Category: ಚಿಕ್ಕಮಗಳೂರು ನಗರ

  • ದಾಸ ಸಾಹಿತ್ಯ ಪರಿಷತ್ತಿನ ಲಾಂಛನ, ಆಹ್ವಾನ ಪತ್ರಿಕೆ ಬಿಡುಗಡೆ

    ದಾಸ ಸಾಹಿತ್ಯ ಪರಿಷತ್ತಿನ ಲಾಂಛನ, ಆಹ್ವಾನ ಪತ್ರಿಕೆ ಬಿಡುಗಡೆ

    ಚಿಕ್ಕಮಗಳೂರು: – ಜಿಲ್ಲಾ ದಾಸ ಸಾಹಿತ್ಯ ಪರಿಷತ್ತಿನ ನೂತನ ಜಿಲ್ಲಾ ಘಟಕದ ಪದಗ್ರಹ ಣ ಸಮಾರಂಭದ ಆಹ್ವಾನ ಪತ್ರಿಕೆ ಹಾಗೂ ಲಾಂಛನವನ್ನು ಹಿರೇಮಗಳೂರಿನಲ್ಲಿ ಕನ್ನಡಪೂಜಾರಿ ಕಣ್ಣನ್ ಗುರುವಾರ ಸಂಜೆ ನಿವಾಸದಲ್ಲಿ ಬಿಡುಗಡೆ ಮಾಡಿದರು.

    ಬಳಿಕ ಮಾತನಾಡಿದ ಕಣ್ಣನ್ ದಾಸ ಸಾಹಿತ್ಯ ವೈಚಾರಿಕ ನೆಲೆಯಲ್ಲಿ ಬಂದಿರುವುದರಿಂದ ಶಾಶ್ವತವಾಗಿ ಉಳಿದಿದೆ. ಜ್ಞಾನ, ವಿಜ್ಞಾನ, ತಂತ್ರಜ್ಞಾನ ಹಾಗೂ ಪರಿಸರ ಎಲ್ಲವೂ ಒಳಗೊಂಡಂತೆ ಮನುಕುಲದ ಹಿತ ಸಹಿ ತವಾದ ವೈಚಾರಿಕೆಯ ಚಿಲುಮೆಯೇ ದಾಸ ಸಾಹಿತ್ಯ. ಅಚ್ಚಕನ್ನಡದಲ್ಲಿ ನಿತ್ಯ ನೆಲೆಯುವ, ಮಡಿವಂತಿಕೆಯಿ ಲ್ಲದೇ ನುಡಿವಂತಿಕೆಯಾಗಬೇಕು ಎಂದರು.

    ಪ್ರತಿ ಕುಟುಂಬದಲ್ಲಿ ಚಿಕ್ಕಮಕ್ಕಳು, ವೃದ್ದರು ದಿನಗೊಂದ ದಾಸ ಸಾಹಿತ್ಯ, ವಚನಗಳು ಪಠಿಸುವಂತಾ ಗಬೇಕು. ದಾಸ ಸಂಸ್ಕೃತಿ, ಪರಂಪರೆ ಪಸರಿಸುವ ಕೆಲಸ ಮಾಡಬೇಕು. ಅಲ್ಲದೇ ಮುಂದಿನ ಪೀಳಿಗೆಗೆ ದಾಸ ಸಾಹಿತ್ಯ ಪರಿಮಳವನ್ನು ಎಲ್ಲೆಡೆ ಹಬ್ಬಿಸುವಂತೆ ಮಾಡಿದರೆ ಪೂರ್ವಿಕರು ಕಟ್ಟುಬೆಳೆಸಿದ ಪರಂಪರೆ ಶಾಶ್ವತ ವಾಗಿ ಮನಸ್ಸಿನಲ್ಲಿ ನೆಲೆಯೂರಲು ಸಾಧ್ಯ ಎಂದರು.

    ಮಾನವನರ ಅಜ್ಞಾನ, ಅಂಧಕಾರ ಅಳಿಸಿ, ದೇಹ, ಮನಸ್ಸು ಆತ್ಮಗಳಲ್ಲಿ ಕೆಟ್ಟ ಭಾವನೆಗಳನ್ನು ಹೋಗ ಲಾಡಿಸಿ, ಲೋಕದ ಅಂಕುಡೊಂಕುಗಳನ್ನು ತಿದ್ದಿ, ವರ್ಗಬೇಧ ರಹಿತದ ಹೊಸ ಸಮಾಜವನ್ನು ಕಟ್ಟಲು ಹಿರಿ ದಾಸರು ವೈಚಾರಿಕೆ ಹೊನಲು ಹರಿಸಿದ್ದು ದಾಸರ ಸಮಗ್ರ ಚಿಂತನೆಗಳ ಸಾರವನ್ನು ದಾಸ ಸಾಹಿತ್ಯದಲ್ಲಿ ವೈಚಾರಿತೆ ಗ್ರಂಥದಲ್ಲಿ ಹುದುಗಿದೆ ಎಂದರು.

    ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ಜನ ಸಾಮಾನ್ಯರನ್ನು ಉನ್ನತ ಜೀವನದತ್ತ ಪ್ರೇರೇಪಿಸಿ, ಜಾತಿ, ಮತ , ಪಂಥಗಳನ್ನು ಮೀರಿ ಲೋಕದ ಮಧ್ಯನಿಂತು ಮೌನವೀಯ ಮೌಲ್ಯಗಳನ್ನು ಹರಿ ದಾಸರು ನೀಡಿದ್ದಾರೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಟೇಶ್, ಜಿಲ್ಲಾ ದಾಸ ಸಾಹಿ ತ್ಯ ಪರಿಷತ್ತಿನ ಅಧ್ಯಕ್ಷ ಹಿರೇನಲ್ಲೂರು ಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷೆ ಮಹಾಲಕ್ಷ್ಮೀ, ಕಸಾಪ ಮಹಿಳಾ ಅಧ್ಯಕ್ಷೆ ವಿಜಯಲಕ್ಷ್ಮೀ, ಉಪನ್ಯಾಸಕಿ ರೂಪನಾಯ್ಕ್ ಹಾಜರಿದ್ದರು.

    Dasa Sahitya Parishad logo invitation letter released

     

  • ಮಾನಸಿಕ-ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ

    ಮಾನಸಿಕ-ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ

    ಚಿಕ್ಕಮಗಳೂರು: ಸರ್ಕಾರಿ ಕರ್ತವ್ಯದ ಒತ್ತಡಗಳನ್ನು ಮರೆತು ಕ್ರೀಡೆಯಲ್ಲಿ ಭಾಗವಹಿಸಿದಾಗ ಮಾನಸಿಕ ಮತ್ತು ದೈಹಿಕ ಸದೃಢತೆಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್ ಮೀನಾನಾಗರಾಜ್ ಕ್ರೀಡಾಪಟುಗಳಿಗೆ ತಿಳಿಸಿದರು.
    ಅವರು ಇಂದು ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾ ಪಂಚಾಯಿತಿ ಏರ್ಪಡಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ೨೦೨೪-೨೫ ನ್ನು ಉದ್ಘಾಟಿಸಿ ಮಾತನಾಡಿದರು.
    ಇಂದು ನಡೆಯುತ್ತಿರುವ ಕ್ರೀಡಾಕೂಟದಲ್ಲಿ ತುಂಬಾ ಉತ್ಸಾಹದಿಂದ ಭಾಗವಹಿಸಿರುವ ಕ್ರೀಡಾಪಟುಗಳು ವರ್ಷವಿಡೀ ಇಲಾಖೆಗಳಲ್ಲಿ ನಡೆಯುವ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕರೆನೀಡಿದ ಅವರು ಎರಡುದಿನ ಒಟ್ಟಾಗಿ ಸೇರಿ ಕ್ರೀಡಾಕೂಟದಲ್ಲಿ ಕ್ರೀಡಾ ಮನೋಭಾವದಿಂದ ಭಾಗವಹಿಸಿ ಎಂದು ಶುಭ ಹಾರೈಸಿದರು.
    ಕಳೆದ ಬಾರಿ ಆರ್‌ಡಿಬಿಆರ್ ಕ್ರೀಡಾಕೂಟ ಅತ್ಯಂತ ಅದ್ದೂರಿಯಾಗಿ ನಡೆದಿತ್ತು, ಈ ಬಾರಿ ಅದಕ್ಕಿಂತ ಹೆಚ್ಚು ಉತ್ಸಾಹದಿಂದ ಭಾಗವಹಿಸಿದ್ದೀರಿ, ಸರ್ಕಾರಿ ಸೇವೆಯಲ್ಲಿ ಇರುವವರು ಇಷ್ಟು ದೊಡ್ಡ ಮಟ್ಟದಲ್ಲಿ ಕ್ರೀಡಾಪಟುಗಳು ಇದ್ದಾರೆಂದು ಭಾವಿಸಿರಲಿಲ್ಲ ಎಂದರು.
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್ ಕೀರ್ತನ ಮಾತನಾಡಿ, ಕಳೆದ ವರ್ಷ ಸಿಇಓ ಗೋಪಾಲಕೃಷ್ಣ ಅವರು ಹಾಕಿಕೊಟ್ಟ ಈ ಕ್ರೀಡಾಕೂಟ ಇಂದು ಅವರ ಮಾರ್ಗದರ್ಶನದಲ್ಲಿ ಸಾಗುತ್ತಿದ್ದೇವೆ. ಇದರ ಯಶಸ್ವಿಗೆ ಶಕ್ತಿಮೀರಿ ಶ್ರಮಿಸಬೇಕೆಂದು ಹೇಳಿದರು.
    ಸರ್ಕಾರಿ ಕೆಲಸಕಾರ್ಯಗಳ ಒತ್ತಡವನ್ನು ಮರೆತು ತುಂಬಾ ಸಂತೋಷದಿಂದ ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಜಯಗಳಿಸಿ ಎಂದು ಶುಭ ಹಾರೈಸಿದರು. ಕ್ರೀಡಾಕೂಟವನ್ನು ಉದ್ಘಾಟಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ವಿಕ್ರಮ ಅಮಟೆ ಮಾತನಾಡಿ, ಕ್ರೀಡಾಕೂಟಗಳು ಒಂದು ತಂಡದ ಕ್ರಿಯಾಶೀಲ ಚಟುವಟಿಕೆಗೆ ಪೂರಕವಾಗಿದ್ದು, ಈ ಸಂದರ್ಭದಲ್ಲಿ ಮಕ್ಕಳ ಮನಸ್ಸಿನ ರೀತಿ ಕ್ರೀಡೆಗಳಲ್ಲಿ ಭಾಗವಹಿಸಿ ಎಂದು ಕಿವಿಮಾತು ಹೇಳಿದರು.
    ಕ್ರೀಡೆಯಲ್ಲಿ ಮಾತ್ರ ಆಸಕ್ತಿಯಿಂದ ಸ್ಪರ್ಧೆ ಮಾಡಬೇಕು, ಬೇರೆಯವರ ಬಗ್ಗೆ ಗಮನಹರಿಸದೆ ಎಲ್ಲರೂ ಸೇರಿ ಒಟ್ಟಿಗೆ ಕೆಲಸ ಮಾಡಲು ತಂಡ ಬೇಕು. ಅದಕ್ಕಾಗಿ ಈ ಕ್ರೀಡಾಕೂಟವನ್ನು ಆಯೋಜಿಸಿದ್ದಾರೆ ಎಂದರು.
    ಇದೇ ಸ್ಪೂರ್ತಿಯಿಂದ ಆಟ ಆಡಿ ಜಿಲ್ಲೆ, ತಾಲ್ಲೂಕು, ಹೋಬಳಿಗಳಿಗೆ ಹೆಸರು ಕೀರ್ತಿ ತನ್ನಿ ಎಂದು ಆಶಿಸುತ್ತ ಶುಭ ಹಾರೈಸಿದರು.
    ಈ ಸಂದರ್ಭದಲ್ಲಿ ಜಿ.ಪಂ ಉಪಕಾರ್ಯದರ್ಶಿ(ಅಭಿವೃದ್ಧಿ) ಕೃಷ್ಣನಾಯಕ್.ಹೆಚ್, ಉಪ ಕಾರ್ಯದರ್ಶಿ(ಆಡಳಿತ) ಕೋರವರ್ ಎಸ್.ಜಿ, ಮುಖ್ಯ ಲೆಕ್ಕಾಧಿಕಾರಿ ಶಿವಕುಮಾರ್, ಮುಖ್ಯ ಯೋಜನಾಧಿಕಾರಿ ರಾಜಗೋಪಾಲ್ ಟಿ.ಆರ್, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮಂಜುನಾಥ್.ಎನ್, ಯೋಜನಾ ನಿರ್ದೇಶಕರಾದ ನಯನ ಮತ್ತಿತರರು ಉಪಸ್ಥಿತರಿದ್ದರು.
    ಮೊದಲಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ಯೋಗೀಶ್ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು.
    Rural Development and Panchayat Raj Sports Meet
  • ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಕೋಟೆ ರಂಗನಾಥ್ ಅವಿರೋಧ ಆಯ್ಕೆ

    ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷರಾಗಿ ಕೋಟೆ ರಂಗನಾಥ್ ಅವಿರೋಧ ಆಯ್ಕೆ

    ಚಿಕ್ಕಮಗಳೂರು-ನಗರದ ತಾಲ್ಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಕೋಟೆ ರಂಗನಾಥ್ ಮೂರನೇ ಬಾರಿಗೆ ಹಾಗೂ ಉಪಾಧ್ಯಕ್ಷರಾಗಿ ವಾಜುವಳ್ಳಿ ರಮೇಶ್ ಮುಂದಿನ ಐದು ವರ್ಷಗಳ ಅವಧಿಗೆ ಅವಿರೋಧ ಆಯ್ಕೆಯಾಗಿದ್ದಾರೆ.

    .೨೯ ರಿಂದ ನಡೆದ ಚುನಾವಣೆಯಲ್ಲಿ ನಿರ್ದೇಶಕರುಗಳಾಗಿ ೧೫ ಜನ ಅವಿರೋಧ ಆಯ್ಕೆಯಾಗಿದ್ದು, ಇಂದು ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆದು ಅಧ್ಯಕ್ಷರಾಗಿ ಕೋಟೆ ರಂಗನಾಥ್, ಉಪಾಧ್ಯಕ್ಷರಾಗಿ ವಾಜುವಳ್ಳಿ ರಮೇಶ್ ಆಯ್ಕೆಯಾಗಿದ್ದಾರೆಂದು ಸಹಕಾರ ಇಲಾಖೆಯ ಸಹಾಯಕ ಉಪ ನಿಬಂಧಕರಾದ ಚುನಾವಣಾಧಿಕಾರಿ ತ್ರಿವೇಣಿ ಅವರು ಘೋಷಿಸಿದರು.

    ಬಿಜೆಪಿ ಮುಖಂಡ ಈಶ್ವರಹಳ್ಳಿ ಮಹೇಶ್ ನೂತನ ಅಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ, ಬ್ಯಾಂಕನ್ನು ಕಳೆದ ಸಾಲಿನಲ್ಲಿ ಇಡೀ ರಾಜ್ಯದಲ್ಲೇ ಅಭಿವೃದ್ಧಿಪಡಿಸಿ ಶೇ.೩ ರ ಬಡ್ಡಿ ದರದಲ್ಲಿ ೧೦ ಕೋಟಿಗೂ ಹೆಚ್ಚು ರೈತರಿಗೆ ಅಗತ್ಯ ಸಾಲಸೌಲಭ್ಯ ನೀಡಲಾಗಿದೆ ಎಂದರು.

    ೨೦೨೪-೨೫ನೇ ಸಾಲಿನ ಪ್ರಸಕ್ತ ಅವಧಿಯಲ್ಲಿ ರಾಜ್ಯ ಬ್ಯಾಂಕಿನಿಂದ ಹಣವನ್ನು ಪಡೆದು ತಾಲ್ಲೂಕಿನ ರೈತರಿಗೆ ಹೆಚ್ಚಿನ ಕೃಷಿ ಸಾಲ ವಿತರಿಸಲು ಮುಂದಾಗಬೇಕೆಂದು ಸಲಹೆ ನೀಡಿದ ಅವರು, ನೂತನ ಪದಾಧಿಕಾರಿಗಳನ್ನು ಅಭಿನಂದಿಸಿದರು.

    ನೂತನ ಅಧ್ಯಕ್ಷ ಕೋಟೆ ರಂಗನಾಥ್ ಮಾತನಾಡಿ, ಬ್ಯಾಂಕಿನ ಹಿಂದಿನ ಪದಾಧಿಕಾರಿಗಳು ಹಾಕಿಕೊಟ್ಟ ಮಾರ್ಗದಲ್ಲಿ ನಾವು ಸಾಗುತ್ತಿದ್ದೇವೆ. ರೈತರ ಸಂಕಷ್ಟಗಳಿಗೆ ನೆರವಾಗಿ ಅವರ ಅಡಿಕೆ, ಕಾಫಿ, ತೆಂಗಿನ ತೋಟ ಬರಗಾಲದಿಂದ ಒಣಗಿ ಹೋದ ಸಂದರ್ಭದಲ್ಲಿ ರೈತರಿಗೆ ತೊಂದರೆ ನೀಡದೆ ಸಾಲ ವಸೂಲಿಗೆ ಮುಂದಾಗದಂತೆ ಅಧಿಕಾರಿ ಸಿಬ್ಬಂದಿಗಳನ್ನು ತಡೆಯಲಾಗಿತ್ತು ಎಂದು ಹೇಳಿದರು.

    ಈ ಅವಧಿಯಲ್ಲಿ ಸುಮಾರು ೫ ಕೋಟಿ ರೂ ಸಾಲ ವಿತರಿಸಲು ಗುರಿಹೊಂದಲಾಗಿದೆ. ರಾಜ್ಯದ ೧೭೨ ಬ್ಯಾಂಕ್‌ಗಳಲ್ಲಿ ಚಿಕ್ಕಮಗಳೂರಿನ ಬ್ಯಾಂಕ್ ಮೊದಲ ಸ್ಥಾನದಲ್ಲಿದೆ. ಇದಕ್ಕೆ ಕಾರಣರಾದ ರೈತರು, ಶ್ರಮಿಸಿದ ಎಲ್ಲರಿಗೂ ಧನ್ಯವಾದ ಸಲ್ಲಿಸಿದ ಅವರು ತಮ್ಮ ಮೂರನೇ ಬಾರಿಗೆ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವಲ್ಲಿ ಬಿಜೆಪಿ ಪಕ್ಷದ ಮುಖಂಡರು, ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಯವರಿಗೆ ಕೃತಜ್ಞತೆ ಸಲ್ಲಿಸಿದರು.

    ಉಪಾಧ್ಯಕ್ಷ ವಾಜುವಳ್ಳಿ ರಮೇಶ್ ಮಾತನಾಡಿ, ನನ್ನನ್ನು ಆಯ್ಕೆ ಮಾಡಿರುವ ನಿರ್ದೇಶಕರು, ಪಕ್ಷದ ಮುಖಂಡರು ಹಾಗೂ ಮತದಾರರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

    ನೂತನ ಸಾಲಿಗೆ ನಿರ್ದೇಶಕರುಗಳಾಗಿ ದಾನಿಹಳ್ಳಿ ಮಂಜುನಾಥ್, ಮಹೇಶ್ ಈ.ಆರ್, ರವೀಶ್. ಎ.ಎನ್, ಸತೀಶ್‌ಗೌಡ ಕೆ.ಪಿ, ಸುನಿಲ್ ಎಂ.ಟಿ, ರಾಜು ಎಂ.ಈ, ಗೌರಮ್ಮ, ಶಶಿ ಚಂದ್ರೇಗೌಡ, ದಿನೇಶ್ ಟಿ.ಈ, ಹೇಮಾವತಿ, ದಿನೇಶ್ ಎ.ಎಲ್, ಈಶ್ವರಪ್ಪ ಎಲ್.ಆರ್, ರಮೇಶ್ ವಿ.ಎನ್, ಸರ್ಕಾರದ ನಾಮಿನಿ ಸದಸ್ಯ ಚಂದ್ರಶೇಖರ್ ಜೆ.ವೈ ಇವರುಗಳು ಆಯ್ಕೆಯಾಗಿದ್ದಾರೆ.

    ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್ ದೇವರಾಜ್‌ಶೆಟ್ಟಿ, ಎಂ.ಎಸ್ ನಿರಂಜನ್, ಚಂದ್ರೇಗೌಡ, ಕೆ.ಪಿ ವೆಂಕಟೇಶ್, ಪರಮೇಶ್, ಪ್ರಭು ಹಾಗೂ ಬ್ಯಾಂಕಿನ ವ್ಯವಸ್ಥಾಪಕರಾದ ಎಂ.ಕೆ ಗೀತಾ ಉಪಸ್ಥಿತದ್ದರು.

    Kote Ranganath elected unopposed as PLD Bank Chairman

  • ಕಡೂರು ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

    ಕಡೂರು ತಾಲೂಕು ವೈದ್ಯಾಧಿಕಾರಿ ಮನೆ ಮೇಲೆ ಲೋಕಾಯುಕ್ತ ದಾಳಿ

    ಚಿಕ್ಕಮಗಳೂರು: ಆದಾಯಕ್ಕಿಂತ ಅಧಿಕ ಆಸ್ತಿ ಸಂಪಾದನೆ ಆರೋಪದಡಿ ಕಡೂರು ತಾಲೂಕು ವೈದ್ಯಾಧಿಕಾರಿ ಡಾ.ಉಮೇಶ್ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

    ಡಾ.ಉಮೇಶ್ ೧೯೯೫ರಲ್ಲಿ ವೈದ್ಯಾಧಿಕಾರಿಯಾಗಿ ಸೇವೆಗೆ ನೇಮಕವಾಗಿದ್ದು, ೨೦೨೩ ರಿಂದ ಕಡೂರು ತಾಲೂಕು ವೈದ್ಯಾಧಿ ಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಇವರು ೨೦೨೦ ರಿಂದ ೨೦೨೩ ರ ವರೆಗೆ ಚಿಕ್ಕಮಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ೧೯೯೫ ರಿಂದ ಸೇವೆಗೆ ಸೇರಿದಲ್ಲಿಂದ ಇಲ್ಲಿಯವರೆಗೆ ತಮ್ಮ ಅಧಿಕಾರವನ್ನು ದುರುಪ ಯೋಗ ಮಾಡಿಕೊಂಡು ಕಾನೂನು ಬದ್ದ ಮೂಲ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದ ಚಿರಾಸ್ಥಿ ಹಾಗೂ ಚರಾಸ್ಥಿ ಸಂಪಾದನೆ ಮಾಡಿದ್ದಾರೆ ಆರೋಪವಿದೆ.

    ಪತ್ನಿ ಟಿ.ಎಸ್.ಮಂಜುಳ ಹಾಗೂ ಕುಟುಂಬ ಸದಸ್ಯರ ಹೆಸರಿನಲ್ಲಿ ಸ್ಥಿರಾಸ್ತಿಯನ್ನು ಖರೀದಿ ಮಾಡಿದ್ದಾರೆ. ಇಬ್ಬರು ಮಕ್ಕಳು ರಾಯಚೂರು ಮತ್ತು ದಾವಣಗೆರೆ ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆದಾಯಕ್ಕಿಂತ ಹೆಚ್ಚಿನ ಆಸ್ತಿ ಸಂಪಾದನೆ ಮಾಡಿದ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

    Lokayukta raids Kadur Taluk Medical Officer’s house

     

  • ಅಂತಿಮ ಕ್ಷಣದಲ್ಲಿ ಮೋಸ್ಟ್ ವಾಂಟೆಡ್ ನಕ್ಸಲರ ಶರಣಾಗತಿ ಬೆಂಗಳೂರಿಗೆ ಸ್ಥಳಾಂತರ

    ಅಂತಿಮ ಕ್ಷಣದಲ್ಲಿ ಮೋಸ್ಟ್ ವಾಂಟೆಡ್ ನಕ್ಸಲರ ಶರಣಾಗತಿ ಬೆಂಗಳೂರಿಗೆ ಸ್ಥಳಾಂತರ

    ಚಿಕ್ಕಮಗಳೂರು: ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ನಕ್ಸಲರು ಜಿಲ್ಲಾ ಆಡಳಿತದ ಮುಂದೆ ನಿಗದಿಯಾಗಿದ್ದ ೬ ಜನ ನಕ್ಸಲರ ಶರಣಾಗತಿ ಪ್ರಕ್ರಿಯೆ ಅಂತಿಮ ಕ್ಷಣದಲ್ಲಿ ಸ್ಥಳ ಬದಲಾಗುವ ಮೂಲಕ ಅನಗತ್ಯ ಗೊಂದಲ ಸೃಷ್ಟಿಯಾಗಿ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗಲು ತೆರಳಿದರು

    ಬುಧವಾರ ಬೆಳಿಗ್ಗೆ ೧೦ ರಿಂದ ೧೨ ಗಂಟೆಯೊಳಗೆ ಆರು ಜನ ನಕ್ಸಲರು ಜಿಲ್ಲಾಡಳಿತದ ಮುಂದೆ ಶರಣಾಗುವ ಬಗ್ಗೆ ಸಮಯ ನಿಗದಿ ಆಗಿತ್ತು.
    ಸರ್ಕಾರಿ ನೇತೃತ್ವದ ಶರಣಾಗತಿ ಸಮಿತಿ ಸದಸ್ಯರಾದ ಶ್ರೀಪಾಲ್, ಬಂಜಗೆರೆ ಜಯಪ್ರಕಾಶ್, ಪಾರ್ವತೀಶ್ ಜಯಪುರ ಸಮೀಪ ವಾಸ್ತವ್ಯ ಹೂಡಿದ್ದು ಇಂದು ಬೆಳಿಗ್ಗೆ ೮ ರ ಬಳಿಕ ನಕ್ಸಲರೊಂದಿಗೆ ಚಿಕ್ಕಮಗಳೂರಿನ ಕಡೆಗೆ ಪ್ರಯಾಣ ಬೆಳೆಸಿದ್ದರು.

    ಇವರಿಗೆ ಜನದನಿ ಸಂಘಟನೆಯ ನೂರ್ ಶ್ರೀಧರ್, ಶ್ರೀಧರ್, ಹಾಗಲಗಂಜಿ ವೆಂಕಟೇಶ್ , ಕೌಳಿ ರಾಮು, ವಳಲೆ ಸರೋಜಾ, ಹಾಗಲಗಂಜಿ ಭಾಗ್ಯ ಸಾತ್ ನೀಡಿದ್ದರು. ಜಿಲ್ಲಾ ರಕ್ಷಣಾಧಿಕಾರಿ ವಿಕ್ರಮ ಅಮಟೆ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್ ಸೇರಿದಂತೆ ಪೊಲೀಸರ ಭಾರಿ ಬಿಗಿ ಬಂದೋಬಸ್ಥಿನಲ್ಲಿ ಶರಣಾಗತಿ ಆಗಲಿದ್ದ ನಕ್ಸಲರು ಜಿಲ್ಲಾ ಕೇಂದ್ರಕ್ಕೆ ಪ್ರಯಾಣ ಬೆಳೆಸಿದ್ದರು

    ಚಿಕ್ಕಮಗಳೂರು ಸಮೀಪದ ಕಡಬಗೆರೆ ಬಳಿ ಬರುತ್ತಿದ್ದಂತೆ ಮುಖ್ಯಮಂತ್ರಿಗಳ ಕಚೇರಿಯಿಂದ ಬಂದ ದೂರವಾಣಿ ಕರೆ ಪೋಲಿಸ್ ಅಧಿಕಾರಿಗಳನ್ನು ಕ್ಷಣ ಕಾಲ ಇಕ್ಕಟ್ಟಿಗೆ ಸಿಲುಕಿಸಿತು. ಶರಣಾಗತಿ ಪ್ರಕ್ರಿಯೆ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆಯಬೇಕು, ಎಲ್ಲರನ್ನೂ ಅಲ್ಲಿಗೆ ಕರೆತನ್ನಿ? ಎನ್ನುವ ಸಂದೇಶ ಜಿಲ್ಲಾ ಕೇಂದ್ರಕ್ಕೆ ಬರುತ್ತಿದ್ದವರಿಗೆ ಬ್ರೇಕ್ ಹಾಕಿತು. ಸರಿಸುಮಾರು ಅರ್ಧಗಂಟೆಗಳ ಕಾಲ ದಾರಿಯಲ್ಲೇ ನಿಂತು ಚರ್ಚಿಸಿ ಪ್ರಯಾಣ ಮುಂದುವರಿಸಿದ್ದು ಆಲ್ದೂರು ಸಮೀಪ ಬರುತ್ತಿದ್ದಂತೆ ?ಶರಣಾಗತಿ ಬೆಂಗಳೂರಿನಲ್ಲಿ? ಎನ್ನುವುದು ಸ್ಪಷ್ಟವಾಗಿತ್ತು.

    ಇತ್ತ ಚಿಕ್ಕಮಗಳೂರು ಪ್ರವಾಸಿ ಕೇಂದ್ರದಲ್ಲಿ ಶಾಂತಿಗಾಗಿ ನಾಗರಿಕ ವೇದಿಕೆ, ಜನದನಿ ಸಂಘಟನೆ ಮುಖಂಡರು, ಕಾರ್ಯಕರ್ತರು, ಶರಣಾಗಲಿದ್ದ ನಕ್ಸಲಿಗರ ಬಂಧುಗಳು ಸಮಾವೇಶಗೊಂಡಿದ್ದು ಬರುವಿಕೆಗೆ ಕಾದು ನಿಂತಿದ್ದರು. ಪೊಲೀಸರು ಪ್ರವೇಶ ದ್ವಾರಗಳನ್ನು ಮುಚ್ಚಿ ನಿರ್ದಿಷ್ಟ ಪಡಿಸಿದ ಜನರಿಗಷ್ಟೇ ಒಳ ಬಿಡುತ್ತಿದ್ದು ಇದು ಕೂಡ ಅಸಮಾಧಾನಕ್ಕೆ ಕಾರಣವಾಗಿತ್ತು.

    ಬೆಂಗಳೂರು, ಶಿವಮೊಗ್ಗ ಹಾಸನ ಇನ್ನಿತರ ಕಡೆಗಳಿಂದ ಮಾಧ್ಯಮ ಪ್ರತಿನಿಧಿಗಳು ಆಗಮಿಸಿದ್ದು ನಕ್ಸಲರ ಬರುವಿಕೆಗಾಗಿ ತುದಿಗಾಲಲ್ಲಿ ನಿಂತಿದ್ದರು.
    ಈಗ ಬರುತ್ತಾರೆ ಇನ್ನೇನು ಬರುತ್ತಾರೆ ಎಂದು ಕಾದು ನಿಂತಿದ್ದವರಿಗೆ ಮಧ್ಯಾಹ್ನ ೧೨ ಗಂಟೆ ನಂತರ ಇದ್ದಕ್ಕಿದ್ದಂತೆ ಸ್ಥಳಬದಲಾವಣೆ ಸುದ್ದಿ ಮುಟ್ಟಿದ್ದು, ಗೊಂದಲಮಯ ವಾತಾವರಣ ಸೃಷ್ಟಿಯಾಯಿತು.

    ಶರಣಾಗತಿ ಆಗಲಿರುವ ನಕ್ಸಲೀಯರ ತಂದೆ, ತಾಯಿ, ಸಹೋದರ, ಸಹೋದರಿಯರು ಚಿಕ್ಕಮಗಳೂರಿಗೆ ಆಗಮಿಸಿದ್ದರು. ಇಲ್ಲಿನ ಪ್ರವಾಸಿ ಮಂದಿರದ ಆವರಣದಲ್ಲಿ ಕಾದು ಕುಳಿತಿದ್ದರು. ಅಂತಿಮ ಕ್ಷಣದಲ್ಲಿ ಸ್ಥಳ ಬದಲಾವಣೆಗೆ ಇರುವ ಕಾರಣಗಳು ಏನು ಎನ್ನುವ ಪ್ರಶ್ನೆಯೂ ಎದುರಾಗಿ ಹಲವು ಶಂಕೆ/ ವ್ಯಾಖ್ಯಾನಗಳಿಗೂ ದಾರಿ ನಿರ್ಮಿಸಿತು.

    ಗೊಂದಲಕ್ಕೆ ಕಾರಣ ಯಾರು / ಏನು ಎನ್ನುವ ಪ್ರಶ್ನೆಗೆ ಯಾರಲ್ಲೂ ಸ್ಪಷ್ಟ ಉತ್ತರ ಇರಲಿಲ್ಲ. ಸಂಘಟಕರಿಗೆ ಉತ್ತರಿಸಲಾಗದ ಪರಿಸ್ಥಿತಿ ಎದುರಾಯಿತು. ಮಾಧ್ಯಮಗಳ ಪ್ರತಿನಿಧಿಗಳ ನಿರಂತರ ಪ್ರಶ್ನೆ ಹಿನ್ನೆಲೆಯಲ್ಲಿ ? ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಸ್ಥಳ ಬದಲಾವಣೆ ಆಗಿದೆ? ಎಂದಷ್ಟೇ ಕಾರ್ಯಕ್ರಮ ಆಯೋಜಕರು ಉತ್ತರಿಸಬೇಕಾಯಿತು.

    ಬಂದ ದಾರಿಗೆ ಸುಂಕ ಇಲ್ಲ ಎಂದು ಕೆಲವರು ಗೊಣಗುತ್ತಾ ತೆರಳಿದರೆ, ಸಂಬಂಧಿಕರು ಹಾಗೂ ಸಂಘಟಕರನ್ನು ಮೂರು ಪೋಲಿಸ್ ವಾಹನದಲ್ಲಿ ಬೆಂಗಳೂರಿಗೆ ಕಳುಹಿಸಲಾಯಿತು. ಐತಿಹಾಸಿಕ ಕ್ಷಣಕ್ಕೆ ಸಾಕ್ಷಿ ಆಗಬೇಕಾಗಿದ್ದ ಪ್ರವಾಸಿ ಮಂದಿರ ಆವರಣದಲ್ಲಿ ಕ್ಷಣಮಾತ್ರಕ್ಕೆ ಮೌನ ಆವರಿಸಿ ಬಿಕೋ ಎನ್ನ ತೊಡಗಿತು. ಬೆಳಗಿನಿಂದ ಕಾದಿದ್ದ ಪೊಲೀಸರು ನಿಟ್ಟುಸಿರು ಬಿಟ್ಟು ತೆರಳಿದರು.

    Most wanted Naxal surrenders at the last minute shifted to Bengaluru

  • ಭೀಮ ಕೋರೆಗಾಂವ್ ವಿಜಯೋತ್ಸವ ಅಂಗವಾಗಿ ಬೃಹತ್ ಮೆರವಣಿಗೆ

    ಭೀಮ ಕೋರೆಗಾಂವ್ ವಿಜಯೋತ್ಸವ ಅಂಗವಾಗಿ ಬೃಹತ್ ಮೆರವಣಿಗೆ

    ಚಿಕ್ಕಮಗಳೂರು: ದಲಿತ ಸಂಘಟನೆಗಳ ಒಕ್ಕೂಟದ ವತಿಯಿಂದ ಬುಧವಾರ ನಗರದಲ್ಲಿ ಆಯೋಜಿಸಲಾಗಿದ್ದ ೨೦೭ನೇ ಭೀಮ ಕೋರೆಗಾಂವ್ ವಿಜಯೋತ್ಸವ ಕಾರ್ಯಕ್ರಮ ಜರುಗಿತು.

    ನಗರದ ಕೆಇಬಿ ವೃತ್ತದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ನೀಲಿಯ ಶಾಲು, ನೀಲಿ ಬಾವುಟಗಳು ರಾರಾಜಿಸಿ ಮೆರವಣಿಗೆ ಸಂಪೂರ್ಣ ನೀಲಿಮಯವಾಗಿತ್ತು. ಪುಷ್ಪಾಲಂಕೃತ ವಾಹನಗಳಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್‌ರವರ ಭಾವಚಿತ್ರಗಳು ಹಾಗೂ ಭೀಮ ಕೋರೆಗಾವ್ ಯುದ್ಧದ ನೇತೃತ್ವವಹಿಸಿದ್ದ ಜಯಸಿದ್ಧ ನಾಯಕರ ಭಾವಚಿತ್ರಗಳೊಂದಿಗೆ ಭವ್ಯ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಭೀಮ ಕೋರೆಗಾವ್ ಯುದ್ಧದ ನೆನಪಿನ ಸ್ಮಾರಕ ಸ್ತಂಭದ ಸ್ಥಬ್ದಚಿತ್ರ ಗಮನ ಸೆಳೆಯಿತು.

    ಡ್ರಮ್ಸ್ ಹಾಗೂ ಡಿಜೆ ಮಾದಕ ಹಿಮ್ಮೇಳಕ್ಕೆ ಯುವಕ, ಯುವತಿಯರು ಕುಣಿದು ಕುಪ್ಪಳಿಸಿದರು. ಡಾಕ್ಟರ್ ಬಿ. ಆರ್ ಅಂಬೇಡ್ಕರ್ ಅವರಿಗೆ ಜಯವಾಗಲಿ ಎಂಬ ಘೋಷಣೆ ಮುಗಿಲು ಮುಟ್ಟಿತ್ತು. ಮೆರವಣಿಗೆ ಸಾಗುವ ರಸ್ತೆಯ ಇಕ್ಕಿಲಗಳಲ್ಲಿ ವಿವಿಧ ಸಂಘಟನೆಗಳವರು ಸಾರ್ವಜನಿಕರಿಗೆ ಪಾನಕ ವಿತರಿಸಿದರು.

    ಮೆರವಣಿಗೆ ಹನುಮಂತಪ್ಪ ವೃತ್ತಕ್ಕೆ ಬರುತ್ತಿದ್ದಂತೆ ಸಾವಿರಾರು ಸಂಖ್ಯೆಯ ಜನರು ಭವ್ಯ ಮೆರವಣಿಗೆಯನ್ನು ವೀಕ್ಷಿಸಿದರು ಸಂಘಟಕರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು. ಈ ಕಾರ್ಯಕ್ರಮದ ಮುಂಚೂಣಿಯಲ್ಲಿ ಬಿಎಸ್ಪಿ ಮುಖಂಡರಾದ ಕೆ ಟಿ ರಾಧಾಕೃಷ್ಣ, ಕೆಟಿ ರಾಧಾಕೃಷ್ಣ, ವಕೀಲ ಅನಿಲ್ ಕುಮಾರ್,ಭೀಮ್ ಆರ್ಮಿಯ ಗೌರವಾಧ್ಯಕ್ಷಹೊನ್ನೇಶ್,ಭೀಮಯ್ಯ ,ಹರೀಶ್, ಮತ್ತಿಕೆರೆ ಧರ್ಮರಾಜು, ರಘು ಹುಣಸೇಮಕಿ ಲಕ್ಷ್ಮಣ್ ಸೇರಿದಂತೆ ಹಲವರು ಮುಂಚೂಣಿಯಲ್ಲಿದ್ದರು.

    A grand procession as part of the Bhima Koregaon victory celebrations

  • ಇಂದು ಭೂಗತರಾಗಿದ್ದ ಆರು ನಕ್ಸಲರ ಶರಣಾಗತಿ

    ಇಂದು ಭೂಗತರಾಗಿದ್ದ ಆರು ನಕ್ಸಲರ ಶರಣಾಗತಿ

    ಚಿಕ್ಕಮಗಳೂರು: ದಶಕಗಳ ಕಾಲ ಭೂಗತರಾಗಿದ್ದ ಆರು ನಕ್ಸಲರ ಶರಣಾಗತಿಗೆ ವೇದಿಕೆ ಸಿದ್ಧವಾಗಿದೆ, ಶಾಂತಿಗಾಗಿ ನಾಗರಿಕ ವೇದಿಕೆ ರಾಜ್ಯ ಸರ್ಕಾರದೊಂದಿಗೆ ನಡೆಸಿದ ಸುಧೀರ್ಘ ಮಾತುಕತೆ ಫಲಪ್ರದವಾಗಿದ್ದು ನಾಳೆ ಆರು ಜನ ನಕ್ಸಲರು ಮುಖ್ಯ ವಾಹಿನಿಗೆ ಬರಲಿದ್ದಾರೆ ಎಂದು ಶಾಂತಿಗಾಗಿ ನಾಗರಿಕ ವೇದಿಕೆ ಪ್ರಮುಖ ಮುಖಂಡ ಕೆ.ಎಲ್.ಅಶೋಕ್ ತಿಳಿಸಿದರು

    ಅವರು ಮಂಗಳವಾರ ಸುದ್ದಿಗಾರೊಂದಿಗೆ ಮಾತನಾಡಿ ಪ್ರಮುಖವಾಗಿ ಮುಂಡಗಾರು ಲತಾ, ಸುಂದರಿ ಕುಟ್ಲೂರು, ವನಜಾಕ್ಷಿ ಬಾಳೆಹೊಳೆ, ಮಾರಪ್ಪ ಅರೋಲಿ ಕೆ ವಸಂತ, ಟಿ ಎನ್ ಜೀಶ್ ಅಲಿಯಾಸ್ ಜಯಣ್ಣ ನಾಳೆ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದೆ ಶರಣಾಗಲಿದ್ದು ಈ ಬಗ್ಗೆ
    ರಾಜ್ಯ ಸರಕಾರ ನಕ್ಸಲರ ಪ್ರಮುಖ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದಾರೆ ಎಂದರು

    ಪ್ರಮುಖವಾಗಿ ಮಲೆನಾಡಿನ ಅರಣ್ಯ ಇಲಾಖೆ ಕಿರುಕುಳ, ಗಿರಿಜನರಿಗಾಗಿ ಭೂಮಿ, ದಲಿತರಿಗಾಗಿ ವಸತಿ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಶರಣಾಗಲಿರುವ ನಕ್ಸಲರು ಮುಂದೆ ಇಟ್ಟಿದ್ದಾರೆ ಎಂದು ಕೆಎಲ್ ಅಶೋಕ್ ತಿಳಿಸಿದರು. ಇವುಗಳ ಜೊತೆಗೆ ರಾಜ್ಯ ಸರ್ಕಾರ ಶರಣಾಗುವ ನಕ್ಸಲರನ್ನು ಘನತೆ ಗೌರವದಿಂದ ನಡೆಸಿಕೊಳ್ಳಬೇಕು ಎಂಬ ಶರತ್ತನ್ನು ಇಟ್ಟಿದ್ದೇವೆ ಎಂದರು.

    ಆರು ಜನ ನಕ್ಸಲರು ಶರಣಾಗತಿ ಆಗುತ್ತಿಲ್ಲ, ಬದಲಾಗಿ ಸಮಾಜದ ಮುಖ್ಯ ವಾಹಿನಿಗೆ ಬರುತ್ತಿದ್ದಾರೆ. ಇನ್ನು ಮುಂದೆ ಅವರ ಹೋರಾಟದ ಸ್ವರೂಪ ಮತ್ತು ದಿಕ್ಕು ಬದಲಾಗಲಿದ್ದು ಇಷ್ಟು ದಿನ ಭೂಗತರಾಗಿ ನಡೆಸಿದ ಹೋರಾಟ ಇನ್ನು ಮುಂದೆ ನಾಗರಿಕ ಸಮಾಜದ ನಡುವೆ ಚಳುವಳಿ ರೂಪದಲ್ಲಿ ಕಾಣಿಸಿಕೊಳ್ಳಲಿದೆ ಎಂದು ಸ್ಪಷ್ಟಪಡಿಸಿದರು.

    ಈ ಹಿಂದೆ ಶರಣಾಗತಿ ಆಗಿದ್ದ ನಕ್ಸಲರನ್ನು ರಾಜ್ಯ ಸರ್ಕಾರ ನಡೆಸಿಕೊಂಡ ರೀತಿ ಹಾಗೂ ಅವರಿಗೆ ಸೌಲಭ್ಯ ಕಲ್ಪಿಸದೇ ಇದ್ದುದರ ಬಗ್ಗೆ ಬೇಸರ ವ್ಯಕ್ತಪಡಿಸಿದ ಅವರು, ಈ ಬಾರಿ ಆ ರೀತಿ ಆಗುವುದಿಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಬಾರಿ ಲಿಖಿತ ರೂಪದಲ್ಲಿ ರಾಜ್ಯ ಸರ್ಕಾರ ಭರವಸೆ ನೀಡುತ್ತಿದೆ ಎಂದು ತಿಳಿಸಿದರು.

    Six Naxalites who were underground surrendered today

  • ಕೊನೆಯ ಉಸಿರಿರುವ ತನಕ ಜನರಿಗಾಗಿ ಹೋರಾಟ

    ಕೊನೆಯ ಉಸಿರಿರುವ ತನಕ ಜನರಿಗಾಗಿ ಹೋರಾಟ

    ಚಿಕ್ಕಮಗಳೂರು: ಜಿಲ್ಲಾಡಳಿತದ ಮುಂದೆ ಬುಧವಾರ ಶರಣಾಗತಿ ಆಗಲಿರುವ ಪ್ರಮುಖ ನಕ್ಸಲ್ ನಾಯಕಿ ಮುಂಡಗಾರು ಲತಾ ಮಾತನಾಡಿರುವ ವಿಡಿಯೋ ಬಿಡುಗಡೆಯಾಗಿದ್ದು ತಮ್ಮ ಬೇಡಿಕೆ ಸರ್ಕಾರದ ಮುಂದೆ ಒಟ್ಟಿದ್ದಾರೆ.

    ಚಿಕ್ಕಮಗಳೂರಿಗೆ ಆಗಮಿಸುವ ಮುನ್ನಾ ಕಾಡಿನಲ್ಲಿ ಎಲ್ಲಾ ಆರುಜನ ನಕ್ಸಲರು ಸಭೆ ನಡೆಸಿ ನಂತರ ಮಾತನಾಡಿರುವ ಲತಾ, ತಮ್ಮ ಅಭಿಪ್ರಾಯ ಹೇಳಿದ್ದಾರೆ, ಯಾರೆಲ್ಲ ಪ್ರಜಾ ತಾಂತ್ರಿಕ ಸಂವಿಧಾನ ಪರ ಹೋರಾಟ ಬಯಸುತ್ತಿದ್ದಾರೋ ಅದೇ ರೀತಿ ಜನರ ಪರ ಹೋರಾಟ ನಾವು ಮಾಡ್ತೇವೆ ಎಂದಿರುವ ಅವರು ಜನರಪರ ಕೊನೆಯ ಉಸಿರಿರುವ ತನಕ ಜನರಿಗಾಗಿ ಹೋರಾಟ ಮಾಡ್ತೇವೆ ಎಂದಿದ್ದಾರೆ.

    ಕರ್ನಾಟಕ, ಕೇರಳ, ತಮಿಳುನಾಡಿನ ಅರು ಜನ ನಕ್ಸಲರು ನಿಧಾರ ಮಾಡಿ ಚರ್ಚೆ ಮಾಡಿದ್ದೇವೆ, ಅಲ್ಲಿನ ಸ್ಥಿತಿಗಳ ಬಗ್ಗೆ ಸಂಘಟಕರು ಮನವರಿಕೆ ಮಾಡಿಸಿದ್ದಾರೆ ಎನ್ನುವ ಮೂಲಕ ಸರ್ಕಾರದ ಜೊತೆ ಸಂಧಾನಕ್ಕೆ ಯತ್ನಿಸಿದವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಎಲ್ಲಾ ಸಂಗಾತಿಗಳನ್ನು ನಾವು ಮುಂದೆ ನಡೆಯುವ ಹೋರಾಟಕ್ಕೆ ಸ್ವಾಗತಿಸುತ್ತೇವೆ

    ರಾಜ್ಯ ಸರ್ಕಾರ ನಮ್ಮ ಬೇಡಿಕೆ ಈಡೇರಿಸುತ್ತೇ ಅನ್ನೋ ಭರವಸೆಯೊಂದಿಗೆ ಬರ್ತಿದ್ದೇವೆ ಎಂದಿರುವ ಲತಾ ನಮ್ಮ ಶರಣಾಗತಿ ಪ್ರಕ್ರಿಯೆಗೆ ಎಲ್ಲಾ ಪ್ರಮುಖ ಸಂಘಟಕರೆಲ್ಲರ ಶ್ರಮ ಹಾಕಿದ್ದಾರೆ ಎಂದು ಹೇಳಿದ್ದಾರೆ.

    Fight for the people until your last breath

     

  • :ಪರೋಪಕಾರಿ ಗುಣದಿಂದ ಮನುಷ್ಯ ದೊಡ್ಡವರಾಗಲು ಸಾಧ್ಯ

    :ಪರೋಪಕಾರಿ ಗುಣದಿಂದ ಮನುಷ್ಯ ದೊಡ್ಡವರಾಗಲು ಸಾಧ್ಯ

    ಚಿಕ್ಕಮಗಳೂರು: ಬಲಾಡ್ಯ ಜಾತಿಗಳಲ್ಲಿ ಜನಿಸಿದರೆ ಮಾತ್ರ ಸ್ವರ್ಗ ದೊರಕದು. ಪರೋ ಪಕಾರಿ ಗುಣ ಇರುವವರಿಗೆ ಪುಣ್ಯ, ಪರಪಿಡುಕನಿಗೆ ನರಕ ಎಂಬುದು ಸನಾತನ ಧರ್ಮದಲ್ಲಿದೆ. ಸನ್ನಡತೆ, ಸದ್ವಿಚಾರಗಳಿಂದ ಕೂಡಿರುವ ಮನುಷ್ಯ ದೊಡ್ಡ ವ್ಯಕ್ತಿಯಾಗಲು ಸಾಧ್ಯ, ಜಾತಿಗಳಿಂದಲ್ಲ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಹೇಳಿದರು.

    ನಗರದ ಕುವೆಂಪು ಕಲಾಮಂದಿರದಲ್ಲಿ ಸವಿತಾ ಸಮಾಜ ಸೇವಾ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ಧ ೨೫ನೇ ವರ್ಷದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಮಂಗಳವಾರ ಭಾಗವಹಿಸಿ ಅವರು ಮಾತನಾಡಿ ಪ್ರತಿಯೊಬ್ಬ ಮನುಷ್ಯನ ಆತ್ಮದಲ್ಲಿ ದೇವರು ನೆಲೆಸಿರುತ್ತಾನೆ. ನಮ್ಮೊಳಗೆ ಎಂದಿಗೂ ಕೀಳರಿಮೆ ಇರಕೂ ಡದು. ಒಂದು ಕಾಲದಲ್ಲಿ ರಾಜಮಹಾರಾಜರಿಗೆ ದೊರಕದ ದೇವರ ದರ್ಶನ, ಬೇಡರ ಕಣ್ಣಪ ಭಕ್ತಿಗೆ ಒಲಿ ದು ಪರಮಶಿವ ಪ್ರತ್ಯಕ್ಷನಾದನು. ಶ್ರೀ ರಾಮನು ಶಬರಿ ಭಕ್ತಿಗೆ ಮೆಚ್ಚಿ ಎಂಜಲು ತಿಂದರೆ ಹೊರತು ಜಾತಿಯಿಂ ದಲ್ಲ ಎನ್ನುವ ಸತ್ಯ ಅರಿಯಬೇಕು ಎಂದು ತಿಳಿಸಿದರು.

    ಜಗದ ಒಳಿತಿಗಾಗಿ ಶ್ರಮಿಸಿದ ಸವಿತಾ ಮಹರ್ಷಿ ಗುರುಗಳು, ಬಿ.ಆರ್.ಅಂಬೇಡ್ಕರ್, ವಿವೇಕಾನಂದ ರು ಉತ್ತಮ ವಿಚಾರಧಾರೆಗಳಿಂದ ಇಂದಿಗೂ ನೆನೆಸುವಂಥ ಕೆಲಸ ಮಾಡಲಾಗುತ್ತಿದೆ ಹೊರತು ಅಧಿಕಾರ ಅಥವಾ ಅಂತಸ್ತಿನಿಂದಲ್ಲ. ಮನುಷ್ಯನು ಅರ್ಜಿ ಸಲ್ಲಿಸಿ ಜನಿಸಲು ಸಾಧ್ಯವಿಲ್ಲ. ಹುಟ್ಟಿದ ನಂತರ ಬೆಳವಣಿಗೆ ಯತ್ತ ಸಾಗಬೇಕು ಹೊರತು ಜಾತಿಯಿಂದ ಗುರುತಿಸಬಾರದು ಎಂದರು.

    ಅನಾದಿಕಾಲದಲ್ಲಿ ಋಷಿಮುನಿಗಳ ಮುಂದೆ ರಾಜರು ತಲೆಬಾಗುತ್ತಿದ್ದರು. ಇಂದು ಮನುಷ್ಯ ಬದುಕಿ ನಲ್ಲಿ ಸುಂದರವಾಗಿ ಕಾಣಲು ಕ್ಷೌರಿಕ ಅಂಗಡಿಗಳಲ್ಲಿ ತಲೆಬಾಗುತ್ತಾನೆ. ಸಮಾಜದಲ್ಲಿ ಪ್ರತಿಯೊಂದು ಜನಾಂ ಗಕ್ಕೂ ಬದುಕುವ ಹಕ್ಕಿದೆ. ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಆ ನಿಟ್ಟಿನಲ್ಲಿ ಅಂಬೇಡ್ಕರ್ ಸಂವಿಧಾನ ದಡಿ ನಾವುಗಳು ಒಂದು ಎಂಬುದು ಸಾಬೀತುಪಡಿಸಬೇಕು ಎಂದರು.

    ತಿರುಪತಿ ತಿರುಮಲ ದೇವಸ್ಥಾನದ ಮಂಡಳಿ ಸದಸ್ಯ ನರೇಶ್‌ಕುಮಾರ್ ಮಾತನಾಡಿ ಸವಿತಾ ಬಂಧು ಗಳು ಸರ್ಕಾರಗಳ ಸೌಲಭ್ಯಗಳಿಂದ ವಂಚಿತರಾಗುತ್ತಿವೆ. ಹೀಗಾಗಿ ಪ್ರತಿ ಅಂಗಡಿಗಳಲ್ಲಿ ಸೌಲಭ್ಯದ ಕರಪತ್ರಗ ಳು ಹಾಕಿ ಜನಾಂಗಕ್ಕೆ ತಿಳಿಹೇಳುವ ಮೂಲಕ ಸವಿತಾ ಸಮಾಜಕ್ಕೆ ಮೀಸಲಿರಿಸಿರುವ ಸೌಲಭ್ಯಗಳ ಪ್ರಯೋ ಜನ ಪಡೆದುಕೊಳ್ಳಬೇಕು ಎಂದು ಹೇಳಿದರು.

    ವಿಶೇಷವಾಗಿ ಸಮಾಜದ ಮಹಿಳೆಯರಿಗೆ ಸ್ವಾವಲಂಬಿ ಜೀವನ ಕೈಗೊಳ್ಳಲು ಸವಲತ್ತುಗಳಿದ್ದು. ಈ ಉ ಪಯೋಗವನ್ನು ಬೆರಳಣಿಕೆಯಷ್ಟು ಮಂದಿ ಬಳಸಿಕೊಂಡಿದೆ. ಹೀಗಾಗಿ ಜನಾಂಗಕ್ಕೆ ಮೀಸಲಿರಿಸಿರುವ ನೂರಾರು ಕೋಟಿ ನಿಗಮಗಳಲ್ಲಿದೆ. ಸಮರ್ಪಕವಾಗಿ ಬಳಸಿಕೊಳ್ಳುವುದು ಅತಿಮುಖ್ಯ. ಎಲ್ಲಾ ಜನಾಂಗಗಳು ಒಂದು, ಬಂಧುಗಳೆಂದು ಭಾವಿಸಿದಾಗ ಮಾತ್ರ ಹಿಂದುತ್ವ ಕಾಪಾಡಲು ಸಾಧ್ಯ ಎಂದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಬಿಎಸ್ಪಿ ಕೆ.ಟಿ.ರಾಧಾಕೃಷ್ಣ ಇತ್ತೀಚೆಗೆ ಕ್ಷೌರಿಕ ವೃತ್ತಿಯಲ್ಲಿರುವ ಜ ನಾಂಗವನ್ನು ಅಸೃಶ್ಯರೆಂದು ಭಾವಿಸಲಾಗುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ದೊರಕಿ ಏಳೂವರೆ ದಶಕಗಳು ಕಳೆದ ರೂ ಅಸೃಶ್ಯರಿಗೆ ನೈತಿಕ ಸ್ವಾತಂತ್ರ್ಯ ಸಿಕ್ಕಿಲ್ಲ. ಇಂದಿಗೂ ಕೆಲವು ಬಡಾವಣೆಗಲ್ಲಿ ದಲಿತ ಸಮುದಾಯಕ್ಕೆ ಬಾ ಡಿಗೆಗೆ ಮನೆಗಳನ್ನು ಕೊಡುವ ಪದ್ಧತಿ ನಿಷೇದಿಸಿರುವುದು ಶೋಚನೀಯ ಎಂದರು.

    ಪ್ರಪಂಚದಲ್ಲಿ ಗಂಡು-ಹೆಣ್ಣು ಎಂಬ ಎರಡೇ ಜಾತಿಗಳಿವೆ. ಆದರೆ ಬಲಾಡ್ಯರ ಜನಾಂಗ ನೋಡುವುದೇ ಬೇರೆಯಾಗಿದೆ. ಹಣವಂತನ, ಜಾತಿ, ಧರ್ಮ ಅಥವಾ ಶುಚಿತ್ವದಿಂದ ಕೂಡಿರುವನೇ ಎಂದು ಅಳಿಯಲಾ ಗುತ್ತಿದೆ. ಅತ್ಯಂತ ಸಣ್ಣ ಇರುವೆಗಳಿಗಿರುವ ಹೊಂದಾಣಿಕೆ, ಪ್ರೀತಿ ನರಮಾನವನ ಬಳಿಯಿಲ್ಲ. ಅಂರ್ತಜಾತಿ ವಿವಾಹದಲ್ಲಿ ಹೆಣ್ಣು, ಗಂಡಿಗೆ ತಾರತಮ್ಯವೆಸಗುತ್ತಿದೆ ಎಂದರು.

    ನಾವೆಲ್ಲರೂ ಒಂದೇ ಎನ್ನುವ ಬಲಾಡ್ಯ ಜನಾಂಗ ಅಥವಾ ರಾಜಕೀಯ ಪಕ್ಷಗಳಿಗೆ ಹಸಿವು, ನಗುವಿನಲ್ಲಿ ಜಾತಿ ಕಾಣುವುದಿಲ್ಲ ಎಂದ ಅವರು ಆಡಳಿತ ಸಮಾಜದಲ್ಲಿ ಮಾತ್ರ ಜಾತಿ ಕಾಣಿಸುತ್ತಿದೆ. ಕೇವಲ ಅಂಬೇ ಡ್ಕರ್ ರಚಿಸಿರುವ ಸಂವಿಧಾನದಲ್ಲಿ ಮಾತ್ರ ಸಮಾನರಾಗಿದ್ದೇವೆ. ಸಾಮಾಜಿಕ ಪಿಡುಗುಗಳಿಗೆ ಜೋತು ಬಿದ್ಧು ಕ್ಷೌರಿಕ ವೃತ್ತಿಯಲ್ಲಿ ಪರಿಶಿಷ್ಟರು ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

    ವಿಧಾನ ಪರಿಷತ್ ಸದಸ್ಯ ಕಿಶೋರ್‌ಕುಮಾರ್ ಬೊಟ್ಯಾಡಿ ಮಾತನಾಡಿ ನದಿಗಳ ನೀರು ಎಲ್ಲೆಡೆ ಹರಿ ದು ಕೊನೆಗೆ ಸಮುದ್ರಕ್ಕೆ ಸೇರಿದಂತೆ, ಎಲ್ಲಾ ಹಿಂದುಳಿದ ವರ್ಗಗಳು ಫಲವತ್ತತೆ ಹೊಂದಿ ಕೊನೆಗೆ ಹಿಂದೂ ಮಹಾಸಾಗರಕ್ಕೆ ಸೇರ್ಪಡೆಗೊಂಡು ಗಟ್ಟಿತನ ಮೆರೆಯಬೇಕು. ಎಲ್ಲಾ ಹಿಂದೂಗಳು ಒಂದೇ ಎಂಬ ಸಂಕಲ್ಪ ಹೊಂದಿದರೆ ಮಾತ್ರ ದೇಶ ಸದೃಢವಾಗಲು ಸಾಧ್ಯ ಎಂದರು.

    ಕಾರ್ಯಕ್ರಮದಲ್ಲಿ ಕನ್ನಡಪೂಜಾರಿ ಹಿರೇಮಗಳೂರು ಕಣ್ಣ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ದರು. ಇದೇವೇಳೆ ಸವಿತಾ ಸಮಾಜದ ಹಿರಿಯ ಸದಸ್ಯರಾದ ಐದು ಮಂದಿಗೆ ಬಾಲಾಜಿ ವಿಗ್ರಹ ನೀಡುವ ಮೂಲಕ ಗೌರವಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಸಿ.ವೆಂಕಟೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

    ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್, ರಾಜ್ಯ ತಜ್ಞಮೌಲ್ಯ ನಿರ್ಧರಣಾ ಸಮಿತಿ ಅಧ್ಯಕ್ಷ ಎ.ಎನ್.ಮಹೇಶ್, ತಾಲ್ಲೂಕು ಸವಿತಾ ಸಮಾಜ ಅಧ್ಯಕ್ಷ ಸಿ.ಎಂ.ಯೋಗೀಶ್, ಹಿರೇಮಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಕೆ.ಕೇಶವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

    Savita Samaj 25th Year Silver Jubilee Celebration Program

  • ಪ್ರತಿಯೊಬ್ಬರ ಆರೋಗ್ಯಕರ ಬದುಕಿಗೆ ಸರ್ಕಾರ ಸಿರಿಧಾನ್ಯಗಳಿಗೆ ಉತ್ತೇಜನ

    ಪ್ರತಿಯೊಬ್ಬರ ಆರೋಗ್ಯಕರ ಬದುಕಿಗೆ ಸರ್ಕಾರ ಸಿರಿಧಾನ್ಯಗಳಿಗೆ ಉತ್ತೇಜನ

    ಚಿಕ್ಕಮಗಳೂರು: ಕೃಷಿ ಕ್ಷೇತ್ರವನ್ನು ಲಾಭದ ದೃಷ್ಟಿಯಿಂದ ನೋಡುತ್ತಿರುವ ಈ ಸಂದರ್ಭದಲ್ಲಿ ಪ್ರತಿಯೊಬ್ಬರ ಆರೋಗ್ಯಕರ ಬದುಕಿಗೆ ಆಹಾರ ಪದ್ದತಿಗಳ ಬದಲಾವಣೆಗಾಗಿ ಸಾವಯವ ಕೃಷಿಗೆ ಹಾಗೂ ಸಿರಿಧಾನ್ಯಗಳಿಗೆ ಉತ್ತೇಜನ ನೀಡಲು ಸರ್ಕಾರ ಹೆಚ್ಚು ಒತ್ತು ನೀಡಿದೆ ಎಂದು ಕಡೂರು ಕ್ಷೇತ್ರದ ಶಾಸಕ ಕೆ.ಎಸ್ ಆನಂದ್ ತಿಳಿಸಿದರು.

    ಆಹಾರ ಸಂಸ್ಕರಣಾ ಮಂತ್ರಾಲಯ, ಭಾರತ ಸರ್ಕಾರ, ಕರ್ನಾಟಕ ರಾಜ್ಯ ಕೃಷಿ ಇಲಾಖೆ, ಜಲಾನಯನ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ನಿಯಮಿತ (ಏಂPPಇಅ), ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್, ಕೃಷಿ ಇಲಾಖೆ, ಚಿಕ್ಕಮಗಳೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಇಂದು ಕಡೂರು ಪಟ್ಟಣದ ಎಪಿಎಂಸಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಸಾವಯವ ಮತ್ತು ಸಿರಿಧಾನ್ಯ ಹಬ್ಬ ೨೦೨೪-೨೫ ನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಆರೋಗ್ಯದ ಸಮಸ್ಯೆ ನಿವಾರಣೆಗೆ ಸಿರಿಧಾನ್ಯ ಬಹಳ ಮಹತ್ವ ಪಡೆಯುತ್ತಿದೆ. ಹಿಂದಿನ ಬಡವರ ಆಹಾರ ರಾಗಿ, ಜೋಳ, ನವಣೆ, ಸಜ್ಜೆ ಮುಂತಾದ ಸಿರಿಧಾನ್ಯಗಳು ಇಂದಿನ ಶ್ರೀಮಂತರ ಆಹಾರಗಳಾಗಿ ಬದಲಾಗಿ ಮಹತ್ವ ಪಡೆದುಕೊಂಡಿವೆ ಎಂದು ಹೇಳಿದರು.

    ಜನ ಸಾಮಾನ್ಯರು ಮತ್ತು ಯುವಜನಾಂಗಕ್ಕೆ ಸಾವಯವ ಕೃಷಿ ಮತ್ತು ಸಿರಿಧಾನ್ಯಗಳ ಮಹತ್ವ ಕುರಿತು ತಿಳಿದುಕೊಳ್ಳಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದ ಅವರು, ಹಿಂದಿನ ಕೃಷಿ ಪದ್ದತಿಯನ್ನು ತಿಳಿಸುವ ದೃಷ್ಟಿಯಿಂದ ರಾಜ್ಯಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಜೊತೆಗೆ ಈ ರೀತಿ ಸಿರಿಧಾನ್ಯಗಳ ಹಬ್ಬ ಆಚರಣೆ ಮಾಡುತ್ತಿದೆ ಎಂದರು.

    ಇಲ್ಲಿ ಹಾಕಲಾಗಿರುವ ಮಳಿಗೆಗಳಲ್ಲಿ ಹಳೆಯ ಕೃಷಿ ಪರಿಕರಗಳಾದ ಕುಂಟೆ, ನೇಗಿಲು, ಎಡೆಗುಂಟೆ, ಕೂರಿಗೆ, ನೆರಕೋಲು ಸೇರಿದಂತೆ ಎಲ್ಲವನ್ನೂ ನೋಡಿದ ಮೇಲೆ ಸಂತೋಷವಾಯಿತು. ಮತ್ತೊಮ್ಮೆ ಇವುಗಳನ್ನು ನೆನಪಿಸಿದ್ದಕ್ಕೆ ಆಯೋಜಕರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದರು. ರೈತರ ಸಾಂಪ್ರದಾಯಿಕ ಹಬ್ಬ ಕಾರ ಹಬ್ಬದ ಸಂದರ್ಭದಲ್ಲಿ ಮಾತ್ರ ಈ ಕೃಷಿ ಉಪಕರಣಗಳಿಗೆ ಪೂಜೆ ಸಲ್ಲಿಸಿ ಕೃಷಿ ಆರಂಭಿಸುತ್ತಿದ್ದರು. ಆದರೆ ಇವೆಲ್ಲಾ ಆಧುನಿಕತೆಯ ಭರಾಟೆಯಲ್ಲಿ ಮರೀಚಿಕೆಯಾಗಿದೆ ಎಂದು ವಿಷಾಧಿಸಿದರು.

    ಪ್ರಸ್ತುತ ಯುವಪೀಳಿಗೆಗೆ ಹಳೇ ಸಾಂಪ್ರದಾಯಿಕ ಕೃಷಿಪದ್ದತಿ, ಸಾವಯವ ಕೃಷಿ ಮತ್ತು ಸಿರಿಧಾನ್ಯದ ಮಹತ್ವ ತಿಳಿಸುವುದು ಅನಿವಾರ್ಯವಾಗಿದೆ. ಅದಕ್ಕಾಗಿ ರಾಸಯನಿಕ ಮುಕ್ತ ಸಂಪೂರ್ಣ ಆರೋಗ್ಯ ಪೂರ್ಣವಾದ ಆಹಾರ ಬೆಳೆಯಲು ಮುಂದಾಗಬೇಕೆಂದು ಕರೆ ನೀಡಿದರು.

    ಹಿಂದೆ ಜಮೀನಿನಲ್ಲಿ ಕೆಲಸ ಮಾಡುವಾಗ ಊಟಕ್ಕೆ ಕುಳಿತರೆ ಎರೆಹುಳುಗಳು ತಂಡೋಪ ತಂಡವಾಗಿ ಬರುತ್ತಿದ್ದವು. ಉಜ್ವಲ ಬೆಳೆ ಬಂದು ರೈತರ ಬದುಕು ಇದರಿಂದ ಹಸನಾಗುತ್ತಿತ್ತು. ಇಂದು ಯಾವುದೇ ತೋಟ, ಜಮೀನುಗಳಿಗೆ ಹೋದರೆ ಮುಖ್ಯವಾಗಿ ಭೂಮಿಯಲ್ಲಿ ಎರೆಹುಳುಗಳನ್ನು ಕಳೆದುಕೊಂಡಿದ್ದೇವೆ. ರಾಸಾಯನಿಕಗಳಾದ ಕಳೆನಾಶಕ ಸಿಂಪರಣೆ, ಕೀಟನಾಶಕ ಔಷಧಿಗಳ ಬಳಕೆಯಿಂದಾಗಿ ಇವೆಲ್ಲಾ ನಾಶವಾಗಿವೆ ಎಂದರು.

    ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹೆಚ್.ಎಸ್. ಕೀರ್ತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪ್ರಸ್ತುತ ಸಮಾಜದಲ್ಲಿ ಎದುರಾಗುತ್ತಿರುವ ರೋಗರುಜಿನಗಳ ಮುಕ್ತಿಗೆ ಸಿರಿಧಾನ್ಯ ಬಳಕೆ ಉಪಯುಕ್ತ ಆಹಾರ. ಶಕ್ತಿಯುತ ಆಹಾರದ ಕೊರತೆಯನ್ನು ಇಂದು ಕಾಣುತ್ತಿದ್ದೇವೆ. ಅದರ ನಿವಾರಣೆಗೆ ಪೌಷ್ಟಿಕಾಂಶವುಳ್ಳ ಸಿರಿಧಾನ್ಯಗಳ ಬಳಕೆಯಿಂದ ದೇಹಕ್ಕೆ ಬೇಕಾದ ಕಬ್ಬಿಣ, ಲವಣಾಂಶ ಹೆಚ್ಚು ಲಾಭವಾಗುತ್ತಿದೆ, ಈ ನಿಟ್ಟಿನಲ್ಲಿ ಸಿರಿಧಾನ್ಯ ಬಳಕೆ ಹಾಗೂ ಬೆಳೆಯಲು ಜಾಗೃತಿ ಮೂಡಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದರು.

    ಆಹಾರ ಮಳಿಗೆಗಳಲ್ಲಿ ಸಿರಿಧಾನ್ಯಗಳಿಂದ ಕೇಕ್, ಚಕ್ಕುಲಿ, ನಿಪ್ಪಟ್ಟು, ಸಿಹಿ ತಿನಿಸುಗಳು ಏನೆಲ್ಲಾ ಆಹಾರ ಪದಾರ್ಥ ತಯಾರಿಸಬಹುದೋ ಅವುಗಳನ್ನೆಲ್ಲಾ ಇಲ್ಲಿ ಕಾಣುವುದರ ಜೊತೆಗೆ ಇವು ಹಳೆಯ ಆರೋಗ್ಯ ಪೂರ್ಣ ಆಹಾರ ಎಂಬುದನ್ನು ಸಾಭೀತುಪಡಿಸಿವೆ. ಮನೆಗಳಲ್ಲಿ ಹೆಚ್ಚಾಗಿ ಸಿರಿಧಾನ್ಯದ ಉಪಯೋಗದ ಬಗ್ಗೆ ಅರಿವು ಮೂಡಿಸಿ ಬಳಸುವಂತಾಗಬೇಕು ಆಗ ಮಾತ್ರ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಈ ಸಿರಿಧಾನ್ಯ ಹಬ್ಬಕ್ಕೆ ಸಹಕರಿಸಿದ ಶಾಸಕರು, ಪ್ರಗತಿಪರ ರೈತರು ಹಾಗು ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು.

    ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದ ಬಸವಾನಂದ ಮಹಾಸ್ವಾಮೀಜಿ ಮಾತನಾಡಿ, ರಾಗಿ ಉಂಬುವವನು ನಿರೋಗಿ, ಅಕ್ಕಿ ಉಂಬುವವನು ಹಕ್ಕಿಯಂತಾಗುವನು, ಸಿಕ್ಕು ರೋಗದಲಿ ವೈದ್ಯನಿಗೆ ರೊಕ್ಕವನ್ನು ಇಕ್ಕುತ್ತಲಿರುವನು ಎಂಬ ಸರ್ವಜ್ಞನ ನುಡಿಯನ್ನು ಪ್ರಸ್ತಾಪಿಸಿದರು.

    ಅಕ್ಕಿಯನ್ನು ಹೆಚ್ಚು ಉಪಯೋಗಿಸಿದರೆ ಮೂಳೆಗಳು ದುರ್ಬಲವಾಗುತ್ತವೆ. ಗರ್ಭಕೋಶ ಗಟ್ಟಿಯಾಗಿಲ್ಲದ ಪರಿಣಾಮ ಹೆಣ್ಣುಮಕ್ಕಳಿಗೆ ಚಿಕ್ಕಂದಿನಿಂದಲೇ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದೆ. ಅಲ್ಯೂಮಿನಿಯಂ ಪಾತ್ರೆ, ಕುಕ್ಕರ್‌ಗಳಿಂದ ಆಹಾರ ತಯಾರಿಸುತ್ತಿರುವುದರಿಂದ ರೋಗರುಜಿನಗಳಿಗೆ ತುತ್ತಾಗುತ್ತಿದ್ದೇವೆ. ಜೊತೆಗೆ ಆಹಾರ ಪದ್ದತಿಯಲ್ಲಿ ಬಹಳ ದೋಷ ಮಾಡಿಕೊಂಡಿರುವುದರಿಂದ ಇವೆಲ್ಲವಕ್ಕೂ ಕಾರಣ. ಹಿಂದೆ ಮಣ್ಣಿನ ಮಡಿಕೆಯಿಂದ ಆಹಾರ ತಯಾರು ಮಾಡುತ್ತಿದ್ದರು ಎಂದು ಹೇಳಿದರು.

    ಭಾರತದಲ್ಲಿ ಇಡೀ ಆಹಾರದಲ್ಲಿ ಅನ್ನ ಎಂದು ಹೇಳುತ್ತಿದ್ದರು. ಭತ್ತ ತೆಗೆದು ಅಕ್ಕಿ ಮಾಡುತ್ತೇವೆ. ಇಂದು ಅಕ್ಕಿಯನ್ನು ಅಭಿವೃದ್ಧಿಪಡಿಸಿ ಸಾವಿರಾರು ತಳಿಗಳನ್ನು ಸಂಶೋಧಿಸಿದ್ದೇವೆ ಅದರೆ ಹಿಂದಿನ ಕುಟ್ಟಿ ತೆಗೆದ ಅಕ್ಕಿಯ ರುಚಿ ಈಗ ಬರುವುದಿಲ್ಲ ಎಂದು ವಿಷಾಧಿಸಿದರು.

    ಮೂರೊತ್ತು ಅಕ್ಕಿ ತಿನ್ನುವುದನ್ನು ಬಿಟ್ಟು ಪಾಲೀಶ್ ಆಗದ ಅನ್ನದ ಗಂಜಿ ಮಾಡಿ ಊಟ ಮಾಡಿದರೆ ಆಹಾರ ಸರಿಯಾದ ಕ್ರಮದಲ್ಲಿ ಜೀರ್ಣವಾಗಿ ಸಕ್ಕರೆಯನ್ನು ದೇಹಕ್ಕೆ ನೀಡಿ ಶಕ್ತಿ ನೀಡುತ್ತದೆ ಎಂದು ತಿಳಿಸಿದರು.

    ವೇದಿಕೆಯಲ್ಲಿ ಶಿವಮೊಗ್ಗ ವಿ.ವಿ ಉಪಕುಲಪತಿ ಜಗದೀಶ್, ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್, ಸಂತೃಪ್ತ ಸಿರಿಧಾನ್ಯಗಳ ಉದ್ಯಮಿ ಮಂಜುನಾಥ್, ಮಾಜಿ ಜಿ.ಪಂ ಸದಸ್ಯೆ ಹೇಮಾವತಿ, ಆನಂದ್ ಗುರೂಜಿ, ಚಂದ್ರಶೇಖರ್ ನಾರಾಯಣಪುರ, ಶಂಕರ್ ನಾಯಕ್, ರವಿ, ಈಶ್ವರಪ್ಪ, ಕೆಂಗೇಗೌಡ, ಚಿದಾನಂದಮೂರ್ತಿ, ರಜಿತ್, ಸಂತೋಷ್ ಉಪಸ್ಥಿತರಿದ್ದರು.

    ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸುಜಾತ ಪ್ರಾಸ್ತಾವಿಕವಾಗಿ ಮಾತನಾಡಿದರು. ಮೊದಲಿಗೆ ಹಂಸವೇಣಿ ಸ್ವಾಗತಿಸಿದರು.

    District Level Organic and Cereal Festival 2024-25