Category: ಚಿಕ್ಕಮಗಳೂರು ನಗರ

  • ವಿದ್ಯಾರ್ಥಿಗಳು ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಬೇಕು

    ವಿದ್ಯಾರ್ಥಿಗಳು ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಬೇಕು

    ಚಿಕ್ಕಮಗಳೂರು: ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಯಲ್ಲಿ ಸ್ಪೂರ್ತಿಯಿಂದ ಕ್ರೀಡಾ ಮನೋಭಾವದೊಂದಿಗೆ ಭಾಗವಹಿಸಬೇಕು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಕರೆನೀಡಿದರು.

    ಅವರು ಇಂದು ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ತಾ.ಪಂ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಶಾಲಾ ಶಿಕ್ಷಣ ಇಲಾಖೆ ಪ್ರಕೃತಿ ಅಕಾಡೆಮಿ, ಹಿರಿಯ ಪ್ರಾಥಮಿಕ ಶಾಲೆ, ಗವನಹಳ್ಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಸಬಾ-೨ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ೨೦೨೫-೨೬ ನ್ನು ಉದ್ಘಾಟಿಸಿ ಮಾತನಾಡಿದರು.

    ಕ್ರೀಡೆ, ಸಾಂಸ್ಕೃತಿಕ, ಭಾವಗೀತೆ, ಭಕ್ತಿಗೀತೆ ಮುಂತಾದ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವ ಮೂಲಕ ದೈಹಿಕ, ಮನಸ್ಸು, ಹೃದಯ, ಮೆದುಳು ಚುರುಕಾಗುತ್ತದೆ. ಈ ನಿಟ್ಟಿನಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು ಎಂದರು. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಸಂಸ್ಕಾರ ಕಲಿಸುವಂತಾದಾಗ ಮಾತ್ರ ದೇಶ, ನಾಡು-ನುಡಿ, ನೆಲ-ಜಲ ಈ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮೂಡಿಸುವುದು ಅಗತ್ಯ ಎಂದರು.

    ಎಲ್ಲಾ ವರ್ಗದ ವಿದ್ಯಾರ್ಥಿಗಳಲ್ಲಿ ಮೊದಲು ದೇಶಪ್ರೇಮ ಬೆಳೆಸಬೇಕು. ದೇಶ ಮತ್ತು ಧರ್ಮ ಇದ್ದರೆ ನಾವು ಉಳಿಯುತ್ತೇವೆ. ಈ ಬಗ್ಗೆ ಪ್ರಾಥಮಿಕ ಹಂತದಲ್ಲೇ ವಿದ್ಯಾರ್ಥಿಗಳಿಗೆ ಕಲಿಸುವ ಪ್ರಯತ್ನವನ್ನು ಶಿಕ್ಷಕರು ಮಾಡಬೇಕಾಗಿದೆ ಎಂದು ಹೇಳಿದರು. ನ್ಯಾಯ ನಿರ್ಣಾಯಕರು ವಿಜೇತರಾದ ತಂಡಗಳಿಗೆ ಪ್ರಾಮಾಣಿಕವಾಗಿ ತೀರ್ಪು ನೀಡುವ ಮೂಲಕ ಕ್ರೀಡಾಪಟುಗಳಿಗೆ ಉತ್ತೇಜನ ನೀಡಬೇಕು ಎಂದು ಸಲಹೆ ನೀಡಿದರು.

    ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ, ನಗರಸಭೆ ಸದಸ್ಯ ಪರಮೇಶ್ ರಾಜ್ ಅರಸ್, ಪ್ರಕೃತಿ ಅಕಾಡೆಮಿಯ ಅಧ್ಯಕ್ಷರಾದ ಹೆಚ್.ಜಿ ನಾಗೇಶ್, ದಾನಿಗಳಾದ ನೀಲಕಂಠಾಚಾರಿ, ಜಿಲ್ಲಾದೈಹಿಕ ಪರಿವೀಕ್ಷಕರು ಪಾಲಾಕ್ಷಪ್ಪ, ಮಹೇಶ್ವರಪ್ಪ, ಕಿರಣ್ ಕುಮಾರ್, ಪರಮೇಶ್, ಚಂದ್ರಕಾಂತ್, ವಿಲ್ಮಾ, ದಿನೇಶ್, ಶಿವಪ್ಪ, ಮೋಹನಾಕ್ಷಿ, ಕೃಷ್ಣರಾಜ್ ಅರಸ್, ಜಾನಕಮ್ಮ, ಉಪಸ್ಥಿತರಿದ್ದರು. ಮೊದಲಿಗೆ ಶಿಕ್ಷಕಿ ರೇಣುಕ ಸ್ವಾಗತಿಸಿದರು.

    Students should participate with a sportsmanlike spirit.

  • ಸ್ವಚ್ಚತೆ ಕುರಿತು ಅರಿವು ಮೂಡಿಸುವುದು ಸ್ವಚ್ಚ ಭಾರತ್ ಮಿಷನ್ ಉದ್ದೇಶ

    ಸ್ವಚ್ಚತೆ ಕುರಿತು ಅರಿವು ಮೂಡಿಸುವುದು ಸ್ವಚ್ಚ ಭಾರತ್ ಮಿಷನ್ ಉದ್ದೇಶ

    ಚಿಕ್ಕಮಗಳೂರು: ನಗರದ ನಾಗರೀಕರಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವುದು ಸ್ವಚ್ಚ ಭಾರತ್ ಮಿಷನ್ ಉದ್ದೇಶವಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.

    ಅವರು ಇಂದು ಆಜಾದ್ ಪಾರ್ಕಿನ ಬಳಿ ನಗರಸಭೆ, ಸ್ವಚ್ಚ ಭಾರತ್ ಮಿಷನ್‌ನ ೨.೦ ಯೋಜನೆಯಡಿಯಲ್ಲಿ ಸಾರ್ವಜನಿಕರಿಗೆ ಸ್ವಚ್ಚತೆ ಬಗ್ಗೆ ಗೋಡೆಬರಹ ಮತ್ತು ಬೀದಿ ನಾಟಕದ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಸ್ವಚ್ಚತೆ ಬಗ್ಗೆ ಜಾಗೃತಿ ಮೂಡಿಸಲು ಕೇಂದ್ರ ಮತ್ತು ರಾಜ್ಯಸರ್ಕಾರ ಹಲವು ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿದೆ ಎಂದು ಶ್ಲಾಘಿಸಿದರು.

    ನಗರದ ಪ್ರಮುಖ ರಸ್ತೆಗಳಲ್ಲಿ ನಗರಸಭೆಯಿಂದ ಕೈಗೊಂಡ ಫುಟ್‌ಪಾತ್ ಮೇಲಿನ ವಸ್ತುಗಳ ತೆರವು ಮತ್ತು ಸಂತೆಯಲ್ಲಿ ಸ್ವಚ್ಚತೆಯನ್ನು ಮೂಡಿಸಿದ ಪರಿಣಾಮ ವರ್ತಕರು ಸಹಕರಿಸಿದ್ದಾರೆ. ನಗರದ ಹೊರವಲಯದ ವಾರ್ಡ್‌ಗಳಲ್ಲಿ ಸ್ವಚ್ಚತೆಯಲ್ಲಿ ಹಿಂದಿ ಬಿದ್ದಿದ್ದು, ಈ ಬಗ್ಗೆ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

    ಕಸ ಸಂಗ್ರಹಕ್ಕೆ ಗುರ್ತಿಸಲಾದ ಸ್ಥಳಗಳಲ್ಲಿ ಸಾರ್ವಜನಿಕರು ಕಸವನ್ನು ಹಾಕದೆ ಎಲ್ಲೆಂದರಲ್ಲಿ ಹಾಕಲಾಗುತ್ತಿದೆ. ಪ್ರತಿದಿನ ಗಂಟೆಗಾಡಿ ಕಸ ಸಂಗ್ರಹ ಮಾಡುತ್ತಿಲ್ಲ ಎಂಬ ದೂರು ನಾಗರೀಕರಿಂದ ಬರುತ್ತಿದ್ದು, ಈ ಬಗ್ಗೆ ನಗರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಗಮನಹರಿಸಬೇಕೆಂದು ಹೇಳಿದರು.

    ಬೀದಿನಾಯಿಗಳ ಉಪಟಳ ಮತ್ತು ಬಿಡಾಡಿ ದನಗಳಿಂದ ಆಗುತ್ತಿರುವ ತೊಂದರೆಯ ಬಗ್ಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಈಗಾಗಲೇ ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. ಜೊತೆಗೆ ವಿದ್ಯಾರ್ಥಿಗಳಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದರು.

    ಸಧ್ಯದಲ್ಲೇ ಪರಿಸರ ಉಳಿಸಲು ನಗರದ ಪ್ರತೀ ವಾರ್ಡ್‌ನಲ್ಲಿ ಜಾಥಾ ನಡೆಸುವ ಮೂಲಕ ಅರಿವು ಮೂಡಿಸಲು ದಿನಾಂಕ ನಿಗದಿಮಾಡುವಂತೆ ಪೌರಾಯುಕ್ತರಿಗೆ ಸೂಚನೆ ನೀಡಿದರು.

    ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಕಳೆದ ನಾಲ್ಕು ವಾರಗಳಿಂದ ಸ್ವಚ್ಚತೆಗೆ ಆದ್ಯತೆ ನೀಡುವಂತೆ ವರ್ತಕರು ಮತ್ತು ನಾಗರೀಕರಲ್ಲಿ ನಗರಸಭೆಯಿಂದ ಅರಿವು ಮೂಡಿಸಲಾಗಿದ್ದು, ಇದರಿಂದ ಸುಂದರ ನಗರವನ್ನಾಗಿಸಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

    ಪೌರಾಯುಕ್ತ ಬಿ.ಸಿ. ಬಸವರಾಜ್ ಮಾತನಾಡಿ, ಗೋಡೆ ಬರಹ ಮತ್ತು ಬೀದಿ ನಾಟಕಗಳ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಚತೆ ಕುರಿತು ಅರಿವು ಮೂಡಿಸಲು ೨೦ ನಾಟಕ ತಂಡಗಳನ್ನು ಆಯ್ಕೆಮಾಡಲಾಗಿದೆ ಎಂದರು.

    ೨೬೦೦ ಅಡಿಗಳಷ್ಟು ಗೋಡೆಬರಹದ ಮೂಲಕ ಸ್ವಚ್ಚತೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ನಗರಸಭೆ ಸದಸ್ಯರು ಸ್ವಚ್ಚತೆಗೆ ಆದ್ಯತೆ ನೀಡಿ ಜಾಗೃತಿ ಮೂಡಿಸಲು ತಿರುಪತಿಗೆ ತೆರಳಲು ಸಧ್ಯದಲ್ಲೇ ದಿನಾಂಕ ನಿಗದಿಮಾಡಲಾಗುವುದೆಂದರು.

    ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಅನುಮಧುಕರ್, ಸದಸ್ಯರಾದ ಎ.ಸಿ. ಕುಮಾರ್‌ಗೌಡ, ಪರಮೇಶ್ ರಾಜ್ ಅರಸ್, ರೂಪಾ ಕುಮಾರ್, ಗೋಪಿ, ಗುರುಮಲ್ಲಪ್ಪ, ಕೀರ್ತಿ ಮತ್ತಿತರರು ಉಪಸ್ಥಿತರಿದ್ದರು.

    The objective of Swachh Bharat Mission is to create awareness about cleanliness.

  • ಸರಳ ಸಜ್ಜನಿಕೆ ವ್ಯಕ್ತಿತ್ವದ ರಾಜಕಾರಣಿ ಡಾ.ಜಿ.ಪರಮೇಶ್ವರ್

    ಸರಳ ಸಜ್ಜನಿಕೆ ವ್ಯಕ್ತಿತ್ವದ ರಾಜಕಾರಣಿ ಡಾ.ಜಿ.ಪರಮೇಶ್ವರ್

    ಚಿಕ್ಕಮಗಳೂರು: ಗೃಹಸಚಿವರಾಗಿ ಮೂರನೇ ಬಾರಿಗೆ ಹುದ್ದೆ ನಿಭಾಯಿಸುತ್ತಿರುವ ಪ್ರಾಮಾಣಿಕ, ಸರಳ ಸಜ್ಜನಿಕೆಯ ರಾಜಕಾರಣಿ ಡಾ. ಜಿ. ಪರಮೇಶ್ವರ್‌ರವರಿಗೆ ಶಾಸಕ ಹೆಚ್.ಡಿ. ತಮ್ಮಯ್ಯ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದರು.

    zವರು ಇಂದು ನಗರದ ಗಣಪತಿ ದೇವಸ್ಥಾನದಲ್ಲಿ ಬ್ಲಾಕ್ ಕಾಂಗ್ರೆಸ್ ಹಾಗೂ ಎಸ್‌ಸಿ ಸೆಲ್ ಘಟಕದ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ಗೃಹಸಚಿವ ಡಾ. ಜಿ. ಪರಮೇಶ್ವರ್‌ರವರ ೭೪ನೇ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ ಶುಭ ಹಾರೈಸಿದರು.

    ಮುಂದಿನ ದಿನಗಳಲ್ಲಿ ಸಚಿವರಿಗೆ ಆಯಸ್ಸು, ಆರೋಗ್ಯ, ಹೆಚ್ಚಿನ ಅಧಿಕಾರ ಸಿಗಲಿ ಎಂದು ಕ್ಷೇತ್ರದ ಜನರು ಮತ್ತು ಕಾರ್ಯಕರ್ತರ ಪರವಾಗಿ ಹಾರೈಸಿದರು.
    ಡಾ. ಜಿ. ಪರಮೇಶ್ವರ್ ಅವರು ಕೇವಲ ದಲಿತ ಸಮುದಾಯಕ್ಕೆ ಸೀಮಿತರಾಗದೇ ಕೆಪಿಸಿಸಿ ಅಧ್ಯಕ್ಷರಾಗಿ ೬ ವರ್ಷಗಳ ಕಾಲ ಸೇವೆ ಸಲ್ಲಿಸಿದ ಪರಿಣಾಮ ೨೦೧೩ ರಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಶ್ರಮಿಸಿದ್ದರು ಎಂದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇವರೊಂದಿಗೆ ಪರಮೇಶ್ವರ್‌ರವರು ೨೦೨೩ ರಲ್ಲಿ ಶ್ರಮಿಸಿದ ಫಲವಾಗಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಹೇಳಿದರು.

    ಕಾಂಗ್ರೆಸ್ ಮುಖಂಡರಾದ ಹಿರೇಮಗಳೂರು ರಾಮಚಂದ್ರ, ಮಾತನಾಡಿ, ಭ್ರಷ್ಟಾಚಾರ ರಹಿತ ಆಡಳಿತ ನೀಡುತ್ತಿರುವ ಸರಳ, ಸೌಮ್ಯ ರಾಜಕಾರಣಿ ಡಾ. ಜಿ. ಪರಮೇಶ್ವರ್‌ರವರಿಗೆ ಆಯಸ್ಸು, ಆರೋಗ್ಯದ ಜೊತೆಗೆ ರಾಜಕೀಯದಲ್ಲಿ ಉನ್ನತ ಹುದ್ದೆ ಅಲಂಕರಿಸಲಿ ಎಂದು ಶುಭಹಾರೈಸಿದರು.

    ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ ಮಂಜೇಗೌಡ ಕಾಂಗ್ರೆಸ್ ಮುಖಂಡರಾದ , ಮಲ್ಲೇಶ್‌ಸ್ವಾಮಿ, ಓಂಕಾರಣ್ಣ, ವೇಣುಗೋಪಾಲ್, ನೇತ್ರಾವತಿ, ಮಹೇಶ್, ಚಂದ್ರು, ಶಾಂತಕುಮಾರ್, ರಾಜ್ ಕುಮಾರ್, ಜಗಧೀಶ್, ವೆಂಕಟೇಶ್, ಸುದೀಪ್ ಮತ್ತಿತರರು ಶುಭ ಹಾರೈಸಿದರು.

    Dr.G.Parameshwar a politician with a simple gentlemanly personality

  • ಸಂಭ್ರಮವಲ್ಲದ ಹಗರಣದ ಹಬ್ಬ ಸೂತಕದ ಹಬ್ಬ

    ಸಂಭ್ರಮವಲ್ಲದ ಹಗರಣದ ಹಬ್ಬ ಸೂತಕದ ಹಬ್ಬ

    ಚಿಕ್ಕಮಗಳೂರು: ದೇವರ ಬಗ್ಗೆ ನಂಬಿಕೆ, ಆಧ್ಯಾತ್ಮದ ಚಿಂತನೆಯಿಂದಾಗಿ ಭಾರತ ದೇಶ ಮತ್ತು ಕನ್ನಡ ನಾಡು ಶಾಂತಿಯಿಂದ ಇವೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅಭಿಪ್ರಾಯಿಸಿದರು.

    ಅವರು ಇಂದು ಹಿರೇಗೌಜ ಗ್ರಾಮದಲ್ಲಿ ೧೦ ದಿನಗಳ ಕಾಲ ನಡೆಯುವ ಹಗರಣದ ಹಬ್ಬ ಹಾಗೂ ಬಳಲಿಕ್ಕಮ್ಮ ಮತ್ತು ಮಲ್ಲಿಗೆಮ್ಮನವರ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿ ಆಧ್ಯಾತ್ಮದ ನಂಬಿಕೆಯಿಂದ ಧಾರ್ಮಿಕತೆಯಲ್ಲಿ ಧರ್ಮ, ಸಂಸ್ಕಾರ, ಸಂಸ್ಕೃತಿ ಇವುಗಳಿಂದಾಗಿ ಪ್ರಪಂಚದಲ್ಲೇ ಭಾರತ ಮುಂಚೂಣಿಯಲ್ಲಿದೆ. ಜಾತ್ಯಾತೀತ ರಾಷ್ಟ್ರದಲ್ಲಿ ಹಲವಾರು ಧರ್ಮಗಳಿದ್ದು, ಧರ್ಮದಲ್ಲಿ ಹಲವಾರು ಉಪಜಾತಿಗಳಿವೆ. ಅದನ್ನೆಲ್ಲ ಮೆಟ್ಟಿನಿಂತು ಆಧ್ಯಾತ್ಮಿಕವಾಗಿ ದೇಶವಾಸಿಗಳು ಗಟ್ಟಿಯಾದ ನಿಲುವು ತಾಳಿರುವುದು ಹೆಮ್ಮೆಯ ಸಂಗತಿ ಎಂದರು.

    ಎಲ್ಲಾ ನಾಗರೀಕರು ಜನ್ಮ ನೀಡಿದ ಭಾರತಾಂಭೆಗೆ ಜೈ ಎನ್ನುತ್ತೇವೆ. ನೀರಿಗೆ ಗಂಗೆ, ದೇಶಕ್ಕೆ ಭಾರತ ಮಾತಾ, ರಾಜ್ಯದಲ್ಲಿ ಜೈ ಭುವನೇಶ್ವರಿ ದೇವಿ ಎನ್ನುತ್ತೇವೆ. ಈ ರೀತಿ ಧರ್ಮದ ಲೇಪನ ನೀಡುವುದೇ ಭಾರತದ ಸಂಸ್ಕೃತಿ ಎಂದು ಹೇಳಿದರು.

    ಇದು ಹಗರಣದ ಹಬ್ಬ. ೭ ಹಳ್ಳಿಗಳು ಸೇರಿ ಮಾಡುವ ಸಂಭ್ರಮದ ಹಬ್ಬ ಅಲ್ಲ. ಇದೊಂದು ಸೂತಕದ ಹಬ್ಬ. ಊರಿಗಾಗಿ, ನಾಡಿಗಾಗಿ ಮಲಿಗೆಮ್ಮನ ಮಕ್ಕಳಾದ ಹುಲಿಬೀರಯ್ಯ ಮತ್ತು ಕಲಿಬೀರಯ್ಯ ಎಂಬ ಇಬ್ಬರು ಯುವಕರು ಬಲಿದಾನ ಮಾಡಿದ ಕಾರಣಕ್ಕೆ ಹಬ್ಬ ಆಚರಣೆ ಮಾಡಲಾಗುತ್ತಿದೆ.
    ೭ ಹಳ್ಳಿಗಳಾದ ಹಿರೇಗೌಜ, ಚಿಕ್ಕಗೌಜ, ಸಾದರಹಳ್ಳಿ, ಕುರಿಚಿಕ್ಕನಹಳ್ಳಿ, ಕರಿಸಿದ್ದನಹಳ್ಳಿ, ಕೆಂಗೇನಹಳ್ಳಿ, ಕಾರೇಹಳ್ಳಿ ಈ ಗ್ರಾಮಸ್ಥರು ಒಂದು ವಾರ ಕೃಷಿ ಚಟುವಟಿಕೆಗಳಿಗೆ ವಿರಾಮ ನೀಡಿ ಈ ಹಬ್ಬದಲ್ಲಿ ಭಾಗಿಯಾಗುತ್ತಾರೆ. ಜೊತೆಗೆ ಈ ಹಬ್ಬ ಶಿಸ್ತನ್ನು ಪಾಲಿಸುವ ಮೂಲಕ ವಿವಿಧ ಹಬ್ಬದ ಖಾದ್ಯಗಳಿಗೆ ನಿಷೇಧವಿರುತ್ತದೆ ಎಂದರು.

    ಹಿರಿಯರ ಜೊತೆ ಹಬ್ಬದ ಆಚಾರ-ವಿಚಾರಗಳು ಧರ್ಮ ಮತ್ತು ಆಧ್ಯಾತ್ಮದ ಕುರಿತು ಯುವಜನರಲ್ಲಿ ಅರಿವು ಮೂಡಿಸಿದಾಗ ಮಾತ್ರ ಧಾರ್ಮಿಕತೆ ಬೆಳೆಯುತ್ತದೆ. ಈ ನಿಟ್ಟಿನಲ್ಲಿ ಶ್ರದ್ಧಾಭಕ್ತಿಯಿಂದ ಹಬ್ಬದ ಆಚರಣೆಗಳು ನಡೆಯಬೇಕೆಂದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಗತಕಾಲದ ವೈಭವದ ನೆನಪು ಮಾಡಿಕೊಂಡು ಗ್ರಾಮಸ್ಥರಲ್ಲಿ ಒಗ್ಗಟ್ಟು ಮೂಡಿಸಿ ಸಾಂಸ್ಕೃತಿಕ ಶ್ರೀಮಂತಿಕೆ ಇರುವುದರಿಂದ ಭಾರತದಲ್ಲಿ ಹಬ್ಬಗಳು ಇರುವುದು ಜಗತ್ತಿನೆಲ್ಲೆಡೆ ಎಲ್ಲೂ ಕಾಣಲು ಸಾಧ್ಯವಿಲ್ಲ. ಸಮೃದ್ಧಿ ಇದ್ದಲ್ಲಿ ಸಂಸ್ಕೃತಿ ಬೆಳೆಯುತ್ತದೆ ಎಂದರು.

    ಬಲಿದಾನ ಮಾಡಿದವರ ನೆನಪಿನಲ್ಲಿ ಈ ಹಗರಣದ ಹಬ್ಬ ಆಚರಣೆ ಮಾಡುವುದನ್ನು ಪೂರ್ವಿಕರು ಮಾಡಿದ್ದಾರೆ. ದೇವನೊಬ್ಬ ನಾಮ ಹಲವು, ದಯವೇ ಧರ್ಮದ ಮೂಲವಯ್ಯ, ಸಕಲ ಜೀವಾತ್ಮಗಳಿಗೂ ಲೇಸನ್ನೇ ಬಯಸುವ ಎಂಬ ಅರ್ಥದಲ್ಲಿ ಪಂಚಭೂತಗಳನ್ನು ಪೂಜಿಸಲಾಗುತ್ತಿದೆ ಎಂದರು.

    ಗ್ರಾ.ಪಂ ಸದಸ್ಯ ಶಿವಕುಮಾರ್ ಮಾತನಾಡಿ, ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ಸಾಮಂತ ದೊರೆಯ ಆಳ್ವಿಕೆಯಲ್ಲಿ ಸಖರಾಯಪಟ್ಟಣಕ್ಕೆ ಬಂದ ಬಳಿಲಿಕ್ಕವ್ವ ಮತ್ತು ಮಲ್ಲಿಗೆಮ್ಮ ಇವರು ಅಕ್ಕ-ತಂಗಿಯರಾಗಿದ್ದು ಇವರ ಮಕ್ಕಳಾದ ಹುಲಿಬೀರಯ್ಯ, ಕಲಿಬೀರಯ್ಯ ಸೀಗೆ ನಾಡಿನಿಂದ ಹೊಂಬಳ್ಳಿ ಕರಿ ಹರಿದು ತರುವ ಸಂದರ್ಭದಲ್ಲಿ ಬಲಿಯಾಗುತ್ತಾರೆ. ಅದರ ನೆನಪಿನಲ್ಲೇ ಹಗರಣದ ಹಬ್ಬ ಆಚರಿಸುತ್ತಾರೆಂದು ವಿವರಿಸಿದರು.

    ಈ ಸಂದರ್ಭದಲ್ಲಿ ಮಾಜಿ ಜಿ.ಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಗ್ರಾ.ಪಂ ಅಧ್ಯಕ್ಷೆ ಮಂಜುಳ, ಉಪಾಧ್ಯಕ್ಷೆ ಶಶಿಕಲಾ, ಹಬ್ಬದ ಆಚರಣೆ ಸಮಿತಿ ಅಧ್ಯಕ್ಷ ಹೆಚ್.ಎಸ್. ಗಾಂಧಿ, ಯೋಗೀಶ್‌ಗೌಡ, ಸಿ.ಸಿ. ಬಸವೇಗೌಡ, ಚಂದ್ರೇಗೌಡ, ದೇವೇಗೌಡ, ಓಂಕಾರೇಗೌಡ, ರಾಮೇಗೌಡ, ವಿಜಯ್‌ಕುಮಾರ್, ಶೋಭಾರಾಣಿ, ಗೀತಾ, ಹಾಲಪ್ಪ, ಸುರೇಶ್, ಬೀರೇಗೌಡ, ವಿಶಾಲಾಕ್ಷಿ, ಗುರುಮೂರ್ತಿ, ಮಮತ ಉಪಸ್ಥಿತರಿದ್ದರು.

    The festival of Sutaka a festival of scandal and not celebration

  • ಪಿಎಲ್‌ಡಿ ಬ್ಯಾಂಕ್‌ನಿಂದ 10 ಕೋಟಿ ರೂ ಸಾಲ ವಿತರಣೆ ಗುರಿ

    ಪಿಎಲ್‌ಡಿ ಬ್ಯಾಂಕ್‌ನಿಂದ 10 ಕೋಟಿ ರೂ ಸಾಲ ವಿತರಣೆ ಗುರಿ

    ಚಿಕ್ಕಮಗಳೂರು: ರಾಜ್ಯದಲ್ಲೇ ಚಿಕ್ಕಮಗಳೂರು ಜಿಲ್ಲೆಯ ೮ ಪಿಸಿಎಲ್‌ಡಿ ಬ್ಯಾಂಕ್‌ಗಳು ಪ್ರಥಮ ಸಾಧನೆಗೈದು ಲಾಭದಾಯಕವಾಗಿ ನಡೆಯುತ್ತಿದ್ದು, ಈ ವರ್ಷ ೧೦ ಕೋಟಿ ರೂ ಸಾಲ ವಿತರಿಸಲು ಗುರಿಹೊಂದಲಾಗಿದೆ ಎಂದು ಬ್ಯಾಂಕಿನ ಜಿಲ್ಲಾ ನಿರ್ದೇಶಕ ಈ.ಆರ್ ಮಹೇಶ್ ತಿಳಿಸಿದರು.

    ಅವರು ಇಂದು ನಗರದ ಪಿಸಿಎಲ್‌ಡಿ ಬ್ಯಾಂಕಿನ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ 
    ಜಿಲ್ಲೆಯಲ್ಲಿ ಶೇ.೩ ರ ಬಡ್ಡಿದರಲ್ಲಿ ಕಳೆದ ವರ್ಷ ರೈತರಿಗೆ ೪೦ ಕೋಟಿ ರೂಗಳ ಸಾಲವನ್ನು ವಿತರಿಸಲಾಗಿದ್ದು, ಇದರಿಂದಾಗಿ ರಾಜ್ಯದಲ್ಲೇ ಅತೀ ಹೆಚ್ಚು ಸಾಲ ನೀಡಿದ ಜಿಲ್ಲೆ ಎಂಬ ಪಿಸಿಎಲ್‌ಡಿ ಬ್ಯಾಂಕ್ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಹೇಳಿದರು.

    ಈ ಅವಕಾಶವನ್ನು ಸದುಪಯೊಗಪಡಿಸಿಕೊಳ್ಳುವಂತೆ ಬ್ಯಾಂಕಿನ ಅಧ್ಯಕ್ಷರು ಮತ್ತು ವ್ಯವಸ್ಥಾಪಕರಿಗೆ ಸಲಹೆ ಸೂಚನೆಗಳನ್ನು ನೀಡಲಾಗಿದ್ದು, ರಾಜ್ಯಸರ್ಕಾರ ಘೋಷಣೆ ಮಾಡಿರುವ ಶೇ.೦ ದರದಲ್ಲಿ ಸಾಲ ನೀಡಲು ಆದೇಶ ಬಂದ ಬಳಿಕ ಐದು ಲಕ್ಷದವರೆಗೆ ಸಾಲ ಸೌಲಭ್ಯ ನೀಡಲಾಗುವುದು ಎಂದರು.

    ಶೇ.೩ ರ ಬಡ್ಡಿದರದಲ್ಲಿ ೧೫ ಲಕ್ಷ ರೂಗಳವರೆಗೆ ಸಾಲ ನೀಡಲಾಗುವುದೆಂದ ಅವರು, ರಾಜ್ಯದಲ್ಲೇ ಅತ್ಯುತ್ತಮವಾಗಿ ಸೇವೆ ಸಲ್ಲಿಸಿದ ಪಿಸಿಎಲ್‌ಡಿ ಬ್ಯಾಂಕ್ ಮುಂದಾಗಿದೆ ಎಂದು ಶ್ಲಾಘಿಸಿದರು.

    ಈ ಸಂದರ್ಭದಲ್ಲಿ ಪಿಸಿಎಲ್‌ಡಿ ಬ್ಯಾಂಕ್, ನಬಾರ್ಡ್, ಡಿಡಿಎಂ ರೇಜಿಸ್, ಬ್ಯಾಂಕಿನ ಅಧ್ಯಕ್ಷ ಸಿ.ಎಸ್ ರಂಗನಾಥ್, ಜಿಲ್ಲೆಯ ವಿವಿಧ ಪಿಎಲ್‌ಡಿ ಬ್ಯಾಂಕ್‌ಗಳ ಅಧ್ಯಕ್ಷರುಗಳಾದ ನಾಗರತ್ನ, ಹೆಚ್.ಎಸ್. ದಿನೇಶ್, ದಿನೇಶ್ ಹೆಗ್ಡೆ, ಸುಂದರೇಶ್, ಯೋಗೀಶ್, ಪುಟ್ಟರಾಜ್ ಹೆಚ್.ಎನ್ ಹಾಗೂ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ತೇಜಸ್ವಿನಿ ಉಪಸ್ಥಿತರಿದ್ದರು.

    PLD Bank targets to disburse Rs 10 crore in loans this year

  • ತಾಯಿಹಾಲಿನ ಮಹತ್ವ ತಿಳಿಸುವುದು ಸ್ತನ್ಯಪಾನ ಸಪ್ತಾಹದ ಉದ್ದೇಶ

    ತಾಯಿಹಾಲಿನ ಮಹತ್ವ ತಿಳಿಸುವುದು ಸ್ತನ್ಯಪಾನ ಸಪ್ತಾಹದ ಉದ್ದೇಶ

    ಚಿಕ್ಕಮಗಳೂರು: ತಾಯಿ ಹಾಲು ಅದರ ಮಹತ್ವ ಮಗುವಿನ ಮೇಲಾಗುವ ಪ್ರಯೋಜನದ ಬಗ್ಗೆ ಅರಿವು ಮೂಡಿಸುವ ಉದ್ದೇಶದೊಂದಿಗೆ ಆಗಸ್ಟ್ ಮೊದಲ ವಾರದಲ್ಲಿ ಸ್ತನ್ಯಪಾನ ಸಪ್ತಾಹ ಆಚರಿಸಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವಥ್‌ಬಾಬು ತಿಳಿಸಿದರು.

    ಅವರು ಇಂದು ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾಸ್ಪತ್ರೆ, ಹಾಗೂ ಇನ್ನರ್ ವೀಲ್ಹ್ ಕ್ಲಬ್, ರೋಟರಿ ಕ್ಲಬ್, ರೋಟರಿ ಕಾಫಿ ಲ್ಯಾಂಡ್ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ‘ವಿಶ್ವ ಸ್ತನ್ಯಪಾನ ಸಪ್ತಾಹ’ ೨೦೨೫ ನ್ನು ಉದ್ಘಾಟಿಸಿ ಮಾತನಾಡಿದರು.

    ಸ್ತನ್ಯಪಾನದಿಂದ ಯಾವ ಯಾವ ರೋಗಗಳನ್ನು ತಡೆಯಬಹುದು ಹಾಗೂ ಅದರ ಅನುಕೂಲತೆಗಳ ಬಗ್ಗೆ ಈ ಸಪ್ತಾಹದ ಮೂಲಕ ತಾಯಂದಿರಲ್ಲಿ ಜಾಗೃತಿ ಮೂಡಿಸಲಾಗುವುದೆಂದು ಹೇಳಿ ಆರೋಗ್ಯ ಇಲಾಖೆಯಿಂದ ಆಯೋಜಿಸುವ ವಿವಿಧ ಆರೋಗ್ಯ ಅರಿವು ಕಾರ್ಯಕ್ರಮಗಳಲ್ಲಿ ಇನ್ನರ್ ವೀಲ್ಹ್ ಕ್ಲಬ್, ರೋಟರಿ ಕ್ಲಬ್, ಲಯನ್ ಸಂಸ್ಥೆ ಸಕ್ರಿಯವಾಗಿ ಪಾಲ್ಗೊಂಡು ಸಲಹೆ ಸಹಕಾರ ನೀಡುವಂತೆ ಮನವಿ ಮಾಡಿದರು.

    ಜಿಲ್ಲಾ ಸರ್ಜನ್ ಡಾ. ಚಂದ್ರಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿ, ಮಗು ಜನಿಸಿದ ೬ ತಿಂಗಳು ತಪ್ಪದೇ ಸ್ತನ್ಯಪಾನ ಕಡ್ಡಾಯವಾಗಿ ನೀಡಬೇಕು ಎಂಬುದನ್ನು ತಾಯಂದಿರಲ್ಲಿ ಸಪ್ತಾಹದ ಮೂಲಕ ಅರಿವು ಮೂಡಿಸುವ ಅಗತ್ಯ ಇದೆ ಎಂದರು.

    ಇದನ್ನು ಮನಗಂಡ ವಿಶ್ವ ಆರೋಗ್ಯ ಸಂಸ್ಥೆ ಪ್ರತೀ ವರ್ಷ ಈ ಬಗ್ಗೆ ಅರಿವು ಮೂಡಿಸಲು ಸ್ತನ್ಯಪಾನ ಸಪ್ತಾಹವನ್ನು ಆಚರಿಸುತ್ತಿದೆ. ೨೦೨೫ ರಲ್ಲಿ ‘ತಾಯಿಯ ಹಾಲು ನೀಡುವುದರಲ್ಲಿ ಹೂಡಿಕೆ ಮಾಡಿದರೆ ಮಕ್ಕಳ ಆರೋಗ್ಯಕರ ಭವಿಷ್ಯಕ್ಕಾಗಿ ಹೂಡಿಕೆ ಮಾಡಿದಂತೆ’ ಎಂಬ ಘೋಷವಾಕ್ಯದೊಂದಿಗೆ ಶೇ.೫೦ ರಷ್ಟು ಗುರಿ ತಲುಪಲು ನಿರ್ಧರಿಸಲಾಗಿದೆ ಎಂದು ಹೇಳಿದರು.

    ಸ್ತನ್ಯಪಾನದಿಂದ ತಾಯಿ ಮತ್ತು ಮಗು ಇಬ್ಬರಿಗೂ ಪ್ರಯೋಜನವಿದೆ. ಚುಚ್ಚುಮದ್ದು ಕೊಡುವುದರಿಂದ ಹಲವಾರು ರೋಗಗಳನ್ನು ತಡೆಗಟ್ಟಲು ಅವಕಾಶವಿರುವಂತೆ ಮಗುವಿಗೆ ರೋಗಗಳು ಬರದಂತೆ ತಡೆಯುವ ಶಕ್ತಿ ಸ್ತನ್ಯಪಾನಕ್ಕಿದೆ ಎಂದು ಹೇಳಿದರು.

    ಮಗು ಜನಿಸಿದ ಮೊದಲ ತಿಂಗಳಲ್ಲೇ ಮೃತಪಡುವುದು ಮತ್ತು ರೋಗಗಳಿಗೆ ತುತ್ತಾಗುವುದನ್ನು ತಡೆಯಲು ಸ್ತನ್ಯಪಾನದಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ತಾಯಂದಿರು ಮಗು ಹಾರೈಕೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದು ಕಿವಿಮಾತು ಹೇಳಿದರು.

    ಸ್ತನ್ಯಪಾನ ಮಾಡುವುದರಿಂದ ಮಹಿಳೆಯರ ಸೌಂದರ್ಯ ಹಾಳಾಗುತ್ತದೆಂಬ ಮೂಡನಂಬಿಕೆಯಿಂದ ಹೊರತರುವ ಕೆಲಸವನ್ನು ಈ ಸಪ್ತಾಹದ ಮೂಲಕ ತಾಯಂದಿರಲ್ಲಿ ಜಾಗೃತಿ ಮೂಡಿಸುವುದು ಪ್ರಮುಖ ಉದ್ದೇಶವಾಗಿದೆ ಎಂದರು.

    ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಮಂಜುನಾಥ್ ಮಾತನಾಡಿ, ಮಗು ಜನಿಸಿದ ೬ ತಿಂಗಳವರೆಗೆ ಕಡ್ಡಾಯವಾಗಿ ಎದೆಹಾಲನ್ನು ನೀಡಿದರೆ ವಾಂತಿಭೇದಿ, ನ್ಯುಮೋನಿಯಾ ಮುಂತಾದವುಗಳಿಗೆ ತುತ್ತಾಗುವುದನ್ನು ತಡೆಯಬಹುದಾಗಿದೆ. ತಾಯಂದಿರಿಗೆ ಹಾಲುಣಿಸುವ ಬಗ್ಗೆ ಆರೋಗ್ಯ ಇಲಾಖೆಯ ಕಾರ್ಯಕರ್ತರು ಮನವರಿಕೆ ಮಾಡುತ್ತಿದ್ದಾರೆಂದು ಹೇಳಿದರು.

    ಜಿಲ್ಲೆಯಲ್ಲಿ ೨೦೨೪-೨೫ ರಲ್ಲಿ ೧೨೩೦೨ ಮಕ್ಕಳು ಜನಿಸಿದ್ದು, ಇದರಲ್ಲಿ ೮೩ ಮಕ್ಕಳು ಮೊದಲ ಹುಟ್ಟುಹಬ್ಬವನ್ನೇ ನೋಡಿಲ್ಲ. ಕಾರಣ ಸ್ತನ್ಯಪಾನದಿಂದ ವಂಚಿತರಾಗಿ ೧೮ ಮಕ್ಕಳು ಮೃತಪಟ್ಟಿರುವುದಾಗಿ ಮಾಹಿತಿ ನೀಡಿದರು.

    ಈ ಸಂದರ್ಭದಲ್ಲಿ ಡಾ. ಭಾರತಿ, ಡಾ. ಶಶಿಕಲಾ, ಶಿವರಾಜ್, ಸ್ತ್ರೀರೋಗ ತಜ್ಞ ಡಾ. ಪುಟ್ಟಪ್ಪ, ಮಕ್ಕಳ ತಜ್ಞರಾದ ಡಾ. ವರದಾ ವಿದ್ಯಾರಾಣಿ, ಡಾ. ಕಲ್ಪನ, ಇನ್ನರ್ ವೀಲ್ಹ್ ಕ್ಲಬ್, ನಯನ ಸಂತೋಷ್, ಶಾಲಿನ ನಾಗೇಶ್, ನಾಗೇಶ್ ಕೆಂಜಿಗೆ, ಮತ್ತಿತರರು ಉಪಸ್ಥಿತರಿದ್ದರು.ಮೊದಲಿಗೆ ಡಿ.ಎನ್.ಓ ರೇಣುಕ ಸ್ವಾಗತಿಸಿ, ಜಲಜಾಕ್ಷಿ ನಿರೂಪಿಸಿದರು.

    The purpose of Breastfeeding Week is to raise awareness about the importance of breast milk.

  • ರಂಗಭೂಮಿ ನಾಟಕಗಳು ಸಮಾಜ ಪರಿವರ್ತನೆಗೆ ನಾಂದಿ

    ರಂಗಭೂಮಿ ನಾಟಕಗಳು ಸಮಾಜ ಪರಿವರ್ತನೆಗೆ ನಾಂದಿ

    ಚಿಕ್ಕಮಗಳೂರು: ರಂಗಭೂಮಿ ನಾಟಕಗಳು ಸಮಾಜ ಪರಿವರ್ತನೆಗೆ ನಾಂದಿಯಾಗಿದ್ದು, ಪ್ರತಿಯೊಬ್ಬರೂ ನಾಟಕ ವೀಕ್ಷಿಸುವ ಮೂಲಕ ಕಲೆಯನ್ನು ಪ್ರೋತ್ಸಾಹಿಸಬೇಕೆಂದು ಬಸವತತ್ವ ಪೀಠದ ಪೀಠಾಧ್ಯಕ್ಷ ಡಾ. ಬಸವ ಮರುಳಸಿದ್ದ ಸ್ವಾಮೀಜಿ ಹೇಳಿದರು.

    ಅವರು ಕುವೆಂಪು ಕಲಾಮಂದಿರದಲ್ಲಿ ಬಸವತತ್ವ ಪೀಠ, ಕಲಾ ಸೇವಾಸಂಘ, ಆಶಾಕಿರಣ ಚಾರಿಟಬಲ್ ಟ್ರಸ್ಟ್, ಲಯನ್ ಸಂಸ್ಥೆ, ಸುಗಮ ಸಂಗೀತ ಗಂಗಾ, ಎಐಟಿ, ಆಶ್ರಯ ಫೌಂಡೇಷನ್, ಕಲ್ಕಟ್ಟೆ ಪುಸ್ತಕದ ಮನೆ, ಜೆಸಿ ಸಂಸ್ಥೆ, ಪೂರ್ವಿ ಸುಗಮಸಂಗೀತ ಅಕಾಡೆಮಿ, ಶಿವಮೊಗ್ಗದ ಸಹ್ಯಾದ್ರಿ ರಂಗಭೂಮಿ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ‘ಲಕ್ಷ್ಮಣ ತುಕಾರಾಂ ಗೋಲೆ’ ನಾಟಕ ಪ್ರದರ್ಶನದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

    ದೂರದರ್ಶನ ಮನುಷ್ಯನನ್ನು ಚಿಕ್ಕದಾಗಿ ತೋರಿಸಿದರೆ, ಸಿನಿಮಾ ದೊಡ್ಡದಾಗಿ ತೋರಿಸುತ್ತದೆ. ರಂಗಭೂಮಿ ಮಾತ್ರ ಮನುಷ್ಯನನ್ನು ಮನುಷ್ಯನಾಗಿ ಬಿಂಬಿಸುತ್ತದೆ ಎಂದು ವಿಶ್ಲೇಷಿಸಿದರು.

    ವಾಸ್ತವ ಬದುಕಿನಲ್ಲಿ ರಂಗಭೂಮಿ ಮನುಷ್ಯನನ್ನು ಮುನುಷ್ಯನಾಗಿ ತೋರಿಸುವ ಕಲಾ ಪ್ರಕಾರವೇ ನಾಟಕಗಳು ಎಂದ ಅವರು, ಪಾತಕಿ ಲೋಕದ ಅಪರಾಧದಿಂದ ಹೊರಬಂದು ಗಾಂಧೀಜಿಯವರ ತತ್ವಾದರ್ಶಗಳನ್ನು ಮೈಗೂಡಿಸಿಕೊಂಡ ಲಕ್ಷ್ಮಣ್ ತುಕಾರಾಂ ಗೋಲೆ ನಾಟಕ ಅವರ ಜೀವನ ಚರಿತ್ರೆಯಾಗಿದೆ ಎಂದು ಹೇಳಿದರು.

    ಪ್ರತಿಯೊಬ್ಬ ಮನುಷ್ಯನಿಗೆ ಪರಿವರ್ತನೆಗೆ ಒಂದು ಒಳ್ಳೆಯ ಅವಕಾಶವಿದೆ. ಪ್ರತಿ ಪಾಪಿಗೂ ಒಂದು ಭವಿಷ್ಯ ಇದೆ. ಅದರಂತೆ ಒಳ್ಳೆಯ ಭವಿಷ್ಯ ರೂಪಿಸುವ ನಾಟಕ ಇದಾಗಿದ್ದು, ಎಲ್ಲರೂ ವೀಕ್ಷಿಸುವ ಮೂಲಕ ಪ್ರೋತ್ಸಾಹಿಸಬೇಕಾದ ಅಗತ್ಯ ಇದೆ ಎಂದರು. ಮುಂದಿನ ದಿನಗಳಲ್ಲಿ ಈ ರೀತಿಯ ಸಾಮಾಜಿಕ ಬದಲಾವಣೆಯ ನಾಟಕಗಳನ್ನು ಹೆಚ್ಚು ಹೆಚ್ಚು ಪ್ರದರ್ಶನದ ಮೂಲಕ ಜನರ ಮನಃಪರಿವರ್ತನೆಗೆ ನಾಂದಿಯಾಗಲಿ ಎಂದು ಶುಭ ಹಾರೈಸಿದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಮೋಹನ್ ದಾಸ್‌ರನ್ನು ಮಹಾತ್ಮಾ ಗಾಂಧಿಯಾಗಿ ಪರಿವರ್ತನೆ ಮಾಡಿದ್ದು ಅವರು ಚಿಕ್ಕಂದಿನಲ್ಲಿ ಹರಿಶ್ಚಂದ್ರ ನಾಟಕವನ್ನು ವೀಕ್ಷಿಸಿದ್ದರು ಎಂದು ಹೇಳಿದರು. ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ಇಂತಹ ಸಾಮಾಜಿಕ ಪರಿವರ್ತನೆಯ ನಾಟಕಗಳ ಪ್ರದರ್ಶನ ಜನರಲ್ಲಿ ಭಾವನಾತ್ಮಕ ವಿಚಾರಧಾರೆಗಳು ನೆಲೆಸಲು ಪೂರಕ ಎಂದರು.

    ಪರಿವರ್ತನೆ ದಾರಿಯಲ್ಲಿ ಸಾಗಬೇಕಾದರೆ ಎಲ್ಲರಿಗೂ ಅವಕಾಶವಿದೆ ಎಂಬುದನ್ನು ಗಾಂಧೀಜಿ ಮನಗಂಡಿದ್ದರು. ಇಂತಹ ಅವಕಾಶಗಳಿಗೆ ಜಿಲ್ಲೆಯಲ್ಲಿ ವಿಫುಲ ಅವಕಾಶಗಳಿದ್ದು, ರಂಗಭೂಮಿ ನಾಟಕಗಳ ಪ್ರದರ್ಶನ ಯಶಸ್ವಿಯಾಗಲಿ ಎಂದು ಹೇಳಿದರು. ಖ್ಯಾತ ಮಕ್ಕಳ ತಜ್ಞ ಡಾ. ಜಿ.ಪಿ. ಕೃಷ್ಣೇಗೌಡ ಮಾತನಾಡಿ, ಮನುಷ್ಯನಲ್ಲಿ ನಿಜವಾದ ಕಲೆ ಉಳಿದಿದೆ ಅಂದರೆ ಅದು ರಂಗಭೂಮಿ ಕಲಾವಿದರಲ್ಲಿ ಮಾತ್ರ ಕಾಣಲು ಸಾಧ್ಯ ಎಂದು ತಿಳಿಸಿದರು.

    ಆರ್ಕೆಸ್ಟ್ರಾ, ಸಿನಿಮಾ, ದೂರದರ್ಶನ, ಮೊಬೈಲ್ ಮುಂತಾದವುಗಳ ಗೀಳಿಗೆ ಬಿದ್ದು ವೀಕ್ಷಣೆಯಲ್ಲಿ ಜನತೆ ಮುಂದಾಗಿ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಈ ರೀತಿಯ ಸಾಮಾಜಿಕ ಪರಿವರ್ತನೆಯ ಉತ್ತಮ ನಾಟಕ ಪ್ರದರ್ಶನ ನೋಡಲು ಪ್ರೇಕ್ಷಕರ ಸಂಖ್ಯೆ ಇಳಿಮುಖವಾಗಿರುವುದು ವಿಷಾಧನೀಯ ಎಂದರು.

    ತುಕಾರಾಂರವರು ಗಾಂಧೀಜಿಯವರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜ ಪರಿವರ್ತನೆಯ ನಾಟಕವನ್ನು ನಿರ್ದೇಶಿಸಿದ್ದಾರೆ. ಮಹಾರಾಷ್ಟ್ರ ಸರ್ಕಾರ ಇವರಿಗೆ ಪ್ರಶಸ್ತಿ ನೀಡಿ ಗೌರವಿಸಿದ್ದು, ಇಲ್ಲಿಗೂ ಬರುವಂತೆ ಲಕ್ಷ್ಮಣ ಅವರಿಗೆ ಆಹ್ವಾನ ನೀಡಿರುವುದಾಗಿ ಹೇಳಿದರು.

    ಈ ಸಂದರ್ಭದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರಾದ ಮಂಜುಳ ಹುಲ್ಲಳ್ಳಿ, ಎಐಟಿ ರಿಜಿಸ್ಟ್ರಾರ್ ಡಾ. ಸಿ.ಕೆ ಸುಬ್ರಾಯ, ಪ್ರಾಂಶುಪಾಲ ಡಾ. ಸಿ.ಟಿ ಜಯದೇವ್, ಕಾಂತೇಶ್ ಕದರ ಮಂಡಲಗಿ, ಲಯನ್ಸ್ ಅಧ್ಯಕ್ಷ ಕುಮಾರ್ ಸಿ.ಎನ್, ಗಾಯಕ ಎಂ.ಎಸ್ ಸುಧೀರ್ ಮತ್ತಿತರರು ಉಪಸ್ಥಿತರಿದ್ದರು. ಕೊನೆಯಲ್ಲಿ ಲಯನ್ಸ್ ಪ್ರಧಾನ ಕಾರ್ಯದರ್ಶಿ ಗೋಪಿಕೃಷ್ಣ ವಂದಿಸಿದರು.

    Theater plays are the beginning of social transformation

  • ಬಿಜೆಪಿ ಸರ್ಕಾರ ಇದ್ದಾಗ ಅಯ್ಯನಕೆರೆಗೆ  9.90 ಕೋಟಿ ರೂ., ಮಂಜೂರು ಮಾಡಿಸಿದ್ದೆವು

    ಬಿಜೆಪಿ ಸರ್ಕಾರ ಇದ್ದಾಗ ಅಯ್ಯನಕೆರೆಗೆ 9.90 ಕೋಟಿ ರೂ., ಮಂಜೂರು ಮಾಡಿಸಿದ್ದೆವು

    ಚಿಕ್ಕಮಗಳೂರು: ಬೆರಟಿಕೆರೆ ತುಂಬಿಸುವ ಕಾಮಗಾರಿಗೆ ಎದುರಾಗಿರುವ ಸಮಸ್ಯೆಯನ್ನು ಎರಡೂ ಕಡೆ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬಗೆಹರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

    ಕೋಡಿ ಬಿದ್ದ ಅಯ್ಯನ ಕೆರೆಗೆ ಸೋಮವಾರ ಬಾಗಿನ ಅರ್ಪಿಸಿ ನಂತರ ಮಾತನಾಡಿದ ಅವರು, ಅಯ್ಯನ ಕೆರೆ ಕೋಡಿ ಬಿದ್ದ ನೀರನ್ನ ಲಿಫ್ಟ್ ಮಾಡಿ ಬೆರಟಿ ಕೆರೆ ತುಂಬಿಸುವ ಯೋಜನೆಗೆ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ೯.೯೦ ಕೋಟಿ ರೂ., ಮಂಜೂರು ಮಾಡಿಸಿದ್ದೆವು. ಈಗ ಕಾಮಗಾರಿ ಸಂದರ್ಭದಲ್ಲಿ ವಿವಾದವಾಗಿದೆ. ಇದಕ್ಕೆ ಕಾರಣ ಗೊತ್ತಿಲ್ಲ. ಯಾರಿಗೂ ತೊಂದರೆ ಆಗದಂತೆ ರೈತರಲ್ಲಿರುವ ಆತಂಕ ದೂರ ಮಾಡಲು ಸಮಸ್ಯೆ ಬಗೆಹರಿಸಿ ಕಾಮಗಾರಿ ಮಾಡಬೇಕು. ಯಾರನ್ನೂ ಭಯಕ್ಕೆ ದೂಡದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾಮಗಾರಿ ಕೈಗೆತ್ತಿಕೊಳ್ಳುವ ಕೆಲಸವನ್ನ ಎರಡೂ ಕಡೆ ಶಾಸಕರು, ಸಚಿವರು, ಜಿಲ್ಲಾಡಳಿತ ಮಾಡಬೇಕು ಎಂದು ವಿನಂತಿಸುತ್ತೇನೆ ಎಂದರು.

    ನೀರು ಜೀವ ಜಲ. ಅದು ಬದುಕು ಸುಡುವ ಬೆಂಕಿ ಆಗಬಾರದು. ಕೆಳಭಾಗದ ಜನರಿಗೆ ನಮ್ಮ ಪರಿಸ್ಥಿತಿ ಏನಾಗುತ್ತದೆ ಎನ್ನುವ ಭಯ ಇದೆ ಅದನ್ನು ನಿವಾರಿಸಬೇಕು. ಎಷ್ಟು ಪ್ರಮಾಣದ ನೀರು ಯಾವಾಗ ತೆಗೆಯಲಾಗುತ್ತದೆ ಎನ್ನುವುದನ್ನು ಮನವರಿಕೆ ಮಾಡಿ ಕರಾರು ಪತ್ರ ಮಾಡಿಕೊಡಬೇಕು ಎಂದರು.

    ಕೆಳಬಾಗದಲ್ಲಿರುವವರು ರೈತರೇ, ಮೇಲ್ಭಾಗದಲ್ಲಿರುವವರೂ ರೈತರೇ, ಎಲ್ಲರೂ ನಮ್ಮವರೇ, ಎಲ್ಲರೂ ಕಳ್ಳು ಬಳ್ಳಿ ಸಂಬಂಧ ಇರುವುದರಿಂದ ಸಮಸ್ಯೆ ಬಗೆಹರಿಸಲು ಅಧಿಕಾರ ಬಳಸಬಾರದು. ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮಸ್ಯೆ ಪರಿಹರಿಸಬೇಕು. ಇದು ಬಗೆಹರಿಸಲಾಗದ ಸಮಸ್ಯೆ ಅಲ್ಲ, ಅಂತರಾಜ್ಯ ವಿವಾದಗಳನ್ನೇ ಬಗೆಹರಿಸುತ್ತೇವೆ. ಇದು ಗ್ರಾಮ ಗ್ರಾಮಗಳ ನಡುವಿನ ಸಮಸ್ಯೆ ಎರಡೂ ಕಡೆಯವರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದರು.

    ಭಾರತ ಸಂಸ್ಕಾರಯುತವಾದ ರಾಷ್ಟ್ರ. ಪ್ರಕೃತಿಯನ್ನ ಪಂಚಭೂತಗಳು ಎಂದು ಪೂಜಿಸುತ್ತೇವೆ. ಜಗತ್ತಿನ ಸೃಷ್ಠಿಯಾಗಿರುವುದೇ ನೀರು, ಭೂಮಿ, ಅಗ್ನಿ, ಆಕಾಶ ಮತ್ತು ವಾಯುವಿನಿಂದ. ಈ ಐದು ತತ್ವಗಳು ಎಲ್ಲಾ ವಸ್ತುಗಳಲ್ಲೂ ಇವೆ. ಈ ಕಾರಣಕ್ಕೆ ಭಗವತ್‌ಸ್ವರೂಪಿಯಾಗಿ ಆರಾಧಿಸುವ ಮತ್ತು ಉಪಕಾರ ಸ್ಮರಣೆ ಮಾಡುವುದು ಭಾರತೀಯ ಂಸ್ಕೃತಿ. ಈ ಕಾರಣಕ್ಕೆ ನಮ್ಮ ಪೂರ್ವಿಕರು ಕೆರೆ, ಕಟ್ಟೆ ತುಂಬಿದಾಗ ಗಂಗಾ ಮಾತೆ ಪೂಜಿಸುವ ಪದ್ಧತಿ ತಂದಿದ್ದಾರೆ ಎಂದರು.

    ಗಿರಿ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವುದರಿಂದ ಅಯ್ಯನ ಕೆರೆ ಮತ್ತು ಮದಗದ ಕೆರೆ ಎರಡೂ ಭರ್ತಿಯಾಗಿ ಗಂಗಾ ಪೂಜೆ ನೆರವೇರಿಸಿದ್ದೇವೆ. ಪ್ರತಿ ವರ್ಷ ಈ ರೀತಿ ಗಂಗೆ ತುಂಬಿ ಹರಿಯಲಿ, ಅದರಿಂದ ಕೆರೆ ಕಟ್ಟೆಗಳು ತುಂಬಿ, ಜನ ಜಾನುವಾರುಗಳು ಸಂತೃಪ್ತಿಯಿಂದ ಇರಲು ಸಾಧ್ಯವಾಗುತ್ತದೆ ಎಂದರು.

    ನಾವು ಪ್ರವಾಸೋದ್ಯಮ ಸಚಿವರಾಗಿದ್ದಾಗ ವಿಶೇಷವಾಗಿ ಅಯ್ಯನ ಕೆರೆಗೆ ೮.೮೪ ಕೋಟಿ ರೂ. ಮಂಜೂರು ಮಾಡಿಸಿದ್ದೆವು. ಈಗಲೂ ಅದೇ ಹಣದಲ್ಲಿ ಕೆಲಸ ನಡೆಯುತ್ತಿದೆ. ಇದಲ್ಲದೆ ಲೋಕೋಪಯೋಗಿ ಇಲಾಖೆಯಿಂದ ಒಮ್ಮೆ ೭ ಕೋಟಿ ರೂ. ಮಂಜೂರು ಮಾಡಿಸಿ ಕಾಂಕ್ರಿಟ್ ರಸ್ತೆ ಅಭಿವೃದ್ಧಿ ಪಡಿಸಲಾಗಿತ್ತು. ಸಣ್ಣ ನೀರಾವರಿ ಇಲಾಖೆಯಲ್ಲಿ ಒಮ್ಮೆ ೩.೮೨ ಕೋಟಿ ರೂ. ಕೆರೆ ಏರಿ ದುರಸ್ಥಿಗೆ ಮಂಜೂರು ಮಾಡಿಸಿದ್ದೆವು. ನಾಲ್ಕು ಕಾಲುವೆಗ ಅಬಿವೃದ್ದಿಗೆ ೧೧ ಕೋಟಿ ರೂ. ಸೇರಿ ಒಟ್ಟು ಸಣ್ಣ ನೀರಾವರಿ ಇಲಾಖೆಯಿಂದ ೧೪.೩೨ ಕೋಟಿ ರೂ., ಪ್ರವಾಸೋದ್ಯಮ ಇಲಾಖೆಯಿಂದ ೮.೮೪ ಕೋಟಿ., ಲೋಕೋಪಯೋಗಿ ಇಲಾಖೆ ವತಿಯಿಂದ ೭ ಕೋಟಿ ಮಂಜೂರು ಮಾಡಿಸಿ ಅಭಿವೃದ್ಧಿ ಪಡಿಸಲಾಗಿದೆ ಎಂದರು.

    ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಬಿಳೇಕಲ್ಲಹಳ್ಳಿ ಗ್ರಾ.ಪಂ. ಅಧ್ಯಕ್ಷ ಪಾದಮನೆ ಸ್ವಾಮಿ, ಸಖರಾಯಪಟ್ಟಣ ಪಂಚಾಯ್ತಿ ಅಧ್ಯಕ್ಷೆ ರಾಜಮ್ಮ, ಪಿಳ್ಳೇನಹಳ್ಳಿ ಪಂಚಾಯ್ತಿ ಸದಸ್ಯರು, ಜಿ.ಪಂ. ಮಾಜಿ ಉಪಾಧ್ಯಕ್ಷ ಗುಣಸಾಗರ ವಿಜಯಕುಮಾರ್, ಲೋಕೇಶ್, ಲೋಕೇಶ್ ಮಾಸ್ಟರ್, ಪ್ರಕಾಶ್, ಯೋಗೀಶ್, ರಾಜೇಶ್, ದಿನೇಶ್ ಇತರರು ಇದ್ದರು

    Ayyankere

  • ನಟ ಡಾ. ಪುನೀತ್‌ರಾಜ್‌ಕುಮಾರ್ ಪ್ರತಿಮೆ ಸ್ಥಾಪನೆ

    ನಟ ಡಾ. ಪುನೀತ್‌ರಾಜ್‌ಕುಮಾರ್ ಪ್ರತಿಮೆ ಸ್ಥಾಪನೆ

    ಚಿಕ್ಕಮಗಳೂರು:  ಡಾ|| ರಾಜ್‌ಕುಮಾರ್ ಅಭಿಮಾನಿಗಳ ಸಂಘದಿಂದ ನಗರದ ಆಜಾ ದ್ ಪಾರ್ಕ್ ವೃತ್ತದಲ್ಲಿ ದಿವಂಗತ ಡಾ|| ಪುನೀತ್‌ರಾಜ್‌ಕುಮಾರ್ ನೂತನ ಪ್ರತಿಮೆಯನ್ನು ಭಾನುವಾರ ಸ್ಥಾ ಪಿಸಲಾಯಿತು.

    ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಐ.ಕೆ.ಓಂಕಾರೇಗೌಡ ಸುಮಾರು ೫.೬ ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲಾಗಿದ್ದು. ಮುಂದಿನ ಸೆಪ್ಟೆಂಬರ್ ತಿಂಗಳ ಅಂತ್ಯದೊಳಗೆ ಆಜಾದ್ ವೃತ್ತದಲ್ಲಿ ದೊ ಡ್ಡಮಟ್ಟಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

    ಸೆಪ್ಟೆಂಬರ್ ನಡೆಯುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಅಶ್ವಿನಿ ಪುನೀ ತ್‌ರಾಜ್‌ಕುಮಾರ್ ಸೇರಿದಂತೆ ಅನೇಕ ಸಿನಿತಾರೆಯನ್ನು ನೇತೃತ್ವದಲ್ಲಿ ಪ್ರತಿಮೆಯನ್ನು ಅನಾವರಣಗೊಳಿಸ ಲಾಗುವುದು ಎಂದು ಹೇಳಿದರು.

    ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಸುಜಾತ ಶಿವಕುಮಾರ್, ರೂಪಕುಮಾರ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಸಂಘದ ಗೌರ ವಾಧ್ಯಕ್ಷ ಎಲ್.ವಿ.ಕೃಷ್ಣಮೂರ್ತಿ, ಪ್ರಧಾನ ಕಾರ್ಯದರ್ಶಿ ಎಂ.ಜಿ. ಬಸವರಾಜ್, ಉಪಾಧ್ಯಕ್ಷರಾದ ನೆಟ್ಟೆಕೆರೆ ಹಳ್ಳಿ ಜಯಣ್ಣ, ರೇವನಾಥ್, ಗುರುಮೂ ರ್ತಿ, ಕಾರ್ಯದರ್ಶಿಗಳಾದ ಕರ್ಕಿಪೇಟೆ ಕುಮಾರ್, ಮಹೇಶ್, ಆನಂದ್, ಓಂಕಾರಮೂರ್ತಿ ಮತ್ತಿತರರು ಹಾಜರಿದ್ದರು.

    Actor Dr. Installation of Puneeth Rajkumar Statue

  • ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮದಿನಕ್ಕೆ ವಿಶೇಷ ಪೂಜೆ-ಪ್ರಾರ್ಥನೆ

    ಮುಖ್ಯಮಂತ್ರಿ ಸಿದ್ದರಾಮಯ್ಯ ಜನ್ಮದಿನಕ್ಕೆ ವಿಶೇಷ ಪೂಜೆ-ಪ್ರಾರ್ಥನೆ

    ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರ ೭೮ನೇ ಹುಟ್ಟುಹಬ್ಬದ ಪ್ರಯುಕ್ತ ಭಾನುವಾರ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ತಾಲ್ಲೂಕು ಕಚೇರಿ ಸಮೀಪದ ಗಣಪತಿ ದೇವಾಲಯ ದಲ್ಲಿ ವಿಶೇಷ ಪೂಜೆ ಹಾಗೂ ಬಡ ಮಕಾನ್ ದರ್ಗಾದಲ್ಲಿ ಪಕ್ಷದ ಕಾರ್ಯಕರ್ತರು ದೀರ್ಘಾಯುಷ್ಯಿಗೆ ಪ್ರಾ ರ್ಥನೆ ಸಲ್ಲಿಸಿದರು.

    ಬಳಿಕ ಮಾತನಾಡಿದ ಶಾಸಕ ಹೆಚ್.ಡಿ.ತಮ್ಮಯ್ಯ ಜಾತ್ಯಾತೀತ ಸಿದ್ದಾಂತ ಹಾಗೂ ಶೋಷಿತ ಪರವಾಗಿ ಗಟ್ಟಿಯಾಗಿ ಧ್ವನಿಗೂಡಿಸಿ ಅಪರೂಪದ ನಾಯಕ ಸಿದ್ದರಾಮಯ್ಯನವರು. ೧೯೭೮ರ ಇಸವಿಯಲ್ಲಿ ತಾಲ್ಲೂಕು ಬೋರ್ಡ್ ಸದಸ್ಯರಾಗಿ ಇದೀಗ ರಾಜ್ಯದಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ನಾಡನ್ನು ಅಭಿವೃದ್ಧಿ ಪಥದತ್ತ ಕೊಂಡೊಯುತ್ತಿದ್ದಾರೆ ಎಂದರು.

    ಸಮಾಜವಾದಿ ವಿಚಾರಧಾರೆಗಳಲ್ಲಿ ಗಟಿಬದ್ಧರಾದ ಸಿದ್ದರಾಮಯ್ಯನವರು ಜನಸಾಮಾನ್ಯರ ಕಷ್ಟಕಾಪ ಣ್ಯಗಳಿಗೆ ಸ್ಪಂದಿಸಲು ಈ ಬಾರಿಯ ಸರ್ಕಾರದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಟಾನಗೊಳಿಸಿ ರಾಜ್ಯದ ಜನತೆಗೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಬದುಕು ರೂಪಿಸಿಕೊಟ್ಟ ದೇಶಕಂಡ ಅಪರೂಪದ ರಾಜಕಾರಣಿ ಎಂದು ಹೇಳಿದರು.

    ಸಿದ್ದರಾಮಯ್ಯನವರು ಯಾವುದೇ ಒಂದು ಜನಾಂಗ ಮತ್ತು ವಿಚಾರಕ್ಕೆ ಸೀಮಿತರಾದ ನಾಯಕರಲ್ಲ. ಸರ್ವಜನಾಂಗದ ಅಭಿವೃದ್ದಿಗಾಗಿ ಪಣತೊಟ್ಟ ಜನನಾಯಕ ಎಂದ ಅವರು ಡಾ|| ಬಿ.ಆರ್.ಅಂಬೇಡ್ಕರ್, ಬಸವೇಶ್ವರರ ತತ್ವ, ಸಿದ್ದಾಂತಗಳನ್ನು ವೈಯಕ್ತಿಕ ಹಾಗೂ ಪಕ್ಷದಲ್ಲಿ ಅಳವಡಿಸಿಕೊಂಡು ೭೮ರ ಹರೆಯದಲ್ಲೂ ನಾಡಿಗಾಗಿ ದುಡಿಯುತ್ತಿರುವ ನಾಯಕರು ಎಂದು ಬಣ್ಣಿಸಿದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮಾತನಾಡಿ ಹಳ್ಳಿಗಾಡಿನ ಬದುಕಿನ ಎಲ್ಲ ಅಡೆತಡೆ ಗಳನ್ನು ಸವಾಲಾಗಿ ಸ್ವೀಕರಿಸಿ ಮೆಟ್ಟಿನಿಂತು ಸಾಧನೆಯ ಶಿಖರ ಏರಿದ ಸಿದ್ದರಾಮಯ್ಯನವರ ಬಾಳದಾರಿ ಅನೇಕರಿಗೆ ಮಾರ್ಗದರ್ಶನ ಮಾತ್ರವಲ್ಲ ಸ್ಪೂರ್ತಿಯಾಗಿದೆ ಎಂದು ತಿಳಿಸಿದರು.

    ನಾಡಿನ ಜನತೆ ಹಸಿವಿನಿಂದ ಬಳಲಬಾರದೆಂಬ ದೃಷ್ಟಿಯಿಂದ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ ಹಸಿದವರಿಗೆ ಆಸರೆಯಾದ ಸಿದ್ದರಾಮಯ್ಯನವರ ವ್ಯಕ್ತಿತ್ವ, ವಿಚಾರಧಾರೆಗಳು ಇಂದಿನ ಯುವಪೀಳಿಗೆಗೆ ಮಾ ದರಿಯಾಗಿದ್ದು, ಆಧುನಿಕ ಜಗತ್ತಿನಲ್ಲಿ ರಾಜ್ಯದ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ ಎಂದರು.
    ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ ಮಾತನಾಡಿ ಕಾರ್ಯಕರ್ತರು ಸಿದ್ದರಾಮಯ್ಯನ ವರ ಹುಟ್ಟುಹಬ್ಬ ಆಚರಿಸಲು ವ್ಯಕ್ತಿಯಿಂದಲ್ಲ. ಅವರಲ್ಲಿರುವ ಜಾತ್ಯಾತೀತ ತತ್ವ, ಸಿದ್ದಾಂತವನ್ನು ಒಪ್ಪಿಕೊಂಡು ಹಲವೆಡೆ ಕಾರ್ಯಕರ್ತರು ಜನ್ಮದಿನವನ್ನು ಆಚರಿಸಲು ಕಾರಣವಾಗಿದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಸಿಡಿಎ ಅಧ್ಯಕ್ಷ ಮೊಹಮ್ಮದ್ ನಯಾಜ್, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ತಾಲ್ಲೂಕು ಅಧ್ಯಕ್ಷ ಎಂ.ಮಲ್ಲೇಶ್, ನಗರಸಭೆ ಸದಸ್ಯ ಶಾದಬ್, ಮುಖಂಡರು ಗಳಾದ ಪ್ರವೀಣ್‌ಕುಮಾರ್, ರಾಮಚಂದ್ರ, ಸಿಲ್ವೆಸ್ಟರ್, ಜಗದೀಶ್, ಸುರೇಶ್, ಸುಮ, ಪ್ರಕಾಶ್‌ರೈ, ಅನ್ಸರ್ ಆ ಲಿ, ಲಾಕೇಶ್, ಅಪ್ರೋಜ್, ಶಹಬುದ್ಧೀನ್, ಫಯಾಜ್, ಸುದೀಪ್ ಮತ್ತಿತರರಿದ್ದರು.

    Special pooja-prayer on Chief Minister Siddaramaiah’s birthday