Category: ಚಿಕ್ಕಮಗಳೂರು ನಗರ

  • ಪತ್ರಕರ್ತರು ಪ್ರಾಮಾಣಿಕವಾಗಿ ಕೆಲಸಮಾಡಿದಾಗ ಗೌರವ

    ಪತ್ರಕರ್ತರು ಪ್ರಾಮಾಣಿಕವಾಗಿ ಕೆಲಸಮಾಡಿದಾಗ ಗೌರವ

    ಶೃಂಗೇರಿ: ಪತ್ರಕರ್ತರು ಸಮಾಜದಲ್ಲಿ ನಿಷ್ಠೆ ಹಾಗೂ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ಅವರಿಗೆ ಗೌರವ ಸಿಗುತ್ತಿದೆ.ಹಿರಿಯ ಪತ್ರಕರ್ತರ ಆದರ್ಶಗಳನ್ನು ಮೈಗೂಡಿಸಿಕೊಂಡು ಸಮಾಜದ ಸಮಸ್ಯೆಗಳನ್ನು ತೆರೆದಿಡುವ ಯತ್ನಕ್ಕೆ ನಾವು ಸ್ಪಂದಿಸಬೇಕು ಎಂದು ನವದೆಹಲಿ ಇಂಡಿಯನ್ ಫೆಡರೇಷನ್ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಪತ್ರಕರ್ತರ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಿ.ಜಿ.ವಿಜಯ್ ತಿಳಿಸಿದರು.

    ಅವರು ಪ್ರವಾಸಿಮಂದಿರದಲ್ಲಿ ಸೋಮವಾರ ತಾಲೂಕು ಪತ್ರಕರ್ತರ ಸಂಘ ಆಯೋಜಿಸಿದ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

    ಸಣ್ಣಪತ್ರಿಕೆಯ ಸಂಘಗಳು ರಾಷ್ಟ್ರವ್ಯಾಪ್ತಿಯಾಗಿ ಬಹಳಷ್ಟು ಸಂಖ್ಯೆಗಳಲ್ಲಿ ಇವೆ.ಆದರೆ ಸಂಘಗಳು ಸಕ್ರಿಯವಾಗಿದ್ದರೆ ಮಾತ್ರ ಸಮುದಾಯ ಗುರುತಿಸುತ್ತದೆ.ಗ್ರಾಮಾಂತರ ಪ್ರದೇಶಗಳಲ್ಲಿ ಸಣ್ಣಪತ್ರಿಕೆ ಸಂಪಾದಕರ ಸ್ಥಿತಿ ಏಕಪಾತ್ರಭಿನಯವಾಗಿದ್ದು ಅವರ ಜೀವನ ನಿರ್ವಹಣೆ ಬಲು ಕಷ್ಟಕರ ಎಂದ ಅವರು ಪತ್ರಕರ್ತರಲ್ಲಿ ಏಕತೆ,ಒಗ್ಗಟ್ಟು ಇದ್ದಾಗ ಮಾತ್ರ ಸಂಘದ ಜೊತೆ ಪರ್ತಕರ್ತರಿಗೂ ಮಾನ್ಯತೆ ದೊರಕುತ್ತದೆ ಎಂದರು.

    ಸಂಘದ ನೂತನ ರಾಜ್ಯಾಧ್ಯಕ್ಷ ಜಿ.ಎಂ.ರಾಜಶೇಖರ್ ಅವರು ಮಾತನಾಡಿ”ಪತ್ರಕರ್ತರ ಆರೋಗ್ಯ ರಕ್ಷಣೆ ಹಾಗೂ ಕುಟುಂಬ ನಿರ್ವಹಣೆಗೆ ಅವರು ಅರ್ಥಿಕವಾಗಿ ಸಬಲತೆ ಪಡೆದಿರುವ ಕಾರಣ ಮುಂಬರುವ ದಿನಗಳಲ್ಲಿ ಪತ್ರಕರ್ತರ ಸಂಘದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಲಾಗುವುದು.

    ಪತ್ರಕರ್ತರಿಗೆ ಸಮಸ್ಯೆಗಳು ಎದುರಾದಾಗ ಎಲ್ಲರೂ ಮಾನವೀಯತೆಯಿಂದ ಪರಿಶ್ರಮಿಸಬೇಕಿದೆ ಎಂದ ಅವರು ಜಿಲ್ಲೆಯ ಅಜ್ಜಂಪುರ ಹಾಗೂ ಶೃಂಗೇರಿಯಲ್ಲಿ ಪತ್ರಿಕಾಭವನ ನಿರ್ಮಾಣಕ್ಕೆ ಆದ್ಯತೆ ನೀಡಿ ಕೂಡಲೇ ಕಾರ್ಯಪ್ರವೃತ್ತರಾಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.

    ಶೃಂಗೇರಿಯ ನರಸಿಂಹವನದ ಗುರುನಿವಾಸದಲ್ಲಿ  ಜಗದ್ಗುರು ಶ್ರೀವಿಧುಶೇಖರಭಾರತೀ ಸ್ವಾಮೀಜಿ ಅವರು ರಾಷ್ಟ್ರಾಧ್ಯಕ್ಷ ವಿಜಯ್ ಹಾಗೂ ರಾಜ್ಯಾಧ್ಯಕ್ಷ ಜಿ.ಎಂ.ರಾಜಶೇಖರ್ ಅವರನ್ನು ಅನುಗ್ರಹಿಸಿದರು.ಸುಗುಣ,ದಿನೇಶ್ ಅಂಗುರ್ಡಿ,ಶೋಭಾ,ಸಸಿಮನೆಶಿವಶಂಕರ್,ಪ್ರಶಾಂತ್ ಕಡೂರು ಇದ್ದರು.

    ಸಭೆಯಲ್ಲಿ ಸಂಘದ ಕಾನೂನು ಸಲಹೆಗಾರ ಅಮೃತೇಶ್ವರ,ತಾ|ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಆಗುಂಬೆ ಗಣೇಶ್ ಹೆಗಡೆ,ರಂಜಿತ್,ಸದಸ್ಯರಾದ ರಾಘವೇಂದ್ರ.ಕೆ.ಎನ್,ಗೋಪಾಲಕೃಷ್ಣ,ಅಭಿನವ್,ರಂಜಿತ್,ಸುಬ್ರಮಣ್ಯ ಆಚಾರ್ಯ,ಗಿರಿಜಾ ಪ್ರಸಾದ್ ಹಾಜರಿದ್ದರು.

    Respect when journalists work honestly

  • ಒಗ್ಗಟ್ಟಿನಿಂದ ಬಲಿಷ್ಟವಾದಲ್ಲಿ ಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರ

    ಒಗ್ಗಟ್ಟಿನಿಂದ ಬಲಿಷ್ಟವಾದಲ್ಲಿ ಪತ್ರಕರ್ತರ ಸಮಸ್ಯೆಗಳಿಗೆ ಪರಿಹಾರ

    ಚಿಕ್ಕಮಗಳೂರು: ಪತ್ರಕರ್ತರ ನಡುವೆ ಇರುವ ಗುಂಪುಗಾರಿಕೆ, ಭಿನ್ನಾಭಿಪ್ರಾಯಗಳಿಂದಾಗಿ ಪತ್ರಕರ್ತರ ಯಾವ ಸಮಸ್ಯೆಗಳಿಗೂ ಪರಿಹಾರ ಸಿಗದಂತಾಗಿದೆ. ಪತ್ರಕರ್ತರು ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟಿನಿಂದ ಬಲಿಷ್ಟವಾದಲ್ಲಿ ಮಾತ್ರ ಪತ್ರಕರ್ತರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಿದೆ ಎಂದು ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟದ ರಾಷ್ಟ್ರೀಯ ಅಧ್ಯಕ್ಷ ಬಿ.ಜಿ.ವಿಜಯ್ ಹೇಳಿದ್ದಾರೆ.

    ತಾಲೂಕಿನ ಬಿಂಡಿಗ ಗ್ರಾಮದಲ್ಲಿರುವ ಬಿಂಡಿಗ ಗ್ರಾಮದಲ್ಲಿ ನಡೆದ ಭಾರತೀಯ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟದ ರಾಜ್ಯ ಅಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೇಶಾದ್ಯಂತ ಇರುವ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಪ್ರಸಕ್ತ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿವೆ. ಇದಕ್ಕೆ ಮುಖ್ಯ ಕಾರಣ ಈ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಮಾಲಕರು, ಪತ್ರಕರ್ತರಲ್ಲಿನ ಅಭಿಪ್ರಾಯ ಬೇಧ, ಗುಂಪುಗಾರಿಕೆ ಕಾರಣ. ಇದರಿಂದಾಗಿ ಈ ವರ್ಗದ ಪತ್ರಕರ್ತರ ಧ್ವನಿ ಯಾರಿಗೂ ಕೇಳದಂತಾಗಿದೆ ಎಂದರು.

    ರಾಷ್ಟ್ರೀಯ ಒಕ್ಕೂಟದ ಸದಸ್ಯ ಹಾಗೂ ಒಕ್ಕೂಟದ ನಿಕಟಪೂರ್ವ ರಾಜ್ಯಾಧ್ಯಕ್ಷ ಜಿ.ರಮೇಶ್ ಮಾತನಾಡಿ, ೧೯೮೫ರಲ್ಲಿ ಸ್ಥಾಪನೆಯಾದ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಒಕ್ಕೂಟಕ್ಕೆ ದೇಶದ ೧೬ ರಾಜ್ಯಗಳ ಬೆಂಬಲವಿದೆ. ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ಎದುರಿಸುತ್ತಿರುವ ಆರ್‌ಎನ್‌ಐ, ಅಕ್ರಿಡೇಶನ್ ಸಮಸ್ಯೆ ಸೇರಿದಂತೆ ಈ ಪತ್ರಿಕೆಗಳಿಗೆ ಸಿಗುವ ಸರಕಾರಿ ಸೌಲಭ್ಯಗಳನ್ನು ಕಲ್ಪಿಸಿಕೊಡುವುದು ಈ ವೇದಿಕೆಯ ಮುಖ್ಯ ಉದ್ದೇಶವಾಗಿದೆ ಎಂದರು.

    ರಾಷ್ಟ್ರೀಯ ಒಕ್ಕೂಟದ ಮುಖಂಡ ಹ್ಯಾರಿ ಡಿಸೋಜ ಮಾತನಾಡಿ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪತ್ರಕರ್ತರ ಹಲವಾರು ಸಂಘಟನೆಗಳಿದ್ದರೂ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು, ಪತ್ರಕರ್ತರ ಸಮಸ್ಯೆಗಳಿಗೆ ಇಂದಿಗೂ ಪರಿಹಾರ ಸಿಕ್ಕಿಲ್ಲ. ಈ ಪತ್ರಿಕೆಗಳಿಗೆ ವಾರ್ತಾ ಇಲಾಖೆಯಿಂದಲೂ ಮಾನ್ಯತೆ ಸಿಗದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ದುರಂತ ಎಂದರು.

    ಅಧಿಕಾರ ಸ್ವೀಕರಿಸಿ ಮಾತನಾಡಿದ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ನಿಯೋಜಿತ ರಾಜ್ಯಾಧ್ಯಕ್ಷ ಜಿ.ಎಂ.ರಾಜಶೇಖರ್ ಮಾತನಾಡಿ, ಸಣ್ಣ ಮತ್ತು ಮಧ್ಯಮ ಪತ್ರಿಕೆಗಳೂ ಸೇರಿದಂತೆ ಗ್ರಾಮೀಣ ಭಾಗದ ಪತ್ರಕರ್ತರ ಬದುಕು ಅತಂತ್ರ ಸ್ಥಿತಿಯಲ್ಲಿದೆ. ಪತ್ರಕರ್ತರ ಸಂಘಟನೆಗಳು ಈ ಪತ್ರಕರ್ತರ ಸಮಸ್ಯೆಗಳಿಗೆ ಸಮರ್ಪಕವಾಗಿ ಸ್ಪಂದಿಸದಿರುವುದು ಪತ್ರಕರ್ತರು ಸಂಘಟಿತರಾಗದಿರಲು ಪ್ರಮುಖ ಕಾರಣವಾಗಿದೆ ಎಂದರು.

    ಒಕ್ಕೂಟದ ಕಾನೂನು ಸಲಹೆಗಾರ ಹಾಗೂ ಹೈಕೋರ್ಟ್ ವಕೀಲ ಅಮೃತೇಶ್ ಮಾತನಾಡಿದರು. ಒಕ್ಕೂಟದ ಪದಾಧಿಕಾರಿಗಳು ಹಾಗೂ ವಿವಿಧ ಜಿಲ್ಲೆಗಳ ಪತ್ರಕರ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು.

    Solutions to journalists’ problems if they are strengthened by unity

     

     

  • ಜ.26 ರಿಂದ ಜಿಲ್ಲಾ ಆಟದ ಮೈದಾನದಲ್ಲಿ ಫಲಪುಷ್ಪ ಪ್ರದರ್ಶನ

    ಜ.26 ರಿಂದ ಜಿಲ್ಲಾ ಆಟದ ಮೈದಾನದಲ್ಲಿ ಫಲಪುಷ್ಪ ಪ್ರದರ್ಶನ

    ಚಿಕ್ಕಮಗಳೂರು:  ತೋಟಗಾರಿಕೆ ಇಲಾಖೆ ಹಾಗೂ ಮೈಸೂರು ಉದ್ಯಾನ ಕಲಾಸಂಘ ಇವರುಗಳ ಸಂಯುಕ್ತಾಶ್ರಯದಲ್ಲಿ ಪ್ರಸಕ್ತ ಸಾಲಿನ ಫಲ-ಪುಷ್ಪ ಪ್ರದರ್ಶನ ಕಾರ್ಯಕ್ರಮವನ್ನು ಜ.೨೬ ರಿಂದ ೨೮ ರವರೆಗೆ ೩ ದಿನಗಳ ಕಾಲ ನೇತಾಜಿ ಸುಭಾಷ್ ಚಂದ್ರ ಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಏರ್ಪಡಿಸಲಾಗಿದೆ ಎಂದು ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಹೆಸ್ ಕೀರ್ತನ ತಿಳಿಸಿದರು.

    ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿ ಸಂಭಾಗಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜ.೨೬ ರಂದು ಬೆಳಗ್ಗೆ ೧೦.೩೦ ಕ್ಕೆ ಫಲ-ಪುಷ್ಪ ಪ್ರದರ್ಶನವನ್ನು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಹಾಗೂ ಜನಪ್ರತಿನಿಧಿಗಳು ಉದ್ಘಾಟಿಸುವರು ಎಂದು ಹೇಳಿದರು.

    ಈ ಫಲ-ಪುಷ್ಪ ಪ್ರದರ್ಶನದಲ್ಲಿ ಮೈಸೂರು ದಸರಾ ಉತ್ಸವದಲ್ಲಿ ಪ್ರಶಸ್ತಿ ಪಡೆದ ಮುಖ್ಯ ಆಕರ್ಷಣೆಯಾಗಿದ್ದ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರಿಗೆ ಸಂಬಂಧಪಟ್ಟ ಪೂರ್ಣಚಂದ್ರ ತೇಜಸ್ವಿ ವಿಸ್ಮಯ ಪ್ರಪಂಚ ಪುಷ್ಪ ಕಲಾಕೃತಿಗಳ ಪ್ರದರ್ಶನದಲ್ಲಿ ವಿಶೇಷ ಆಕರ್ಷಣೆಯಾಗಲಿದೆ ಎಂದರು.

    ವಿವಿಧ ಅಲಂಕಾರಿಕ ಕುಂಡಗಳ ಜೋಡಣೆ, ತರಕಾರಿ ಕೆತ್ತನೆಯ ಪ್ರದರ್ಶಿಕೆಗಳು, ಇಕೇಬಾನ ಪ್ರದರ್ಶನ ಹಾಗೂ ಇತರೆ ಹೂವುಗಳ ಕಲಾಕೃತಿಗಳ ಪ್ರದರ್ಶನ ಜನರ ಮನಸೂರೆಗೊಳ್ಳಲಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ರೈತರು ಬೆಳೆದ ಹಣ್ಣು-ತರಕಾರಿಗಳನ್ನು ಪ್ರದರ್ಶಿಸಲಾಗುವುದು ಎಂದ ಅವರು ತಾಂತ್ರಿಕ ತೋಟಗಾರಿಕಾ ಕೈಪಿಡಿಯಲ್ಲಿ ಜಾಹೀರಾತು ನೀಡಲು ಜ.೧೩ ರವರೆಗೆ ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.

    ಜಿಲ್ಲೆಯ ಎಸ್ಟೇಟ್ ಮತ್ತು ನಗರ ವಾಸಿಗಳಿಗೆ ಉತ್ತೇಜನ ನೀಡಲು ಉತ್ತಮ ಉದ್ಯಾನವನ ನಿರ್ವಹಣೆಗಾಗಿ ಸ್ಪರ್ಧೆ ಏರ್ಪಡಿಸಲಾಗಿದೆ. ಇದರಲ್ಲಿ ಎಸ್ಟೇಟ್ ಮಾಲೀಕರು, ನಗರವಾಸಿಗಳು ಭಾಗವಹಿಸಬಹುದಾಗಿದ್ದು, ಸಾರ್ವಜನಿಕರು ತಮ್ಮಲ್ಲಿರುವ ಬೋನ್ಸಾಯ್ ಸಸಿಗಳು, ವಿಶೇಷವಾದ ಅಲಂಕಾರಿಕ ಮತ್ತು ಹೂವಿನ ಕುಂಡಗಳಿದ್ದಲ್ಲಿ ಈ ಫಲಪುಷ್ಪ ಪ್ರದರ್ಶನದಲ್ಲಿ ಪ್ರದರ್ಶಿಸಲು ಸ್ಥಳಾವಕಾಶ ನೀಡಲಾಗುವುದು ಎಂದರು.

    ಜ.೨೭ ರಂದು ಪಶುಸಂಗೋಪನೆ ಇಲಾಖೆಯಿಂದ ಶ್ವಾನ ಪ್ರದರ್ಶನ, ಜ.೨೮ ರಂದು ಸಾರ್ವಜನಿಕರಿಗಾಗಿ ಹಣ್ಣುಗಳಿಂದ ತಯಾರಿಸಿದ ಖಾದ್ಯಗಳ ಫಲಪಾಕ ಸ್ಪರ್ಧೆ ಏರ್ಪಡಿಸಲಾಗಿದೆ. ಕೃಷಿ ಇಲಾಖೆಯಿಂದ ಸಿರಿಧಾನ್ಯ ರಾಶಿ, ಸಿರಿಧಾನ್ಯದಿಂದ ರಂಗೋಲಿ ಪ್ರದರ್ಶನ, ಆರೋಗ್ಯ ಇಲಾಖೆಯಿಂದ ತಾಯಿಮಗು ಪರಿಕಲ್ಪನೆಯ ಹೂವಿನ ಕಲಾಕೃತಿ, ಮೀನುಗಾರಿಕೆ ಇಲಾಖೆಯಿಂದ ಅಕ್ವೇರಿಯಂ ಮತ್ತು ಅಲಂಕಾರಿಕ ಮೀನುಗಳ ಪ್ರದರ್ಶನ ಮತ್ತು ಮಾರಾಟ, ರೇಷ್ಮೆ ಇಲಾಖೆಯಿಂದ ರೇಷ್ಮೆ ಹುಳುವಿನ ಜೀವನ ಚಕ್ರದ ಪ್ರಾತ್ಯಕ್ಷಿಕೆಯನ್ನು ಏರ್ಪಡಿಸಲಾಗಿದೆ ಎಂದು ವಿವರಿಸಿದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕೀಟ ಸಂಗ್ರಹಾಲಯದ ಪ್ರದರ್ಶನ, ನಾಣ್ಯಗಳು ಹಾಗೂ ಮ್ಯೂಸಿಯಂ ವಸ್ತುಗಳ ಪ್ರದರ್ಶನ, ಪೂರ್ಣಚಂದ್ರ ತೇಜಸ್ವಿ ಬರೆದಿರುವ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ, ಪ್ರವಾಸೋದ್ಯಮ ಇಲಾಖೆಯಿಂದ ಮೂರು ದಿನಗಳ ಹಾಟ್ ಏರ್ ಬಲೂನ್ ರೈಡಿಂಗ್ ಅವಕಾಶವಿದ್ದು, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯಿಂದ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ತಿಳಿಸಿದರು.

    ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಪ್ರತಿನಿಧಿಗಳು, ರೈತಬಾಂಧವರು, ವಿದ್ಯಾರ್ಥಿಗಳು, ಸಾರ್ವಜನಿಕರು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಫಲಪುಷ್ಪ ಪ್ರದರ್ಶನವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.
    ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಎನ್. ಮೀನಾನಾಗರಾಜ್, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕಿ ಪೂರ್ಣಿಮಾ ಉಪಸ್ಥಿತರಿದ್ದರು.

    Flower exhibition at the district playground from January 26

  • ಮತದಾರರ ಸಂಕ್ಷಿಪ್ತ ಪರಿಷ್ಕರಣೆ ಬಳಿಕ ಜಿಲ್ಲೆಯಲ್ಲಿ ಒಟ್ಟು ೯೭೩೨೯೫ ಮತದಾರರು

    ಮತದಾರರ ಸಂಕ್ಷಿಪ್ತ ಪರಿಷ್ಕರಣೆ ಬಳಿಕ ಜಿಲ್ಲೆಯಲ್ಲಿ ಒಟ್ಟು ೯೭೩೨೯೫ ಮತದಾರರು

    ಚಿಕ್ಕಮಗಳೂರು: ಮತದಾರರ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯ ಪೂರ್ಣಗೊಂಡಿದ್ದು, ಅತಿಮ ಪಟ್ಟಿ ಪ್ರಕಾರ ಜಿಲ್ಲೆಯಲ್ಲಿ ಒಟ್ಟು ೯೭೩೨೯೫ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ತಿಳಿಸಿದರು.

    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಶೃಂಗೇರಿ ಕ್ಷೇತ್ರದಲ್ಲಿ ೮೨೧೨೨ ಪುರುಷರು, ೮೬೭೫೯ ಮಹಿಳೆಯರು ಸೇರಿ ಒಟ್ಟು ೧೬೮೮೮೨ ಮತದಾರರಿದ್ದಾರೆ. ೨೦೨೪ ರಲ್ಲಿ ಒಟ್ಟು ೧೬೮೬೫೩ ಮತದಾರರಿದ್ದರು. ಮೂಡಿಗೆರೆ ವಿಧಾನ ಸಭಾ ಕ್ಷೇತ್ರದಲ್ಲಿ ೮೩೦೦೪ ಪುರುಷರು, ೮೭೯೪೧ ಮಹಿಳೆಯರು ಸೇರಿ ೧೭೦೯೪೭ ಮತದಾರರಿದ್ದಾರೆ. ೨೦೨೪ ರಲ್ಲಿ ಒಟ್ಟು ೧೭೧ ೨೨೮ ಮತದಾರರಿದ್ದರು.

    ಚಿಕ್ಕಮಗಳೂರು ಕ್ಷೇತ್ರದಲ್ಲಿ ೧೧೩೧೫೯ ಪುರುಷರು, ೧೧೭೬೭೩ ಮಹಿಳೆಯರು ಸೇರಿ ೨೩೦೮೫೧ ಮತದಾರರಿದ್ದಾರೆ. ಕಳೆದ ವರ್ಷ ಒಟ್ಟು ೨೩೧೨೬೪ ಮತದಾರರಿದ್ದರು. ತರೀಕೆರೆ ಕ್ಷೇತ್ರದಲ್ಲಿ ೯೫೪೬೧ ಪುರುಷರು, ೯೮೭೧೬ ಮಹಿಳೆಯರು ಸೇರಿ ಒಟ್ಟು ೧೯೪೧೭೯ ಮತದಾರರಿದ್ದಾರೆ. ೨೦೨೪ ರಲ್ಲಿ ಒಟ್ಟು ೧೯೪೦೫೫ ಮತದಾರರಿದ್ದರು. ಕಡೂರು ಕ್ಷೇತ್ರದಲ್ಲಿ ೧೦೩೬೫೬ ಪುರುಷರು, ೧೦೪೭೭೬ ಮಹಿಳೆಯರು ಸೇರಿ ೨೦೮೪೪೩೬ ಮತದಾರರಿದ್ದಾರೆ. ೨೦೨೪ ರಲ್ಲಿ ಒಟ್ಟು ೨೦೮೭೧೩ ಮತದಾರರಿದ್ದರು.

    ೨೦೨೪ ಅಕ್ಟೋಬರ್ ೨೯ ರ ಹಿಂದಿನ ಪಟ್ಟಿಗೆ ಹೋಲಿಸಿದಲ್ಲಿ ವಿಶೇಷ ಪರಿಷ್ಕರಣೆ ನಂತರ ಜಿಲ್ಲೆಯಲ್ಲಿ ಒಟ್ಟು ೬೧೮ ಮತದಾರರ ಸಂಖ್ಯೆ ಕಡಿಮೆ ಆಗಿದೆ. ಇದಕ್ಕೆ ನಿಧನ ಹೊಂದಿದವರನ್ನು ಕೈಬಿಟ್ಟಿರುವುದು ಸೇರಿದಂತೆ ವರ್ಗಾವಣೆ ಇನ್ನಿತರೆ ವಿಷಯಗಳು ಕಾರಣವಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

    ಪಟ್ಟಿ ಪರಿಷ್ಕರಣೆ ನಂತರವೂ ಜಿಲ್ಲೆಯಲ್ಲಿ ಮಹಿಳಾ ಮತದಾರರ ಸಂಖ್ಯೆ ಪುರುಷರಿಗಿಂತ ಹೆಚ್ಚಿದೆ. ಒಟ್ಟು ೪೭೭೪೦೨ ಪುರುಷ ಮತದಾರರಿದ್ದರೆ, ೪೯೫೮೬೫ ಮಹಿಳಾ ಮತದಾರರಿದ್ದಾರೆ. ಪುರುಷರಿಗಿಂತ ಒಟ್ಟು ೧೮೪೬೩ ಮಹಿಳಾ ಮತದಾರರು ಹೆಚ್ಚಿದ್ದಾರೆ. ಜಿಲ್ಲೆಯ ಐದೂ ವಿಧಾನ ಸಭಾ ಕ್ಷೇತ್ರಗಳಲ್ಲೂ ಪುರುಷ ಮತದಾರರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ.ಚಿಕ್ಕಮಗಳೂರು ಕ್ಷೇತ್ರದಲ್ಲಿ ೧೯, ಶೃಂಗೇರಿ-೧, ಮೂಡಿಗೆರೆ-೨, ತರೀಕೆರೆ-೨ ಹಾಗೂ ಕಡೂರು ಕ್ಷೇತ್ರದಲ್ಲಿ ೪ ಮಂದಿ ಸೇರಿ ಒಟ್ಟು ೨೮ ಮಂದಿ ಇತರೆ ಮತದಾರರಿದ್ದಾರೆ.

    ಸೇನೆ ಸೇರಿದಂತೆ ವಿವಿಧ ಸೇವೆಗಳಲ್ಲಿ ಮತಕ್ಷೇತ್ರದಿಂದ ಹೊರಗಿರುವ ಮತದಾರರ ಸಂಖ್ಯೆ ಜಿಲ್ಲೆಯಲ್ಲಿ ಒಟ್ಟು ೪೨೨ ಇದ್ದು, ಇದರಲ್ಲಿ ೪೩೦ ಪುರುಷರು, ೧೨ ಮಂದಿ ಮಹಿಳೆಯರಿದ್ದಾರೆ. ಕಳೆದವರ್ಷ ಇದರ ಸಂಖ್ಯೆ ೪೪೯ ಇತ್ತು. ಜಿಲ್ಲೆಯಲ್ಲಿ ೧೮ ರಿಂದ ೨೧ ವರ್ಷದೊಳಗಿನ ೧೦೨೮೬ ಯುವ ಮತದಾರರಿದ್ದಾರೆ. ಇದರಲ್ಲಿ ೫೩೫೩ ಪುರುಷರು ಹಾಗೂ ೪೯೩೩ ಮಹಿಳೆಯರಿದ್ದಾರೆ.

    ಮತದಾರರ ಪಟ್ಟಿ ಮಾರ್ಪಾಡು ವೇಳೆ ಜಿಲ್ಲೆಯಲ್ಲಿ ಒಟ್ಟು ಹೊಸದಾಗಿ ೩೮೫೫ ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದರೆ, ೪೪೭೩ ಮತದಾರರನ್ನು ಕೈಬಿಡಲಾಗಿದೆ. ಒಟ್ಟು ೩೮೮೦ ಮಾರ್ಪಾಡುಗಳು ಆಗಿವೆ. ಶೃಂಗೇರಿ ಕ್ಷೇತ್ರದಲ್ಲಿ ೮೧೦ ಸೇರ್ಪಡೆ, ೫೮೧ ತೆರವು, ಮೂಡಿಗೆರೆಯಲ್ಲಿ ೩೮೯ ಸೇರ್ಪಡೆ, ೧೧೧೯ ತೆರವು, ಚಿಕ್ಕಮಗಳೂರಿನಲ್ಲಿ ೮೧೫ ಸೇರ್ಪಡೆ, ೧೨೨೮ ತೆರವು, ತರೀಕೆರೆಯಲ್ಲಿ ೭೬೮ ಸೇರ್ಪಡೆ, ೯೦೧ ತೆರವು ಹಾಗೂ ಕಡೂರು ಕ್ಷೇತ್ರದಲ್ಲಿ ೬೨೪ ಸೇರ್ಪಡೆ ಹಾಗೂ ೯೦೧ ಮತದಾರರ ಹೆಸರನ್ನು ತೆರವು ಮಾಡಲಾಗಿದೆ ಎಂದು ವಿವರಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ. ಸಿಇಓ ಎಚ್.ಎಸ್.ಕೀರ್ತನಾ ಇದ್ದರು.

    After a brief revision of voters a total of 973295 voters were registered in the district.

  • ರಕ್ತದಾನ ಮೂಲಕ ನಾವೆಲ್ಲರೂ ಬಂಧುಗಳಾಗಬೇಕು

    ರಕ್ತದಾನ ಮೂಲಕ ನಾವೆಲ್ಲರೂ ಬಂಧುಗಳಾಗಬೇಕು

    ಚಿಕ್ಕಮಗಳೂರು: ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರ ಸಾಕಷ್ಟು ಅನುದಾನ ನೀ ಡಿದರೆ, ಮಾನವ ಕನಿಷ್ಟ ರಕ್ತದಾನ ಮೂಲಕ ಅಮೂಲ್ಯವಾದ ಜೀವ ಉಳಿಸಿ ಸಮಾಜಕ್ಕೆ ಮಾದರಿಯಾಗಿ ಬದುಕಬೇಕು ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹೇಳಿದರು.

    ನಗರದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಭೂಮಿಕಾ ಸಂಸ್ಥೆ ವಾರ್ಷಿಕೋತ್ಸವ ಪ್ರಯುಕ್ತ ಸ್ವಾಮಿ ವಿವೇಕಾನಂದ, ನೇತಾಜಿ ಸುಭಾಷ್‌ಚಂದ್ರ ಬೋಸ್ ಜಯಂತ್ಸೋತ್ಸವ ಅಂಗವಾಗಿ ಅಭ್ಯುದಯ-೨೦೨೫ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

    ಪ್ರತಿ ಮನುಷ್ಯನಿಗೆ ಆರೋಗ್ಯ ಎಂಬುದು ಸಂಪತ್ತಿಗಿಂತ ಅತಿಮುಖ್ಯ. ನಿಯಮಿತ ಆಹಾರ, ವ್ಯಾಯಮ ದಿಂದ ಆರೋಗ್ಯಪೂರ್ಣ ಶರೀರವನ್ನು ಕಾಪಾಡಿಕೊಳ್ಳಬೇಕು. ಅಲ್ಲದೇ ತುರ್ತು ವೇಳೆ ರೋಗಿಗಳಿಗೆ ರಕ್ತದಾ ನ ಮೂಲಕ ನಾವೆಲ್ಲರೂ ಒಂದು, ಬಂಧುಗಳೆಂದು ಅರಿತಾಗ ಮಾತ್ರ ಸ್ವಾಸ್ಥ್ಯ ಸಮಾಜ ನಿರ್ಮಿಸಲು ಸಾಧ್ಯ ಎಂದು ಹೇಳಿದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ವಿದ್ಯಾರ್ಥಿದೆಸೆಯಲ್ಲೇ ಮೈಮರೆತರೆ ಸಂಕಲ್ಪದ ದಾ ರಿಯಲ್ಲಿ ಮುನ್ನೆಡೆಯಲು ಸಾಧ್ಯವಿಲ್ಲ. ಅದರಂತೆ ಸಮಯಕ್ಕೆ ಸರಿಯಾಗಿ ರಕ್ತದಾನಕ್ಕೆ ಮುಂದಾಗದಿದ್ದಲ್ಲಿ ಮನುಷ್ಯನ ಪ್ರಾಣಕ್ಕೆ ಕುತ್ತು ಸಂಭವಿಸಲಿದೆ. ಆ ನಿಟ್ಟಿನಲ್ಲಿ ಯುವಕರು ತುರ್ತು ವೇಳೆಯಲ್ಲಿ ರಕ್ತದಾನ ಮಾಡಿ ಜೀವ ಉಳಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದರು.

    ಪ್ರಸ್ತುತ ಮಾನವ ದುಡಿಮೆ ಹಾಗೂ ವೈಯಕ್ತಿಕ ಜೀವನಕ್ಕೆ ಆದ್ಯತೆ ಕೊಟ್ಟಂತೆ ಸಾಮಾಜಿಕ ಚಟುವಟಿಕೆ ಗಳಲ್ಲಿ ತೊಡಗಿಸಿಕೊಳ್ಳಬೇಕು. ಸಮಾಜದಲ್ಲಿ ಒಂದಿಷ್ಟು ದುಡಿಮೆಯನ್ನು ಸಮಾಜಕ್ಕಾಗಿ ಮುಡಿಪಿಟ್ಟರೆ ನೆಮ್ಮ ದಿ ಬದುಕು ಕಂಡುಕೊಳ್ಳಲು ಸಾಧ್ಯ ಎಂದ ಅವರು ಎಲ್ಲರೂ ಒಂದಾಗಿ ಆರೋಗ್ಯಪೂರ್ಣ ಸಮಾಜಕ್ಕೆ ಕೈ ಜೋಡಿಸಬೇಕು ಎಂದರು.

    ಭೂಮಿಕಾ ಸಂಸ್ಥೆ ಸಂಸ್ಥಾಪಕ ಅನಿಲ್‌ಆನಂದ್ ಮಾತನಾಡಿ ಪ್ರತಿನಿತ್ಯದ ಬದುಕಿನಲ್ಲಿ ಜೀವಿಸುವ ನಾ ವುಗಳು ಸಾಮಾಜಿಕ ಕಾರ್ಯಗಳ ಮುಖಾಂತರ ಸ್ಪಂದಿಸಬೇಕು. ಆ ನಿಟ್ಟಿನಲ್ಲಿ ದೇಹದಾನ ಮತ್ತು ನೇತ್ರದಾನ ದಂಥ ದೊಡ್ಡ ಕಾರ್‍ಯದಲ್ಲಿ ತೊಡಗಿದರೆ ಸಾವಿನ ನಂತರವು ಮತ್ತೊಬ್ಬರ ಬಾಳಿಗೆ ಬೆಳಕಾಗಬಹುದು ಎಂದು ತಿಳಿಸಿದರು.

    ಇದೇ ವೇಳೆ ಶಿಬಿರದಲ್ಲಿ ೨೫೦ ಹೆಚ್ಚು ಮಂದಿ ಆರೋಗ್ಯ ತಪಾಸಣೆ ನಡೆಸಿದರು. ನೇತ್ರ ತಪಾಸಣೆಯಲ್ಲಿ ೫೦ ಮಂದಿಗೆ ಕನ್ನಡಕ ವಿತರಿಸುವ ಭರವಸೆ ನೀಡಲಾಯಿತು. ದೇಹದಾನಕ್ಕೆ ೮ ಮಂದಿ ಹಾಗೂ ನೇತ್ರದಾನಕ್ಕೆ ೨೨ ಮಂದಿ ನೋಂದಣಿ ಮಾಡಲಾಯಿತು.

    ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಜಿಲ್ಲಾ ವೈದ್ಯಾಧಿಕಾರಿ ಡಾ.ಮೋಹನ್ ಕುಮಾರ್, ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ರಾಧಾಕೃಷ್ಣ, ಆಶಾಕಿರಣ ಅಂಧಮಕ್ಕಳ ಶಾಲೆ ಸಂ ಸ್ಥಾಪಕ ಜೆ.ಪಿ.ಕೃಷ್ಣೇಗೌಡ, ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸೀಮಾ, ರಕ್ತನಿಧಿ ಕೇಂದ್ರದ ಮುಖ್ಯಸ್ಥ ಡಾ.ಮುರಳಿಧರ್ ಮತ್ತಿತರರಿದ್ದರು.

    Abhyudaya-2025 and free health check-up camp