ನವದೆಹಲಿ: ಚಿನ್ನದ ಬೆಲೆಯು ಇಲ್ಲಿನ ಚಿನಿವಾರ ಪೇಟೆಯಲ್ಲಿ ಮಂಗಳವಾರದ ವಹಿವಾಟಿನಲ್ಲಿ 10 ಗ್ರಾಂಗೆ ₹5,080ರಷ್ಟು ಹೆಚ್ಚಳ ಕಂಡಿದೆ. ಈ ಮೂಲಕ ಚಿನ್ನದ ಬೆಲೆಯು ಮಂಗಳವಾರದ ಅಂತ್ಯಕ್ಕೆ ಸಾರ್ವಕಾಲಿಕ ಗರಿಷ್ಠ ಮಟ್ಟವಾದ ₹1,12,750ಕ್ಕೆ ತಲುಪಿದೆ.
ಹಳದಿ ಲೋಹದ ಬೆಲೆಯು ಪ್ರತಿ 10 ಗ್ರಾಂಗಳಿಗೆ ಈ ಕ್ಯಾಲೆಂಡರ್ ವರ್ಷದಲ್ಲಿ ₹33,800ರಷ್ಟು (ಅಂದರೆ ಶೇ 43ರಷ್ಟು) ಹೆಚ್ಚಳ ಕಂಡಿದೆ. 2024ರ ಡಿಸೆಂಬರ್ 31ರಂದು ಚಿನ್ನದ ಬೆಲೆಯು 10 ಗ್ರಾಂಗೆ ₹78,950 ಆಗಿತ್ತು.
ಅಖಿಲ ಭಾರತ ಸರಾಫ್ ಒಕ್ಕೂಟ ನೀಡಿರುವ ಮಾಹಿತಿ ಪ್ರಕಾರ ಶೇಕಡ 99.9ರಷ್ಟು ಶುದ್ಧತೆಯ ಚಿನ್ನದ ದರವು ಸೋಮವಾರದ ಅಂತ್ಯಕ್ಕೆ ₹1,07,670 ಆಗಿತ್ತು.
ಕೆ.ಜಿ. ಬೆಳ್ಳಿಯ ಬೆಲೆಯು ₹2,800ರಷ್ಟು ಹೆಚ್ಚಳ ಕಂಡಿದ್ದು, ಮಂಗಳವಾರದ ಅಂತ್ಯಕ್ಕೆ ₹1,28,800 ಆಗಿದೆ. ಹಿಂದಿನ ದಿನದ ವಹಿವಾಟಿನ ಅಂತ್ಯಕ್ಕೆ ಬೆಳ್ಳಿಯ ಬೆಲೆಯು ₹1,26,000 ಆಗಿತ್ತು. ಜಾಗತಿಕ ಮಾರುಕಟ್ಟೆ ಯಲ್ಲಿಯೂ ಚಿನ್ನದ ಬೆಲೆಯು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ.
ಅಮೆರಿಕದ ಹಣಕಾಸು ನೀತಿಯಲ್ಲಿ ತುಸು ಸಡಿಲಿಕೆ ತರುವ ಲಕ್ಷಣಗಳಿವೆ. ಹೀಗಾಗಿ ಹೂಡಿಕೆದಾರರು ಸುರಕ್ಷಿತವಾದ ಚಿನ್ನದ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಹಣವನ್ನು ತೊಡಗಿಸುತ್ತಿದ್ದಾರೆ. ಡಾಲರ್ ಮೌಲ್ಯವು ಇಳಿಕೆ ಕಂಡಿದ್ದುದು ಸಹ ಚಿನ್ನದ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ವರ್ತಕರು ಹೇಳಿದ್ದಾರೆ.
Gold price increases by Rs 5,080 per 10 grams

Leave a Reply