May 20, 2026
Suddigaralive News
ರಾಜ್ಯ

ಗದ್ದಲವಿಲ್ಲದೆ, ಯಾವುದೇ ಅಡೆತಡೆಗಳು ಇಲ್ಲದೆ ಸದನದ ಕಲಾಪಗಳು ನಡೆಯಬೇಕು

ಬೆಂಗಳೂರು: ‘ಗದ್ದಲವಿಲ್ಲದೆ, ಯಾವುದೇ ಅಡೆತಡೆಗಳು ಇಲ್ಲದೆ ಸದನದ ಕಲಾಪಗಳು ನಡೆಯಬೇಕು. ರಾಜಕೀಯಯದ ಮಾತು ಸದನದಾಚೆ ಇರಬೇಕು’ ಎಂಬ ನಿರ್ಣಯದೊಂದಿಗೆ ಕಾಮನ್‌ವೆಲ್ತ್‌ ಸಂಸದೀಯ ಸಂಘದ ಭಾರತೀಯ ವಿಭಾಗ 11ನೇ ಸಮ್ಮೇಳನಕ್ಕೆ ಶನಿವಾರ ತೆರೆಬಿತ್ತು.

ಇದೇ 12 ಮತ್ತು 13ರಂದು ನಡೆದ ಈ ಸಮ್ಮೇಳನದಲ್ಲಿ ಲೋಕಸಭೆಯ ಸ್ಪೀಕರ್‌, ರಾಜ್ಯಸಭೆಯ ಉಪಸಭಾಪತಿ, 26 ರಾಜ್ಯಗಳ ವಿಧಾನಸಭೆ ಸಭಾಧ್ಯಕ್ಷರು ಭಾಗಿಯಾಗಿದ್ದರು. ಸಮ್ಮೇಳನದ ಸಮಾರೋಪ ಸಮಾರಂಭದ ನಂತರ ತಮ್ಮ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ನಿರ್ಣಯಗಳನ್ನು ಮಂಡಿಸಿದರು.

‘ಜನಪರ ಕಾರ್ಯಗಳ ಬಗ್ಗೆ ಚರ್ಚಿಸಲಷ್ಟೇ ಸದನದ ಸಮಯ ಬಳಕೆ ಯಾಗಬೇಕು. ರಾಜಕೀಯದ ಮಾತು ಸದನದಾಚೆಗೆ ಇರಬೇಕು ಎಂದು ಎಲ್ಲ ಚುನಾಯಿತ ಪ್ರತಿನಿಧಿಗಳಿಗೆ ತಿಳಿಹೇಳಬೇಕೆಂದು ನಿರ್ಧರಿಸಲಾಗಿದೆ. ಲೋಕಸಭೆ, ರಾಜ್ಯಸಭೆ, ರಾಜ್ಯಗಳ ವಿಧಾನ ಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಕಲಾಪವನ್ನು ಹೇಗೆ ನಡೆಸಬೇಕು ಎಂಬುದನ್ನು ಸೂಚಿಸುವ ಕೈಪಿಡಿ ಯೊಂದನ್ನು ಸಿದ್ಧಪಡಿಸುವ ಬಗ್ಗೆ ನಿರ್ಧರಿಸಲಾಗಿದೆ’ ಎಂದರು.

‘ಗದ್ದಲವೇ ಈಗ ಸದನ ಸರಾಗ ವಾಗಿ ನಡೆಯಲು ಇರುವ ದೊಡ್ಡ ತೊಡಕು. ಗದ್ದಲ, ಧರಣಿಗಳು ಅತ್ಯಮೂಲ್ಯವಾದ ವಿಷಯಗಳ ಮೇಲಿನ ಚರ್ಚೆಯನ್ನು ಹಾದಿತಪ್ಪಿಸುತ್ತವೆ. ಹಣವೂ ವ್ಯರ್ಥವಾಗುತ್ತದೆ. ಇದನ್ನು ಅರ್ಥ ಮಾಡಿಕೊಂಡು ಚುನಾಯಿತ ಪ್ರತಿನಿಧಿಗಳು ಸದನದಲ್ಲಿ ವರ್ತಿಸಬೇಕು’ ಎಂದು ಕರೆ ನೀಡಿದರು.

ರಾಜ್ಯಸಭೆ ಉಪ ಸಭಾಪತಿ ಹರಿವಂಶ್‌, ‘ಸದನಗಳಲ್ಲಿ ಕಲಾಪಗಳು ನಡೆಯುವುದಿಲ್ಲ ಎಂಬುದನ್ನಷ್ಟೇ ಮಾಧ್ಯಮಗಳು ತೋರಿಸುತ್ತವೆ. ಆದರೆ ಸದನ ಸಮಿತಿಗಳು ಸದಾ ಕೆಲಸ ಮಾಡು ತ್ತವೆ. ಸದಸ್ಯರು ಪಕ್ಷಭೇದ ಮರೆತು ಜನರ ಒಳಿತಿಗಾಗಿ ದುಡಿಯುತ್ತಾರೆ. ಆ ಬಗ್ಗೆಯೂ ಜನರಿಗೆ ಸುದ್ದಿ ತಲುಪಿಸಬೇಕು’ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ದೇಶದ ಎಲ್ಲ ಸದನಗಳ ಕಲಾಪ, ಚರ್ಚೆ, ಮಸೂದೆಗಳ ವಿವರಗಳನ್ನು ಒಳಗೊಂಡ ಏಕ ದತ್ತಾಂಶಕೋಶ ರೂಪಿಸಬೇಕು. ಯಾವುದಾದರೂ ಒಂದು ವಿಷಯದ ಬಗ್ಗೆ ಎಲ್ಲ ಸದನಗಳಲ್ಲಿ ಇರುವ ಮಾಹಿತಿಯು, ಸದಸ್ಯರಿಗೆ ಒಂದೆಡೆಯೇ ಲಭ್ಯವಾಗಬೇಕುಸದನ ಕಲಾಪಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಿ, ಸಾರ್ವಜನಿಕರಿಗೆ ದೊರೆಯುವಂತೆ ಮಾಡಬೇಕು. ದೇಶದ ಸಾಂವಿಧಾನಿಕ ಸಂಸ್ಥೆಗಳ ಕಾರ್ಯ ನಿರ್ವಹಣೆಯ ಬಗ್ಗೆ ಜನರಲ್ಲಿ ವಿಶ್ವಾಸ ಮೂಡಿಸಬೇಕು

ಸಾಂವಿಧಾನಿಕ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ದೇಶದ ಯುವಜನರು ಭಾಗಿಯಾಗುವ ಸಾಧ್ಯತೆಗಳನ್ನು ಪರಿಶೀಲಿಸಿ, ಕ್ರಮ ತೆಗೆದುಕೊಳ್ಳಬೇಕು ಮಣಿಪುರದಲ್ಲಿ ಗಲಭೆ ನಡೆದು 2 ವರ್ಷಗಳಾಗುತ್ತಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಈಗ ಅಲ್ಲಿಗೆ ಭೇಟಿ ನೀಡಿದ್ದಾರೆ. ಈ ಭೇಟಿಯ ಪ್ರಯೋಜನವೇನು ಎಂಬ ಪ್ರಶ್ನೆ ಯನ್ನು ಸುದ್ದಿಗಾರ ರೊಬ್ಬರು ಓಂ ಬಿರ್ಲಾ ಅವರ ಎದುರು ಇರಿಸಿದರು.

ಅದಕ್ಕೆ ಓಂ ಬಿರ್ಲಾ, ‘ಮಣಿ ಪುರ ಗಲಭೆ ಬಗ್ಗೆ ಚಳಿಗಾಲದ ಅಧಿವೇಶನ, ಬಜೆಟ್ ಅಧಿವೇಶನ. ಮುಂಗಾರು ಅಧಿವೇಶನದಲ್ಲಿ ಚರ್ಚಿಸಿದ್ದೇವೆ. ಅಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿ ಬಗ್ಗೆ ಚರ್ಚಿಸಿದ್ದೇವೆ’ ಎಂದಷ್ಟೇ ಹೇಳಿದರು. ಪ್ರಧಾನಿ ಭೇಟಿ ಬಗ್ಗೆ ಮರುಪ್ರಶ್ನಿಸಿದಾಗ, ಬೇರೆ ಪ್ರಶ್ನೆಯತ್ತ ಗಮನ ನೀಡಿದರು.

ಜನಪರವಾದ ಚರ್ಚೆಗಳು ನಡೆಯಬೇಕು ಎಂದು ಇಲ್ಲಿ ಹೇಳುತ್ತಿದ್ದೀರಿ. ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಸದಸ್ಯರು ಮಾತನಾಡಿದರೆ ಕಲಾಪವನ್ನೇ ಮುಂದೂಡುತ್ತೀರಿ. ನೀವು ಕಲಾಪ ನಡೆಸಿದ್ದಕ್ಕಿಂತ, ಮುಂದೂಡಿದ್ದೇ ಹೆಚ್ಚು. ಈ ಬಗ್ಗೆ ಏನು ಹೇಳುತ್ತೀರಿ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಓಂ ಬಿರ್ಲಾ ಪ್ರತಿಕ್ರಿಯೆ ನೀಡಲಿಲ್ಲ.

“The proceedings of the House should be conducted without noise and without any disruptions.”

Related posts

ಸಚಿವ ಪ್ರಿಯಾಂಕ ಖರ್ಗೆಯವರಿಗೆ ಬೆದರಿಕೆ: ರಕ್ಷಣೆ ಒದಗಿಸಲಾಗುವುದು

Team Suddigara

ಸಿಎಂ ಸಿದ್ದರಾಮಯ್ಯರಿಂದ ಪ್ರವಾಹ ಪರಿಸ್ಥಿತಿ ಅವಲೋಕನ

Team Suddigara

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಿಂದ ₹8 ಕೋಟಿ ದರೋಡೆ

Team Suddigara

Leave a Comment