ನೂತನ ಬಿಜೆಪಿ ಜಿಲ್ಲಾ ಪದಾಧಿಕಾರಿ ಹೆಸರು ಅಂತಿಮ

ಚಿಕ್ಕಮಗಳೂರು: ಚಿಕ್ಕಮಗಳೂರು ಸಹಕಾರಿ ಯೂನಿಯನ್, ಮೂಡಿಗೆರೆ ಟಿಎಪಿಸಿಎಂಎಸ್ ಹಾಗೂ ಅಜ್ಜಂಪುರ ಪಟ್ಟಣ ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತರು ಮೇಲುಗೈ ಸಾಧಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜಶೆಟ್ಟಿ ತಿಳಿಸಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಸಹಕಾರ ಯೂನಿಯನ್ ಚುನಾವಣೆಯ ೧೩ ಸ್ಥಾನಗಳಲ್ಲಿ ೧೨ರಲ್ಲಿ ಬಿಜೆಪಿ ಬೆಂಬಲಿತರು ಗೆದ್ದಿದ್ದಾರೆ. ಮೂಡಿಗೆರೆ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ೧೩ ಸ್ಥಾನಗಳ ಪೈಕಿ ಬಿಜೆಪಿ ೧೦, ಜೆಡಿಎಸ್ ೨ ಸ್ಥಾನಗಳಲ್ಲಿ ವಿಜೇತರಾಗಿದ್ದು, ಅಲ್ಲೂ ಬಿಜೆಪಿ ಅಧ್ಯಕ್ಷ ಗಾದಿ ಏರಲಿದೆ. ಅಜ್ಜಂಪುರ ಪಟ್ಟಣ ಪಂಚಾಯಿತಿಯಲ್ಲೂ ಬಿಜೆಪಿ ಬೆಂಬಲಿತರೆ ಅತಿ ಹೆಚ್ಚು ಸ್ಥಾನ ಪಡೆದುಕೊಂಡಿದ್ದಾರೆ ಎಂದು ಹೇಳಿದರು.

ಮೂಡಿಗೆರೆ ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ಬಿಜೆಪಿ ಮುಖಂಡ ಕಲ್ಲೇಶ್ ಅವರು ಬಹುತೇಕ ಅಧ್ಯಕ್ಷರಾಗುವುದು ಖಚಿತ ಎಂದ ಅವರು, ರಾಜ್ಯ ಸಮಿತಿ ಆದೇಶದಂತೆ ಸಮನ್ವಯ ಸಮಿತಿ ರಚಿಸಿ ಜೆಡಿಎಸ್ ಮತ್ತು ಬಿಜೆಪಿ ಸಮನ್ವಯತೆ ಕಾಪಾಡುತ್ತೇವೆ, ಸರ್ಕಾರ ಅವಧಿಗೆ ಸರಿಯಾಗಿ ಗ್ರಾ.ಪಂ, ತಾ.ಪಂ, ಜಿ.ಪಂ ಚುನಾವಣೆಯನ್ನು ಘೋಷಣೆ ಮಾಡಬೇಕೆಂದು ಆಗ್ರಹಿಸಿದರು.

ದೆಹಲಿಯ ಕೆಂಪುಕೋಟೆ ಬಳಿ ನಡೆದ ಕಾರ್‌ಬಾಂಬ್ ಸ್ಪೋಟದಲ್ಲಿ ೧೨ಕ್ಕೂ ಹೆಚ್ಚು ಜನ ಹತರಾಗಿದ್ದು ಜಿಲ್ಲಾ ಬಿಜೆಪಿ ಸಂತಾಪ ಸೂಚಿಸುತ್ತದೆ ಎಂದರು.

ಬಿಜೆಪಿ ಜಿಲ್ಲಾ ಪದಾಧಿಕಾರಿ ಪಟ್ಟಿ
ಮುಂದಿನ ಮೂರು ವರ್ಷದ ಅವಧಿಗೆ ಬಿಜೆಪಿ ಜಿಲ್ಲಾ ಸಮಿತಿಯನ್ನು ಪುನರ್ ರಚನೆ ಮಾಡಲಾಗಿದೆ. ಅಧ್ಯಕ್ಷನಾಗಿ ನಾನು ಎಂ.ಆರ್.ದೇವರಾಜ್‌ಶೆಟ್ಟಿ, ಉಪಾಧ್ಯಕ್ಷರಾಗಿ ಜಿ.ಎಸ್.ಮಹಾಬಲರಾವ್, ಬಿ.ಜಿ.ಸೋಮಶೇಖರ್, ಎಚ್.ಎಸ್.ಕವೀಶ್, ಈ.ಆರ್.ಮಹೇಶ್, ಕನಕರಾಜ್‌ಅರಸ್, ವೀಣಾರತ್ನಾಕರಶೆಟ್ಟಿ, ಸವಿತಾರಮೇಶ್, ಚೈತ್ರಶ್ರೀ, ರತನ್, ಪ್ರಧಾನ ಕಾರ್ಯದರ್ಶಿಯಾಗಿ ರವೀಂದ್ರ ಬೆಳವಾಡಿ, ಡಾ.ಎ.ನರೇಂದ್ರ, ಪುಣ್ಯಪಾಲ್, ರವಿ, ಜಿ.ಎಸ್.ರಘು, ಚಂಪಾಜಗದೀಶ್, ಕವಿತಾಶೇಖರ್, ರಾಜನಾಯ್ಕ, ಸುಜಯಸದಾನಂದ, ಮಧುಕುಮಾರರಾಜ್ ಅರಸ್, ಬೋಜರಾಜ್, ಅರುಣ್‌ಕುಮಾರ್ ಅವರುಗಳು ಆಯ್ಕೆಯಾಗಿದ್ದಾರೆ. ಖಜಾಂಚಿ ನಾರಾಯಣಗೌಡ, ವಕ್ತಾರರಾಗಿ ಹಿರೇಮಗಳೂರು ಪುಟ್ಟಸ್ವಾಮಿ ಆಯ್ಕೆಯಾಗಿದ್ದಾರೆ.
ಕಚೇರಿ ಕಾರ್ಯದರ್ಶಿ ದುರ್ಗೇಶ್, ಸಾಮಾಜಿಕ ಜಾಲತಾಣ ಸಮೃದ್ಧಪೈ, ಮಾಧ್ಯಮ ಪ್ರಮುಖ್ ದಿನೇಶ್‌ಕುಮಾರ್, ಸಹ ಪ್ರಮುಖ್ ಆಗಿ ಮಂಜುನಾಥ್ ಅವರನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಹೆಚ್.ಎಸ್. ಪುಟ್ಟಸ್ವಾಮಿ, ರಂಗನಾಥ್, ಕೆ.ಪಿ ವೆಂಕಟೇಶ್, ಪುಣ್ಯಪಾಲ್ ಉಪಸ್ಥಿತರಿದ್ದರು.

Name of new BJP district office bearer finalized

Comments

Leave a Reply

Your email address will not be published. Required fields are marked *