Category: ಚಿಕ್ಕಮಗಳೂರು ನಗರ

  • ಮಾನವ ಕಳ್ಳ ಸಾಗಾಣಿಕೆ ಸಾಮಾಜಿಕ ಪಿಡುಗು

    ಮಾನವ ಕಳ್ಳ ಸಾಗಾಣಿಕೆ ಸಾಮಾಜಿಕ ಪಿಡುಗು

    ಚಿಕ್ಕಮಗಳೂರು: ಮಾನವ ಕಳ್ಳ ಸಾಗಾಣಿಕೆ ದೊಡ್ಡ ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು, ಇದಕ್ಕೆ ಸಣ್ಣ ಮಕ್ಕಳು, ಯುವತಿಯರು, ಹೆಣ್ಣು ಮಕ್ಕಳು ಬಲಿಪಶು ಆಗುತ್ತಿರುವುದು ಅತ್ಯಂತ ಕಳವಳಕಾರಿ ಎಂದು ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಚಿಕ್ಕಮಗಳೂರು ಹಾಗೂ ಪರಿವರ್ತನ ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಶಿರಾಳಕೊಪ್ಪ ಇವರ ಸಂಯುಕ್ತಾಶ್ರಯದಲ್ಲಿ ಇಂದು ನಗರದ ತಾಲ್ಲೂಕು ಪಂಚಾಯಿತಿ ಡಾ. ಅಂಬೇಡ್ಕರ್ ಸಭಾಂಗಣದಲ್ಲಿ ಮಾನವ ಕಳ್ಳ ಸಾಗಣಿಕೆಯ ಮಜಲುಗಳ ಅರಿವು ಕುರಿತು ಒಂದು ದಿನದ ಕಾರ್ಯಗಾರದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಹೇಳಿದರು.

    ವಿವಿಧ ಆಮಿಷಗಳಿಗೆ ಒಳಗಾಗಿ ಮೋಸದ ಬಲೆಗೆ ತುತ್ತಾಗಿ ಶೋಷಿತರಾಗುವುದನ್ನು ಸಮುದಾಯದ ಪ್ರತಿಯೊಬ್ಬರು ಅರಿತು ಜಾಗೃತರಾಗಬೇಕು ಸಮುದಾಯದ ಪ್ರತಿಯೊಬ್ಬರು ಅರಿತು ಜಾಗೃತರಾದಾಗ ಹಾಗೂ ಎಲ್ಲಾ ಇಲಾಖೆಗಳ ಅಧಿಕಾರಿಗಳು ಒಗ್ಗೂಡಿ ಕೆಲಸ ಮಾಡಿದಾಗ ಮಾತ್ರ ಮಾನವ ಕಳ್ಳ ಸಾಗಾಣಿಕೆ ತಡೆಯಲು ಸಾಧ್ಯವಾಗುತ್ತದೆ. ಅಮಾಯಕ ಹೆಣ್ಣು ಮಕ್ಕಳು ಮಾನವ ಕಳ್ಳ ಸಾಗಾಣಿಕೆದಾರರಿಗೆ ಬಲಿಯಾಗುತ್ತಿರುವ ಘಟನೆಗಳು ಅಲ್ಲಲ್ಲಿ ನಡೆಯುತ್ತಿರುವುದು ಒಂದೆಡೆಯಾದರೆ, ಸಣ್ಣ ಮಕ್ಕಳನ್ನು ಅಪಹರಿಸಿ ಭಿಕ್ಷಾಟನೆಗೆ ಹಚ್ಚುವುದು. ಮಾನವ ದೇಹದ ಅಂಗಾಂಗಳ ಮಾರಾಟದ ಪ್ರಸಂಗಗಳು ಕೇಳಿ ಬರುತ್ತವೆ ಎಂದರು.

    ಪ್ರತಿಯೊಬ್ಬ ಪ್ರಜ್ಞಾವಂತ ಸಮುದಾಯ ವಿವಿಧ ಇಲಾಖೆಯ ಅಧಿಕಾರಿಗಳು, ವಿಶೇಷವಾಗಿ ಪಾಲಕರು ಬಹು ಎಚ್ಚರಿಕೆಯಿಂದ ಇದ್ದು, ಮಾನವ ಕಳ್ಳ ಸಾಗಾಣಿಕೆ ತಡೆಗೆ ಸಂಕಲ್ಪ ತೊಡಬೇಕು ಎಂದ ಅವರು ಈ ಕುರಿತು ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದ ಅವರು ಮಾನವ ಕಳ್ಳ ಸಾಗಾಣಿಕೆ ಕಂಡು ಬಂದಲ್ಲಿ ಜನತೆ ತಕ್ಷಣವೇ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಿ ಎಂದರು.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹಾಂತೇಶ್ ಭಜಂತ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಾನವ ಕಳ್ಳ ಸಾಗಾಣಿಕೆ ಎಂಬುದು ಸಾಮಾನ್ಯ ಮಹಿಳೆಯರಿಗೆ ಸಮಾಜದಲ್ಲಿ ಸಾಮಾನ್ಯಯುತವಾಗಿ ಜೀವನ ನಡೆಸಲು ಸಮಸ್ಯೆಯಾಗುತ್ತಿದೆ. ಮಹಿಳೆಯರನ್ನು ಕಳ್ಳ ಸಾಗಾಣಿಕೆಯಿಂದ ಅವರನ್ನು ಬೇರೆ ಬೇರೆ ಕೆಲಸ ಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದು, ಕೆಲವು ಮಾರಕ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.

    ಹೆಣ್ಣು ಮಕ್ಕಳ ಲೈಂಗಿಕ ಕ್ರಿಯೆಗೆ ದುರ್ಬಳಕೆ, ಅಂಗಾಂಗಗಳ ಮಾರಾಟ, ಬಾಲ ಕಾರ್ಮಿಕ ಪದ್ದತಿ, ಬಾಲ್ಯ ವಿವಾಹದಂತಹ ಅನಿಷ್ಟ ಪದ್ದತಿಗಳಿಗೆ ಮಾನವ ಕಳ್ಳಸಾಗಾಣಿಕೆ ನಡೆಯುತ್ತದೆ. ಈ ಬಗ್ಗೆ ತನಿಖೆ ಮಾಡಿ, ಜಾಗೃತಿ ಮೂಡಿಸುವ ಕೆಲಸ ಆಗಬೇಕಿದೆ ಎಂದ ಅವರು ಮನುಷ್ಯನೇ ಮನುಷ್ಯರನ್ನು ಕಳ್ಳ ಸಾಗಾಣಿಕೆ ಮಾಡುವುದು ದುರದೃಷ್ಟಕರ, ಬೇರೆ ಬೇರೆ ಉದ್ದೇಶಗಳಿಗೆ ಅವರನ್ನು ಮಾರಾಟ ಮಾಡುತ್ತಿದ್ದಾರೆ. ಅವರನ್ನು ಬಲವಂತವಾಗಿ ದುಡಿಮೆಗಳಲ್ಲಿ ದುಡಿಸಿಕೊಳ್ಳುತ್ತಿದ್ದಾರೆ.

    ಅಪಾಯದ ಸ್ಥಳಗಳಲ್ಲಿ ಕೆಲಸ ಮಾಡುವಂತೆ ಬಾಲ ಕಾರ್ಮಿಕರಾಗಿ ದುಡಿಸುವಂತದ್ದು, ಭಿಕ್ಷಾಟನೆಗೆ ಮಕ್ಕಳನ್ನು ಅಥವಾ ಹಿರಿಯ ಜೀವಗಳನ್ನು ಬಳಸಿಕೊಳ್ಳುತ್ತಿದ್ದಾರೆ ಇವುಗಳನ್ನು ತಪ್ಪಿಸಿ ಅವರಿಗೆ ನೆರವು ನೀಡಿ, ಉತ್ತಮ ಸೌಲಭ್ಯವನ್ನು ಕಲ್ಪಿಸುವುದರ ಜೊತೆಗೆ ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

    ಮೈಸೂರು ಒಡನಾಡಿ ಸೇವಾ ಸಂಸ್ಥೆ ಕಾರ್ಯದರ್ಶಿ ಸ್ಟ್ಯಾನ್ಲಿ ಕೆ.ವಿ. ಪ್ರಾಸ್ತಾವಿಕ ನುಡಿಗಳನ್ನಾಡಿ ಪ್ರಸ್ತುತ ದಿನಗಳಲ್ಲಿ ಸಾರ್ವಜನಿಕರು ಜಾಗೃತರಾಗಬೇಕು. ಇಂದು ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಹಲವಾರು ಕಾರ್ಯಕ್ರಮ ಆಯೋಜಿಸುವುದರ ಜೊತೆಗೆ ಕ್ರಿಯಾಯೋಜನೆಗಳನ್ನು ರೂಪಿಸಿದ್ದು, ತಂಡಗಳನ್ನು ರಚಿಸಿ ಬಾಲಕಾರ್ಮಿಕ ಪದ್ದತಿ, ಭಿಕ್ಷಾಟನೆ ಇವುಗಳನ್ನು ನಿರ್ಮೂಲನೆ ಮಾಡಲು ಪಣತೊಟ್ಟಿದೆ. ಹೆಣ್ಣು ಮಕ್ಕಳನ್ನು ಬೇರೆ ಬೇರೆ ಕೆಲಸಗಳಿಗೆ ಬಳಸಿಕೊಳ್ಳುತ್ತಿರುವುದನ್ನು ನಾವು ಪತ್ತೆ ಮಾಡಿ ಅವರಿಗೆ ನೆರವು ನೀಡಿ, ಉತ್ತಮ ಸೌಲಭ್ಯವನ್ನು ಕಲ್ಪಿಸಿಕೊಟ್ಟಿದೇವೆ ಎಂದು ಹೇಳಿದರು.

    ಹೆಚ್ಚುವರಿ ಪೋಲಿಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಮಾತನಾಡಿ ಮಾನವ ಕಳ್ಳ ಸಾಗಾಣಿಕೆಯಲ್ಲಿ ತಂತ್ರಜ್ಞಾನದ ಬಳಕೆ ಉಪಯೋಗ ಮತ್ತು ದುರುಪಯೋಗ ಕುರಿತು ಶಾಲಾ ಕಾಲೇಜು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು. ಈ ಕುರಿತು ಜನರು ಜವಾಬ್ದಾರಿಯುತವಾಗಿ ತಡೆಗಟ್ಟುವಂತಹ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

    ಚಿಕ್ಕಮಗಳೂರು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದೇಶಕ ರೇವಣ್ಣ, ಶಿರಾಳಕೊಪ್ಪ ಪರಿವರ್ತನಾ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ನಿರ್ದೇಶಕ ಮತ್ತು ಬೆಂಗಳೂರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಸದಸ್ಯ ಶಂಕರಪ್ಪ ಡಿ., ಮೈಸೂರು ಒಡನಾಡಿ ಸೇವಾ ಸಂಸ್ಥೆ ನಿರ್ದೇಶಕ ಮತ್ತು ಬೆಂಗಳೂರು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಸದಸ್ಯ ಪರಶುರಾಮ್ ಎಂ.ಎಲ್. ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

    One-day workshop on awareness of human trafficking

  • ಅಲ್ಲಂಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಮಲಾಕ್ಷಿ ಸೋಮಶೇಖರ್ ಆಯ್ಕೆ

    ಅಲ್ಲಂಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಮಲಾಕ್ಷಿ ಸೋಮಶೇಖರ್ ಆಯ್ಕೆ

    ಚಿಕ್ಕಮಗಳೂರು:  ಅಲ್ಲಂಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಮಲಾಕ್ಷಿ ಸೋಮಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರವೀಶ್ ಘೋಷಿಸಿದರು.

    ನಂತರ ನಡೆದ ಅಭಿನಂದನೆ ಸಮಾರಂಭದಲ್ಲಿ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಟಿ. ರಾಜಶೇಖರ್ ನೂತನ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ ಪಂಚಾಯಿತಿಯ ಸದಸ್ಯರು ಹಾಗೂ ಮಾಜಿ ಶಾಸಕರು ನಗರಕ್ಕೆ ಹೊಂದಿಕೊಂಡಿರುವ ಅಲ್ಲಂಪುರ ಗ್ರಾಮ ಪಂಚಾಯಿತಿ ಏಳಿಗೆಗಾಗಿ ಅನೇಕ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸಿದ್ದಾರೆ.

    ಇದೀಗ ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷರು ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮದ ಸಾರ್ವಜನಿಕರ ಸಹಮತವನ್ನು ಪಡೆದು ಪ್ರತಿಯೊಬ್ಬರ ಕುಂದು ಕೊರತೆಗಳನ್ನು ಆಲಿಸಿ ಸ್ಪಂಧಿಸುವುದರ ಜೊತೆಗೆ ಪಂಚಾಯಿತಿಯ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದರು.

    ಅಲ್ಲಂಪುರ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆ ಕಮಲಾಕ್ಷಿ ಸೋಮಶೇಖರ್ ಮಾತನಾಡಿ ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿರುವ ಪ್ರತಿಯೊಬ್ಬ ಸದಸ್ಯರಿಗೂ ಹಾಗೂ ಗ್ರಾಮಸ್ಥರಿಗೂ ವಿದೇಯಳಾಗಿರುತ್ತೇನೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಬೀದಿ ದೀಪ, ಹಾಗೂ ಸ್ವಚ್ಚತೆ ಸೇರಿದಂತೆ ಜನರ ಸಮಸ್ಯೆಗಳಿಗೆ ಸ್ಪಂದಿಸುವ ನನ್ನ ಜವಾಬ್ದಾರಿಯನ್ನು ವ್ಯವಸ್ಥಿತವಾಗಿ ನಿರ್ವಹಿಸುತ್ತೇನೆ ಎಂದು ತಿಳಿಸಿದರು.

    ಎಪಿಎಂಸಿ ಮಾಜಿ ಅಧ್ಯಕ್ಷ ಶಿವಕುಮಾರ್ ಮಾತನಾಡಿ ಕಮಲಾಕ್ಷಿ ಸೋಮಶೇಕರ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ಸ್ವಾಗತಾರ್ಹ. ಇವರ ಈ ಅವಧಿಯಲ್ಲಿ ಪಂಚಾಯಿತಿಯ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಯಾವುದೇ ಕೊರತೆಯಾಗದಂತೆ ಕ್ರಮವಹಿಸಿ ಎಲ್ಲಾವರ್ಗದ ಜನರಿಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಅಧಿಕಾರಿಗಳು ಜೊತೆಗೂಡಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದರು.

    ಈ ಸಂದರ್ಭದಲ್ಲಿ ಅಲ್ಲಂಪುರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ದಾನೇಶ್, ಸದಸ್ಯರುಗಳಾದ ಅರ್ಪಿತ ಎ.ಎಂ, ಪೂರ್ಣಿಮಾ ಎಸ್, ವಸಂತಕುಮಾರ್, ಶಿವರಾಜ್, ಮಧುಸೂಧನ್ ರಾವ್, ಎ.ಟಿ ರಮೇಶ್, ಪದ್ಮಾಕ್ಷಿ, ಕೃಷ್ಣ, ಶಿಲ್ಪ ಸೇರಿದಂತೆ ಗ್ರಾಮ ಪಂಚಾಯಿತಿ ಅಧಿಕಾರಿ ಸಿಬ್ಬಂಧಿಗಳು ಹಾಗೂ ಸರ್ವಜನಿಕರು ಉಪಸ್ಥಿತರಿದ್ದರು.

    Kamalakshi Somashekar elected as new president of Allampura Gram Panchayat

  • ಕರ್ತಿಕೆರೆ ಗ್ರಾ.ಪಂ ಉಪಾಧ್ಯಕ್ಷರಾಗಿ ಪುಟ್ಟಸ್ವಾಮಿ ಶೆಟ್ಟಿ ಅವಿರೋಧ ಆಯ್ಕೆ

    ಕರ್ತಿಕೆರೆ ಗ್ರಾ.ಪಂ ಉಪಾಧ್ಯಕ್ಷರಾಗಿ ಪುಟ್ಟಸ್ವಾಮಿ ಶೆಟ್ಟಿ ಅವಿರೋಧ ಆಯ್ಕೆ

    ಚಿಕ್ಕಮಗಳೂರು: : ಇಲ್ಲಿನ ಕರ್ತಿಕೆರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾಗಿ ಪುಟ್ಟಸ್ವಾಮಿ ಶೆಟ್ಟಿ ಅವಿರೋಧ ಆಯ್ಕೆಯಾದರು.

    ಇಂದು ತೆರವಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಪುಟ್ಟಸ್ವಾಮಿ ಶೆಟ್ಟಿ ಅವರು ನಾಮಪತ್ರ ಸಲ್ಲಿಸಿದ್ದು, ಉಳಿದಂತೆ ಯಾವುದೇ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆಯಲ್ಲಿ ಪುಟ್ಟಸ್ವಾಮಿ ಶೆಟ್ಟಿ ಅವರನ್ನು ಕರ್ತಿಕೆರೆ ಗ್ರಾ.ಪಂ ಉಪಾಧ್ಯಕ್ಷರಾಗಿ ಚುನಾವಣಾಧಿಕಾರಿಯಾಗಿದ್ದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಂಗನಾಥ್ ಘೋಷಣೆ ಮಾಡಿದರು.

    ನೂತನ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿದ ಬಿಜೆಪಿ ಮುಖಂಡ ಹಾಗೂ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಕೋಟೆ ರಂಗನಾಥ್ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರು, ಬೀದಿದೀಪ, ಸ್ವಚ್ಚತೆ ಸೇರಿದಂತೆ ಇನ್ನೂ ಮುಂತಾದ ಮೂಲಭೂತ ಸಮಸ್ಯೆಗಳನ್ನು ಈಡೇರಿಸಲು ಅಧ್ಯಕ್ಷರು, ಉಪಾಧ್ಯಕ್ಷರು ಮುಂದಾಗಬೇಕೆಂದು ಕಿವಿಮಾತು ಹೇಳಿದರು.

    ಮಾಜಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬೀಕನಹಳ್ಳಿ ಸೋಮಶೇಖರ್ ಮಾತನಾಡಿ, ಹಿರಿಯ ಸದಸ್ಯರಾಗಿರುವ ಪುಟ್ಟಸ್ವಾಮಿ ಶೆಟ್ಟಿಯವರು ಎರಡನೇ ಬಾರಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಗ್ಗೆ ಅಭಿನಂದಿಸಿ ಅವರು, ಎಲ್ಲರನ್ನೂ ವಿಶ್ವಾಸಕ್ಕೆ ಪಂಚಾಯಿತಿ ಅಭಿವೃದ್ಧಿಪಡಿಸಲು ಆಧ್ಯತೆ ನೀಡಬೇಕೆಂದು ಸಲಹೆ ನೀಡಿದರು.

    ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ವೆಂಕಟೇಶ್ ಮಾತನಾಡಿ, ನೂತನ ಉಪಾಧ್ಯಕ್ಷರು, ಹಿರಿಯ ಅನುಭವಿ ರಾಜಕಾರಣಿಯಾಗಿದ್ದು, ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಇತ್ಯರ್ಥಪಡಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅಭಿನಂದಿಸಿದರು.

    ನೂತನ ಉಪಾಧ್ಯಕ್ಷ ಪುಟ್ಟಸ್ವಾಮಿ ಶೆಟ್ಟಿ ಮಾತನಾಡಿ, ನನ್ನ ಆಯ್ಕೆಮಾಡಿದ ಪಕ್ಷದ ಎಲ್ಲಾ ಮುಖಂಡರಿಗೆ ಮತ್ತು ಪಂಚಾಯಿತಿಯ ಸರ್ವ ಸದಸ್ಯರಿಗೆ ಹಾಗೂ ಎಂಟು ಹಳ್ಳಿಗಳ ಗ್ರಾಮಸ್ಥರುಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.

    ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಕುಡಿಯುವ ನೀರು, ಬೀದಿದೀಪ, ಸ್ವಚ್ಚತೆ, ಆರೋಗ್ಯ ಇವುಗಳನ್ನು ಗಂಭೀರವಾಗಿ ಪರಿಗಣಿಸಿ ಬೇಸಿಗೆ ಕಾಲ ಸಮೀಪಿಸುತ್ತಿರುವುದರಿಂದ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಅಧ್ಯಕ್ಷರು-ಸದಸ್ಯರ ಸಹಕಾರದೊಂದಿಗೆ ಕ್ರಮವಹಿಸಿ ಕೆಲಸ ಮಾಡುವುದಾಗಿ ಭರವಸೆ ನೀಡಿದರು.

    ಈ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಮುಖಂಡರಾದ ಜಯಣ್ಣ, ಕನಕರಾಜ್, ಜೆ.ಡಿ. ಲೋಕೇಶ್, ಗ್ರಾಮಸ್ಥರಾದ ಪ್ರಭು, ನೀಲಶೆಟ್ಟಿ, ಗ್ರಾ.ಪಂ ಅಧ್ಯಕ್ಷರಾದ ಭಾಗ್ಯ ಆರ್.ಎಲ್, ಸದಸ್ಯರುಗಳಾದ ಟಿ.ಹೆಚ್. ಹೇಮಾವತಿ, ಗಣೇಶ್ ರಾಜ್ ಅರಸ್, ಮೋಹನ್.ಬಿ, ಚಂದ್ರಶೇಖರ್ ರಾಜ್ ಅರಸ್, ರೇಣುಕಾ, ಸಿದ್ದರಾಮೇಶ್ವರ.ಸಿ.ಎಲ್, ನಾಗೇಶ್, ಪಾರ್ವತಮ್ಮ, ನೇತ್ರಾ, ರೇಖಾ, ಆಶಾರಾಣಿ, ಸೌಮ್ಯ.ಕೆ.ಪಿ, ಲೋಕೇಶ್, ಯತೀಶ್, ಗ್ರಾ.ಪಂ ಪಿಡಿಓ ಪ್ರೇಮ.ಬಿ, ಕಾರ್ಯದರ್ಶಿ ಎ.ಹೆಚ್ ಜಯರಾಂ ಮತ್ತಿತರರು ಉಪಸ್ಥಿತರಿದ್ದರು.

    Puttaswamy Shetty elected unopposed as Karthikere Gram Panchayat Vice President

  • ಉಚಿತ ಕಣ್ಣಿನ ತಪಾಸಣೆ ಮತ್ತು ರಕ್ತದಾನ ಶಿಬಿರ

    ಉಚಿತ ಕಣ್ಣಿನ ತಪಾಸಣೆ ಮತ್ತು ರಕ್ತದಾನ ಶಿಬಿರ

    ಚಿಕ್ಕಮಗಳೂರು:: ಟ್ಯಾಕ್ಸಿ ಮತ್ತಿತರ ವಾಹನಗಳಲ್ಲಿ ಸಂಚರಿಸುವ ಪ್ರಯಾಣಿಕರ ಜೀವದ ಜವಾಬ್ದಾರಿ ಚಾಲಕನ ಮೇಲಿರುತ್ತದೆ. ಈ ಜವಾಬ್ದಾರಿಯನ್ನು ಎಲ್ಲರು ಚಾಚು ತಪ್ಪದೆ ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕು ಎಂದು ಜಿಲ್ಲಾ ಸರ್ಜನ್ ಡಾ.ಮೋಹನ್‌ಕುಮಾರ್ ಹೇಳಿದರು.

    ಜಿಲ್ಲಾಡಳಿತ, ಸಾರಿಗೆ ಇಲಾಖೆ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ನಗರದ ಸರಕಾರಿ ನೌಕರರ ಭವನದಲ್ಲಿ ೩೬ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ಇಂದು ಏರ್ಪಡಿಸಿದ್ದ ಉಚಿತ ಕಣ್ಣಿನ ತಪಾಸಣೆ ಮತ್ತು ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಚಾಲಕರಲ್ಲಿ ಬಿಡುವಿನ ವೇಳೆ ಒಂದಷ್ಟು ಸಮಯ ಸಿಗುತ್ತದೆ. ಆ ವೇಳೆ. ಪಾನ್, ಟೊಬೆಕೋ, ಬೀಡಿ ಸಿಗರೇಟ್, ಮದ್ಯಪಾನದಂತಹ ಹವ್ಯಾಸಗಳನ್ನು ಬಿಟ್ಟು, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು. ಪ್ರತಿ ಕಾಯಿಲೆಗಳಿಗೆ ಔಷಧಗಳು ಬಂದಿರಬಹುದು. ಆದರೆ, ಅಪಘಾತ ತಡೆಗಟ್ಟಲು ಸದಾ ಎಚ್ಚರವಾಗಿರುವುದೇ ಮದ್ದು. ಕೆಟ್ಟ ಹವ್ಯಾಸಗಳ ಜತೆ ಮೊಬೈಲ್ ಬಳಕೆ ಕಡಿಮೆ ಮಾಡಿದಲ್ಲಿ ಹಲವು ಅಪಘಾತ ತಡೆಯಬಹುದು ಎಂದು ತಿಳಿಸಿದರು.

    ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಕೇಶ್‌ಕುಮಾರ್ ಮಾತನಾಡಿ, ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹದ ಹಿನ್ನೆಲೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಾರಿಗೆ ಇಲಾಖೆ ಮಾಡುತ್ತಿದೆ ಎಂದರು.

    ರೋಟರಿ ಕ್ಲಬ್‌ನ ರಾಜ್‌ಕುಮಾರ್ ಮಾತನಾಡಿ, ರೋಟರಿ ವಿಶ್ವದಾದ್ಯಂತ ಇರುವ ಸಂಸ್ಥೆ. ಸೇವಾ ಮನೋಭಾವನೆಯಿಂದ ಪಲ್ಸ್ ಪೊಲೀಯೋ ಮತ್ತಿತರೆ ಅನೇಕ ಸಮಾಜಮುಖಿ ಕಾರ್ಯಕ್ರಮ ಮಾಡುತ್ತಾ ಬಂದಿದೆ ಎಂದು ಹೇಳಿದರು.

    ಜಯ ಕರ್ನಾಟಕ ಸಂಘಟನೆಯ ಅಧ್ಯಕ್ಷ ಕೆ.ಆರ್.ಅನಿಲ್‌ಕುಮಾರ್ ಮಾತನಾಡಿ, ರಕ್ತದಾನದಲ್ಲಿ ಮೊದಲಿಗರು ಅಂತ ಇದ್ದರೆ ಅದು ಆಟೋ ಮತ್ತು ಟ್ಯಾಕ್ಸಿ ಚಾಲಕರು ಎಂದು ಹೇಳಬಹುದು. ಚಾಲಕರು ಮದ್ಯಪಾನ, ಧೂಮಪಾನಕ್ಕೆ ಬಲಿಯಾಗದೆ ಸ್ವಚ್ಛವಾಗಿರಬೇಕು. ಸ್ಟೇರಿಂಗ್ ಹಿಡಿಯಬೇಕಾದರೆ ತಮ್ಮ ಕುಟುಂಬವನ್ನು ನೆನಪಿಸಿಕೊಂಡು ರಸ್ತೆ ಸಂಚಾರಿ ನಿಯಮಗಳನ್ನು ಪಾಲಿಸಬೇಕು ಎಂದು ವಿನಂತಿಸಿದರು.

    ನೌಕರರ ಸಂಘದ ಅಧ್ಯಕ್ಷ ದೇವೇಂದ್ರ ಮಾತನಾಡಿ, ಓರ್ವ ಪ್ರಚಾರ್ಯರು ೬೨ ಬಾರಿ ರಕ್ತದಾನ ಮಾಡಿದ್ದಾರೆ ಅವರೇ ನಾಗರಾಜ್ ಎಂದು ಹೇಳಿದರು. ಇಂತಹ ಪುಣ್ಯಾತ್ಮರ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿ. ಆರೋಗ್ಯ ತಪಾಸಣೆ ಉತ್ತಮವಾದ ಕಾರ್ಯಕ್ರಮ ಎಂದರು. ರಕ್ತನಿಧಿ ಕೇಂದ್ರದ ಡಾ.ಮುರುಳೀಧರ್, ಡಾ.ಹಂಸ, ಡಾ.ಸುಜಿತ್, ಆಟೋ ಸಂಘದ ಅಧ್ಯಕ್ಷ ರಾಮೇಗೌಡ, ವಿನಾಯಕ ಮತ್ತಿತರರಿದ್ದರು.

    Free eye check-up and blood donation camp

  • ಮುಖ್ಯಮಂತ್ರಿಗಳ ವಿಶೇಷ ಅನುದಾನ ಪಡೆದು ನಗರದ ಸಮಗ್ರ ಅಭಿವೃದ್ಧಿ

    ಮುಖ್ಯಮಂತ್ರಿಗಳ ವಿಶೇಷ ಅನುದಾನ ಪಡೆದು ನಗರದ ಸಮಗ್ರ ಅಭಿವೃದ್ಧಿ

    ಚಿಕ್ಕಮಗಳೂರು: ಮುಂದಿನ ದಿನಗಳಲ್ಲಿ ಚಿಕ್ಕಮಗಳೂರು ನಗರವನ್ನು ಮುಖ್ಯಮಂತ್ರಿಗಳ ವಿಶೇಷ ಅನುದಾನ ಪಡೆದು ಸಮಗ್ರ ಅಭಿವೃದ್ಧಿಪಡಿಸುವುದಾಗಿ ಶಾಸಕ ಹೆಚ್.ಡಿ ತಮ್ಮಯ್ಯ ಭರವಸೆ ನೀಡಿದರು.

    ಅವರು ಇಂದು ನಗರದ ಕೋಟೆ ಬಡಾವಣೆ ಬೇಲೂರು ರಸ್ತೆ ನೂತನ ಬಸ್ ನಿಲ್ದಾಣ ಹಾಗೂ ನಗರದ ಆಯ್ದ ಪ್ರಮುಖ ಭಾಗಗಳಲ್ಲಿ ಅತ್ಯುನ್ನತ ಮಾದರಿಯ ೪ ಬಸ್ ನಿಲ್ದಾಣಗಳ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ಬಿಡುಗಡೆಯಾದ ಬಳಿಕ ಕಾಮಗಾರಿಗಳನ್ನು ಆರಂಭಿಸಿ ಮೇ ತಿಂಗಳೊಳಗೆ ನಗರದ ಎಲ್ಲಾ ರಸ್ತೆಗಳನ್ನು ಸಂಪೂರ್ಣ ಅಭಿವೃದ್ಧಿಪಡಿಸಲು ಗುರಿ ಹೊಂದಲಾಗಿದೆ ಎಂದು ಹೇಳಿದರು.

    ನಗರದ ವಿವಿದೆಡೆ ವಿನೂತನ ಮಾದರಿಯಲ್ಲಿ ಹೊರದೇಶದಲ್ಲಿ ನಿರ್ಮಾಣವಾಗಿರುವ ಸುಸಜ್ಜಿತ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಲು ಇಂದು ಗುದ್ದಲಿ ಪೂಜೆ ನೆರವೇರಿಸಿದ್ದು, ಈ ಬಸ್ ನಿಲ್ದಾಣಗಳನ್ನು ಅತ್ಯಾಧುನಿಕ ರೀತಿಯಲ್ಲಿ ಗ್ಲಾಸ್ ಅಳವಡಿಸಿರುವುದರಿಂದ ಇದು ಸರ್ಕಾರದ ಆಸ್ತಿ ಅಲ್ಲ ಸಾರ್ವಜನಿಕರ ಆಸ್ತಿ ಎಂದು ಭಾವಿಸಿ ಹಾನಿಯಾಗದಂತೆ ನೋಡಿಕೊಳ್ಳಬೇಕೆಂದು ಮನವಿ ಮಾಡಿದರು.

    ಪಕ್ಷಾತೀತವಾಗಿ ಎಲ್ಲಾ ಪದಾಧಿಕಾರಿಗಳು ಭಾಗವಹಿಸಿ ಅಭಿವೃದ್ಧಿಗೆ ಕೈಜೋಡಿಸಿರುವ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಅವರು, ಇಲ್ಲಿ ಒಂದು ಬಸ್ ನಿಲ್ದಾಣ ನಿರ್ಮಾಣ ಮಾಡಬೇಕೆಂಬ ಹಲವು ದಿನಗಳ ಬೇಡಿಕೆ ಇಂದು ಈಡೇರಿದ್ದು, ಸಂಸದ ಜಯರಾಂ ರಮೇಶ್ ನಿಧಿಯಿಂದ ೧೦.೯೨ ಲಕ್ಷ ರೂ ಹಾಗೂ ತಮ್ಮ ಶಾಸಕರ ನಿಧಿಯಿಂದ ೫ ಲಕ್ಷ ರೂ ನಿಧಿಯಲ್ಲಿ ಈ ಬಸ್ ನಿಲ್ದಾಣ ನಿರ್ಮಿಸಲಾಗುತ್ತಿದೆ ಎಂದರು.

    ೧೦.೯೦ ಲಕ್ಷ ರೂ ವೆಚ್ಚದಲ್ಲಿ ಹಿರೇಮಗಳೂರಿನಲ್ಲಿ ಬಸ್ ನಿಲ್ದಾಣ, ನಗರಾಭಿವೃದ್ಧಿ ಪ್ರಾಧಿಕಾರದ ಬಡಾವಣೆ ಕಲ್ಯಾಣ ನಗರದಲ್ಲಿ ೧೦ ಲಕ್ಷ ರೂ ವೆಚ್ಚದಲ್ಲಿ ಬಸ್ ನಿಲ್ದಾಣ ಹಾಗೂ ಕಣಿವೇ ರುದ್ರೇಶ್ವರ ದೇವಸ್ಥಾನದ ಬಳಿ ಹೌಸಿಂಗ್ ಬೋರ್ಡ್ ಆರನೇ ಹಂತದ ಜನರಿಗೆ ಹಾಗೂ ದಾಸರಹಳ್ಳಿ ಜನರಿಗೆ ಅನುಕೂಲವಾಗುವಂತೆ ೧೦.೯೦ ಲಕ್ಷ ರೂ ವೆಚ್ಚದಲ್ಲಿ ಬಸ್ ನಿಲ್ದಾಣ ನಿರ್ಮಾಣ ಮಾಡಲಾಗುವುದೆಂದರು.

    ಈ ನಾಲ್ಕು ಕಾಮಗಾರಿಗಳಿಗೆ ಅಗತ್ಯವಾಗಿ ಬೇಕಾಗಿರುವ ಹಣ ಲಭ್ಯವಿದ್ದು, ಇನ್ನೊಂದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಲೋಕಾರ್ಪಣೆ ಮಾಡಲಾಗುವುದೆಂದು ತಿಳಿಸಿದ ಅವರು, ಜನಪ್ರತಿನಿಧಿಗಳಾಗಿ ಎಲ್ಲಾ ಜನರ ಆಶಯಗಳಿಗೆ ಸ್ಪಂದಿಸಿ ಪಕ್ಷಾತೀತವಾಗಿ ಕೆಲಸ ಮಾಡಬೇಕಾಗಿರುವುದು ಅಗತ್ಯವಾಗಿದೆ ಎಂದರು.

    ನಗರದಲ್ಲಿ ಹಾನಿಯಾಗಿರುವ ರಸ್ತೆಗಳ ದುರಸ್ಥಿಗೆ ಈಗಾಗಲೇ ಕಾಮಗಾರಿ ಆರಂಭಗೊಂಡಿದ್ದು ಅಂಚೆ ಕಚೇರಿ ರಸ್ತೆ, ಒಕ್ಕಲಿಗರ ಸಮುದಾಯ ಭವನದ ರಸ್ತೆ, ಶಂಕರಪುರ ಐದನೇ ಕ್ರಾಸ್ ರಸ್ತೆ ಸೇರಿದಂತೆ ಎಲ್ಲಾ ರಸ್ತೆಗಳನ್ನು ದುರಸ್ಥಿಪಡಿಸಲು ಜಯರಾಂ ರಮೇಶ್ ರವರ ಮನವೊಲಿಸಿ ಅನುದಾನ ತಂದಿರುವುದರ ಜೊತೆಗೆ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ಚಿಕ್ಕಮಗಳೂರು ನಗರಕ್ಕೆ ಸೀಮಿತವಾಗಿ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.

    ಗವನಹಳ್ಳಿಯಿಂದ ರಾಂಪುರದವರೆಗೆ ಉತ್ತಮ ಗುಣಮಟ್ಟದ ವಿದ್ಯುತ್ ದೀಪ ಅಳವಡಿಸಲು ಈಗಾಗಲೇ ಡಿಪಿಆರ್ ಮಾಡಲಾಗಿದೆ. ಮುಂದೆ ಬೇಲೂರು ಬಸ್ ನಿಲ್ದಾಣದಿಂದ ಹಿರೇಮಗಳೂರುವರೆಗೆ ಬೀದಿದೀಪ ಅಳವಡಿಸಲು ಕ್ರಮವಹಿಸಲಾಗುವುದೆಂದು ಹೇಳಿದರು.

    ನಗರಸಭಾಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ನಾವು ಅಧ್ಯಕ್ಷರಾದ ನಂತರ ಸಿ ಟಿ ಬಸ್ ನಿಲ್ದಾಣಗಳನ್ನು ನಿರ್ಮಿಸಬೇಕೆಂದು ಸಾರ್ವಜನಿಕರಿಂದ ಬಹಾಳ ಬೇಡಿಕೆ ಬಂದ ಪರಿಣಾಮ ಇಂದು ಶಾಸಕರು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಈಡೇರಿಸಿದ್ದಾರೆ ಎಂದರು.

    ಸಾರ್ವಜನಿಕರು ಈ ಅತ್ಯಾಧುನಿಕ ಬಸ್ ನಿಲ್ದಾಣಗಳನ್ನು ತಮ್ಮ ಆಸ್ತಿ ಎಂಬಂತೆ ಬಳಸಿಕೊಳ್ಳಬೇಕೆಂದು ಮನವಿ ಮಾಡಿದ ಅವರು,ಸಾರ್ವಜನಿಕರು ಸರ್ಕಾರದೊಂದಿಗೆ ಕೈಜೋಡಿಸಿದಾಗ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ವಿನಂತಿಸಿದರು.

    ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮದ್ ಮಾತನಾಡಿ, ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಬಸ್ ನಿಲ್ದಾಣಗಳು ಇಲ್ಲದೆ ತೊಂದರೆಯಾಗುತ್ತಿತ್ತು. ಇಂದು ನಗರದ ವಿವಿಧ ನಾಲ್ಕು ಭಾಗಗಳಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ಗುದ್ದಲ್ಲಿಪೂಜೆ ನೆರವೇರಿಸಿರುವುದು ಶ್ಲಾಘನೀಯ ಎಂದರು.

    ನಗರದಲ್ಲಿ ಪರವಾನಗಿ ಇಲ್ಲದೆ ಅನಧಿಕೃತ ಕಟ್ಟಡಗಳು ನಿರ್ಮಾಣವಾಗುತ್ತಿರುವ ಬಗ್ಗೆ ಗಮನ ಸೆಳೆದಾಗ ಅಂತಹ ಕಟ್ಟಡ ಮಾಲೀಕರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಿಡಿಎ ಆಯುಕ್ತರು ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ ಎಂದರು.

    ಈ ಸಂದರ್ಭದಲ್ಲಿ ಸಿಡಿಎ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಮಂಜೇಗೌಡ, ನಗರ ಕಾಂಗ್ರೆಸ್ ಅಧ್ಯಕ್ಷ ತನೂಜ್ ನಾಯ್ಡು, ಗ್ರಾಮಸ್ಥರಾದ ದಯಾನಂದ ನಾಯ್ಡು, ವೆಂಕಟೇಧ್ ನಾಯ್ಡು, ನಗರಸಭೆ ಸದಸ್ಯರಾದ ಮಧುಕುಮಾರ್ ರಾಜ್ ಅರಸ್, ಶಾದಬ್, ಆನಂದ, ಸೋಮಣ್ಣ ಹಾಗೂ ನಗರಸಭೆ ಪೌರಾಯುಕ್ತ ಬಿ.ಸಿ. ಬಸವರಾಜ್, ಸಿಡಿಎ ಆಯುಕ್ತರಾದ ನಾಗರತ್ನ ಮತ್ತಿತರರು ಉಪಸ್ಥಿತರಿದ್ದರು.

    Comprehensive development of the city by receiving special grants from the Chief Minister

  • ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಮಹಾನ್ ಯುಗ ಪುರುಷ

    ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಮಹಾನ್ ಯುಗ ಪುರುಷ

    ಚಿಕ್ಕಮಗಳೂರು:  ಸವಿತಾ ಮಹರ್ಷಿಗಳು ಸಮಾಜದ ಶ್ರೇಷ್ಠತೆಗೆ ಶ್ರಮಿಸಿದ ಮಹಾನ್ ಯುಗ ಪುರುಷ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಹೇಳಿದ್ದಾರೆ.

    ನಗರದ ಕುವೆಂಪು ಕಲಾ ಮಂದಿರದ ಹೇಮಾಂಗಣ ಸಭಾಂಗಣದಲ್ಲಿ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಲಾಗಿದ್ದ ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಸವಿತಾ ಮಹರ್ಷಿಗಳು ಸಮಾಜಮುಖಿಯಾಗಿ ಬೆಳೆದು ದಾರಿದೀಪವಾಗಿದ್ದಾರೆ ಇಂತಹ ಮಹಾತ್ಮರ ಜಯಂತಿಗಳನ್ನು ಆಚರಿಸುವ ಮೂಲಕ ಸರ್ಕಾರ ಇವರ ಆದರ್ಶಗಳ ಹಾದಿಯಲ್ಲಿ ನಡೆಯಲು ನಮಗೆ ಬೆಳಕು ತೋರಿಸಿದೆ ಎಂದ ಅವರು ಸವಿತಾ ಸಮಾಜದ ಬಂಧುಗಳು ಮಹರ್ಷಿಗಳ ಆದರ್ಶಗಳನ್ನು ತಮ್ಮ ಜೀವನದಲ್ಲಿ ಆಳವಡಿಸಿಕೊಂಡು ಮುನ್ನೆಡೆಯಬೇಕು ಎಂದು ಹೇಳಿದರು.

    ಸವಿತಾ ಸಮಾಜ ಹಿಂದುಳಿದ ಸಮಾಜವಾಗಿದ್ದು, ಸಮಾಜವು ಸಂಘಟನೆಯಿಂದ ಸರಕಾರದ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಬೆಳೆಯಬೇಕು. ಜೊತೆಗೆ ಸಹಕಾರ ಸಂಘಗಳ ಮೂಲಕ, ಆರ್ಥಿಕ ಚಟುವಟಿಕೆಗಳ ಮೂಲಕ ಸಂಘವನ್ನು ಸ್ಥಾಪಿಸಿಕೊಂಡು ಮುಂದೇ ಬರಲು ಪ್ರಯತ್ನಿಸಬೇಕು. ಸವಿತಾ ಸಮಾಜಕ್ಕೆ ಜಾಗವನ್ನು ಮಂಜೂರು ಮಾಡಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

    ಸಾಹಿತಿ ಬಿ. ತಿಪ್ಪೇರುದ್ರಪ್ಪ ಅವರು ಉಪನ್ಯಾಸ ನೀಡಿ ಪೌರಣಿಕ ವ್ಯಕ್ತಿಯಾದ ಸವಿತಾ ಮಹರ್ಷಿಯು ರಥ ಸಪ್ತಮಿಯ ದಿನ ಜನಿಸಿದರು ಎಂದ ಅವರು ಧಾರ್ಮಿಕವಾಗಿ ಶಿವನ ಬಲಗಣ್ಣಿನಿಂದ ಜನಿಸಿದವರೇ ಸವಿತಾ ಮಹರ್ಷಿ ಎಂಬ ಪ್ರತೀತ ಇದೆ ಸವಿತಾ ಸಮಾಜದವರು ಸೂರ್ಯ ವಂಶಕ್ಕೆ ಸೇರಿದವರೆಂದು ಹೇಳಿದರು. ಅವರು ಅಪಾರ ಜ್ಞಾನ ಭಂಡಾರ ಹೊಂದಿದ ಮಹರ್ಷಿಗಳು ನಾಲ್ಕನೇ ವೇದವಾದ ಸಾಮವೇದ ಕೃತಿ ರಚಿಸಿದ್ದಾರೆ ಎಂದು ಹೇಳಿದರು.

    ಸಮಾರಂಭದ ಅಧ್ಯಕ್ಷತೆಯನ್ನು ಉಪತಹಸೀಲ್ದಾರ್ ರಾಮರಾವ್ ದೇಸಾಯಿ ವಹಿಸಿದ್ದರು. ಪತ್ರಕರ್ತ ಹಾಗೂ ಸಮಾಜದ ಮುಖಂಡ ವಿಶ್ವನಾಥ್ ಮಾತನಾಡಿದರು. ಸವಿತಾ ಸಮಾಜದ ಜಿಲ್ಲಾ ಅಧ್ಯಕ್ಷ ಮಹಾಲಿಂಗ ಹಾಗೂ ಸಮಾಜದ ಮುಖಂಡರುಗಳಾದ ಯೋಗೇಶ್, ವಿಶ್ವನಾಥ್, ರಾಘವೇಂದ್ರ ಮತ್ತಿತರರು ಉಪಸ್ಥಿತರಿದ್ದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ರಮೇಶ್ ಸ್ವಾಗತಿಸಿ ವಂದಿಸಿದರು.

    Savita Maharishi Jayanti Program

  • ರಾಜನೀತಿಯೊಂದಿಗೆ ಧರ್ಮನೀತಿ ಸಮ್ಮಿಲನವಾದಾಗ ದೇಶದಲ್ಲಿ ಶಾಂತಿ

    ರಾಜನೀತಿಯೊಂದಿಗೆ ಧರ್ಮನೀತಿ ಸಮ್ಮಿಲನವಾದಾಗ ದೇಶದಲ್ಲಿ ಶಾಂತಿ

    ಚಿಕ್ಕಮಗಳೂರು: ರಾಜನೀತಿಯೊಂದಿಗೆ ಧರ್ಮನೀತಿ ಸಮ್ಮಿಲನವಾದಾಗ ದೇಶದಲ್ಲಿ ಶಾಂತಿ-ಸುಸಂಸ್ಕೃತವಾಗುತ್ತದೆ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಅಭಿಪ್ರಾಯಿಸಿದರು.

    ಅವರು ಇಂದು ಇಲ್ಲಿನ ತೇರಾಪಂಥ್ ಭವನದಲ್ಲಿ ತೇರಾಪಂಥ್ ಸಭಾ ವತಿಯಿಂದ ಏರ್ಪಡಿಸಲಾಗಿದ್ದ ತೇರಾಪಂಥ್ ಧರ್ಮಸಂಘದ ೧೬೧ನೇ ಮರ್ಯಾದ ಮಹೋತ್ಸವದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

    ಭಾರತ ದೇಶದಲ್ಲಿ ಚಾರ್ತುಮಾಸ ಪೂಜೆ ಮಾಡುವ ಮೂಲಕ ಹಿಂದೆ ರಾಜರ ಕಾಲದಲ್ಲಿ ಧರ್ಮನೀತಿ ಅಳವಡಿಸಿಕೊಳ್ಳುತ್ತಿದ್ದರು ಎಂದು ಹೇಳಿದರು.

    ಭಾರತ ದೇಶದಲ್ಲಿ ಸುಮಾರು ೮೦೦ ಕ್ಕೂ ಹೆಚ್ಚು ಸಾಧು-ಸಾಧ್ವಿಗಳನ್ನು ಹೊಂದಿರುವ ಜೈನ ಸಮಾಜದಲ್ಲಿ ಆಚಾರ್ಯರು ಚಾತುರ್ಮಾಸ ಪೂಜೆ ಮಾಡಲು ದಿನಾಂಕ ನಿಗಧಿ ಮಾಡುವ ಇಂದು ಶುಭದಿನವಾಗಿದೆ ಎಂದು ಎಲ್ಲಾ ಜೈನ್ ಸಮುದಾಯದ ಬಾಂಧವರಿಗೆ ಶುಭಾಶಯ ಕೋರಿದರು.

    ಅಹಿಂಸಾತ್ಮಕವಾದ ಪವಿತ್ರ ಜೈನ ಧರ್ಮವಾಗಿದ್ದು, ಅವರ ಊಟ-ಉಪಹಾರ ಸಂಪೂರ್ಣ ಸಸ್ಯಹಾರಿಯಾಗಿದ್ದು, ಹಿಂಸೆಯ ಮಾರ್ಗವನ್ನು ದೂರವಿರಿಸಿ ನಡೆಯುತ್ತಿರುವ ಜೈನ್ ಸಮಾಜದ ಆಚಾರ-ವಿಚಾರಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಹೂವಿನೊಂದಿಗೆ ನಾರು ಸ್ವರ್ಗಕ್ಕೆ ಹೋದಂತೆ ಜೈನ್ ಸಮಾಜದ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಆಶೀರ್ವಚನ ಮತ್ತು ಆಶೀರ್ವಾದ ಕೊಡುತ್ತಿದ್ದೀರಿ ಎಂದು ಪ್ರಶಂಸೆ ವ್ಯಕ್ತಪಡಿಸಿದರು.

    ತಾವು ನಗರಸಭಾಧ್ಯಕ್ಷರಾಗಿದ್ದಾಗ ತೇರಾಪಂಥ್ ರಸ್ತೆಗೆ ಆಚಾರ್ಯ ತುಳಸಿ ಮಾರ್ಗ ಎಂದು ನಾಮಕರಣ ಮಾಡಿರುವುದನ್ನು ಇದೇ ಸಂದರ್ಭದಲ್ಲಿ ಸ್ಮರಿಸಿದರು.

    ತೇರಾಪಂಥ್ ಮಹಾಸಭಾ ಅಧ್ಯಕ್ಷ ಮಹೇಂದ್ರ ಡೋಸಿ, ಮಾತನಾಡಿ ತೇರಾಪಂಥ್ ಧರ್ಮಸಂಘದ ೧೬೧ನೇ ಮರ್ಯಾದ ಮಹೋತ್ಸವ ಎಂದರೆ ಭಾರತ ಸಂವಿಧಾನದ ಮಾದರಿಯಲ್ಲಿ ಜೈನ್ ಸಮುದಾಯ ತೇರಾಪಂಥ್ ಸಾಧು-ಸಾಧ್ವಿಯರಿಗೆ ನೀಡಲಾದ ಸಂವಿಧಾನವಾಗಿದೆ ಎಂದು ಹೇಳಿದರು.

    ತೇರಾಪಂಥ್ ಸಂಸ್ಥಾಪಕ ಆಚಾರ್ಯ ಶ್ರೀ ಭಿಕ್ಷುರವರು ಎಲ್ಲಾ ಸಾಧು-ಸಾಧ್ವಿಯರಿಗೆ ಸಂವಿಧಾನ ರಚನೆ ಮಾಡಿದ್ದು, ಇದರ ಮೂಲಕ ಎಲ್ಲಾ ಸಾಧು-ಸಾಧ್ವಿಯರು ನಡೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.

    ಆಚಾರ್ಯರ ಶಿಷ್ಯರಾದ ಸುಮಾರು ೭೦೦ ಸಾಧು-ಸಾಧ್ವಿಯರು ಅನುಯಾಯಿಗಳಾಗಿದ್ದು ಎಲ್ಲೆಲ್ಲಿ ಚಾತುರ್ಮಾಸ ಕಾರ್ಯಕ್ರಮಗಳು ಆಯೋಜನೆಗೊಳ್ಳುತ್ತವೆ ಎಲ್ಲಿ ಭಕ್ತರಿಗೆ ಜೈನ್ ಧರ್ಮದ ಬಗ್ಗೆ ಉಪದೇಶ ಪ್ರಚಾರ ನೀಡಬೇಕು ಎಂದರು.

    ಒಂದು ವರ್ಷದಲ್ಲಿ ೪ ತಿಂಗಳು ಒಂದೇ ಕಡೆ ಚಾತುರ್ಮಾಸ ಕಾರ್ಯಕ್ರಮವನ್ನು ಆಯೋಜಿಸಿ ನಡೆಸಲಾಗುವುದು. ಉಳಿದ ದಿನಗಳಲ್ಲಿ ದೇಶ ಸಂಚಾರ ಮಾಡಿ ಧರ್ಮ ಪ್ರಚಾರ ಮಾಡುವ ಸಾಧು-ಸಾಧ್ವಿಯರಿಗೆ ಮನೆ ಮಠಗಳಿರುವುದಿಲ್ಲ ಎಂದು ತಿಳಿಸಿದರು.

    ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ೧೧ನೇ ಆಚಾರ್ಯ ಶಿಷ್ಯರಾದ ಸಯಂ ಲತಾಜಿ ವಹಿಸಿ ಆಶೀರ್ವಚನ ನೀಡಿದರು. ಇವರೊಂದಿಗೆ ಮೂವರು ಶಿಷ್ಯರು ಭಾಗವಹಿಸಿದ್ದರು. ಮುಖ್ಯ ಭಕ್ತರಾಗಿ ಹಾಸನದ ಎಂ.ಎಸ್. ರಾಮಯ್ಯ ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ. ವೇಣುಗೋಪಾಲ್ ರಾವ್ ಹಾಗೂ ಇದೇ ಕಾಲೇಜಿನ ಹೆಚ್.ಓ.ಡಿ ಡಾ. ಬಬಿತಾ ಜೈನ್, ನಗರಸಭೆ ಸದಸ್ಯ ವಿಫುಲ್ ಕುಮಾರ್ ಜೈನ್ ಪಾಲ್ಗೊಂಡಿದ್ದರು.

    Terapanth Dharma Sangh’s 161st Maryada Mahotsav program

  • ಕ್ರೀಡಾಕೂಟದಿಂದ ಸಮಾಜದಲ್ಲಿ ಸೌಹಾರ್ದತೆ ವೃದ್ಧಿ

    ಕ್ರೀಡಾಕೂಟದಿಂದ ಸಮಾಜದಲ್ಲಿ ಸೌಹಾರ್ದತೆ ವೃದ್ಧಿ

    ಚಿಕ್ಕಮಗಳೂರು:  ಕ್ರೀಡಾಕೂಟದಲ್ಲಿ ಭಾಗವವಿಸುವುದರಿಂದ ಕ್ರಿಯಾಶೀಲತೆಯ ಜೊತೆಗೆ ಸಮಾಜದಲ್ಲಿ ಇತರರೊಂದಿಗೆ ಪರಸ್ಪರ ಸೌಹಾರ್ದತೆ ಹೆಚ್ಚಿಸುತ್ತದೆ ಎಂದು ವಾಣಿಜ್ಯ ತೆರಿಗೆ ಆಯುಕ್ತರಾದ ಟಿ.ಕೆ ಸುನಿಲ್ ಕುಮಾರ್ ಹೇಳಿದರು.

    ಜಿಲ್ಲಾ ಆದಾಯ ಮತ್ತು ತೆರಿಗೆ ಸಲಹೆಗಾರರ ಸಂಘದ ವತಿಯಿಂದ ನಗರದ ಎಐಟಿ ಕಾಲೇಜಿನ ಬಿಜಿಎಸ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದೈಹಿಕ ಮತ್ತು ಮಾನಸಿಕ ಅರೋಗ್ಯವನ್ನು ಸುಸ್ಥಿತಿಯಲ್ಲಿರಿಸಿಕೊಳ್ಳಲು ಕ್ರೀಡೆಯು ಉತ್ತಮ ಮಾರ್ಗವಾಗಿದೆ ಪ್ರತಿಯೊಬ್ಬರೂ ಕ್ರೀಡಾ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಆರೋಗ್ಯಯುತ ಜೀವನ ನಿರ್ವಹಿಸಿ ಎಂದರು.

    ಆದಾಯ ತೆರಿಗೆ ಅಧಿಕಾರಿ ಕೆ.ಯು ಪ್ರವೀಣ್‌ಮಾತನಾಡಿ ಅಧಿಕಾರಿಗಳು ಕೆಲಸದ ಒತ್ತಡದಿಂದ ಹೊರಬರಲು ಪ್ರತಿನಿತ್ಯ ಕ್ರೀಡಾಭ್ಯಾಸ ಮಾಡಬೇಕು ಕ್ರೀಡೆಯಲ್ಲಿ ಗೆಲುವು ಸೋಲು ಮುಖ್ಯವಲ್ಲ ಭಾಗವಿಹಿಸುವಿಕೆ ಮುಖ್ಯ ಎಂದರು.

    ಜಿಲ್ಲಾ ಆದಾಯ ಮತ್ತು ತೆರಿಗೆ ಸಲಹೆಗಾರರ ಸಂಘದ ಅಧ್ಯಕ್ಷೆ ಶ್ಯಾಮಲಾ ಎಂ ರಾವ್ ಮಾತನಾಡಿ ಕ್ರೀಡೆಯಿಂದ ದೇಹ ಮತ್ತು ಮನಸ್ಸನ್ನು ಸಧೃಡವಾಗಿರಿಸಿಕೊಂಡು ಆರೋಗ್ಯವಂತರಾಗಿರಬಹುದು. ಆಡಿಟರ್ಸ್ ಅಸೋಶಿಯೆಷನ್ ವತಿಯಿಂದ ಈ ಕ್ರೀಡಾಕೂಟವನ್ನು ಆಯೋಜಿಸಲಾಗಿದ್ದು ಕ್ರೀಡಾಪಟುಗಳ ಉತ್ಸಾಹ ಮತ್ತು ಭಾಗವಹಿಸುವಿಕೆಯು ಇನ್ನು ಹೆಚ್ಚಿನ ಪಂದ್ಯಾವಳಿಗಳನ್ನು ಆಯೋಜಿಸಲು ಪ್ರೆರೇಪಿಸುತ್ತದೆ ಎಂದರು.

    ಈ ಸಂಧರ್ಭದಲ್ಲಿ ಸಂಘದ ಕಾರ್ಯದರ್ಶಿ ಎಂ.ಎನ್ ಮಂಜುನಾಥ್, ಖಜಾಂಚಿಗಳಾದ ಆಡಿಟರ್ ರವಿ, ಆದಾಯ ತೆರಿಗೆ ಅಧಿಕಾರಿಗಳಾದ ದೀಪಕ್, ಚಂದ್ರು, ವಿನಿತ್ ಇತರರು ಉಪಸ್ಥಿತರಿದ್ದರು.

    Cricket tournament program organized at BGS Stadium, AIT College

  • ಮೈಲಿಮನೆ ಪ್ರಾ.ಕೃ.ಸ ಸಂಘದ ನೂತನ ಅಧ್ಯಕರಾಗಿ ಎಂ.ಎಸ್ ಜಯಚಂದ್ರ ಆಯ್ಕೆ

    ಮೈಲಿಮನೆ ಪ್ರಾ.ಕೃ.ಸ ಸಂಘದ ನೂತನ ಅಧ್ಯಕರಾಗಿ ಎಂ.ಎಸ್ ಜಯಚಂದ್ರ ಆಯ್ಕೆ

    ಚಿಕ್ಕಮಗಳೂರು:ಮೈಲಿಮನೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕರಾಗಿ ಎಂ.ಎಸ್ ಜಯಚಂದ್ರ ಹಾಗೂ ಉಪಾಧ್ಯಕ್ಷರಾಗಿ ಷಕೀಲ್‌ಅಹಮದ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಾಗರಾಜ್ ಡಿ.ಟಿ. ಘೋಷಿಸಿದರು

    ನಂತರ ನಡೆದ ಅಭಿನಂದನಾ ಸಮಾರಂಭದಲ್ಲಿ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಸಮಾಜ ಸೇವಕರಾದ ಮೈಲಿಮನೆ ಪೂರ್ಣೆಶ್ ಅಭಿನಂದಿಸಿ ಮಾತನಾಡಿ ರೈತರ ಸಮಸ್ಯೆಗಳಿಗೆ ಸ್ಪಂಧಿಸಿ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ರೀತಿಯಲ್ಲಿ ಪರಿಹಾರ ಒದಗಿಸಿಸುತ್ತಾರೆಂಬ ಬಹಳ ನಿರೀಕ್ಷೆ ಇದೆ ಎಂದ ಅವರು ತಮ್ಮ ಆಡಳಿಯ ಅವದಿಯಲ್ಲಿ ಹೆಚ್ಚು ಪರೋಪಕಾರಿ ಕಾರ್ಯಗಳನ್ನು ನಿರ್ವಹಿಸಲಿ ಎಂದು ತಿಳಿಸಿದರು.

    ಸಹಕಾರ ಸಂಘದ ವತಿಯಿಂದ ಕೃಷಿಕರಿಗೆ ವ್ಯಾಪಾರಸ್ಥರಿಗೆ ಮತ್ತು ವಾಹನ ಸಾಲವನ್ನು ವಿತರಿಸಲಾಗುತ್ತಿದೆ. ಸಕಾಲದಲ್ಲಿ ಸಾಲ ಮರು ಪಾವತಿ ಮಾಡಿ ಸಂಘದ ಅಭಿವೃದ್ಧಿಯ ಜೊತೆಗೆ ನೀವು ಸಹ ಅಭಿವೃದ್ಧೀ ಹೊಂದಬೇಕೆಂದು ತಿಳಿಸಿದರು.

    ಮೈಲಿಮನೆ ಪಂಚಾಯಿತಿ ಮಾಜಿ ಅಧ್ಯಕ್ಷ ಚೇತನ್‌ಗೌಡ ಮಾತನಾಡಿ ಮೈಲಿಮನೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘಕ್ಕೆ ಸುಮಾರು ೧೦೦ ವರ್ಷಗಳ ಇತಿಹಾಸವಿದೆ. ನೂತನವಾಗಿ ಆಯ್ಕೆಯಾಗಿರುವ ಅಧ್ಯಕ್ಷ ಉಪಾಧ್ಯಕರುಗಳು ಈ ಸಂಘದ ಬೆಳವಣಿಗೆಗೆ ಸಹಕರಿಸಬೇಕು ರೈತರ ಯಾವ ಸಮಸ್ಯೆಗಳನ್ನು ಸಾಮಾನ್ಯವಾಗಿ ಪರಿಗಣಿಸಿ ಕಡೆಗಣಿಸದೇ ಎಲ್ಲಾ ಸಮಸ್ಯೆಗಳಿಗೂ ವ್ಯವಸ್ಥಿತವಾದ ಪರಿಹಾರ ನೀಡಿ ಸಂಘವನ್ನು ಇನ್ನಷ್ಟು ಭದ್ರಗೊಳಿಸಿ ಸಂಘದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ತಿಳಿಸಿದರು.

    ಮೈಲಿಮನೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್ ಜಯಚಂದ್ರ ಮಾತನಾಡಿ. ಸಂಘದ ಸದಸ್ಯರೆಲ್ಲರು ನನ್ನನ್ನು ಅವಿರೋಧವಾಗಿ ಆಯ್ಕೆ ಮಾಡಲು ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಈ ಸಹಕಾರ ಸಂಘದಲ್ಲಿ ೪ ಸಾವಿರಕ್ಕು ಹೆಚ್ಚು ಸದಸ್ಯರಿದ್ದು ಅಗತ್ಯ ಇರುವವರಿಗೆ ಸಾಲ ಸೌಲಭ್ಯಗಳನ್ನು ಎಲ್ಲಾ ನಿರ್ದೇಶಕರುಗಳ ಸಹಕಾರ ಪಡೆದು ನೀಡುವುದಾಗಿ ತಿಳಿಸಿದರು.

    ಮೈಲಿಮನೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಷಕೀಲ್ ಅಹಮದ್ ಮಾತನಾಡಿ. ಸಂಘದ ಉಪಾಧ್ಯಕ್ಷ ಸ್ತಾನ ದೊರಕಿರುವುದು ಸಂತೋಷವಾಗಿದೆ ನನ್ನ ಕರ್ತವ್ಯ ಅವಧಿಯಲ್ಲಿ ಸಂಘದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು

    ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಬಿ.ಬಿ ನಿಂಗಯ್ಯ ಜಿಲ್ಲಾ ಒಕ್ಕಲಿಗರ ಸಂಘದ ಉಪಾಧ್ಯಕ್ಷರಾದ ಟಿ.ಡಿ ಮಲ್ಲೇಶ್, ನಿರ್ದೇಶಕರಾದ ರತೀಶ್ ಕುಮಾರ್ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷರಾಧ ಸತೀಶ್ ನಿರ್ದೇಶಕರಾದ ಮುಗುಳುವಳ್ಳಿ ನಿರಂಜನ್, ನಿರ್ದೇಶಕರುಗಳಾದ ಎಂ.ಜಿ ಪೂರ್ಣೇಶ್, ಹಫೀಜುರ್ ರೆಹಮಾನ್, ಮಹಮದ್ ತಾಹೇರ್ ಏಕ್ಬಾಲ್, ಅನು ರಾಜೇಗೌಡ, ಸರ್ವರಿಬೇಗಮ್, ದೇವರಾಜು, ಕಿಶನ್, ಅರ್ಪಿತ, ಡಿಸಿಸಿ ಬ್ಯಾಂಕ್ ಮೇಲ್ವಿಚಾರಕರಾದ ಪವನ್ ಕುಮಾರ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಹೆಚ್ ವೆಂಕಟೇಶ್ ನೂತನ ಅಧ್ಯಕ್ಷ, ಉಪಾಧ್ಯಕ್ಷರನು ಅಭಿನಂದಿಸಿದರು.

    M.S. Jayachandra elected as new president of Mailimane P.K.S. Sangha

  • ಮನುಷ್ಯನ ಹೃದಯಾಳದಿ ಭಗವಂತನ ನೆಲೆ

    ಮನುಷ್ಯನ ಹೃದಯಾಳದಿ ಭಗವಂತನ ನೆಲೆ

    ಚಿಕ್ಕಮಗಳೂರು: ಮನುಷ್ಯನ ಹೃದಯಾಳದಿ ಭಗವಂತನು ನೆಲೆಸಿರುವನು. ಎಲ್ಲೆಲ್ಲೋ ತೆರಳಿ ಶೋಧಿಸುವ ಮೊದಲು, ಆತ್ಮದಲ್ಲಿ ಅಡಗಿರುವ ಪರಮಾತ್ಮನೊಟ್ಟಿಗೆ ಸನ್ಮಾರ್ಗದಲ್ಲಿ ಸಾಗಿದಾಗ ಬದು ಕು ಸಾತ್ವಿಕ ರೂಪು ಪಡೆದುಕೊಳ್ಳಲಿದೆ ಎಂದು ಬಸವತತ್ವ ಪೀಠದ ಶ್ರೀ ಡಾ. ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

    ತಾಲ್ಲೂಕಿನ ಲಕ್ಯಾ ಹೋಬಳಿ ಸಮೀಪ ಗಾಣದಾಳು ಗ್ರಾಮದಲ್ಲಿ ವಿಶ್ವಬಂಧು ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ನೂತನ ದೇವಾಲಯ ಪ್ರವೇಶೋತ್ಸವ, ಕುಂಭಾಭಿಷೇಕ, ಕಳಸಾರೋಹಣ ಹಾಗೂ ಧಾರ್ಮಿಕ ಸ ಮಾರಂಭದ ದಿವ್ಯ ಸಾನಿಧ್ಯವಹಿಸಿ ಸೋಮವಾರ ಅವರು ಆರ್ಶೀವಚನ ನೀಡಿದರು.

    ಭಕ್ತಾಧಿಗಳು ಮತ್ತು ಗ್ರಾಮಸ್ಥರು ದೇವಾಲಯ ನಿರ್ಮಾಣ ಅಥವಾ ಜೀರ್ಣೋದ್ದಾರಕ್ಕೆ ಮುಂದಾದರೆ ಸಾಲದು, ದೈನಂದಿನ ಪೂಜಾಕೈಂಕರ್ಯಗಳಲ್ಲಿ ತಲ್ಲೀನರಾಗಬೇಕು. ಪ್ರಾರ್ಥನೆ, ಪೂಜೆಯ ಜೊತೆಗೆ ವೈಮ ನಸ್ಸಿನ ಕೆಡಕನ್ನು ತೊಡೆದು, ಸದ್ಗುಣಗಳನ್ನು ಮೈಗೂಡಿಸಿಕೊಂಡು ಸಾಗಿದರೆ ದೇವಾಲಯ ನಿರ್ಮಾಣಗೊಂ ಡಿದ್ದಕ್ಕೆ ಸಾರ್ಥಕವಾದಂತೆ ಎಂದು ತಿಳಿಸಿದರು.

    ಶ್ರೀ ಮರುಳಸಿದ್ದೇಶ್ವರರು ಹಾಗೂ ಬಸವಣ್ಣನವರ ಒಂದೇ ಕಾಲದಲ್ಲಿ ಜೀವಿಸಿದವರು. ಶೋಷಿತರ ಧ್ವನಿ ಯಾಗಿ ಮತ್ತು ಸಂಸ್ಕೃತಿ, ಸಂಪ್ರದಾಯದ ಅಂಕುಡೊಂಕುಗಳನ್ನು ತಿದ್ದಲು ಇಡೀ ಜೀವನವನ್ನೆ ಸಮಾಜಕ್ಕಾಗಿ ಮುಡಿಪಿಟ್ಟ ಶ್ರೇಷ್ಟ ದಾರ್ಶನಿಕರು. ಯಜ್ಞಾಧಿಗಳನ್ನು ವಿರೋಧಿಸಿ ಉತ್ತಮ ಪರಂಪರೆಯನ್ನು ಸಮಾಜಕ್ಕೆ ಧಾರೆಗೈದವರು ಎಂದು ಬಣ್ಣಿಸಿದರು.

    ಎದೆಗೂಡಿನಲ್ಲಿ ಪರಮಾತ್ಮನನ್ನು ಕಾಣಲು ಮಾನವ ತನ್ನ ದೃಷ್ಟಿಕೋನ ಬದಲಿಸಿ, ಶ್ರದ್ದಾರ್ಪೂಕವಾಗಿ ಒಳಗಣ್ಣಿನಿಂದ ಪ್ರಾರ್ಥಿಸಿದರೆ, ತಾನಾಗಿಯೇ ದರ್ಶನ ಭಾಗ್ಯ ಕರುಣಿಸುವನು. ತನ್ನೊಳಗಿನ ದೇವರನ್ನು ಪೂ ಜಿಸುವ ಪರಿಯನ್ನು ಅರಿತುಕೊಳ್ಳಬೇಕು. ಈ ರೀತಿಯಲ್ಲೂ ಮರುಳಸಿದ್ದರು ತನ್ನ ವ್ಯಾಪ್ತಿಯಲ್ಲಿ ಸಕಲದೈವವು ಒಂದೆಡೆ ನೆಲೆಸಿದ್ದಾನೆ ಎಂಬ ಸಿದ್ಧಾಂತ ಸಾರಿದ್ದರು ಎಂದು ಹೇಳಿದರು.

    ಗ್ರಾಮಸ್ಥರು, ದಾನಿಗಳು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಗಾಣದಾಳು ಶ್ರೀ ಮರುಳಸಿದ್ಧೇಶ್ವರ ಸ್ವಾಮಿಯವರ ಭವ್ಯ ಮಂದಿರ ನಿರ್ಮಾಣಗೊಂಡಿರುವುದು ಶ್ಲಾಘನೀಯ. ಆ ನಿಟ್ಟಿನಲ್ಲಿ ಗ್ರಾಮಸ್ಥರು ಮಕ್ಕ ಳಿಗೆ ಸಂಸ್ಕೃತಿ, ಸಂಸ್ಕಾರ ಕಲಿಸುವುದಾಗಿ ಬಾಲ್ಯದಿಂದಲೇ ದೇವಾಲಯಕ್ಕೆ ಕಳುಹಿಸುವ ಪದ್ಧತಿ ರೂಢಿಸಬೇಕು ಎಂದು ಕಿವಿಮಾತು ಹೇಳಿದರು.

    ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ ಶ್ರೀ ಮರುಳಸಿದ್ಧರ ಕಾಲಘಟ್ಟದಲ್ಲಿ ಆರ್ಥಿಕ ಸಮಾನತೆ, ಮಹಿ ಳೆಯರಿಗೆ ಗೌರವಿಸುವುದು, ಕಾಯಕವೇ ಕೈಲಾಸ ಎಂಬುದನ್ನು ವಚನಗಳ ಮುಖಾಂತರ ಸಾರಿ ಸಮಸಮಾ ಜಕ್ಕೆ ಹೆಜ್ಜೆಯಿಟ್ಟ ಶ್ರೇಷ್ಟರ ದೇವಾಲಯವನ್ನು ಪುಟ್ಟ ಗ್ರಾಮದಲ್ಲಿ ಪ್ರತಿಷ್ಟಾಪಿಸಿರುವ ಗ್ರಾಮಸ್ಥರ ಮನಸ್ಸು ಅ ತೀವ ದೊಡ್ಡದು ಎಂದು ಹೇಳಿದರು.

    ಪ್ರಸ್ತುತ ದೇವಾಲಯ ಅಭಿವೃಧ್ದಿಗೆ ಶಾಸಕರ ನಿಧಿಯಿಂದ ೧೦ ಲಕ್ಷ ಅನುದಾನ ಪೂರೈಸುವ ಜೊತೆಗೆ ವಿವಿಧ ದಾನಿಗಳು, ಗ್ರಾಮಸ್ಥರ ಸಹಕಾರದಿಂದ ಇಂದು ವಿಜೃಂಭ್ರಮಣೆಯಿಂದ ಲೋಕಾರ್ಪಣೆಗೊಂಡಿದ್ದು ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ಒಕ್ಕಲಿನ ಕುಟುಂಬವು ಮುಕ್ತವಾಗಿ ತೆರಳಿ ಪೂಜಾವಿಧಿವಿಧಾನ ಕೈಗೊಳ್ಳಲು ಅನುವು ಮಾಡಲಾಗಿದೆ ಎಂದರು.

    ಬಸವತತ್ವ ಪೀಠವು ಕೇವಲ ಚಿಕ್ಕಮಗಳೂರು ತಾಲ್ಲೂಕಿಗೆ ಸೀಮಿತವಾಗಿತ್ತು. ಶ್ರೀ ಬಸವ ಮರುಳಸಿದ್ದ ಸ್ವಾಮೀಜಿ ಗದ್ದುಗೆ ವಹಿಸಿಕೊಂಡ ಬಳಿಕ ಚಿಕ್ಕಮಗಳೂರು, ಹಾಸನ ಹಾಗೂ ಶಿವಮೊಗ್ಗದಲ್ಲೂ ಪ್ರತೀತಿ ಪಡೆ ಯುತ್ತಿದೆ. ಮುಂದೆ ಚಿಕ್ಕಮಗಳೂರಿಗೆ ಆಗಮಿಸುವವರು ಶೃಂಗೇರಿ, ರಂಭಾಪುರೀ ಮಠಗಳಿಗೆ ಭೇಟಿ ನೀ ಡಿದಂತೆ, ಬಸವತತ್ವಪೀಠಕ್ಕೆ ಭೇಟಿ ನೀಡುವಂತೆ ಅಭಿವೃದ್ದಿಪಡಿಸಲು ಮುಂದಾಗುತ್ತೇವೆ ಎಂದರು.

    ಉದ್ಯಮಿ ಹಾಗೂ ದಾನಿ ಬಿ.ಎನ್.ಚಿದಾನಂದ್ ಮಾತನಾಡಿ ದೇವಾಲಯ ಅಭಿವೃಧ್ದಿ ಹಣ ಕೊಡು ವಷ್ಟು ದೊಡ್ಡವರಲ್ಲ, ಕೇವಲ ಸೇವೆಯ ದೃಷ್ಟಿಯಿಂದ ಕೆಲಸ ನಿರ್ವಹಿಸಿದ್ದೇವೆ. ಭಕ್ತಾಧಿಗಳು ಪ್ರಾರ್ಥನೆ ಹಾ ಗೂ ಆಚರಣೆಗಾಗಿ ತಾವು ಸೇರಿದಂತೆ ಅನೇಕರ ದಾನದಿಂದ ಶ್ರೀ ಮರುಳಸಿದ್ದೇಶ್ವರರ ಭವ್ಯ ಮಂದಿರ ನಿ ರ್ಮಾಣಗೊಂಡು ಲೋಕಾರ್ಪಣೆಗೊಂಡಿದೆ ಎಂದು ಹೇಳಿದರು.

    ಜಿ.ಪಂ. ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತನಾಡಿ ಚಂಚಲ ಮನಸ್ಸನ್ನು ನಿಗ್ರಹಿಸಲು ದೇ ವಾಲಯ ಅತ್ಯಂತ ಪುಣ್ಯಸ್ಥಳಗಳು. ಪೂರ್ವಿಕರ ಕಾಲದಲ್ಲಿ ಹಿರಿಯರು ಹಾಕಿಕೊಟ್ಟ ಸಂಪ್ರದಾಯ ಪಾಲಿಸ ಬೇಕು. ಮೊದಲು ಸ್ಥಳೀಯ ದೇವಾಲಯ ಆದ್ಯತೆ ನೀಡಿ, ತದನಂತರ ಪ್ರಸಿದ್ಧ ದೇಗುಲಗಳಿಗೆ ತೆರುವ ಪದ್ಧ ತಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ಕರಡಿಗವಿ ಮಠದ ಶ್ರೀ ಶಿವಶಂಕರ ಶಿವಯೋಗಿ ಸ್ವಾಮೀಜಿ, ಜಿ.ಪಂ. ಮಾಜಿ ಉಪಾ ಧ್ಯಕ್ಷ ಬಿ.ಜಿ.ಸೋಮಶೇಖರ್, ಉದ್ಯಮಿಗಳಾದ ಬಿ.ಎನ್. ರಾಜಶೇಖರ್, ಬಿ.ಎನ್.ಷಡಾಕ್ಷರಿ, ಸಾಹಿತಿ ಚಟ್ನ ಹಳ್ಳಿ ಮಹೇಶ್, ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಮಹಡಿಮನೆ ಸತೀಶ್, ಶ್ರೀ ಮರುಳಸಿದ್ದೇಶ್ವರ ಸೇವಾ ಟ್ರಸ್ಟ್ ಅಧ್ಯಕ್ಷ ಜಿ.ಎಂ.ರಮೇಶ್, ಉಪಾಧ್ಯಕ್ಷ ಜಿ.ರಮೇಶ್, ಗ್ರಾಮಸ್ಥರಾದ ಚಂದ್ರಶೇಖರ್, ಮಲ್ಲಿಕಾರ್ಜುನ್, ಗಿರೀಶ್, ಎಲ್.ಆರ್.ಈಶ್ವರಪ್ಪ ಉಪಸ್ಥಿತರಿದ್ದರು.

    Vishwabandhu Sri Marulasiddheshwara Swamy New Temple Entrance Ceremony