May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಅತ್ತಿಗುಂಡಿ ಶಾಲೆ ದುರಸ್ಥಿ ಕಾರ್ಯನಿರ್ವಹಿಸಿ ಕೊಡುವಂತೆ ಮನವಿ

ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ

ಚಿಕ್ಕಮಗಳೂರು:  ಅತ್ತಿಗುಂಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಿಟಕಿ, ಬಾಗಿಲು ಸೇರಿದಂತೆ ಅಗತ್ಯವಿರುವ ವಿವಿಧ ದುರಸ್ಥಿ ಕಾರ್ಯಗಳನ್ನು ನಿರ್ವಹಿಸಿ ಶಾಲೆಗೆ ಉತ್ತಮ ವಾತಾವರಣ ನಿರ್ಮಿಸಿಕೊಡಬೇಕೆಂದು ಕಾಂಗ್ರೆಸ್ ಮುಖಂಡರಾದ ಉಪ್ಪಳ್ಳಿ ಭರತ್, ಜಿಲ್ಲಾ ಉಸ್ತುವಾರಿ ಸಚಿವರಾದ ಜಾರ್ಜ್ ಅವರಿಗೆ ಮನವಿ ನೀಡಿದರು

ನಗರದ ನಗರಸಭೆ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಜಾಗರ ಹೋಬಳಿ ಅತ್ತಿಗುಂಡಿ ಸ.ಕಿ.ಪ್ರಾ ಶಾಲೆಯು ಮೆಳೆಯಿಂದಾಗಿ ಅಪಾರ ಪ್ರಮಾಣದ ಹಾನಿಯಾಗಿದ್ದು ಈಗಾಗಲೇ ಶಾಲೆಯ ಮೇಲ್ಚಾವಣಿ ದುರಸ್ಥಿ ಕಾರ್ಯವು ಪೂರ್ಣಗೊಂಡಿದೆ. ಆದರೆ. ಗಾರೆ, ನೆಲಕ್ಕೆ ಟೈಲ್ಸ್, ಕಿಟಕಿ, ಬಾಗಿಲು ದುರಸ್ಥಿ ಜೊತೆಗೆ ಶಾಲೆಗೆ ಸುಣ್ಣಬಣ್ಣದ ಅವಶ್ಯಕತೆ ಇದೆ ಎಂದರು.

ಶಾಲೆಯಲ್ಲಿ ಒಟ್ಟು ೧೧ ವಿದ್ಯಾರ್ಥಿಗಳು ವ್ಯಾಸಾಂಗ ಮಾಡುತ್ತಿದ್ದಾರೆ. ಬಡ ಹಾಗೂ ಕೂಲಿ ಕಾರ್ಮಿಕರ ಮಕ್ಕಳು ಈ ಶಾಲೆಯಲ್ಲಿದ್ದು ಪ್ರತಿಯೊಬ್ಬರಿಗು ಉತ್ತಮ ಶಿಕ್ಷಣ ಕೊಡಿಸಿ ಅವರ ಶೈಕ್ಷಣಿಕ ಬದುಕು ಸಫಲವಾಗೊಳಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ ಎಂದ ಅವರು ಶೀಘ್ರವಾಗಿ ಶಾಲೆಯ ಎಲ್ಲಾ ದುರಸ್ಥಿ ಕಾರ್ಯವನ್ನು ಕೈಗೊಂಡು ಪೂರ್ಣಗೊಳಿಸಿ ಕಲಿಕೆಗೆ ಉತ್ತಮ ವಾತಾವರಣ ನಿರ್ಮಿಸಿಕೊಟ್ಟು ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕರಿಸಬೇಕು ಎಂದರು.

Appeal to carry out the repair work of Attigundi School

Related posts

ಜಿಲ್ಲೆಯ 2.61 ಲಕ್ಷ ಕುಟುಂಬದ ಯಜಮಾನಿಯರಿಗೆ ಗೃಹಲಕ್ಷ್ಮೀ ಸೌಲಭ್ಯ

Team Suddigara

ನಗರ ವ್ಯಾಪ್ತಿಯಲ್ಲಿ ಯುಜಿಡಿ-ಅಮೃತ್ ಕಾಮಗಾರಿ ಶೀಘ್ರ ಪೂರ್ಣ

Team Suddigara

ಹೆಣ್ಣು ಎಂದರೆ ಒಂದು ಕುಲವನ್ನು ಉದ್ಧಾರ ಮಾಡುವವಳು

Team Suddigara

Leave a Comment