Category: ಕಡೂರು

  • ಅಂತರ್ ಜಿಲ್ಲಾ ಕಳವು-ದರೋಡೆ ಪ್ರಕರಣದ ಆರೋಪಿಗಳ ಬಂಧನ

    ಅಂತರ್ ಜಿಲ್ಲಾ ಕಳವು-ದರೋಡೆ ಪ್ರಕರಣದ ಆರೋಪಿಗಳ ಬಂಧನ

    ಚಿಕ್ಕಮಗಳೂರು:  ಅಂತರ್ ಜಿಲ್ಲಾ ಕಳವು- ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಬಂಧಿಸಿರುವ ಪೊಲೀಸರು ಬಂಗಾರದ ಗಟ್ಟಿ ಸೇರಿದಂತೆ ೨೫ ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ. ಚಿಕ್ಕಮಗಳೂರು ನಗರದ ಬಸವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಅನೇಕ ಕಳ್ಳತನ ಪ್ರಕರಣ ನಡೆದಿದ್ದು ಪ್ರಭಾರ ವೃತ್ತ ನಿರೀಕ್ಷಕ ಗವಿರಾಜ್ ಪಿ.ಐ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು.

    ಬೆಂಗಳೂರಿನ ಆರ್ ಟಿ ನಗರದಲ್ಲಿ ನೆಲೆಸಿದ್ದ ಚಿಕ್ಕಮಗಳೂರು ಉಪ್ಪಳ್ಳಿ ನಿವಾಸಿ ಮೊಹಮದ್ ಕಬೀರ್, ಡಿಜೆ ಹಳ್ಳಿವಾಸಿ ಯೂಸುಫ ಪಾಷಾ ನನ್ನು ಬಂಧಿಸಿ ಒಟ್ಟು ೩೩೪ ಗ್ರಾಂ ಬಂಗಾರದ ಗಟ್ಟಿ, ಮತ್ತು ಕೃತ್ಯಕ್ಕೆಬಳಸಿದ್ದ ಬಜಾಜ್ ಪಲ್ಸರ್ ಬೈಕ್ ( ತುಮಕೂರಿನಲ್ಲಿ ಕಳವು ಮಾಡಿದ್ದು) ಒಟ್ಟು ಬೆಲೆ ೨೫,೦೦,೦೦೦ ವಶಪಡಿಸಿಕೊಳ್ಳಲಾಗಿದೆ.

    ಅಹಮದ್ ಕಬೀರ್ ನನ್ನು ೨೦೨೩ ನೇ ಸಾಲಿನಲ್ಲಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಬಂಧಿಸಿದ್ದು, ೧೨ ಮನೆಕಳವು ಪ್ರಕರಣಗಳು ಪತ್ತೆಯಾಗಿದ್ದು, ಆರೋಪಿಯಿಂದ ೨೯೫ ಗ್ರಾಂ ಚಿನ್ನ & ೩೫೦ ಗ್ರಾಂ ಬೆಳ್ಳಿಯ ಭರಣ ಹಾಗೂ ೧ ಪಿಸ್ತೂಲ್ & ಗುಂಡುಗಳು ದೊರೆತಿದ್ದವು.

    ಪಿಸ್ತೂಲ್ ಅನ್ನುವೈಜ್ಞಾನಿಕ ಪರೀಕ್ಷೆಗೆ ಕಳುಹಿಸಿದಾಗ ೨೦೨೦ ರಂದು ಚಿಕ್ಕಮಗಳೂರು ನಗರದ ಕೇಸರಿ ಜ್ಯೂಯೆಲರಿ ಚಿನ್ನದ ಅಂಗಡಿಯಲ್ಲಿ ಗುಂಡು ಹಾರಿಸಿ ದರೋಡೆಗೆ ಪ್ರಯತ್ನಿಸಿದ್ದಾಗ ಸ್ಥಳದಲ್ಲಿ ದೊರೆತ ಗುಂಡಿಗೆ ಹೋಲಿಕೆಯಾಗಿರುವುದಾಗಿ ಎಫ್.ಎಸ್.ಎಲ್ ವರದಿಯಿಂದ ದೃಢಪಟ್ಟಿದೆ.

    ಆರೋಪಿ ಕಬೀರ್ ಮತ್ತು ಆತನ ಸಹಚರರು ದರೋಡೆ ಪ್ರಕರಣದಲ್ಲಿ ಭಾಗಿಯಾಗಿರುವುದೂ ಬೆಳಕಿಗೆ ಬಂದಿದೆ. ಈತನ ವಿರುದ್ಧ ಮಂಗಳೂರು ನಗರ, ಶಿವಮೊಗ್ಗ , ತುಮಕೂರು , ದಾವಣಗೆರೆ , ಚಾಮರಾಜನಗರ ಜಿಲ್ಲೆ ಗಳಲ್ಲಿ ೫೦ ಕ್ಕೂ ಹೆಚ್ಚು ಕಳವು ಪ್ರಕರಣಗಳು ದಾಖಲಾಗಿದ್ದು, ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು ಈತನ ವಿರುದ್ಧ ವಾರೆಂಟ್ ಹೊರಡಿಸಲಾಗಿತ್ತು,

    ಈ ಆರೋಪಿಗಳನ್ನು ಪತ್ತೆ ಮಾಡುವ ತಂಡದಲ್ಲಿ ಅಬ್ದುಲ್ ಖಾದರ್‌ಸಿ,ಇ,ಎನ್ ಪಿ,ಎಸ್,ಐ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳಾದ ಹೆಚ್.ಸಿ ಹೆಚ್,ಎಸ್, ನಂಜಪ್ಪ, ಪೊಲೀಸ್ ಠಾಣೆ, ಪ್ರದೀಪ ,ಲೋಹಿತ್ ಸಿ,ಎಂ, ಗ್ರಾಮಾಂತರ ಪೊಲೀಸ್ ಠಾಣೆ, ಹೆಚ್ ಸಿ ರವೀಂದ್ರ ,ಮಧುಸೂಧನ್, ಲಿಂಗಮೂರ್ತಿ, ಡಿ.ಸಿ.ಆರ್.ಬಿ ವಿಭಾಗದ ಗಿರೀಶ್, ಹೆಚ್ ಸಿ, ಅನ್ವರ್ ಪಾಷ, ಹರಿಪ್ರಸಾದ್ ಹಾಗೂ ತಾಂತ್ರಿಕ ವಿಭಾಗದ ಅಬ್ದುಲ್ ರಬ್ಬಾನಿ, ಹಾಗು ಮಹಿಳಾ ಸಿಬ್ಬಂದಿ ಕು. ಪುಷಾ ಭಾಗವಸಿದ್ದರು. ಕಾರ್ಯಾಚರಣೆ ತಂಡಕ್ಕೆ ಪೊಲೀಸ್ ಅಧೀಕ್ಷಕರು ಬಹುಮಾನ ಘೋಷಿಸಿದ್ದಾರೆ.

    Accused arrested in inter-district theft-robbery case

  • ಸಖರಾಯಪಟ್ಟಣದ ಅನಧಿಕೃತ ಕ್ಲಿನಿಕ್ ಬಂದ್

    ಸಖರಾಯಪಟ್ಟಣದ ಅನಧಿಕೃತ ಕ್ಲಿನಿಕ್ ಬಂದ್

    ಚಿಕ್ಕಮಗಳೂರು:  ಇಲ್ಲಿನ ಸಖರಾಯಪಟ್ಟಣದಲ್ಲಿ ಕೆಪಿಎಂಇಯಲ್ಲಿ ನೊಂದಾಯಿಸದೆ ಅನಧಿಕೃತವಾಗಿ ನಡೆಸುತ್ತಿದ್ದ ಶ್ರೀರಾಮ ಕ್ಲಿನಿಕ್‌ಅನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ತಂಡ ಮೊಹರು ಹಾಕಿ ಮುಚ್ಚಿಸಿದೆ.

    ಹಾಸನ ಜಿಲ್ಲೆ ಅರಸೀಕೆರೆ ತಾಲ್ಲೂಕಿನ ಅಂದರಾಳು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವರದರಾಜು. ಆರ್ ಅವರು ಕೆಪಿಎಂಇಯಲ್ಲಿ ನೊಂದಾಯಿಸದೆ ಅನಧಿಕೃತವಾಗಿ ಕ್ಲಿನಿಕ್ ನಡೆಸುತ್ತಿರುವುದು ಭೇಟಿನೀಡಿದ ತಂಡಕ್ಕೆ ಕಂಡುಬಂದ ಹಿನ್ನೆಲೆಯಲ್ಲಿ ಕ್ಲಿನಿಕ್‌ನ್ನು ಬಂದ್ ಮಾಡಲಾಗಿದೆ,

    ಈ ಸಂಬಂಧ ಜಿಲ್ಲಾ ಅಧಿಕಾರಿ, ಅಧ್ಯಕ್ಷರು ಕೆಪಿಎಂಇ ನೋಂದಣಿ ಪ್ರಾಧಿಕಾರ ಇವರಿಗೆ ಸೂಕ್ತ ಕ್ರಮಕ್ಕಾಗಿ ದೂರು ಸಲ್ಲಿಸಲಾಗಿದೆ ಎಂದು ಕೆಪಿಎಂಇ ನೋಡಲ್ ಅಧಿಕಾರಿ ಡಾ. ಶಶಿಕಲಾ.ಎಂ ಇವರು ತಿಳಿಸಿದ್ದಾರೆ.

    ವೈದ್ಯಾಧಿಕಾರಿಗಳ ತಂಡದಲ್ಲಿ ಜಿಲ್ಲಾ ಆರ್‌ಸಿಹೆಚ್‌ಓ, ಪ್ರಭಾರಿ ಡಿಹೆಚ್‌ಓ ಡಾ. ಮಂಜುನಾಥ್ ಹೆಚ್.ಕೆ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ. ಶಶಿಕಲಾ, ಜಿಲ್ಲಾ ಆಶ್ರಿತ ರೋಗಗಳ ರೋಗವಾಹಕ ನಿಯಂತ್ರಣಾಧಿಕಾರಿ ಡಾ. ಬಾಲಕೃಷ್ಣ ಟಿ.ಪಿ ಮತ್ತಿತರ ಸಿಬ್ಬಂದಿ ಉಪಸ್ಥಿತರಿದ್ದರು

    Unauthorized clinic in Sakharayapattana shut down

  • ಬೀರೂರು ಠಾಣಾ ಪೋಲಿಸರಿಂದ 1 ಕೋಟಿ ಮೌಲ್ಯದ ಅಡಿಕೆ ವಶ-ಅರೋಪಿಗಳ ಬಂಧನ

    ಬೀರೂರು ಠಾಣಾ ಪೋಲಿಸರಿಂದ 1 ಕೋಟಿ ಮೌಲ್ಯದ ಅಡಿಕೆ ವಶ-ಅರೋಪಿಗಳ ಬಂಧನ

    ಚಿಕ್ಕಮಗಳೂರು: ಬೀರೂರಿನಿಂದ ಗುಜರಾತ್‌ಗೆ ಸಾಗಿಸಲು ತುಂಬಿದ್ದ ೩೫೦ ಚೀಲ ಅಡಿಕೆಯನ್ನು ಹೊಳಲ್ಕೆರೆಯ ವ್ಯಾಪಾರಿಯೊಬ್ಬರಿಗೆ ಮಾರಾಟ ಮಾಡಲು ಯತ್ನಿಸಿದ ಲಾರಿ ಚಾಲಕ ,ಮತ್ತು ಕ್ಲೀನರ್‌ನನ್ನು ಪತ್ತೇಹಚ್ಚಿ ೧.೨೨.೮೨.೫೦೦/- ರೂ ಮೌಲ್ಯದ ಅಡಿಕೆಯನ್ನು ವಶಪಡಿಸಿಕೊಳ್ಳುವಲ್ಲಿ ಬೀರೂರು ಠಾಣಾ ಪೋಲಿಸರು ಯಶಸ್ವಿಯಾಗಿದ್ದಾರೆ.

    ಬೀರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಾಜಿ ರೋಡ್ ವೇಸ್ ನ ಮಾಲೀಕರಾದ ದುಲಾರಾಮ್ ರವರ ಮೂಲಕ ಬೀರೂರಿನ ದೇವಗಿರಿ ಟ್ರೇಡರ್ಸ್‌ನಲ್ಲಿ ಡಿ.೧೨ರಂದು ತಲಾ ೭೦ ಕೆ.ಜಿ ತೂಕದ ೩೫೦ ಚೀಲ ಅಡಿಕೆ ಲಾರಿಯಲ್ಲಿ ತುಂಬಿಸಿ ಗುಜರಾತ್ ರಾಜ್ಯದ ವಲ್ಸಾದ್ ಸ್ಥಳಕ್ಕೆ ತಲುಪಿಸಲು ಕಳೂಹಿಸಲಾಗಿತ್ತು.

    ಲಾರಿಯ ಚಾಲಕನಾದ ಮೊಹಮ್ಮದ್ ಸುಬಾನ್ ಹಾಗೂ ಲಾರಿ ಕಂಡಕ್ಟರ್ ಮೊಹಮ್ಮದ್ ಫಯಾಜ್ ಇಬ್ಬರು ಸೇರಿಕೊಂಡು ಅಡಿಕೆಯನ್ನು ಗುಜರಾತ್‌ಗೆ ತೆಗೆದುಕೊಂಡು ಹೋಗದೆ ವಂಚಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಲ್ಲಿಯೋ ಹೋಗಿರುವ ಬಗ್ಗೆ ಬೀರೂರು ಠಾಣೆಗೆ ಬಂದ ದೂರನ್ನಾಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು.

    ಪ್ರಕರಣದಲ್ಲಿ ಆರೋಪಿತರ ಪತ್ತೆಗಾಗಿ ಕ್ಷಿಪ್ರ ಕಾರ್ಯಾಚರಣೆ ನಡೆಸಲುಪೊಲೀಸ್ ಅಧೀಕ್ಷಕ ಡಾ|| ವಿಕ್ರಂ ಅಮಟೆ ತರೀಕೆರೆ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕವಿ.ಎಸ್.ಹಾಲಮೂರ್ತಿರಾವ್ ನೇತೃತ್ವದಲ್ಲಿ ತಂಡರಚಿಸಿ ಆರೋಪಿಗಳಪತ್ತೆ ಮಾಡಲು ವ್ಯೂಹ ರಚಿಸಲಾಯಿತು.

    ಜಿಲ್ಲಾ ತಾಂತ್ರಿಕ ವಿಭಾಗದ ಸಿಬ್ಬಂಧಿಗಳಾದ ನಯಾಜ್ ಅಂಜುಮ್ ಮತ್ತು ರಬ್ಬಾನಿ ಹಾಗೂ ಬೀರೂರು ಪೊಲೀಸ್ ಠಾಣೆಯ ರಾಧ ಇವರುಗಳ ತಾಂತ್ರಿಕ ಸಹಯೋಗದೊಂದಿಗೆ ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ತನಿಖೆ ನಡೆಸಿ ಆರೋಪಿತರುಗಳ ಪತ್ತೆಯ ಬಗ್ಗೆ ನಿಖರ ಮಾಹಿತಿಯನ್ನು ಕಲೆಹಾಕಿ ನಂತರ ಆರೋಪಿತರ ಇರುವಿಕೆಯ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಬೆಂಗಳೂರಿನ ತಿರುಪಾಳ್ಯದ ಸ್ಕೋಂಡೋ ೨ ಅಪಾರ್ಟ್‌ಮೆಂಟ್ ಬಳಿ ಆರೋಪಿತರಾದ ಚಾಲಕ ತೀರ್ಥಹಳ್ಳಿಯಅಮೀರ್ ಹಮ್ಮದ್, ಮೊಹಮ್ಮದ್ ಗೌಸ್ ಖಾನ್,ಸುಹೇಲ್, ಮೊಹಮ್ಮದ್ ಸುಭಾನ್ ಗಬ್ಬರ್,ಮೊಹಮ್ಮದ್ ಫಯಾಜ್,ಬೆಂಗಳೂರಿನ ಮೊಹಮ್ಮದ್ ಸಾದಿಕ್ ಇವರುಗಳನ್ನು ದಸ್ತಗಿರಿ ಪೋಲೀಸರು ವಿಚಾರಣೆ ಮಾಡಿದರು.

    ಹೊಳಲ್ಕೆರೆ ತಾ|| ಹೊಸಳ್ಳಿ ಗ್ರಾಮದ ವಾಸಿ ಮಲ್ಲಿಕಾರ್ಜುನ್ ರವರ ಕೋಳಿ ಫಾರಂ ಬಳಿ ಹೋಗಿ ಮಾರಾಟ ಮಾಡುವ ಉದ್ದೇಶದಿಂದ ಅನ್ ಲೋಡ್ ಮಾಡಿರುವುದಾಗಿ ಒಪ್ಪಿಕೊಂಡಿರುತ್ತಾರೆ. ದಸ್ತಗಿರಿಯಾದ ಆರೋಪಿತರಿಂದ ೩೩೫ ಅಡಿಕೆ ಚೀಲಗಳನ್ನು ತನಿಖೆಯ ಸಮಯದಲ್ಲಿ ಅಮಾನತ್ತುಪಡಿಸಿಕೊಳ್ಳಲಾಗಿದೆ ಈ ಪ್ರಕರಣದ ಇನ್ನೊಬ್ಬ ಆರೋಪಿ ತಲೆಮರೆಸಿಕೊಂಡಿರುತ್ತಾನೆ.

    ಬಂಧಿತ ಆರೋಪಿತರಿಂದ ೩೩೫ ಅಡಿಕೆ ಚೀಲ ಅಂದಾಜು ಬೆಲೆ – ೧.೦೫.೫೨.೫೦೦/-ರೂ, ಕೆಎ೩೦ ಎ೧೭೦೫ ನಂಬರ್ ನ ೧೨ ಚಕ್ರಗಳ ಲಾರಿ, ಅಂದಾಜು ಬೆಲೆ ೧೫.೦೦.೦೦೦/- ರೂ,೨.೩೦.೦೦೦/-ರೂ ನಗದು ಹಣ ವಶಕ್ಕೆ ಪಡೆದುಕೊಂಡಿದ್ದಾರೆ.

    ಕಾರ್ಯಾಚರಣೆಯಲ್ಲಿ ಕಡೂರು ವೃತ್ತನಿರೀಕ್ಷಕ ರಫೀಕ್,ಬೀರೂರು ಪೊಲೀಸ್ ಠಾಣೆಯ ಸಜಿತ್ ಕುಮಾರ್ ಜಿ.ಆರ್, – ಪಿ.ಎಸ್.ಐ (ಕಾ &ಸು), ಡಿ.ವಿ.ತಿಪ್ಪೇಶ್,ಅಜ್ಜಂಪುರ ಪೊಲೀಸ್ ಠಾಣೆ ಪಿಎಸೈ ಶಶಿಕುಮಾರ್ ,ಲಿಂಗದಹಳ್ಳಿ ಪೊಲೀಸ್ ಠಾಣೆ, ಗಣಪತಿ ಎಸ್ ಶೇರುಗಾರ ಪಿ.ಎಸ್.ಐ (ತನಿಖೆ) ಬೀರೂರು ಪೊಲೀಸ್ ಠಾಣೆಯ ಅಪರಾಧ ವಿಭಾಗದ ಸಿಬ್ಬಂಧಿಗಳಾದ ಡಿ.ವಿ.ಹೇಮಂತ್ ಕುಮಾರ್, ಬಿ.ಪಿ.ಕೃಷ್ಣಮೂರ್ತಿ, ಬಿ.ಹೆಚ್.ರಾಜಪ್ಪ ಹಾಗೂ ಅಜ್ಜಂಪುರ ಪೊಲೀಸ್ ಠಾಣೆಯ ನಾಗರಾಜ ವೈ, ಜೀಪ್ ಚಾಲಕರಾದ ಚಂದ್ರ ನಾಯ್ಕ ಭಾಗವಹಿಸಿದ್ದರು.

    ಕಡೂರು ಸಾದಿಕ್ ವಿರುದ್ಧ ರಾಜ್ಯದ ವಿವಿಧ ಠಾಣೆಗಳಲ್ಲಿ, ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆ ಹಾಗೂ ಹೊರರಾಜ್ಯಗಳಲ್ಲಿಯೂ ಸಹಾ ಮನೆ ಕಳವು ಪ್ರಕರಣಗಳು ದಾಖಲಾಗಿರುತ್ತವೆ. ಆರೋಪಿ ಹಮ್ಮ @ ಅಮೀರ್ ಅಮ್ಮದ್ ಈತನ ವಿರುದ್ಧ ಬೆಂಗಳೂರಿನ ಮಾಗಡಿ ಪೊಲೀಸ್ ಠಾಣೆ ಯೂ ಸೇರಿದಂತೆ ತುಮಕೂರಿನ ಶಿರಾ ಪೊಲೀಸ್ ಠಾಣೆ ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಮನೆ ಕಳವು, ಕೊಲೆ ಪ್ರಕರಣಗಳು ದಾಖಲಾಗಿರುತ್ತವೆ

    ಆರೋಪಿ ಮೊಹಮ್ಮದ್ ಗೌಸ್ ನ ವಿರುದ್ಧ ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಕೋಕಾ ಕಾಯ್ದೆಯಡಿ ಹಾಗೂ ಭದ್ರಾವತಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಸುಲಿಗೆ ಪ್ರಕರಣಗಳು ದಾಖಲಾಗಿರುತ್ತವೆ. ಈ ಪ್ರಕರಣದಲ್ಲಿ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಯಶಸ್ವಿಯಾಗಿ ಆರೋಪಿತರುಗಳನ್ನು ದಸ್ತಗಿರಿ ಮಾಡಿ ಅವರಿಂದ ಸ್ವತ್ತನ್ನು ವಶಪಡಿಸಿಕೊಂಡು ಸೂಕ್ತ ಕಾನೂನು ಕ್ರಮ ಜರುಗಿಸುವಲ್ಲಿ ಶ್ರಮಿಸಿದ ತನಿಖಾ ತಂಡವನ್ನು ಮಾನ್ಯ ಪೊಲೀಸ್ ಅಧೀಕ್ಷಕರು, ಚಿಕ್ಕಮಗಳೂರು ಜಿಲ್ಲೆ ರವರು ಶ್ಲಾಘಿಸಿ ಬಹುಮಾನ ನೀಡಿರುತ್ತಾರೆ.

    Birur police seize areca nut worth Rs 1 crore; suspects arrested

  • ಕಡೂರು ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

    ಕಡೂರು ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

    ಚಿಕ್ಕಮಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪದಡಿ ಕಡೂರು ತಾಲೂಕು ವೈದ್ಯಾಧಿಕಾರಿ ಡಾ.ಉಮೇಶ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

    ಡಾ.ಉಮೇಶ್ ೧೯೯೫ರಲ್ಲಿ ವೈದ್ಯಾಧಿಕಾರಿಯಾಗಿ ಸೇವೆಗೆ ನೇಮಕವಾಗಿದ್ದು, ೨೦೨೩ ರಿಂದ ಕಡೂರು ತಾಲೂಕು ವೈದ್ಯಾಧಿ ಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಇವರು ೨೦೨೦ ರಿಂದ ೨೦೨೩ ರ ವರೆಗೆ ಚಿಕ್ಕಮಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ೧೯೯೫ ರಿಂದ ಸೇವೆಗೆ ಸೇರಿದಲ್ಲಿಂದ ಇಲ್ಲಿಯವರೆಗೆ ತಮ್ಮ ಅಧಿಕಾರವನ್ನು ದುರುಪ ಯೋಗ ಮಾಡಿಕೊಂಡು ಕಾನೂನು ಬದ್ದ ಮೂಲ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಚಿರಾಸ್ಥಿ ಹಾಗೂ ಚರಾಸ್ಥಿ ಸಂಪಾದನೆ ಮಾಡಿದ್ದಾರೆ ಆರೋಪವಿದೆ.

    ಪತ್ನಿ ಟಿ.ಎಸ್.ಮಂಜುಳ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ ಸ್ಥಿರಾಸ್ತಿಯನ್ನು ಖರೀದಿ ಮಾಡಿದ್ದಾರೆ. ಇಬ್ಬರು ಮಕ್ಕಳು ರಾಯಚೂರು ಮತ್ತು ದಾವಣಗೆರೆ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಮಾಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    Lokayukta raids Kadur Taluk Medical Officer’s house