May 18, 2026
Suddigaralive News
ಚಿಕ್ಕಮಗಳೂರುಚಿಕ್ಕಮಗಳೂರು ನಗರಜಿಲ್ಲಾ ಸುದ್ದಿತಾಲೂಕು

ಮೊರಾರ್ಜಿ ಪ್ರಾಂಶುಪಾಲರ ಅಮಾನತ್ತಿಗೆ ಸಚಿವರಿಗೆ ಮನವಿ

ದಸಂಸ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಭಾನುವಾರ ಮನವಿ

ಚಿಕ್ಕಮಗಳೂರು:  ನ್ಯಾಯಬದ್ಧ ವಿಚಾರಣೆಗಾಗಿ ತೆರಳಿದ್ಧ ದಲಿತ ಮುಖಂಡರ ಮೇಲೆ ಹಲ್ಲೆಗೆ ಮುಂದಾದ ಬೀಕನಹಳ್ಳಿ ಮೊರಾರ್ಜಿ ಶಾಲೆ ಪ್ರಾಂಶುಪಾಲ ಹಾಗೂ ಸಿಬ್ಬಂದಿಗಳನ್ನು ಅಮಾನತ್ತು ಗೊಳಿಸಿ ಸೂಕ್ತ ಕ್ರಮ ವಹಿಸಬೇಕು ಎಂದು ದಸಂಸ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರಿಗೆ ಭಾನುವಾರ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ದಸಂಸ ರಾಜ್ಯ ಸಮಿತಿ ಸದಸ್ಯ ಮರ್ಲೆ ಅಣ್ಣಯ್ಯ ಇತ್ತೀಚೆಗೆ ಮೊರಾರ್ಜಿ ಶಾಲೆಯ ನೌಕರರ ದೂರಿನ ಮೇರೆಗೆ ಶಾಲೆಗೆ ಭೇಟಿ ನೀಡಿದ್ದು ಪ್ರಾಂಶುಪಾಲರ ಜೊತೆ ನೂನ್ಯತೆ ಬಗ್ಗೆ ಚರ್ಚಿಸುವಾಗ ಶಾಲೆಯ ಸಿಬ್ಬಂದಿಗಳು, ಪ್ರಾಂಶುಪಾಲರ ಆದೇಶದಂತೆ ದಲಿತ ಮುಖಂಡರು ಹಾಗೂ ಮಹಿಳಾ ನೌಕರೆ ಗಂಡನ ಮೇಲೆ ಏಕಾಏಕಿ ಹಲ್ಲೆ ನಡೆಸಿ ಜಾತಿನಿಂದನೆ ಎಸಗಿದ್ದಾರೆ ಎಂದರು.

ಪ್ರಕರಣದ ಸಂಬಂಧ ಪ್ರಾಂಶುಪಾಲರು, ಸಿಬ್ಬಂದಿಗಳಿಗೆ ಜಾತಿ ನಿಂದನೆ ದೌರ್ಜನ್ಯ ಕಾಯ್ದೆಯಡಿ ದೂ ರು ದಾಖಲಿಸಿದ್ದು ಈ ಬಗ್ಗೆ ಯಾವುದೇ ಕ್ರಮ ವಹಿಸುತ್ತಿಲ್ಲ. ಅಲ್ಲದೇ ಪ್ರಾಂಶುಪಾಲರು ಶಾಲೆಯ ನಿರ್ವಾಣ ಸಮಿತಿ ಎಂಬ ಅಕ್ರಮ ಸಮಿತಿಯ ಹೆಸರಿನಲ್ಲಿ ಎತ್ತಿಕಟ್ಟಿ ಸಂಘಟನೆ ಪ್ರಮುಖರ ಮೇಲೆ ಇಲ್ಲಸಲ್ಲದ ದೂರು ಗಳನ್ನು ದಾಖಲಿಸಿದ್ದಾರೆ ಎಂದು ಆರೋಪಿಸಿದರು.

ಪ್ರಸ್ತುತ ದಸಂಸ ಸಂಘಟನೆ ಮೂರ್‍ನಾಲ್ಕು ದಶಕಗಳಿಂದ ಶೋಷಿತರ ಪರವಾಗಿ ಹೋರಾಟ ಮಾಡು ತ್ತಿದ್ದು ಈ ಆರೋಪದಿಂದ ಸಂಘಟನೆಗೆ ನೋವುಂಟಾಗಿದೆ. ಪ್ರಾಂಶುಪಾಲರು ತಪ್ಪನ್ನು ಮುಚ್ಚಿಕೊಳ್ಳಲು ರಾಜಕೀಯ ಪ್ರಭಾವ ಬಳಸುತ್ತಿದ್ದು, ಇದರಿಂದ ಶಾಲೆಯ ಹೆಸರು ಹಾಳು ಮಾಡುತ್ತಿರುವ ಕಾರಣ ಮಕ್ಕಳ ವಿದ್ಯಾಭ್ಯಾಸಕ್ಕೆ ತೀವ್ರ ಅಡ್ಡಿಯಾಗುತ್ತಿದೆ ಎಂದು ಹೇಳಿದರು.

ದೌರ್ಜನ್ಯ ಪ್ರಕರಣ ಸಂಬಂಧ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗೆ ದೂರು ಸಲ್ಲಿಸಿದ್ದರೂ ಕ್ರಮ ಜರುಗಿಲ್ಲ. ಆದ್ದರಿಂದ ಜಿಲ್ಲಾ ಉಸ್ತುವಾರಿ ಸಚಿವರು ಮಧ್ಯಪ್ರವೇಶಿಸಿ ತಪ್ಪೆಸಗಿರುವ ಮೊ ರಾರ್ಜಿ ಶಾಲೆಯ ಪ್ರಾಂಶುಪಾಲರ ಅಮಾನತ್ತುಗೊಳಿಸಬೇಕು. ವಿಳಂಭ ನೀತಿ ಅನುಸರಿದರೆ ಜಿ.ಪಂ. ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ದಸಂಸ ತಾಲ್ಲೂಕು ಸಂಚಾಲಕರಾದ ಮಂಜಯ್ಯ, ಮಂಜುನಾಥ್ ನಂಬಿಯಾರ್, ಮುಖಂಡರುಗಳಾದ ಸಂತೋ? ಲಕ್ಯಾ, ಹೊನ್ನಪ್ಪ ದಂಟರಮಕ್ಕಿ, ಆರ್.ಶೇಖರ್ ಮತ್ತಿತರರಿದ್ದರು.

Morarji appeals to the minister to suspend the principal

Related posts

ಪೌರಕಾರ್ಮಿಕರ ಮೂಲ ಬೇಡಿಕೆ ಈಡೇರಿಸಲು ಮನವಿ

Team Suddigara

ವಿಧಾನ ಪರಿಷತ್ ಚುನಾವಣೆ ಮರು ಮತಎಣಿಕೆ ಏಣಿಕೆ

Team Suddigara

ಬೇಸಿಗೆ ನಿರ್ವಹಣೆಗೆ ವಿಶೇಷ ನೆರವು ಕೋರಿ ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆ

Team Suddigara

Leave a Comment