡ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುವುದು. ಸಾಧು-ಸಂತರು, ಮಾತೆಯರು, ದತ್ತಮಾಲಾಧಾರಿಗಳು, ದತ್ತಭಕ್ತರು ಸೇರಿದಂತೆ ರಾಜ್ಯಾದ್ಯಂತ ಸುಮಾರು ೨೫ ಸಾವಿರ ದತ್ತಮಾಲಾಧಾರಿಗಳು ಆಗಮಿಸಲಿದ್ದಾರೆಂದು ಹೇಳಿದರು.

    ದತ್ತಪೀಠದಲ್ಲಿ ಹೈಕೋರ್ಟ್ ನಿರ್ದೇಶನದ ಅನುಸಾರ ಹೋಮ ಹವನ ಪೂಜೆ ನಡೆಯಲಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ದತ್ತಜಯಂತಿ ಉತ್ಸವ ನಡೆಯಲಿದೆ. ಡಿ.೩ ರಂದು ನಗರದಲ್ಲಿ ಬೃಹತ್ ಶೋಭಾಯಾತ್ರೆ ಹಾಗೂ ಆಜಾದ್ ಪಾರ್ಕ್ ವೃತ್ತದಲ್ಲಿ ನಡೆಯುವ ಧಾರ್ಮಿಕ ಸಭೆಯಲ್ಲಿ ವಿಶ್ವ ಹಿಂದೂ ಪರಿಷತ್ ಅಖಿಲ ಭಾರತೀಯ ಕಾರ್ಯದರ್ಶಿ ಗೋಪಾಲ್ ನಾಗರಕಟ್ಟೆ ಭಾಗವಹಿಸಲಿದ್ದಾರೆಂದರು.

    ಡಿ.೨ ರಂದು ಅನುಸೂಯದೇವಿ ಪೂಜೆಯ ಅಂಗವಾಗಿ ನಗರದ ಬೋಳರಾಮೇಶ್ವರ ದೇವಸ್ಥಾನದ ಆವರಣದಲ್ಲಿ ಧಾರ್ಮಿಕ ಸಭೆಯ ನಂತರ ಮಹಿಳೆಯರಿಂದ ಸಂಕೀರ್ತನಾ ಯಾತ್ರೆ ಬೆಳಗ್ಗೆ ೯.೩೦ ಕ್ಕೆ ನಡೆಯಲಿದೆ. ಇದೇ ದಿನ ದತ್ತಪೀಠದಲ್ಲಿ ಬೆಳಗ್ಗೆ ಗಣಪತಿ ಪೂಜೆ, ಪುಣ್ಯಹವಾಚನ, ಪಂಚಗವ್ಯ ಶುದ್ಧಿ, ಋತ್ವಗ್ವರ್ಣ, ಗಣಪತಿ ಹೋಮ, ಚಂಡಿಕಾ ಪಾರಾಯಣ, ದುರ್ಗಾಹೋಮ, ಕಲಶಾಭಿಷೇಕ ಹಾಗೂ ಮಹಾಪೂಜೆ ನಡೆಯಲಿದೆ ಎಂದು ಮಾಹಿತಿ ನೀಡಿದರು.

    ದತ್ತಪೀಠದಲ್ಲಿ ಸಂಜೆ ಪಾದುಕಾ ಶುದ್ಧಿ, ಪ್ರಕಾರ ಶುದ್ಧಿ, ವಾಸ್ತುರಾಕ್ಷೆಜ್ಞ ಹೋಮ, ಸುದರ್ಶನ ಹೋಮ, ದುರ್ಗಾದೀಪ ನಮಸ್ಕಾರ, ಕಲಶಾಭಿಷೇಕ ಹಾಗೂ ಮಹಾಪೂಜೆ ನಡೆಯಲಿದೆ ಎಂದು ಹೇಳಿದರು. ಡಿ.೩ ರಂದು ದತ್ತಪೀಠದಲ್ಲಿ ನವಕಲಶ ಕಲಾವಾಹನಂ, ಕಲಾತತ್ವಾದಿ ವಾಸ ಪೂಜೆ, ಕಲಾಹೋಮ, ಕಲಶಾಭಿಷೇಕ ಮಹಾಪೂಜೆ ನಡೆಯಲಿದೆ. ಇದೇ ದಿನ ಮಧ್ಯಾಹ್ನ ನಗರದಲ್ಲಿ ಬೃಹತ್ ಶೋಭಾಯಾತ್ರೆ ಹಾಗೂ ಧಾರ್ಮಿಕ ಸಭೆ ನಡೆಯಲಿದೆ ಎಂದು ತಿಳಿಸಿದರು.

    ಡಿ.೪ ರಂದು ದತ್ತಪೀಠದಲ್ಲಿ ದತ್ತಾತ್ರೇಯ ಜಯಂತಿ ಅಂಗವಾಗಿ ದಶಸಹಸ್ರ ಸಂಖ್ಯೆಯಲ್ಲಿ ರುದ್ರಾಹೋಮ, ಶ್ರೀ ದತ್ತಾತ್ರೇಯ ಮಹಾಮಂತ್ರ, ಮಹಾಯಾಗ, ಕಲಶಾಭಿಷೇಕ, ಮಹಾಪೂಜೆ, ತಂತ್ರಿಗಳಿಂದ ಆಶೀರ್ವಚನ, ಪ್ರಸಾದ ವಿನಿಯೋಗ ಹಾಗೂ ದತ್ತಜಯಂತಿ ಆಚರಣೆ ಬಹಳ ವಿಜೃಂಭಣೆಯಿಂದ ನಡೆಸಲು ತೀರ್ಮಾನಿಸಲಾಗಿದೆ ಎಂದರು.

    ಈ ಎಲ್ಲಾ ಧಾರ್ಮಿಕ ಕಾರ್ಯಗಳಲ್ಲಿ ದತ್ತಭಕ್ತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ ಅವರು, ದತ್ತಜಯಂತಿ ಆಚರಣೆಗೆ ಜಿಲ್ಲಾಡಳಿತ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ವಿನಂತಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಜಿಲ್ಲಾ ಕಾರ್ಯದರ್ಶಿ ರಂಗನಾಥ್, ಮುಖಂಡರಾದ ಮಹಿಪಾಲ್, ಆರ್.ಡಿ ಮಹೇಂದ್ರ, ಯೋಗೀಶ್ ರಾಜ್ ಅರಸ್, ಶ್ಯಾಮ್ ವಿ ಗೌಡ ಉಪಸ್ಥಿತರಿದ್ದರು.

    Datta Jayanti celebrations from Nov. 26 to Dec. 4

  • ಚಿಕ್ಕಮಗಳೂರು ಮೆಡಿಕಲ್ ಕಾಲಾಜು-ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ಹತ್ತಾರು ಕುಂದುಕೊರತೆ

    ಚಿಕ್ಕಮಗಳೂರು ಮೆಡಿಕಲ್ ಕಾಲಾಜು-ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ಹತ್ತಾರು ಕುಂದುಕೊರತೆ

    ಚಿಕ್ಕಮಗಳೂರು:  ಚಿಕ್ಕಮಗಳೂರು ಮೆಡಿಕಲ್ ಕಾಲಾಜು ಮತ್ತು ವಿದ್ಯಾರ್ಥಿ ಹಾಸ್ಟೆಲ್‌ನಲ್ಲಿ ಹತ್ತಾರು ಕುಂದುಕೊರತೆಗಳಿದ್ದು, ಈ ಬಗ್ಗೆ ಸರ್ಕಾರಕ್ಕೆ ಒತ್ತಡ ತಂದು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

    ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಮೂಲ ಸೌಕರ್ಯಗಳನ್ನು ಪರಿಶೀಲಿಸಿದ್ದಲ್ಲದೆ, ವಿದ್ಯಾರ್ಥಿಗಳಿಂದ ಅಹವಾಲು ಆಲಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿ ಮೊನ್ನೆ ದೇವೀರಮ್ಮನವರ ಬೆಟ್ಟ ಹತ್ತುವಾಗ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳ ಕೆಲವು ಪೋಷಕರು ನಮ್ಮನ್ನು ಭೇಟಿಯಾಗಿದ್ದರು ಆ ವೇಳೆ ಕಾಲೇಜು ಹಾಸ್ಟೆಲ್‌ನಲ್ಲಿ ಸಮಸ್ಯೆ ಇದೆ ಎಂದು ಗಮನ ಸೆಳೆದಿದ್ದರು. ಈ ಹಿನ್ನೆಲೆಯಲ್ಲಿ ಕಾಲೇಜು ಮತ್ತು ಹಾಸ್ಟೆಲ್‌ಗೆ ಭೇಟಿ ನೀಡಿದ್ದೇನೆ ಎಂದು ತಿಳಿಸಿದರು

    ಕಾಲೇಜಿನಲ್ಲಿ ಶೌಚಾಲಯದಲ್ಲಿ ನೀರಿನ ವ್ಯವಸ್ಥೆಯಿಲ್ಲ. ಬಕೆಟ್‌ನಲ್ಲಿ ನೀರು ಹಿಡಿದು ಹೋಗಬೇಕಾದ ಸ್ಥಿತಿ ಇದೆ. ಯಾವುದೇ ಸಿಂಕ್‌ಗಳಲ್ಲೂ ನೀರು ಬರುತ್ತಿಲ್ಲ. ಕೆಟ್ಟ ವಾಸನೆ ಬರುತ್ತಿದೆ. ಇದೆಲ್ಲವೂ ಮೆಡಿಕಲ್ ಕಾಲೇಜಿಗೆ ಗೌರವ ತರುವಂತಹದ್ದಲ್ಲ. ಅಲ್ಲದೆ ಎಲ್ಲ ವಿಷಯಗಳಿಗೂ ಉಪನ್ಯಾಸಕರುಗಳಿಲ್ಲ, ಸರಿಯಾದ ಸಿಬ್ಬಂದಿ ಇಲ್ಲ ಎನ್ನುವ ದೂರುಗಳನ್ನು ವಿದ್ಯಾರ್ಥಿಗಳು ಹೇಳಿದ್ದಾರೆ ಎಂದರು.

    ಹಾಸ್ಟೆಲ್‌ನಲ್ಲಿ ಪ್ರಮುಖವಾಗಿ ವಿದ್ಯುತ್ ಸಮಸ್ಯೆ ಇದೆ. ಆಗಾಗ ವಿದ್ಯುತ್ ಕಡಿತ ಆಗುತ್ತಿರುತ್ತದೆ. ವೋಲ್ಟೇಜ್ ಸಮಸ್ಯೆ ಇದೆ. ಜನರೇಟರ್ ಆಟೋಮ್ಯಾಟಿಕ್ ಚಾಲನೆ ಆಗುವುದಿಲ್ಲ. ಕೆಲವೊಮ್ಮೆ ಇಡೀ ದಿನ ವಿದ್ಯುತ್ ಇರುವುದಿಲ್ಲ ಇದೆಲ್ಲವೂ ಅಮಾನವೀಯ ಎಂದರಲ್ಲದೆ, ಹೈಸ್ಪೀಡ್ ಇಂಟರ್‌ನೆಟ್ ಸಮಸ್ಯೆ ಇದೆ ಎನ್ನುವ ದೂರುಗಳಿವೆ ಎಂದರು.

    ಕಸದ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ. ಇಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಹಾಸ್ಟೆಲ್ ಊಟ-ತಿಂಡಿ ಗುಣಮಟ್ಟ ಮತ್ತು ಅಗತ್ಯದಷ್ಟು ಪೂರೈಕೆಯಲ್ಲಿ ಕೊರತೆ ಇದೆ. ಶುಚಿತ್ವದ ಕೊರತೆ ಇದೆ. ಜೇನು ಹುಳುಗಳ ಕೊರತೆ ಇದೆ. ಕರ್ಟನ್ ರಾಡ್ ಒದಗಿಸಿಲ್ಲ. ಏರ್ ಕಂಡೀಷನ್ ವಿದ್ಯುತ್ ಸಮಸ್ಯೆಯಿಂದಾಗಿ ಸರಿಯಾಗಿ ಕೆಲಸ ಮಾಡುವುದಿಲ್ಲ ಎನ್ನುವ ದೂರುಗಳಿವೆ ಎಂದು ತಿಳಿಸಿದರು.

    ಕುಡಿಯುವ ನೀರಿನ ಸಮಸ್ಯೆ ಇದೆ ಹಿಂದೆ ಅಮೃತ್ ಯೋಜನೆಯಲ್ಲಿ ಮೆಡಿಕಲ್ ಕಾಲೇಜಿಗೂ ನೀರು ಒದಗಿಸಬೇಕೆಂದು ಯೋಜನೆಯಲ್ಲಿ ಸೇರಿಸಲಾಗಿತ್ತು. ಅದು ಕಾರ್ಯಗತಕ್ಕೆ ಬಂದಿಲ್ಲ ಎಂದರು. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಸಾರಿಗೆ ವ್ಯವಸ್ಥೆಯು ಸಮರ್ಪಕವಾಗಿಲ್ಲದೆ ತೊಂದರೆ ಆಗಿದೆ. ತಕ್ಷಣಕ್ಕೆ ಊಟ, ಉಪಹಾರ ಬೇಕೆಂದರೆ ಅಗತ್ಯ ಕಾಂಡಿಮೆಂಟ್ಸ್ ನಂತರ ವ್ಯವಸ್ಥೆ ಇಲ್ಲ. ಇದೆಲ್ಲವನ್ನೂ ದಾಖಲಿಸಿಕೊಂಡಿದ್ದೇವೆ ಎಂದರು.

    ನಿಯಮಗಳ ಪ್ರಕಾರ ಸೂಪರ್‌ಸ್ಪೆಷಾಲಿಟಿ ಆಸ್ಪತ್ರೆ ಇಷ್ಟರವೇಳಗೆ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಅದಕ್ಕೆ ಸಮಸ್ಯೆ ಏನು ಎನ್ನುವುದನ್ನು ಪರಿಶೀಲಿಸಿ ಸಚಿವರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರುತ್ತೇವೆ ಎಂದು ತಿಳಿಸಿದರು. ೬೩೮ ಕೋಟಿ ಖರ್ಚು ಮಾಡಿ ಕೇಂದ್ರ ಮತ್ತು ರಾಜ್ಯದ ಸಹಯೋಗದಲ್ಲಿ ಮೆಡಿಕಲ್ ಕಾಲೇಜು ಕಟ್ಟಡ ನಿರ್ಮಾಣವಾಗುತ್ತಿದೆ. ೨೦೧೨ರಲ್ಲಿ ನಾವು ಮಂತ್ರಿಯಾಗಿದ್ದಾಗಲೇ ಇದಕ್ಕೆ ಮಂಜೂರಾತಿ ಕೊಡಿಸಿದ್ದೆ. ಸರ್ಕಾರ ಬದಲಾದ ನಂತರ ಅದನ್ನು ರದ್ದು ಪಡಿಸಲಾಗಿತ್ತು.

    ನಂತರ ಮತ್ತೆ ನಮ್ಮ ಸರ್ಕಾರ ಬಂದಾಗ ಕೇಂದ್ರ ಹಾಗೂ ರಾಜ್ಯದ ಸಹಯೋಗದೊಂದಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಿದ್ದೇವೆ. ವರ್ಷಕ್ಕೆ ೧೫೦ ಮಂದಿ ಪ್ರವೇಶ ಪಡೆಯುತ್ತಿದ್ದಾರೆ. ಅವರು ಕನಸು ಕಟ್ಟಿಕೊಂಡು ಬಂದಿರುತ್ತಾರೆ. ಅವರಿಗೆ ಐಶಾರಾಮಿ ಸೌಲಭ್ಯ ಇಲ್ಲವಾದರೂ ಅವರ ವಿದ್ಯಾಭ್ಯಾಸಕ್ಕೆ ಒಳ್ಳೆಯ ವಾತಾವರಣ ನಿರ್ಮಾಣ ಮಾಡುವುದು ನಮ್ಮ ಕರ್ತವ್ಯ ಇದೆ.

    ಕ್ರೀಡಾ ವ್ಯವಸ್ಥೆ ಇಲ್ಲ ಎನ್ನುವ ದೂರು ಸಹ ವಿದ್ಯಾರ್ಥಿಗಳಿಂದ ಬಂದಿದೆ. ಜಾಗವನ್ನು ಮೀಸಲಿಡಲಾಗಿದೆ. ಹಾಸ್ಟೆಲ್ ನಿರ್ಮಾಣದ ವೇಳೆಯೇ ಅದರ ಕಡೆಗೂ ಗಮನ ಕೊಡಬೇಕಿತ್ತು. ಉಳಿದಂತೆ ಎಂಯುಎಸ್‌ಎಸ್‌ಆರ್ ಸ್ಟೇಷನ್‌ಗೆ ಜಾಗ ಮಂಜೂರಾಗಿದೆ. ನಮ್ಮ ಜಿಲ್ಲಾ ಉಸ್ತುವಾರಿ ಸಚಿವರೆ ಇಂಧನ ಸಚಿವರಿದ್ದಾರೆ. ಅವರಿಗೆ ತಕ್ಷಣ ಇಲ್ಲಿ ವಿದ್ಯುತ್ ವಿತರಣಾ ಕೇಂದ್ರ ಸ್ಥಾಪಿಸಿದರೆ ಕಾಲೇಜಿಗೂ ಅನುಕೂಲ. ಜೊತೆಗೆ ಪಕ್ಕದಲ್ಲಿರುವ ಕೈಗಾರಿಕಾ ಕೇಂದ್ರ ಮತ್ತು ಗ್ರಾಮಗಳಿಗೂ ಅನುಕೂಲವಾಗುತದೆ ಈ ಬಗ್ಗೆ ಸಚಿವರಲ್ಲಿ ಆಗ್ರಹವನ್ನು ಮಾಡುತ್ತೇನೆ ಎಂದರು.

    ಇದಲ್ಲದೆ ಯೂರಾಲಜಿ, ಕಾರ್ಡಿಯಾಲಜಿ ಬೋಧನೆಗೆ ಎಂಎಸ್ ಆಗಿರುವ ಸಿಬ್ಬಂದಿ ಬೇಕು ಅದನ್ನು ಒದಗಿಸಬೇಕು. ಹಾಸ್ಟೆಲ್ ಬ್ಲಾಕ್‌ನಲ್ಲಿ ಮಿನಿ ಗ್ರಂಥಾಲಯ ತೆರೆಯಬೇಕು. ಸ್ವಚ್ಛತೆಗೆ ಇನ್ನಷ್ಟು ಗಮನ ಕೊಡಬೇಕು ಎನ್ನುವ ಆಗ್ರಹ ವಿದ್ಯಾರ್ಥಿಗಳದ್ದಾಗಿದೆ ಎಂದರು. ಎರಡು ಬಾರಿ ವೈದ್ಯಕೀಯ ಶಿಕ್ಷಣ ಸಚಿವರು ಇಲ್ಲಗೆ ಭೇಟಿ ನೀಡಿದರೂ ಸಮಸ್ಯೆಗಳು ಹಾಗೇ ಉಳಿದಿವೆ ಇದರ ಬಗ್ಗೆ ಗಮನಹರಿಸಬೇಕು ಎಂದು ಸರ್ಕಾರದ ಗಮನ ಸೆಳೆಯುತ್ತೇವೆ ಎಂದರು.

    ಈ ವೇಳೆ ನಗರಸಭೆ ಉಪಾಧ್ಯಕ್ಷೆ ಲಲಿತಾ ರಾಜಾನಾಯ್ಕ್, ಮುಖಂಡರುಗಳಾದ ಜಸಂತ ಅನಿಲ್ ಕುಮಾರ್, ಚೈತ್ರಗೌಡ, ಈಶ್ವರಳ್ಳಿ ಮಹೇಶ್, ಪುಷ್ಪರಾಜ್, ಜೀವನ್ ರಂಗನಾಥ್, ಕುಮಾರ್ ಇತರರು ಇದ್ದರು.

    Dozens of grievances at Chikmagalur Medical College-Student Hostel

  • ಸಹಕಾರ ಚಳವಳಿ ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ಅಗತ್ಯ

    ಸಹಕಾರ ಚಳವಳಿ ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ಅಗತ್ಯ

    ಬೆಂಗಳೂರು: ಸಹಕಾರ ಚಳವಳಿ ಇನ್ನಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ಅಗತ್ಯವಿದ್ದು, ಜವಾಹರಲಾಲ್ ನೆಹರೂ ಅವರ ಜಯಂತಿ ದಿನವೇ 72ನೇ ಸಹಕಾರಿ ಸಪ್ತಾಹದ ಉದ್ಘಾಟನೆ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

    ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ನಡೆದ 72ನೇ ಸಹಕಾರ ಸಪ್ತಾಹ ಆಚರಣೆಯ ಸಿದ್ಧತಾ ಸಭೆಯ ಅಧ್ಯಕ್ಷ ಕತೆ ವಹಿಸಿ, ಸಭೆ ಬಳಿಕ ಪತ್ರಿಕಾಗೋಷ್ಠಿಯಲ್ಲಿಮಾತನಾಡಿ  ರಾಜ್ಯ ಮಟ್ಟದ 72 ನೇ ಸಪ್ತಾಹದ ಉದ್ಘಾಟನೆಯನ್ನು ನೆಹರೂ ಜಯಂತಿಯಂದೇ ದಿನಾಂಕ ನವೆಂಬರ್ 14ರಂದು ಮಾಡಲು ನಿರ್ಧರಿಸಿದ್ದೇವೆ.

    ಅರಮನೆ ಮೈದಾನದಲ್ಲಿ ಅತ್ಯಂತ ಅರ್ಥಪೂರ್ಣವಾಗಿ ಸಪ್ತಾಹ ನಡೆಯಲಿದ್ದು ಇದರ ಉದ್ಘಾಟನೆಯನ್ನು ನಾನು ನೆರವೇರಿಸಲಿದ್ದೇನೆ. ಮಂಗಳೂರು, ರಾಯಚೂರು, ಹಾವೇರಿ, ಹೊಸಪೇಟೆ, ಕೊಪ್ಪಳದಲ್ಲಿ ಸಪ್ತಾಹ ನಡೆಯಲಿದ್ದು ಸಮಾರೋಪ ಸಮಾರಂಭ ನವೆಂಬರ್ 20 ರಂದು ಚಾಮರಾಜನಗರದಲ್ಲಿ ನಡೆಯಲಿದೆ. ನಾನು ಸಪ್ತಾಹದ ಉದ್ಘಾಟನೆಯನ್ನೂ ನೆರವೇರಿಸಿ, ಸಮಾರೋಪದಲ್ಲೂ ಭಾಗವಹಿಸುತ್ತೇನೆ ಎಂದರು.

    “ಸಹಕಾರ ರತ್ನ” ಪ್ರಶಸ್ತಿ ಪ್ರದಾನ ಸಮಾರಂಭವೂ ಸಪ್ತಾಹದ ಉದ್ಘಾಟನೆಯ ದಿನವೇ ನಡೆಯಲಿದೆ. ರಾಜ್ಯದ ಎಲ್ಲಾ ಸಹಕಾರಿ ಧುರೀಣರು ನನಗೇ ಜವಾಬ್ದಾರಿ ಕೊಟ್ಟಿದ್ದು ನಾನೇ “ಸಹಕಾರ ರತ್ನ” ಪ್ರಶಸ್ತಿಗೆ ಹೆಸರು ಸೂಚಿಸಲು ಕೋರಿದ್ದಾರೆ. ಸಹಕಾರ ಮಹಾ ಮಂಡಳದ ಅಧ್ಯಕ್ಷರ ಜೊತೆ ಚರ್ಚಿಸಿ ಪ್ರಶಸ್ತಿಗೆ ಉತ್ತಮ ಸಹಕಾರಿಯನ್ನು ಆಯ್ಕೆ ಮಾಡಲಾಗುವುದು ಎಂದರು.

    ಹಾಲಿನ ಡೈರಿಗಳನ್ನು ಹಾಲಿನ ಒಕ್ಕೂಟಗಳ ಅಧೀನದಲ್ಲಿ ಮೊದಲ ಬಾರಿಗೆ ತಂದಿದ್ದು ನಾನೇ. ಹೀಗೆ ತರುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟೆ ಎಂದು ಮುಖ್ಯಮಂತ್ರಿಗಳು ಸ್ಮರಿಸಿದರು.

    ಸಹಕಾರ ರಾಜ್ಯದ ವ್ಯಾಪ್ತಿಗೆ ಬರುವ ವಿಚಾರ. ಕೇಂದ್ರದ ವ್ಯಾಪ್ತಿಗೆ ಬರುವ ವಿಚಾರ ಅಲ್ಲ ಎಂದು ಅಭಿಪ್ರಾಯಪಟ್ಟರು.

    The need to advance the cooperative movement more effectively

  • 5 ಕೋಟಿ ರೂ ವೆಚ್ಚದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ನಿರ್ಮಾಣ

    5 ಕೋಟಿ ರೂ ವೆಚ್ಚದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆ ನಿರ್ಮಾಣ

    ಚಿಕ್ಕಮಗಳೂರು: ಉಪ್ಪಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಮೌಲಾನಾ ಆಜಾದ್ ಮಾದರಿ ಶಾಲಾ ಕಟ್ಟಡ ಪೂರ್ಣಗೊಂಡ ನಂತರ ಎಲ್‌ಕೆಜಿಯಿಂದ ದ್ವಿತೀಯ ಪಿಯುಸಿ ವರೆಗೆ ಉಚಿತ ಶಿಕ್ಷಣ, ಬಿಸಿಯೂಟ ನೀಡಲು ಸರ್ಕಾರದ ಮಟ್ಟದಲ್ಲಿ ಜಾರಿಮಾಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಹೆಚ್.ಡಿ. ತಮ್ಮಯ್ಯ ಭರವಸೆ ನೀಡಿದರು.

    ಅವರು ಇಂದು ಉಪ್ಪಳ್ಳಿಯ ಹಿರೇಕೊಳಲೆ ರಸ್ತೆ ಎಬಿ ವಾಜಪೇಯಿ ವಸತಿ ಬಡಾವಣೆಯಲ್ಲಿ ಜಿಲ್ಲಾಡಳಿತ, ಜಿ.ಪಂ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸುಮಾರು ೫ ಕೋಟಿ ರೂ ವೆಚ್ಚದಲ್ಲಿ ಮೌಲಾನಾ ಆಜಾದ್ ಮಾದರಿ ಶಾಲೆಯ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

    ದೇಶಭಕ್ತರಾಗಿ ಸಂಸ್ಕಾರಯುತ ಜೀವನ ನಡೆಸಲು ಉತ್ತಮ ಶಿಕ್ಷಣ ಅಗತ್ಯ, ಈ ನಿಟ್ಟಿನಲ್ಲಿ ಎಲ್ಲಾ ವರ್ಗದ ಬಡವರು, ಶೋಷಿತರನ್ನು ಸಮಾಜದ ಮುನ್ನಲೆಗೆ ತರಲು ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳಿದರು.

    ಅಲ್ಪಸಂಖ್ಯಾತರ ಮಕ್ಕಳು ಶಾಲೆ ತೊರೆದ ಸಂದರ್ಭದಲ್ಲಿ ಮರಳಿ ಬಾ ಶಾಲೆಗೆ ಯೋಜನೆಯನ್ನು ಜಾರಿಗೆ ತಂದು ಶಿಕ್ಷಣ ಕೊಡಬೇಕೆಂಬ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಚಿಂತನೆ ನಡೆಸಿದ್ದರು ಎಂದು ತಿಳಿಸಿದರು.

    ೬ನೇ ತರಗತಿಯಿಂದ ೧೦ನೇ ತರಗತಿವರೆಗೆ ಆಂಗ್ಲ ಮಾದ್ಯಮ ಶಾಲೆಯಲ್ಲಿ ಸುಮಾರು ೩೦೦ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಯೋಜನೆಯನ್ನು ರಾಜ್ಯದಲ್ಲಿ ಅನುಷ್ಠಾನಕ್ಕೆ ತಂದು ೨೦೦ ಶಾಲೆಗಳಿಗೆ ಮಂಜೂರಾತಿ ನೀಡಿದ್ದು, ಇದರ ಭಾಗವಾಗಿ ನಗರದ ಬಸವನಹಳ್ಳಿಯಲ್ಲಿ ಶಾಲೆ ನಡೆಸಲಾಗುತ್ತಿದೆ ಎಂದರು.

    ಈ ದೇಶದಲ್ಲಿ ಜನಿಸಿದ ಮುಸ್ಲಿಂ, ಕ್ರೈಸ್ತ, ಬೌದ್ಧ, ಪಾದ್ರಿ, ಜೈನ, ಸಿಖ್ ಮುಂತಾದ ಈ ಸಮುದಾಯದವರೆಲ್ಲ ಅಲ್ಪಸಂಖ್ಯಾತರೇ ಆಗಿದ್ದು, ಇವರ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕೆಂಬ ಉದ್ದೇಶದಿಂದ ಸರ್ಕಾರ ತೆಗೆದುಕೊಂಡ ಮಹತ್ವದ ನಿರ್ಧಾರ ಇದು ಎಂದು ತಿಳಿಸಿದರು.

    ಈ ಶಾಲಾ ಕಟ್ಟಡಕ್ಕೆ ನಿವೇಶನ ಗುರ್ತಿಸುವ ಸಂದರ್ಭದಲ್ಲಿ ಇಂದಾವರ ಗ್ರಾಮದಲ್ಲಿ ವಿರೋಧ ವ್ಯಕ್ತವಾಗಿದ್ದರಿಂದ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಪ್ರದೇಶದಲ್ಲಿ ಈ ಶಾಲಾ ಕಟ್ಟಡ ನಿರ್ಮಾಣ ಮಾಡಬೇಕೆಂದು ನಿರ್ಧರಿಸಲಾಗಿತ್ತು ಎಂದರು.

    ಮಳೆಗಾಲ ಮುಗಿದ ಬಳಿಕ ಉಪ್ಪಳ್ಳಿಯಿಂದ ಒಡೆಯರಪುರದವರೆಗೂ ರಸ್ತೆಯನ್ನು ಡಾಂಬರೀಕರಣಗೊಳಿಸಿ ಪಕ್ಕದ ಬಾಕ್ಸ್ ಚರಂಡಿಯನ್ನು ನಿರ್ಮಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು. ನಗರಸಭಾಧ್ಯಕ್ಷೆ ಶೀಲಾದಿನೇಶ್ ಮಾತನಾಡಿ, ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಅಧಿಕಾರ ಸ್ವೀಕರಿಸಿದಂದಿನಿಂದ ಈವರೆಗೆ ಜನಪರ ಆಡಳಿತ ನೀಡುತ್ತಿದ್ದಾರೆ. ಅವರನ್ನು ಅಭಿನಂದಿಸುವುದಾಗಿ ಹೇಳಿದ ಅವರು, ಈ ಶಾಲಾ ಕಟ್ಟಡ ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಾಯಗೊಳಿಸುವಂತೆ ವಿನಂತಿಸಿದರು.

    ಸದಸ್ಯ ಮುನೀರ್ ಅಹಮದ್ ಮಾತನಾಡಿ, ಈ ಭಾಗದಲ್ಲಿ ‘ನಮ್ಮ ಕ್ಲಿನಿಕ್’ ಉದ್ಘಾಟಿಸಿದ ಶಾಸಕ ತಮ್ಮಯ್ಯ ಅವರು, ಜನರ ಆರೋಗ್ಯಕ್ಕೆ ಪೂರಕವಾದ ಕೆಲಸ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದ ಅವರು, ಈ ಶಾಲೆ ೬ ರಿಂದ ೧೦ನೇ ತರಗತಿವರೆಗೆ ಉಚಿತ ಶಿಕ್ಷಣ ನೀಡುವ ಯೋಜನೆಯನ್ನು ತಂದ ಶಾಸಕರನ್ನು ಅಭಿನಂದಿಸಿದರು.

    ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಲಲಿತಾ ನಾಯ್ಕ್, ಸಿಡಿಎ ಅಧ್ಯಕ್ಷ ನಯಾಜ್ ಅಹಮದ್, ಖಲಂದರ್, ಮಾರ್ಕಂಡಯ್ಯ, ಜಾವಿದ್, ಅನ್ಸರ್, ಸುದೀಪ್, ಗುಣಾವತಿ, ತನೂಜ್ ನಾಯ್ಡ್, ಕುಸುಮ, ಖಲೀಲ್, ರಾಜು, ಸಂಪತ್ ಮತ್ತಿತರರು ಇದ್ದರು.ಮೊದಲಿಗೆ ಯುವರಾಣಿ ಸ್ವಾಗತಿಸಿದರು.

    Maulana Azad Model School constructed at a cost of Rs 5 crore

  • 27.5 ಕೋಟಿ ರೂ.ವೆಚ್ಚದಲ್ಲಿ ನಗರದ ರಸ್ತೆಗಳ ಅಭಿವೃದ್ಧಿ

    27.5 ಕೋಟಿ ರೂ.ವೆಚ್ಚದಲ್ಲಿ ನಗರದ ರಸ್ತೆಗಳ ಅಭಿವೃದ್ಧಿ

    ಚಿಕ್ಕಮಗಳೂರು: ಮಳೆಯಿಂದಾಗಿ ಹದಗೆಟ್ಟಿರುವ ನಗರದ ರಸ್ತೆಗಳ ಅಭಿವೃದ್ಧಿಗೆ ೨೭.೫ ಕೋಟಿ ರೂ.ಗಳನ್ನು ರಾಜ್ಯ ಸರ್ಕಾರದಿಂದ ಒದಗಿಸಲಾಗಿದ್ದು, ಮಳೆ ನಿಂತ ಕೂಡಲೇ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ತಿಳಿಸಿದರು.

    ನಗರದ ಇಂಡಿಯನ್ ಐಸ್‌ಕ್ರೀಂ ಪಾರ್ಲರ್, ಮಲ್ಲಂದೂರು ರಸ್ತೆ, ವಿಜಯಪುರ ಹಾಗೂ ಹನುಮಂತಪ್ಪ ವೃತ್ತದಲ್ಲಿ ಇಂದು ಬೆಳಿಗ್ಗೆ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ಹಾಗೂ ಈ ವರ್ಷ ಹೆಚ್ಚು ಮಳೆಯಾಗಿರುವ ಹಿನ್ನೆಲೆಯಲ್ಲಿ ರಸ್ತೆಗಳು ಹೆಚ್ಚಾಗಿ ಗುಂಡಿ ಬಿದ್ದಿವೆ. ಜೊತೆಗೆ ಯು.ಜಿ.ಡಿ. ಹಾಗೂ ಅಮೃತ್ ಯೋಜನೆಯ ಕಾಮಗಾರಿಗಳಿಂದ ಕೂಡ ರಸ್ತೆಗಳು ಹಾನಿಗೊಳಗಾಗಿವೆ ಎಂಬ ದೂರುಗಳೂ ಕೇಳಿ ಬಂದಿವೆ ಎಂದರು.

    ರಸ್ತೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು, ನಗರಾಭಿವೃದ್ಧಿ ಸಚಿವರು ಹಾಗೂ ಪೌರಾಡಳಿತ ಸಚಿವರನ್ನು ತಾವು ಭೇಟಿ ಮಾಡಿ ಕೋರಿಕೆ ಸಲ್ಲಿಸಿದ ಮೇರೆಗೆ ನಗರಸಭೆಗೆ ವಿಶೇಷ ಅನುದಾನವನ್ನು ಒದಗಿಸಿದ್ದಾರೆ. ಎಸ್‌ಎಫ್‌ಸಿ ಯೋಜನೆಯಡಿ ೧೦ ಕೋಟಿ ರೂ. ಬಿಡುಗಡೆಯಾಗಿದ್ದು, ಕಾಮಗಾರಿ ನಿರ್ವಹಿಸಲು ಈಗಾಗಲೇ ಕಾರ್ಯಾದೇಶ ನೀಡಲಾಗಿದೆ. ವಿಶೇಷ ಅನುದಾನದಲ್ಲಿ ಸಹ ೧೨.೫ ಕೋಟಿ ರೂ.ಗಳನ್ನು ಹಾಗೂ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳ ರಸ್ತೆ ಅಭಿವೃದ್ಧಿಗೆ ಅಲ್ಪಸಂಖ್ಯಾತರ ಇಲಾಖೆಯಿಂದ ೫ ಕೋಟಿ ರೂ.ಗಳನ್ನು ಒದಗಿಸಿದ್ದು, ಒಟ್ಟು ೨೭.೫ ಕೋಟಿ ರೂ. ಲಭ್ಯವಿದ್ದು, ಈ ಮೊತ್ತವನ್ನು ವಿನಿಯೋಗಿಸಿ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಸತತ ಮಳೆಯಿಂದಾಗಿ ರಸ್ತೆಗಳ ಹಾನಿ ಮತ್ತು ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿ ಸಮಸ್ಯೆಗಳಿಗೆ ಸ್ಪಂದಿಸುವ ಸಲುವಾಗಿ ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡುತ್ತಿರುವುದಾಗಿ ತಿಳಿಸಿದ ಅವರು, ಇದೇ ರೀತಿ ಪ್ರತೀ ತಿಂಗಳಿಗೊಮ್ಮೆ ಬಡಾವಣೆಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳ ಮೂಲಕ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

    ಪಂಚ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಸಮರ್ಪಕವಾಗಿ ತಲುಪುತ್ತಿರುವ ಬಗ್ಗೆ ಗಮನ ಹರಿಸಲು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದಿಂದ ಸ್ಪಂದಿಸುವ ಕಾರ್ಯವೂ ಇದರ ಜೊತೆಯಲ್ಲಿ ನಡೆಯಲಿದೆ. ಇದರ ಜೊತೆಗೆ ಪರಿಸರದ ಬಗ್ಗೆ ಹಾಗೂ ಸ್ವಚ್ಛತೆ ಬಗ್ಗೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ರೂಪಿಸಬೇಕೆಂಬ ಬಗ್ಗೆ ಅರಿವು ಮೂಡಿಸಲು ಸೈಕಲ್‌ನಲ್ಲಿ ನಗರ ಪ್ರದಕ್ಷಿಣೆ ಕೈಗೊಂಡಿರುವುದಾಗಿ ತಿಳಿಸಿದರು.

    ನಗರದ ಇಂಡಿಯನ್ ಐಸ್‌ಕ್ರೀಂ ಪಾರ್ಲರ್ ಬಳಿ ಸೈಕಲ್‌ನಲ್ಲಿ ನಗರ ಪ್ರದಕ್ಷಿಣೆ ಕೈಗೊಂಡ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪರಿಸರವಾದಿ ಸ.ಗಿರಿಜಾಶಂಕರ ಮಾತನಾಡಿ, `ಸೈಕಲ್ ತುಳಿ, ಪರಿಸರ ತಿಳಿ’ ಕಾರ್ಯಕ್ರಮದಿಂದ ಗುಂಡಿಮಯ ರಸ್ತೆಗಳು, ಚರಂಡಿಗಳು ಸೇರಿದಂತೆ ವಿವಿಧ ಸಮಸ್ಯೆಗಳು ಗೋಚರವಾಗುತ್ತವೆ. ಈ ಪರಿಕಲ್ಪನೆ ಉತ್ತಮವಾಗಿದೆ ಎಂದು ಶ್ಲಾಘಿಸಿದರು.

    ಮಧುವನ ಬಡಾವಣೆಯಲ್ಲಿ ಎರಡು ಉದ್ಯಾನಗಳನ್ನು ಅಭಿವೃದ್ಧಿಪಡಿಸುವ ಕಾರ್ಯ ನಡೆಯಬೇಕಿದೆ. ಈಗಾಗಲೇ ಸೌರ ದೀಪಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಪ್ರತೀ ವರ್ಷ ಕಳೆ ಕೀಳುವ ಕೆಲಸ ಬಡಾವಣೆಯ ನಿವಾಸಿಗಳಿಂದಲೇ ನಡೆಯುತ್ತಿದೆ. ಇಲ್ಲಿ ಸಣ್ಣ ನೀರಾವರಿ ಇಲಾಖೆಗೆ ಸಂಬಂಧಿಸಿದ ದೊಡ್ಡ ಕಾಲುವೆಯಿಂದ ಕಳೆಯನ್ನು ತೆರವುಗೊಳಿಸದೆ ಅದರಿಂದಾಗಿಯೇ ಬಹಳಷ್ಟು ಕಾಯಿಲೆಗಳಿಗೆ, ಸೊಳ್ಳೆ ಕಾಟಕ್ಕೆ ಕಾರಣವಾಗುತ್ತಿದೆ. ಕಸ ಎಸೆಯಲು ಕೂಡ ಬಳಕೆಯಾಗುತ್ತಿದೆ.

    ಸಣ್ಣ ನೀರಾವರಿ ಇಲಾಖೆ ಈ ಕಾಲುವೆಯನ್ನು ಸುವ್ಯವಸ್ಥಿತಗೊಳಿಸಲು ಕ್ರಮ ಕೈಗೊಳ್ಳಬೇಕಿದೆ. ಈ ಬಡಾವಣೆಯಲ್ಲಿ ಆಗಿಂದಾಗ್ಗೆ ವಿದ್ಯುತ್ ನಿಲುಗಡೆಯಾಗುತ್ತಿದೆ. ಮೆಸ್ಕಾಂ ಕಚೇರಿಗೆ ಕರೆ ಮಾಡಿದರೆ ಅವರು ಕಾರಣವನ್ನೇ ನೀಡುತ್ತಿಲ್ಲ. ಮೆಸ್ಕಾಂನವರು ವರ್ಷಕ್ಕೆ ಎರಡು ಬಾರಿಯಾದರೂ ಗ್ರಾಹಕರೊಂದಿಗೆ ಮುಖಾಮುಖಿ ಕಾರ್ಯಕ್ರಮ ನಡೆಸುವುದು ಸೂಕ್ತ. ಆಗ ಸಮಸ್ಯೆಗಳನ್ನು ಹೇಳಿಕೊಳ್ಳಬಹುದು. ಮೆಸ್ಕಾಂ ಗ್ರಾಹಕ ಸ್ನೇಹಿಯಾಗಿ ಸ್ಪಂದಿಸುತ್ತಿಲ್ಲ. ಬಿಲ್ ಪಾವತಿಸದಿದ್ದರೆ ಸಂಪರ್ಕ ಸ್ಥಗಿತಗೊಳಿಸಲು ಮಾತ್ರ ಬರುತ್ತಿದ್ದಾರೆ ಎಂದು ಆರೋಪಿಸಿದರು.

    ಸಾರ್ವಜನಿಕ ಇಲಾಖೆಗಳಲ್ಲಿ ಜನರಿಗೆ ಸ್ಪಂದಿಸುವ ಕಾರ್ಯ ನಡೆಯಬೇಕಿದೆ. ನಗರಸಭೆಯಿಂದ ವಾರಕ್ಕೆರಡು ಬಾರಿಯಾದರೂ ಕಸ ಗುಡಿಸುವ ಕಾರ್ಯ ನಡೆಯಬೇಕು. ಚರಂಡಿಗಳನ್ನು ಸುಸ್ಥಿತಿಗೊಳಿಸುವ ಕೆಲಸ ಮಾಡಬೇಕಿದೆ. ಪೊಲೀಸ್ ಗಸ್ತು ವ್ಯವಸ್ಥೆ ಕಲ್ಪಿಸಬೇಕು ಎಂದು ಗಮನ ಸೆಳೆದರು.

    ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಮಧುವನ ಬಡಾವಣೆಯಲ್ಲಿ ಪಾರ್ಕ್‌ಗಳನ್ನು ಅಭಿವೃದ್ಧಿಪಡಿಸಲಾಗುವುದು. ಚರಂಡಿಗಳನ್ನು ಸುಸ್ಥಿತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ನಗರಸಭೆ ಉಪಾಧ್ಯಕ್ಷೆ ಲಲಿತಾ ರವಿ ನಾಯ್ಕ, ನಗರಸಭೆ ಮಾಜಿ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಸದಸ್ಯರಾದ ಶಾದಾಬ್ ಆಲಂಖಾನ್, ಲಕ್ಷ್ಮಣ್, ಸಿಡಿಎ ಅಧ್ಯಕ್ಷ ನಯಾಜ್ ಅಹಮ್ಮದ್, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ತಾಲೂಕು ಸಮಿತಿ ಅಧ್ಯಕ್ಷ ಮಲ್ಲೇಶ್‌ಸ್ವಾಮಿ, ಸಿಡಿಎ ಆಯುಕ್ತೆ ನಾಗರತ್ನ, ತಹಸೀಲ್ದಾರ್ ರೇಷ್ಮಾಶೆಟ್ಟಿ, ಪೌರಾಯುಕ್ತ ಬಿ.ಸಿ.ಬಸವರಾಜು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.

    Development of city roads at a cost of Rs. 27.5 crore

  • ಅ.29ಕ್ಕೆ ಮನೆ ಮನಗಳಲ್ಲಿ ಕನ್ನಡ ಅಭಿಯಾನ

    ಅ.29ಕ್ಕೆ ಮನೆ ಮನಗಳಲ್ಲಿ ಕನ್ನಡ ಅಭಿಯಾನ

    ಚಿಕ್ಕಮಗಳೂರು: ರಾಜ್ಯದಲ್ಲಿ ಪ್ರಪ್ರಥಮ ಭಾರಿಗೆ ಮನೆ ಮನಗಳಲ್ಲಿ ಕನ್ನಡ ಅಭಿಯಾನವನ್ನು ಅ.೨೯ ರಂದು ಬುಧವಾರ ಚಿಕ್ಕಮಗಳೂರು ನಗರದಲ್ಲಿ ಚಾಲನೆ ನೀಡಲಾಗುತ್ತಿದೆ ಎಂದು ಐಸಿರಿ ಫೌಂಡೇಶನ್ ಅಧ್ಯಕ್ಷ ಹಾಗೂ ಕ.ಸಾ.ಪ ತಾಲ್ಲೂಕು ಯುವಘಟಕದ ಅಧ್ಯಕ್ಷ ರೋಹನ್ ಭಾರ್ಗವಪುರಿ ತಿಳಿಸಿದರು.

    ಅವರು ಇಂದು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಐಸಿರಿ ಫೌಂಡೇಶನ್ ಮತ್ತು ಕ.ಸಾ.ಪ ತಾಲ್ಲೂಕು ಯುವ ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ೬೯ ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮನೆ ಮನಗಳಲ್ಲಿ ಕನ್ನಡ ಅಭಿಯಾನ ಚಾಲನೆಗೊಳ್ಳಲಿದೆ ಎಂದರು.

    ನಟ ಪುನೀತ್ ರಾಜ್ ಕುಮಾರವರ ಪುಣ್ಯಸ್ಮರಣೆಯ ದಿನದಂದು ಅಭಿಯಾನಕ್ಕೆ ಚಾಲನೆ ನೀಡಲಾಗುವುದು ನಗರದ ನಾಗರೀಕರು ತಮ್ಮ ಕನ್ನಡಾಭಿಮಾನವನ್ನು ತಮ್ಮ ಮನೆಮನೆಗಳಲ್ಲಿ ಕುಟುಂಬ ಸಮೇತರಾಗಿ ಕನ್ನಡ ಧ್ವಜ ಹಾರಿಸಿ ಫೋಟೋ ಅಥವಾ ವೀಡೀಯೋವನ್ನು ಐಸಿರಿ ಕಛೇರಿಯ ವಾಟ್ಸಪ್ ಸಂಖ್ಯೆ:೭೯೭೫೪೦೮೧೬೨ ಕ್ಕೆ ಸ್ವ-ವಿವರ ಹಾಗೂ ಸ್ಥಳದೊಂದಿಗೆ ಕಳಿಸಿಕೊಡುವಂತೆ ಮನವಿ ಮಾಡಿದರು .

    ಐಸಿರಿ ಫೌಂಡೇಶನ್ ಸಂಸ್ಥೆಯು ಭರವಸೆ ಮತ್ತು ಸುಧಾರಣೆ ಕಾರ್ಯದ ಜವಾಬ್ದಾರಿಯನ್ನು ತನ್ನ ಹೆಗಲಿಗೇರಿಸಿಕೊಂಡಿದ್ದು ವಿವಿಧ ಆಯಾಮಗಳಲ್ಲಿ ಈಗಾಗಲೆ ಸಮಾಜಮುಖಿ ಕಾರ್ಯಗಳಲ್ಲಿ ದಿಟ್ಟ ಹೆಜ್ಜೆಗಳನಿಟ್ಟು ಯೋಜನೆಯತ್ತ ಮುನ್ನೆಡೆಸುತ್ತಿದೆ ಐಸಿರಿ ಪರ್ಸ್ಪೆಕ್ಟಿವ್ ಎಂಬ ಆಯಾಮದಡಿಯಲ್ಲಿ ಜ್ಞಾನ ಶಿಬಿರ ನಡೆಸಿಕೊಂಡು ಬರುತ್ತಿದೆ ಎಂದರು.

    ಐಸಿರಿ ಸಸ್ಟೇನೆಬಿಲಿಟಿ ಎಂಬ ಆಯಾಮದಡಿಯಲ್ಲಿ ಹಸಿರು ಸಮರ್ಥನೆಯ ಭವಿಷ್ಯಕ್ಕೆ ಮತ್ತು ಐಸಿರಿ ಇಂಡಿಯಾ ಆಯಾಮದಡಿಯಲ್ಲಿ ನಾಗರೀಕ ನಿರ್ಮಾಣ ಎಂಬ ಧ್ಯೇಯದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಮಾಹಿತಿ ನೀಡಿದರು.

    ಕನ್ನಡ ರಾಜ್ಯೋತ್ಸವದ ಅಂಗವಾಗಿ ನಡೆಸುತ್ತಿರುವ ಮನೆಮನಗಳಲ್ಲಿ ಕನ್ನಡ ಅಭಿಯಾನ ಕಾರ್ಯಕ್ರಮವನ್ನು ಸರ್ವರೂ ಆಚರಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.ಪತ್ರಿಕಾಗೋಷ್ಠಿಯಲ್ಲಿ ಕ.ಸಾ.ಪ ತಾಲ್ಲೂಕು ಯುವಘಟಕದ ಮುಖಂಡರುಗಳಾದ ವೀಣಾ ಮಲ್ಲಿಕಾರ್ಜುನ್ , ವಿಜಯಲಕ್ಷ್ಮೀ, ರೂಪ ನಾಯಕ್ , ಸಚಿನ್ ಸಿಂಗ್ ಉಪಸ್ಥಿತರಿದ್ದರು.

    Kannada campaign in homes on October 29th