Category: ಚಿಕ್ಕಮಗಳೂರು ನಗರ

  • ಮಾನವನ ದುರಾಸೆ-ಯಾಂತ್ರೀಕರಣ ಜೀವನದಿಂದ ಪ್ರಕೃತಿ ಮಲೀನ

    ಮಾನವನ ದುರಾಸೆ-ಯಾಂತ್ರೀಕರಣ ಜೀವನದಿಂದ ಪ್ರಕೃತಿ ಮಲೀನ

    ಚಿಕ್ಕಮಗಳೂರು: ಪ್ರಾಕೃತಿಕ ಹಾನಿ, ಧೂಮಕೇತು ಅಪ್ಪಳಿಸುವ ಅಥವಾ ಜ್ವಾಲಮುಖಿಗ ಳಿಂದ ವಿಶಾಲ ಭೂಮಿಗೆ ಹಾನಿ ಸಂಭವಿಸುತ್ತಿಲ್ಲ. ಮಾನವನ ದುರಾಸೆ ಹಾಗೂ ಯಂತ್ರೀಕರಣ ಜೀವನ ಶೈ ಲಿಯಿಂದ ಪ್ರಕೃತಿ ಮಲೀನಗೊಂಡು ಹಂತ ಹಂತವಾಗಿ ಕುಗ್ಗುತ್ತಿದೆ ಎಂದು ಪರಿಸರವಾದಿ ಡಾ|| ಸಂಜೀವ್ ಕುಲಕರ್ಣಿ ಹೇಳಿದರು.

    ತಾಲ್ಲೂಕಿನ ತೊಂಗರಿಹಂಕಲ್ ಗ್ರಾಮದಲ್ಲಿ ಅಂತರಾಷ್ಟ್ರೀಯ ರೋಟರಿ ಜಿಲ್ಲೆ-೩೧೮೨ ಹಾಗೂ ರೋಟರಿ ಕಾಫಿಲ್ಯಾಂಡ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ಧ ಭೂಮಿಯನ್ನು ಸಂರಕ್ಷಿಸುವ ಕುರಿತು ಜಿಲ್ಲಾ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ವಿಶಾಲ ಬ್ರಹ್ಮಾಂಡದ ಭೂಗರ್ಭದಲ್ಲಿ ಮಾತ್ರ ಜೀವಸಂಕುಲ ಸೃಷ್ಟಿ ಮತ್ತು ವಿಕಸನ ಹೊಂದಿವೆ. ಕಾಲ ಕ್ರಮೇಣ ಮನುಷ್ಯಪ್ರಬೇಧಗಳು ಶುರುವಾದರೂ ಪ್ರಾಕೃತಿಕ ಸಂಪತ್ತು ಏರುಪೇರಾಗಿಲ್ಲ. ಆದರೆ ಕಳೆದ ಮೂ ನ್ನೂರು ವರ್ಷಗಳಿಂದ ಮಾನವ ಆಧುನಿಕತೆಗೆ ಶರಣಾಗಿ ಅರಣ್ಯ ಸಂಪತ್ತನ್ನು ಸರ್ವ ನಾಶಗೊಳಿಸಿ ವಿಶ್ವನ್ನು ಅಳಿನಂಚಿನತ್ತ ಕೊಂಡೊಯ್ಯುತ್ತಿದ್ದಾನೆ ಎಂದು ಹೇಳಿದರು.

    ಮೊಟ್ಟಮೊದಲು ಪ್ರಪಂಚದಲ್ಲಿ ಮಾನವ ಎರಡು ಕಾಲಿನಿಂದ ನಿಯಂತ್ರಣ ಕಂಡುಕೊಂಡನು, ಪ್ರಾಣಿ ಪ್ರಬೇಧಗಳು ಕಾಣಿಸಿದವು. ಒತ್ತಡವಿರದ ಪರಿಸರಸ್ನೇಹಿ ವಾತಾವರಣವು ನಿರ್ಮಾಣವಾಯಿತು. ಕಾಲ ಉರು ಳಿದಂತೆ ಮಾನವ ಯಾಂತ್ರೀಕರಣ ಸೃಷ್ಟಿಸಿ, ಕೆಲವೇ ಸಮಯದಲ್ಲಿ ತಂತ್ರಜ್ಞಾನ ಇಡೀ ಪ್ರಪಂಚವನ್ನು ಅತಿ ವೇಗವಾಗಿ ಆವರಿಸಿಕೊಂಡು ಭೂಗರ್ಭವನ್ನು ಸುಡುವಂತಾಯಿತು ಎಂದರು.

    ವಿಪರೀತ ಪ್ಲಾಸ್ಟಿಕ್ ಬಳಕೆ, ವೈಯಕ್ತಿಕ ಲಾಭದ ಉದ್ದೇಶದಿಂದ ಅರಣ್ಯ ಸಂಪತ್ತು ನಾಶಮಾಡಿ ವಾಣಿ ಜ್ಯೀಕರಣಗೊಳಿಸಿ ಮನುಷ್ಯ ಭೂಸಿರಿಯನ್ನು ಅಲ್ಲಗೆಳೆದನು. ಯಾವುದೇ ತಂತ್ರಜ್ಞಾನ ಅಥವಾ ರಾಜಕೀ ಯ ದಿಂದ ಪರಿಸರವನ್ನು ಸರಿಪಡಿಸಲು ಸಾಧ್ಯವಿಲ್ಲ. ಪ್ರತಿಯೊಬ್ಬ ನಾಗರೀಕರ ಕೈನಲ್ಲಿದೆ. ಹಚ್ಚಹಸಿನಿಂದ ಪರಿಸರ ಕಾಪಾಡುವುದು, ಜಲಮೂಲ ಉಳಿಸುವ ಕಾರ್ಯವಾಗಬೇಕಿದೆ ಎಂದರು.

    ದೈನಂದಿನ ಸೇವಿಸುವ ಆಹಾರ ಉತ್ಪನ್ನಗಳು ಎಲ್ಲಿಂದ ಬರಲಿವೆ ಎಂಬ ಆತ್ಮಾವಲೋಕನದ ಪ್ರಶ್ನೆ ಮಾ ಡಿಕೊಳ್ಳಬೇಕು. ಫಲವತ್ತತೆ ಮಣ್ಣನ್ನು ಕಲುಷಿತಗೊಳಿಸುವ ಹಕ್ಕು ಯಾರಿಗೂ ಇಲ್ಲ. ಪರಿಸರ ಕಾಳಜಿ ಪ್ರತಿ ಯೊಬ್ಬರ ಹಕ್ಕು ಎಂಬ ಧ್ಯೇಯ ಸೂತ್ರಗಳನ್ನು ನಾಗರೀಕರು ಬದುಕಿನಲ್ಲಿ ಅಳವಡಿಸಿಕೊಂಡಾಗ ವಿಶಾಲ ಭೂಮಂಡಲ ಸುರಕ್ಷಿತವಾಗಿ ರಕ್ಷಿಸಬಹುದು ಎಂದು ಸಲಹೆ ಮಾಡಿದರು.

    ಭೂರಕ್ಷಿಸುವ ಸಂಬಂಧ ರೋಟರಿ ಕಾಫಿಲ್ಯಾಂಡ್ ವಿಶೇಷ ಉಪನ್ಯಾಸ ಹಮ್ಮಿಕೊಂಡು ಕಾರ್ಯೋನ್ಮು ಖವಾಗಿವೆ. ಮಲೆನಾಡು ಪ್ರದೇಶ ಜಿಲ್ಲೆ ವಿಶಿಷ್ಟ ತಾಣವಾಗಿದ್ದು, ನೈಸರ್ಗಿಕವಾಗಿ ಸಂಪತ್ಪರಿತ ಭೌಗೋಳಿಕವಾ ಗಿ ವಿಶಾಲ ವಿಸ್ತೀರ್ಣ ಹೊಂದಿರುತ್ತದೆ. ಪಂಚನದಿಗಳ ಉಗಮ ಸ್ಥಾನವಾಗಿದ್ದು ಇಡೀ ರಾಜ್ಯಕ್ಕೆ ಜೀವ ಜಲದ ನೆಲೆಯಾಗಿರುವುದು ಹೆಮ್ಮೆಯ ಸಂಗತಿ ಎಂದರು.

    ರೋಟರಿ ಜಿಲ್ಲಾ ಗವರ್ನರ್ ಸಿ.ಎ.ದೇವಾನಂದ್ ಪ್ರಾಸ್ತಾವಿಕವಾಗಿ ಮಾತನಾಡಿ ಭೂಸಿರಿ ಪ್ರಾಮುಖ್ಯತೆ, ಜವಾಬ್ದಾರಿ ಪ್ರತಿಯೊಬ್ಬ ಕರ್ತವ್ಯ ಪರಿಚಯಿಸುವ ಕಾರ್ಯಕ್ರಮ. ಹಸಿರು, ಮಣ್ಣು ಸಮಗ್ರವಾಗಿ ಬಳಸಿಕೊ ಳ್ಳಲು ರೋಟರಿ ಪ್ರೇರೇಪಿಸುತ್ತಿದೆ. ಸಂಪತ್ಪರಿತ ಭೂಮಿಯನ್ನು ಸಂರಕ್ಷಿಸುವ ಕುರಿತು ಎಲ್ಲರು ಕೈಜೋಡಿಸಬೇ ಕು ಎಂದು ಕಿವಿಮಾತು ಹೇಳಿದರು.

    ಈಗಾಗಲೇ ರೋಟರಿ ೪೦೦ಕ್ಕೂ ಹೆಚ್ಚು ಸದಸ್ಯರನ್ನು ಹೊಸದಾಗಿ ಸೇರ್ಪಡೆಗೊಳಿಸಿ ಮುನ್ನೆಡೆ ಸಾಧಿಸು ತ್ತಿರುವುದು ಸಂತೋಷ ವಿಷಯ. ಈ ಶ್ರಮದ ಹಿಂದೆ ಪ್ರತಿಯೊಬ್ಬರ ಬಹಳಷ್ಟು ಕೆಲಸವಿದ್ದು ಮುಂದಿನ ದಿನ ಗಳಲ್ಲಿ ಇನ್ನಷ್ಟು ಹೆಚ್ಚಿನ ಸದಸ್ಯರನ್ನು ನೋಂದಾಯಿಸಿ ಸಾಮಾಜಿಕ ಕಾರ್ಯಗಳತ್ತ ಹೆಜ್ಜೆಹಾಕಬೇಕಿದೆ ಎಂ ದರು.

    ಈ ಸಂದರ್ಭದಲ್ಲಿ ಮಂಗಳೂರು ಮೀನುಗಾರಿಕೆ ಕಾಲೇಜು ಮಾಜಿ ಡೀನ್ ಡಾ|| ಶಿವಕುಮಾರ್ ಮಗಲ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್ ಕ್ಯಾತನಬೀಡು, ರೋಟರಿ ಜಿಲ್ಲಾ ಸಲಹೆಗಾರ ಅಭಿನಂದನ್ ಎ.ಶೆಟ್ಟಿ, ಕಲಿಕೆ ಸಹಾಯಕ ಬಿ.ರಾಜರಾಂ ಭಟ್, ಸಹಾಯಕ ಗವರ್ನರ್ ನಾಸೀರ್ ಹುಸೇನ್, ರೋಟರಿ ಕಾಫಿಲ್ಯಾಂಡ್ ಅಧ್ಯಕ್ಷ ಪಿ.ತನೋಜ್‌ಕುಮಾರ್, ಕಾರ್ಯದರ್ಶಿ ನಾಗೇಶ್ ಕೆಂಜಿಗೆ, ಭೂಸಂರಕ್ಷ ಅಧ್ಯಕ್ಷ ಕೆ.ಬಿ.ಪ್ರಸನ್ನ, ಪದಾ ಧಿಕಾರಿಗಾಳದ ರಾಮದೇವ್ ಕಾಮತ್, ಎಂ.ಆನಂದ್ ಉಪಸ್ಥಿತರಿದ್ದರು.

    Nature is polluted by human greed and mechanized life.

  • ಹೈನುಗಾರಿಕೆ ಉಳಿವಿಗೆ ಜಾನುವಾರು ಸಂರಕ್ಷಣೆ ಅಗತ್ಯ

    ಹೈನುಗಾರಿಕೆ ಉಳಿವಿಗೆ ಜಾನುವಾರು ಸಂರಕ್ಷಣೆ ಅಗತ್ಯ

    ಚಿಕ್ಕಮಗಳೂರು: ಮಕ್ಕಳಿಗೆ ಎದೆ ಹಾಲು ಎಷ್ಟು ಮುಖ್ಯವೋ, ಹಸುವಿನ ಹಾಲೂ ಅಷ್ಟೇ ಮುಖ್ಯ, ಹಾಲು ಕೊಡುವ ಹಸು, ಜಾನುವಾರುಗಳ ಸಂರಕ್ಷಣೆ ಸಲುವಾಗಿ ಸರಕಾರ ಪ್ರತಿವರ್ಷ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ ನಡೆಸುತ್ತಿದ್ದು ರೈತರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

    ತಾಲೂಕಿನ ಹಿರೇಗೌಜದಲ್ಲಿ ಪಶುಸಂಗೋಪನಾ ಇಲಾಖೆಯಿಂದ ಭಾನುವಾರ ಹಮ್ಮಿಕೊಂಡಿದ್ದ ೭ ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಉದ್ಗಾಟಿಸಿ ಅವರು ಮಾತನಾಡಿದರು. ಹಸುವನ್ನು ಕಾಮಧೇನುವಿಗೆ ಹೋಲಿಸುತ್ತೇವೆ, ಪೂಜನೀಯ ಭಾವದಿಂದ ನೋಡುತ್ತೇವೆ. ಅಂತಹ ಹಸುಗಳ, ಜಾನುವಾರುಗಳ ಸಂರಕ್ಷಣೆ ಸರಕಾರದ ಹೊಣೆ. ಹೀಗಾಗಿ ಪ್ರತಿ ವರ್ಷ ಕಾಲುಬಾಯಿ ಜ್ವರದ ಲಸಿಕಾ ಅಭಿಯಾನ ನಡೆಸಿ ಹಾಲಿನ ಉತ್ಪನ್ನ ಹೆಚ್ಚಿಸಿ ರೈತರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದರು.

    ಮನುಷ್ಯರ ರೋಗ ನಿಯಂತ್ರಣಕ್ಕೆ ಹೇಗೆ ಲಸಿಕೆಗಳಿವೆಯೋ ಅದೇ ಮಾದರಿಯಲ್ಲಿಜಾನುವಾರುಗಳಿಗೆ ಯಾವುದೆ ಕಾಯಿಲೆ ಬರದಂತೆ ಲಸಿಕೆ ಹಾಕುತ್ತಿದ್ದು ರೈತರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಹಿಂದಿನಿಂದಲೂ ನಮ್ಮ ಹಿರಿಯರು ಹಸುಸಾಕಾಣೆ ಮಾಡಿ ಜೀವನ ನಡೆಸಿದ್ದಾರೆ. ಇತ್ತೀಚೆಗೆ ಸರಕಾರಗಳು ಉತ್ತಮ ತಳಿಯ ಹಸುಗಳನ್ನು ಪರಿಚಯಿಸಿದ್ದು ಇದರಿಂದ ಹಾಲಿನ ಪ್ರಮಾಣವೂ ಹೆಚ್ಚಾಗಿದೆ. ಹೀಗಾಗಿ ವಿದೇಶಕ್ಕೂ ಹಾಲಿನ ಉತ್ಪನ್ನಗಳು ರಫ್ತಾಗುತ್ತಿವೆ ಎಂದರು. ಹಾಲು ವಿದೇಶಕ್ಕೆ ಹೋಗಬೇಕಾದರೆ ಹಾಲಿನ ಗುಣಮಟ್ಟ ಉತ್ತಮವಾಗಿರಬೇಕು. ಈ ನಿಟ್ಟಿನಲಿ ಅಧಿಕಾರಿಗಳು ರೈತರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.

    ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಮೋಹನ್‌ಕುಮಾರ್ ಮಾತನಾಡಿ, ಕಳೆದ ೧೨ ವರ್ಷದಿಂದ ಸತತವಾಗಿ ಕಾಲುಬಾಯಿ ಜ್ವರದ ಲಸಿಕೆ ಹಾಕಲಾಗುತ್ತಿದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಆ ರೋಗ ಲಕ್ಷಣಗಳು ಕಡಿಮೆಯಾಗಿದೆ. ದೇಶದ ಅಭಿವೃದ್ಧಿಗೆ ಇದು ಕೂಡ ಪೂರಕ. ಮನೆ ನಾಯಿಗಳಿದ್ದರೆ ಉಚಿತವಾಗಿ ರ್‍ಯಾಬಿಸ್ ಚುಚ್ಚುಮದ್ದು ನೀಡುತ್ತೇವೆ. ಬೀದಿ ನಾಯಿ ಹಿಡಿದು ತಂದಲ್ಲಿ ಅವುಗಳಿಗೂ ಲಸಿಕೆ ನೀಡಲಾಗುವುದು ಎಂದು ಹೇಳಿದರು.

    ಹಿರೇಗೌಜ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳ, ಸಹಾಯಕ ಉಪನಿರ್ದೇಶಕ ಡಾ.ಹೇಮಂತ್‌ಕುಮಾರ್, ಪಶುವೈದ್ಯಾಕಾರಿ ಡಾ.ಚೈತ್ರಾ, ಡಾ,ವೀಣಾಕುಮಾರಿ ಮತ್ತಿತರೆ ಸಿಬ್ಬಂದಿಇದ್ದರು.

    Livestock conservation is essential for the survival of dairy farming

  • ಡೆಂಟಲ್ ಥೆರಪಿ ಮೂಲಕ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಬೇಸಿಗೆ ಶಿಬಿರ

    ಡೆಂಟಲ್ ಥೆರಪಿ ಮೂಲಕ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಬೇಸಿಗೆ ಶಿಬಿರ

    ಚಿಕ್ಕಮಗಳೂರು: ಮಕ್ಕಳಿಗೆ ಯೋಗ ಕಲಿಸುವ ಜೊತೆಗೆ ಹಲ್ಲುಗಳ ತೊಂದರೆ ನಿವಾರಣೆಗೆ ಡೆಂಟಲ್ ಥೆರಪಿ ಮೂಲಕ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಬೇಸಿಗೆ ಶಿಬಿರವನ್ನು ೧೪ ರಿಂದ ೧೬ ವರ್ಷದ ಮಕ್ಕಳಿಗೆ ಮೇ.೬ ರಿಂದ ೧೦ ರವರೆಗೂ ಹಾಗೂ ೧೮ ವರ್ಷ ಮೇಲ್ಪಟ್ಟವರಿಗೆ ಮೇ.೧೨ ರಿಂದ ೧೬ ರವರೆಗೆ ನಗರದ ಬಸವನಹಳ್ಳಿಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರೀಸ್ ವಿಶ್ವವಿದ್ಯಾಲಯದ ಜ್ಞಾನ ಪ್ರಕಾಶ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯೋಗ ತರಬೇತುದಾರ ಡಾ.ಬಾಸ್ಕರ್ ತಿಳಿಸಿದರು.

    ಅವರು ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಯೋಗ ಇಂದು ವಿಶ್ವಮಾನ್ಯತೆಯನ್ನು ಪಡೆದುಕೊಂಡಿದೆ. ಆರೋಗ್ಯ ಪೂರ್ಣ ಜೀವನಕ್ಕೆ ಯೋಗ ಅವಿಭಾಜ್ಯ ಅಂಗವಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಯೋಗ ಕಲಿಸಿಕೊಡುವ ಸಲುವಾಗಿ ಬೇಸಿಗೆ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

    ೮ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ಮೇ.೬ ರಿಂದ ೧೦ ರವರೆಗೆ ಯೋಗ ಕಲಿಸಿಕೊಡಲಾಗುವುದು. ಹಾಗೇ ೧೦ ವರ್ಷ ಮೇಲ್ಪಟ್ಟವರಿಗೆ ಮೇ.೧೨ ರಿಂದ ೧೬ ರವರೆಗೆ ಯೋಗ ಶಿಕ್ಷಣ ಹೇಳಿಕೊಡಲಾಗುವುದು. ಶಿಬಿರದಲ್ಲಿ ಹಲ್ಲಿನ ಸಮಸ್ಯೆ ಇದ್ದವರಿಗೆ ೧೬ ತರಹದ ದಂತ ಥೆರಪಿಯನ್ನು ಹೇಳಿಕೊಡಲಾಗುವುದು. ಇದು ಮಧುಮೇಹ ಮತ್ತು ಅಸ್ತಮಾ ಇದ್ದವರಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.

    ಹಿಮಾತಾರಕ ಯೋಗಾಸನದ ಒಂದು ಭಾಗವಾಗಿದ್ದು, ದೂರದೃಷ್ಟಿ ಮತ್ತು ಸಮೀಪ ದೃಷ್ಟಿದೋಷ ಇದ್ದವರಿಗೆ ಅನುಕೂಲವಾಗಲಿದೆ. ಹಿಮಾಥೆರಪಿಯಿಂದ ವೈರಲ್ ಜ್ವರ ಬಾರದಂತೆ ತಡೆಗಟ್ಟಬಹುದು ಎಂದ ಅವರು, ಯೋಗದ ಜತೆಗೆ ಧ್ಯಾನ, ರಾಜಯೋಗ ಸೇರಿದಂತೆ ಇತರೆ ಆಸನಗಳನ್ನು ಮಕ್ಕಳಿಗೆ ಹೇಳಿಕೊಡಲಾಗುವುದು ಎಂದರು.

    ಶಿಬಿರದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ವಸತಿ ಹಾಗೂ ಪೌಷ್ಠಿಕಯುಕ್ತ ಆಹಾರವನ್ನು ನೀಡಲಾಗುವುದು ಎಂದ ಅವರು, ಪ್ರವೇಶಾತಿಗೆ ಶುಲ್ಕ ವಿಧಿಸಿದ್ದು, ೧೪ ರಿಂದ ೧೬ ವರ್ಷದ ಮಕ್ಕಳಿಗೆ ಮೂರು ಸಾವಿರ ರೂ. ಹಾಗೂ ೧೮ ವರ್ಷ ಮೇಲ್ಪಟ್ಟವರಿಗೆ ಆರು ಸಾವಿರ ರೂ. ನಿಗಧಿಪಡಿಸಲಾಗಿದೆ.

    ನೋಂದಣಿ ಬಯಸುವವರು ೮೧೯೭೭೨೬೩೩೪, ೬೩೬೦೪೨೦೧೪೧ ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಗಂಗಾಧರ್ ಇದ್ದರು.

    Summer camp for treatment through dental therapy

  • ಆಧುನಿಕತೆಗೆ ತಕ್ಕಂತ ವೈದ್ಯಕೀಯ ಉಪಕರಣ ಬದಲಾವಣೆ

    ಆಧುನಿಕತೆಗೆ ತಕ್ಕಂತ ವೈದ್ಯಕೀಯ ಉಪಕರಣ ಬದಲಾವಣೆ

    ಚಿಕ್ಕಮಗಳೂರು: ಆಧುನಿಕತೆ ಬೆಳೆದಂತೆ ವೈದ್ಯಕೀಯ ಉಪಕರಣಗಳು ಬದಲಾವಣೆ ಯಾಗುತ್ತಿವೆ. ಡಿಜಿಟಲ್ ಸ್ಟೆತೊಸ್ಕೋಪ್‌ನ ಅತ್ಯಾಧುನಿಕ ತಂತ್ರಜ್ಞಾನದಿಂದ ರೋಗಿಯ ಲಕ್ಷಣಗಳು ಶೀಘ್ರಗತಿ ಯಲ್ಲಿ ಕಂಡು ಹಿಡಿಯಲು ಸಾಧ್ಯವಾಗುತ್ತಿದೆ ಎಂದು ಆಯು ಡಿವೈಜ್ಸ್ ಸಂಸ್ಥೆ ಮುಖ್ಯಕಾರ್ಯನಿರ್ವಹಣಾ ಧಿಕಾರಿ ಕೆ.ಆದರ್ಶ ಹೇಳಿದರು.

    ನಗರದ ಆದಿಚುಂಚನಗಿರಿ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ವಿದ್ಯುತ್ ಮತ್ತು ವಿದ್ಯುನ್ಮಾನ ಎಂಜಿನಿಯರಿಂಗ್ ವಿಭಾಗ ವಿದ್ಯಾರ್ಥಿಗಳಿಗೆ ಆಯೋಜಿಸಿದ್ಧ ‘ವಿದ್ಯುಯೂತ್’ ಕಾರ್ಯಕ್ರಮವನ್ನು ಶನಿವಾರ ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು.

    ವೈದ್ಯಕೀಯ ಕ್ಷೇತ್ರದಲ್ಲಿ ಇತ್ತೀಚೆಗೆ ಹೊಸ ಹೊಸ ಆವಿಷ್ಕಾರಗಳು ಪ್ರಚಲಿತಕ್ಕೆ ಬರುತ್ತಿವೆ. ಅತ್ಯಾಧುನಿಕ ತಂತ್ರಜ್ಞಾನದಿಂದ ಹೊಸ ಆಯಾಮವನ್ನೇ ವೈದ್ಯಲೋಕ ಸೃಷ್ಟಿಸುತ್ತಿದೆ. ಆಪರೇಷನ್ ಅಥವಾ ಇನ್ನಿತರೆ ಚಿಕಿ ತ್ಸೆಗಳಿಗೆ ತಂತ್ರಜ್ಞಾನ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

    ಉತ್ತಮ ಆರೋಗ್ಯ ಸೇವಾ ಅನುಭವಕ್ಕಾಗಿ ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಇಜಿ ಜಿ, ಡಿಜಿಟಲ್ ಸ್ಟೆತೊಸ್ಕೋಪ್ ಹಾಗೂ ಭವಿಷ್ಯದಲ್ಲಿ ಬೆರಳು ಆಧಾರಿತ ರಕ್ತದೊತ್ತಡವನ್ನು ಕಂಡುಹಿಡಿಯ ಬಹುದು. ಸ್ಪ?ತೆ ಮತ್ತು ನಿಖರತೆಗಾಗಿ ಮೀಸಲಾದ ಫಿಲ್ಟರ್ ಅನ್ನು ಒದಗಿಸಲು ಈ ತಂತ್ರಜ್ಞಾನವನ್ನು ವಿನ್ಯಾ ಸಗೊಳಿಸಲಾಗಿದೆ ಎಂದರು.

    ನಿಖರವಾದ ರೋಗನಿರ್ಣಯ ಮತ್ತು ಮೇಲ್ವಿಚಾರಣೆಗಾಗಿ ಔ?ಧದೊಂದಿಗೆ ತಂತ್ರಜ್ಞಾನವನ್ನು ಮಿಶ್ರ ಣ ಮಾಡುವ ಮೂಲಕ ಆರೋಗ್ಯವನ್ನು ಸುಧಾರಿಸಲು ಮತ್ತು ಜೀವಿತಾವಧಿಯನ್ನು ವಿಸ್ತರಿಸಲು ನಾವು ಶ್ರ ಮಿಸುತ್ತೇವೆ. ಆರೋಗ್ಯದ ಫಲಿತಾಂಶಗಳನ್ನು ಹೆಚ್ಚಿಸಲು ನವೀನ ಆರೋಗ್ಯ ಉತ್ಪನ್ನಗಳು ಮತ್ತು ಅಸಾಧಾ ರಣ ಸೇವೆಯನ್ನು ನೀಡುವುದು ಧ್ಯೇಯವಾಗಿದೆ ಎಂದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಐಟಿ ಕಾಲೇಜು ಪ್ರಾಂಶುಪಾಲ ಡಾ|| ಸಿ.ಟಿ.ಜಯದೇವ್ ಜ್ಞಾನದ ಬೆಳಕು ಎಲ್ಲಿಂದ ಬಂದರೂ ಸ್ವೀಕರಿಸುವ ಗುಣ ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಜ್ಞಾನದ ಹಸಿ ವಿದವನಿಗೆ ಮಾತ್ರ ಬೆಳಕಿನ ಮಹತ್ವ ತಿಳಿಯಲಿದೆ. ಹೀಗಾಗಿ ಹೊಸ ಆವಿಷ್ಕಾರಗಳತ್ತ ಆಸಕ್ತಿ ವಹಿಸಬೇಕು ಎಂ ದು ಹೇಳಿದರು.

    ಬದುಕಿನಲ್ಲಿ ವಿದ್ಯಾಭ್ಯಾಸ ಹಾಗೂ ಅನುಭವಗಳು ಆಳವಾಗಿ ಇದ್ದಲ್ಲಿ ಯಾವುದೇ ಜಟಿಲ ಸಮಸ್ಯೆಗಳ ನ್ನು ಕ್ಷಣಾರ್ಧದಲ್ಲಿ ಅರಿತು ಪರಿಹರಿಸಲು ಸಾಧ್ಯ. ಹೀಗಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಆದರ್ಶ ಅತ್ಯು ತ್ತಮ ಉದಾಹರಣೆ ಎಂದ ಅವರು ಕೋವಿಡ್ ಸಮಯದಲ್ಲಿ ವಿಶೇಷವಾಗಿ ಸೇವೆ ಸಲ್ಲಿಸುವ ಮೂಲಕ ಜೀ ವ ಮತ್ತು ಜೀವನ ಕಾಪಾಡಿದ್ದಾರೆ ಎಂದರು.

    ವಿದ್ಯುತ್ ಮತ್ತು ವಿದ್ಯುನ್ಮಾನ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ|| ಜಿ.ಆರ್.ವೀರೇಂದ್ರ ಮಾತ ನಾಡಿ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಂಯಮ, ವಿನಯ ಅತಿಮುಖ್ಯ. ಕಾರ್ಯಾಗಾರದ ವಿಶೇಷ ಮಾಹಿತಿ ಯನ್ನು ಅರಿತು ಮುನ್ನೆಡೆದರೆ ಮಾತ್ರ ಸಮಾಜದಲ್ಲಿ ಸ್ಥಾನಮಾನ ಗಳಿಸಲು ಸಾಧ್ಯ ಹಾಗೂ ಸುಂದರತೆ ಬದು ಕು ಸಿಗಲಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ|| ಜೆ.ಎಂ.ಸತ್ಯನಾರಾಯ ಣ್, ಮಾಹಿತಿ ವಿಜ್ಞಾನದ ಮುಖ್ಯಸ್ಥ ಡಾ|| ಸಂಪತ್, ಸಂಯೋಜಕರಾದ ವಸಂತ್‌ಕುಮಾರ್, ಶ್ರೀಧರ್ ಉಪಸ್ಥಿತರಿದ್ದರು. ಕು.ಲಿಖಿತ ಸಂಗಡಿಗರು ಪ್ರಾರ್ಥಿಸಿ ದರು. ಕು.ಸ್ಪೂರ್ತಿ ಸ್ವಾಗತಿಸಿದರು. ವಿಜಯವಿಕ್ರಮ್, ಶಾಯಿಲಾ ನಿರೂಪಿಸಿದರು. ಕು.ಅರ್ಚನ ವಂದಿಸಿದರು.

    Changing medical equipment to suit modern times

  • ಅರಣ್ಯಇಲಾಖೆ ಗಾರ್ಡ್‌ಗೆ ವೇತನ ಬಿಡುಗಡೆ ಮಾಡದಿದ್ದರೆ ದಸಂಸ ಅಹೋರಾತ್ರಿ ಧರಣಿ

    ಅರಣ್ಯಇಲಾಖೆ ಗಾರ್ಡ್‌ಗೆ ವೇತನ ಬಿಡುಗಡೆ ಮಾಡದಿದ್ದರೆ ದಸಂಸ ಅಹೋರಾತ್ರಿ ಧರಣಿ

    ಚಿಕ್ಕಮಗಳೂರು: ಜಿಲ್ಲೆಯ ಭದ್ರಾ ಅಭಯಾರಣ್ಯ ವ್ಯಾಪ್ತಿಯ ತಣಿಗೆಬೈಲ್ ವಲಯದಲ್ಲಿ ಗಾರ್ಡ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅರುಣ್ ಕುಮಾರ್ ಎಂಬುವವರಿಗೆ ಕಳೆದ ೧೦ ತಿಂಗಳಿನಿಂದ ವೇತನ ನೀಡದೆ ಸತಾಯಿಸುತ್ತಿರುವ ಅರಣ್ಯಾಧಿಕಾರಿಗಳ ದೌರ್ಜನ್ಯವನ್ನು ದಲಿತ ಸಂಘರ್ಷ ಸಮಿತಿ ತೀವ್ರವಾಗಿ ಖಂಡಿಸಿದೆ.

    ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಸಂಸ ರಾಜ್ಯ ಸಂಘಟನಾ ಸಂಚಾಲಕ ದಂಟರಮಕ್ಕಿ ಶ್ರೀನಿವಾಸ್ ಭದ್ರಾ ಹುಲಿ ಯೋಜನೆಗೆ ಒಳಪಡುವ ತಣಿಗೆಬೈಲು ವಲಯದಲ್ಲಿ ೨೦೨೩ ರಲ್ಲಿ ಸುಮಾರು ೮೦ ಕ್ಕೂ ಹೆಚ್ಚು ಸಾಗುವಾನಿ ಮರಗಳನ್ನು ಕಡಿತಲೆ ಮಾಡಲಾಗಿದ್ದು, ಈ ಸಂಬಂಧ ಅರುಣ್ ಕುಮಾರ್, ಸದ್ದಾಂ ಹುಸೇನ್, ಫಾರೆಸ್ಟರ್ ಸುನಿಲ್ ಕುಮಾರ್ ಎಂಬುವವರನ್ನು ಕರ್ತವ್ಯಲೋಪದ ಮೇಲೆ ೨೦೨೪ ರ ಜ.೨೪ ರಂದು ಅಮಾನತು ಮಾಡಲಾಗಿತ್ತು ಎಂದು ಮಾಹಿತಿ ನೀಡಿದರು.

    ೧-೭-೨೦೨೪ ರಂದು ಐದು ತಿಂಗಳ ನಂತರ ಅಮಾನತನ್ನು ರದ್ದುಪಡಿಸಿ ಕರ್ತವ್ಯಕ್ಕೆ ಹಾಜರಾಗಿದ್ದು, ಅರಣ್ಯ ಆಡಳಿತಾಧಿಕಾರಿಗಳು ಈವರೆಗೆ ಅರುಣ್ ಕುಮಾರ್ ಎಂಬ ನೌಕರನಿಗೆ ವೇತನ ನೀಡದೆ ಮಾನಸಿಕವಾಗಿ ಅವರ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿದರು.

    ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಅರಣ್ಯ ಇಲಾಖೆಯ ಸಿಸಿಎಫ್ ಮತ್ತು ಡಿಎಫ್‌ಓಗಳು ಈ ಪ್ರಕರಣದ ನಿಜವಾದ ಆರೋಪಿಗಳನ್ನು ರಕ್ಷಣೆ ಮಾಡುವ ಸಲುವಾಗಿ ಈ ಮೂವರಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆಂದು ಸಂಘಟನೆಗೆ ಬಂದ ದೂರಿನನ್ವಯ ಅರಣ್ಯಾಧಿಕಾರಿಗಳನ್ನು ಭೇಟಿಮಾಡಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ದೂರಿದರು.

    ಅರುಣ್ ಕುಮಾರ್ ಖಾಲಿ ಪತ್ರಕ್ಕೆ ಸಹಿ ಹಾಕಿಕೊಡಲಿಲ್ಲ, ಅಧಿಕಾರಿಗಳು ಹೇಳಿದಂತೆ ನಡೆದುಕೊಂಡು ಹೇಳಿಕೆ ನೀಡಲಿಲ್ಲ ಎಂಬ ಕಾರಣಕ್ಕೆ ಕಳೆದ ೧೦ ತಿಂಗಳಿಂದ ವೇತನ ನೀಡದೆ ತೊಂದರೆ ನೀಡುತ್ತಿದ್ದು, ಕಡಿತಲೆಯಾಗಿರುವ ೮೦ಕ್ಕೂ ಹೆಚ್ಚು ಸಾಗುವಾನಿ ಮರಗಳನ್ನು ಎಲ್ಲಿಗೆ ಸಾಗಿಸಲಾಯಿತು ಎಂಬುದು ಬಹಿರಂಗೊಂಡಿದೆ ಎಂದರು.

    ಕೂಡಲೇ ಈ ನೌಕರನಿಗೆ ವೇತನವನ್ನು ಬಿಡುಗಡೆಮಾಡಿ ಅವರ ಕುಟುಂಬಕ್ಕೆ ಸ್ಪಂದಿಸದಿದ್ದರೆ ಏ.೨೯ ರಂದು ಅರಣ್ಯ ಇಲಾಖೆಯ ಎದುರು ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಲಾಗಿದೆ. ಜಿಲ್ಲೆಗೆ ಬರುವ ಯಾವುದೇ ಸಚಿವರನ್ನು ಪ್ರಶ್ನಿಸುವುದಾಗಿ ಎಚ್ಚರಿಸಿದರು.

    ಈ ಪ್ರತಿಭಟನೆಗೆ ಪ್ರಗತಿಪರ ಸಂಘಟನೆಗಳು, ದಲಿತ ಪರ ಹೋರಾಟಗಾರರು ಬೆಂಬಲಿಸಬೇಕೆಂದು ಮನವಿ ಮಾಡಿದರು. ಪತ್ರಿಕಾಗೋಷ್ಠಿಯಲ್ಲಿ ಅರುಣ್ ಕುಮಾರ್ ತಾಯಿ ಗಂಗಮ್ಮ, ಪತ್ನಿ ಅರ್ಚನ, ಪುಟ್ಟಸ್ವಾಮಿ, ವಿರೂಪಾಕ್ಷ ಮತ್ತಿತರರು ಉಪಸ್ಥಿತರಿದ್ದರು.

    Forest Department to hold overnight dharna if guards’ salaries not released

  • ಪ್ರವಾಸಿಗರ ಹತ್ಯೆ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್-ಬಜರಂಗದಳ ಬೃಹತ್ ಪ್ರತಿಭಟನೆ

    ಪ್ರವಾಸಿಗರ ಹತ್ಯೆ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್-ಬಜರಂಗದಳ ಬೃಹತ್ ಪ್ರತಿಭಟನೆ

    ಚಿಕ್ಕಮಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ೨೭ ಮಂದಿ ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಿರುವ ಭಯೋತ್ಪಾದಕರ ಕೃತ್ಯವನ್ನು ಖಂಡಿಸಿ ವಿಶ್ವ ಹಿಂದೂ ಪರಿಷತ್-ಬಜರಂಗದಳದ ಕಾರ್ಯಕರ್ತರು ಶುಕ್ರವಾರ ಸಂಜೆ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.

    ಬಸವನಹಳ್ಳಿಯ ಶ್ರೀ ಓಂಕಾರೇಶ್ವರ ಗಣಪತಿ ದೇವಸ್ಥಾನದಿಂದ ಪಾಕ್ ಪ್ರೇರಿತ ಇಸ್ಲಾಮಿಕ್ ಭಯೋತ್ಪಾದಕರ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಎಂಜಿ ರಸ್ತೆ ಮಾರ್ಗವಾಗಿ ಆಜಾದ್ ಪಾರ್ಕ್ ಸರ್ಕಲ್ ವರೆಗೆ ಮೆರವಣಿಗೆ ನಡೆಸಲಾಯಿತು.

    ಈ ವೇಳೆ ಬಾಂಗ್ಲಾದ ನುಸುಳುಕೋರರಿಗೆ ಬೆಂಬಲಿಸುತ್ತಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಭಯೋತ್ಪಾದsಕರ ಪ್ರತಿಕೃತಿಯನ್ನೂ ಮೆರವಣಿಗೆ ಮಾಡಿ, ಅವುಗಳನ್ನು ಪಾಕಿಸ್ಥಾನದ ಧ್ವಜವನ್ನೂ ಸೇರಿಸಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಯಿತು.

    ಆಜಾದ್ ಮೈದಾನದಲ್ಲಿ ಬೃಹತ್ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಲಾಯಿತು. ಅಮಾಯಕ ಹಿಂದೂ ಪ್ರವಾಸಿಗರನ್ನೇ ಹುಡುಕಿ ಕೊಂದಿರುವ ಭಯೋತ್ಪಾದಕರನ್ನು ಬೇರು ಸಹಿತ ಕಿತ್ತು ಹಾಕಬೇಕು. ಇದಕ್ಕಾಗಿ ಕಠಿಣವಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಯಿತು.

    ವಿಶ್ವಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ರಂಗನಾಥ್ ಮಾತನಾಡಿ, ಹಿಂದೂಗಳನ್ನು ಕಾಫೀರರು ಎಂದು ಕರೆಯುವವರೇ ನಿಜವಾದ ರಾಕ್ಷಸರು. ಅವರೇ ಪಾಪಿಗಳು ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಇಸ್ಲಾಮಿಕ್ ಹೆಸರಿನಲ್ಲಿ ಭಯೋತ್ಪಾದನೆ ಮಾಡುತ್ತಿರುವ ಎಲ್ಲರನ್ನೂ ಕೇಂದ್ರ ಸರ್ಕಾರ ಧ್ವಂಸ ಮಾಡಬೇಕು. ಭಯೋತ್ಪಾದನೆ ವಿರುದ್ಧ ಮಾತನಾಡಲು ಯಾವ ಮುಸ್ಲಿಮರಿಗೂ ಧೈರ್ಯವಿಲ್ಲ. ಎಲ್ಲರೂ ನಮ್ಮ ದೇಶದ ಕಾನೂನಿಗೆ ತಲೆಬಾಗಬೇಕು. ಸುಪ್ರೀಂ ಕೋರ್ಟ್‌ನ ತೀರ್ಪುಗಳನ್ನು ಒಪ್ಪಿಕೊಳ್ಳಬೇಕು ಆಗ ಮಾತ್ರ ಜಗತ್ತು ಉಳಿಯುತ್ತದೆ. ಹಿಂದೂ ಉಳಿದರೆ ಮಾತ್ರ ಜಗತ್ತು ಉಳಿದೀತು ಎಂದರು.

    ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ಮೇಲೆ ಬಾಂಗ್ಲಾದೇಶಿಗರು ದಾಳಿ ನಡೆಸುತ್ತಿದ್ದಾರೆ. ಅದಕ್ಕೆ ಅಲ್ಲಿನ ಸಿಎಂ ಮಮತಾ ಬ್ಯಾನರ್ಜಿ ಕುಮ್ಮಕ್ಕು ನೀಡುತ್ತಿದ್ದಾರೆ. ಬಾಂಗ್ಲಾ ನುಸುಳುಕೋರರಿಗೆ ಆಧಾರ್ ಕಾರ್ಡ್ ರೇಷನ್ ಕಾರ್ಡ್ ಸೇರಿದಂತೆ ಎಲ್ಲಾ ದಾಖಲೆಗಳನ್ನು ನೀಡಿದ್ದಾರೆ. ಅದೆಲ್ಲವನ್ನೂ ಬಳಸಿಕೊಂಡು ಹಿಂದೂಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಯಾರ್‍ಯಾರು ಭಯೋತ್ಪಾದಕ ದಾಳಿಗಳನ್ನು ಮಾಡುತ್ತಿದ್ದಾರೆ ಅವರಿಗೆಲ್ಲ ಧರ್ಮ ಇದೆ. ಭಯೋತ್ಪಾದಕರಿಗೆ ಧರ್ಮವಿಲ್ಲ ಎನ್ನುವುದೆಲ್ಲಾ ಸುಳ್ಳು. ಈ ವಿಚಾರದಲ್ಲಿ ಕಾಂಗ್ರೆಸ್ ರಾಜಕಾರಣಿಗಳಿಗೆ ನಾಚಿಕೆ ಆಗಬೇಕು. ನಿಮ್ಮ ರಾಜಕೀಯ ಲಾಭಕ್ಕಾಗಿ ಹಿಂದೂಗಳ ಹಿತಕ್ಕೆ ಧಕ್ಕೆ ತರುವ ಕೆಲಸ ಮಾಡಬಾರದು.

    ರೀತಿ ಧಕ್ಕೆ ತಂದ ಸಂದರ್ಭದಲ್ಲೆಲ್ಲಾ ಹಿಂದೂಗಳ ಪರವಾಗಿ ವಿಶ್ವಹಿಂದೂ ಪರಿಷತ್-ಬಜರಂಗದಳ ರಕ್ಷಣೆಗೆ ನಿಂತಿದೆ. ಮುಂದೆಯೂ ನಿಲ್ಲುತ್ತದೆ ಎಂದರು.
    ವಿಶ್ವಹಿಂದೂ ಪರಿಷತ್ ಮುಖಂಡ ದಿವಾಕರ ಭಟ್ ಮಾತನಾಡಿ, ಭಯೋತ್ಪಾದಕರ ವಿರುದ್ಧ ಎಲ್ಲಾ ಹಿಂದೂಗಳು ಒಟ್ಟಾಗಿ ಎದ್ದು ನಿಲ್ಲಬೇಕಿದೆ. ಜಾಗೃತರಾಗಿದ್ದರೆ ಮಾತ್ರ ಬದುಕಲು ಸಾಧ್ಯ. ಹಿಂದೂ ಎದ್ದರೆ, ದೇಶ ಎದ್ದೀತು ಎಂದರು.

    ಅಕ್ಕಪಕ್ಕದಲ್ಲೇ ಇರುವ ಶತ್ರುಗಳಿದ್ದಾರೆ. ಅದರ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ನಮ್ಮವರೊಂದಿಗೆ ನಾವು ವ್ಯವಹರಿಸುವ, ಐಕ್ಯತೆಯಿಂದಿರಬೇಕು ಎನ್ನುವುದು ನಮ್ಮ ಸಿದ್ಧಾಂತ ಎಂದು ಹೇಳಿದರು.

    ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ್ ಪೈ, ಪ್ರದೀಪ್, ಅಮಿತ್, ಸಂತೋಷ್ ಕೋಟ್ಯಾನ್, ಶ್ಯಾಂ ವಿ ಗೌಡ, ಕೋಟೆ ರಂಗನಾಥ್, ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್, ಉಪಾಧ್ಯಕ್ಷೆ ಅನು ಮಧುಕರ್, ಮಧುಕುಮಾರ ರಾಜ್ ಅರಸ್ ಸೇರಿದಂತೆ ನೂರಾರು ಜನರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

    Vishwa Hindu Parishad-Bajrang Dal hold massive protest condemning killing of tourists

  • ಜಿಲ್ಲೆಯಲ್ಲಿ ಉತ್ತಮ ಆರಂಭ ನೀಡಿದ ಪೂರ್ವ ಮುಂಗಾರು: ಕೃಷಿ ಚಟುವಟಿಕೆಗೆ ಸಿದ್ಧತೆ

    ಜಿಲ್ಲೆಯಲ್ಲಿ ಉತ್ತಮ ಆರಂಭ ನೀಡಿದ ಪೂರ್ವ ಮುಂಗಾರು: ಕೃಷಿ ಚಟುವಟಿಕೆಗೆ ಸಿದ್ಧತೆ

    ಚಿಕ್ಕಮಗಳೂರು: ಜಿಲ್ಲಾದ್ಯಂತ ಎಲ್ಲಾ ತಾಲ್ಲೂಕುಗಳಲ್ಲಿ ಉತ್ತಮವಾದ ಮಳೆಯಾಗಿದ್ದು, ಪೂರ್ವ ಮುಂಗಾರು ಕೃಷಿಗೆ ಭೂಮಿ ಸಿದ್ಧತೆ ಚಟುವಟಿಕೆ ಚುರುಕುಗೊಂಡಿದೆ. ಅಶ್ವಿನಿ ಮಳೆ ನಕ್ಷತ್ರದಿಂದ ಉತ್ತಮ ಆರಂಭ ಪಡೆದ ಮಳೆ ಇದುವರೆಗೆ ೯೪.ಮಿ.ಮೀ.ನಷ್ಟು (ಶೇ.೬೮ ರಷ್ಟು ಹೆಚ್ಚು)  ಸುರಿದಿದ್ದು, ಕೃಷಿ ಯೋಗ್ಯ ವಾತಾವರಣ ಕಲ್ಪಿಸಿಕೊಟ್ಟಿದೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

    ೨೦೨೫-೨೬ ರಲ್ಲಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ೯೦೦೯೦ ಹೆಕ್ಟೇರ್ ಬಿತ್ತನೆ ಗುರಿ ಹೊಂದಿದ್ದು, ಪೂರ್ವ ಮುಂಗಾರು ಹಂಗಾಮಿಗೆ ೯೧೫೫ ಹೆಕ್ಟೇರ್ ಪ್ರದೇಶದಲ್ಲಿ (ನೆಲಗಡಲೆ-೨೨೦೦ ಹೆಕ್ಟೇರ್, ಹೆಸರು ೧೭೧೦ ಹೆಕ್ಟೇರ್, ಹತ್ತಿ ೧೪೨೦ ಹೆಕ್ಟೇರ್, ಅಲಸಂದೆ ೧೩೦೦ ಹೆಕ್ಟೇರ್, ಉದ್ದು ೪೨೫ ಹೆಕ್ಟೇರ್, ಎಳ್ಳು ೨೧೦೦ ಹೆಕ್ಟೇರ್) ಬಿತ್ತನೆ ಗುರಿ ಹೊಂದಲಾಗಿದೆ.

    ಬಿತ್ತನೆ ಬೀಜ ಪೂರೈಕೆ: ಪೂರ್ವ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ೧೦೦೯.೨೫ ಕ್ವಿಂಟಾಲ್ ಬಿತ್ತನೆ ಬೀಜದ ಗುರಿಯಿದ್ದು, ಬೇಡಿಕೆಗೆ ಅನುಸಾರವಾಗಿ ಬಿತ್ತನೆಗೆ ಅನುಕೂಲವಾಗುವಂತೆ ಉದ್ದು, ಹೆಸರು, ಅಲಸಂದೆ, ನೆಲಗಡಲೆ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದ್ದು ರಿಯಾಯಿತಿ ದರದಲ್ಲಿ ವಿತರಿಸುವ ಕಾರ್ಯ ಪ್ರಗತಿಯಲ್ಲಿದೆ. ಬಿತ್ತನೆ ಬೀಜದಲ್ಲಿ ಯಾವುದೇ ಕೊರತೆಯಾಗಿಲ್ಲ. ಅದರಂತೆ ಮುಂಗಾರು ಹಂಗಾಮಿಗೆ ಜಿಲ್ಲೆಯಲ್ಲಿ ೪೩೦೮.೮೯ ಕ್ವಿಂಟಾಲ್ ಬಿತ್ತನೆ ಬೀಜಗಳಿಗೆ ಬೇಡಿಕೆ ಇದ್ದು, ಅಗತ್ಯವಾದ ಬಿತ್ತನೆ ಬೀಜಗಳನ್ನು ರಿಯಾಯಿತಿ ದರದಲ್ಲಿ ರೈತ ಸಂಪರ್ಕ ಕೇಂದ್ರಗಳ ಮೂಲಕ ಸಕಾಲದಲ್ಲಿ ರೈತರ ಬೇಡಿಕೆಗೆ ಅನುಗುಣವಾಗಿ ಪೂರೈಸಲು ಇಲಾಖೆಯು ಸಜ್ಜುಗೊಂಡಿದೆ.

    ಅಧಿಕೃತ ಮಾರಾಟಗಾರರಿಂದ ಖರೀದಿ ಸೂಕ್ತ: ರೈತರು ಅಧಿಕೃತ ಬಿತ್ತನೆ ಬೀಜ ಮಾರಾಟಗಾರರಿಂದಲೇ ಬಿತ್ತನೆ ಬೀಜವನ್ನು ಖರೀದಿಸುವುದು ಉತ್ತಮ. ಬಿತ್ತನೆ ಬೀಜ ಹಾಗೂ ರಸಗೊಬ್ಬರ ಖರೀದಿಸಿದಾಗ ತಪ್ಪದೇ ಅಧಿಕೃತ ರಶೀದಿ ಪಡೆಯಬೇಕು. ಬಿತ್ತನೆ ಬೀಜ ರಶೀದಿಯಲ್ಲಿ ಲಾಟ್‌ನಂಬರ್ ನಮೂದಿಸಿರಬೇಕು. ಬಿತ್ತನೆ ಬೀಜದ ಚೀಲ, ಸ್ವಲ್ಪ ಪ್ರಮಾಣದ ಬಿತ್ತನೆ ಬೀಜ, ದೃಢೀಕರಣದ ಬಗ್ಗೆ ಲಗತ್ತಿಸಿರುವ ಟ್ಯಾಗುಗಳನ್ನು ಬೆಳೆ ಕಟಾವು ಆಗುವವರೆಗೆ ಸುರಕ್ಷಿತವಾಗಿ ಕಾಯ್ದಿಟ್ಟುಕೊಳ್ಳಬೇಕು.

    ಬಿತ್ತನೆ ಬೀಜವನ್ನು ಪೀಡೆನಾಶಕಗಳಿಂದ ಉಪಚರಿಸಲಾಗಿದೆಯೆ ಎಂಬುದನ್ನು ಗಮನಿಸುವುದು ಹಾಗೂ ಒಂದು ವೇಳೆ ಬಿತ್ತನೆ ಬೀಜಗಳು ಬೀಜೋಪಚಾರವಾಗಿರದಿದ್ದಲ್ಲಿ ಬೀಜದಿಂದ ಹಾಗೂ ಮಣ್ಣಿನಿಂದ ಹರಡುವ ರೋಗ ಮತ್ತು ಕೀಟಗಳಿಂದ ಬೆಳೆಗಳನ್ನು ರಕ್ಷಿಸಲು ಬೀಜವನ್ನು ಬಿತ್ತನೆಗೆ ಉಪಯೋಗಿಸುವ ಮೊದಲು ಪೀಡೆನಾಶಕಗಳಿಂದ ಉಪಚರಿಸಿ ಬಿತ್ತುವುದರಿಂದ ಪೀಡೆಗಳ ನಿರ್ವಹಣೆಗಳೊಂದಿಗೆ ಹೆಚ್ಚಿನ ಇಳುವರಿ ಪಡೆಯಬಹುದು.

    ರಸಗೊಬ್ಬರ ಪೂರೈಕೆ: ಜಿಲ್ಲೆಯಲ್ಲಿ ಏಪ್ರಿಲ್ ಮಾಸದವರೆಗೆ ಒಟ್ಟು ೧೭೮೨೨ ಟನ್ ವಿವಿಧ ರಸಗೊಬ್ಬರಗಳ ಬೇಡಿಕೆ ಇದ್ದು ಪ್ರಸ್ತುತ ಕಾಪು ದಾಸ್ತಾನು ಮತ್ತು ರಸಗೊಬ್ಬರ ಮಾರಾಟಗಾರರಲ್ಲಿ ಒಟ್ಟು ೨೬೫೪೧ ಟನ್ (ಡಿ ಎಪಿ-೭೫೦, ಕಾಂಪ್ಲೆಕ್ಸ್ ೧೪೦೭೨ ಟನ್, ಎಂಒಪಿ ೪೪೨೭ ಟನ್, ಯೂರಿಯಾ ೬೦೫೭ ಟನ್, ಎಸ್‌ಎಸ್‌ಪಿ ೧೨೩೫ ಟನ್) ರಸಗೊಬ್ಬರ ದಾಸ್ತಾನಿದ್ದು ಯಾವುದೇ ಕೊರತೆ ಇರುವುದಿಲ್ಲ.

    ರೈತರು ರಸಗೊಬ್ಬರಗಳನ್ನು ಖರೀದಿಸುವಾಗ ಚೀಲದ ಮೇಲೆ ನಮೂದಿಸಿರುವ ಎಂ.ಆರ್.ಪಿ ದರದಲ್ಲಿಯೇ ಖರೀದಿಸಬೇಕು ಹಾಗೂ ಕಡ್ಡಾಯವಾಗಿ ರಸೀದಿಯನ್ನು ಪಡೆಯಬೇಕು. ರಸಗೊಬ್ಬರ ಮಾರಾಟಗಾರರು ಎಂ.ಆರ್.ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದಲ್ಲಿ ಹತ್ತಿರದ ರೈತ ಸಂಪರ್ಕ ಕೇಂದ್ರ, ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಉಪ ಕೃಷಿ ನಿರ್ದೇಶಕರ ಕಚೇರಿ, ಜಂಟಿ ಕೃಷಿ ನಿರ್ದೇಶಕರ ಕಚೆರಿಗೆ ಸೂಕ್ತ ದಾಖಲೆಯೊಂದಿಗೆ ಮಾಹಿತಿ ನೀಡಿದಲ್ಲಿ ಅಂತಹ ರಸಗೊಬ್ಬರ ಮಾರಾಟಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

    Pre-monsoon gives good start to the district

  • ವಿಶ್ವಕರ್ಮ ಸಮಾಜದ ಜಾತಿ ಸಮೀಕ್ಷೆ ನೈಜ ವರದಿ ಜಾರಿಗೆ ಆಗ್ರಹ

    ವಿಶ್ವಕರ್ಮ ಸಮಾಜದ ಜಾತಿ ಸಮೀಕ್ಷೆ ನೈಜ ವರದಿ ಜಾರಿಗೆ ಆಗ್ರಹ

    ಚಿಕ್ಕಮಗಳೂರು: ಸರ್ಕಾರ ವಿಶ್ವಕರ್ಮ ಸಮಾಜಕ್ಕೆ ಜಾತಿ ಸಮೀಕ್ಷೆಯ ನೈಜ ವರದಿ ಜಾರಿಮಾಡುವಂತೆ ಆಗ್ರಹಿಸಿ ಹಾಗೂ ಸಿದ್ದವಾಗಿರುವ ಅವೈಜ್ಞಾನಿಕ ವರದಿಯನ್ನು ತಿರಸ್ಕರಿಸಬೇಕು. ಇಲ್ಲದಿದ್ದಲ್ಲಿ ಬೀದಿಗಿಳಿದು ಉಗ್ರ ಹೋರಾಟ ಮಾಡುವುದಾಗಿ ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಭಾ ಎಚ್ಚರಿಸಿದೆ.

    ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ಜಿಲ್ಲಾಧ್ಯಕ್ಷ ಹೆಚ್.ಆರ್ ಉಮಾಶಂಕರ್ ಅವರು ಜಾತಿ ಸಮೀಕ್ಷೆಯಲ್ಲಿ ಸರ್ಕಾರ ವಿಶ್ವಕರ್ಮ ಸಮಾಜದ ಅಂಕಿಅಂಶಗಳನ್ನು ಗುರ್ತಿಸುವಲ್ಲಿ ವಿಫಲವಾಗಿದೆ. ಸಮಾಜದಲ್ಲಿ ೨೦೧೫ ರಲ್ಲಿ ೩೫ ಲಕ್ಷ ಜನಸಂಖ್ಯೆ ಇದ್ದು, ೨೦೨೫ ರ ಜಾಗತಿಗಣತಿಯಲ್ಲಿ ೬ ಲಕ್ಷಕ್ಕೆ ಇಳಿಸಿರುವುದನ್ನು ಖಂಡಿಸಿದರು.

    ಈ ಬಗ್ಗೆ ಸಮಾಜ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ೧೫ ಲಕ್ಷ ಜನಸಂಖ್ಯೆ ಇದೆ ಎಂದು ವರದಿ ಸಿದ್ದಪಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು ೩೫ ಸಾವಿರ ಜನಸಂಖ್ಯೆ ಇದ್ದು, ಇದರಲ್ಲಿ ಚಿಕ್ಕಮಗಳೂರು ತಾಲ್ಲೂಕಿನಲ್ಲಿ ೪ ಸಾವಿರ, ತರೀಕೆರೆ ೬ ಸಾವಿರ, ಶೃಂಗೇರಿಯಲ್ಲಿ ೨ ಸಾವಿರ ಸಮುದಾಯದ ಜನರಿದ್ದಾರೆಂದು ಹೇಳಿದರು.

    ಕೂಡಲೇ ಮರು ಜಾತಿಗಣತಿ ನಡೆಸುವ ಮೂಲಕ ನೈಜ ವರದಿಯನ್ನು ಸಿದ್ದಪಡಿಸಿ ಜಾರಿಮಾಡಬೇಕು. ಇಲ್ಲವಾದಲ್ಲಿ ಸಮಾಜವು ಸಂಘಟನೆಗಳೊಂದಿಗೆ ಸೇರಿ ಮುಂದೆ ವಿವಿಧ ರೀತಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

    ಈ ರೀತಿ ಹಲವಾರು ಸಮಸ್ಯೆಗಳನ್ನು ಮುಂದಿಟ್ಟು ವಿಶ್ವಕರ್ಮ ಸಮಾಜಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಸರ್ಕಾರದ ಕ್ರಮವನ್ನು ಖಂಡಿಸಿದ ಅವರು, ಜಾತಿಗಣತಿ ವರದಿಯನ್ನು ಪುನರ್ ಪರಿಶೀಲಿಸಬೇಕೆಂದು ಒತ್ತಾಯಿಸಿದರು.

    ವಿಶ್ವಕರ್ಮ ಸಮಾಜಕ್ಕೆ ಜಾತಿನಿಂದನೆ ಮಾಡುತ್ತಿರುವುದು ಎದ್ದು ಕಾಣುತ್ತಿದ್ದು, ಸಿಇಟಿ ಪರೀಕ್ಷೆಯಲ್ಲಿ ಜನಿವಾರವನ್ನು ತೆಗೆಸಿ ಪರೀಕ್ಷಾ ಕೊಠಡಿಗೆ ಕಳುಹಿಸಿರುವುದು ಹಿಂದೂ ಧರ್ಮದ ಆಚರಣೆಗೆ ಅಡ್ಡಿಪಡಿಸಿದಂತಾಗಿದೆ ಎಂದು ದೂರಿದರು.

    ಈ ಎಲ್ಲಾ ಘಟನೆಗಳು ನಡೆಯುತ್ತಿರುವಾಗಲೇ ಲಕ್ಷ್ಮೀ ನಿವಾಸ ಧಾರಾವಾಹಿಯ ಸನ್ನಿವೇಶ ಒಂದರಲ್ಲಿ ಮಾತನಾಡುವ ಭರದಲ್ಲಿ ಕಳ್ಳ ಆಚಾರಿ ಎಂದು ಪದೇ ಪದೇ ನಿಂದಿಸಿರುವುದು ಖಂಡನೀಯ, ಮನೆಯಲ್ಲೇ ಕುಳಿತು ಧಾರಾವಾಹಿಯ ನಿರ್ಮಾಪಕರು ಕ್ಷಮೆ ಕೇಳಿರುವುದನ್ನು ಒಪ್ಪುವುದಿಲ್ಲ. ಧಾರವಾಹಿಯಲ್ಲಿ ಪ್ರಸಾರವಾಗುತ್ತಿರುವ ಈ ಸನ್ನಿವೇಶವನ್ನು ಕಡಿತಗೊಳಿಸಿ ಬಹಿರಂಗ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.

    ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಎಂ.ಜೆ. ಚಂದ್ರಶೇಖರ ಆಚಾರ್ಯ, ವಿಶ್ವಕರ್ಮ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಬಿ.ಪಿ. ರತೀಶ್, ಉಪಾಧ್ಯಕ್ಷ ಸಿ.ಜೆ. ಬಾಲಕೃಷ್ಣ, ರಾಮಪ್ಪಾಚಾರ್ಯ, ಮೋಹನ್, ಅರವಿಂದ, ಪರಮೇಶ್ವರಾಚಾರ್ಯ ಮತ್ತಿತರರು ಉಪಸ್ಥಿತರಿದ್ದರು.

    Demand for implementation of real caste survey report of Vishwakarma Samaj

  • ಜಿಲ್ಲೆಯ 2.61 ಲಕ್ಷ ಕುಟುಂಬದ ಯಜಮಾನಿಯರಿಗೆ ಗೃಹಲಕ್ಷ್ಮೀ ಸೌಲಭ್ಯ

    ಜಿಲ್ಲೆಯ 2.61 ಲಕ್ಷ ಕುಟುಂಬದ ಯಜಮಾನಿಯರಿಗೆ ಗೃಹಲಕ್ಷ್ಮೀ ಸೌಲಭ್ಯ

    ಚಿಕ್ಕಮಗಳೂರು: ಗೃಹಲಕ್ಷ್ಮೀ ಯೋಜನೆಯಲ್ಲಿ ಜಿಲ್ಲೆಯ ೨,೬೧,೪೧೫ ಮಂದಿ ಯಜಮಾನಿಯರಿಗೆ ೫೨.೨೮ ಕೋಟಿ ರೂ. ನೇರವಾಗಿ ಸಂದಾಯವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ತಿಳಿಸಿದರು.

    ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ ಸಾರಿಗೆ ಸಂಸ್ಥೆಗೆ ಸರ್ಕಾರ ಶಕ್ತಿ ಯೋಜನೆಯಡಿ ಭರಪೂರ ಅನುದಾನ ಸರ್ಕಾರ ಬಿಡುಗಡೆ ಮಾಡಿರುವುದರಿಂದ ವಿಶೇಷವಾಗಿ ಮಾರ್ಚ್ ತಿಂಗಳಲ್ಲಿ ರಸ್ತೆ ಸಾರಿಗೆ ನಿಗಮದ ೪೭ ಹೊಸ ಬಸ್‌ಗಳು ಜಿಲ್ಲೆಗೆ ಬಂದಿದ್ದು.ಅವುಗಳನ್ನು ಅಗತ್ಯವಿರುವ ಹೆಚ್ಚು ಜನದಟ್ಟಣೆ ಇರುವ ಮಾರ್ಗಗಳಲ್ಲಿ ಸಂಚರಿಸಲು ಒದಗಿಸಲಾಗುವುದು ಎಂದು ಅವರು ಹರ್ಷ ವ್ಯಕ್ತಪಡಿಸಿದರು.

    ಆದಾಯ ತೆರಿಗೆ ಪಾವತಿದಾರರು ಹಾಗೂ ಜಿ.ಎಸ್.ಟಿ. ಪಾವತಿದಾರ ಕುಟುಂಬದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಲಾಭವಾಗದಿರುವ ಬಗ್ಗೆ ಚರ್ಚಿಸಲಾಗಿದ್ದು, ಇದನ್ನು ಈ ಕುಟುಂಬಗಳಿಗೂ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ನಿರ್ಣಯಿಸಲಾಯಿತು.

    ಅನ್ನಭಾಗ್ಯ ಯೋಜನೆಯಡಿ ಡಿ.೨೪ರವರೆಗೆ ಫಲಾನುಭವಿಗಳ ಖಾತೆಗೆ ನೇರವಾಗಿ ನಗದು ಜಮಾ ಮಾಡಲಾಗುತ್ತಿದ್ದು, ಮಾರ್ಚ್ ತಿಂಗಳಿನಿಂದ ಫಲಾನುಭವಿಗಳಿಗೆ ಹಣದ ಬದಲಾಗಿ ತಲಾ ೫ ಕೆ.ಜಿ. ಅಕ್ಕಿಯನ್ನು ಉಚಿತವಾಗಿ ಜಿಲ್ಲೆಯ ೫೩೧ ಪಡಿತರ ವಿತರಣಾ ಕೇಂದ್ರಗಳ ಮೂಲಕ ಜಿಲ್ಲೆಯ ೮,೦೧,೫೩೬ ನೀಡಲಾಗಿದೆ ಎಂದು ಆಹಾರ ಇಲಾಖೆಯ ಅಧಿಕಾರಿ ಸವಿತಾ ಸಭೆಗೆ ತಿಳಿಸಿದರು.

    ಜಿಲ್ಲೆಯ ೩,೫೪,೧೬೫ ಬಳಕೆದಾರರ (ಮೀಟರ್‌ಗಳು) ಪೈಕಿ ೩,೧೧,೪೦೯ ಬಳಕೆದಾರರ (ಮೀಟರ್‌ಗಳು) ಸುಮಾರು ೧೦ ಲಕ್ಷ ಜನರು ಉಚಿತವಾಗಿ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಮಾಹೆಯಾನ ೧೧.೭೯ ಕೋಟಿ ರೂ.ಗಳನ್ನು ಮೆಸ್ಕಾಂಗೆ ಭರಿಸುತ್ತಿದೆ ಎಂದು ಮೆಸ್ಕಾಂ ಸೂಪರಿಂಟೆಂಡಿಂಗ್ ಇಂಜಿನಿಯರ್ ಮಂಜುನಾಥ್ ಸಭೆಗೆ ತಿಳಿಸಿದರು. ಜನಸಂಪರ್ಕ ಸಭೆಯೂ ಸೇರಿದಂತೆ ಇಲಾಖೆಯ ಹಲವು ವಿಷಯಗಳ ಬಗ್ಗೆ ಸದಸ್ಯರು ಈ ಸಂದರ್ಭದಲ್ಲಿ ಚರ್ಚಿಸಿದರು.

    ಉದ್ಯೋಗ ವಿನಿಮಯ ಕೇಂದ್ರದಲ್ಲಿ ಇದುವರೆಗೂ ೧೮೧೧೧ ಪದವೀಧರರೂ, ೯೬ ಡಿಪ್ಲೊಮಾ ಪದವೀಧರರು ಯುವನಿಧಿಗೆ ಅರ್ಜಿ ಸಲ್ಲಿಸಿದ್ದು, ಅದಕ್ಕಾಗಿ ಇದುವರೆಗೆ ಸುಮಾರು ೬ ಕೋಟಿ ರೂ. ಭರಿಸಲಾಗಿದೆ ಎಂದು ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ನದಾಫ್ ತಿಳಿಸಿದರು.

    ಶಕ್ತಿ ಯೋಜನೆಯಡಿ ಜಿಲ್ಲೆಯ ಬಸ್‌ಗಳಲ್ಲಿ ಜೂನ್ ೨೦೨೩ ರಿಂದ ಈವರೆಗೆ ಅಂದರೆ ಮಾರ್ಚ್ ೨೦೨೫ರವರೆಗೆ ೩.೮೪ ಕೋಟಿ ಮಹಿಳೆಯರು ಉಚಿತವಾಗಿ ಸಂಚರಿಸಿದ್ದು,  ೧೪೭ ಕೋಟಿ ರೂ.ಗಳನ್ನು ಸರ್ಕಾರ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ನೀಡಿದೆ ಎಂದು ನಿಗಮದ ಸಂಚಾರಿ ವಿಭಾಗದ ಅಧಿಕಾರಿ ಚನ್ನಬಸಪ್ಪ ತಿಳಿಸಿದರು.

    ನ್ಯಾಯಬೆಲೆ ಅಂಗಡಿಗಳ ಮುಂಭಾಗದಲ್ಲಿ ಗ್ಯಾರಂಟಿ ಯೋಜನೆಗಳ ನಾಮಫಲಕವನ್ನು ತೂಗು ಹಾಕಬೇಕೆಂದು ಸದಸ್ಯರು ಸಭೆಯ ಗಮನಕ್ಕೆ ತಂದಾಗ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನ ತಿಳಿಸಿದರು.

    ಪ್ರತೀ ತಿಂಗಳು ಮಾಸಿಕ ಪ್ರಗತಿ ಪರಿಶೀಲನಾ ಸಭೆಗಳು ನಡೆಯುತ್ತಿದ್ದು, ತಾಲ್ಲೂಕು ಸಮಿತಿಗಳು ತಾಲ್ಲೂಕು ಮಟ್ಟದಲ್ಲಿ ಸಭೆ, ಸಂವಾದ, ಫಲಾನುಭವಿಗಳ ಸಮಾವೇಶಗಳನ್ನು ಅಲ್ಲಲ್ಲಿ ನಡೆಸುತ್ತಿರುವ ಬಗ್ಗೆ ಪ್ರಸ್ತಾಪಿಸಿ ಪ್ರಶಂಸಿಸಿದ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಸಂಜೀವಿನಿ ಗುಂಪುಗಳನ್ನು ರಚಿಸುವಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರು ಪ್ರಮುಖ ಪಾತ್ರ ವಹಿಸಬೇಕೆಂದು ಸಲಹೆ ನೀಡಿದರು.

    ಜಿ.ಪಂ. ಉಪಕಾರ್ಯದರ್ಶಿ ಶಂಕರ್ ಕೊರವರ ಅವರು ಮಾತನಾಡಿ, ಪಂಚ ಗ್ಯಾರಂಟಿ ಅನುಷ್ಠಾನದ ವಿಚಾರದಲ್ಲಿ ಈಗಲೂ ಜಿಲ್ಲೆ ಪ್ರಥಮ ಸ್ಥಾನದಲ್ಲಿ ಉಳಿದಿದ್ದು, ಅಧಿಕಾರಿಗಳು ಅದನ್ನು ಉಳಿಸಿಕೊಳ್ಳುವಲ್ಲಿ ಶ್ರಮ ವಹಿಸಬೇಕು ಎಂದರು.

    ಸಭೆಯಲ್ಲಿ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷರುಗಳಾದ ಡೈರಿ ಮಂಜಣ್ಣ, ಶಫೀವುಲ್ಲ, ಹೆಚ್.ಎಸ್.ಕೃಷ್ಣೇಗೌಡ, ಡಿ.ಜಿ.ಚಂದ್ರಮೌಳಿ, ಹೇಮಾವತಿ ಸೇರಿದಂತೆ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷರುಗಳು, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು, ಕೌಶಲ್ಯ ಅಭಿವೃದ್ಧಿ ಇಲಾಖೆ ಅಧಿಕಾರಿ ಹೆಚ್.ಜಿ.ಪ್ರಶಾಂತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹಾಂತೇಶ ಭಜಂತ್ರಿ ಭಾಗವಹಿಸಿದ್ದರು.

    ೨೪ಸಿಕೆಎಂ ಫೋಟೋ ೩ ಹಾಗೂ ೩ಎ: ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಪಂಚ  ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿದರು.

    ೨೪ಸಿಕೆಎಂ ಫೋಟೋ ೪: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಿಂದ ಇಂದು ಡಾ.ರಾಜ್‌ಕುಮಾರ್ ಅವರ ೯೭ನೇ ಜನ್ಮ ದಿನಾಚರಣೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಜಿ.ಪಂ. ಉಪ ಕಾರ್ಯದರ್ಶಿ ಶಂಕರ್ ಗೊರವರ, ಪ್ರಾಧಿಕಾರದ ಪದಾಧಿಕಾರಿಗಳು ಇದ್ದರು.

    Grihalakshmi facility for 2.61 lakh family heads in the district

  • ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಿಂದ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು

    ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಿಂದ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು

    ಶೃಂಗೇರಿ: `ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಿಂದ ಜನರ ಸಮಸ್ಯೆಗಳನ್ನು ಬಗೆಹರಿಸಬೇಕು ಮತ್ತು ಪಕ್ಷದ ಕಾರ್ಯಕರ್ತರಿಗೆ ಸಮಸ್ಯೆ ಬಗೆಹರಿಸುವ ಅಧಿಕಾರ ನಾಯಕರು ನೀಡಬೇಕು ಆಗ ಮಾತ್ರ ಒಂದು ರಾಷ್ಟ್ರೀಯ ಪಕ್ಷ ಅಧಿಕಾರಕ್ಕೆ ಬಂದು ಉತ್ತಮವಾಗಿ ಕೆಲಸ ಮಾಡಲು ಸಾಧ್ಯ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ಹೇಳಿದರು.

    ಶೃಂಗೇರಿ ಆದಿಚುಂಂಚನಗಿರಿ ಸಮೂದಾಯ ಭವನದಲ್ಲಿ ರಾಜ್ಯ ಸರ್ಕಾರ ಎರಡು ವರ್ಷ ಪೂರೈಸುತ್ತಿರುವ ಸಂದರ್ಭದಲ್ಲಿಕಾಂಗ್ರೆಸ್ ಪಕ್ಷ ಆಯೋಜಿಸಿದ ಸರ್ಕಾರದ ನಡೆ ಕಾರ್ಯಕರ್ತರ ಕಡೆಗೆ ಎಂಬ ಕ್ಷೇತ್ರ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

    `ನಾಯಕರು ಜನ ಸಂಪರ್ಕದಲ್ಲಿದ್ದರೆ ಮಾತ್ರ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯ. ಆದರಿಂದ ಪ್ರತಿಯೊಬ್ಬ ಕಾರ್ಯಕರ್ತ ಪಕ್ಷ ನೀಡಿದ ಹುದ್ದೆಯನ್ನು ಅತ್ಯಂತ ನೀಷ್ಠೆಯಿಂದ ಮಾಡಿ ಪಕ್ಷದ ಗೆಲುವಿಗೆ ಸಹಕರಿಸಿ, ತಮ್ಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಭವಿಷ್ಯದಲ್ಲಿ ಉತ್ತಮ ನಾಯಕರಾಗಬೇಕು. ೫ ಗ್ಯಾರಂಟಿ ಯೋಜನೆಗಳನ್ನು ಬಹಳ ಅಚ್ಚುಕಟ್ಟಾಗಿ ರಾಜ್ಯದಲ್ಲಿ ಜಾರಿಗೆ ತಂದಿದ್ದೇವೆ. ಭಿನ್ನಾಭಿಪ್ರಾಯದ ಜಗಳವೇನಾದರೂ ಇದ್ದರೆ ಅದು ಬಿಜೆಪಿ ಪಕ್ಷದಲ್ಲಿ ಮಾತ್ರ ಕಾಂಗ್ರೆಸ್ ಪಕ್ಷದಲ್ಲಿ ಇಲ್ಲಾ’ ಎಂದರು.

    ಶಾಸಕ ಟಿ.ಡಿ ರಾಜೇಗೌಡ ಮಾತನಾಡಿ, `ಕಾಂಗ್ರೆಸ್ ಪಕ್ಷದ ನೇತೃತ್ವದ ರಾಜ್ಯ ಸರ್ಕಾರ ಶೃಂಗೇರಿ ತಾಲ್ಲೂಕಿಗೆ ನೂರು ಹಾಸಿಗೆ ಆಸ್ಪತ್ರೆ ನಿರ್ಮಾಣಕ್ಕೆ ೩೭.೫ ಕೋಟಿ ಅನುದಾನ ಬಿಡುಗಡೆ ಮಾಡಿದೆ. ಜಾಗ ಗುರುತಿಸಿ ಅರಣ್ಯ ಇಲಾಖೆಯಿಂದ ಬಿಡಿಸಿಕೋಳ್ಳಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜಯಪುರದಲ್ಲಿ ೧೨ ಕೋಟಿ ವೆಚ್ಚದ ೫೦ ಬೆಡ್ ಹಾಸಿಗೆ ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡಿದೆ. ಕೊಪ್ಪ ಸರ್ಕಾರಿ ಆಸ್ಪತ್ರೆಗೆ ನವೀಕರಣಕ್ಕೆ ೧.೪೦ಕೋಟಿ ಅನುದಾನ ನೀಡಿ ಕಾಮಗಾರಿ ಮುಗಿದಿದೆ.

    ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ೨.೪೦ ಕೋಟಿ ವೆಚ್ಚದ ಒಳಾಂಗಣ ಕ್ರೀಡಾಂಗಣ ನಿರ್ಮಾಣವಾಗಿದೆ. ಹೊನ್ನೆಕೊಡಿಗೆ ಮತ್ತು ಬಾಳೆಹೊನ್ನೂರಿನಲ್ಲಿ ೨೩ ಕೋಟಿ ವೆಚ್ಚದ ಸೇತುವೆ ನಿರ್ಮಾಣವಾಗಿದೆ. ಕೊಪ್ಪದ ಮಿನಿ ವಿಧಾನ ಸೌಧ ನವೀಕರಣಕ್ಕೆ ೨ ಕೋಟಿ ಅನುದಾನ ನೀಡಲಾಗಿದೆ. ಬಿಜೆಪಿ ಸರ್ಕಾರವಿದ್ದಾಗ ಟಾಸ್ಕ್ ಪೋರ್ಸ್ ರದ್ದಾಗಿರುವುದನ್ನು ಮಲೆನಾಡಿಗರಿಗೆ ಹಕ್ಕುಪತ್ರ ಕೊಡುವ ಸಲುವಾಗಿ ಪುನಃ ಅರಣ್ಯ ಇಲಾಖೆಯಲ್ಲಿ ರಚನೆ ಮಾಡಲಾಗಿದೆ ಎಂದರು.

    ಕಾರ್ಯಕ್ರಮದಲ್ಲಿ ಧ್ವನಿವರ್ಧಕದ ಮೂಲಕ ನಾಡಗೀತೆ ಹಾಕಿದಾಗ ಕರ್ಕಶ ಶಬ್ದದಿಂದ ನಾಡಗೀತೆಗೆ ಸ್ವಲ್ಪ ಅವಮಾನವಾಯಿತು. ಆದರಿಂದ ವಂದೇ ಮಾತರಂ ಮತ್ತು ರೈತಗೀತೆ ಹಾಕುವುದನ್ನು ನಿಲ್ಲಿಸಿದರು.

    ಸಮಾರಂಭದಲ್ಲಿ ಕಾಂಗ್ರೆಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೆ.ಪಿ ಅಂಶುಮಂತ್, ಕಾಂಗ್ರೆಸ್ ಮುಖಂಡರಾದ ಸಂಧೀಪ್, ಜಯಪ್ರಕಾಶ್ ಹೆಗ್ಡೆ, ಸಚಿನ್ ಮೀಗಾ, ಸದಾಶಿವ, ಮಹಮ್ಮದ್ ಇಫ್ತಿಕರ್, ಎಂ.ಎಚ್ ನಟರಾಜ್, ರವೀಂದ್ರ ಕುಕ್ಕುಡಿಗೆ, ಗೇರ್‌ಬೈಲ್ ನಟರಾಜ್, ಶಕೀಲಾ ಗುಂಡಪ್ಪ, ಎಚ್.ಎಂ ಸತೀಶ್, ಭಾಸ್ಕರ್ ನಾಯ್ಕ, ಶ್ರೀಜಿತ್ ಗೌಡ ದಂಡಿನಮಕ್ಕಿ, ದುರ್ಗಾಚರಣ್, ಪ್ರದೀಪ್ ಕಲ್ಲಾಳಿ ಇದ್ದರು.

    Party workers should solve people’s problems from the booth level