Category: ಜಿಲ್ಲಾ ಸುದ್ದಿ

  • ಶ್ರೀ ಅಯ್ಯಪ್ಪನ ಆರಾದನೆಗೆ ಜಾತಿ-ಧರ್ಮವಿಲ್ಲ

    ಶ್ರೀ ಅಯ್ಯಪ್ಪನ ಆರಾದನೆಗೆ ಜಾತಿ-ಧರ್ಮವಿಲ್ಲ

    ಚಿಕ್ಕಮಗಳೂರು: ಶ್ರೀ ಅಯ್ಯಪ್ಪಸ್ವಾಮಿ ಸರ್ವಧರ್ಮಿಯರ ಪ್ರತೀಕ. ಸ್ವಾಮಿಯ ಆರಾಧನೆಗೆ ಜಾತಿ, ಧರ್ಮ ಅಡ್ಡಬರುವುದಿಲ್ಲ. ಮಾಲೆ ಹಾಕಿದವರೆಲ್ಲಾ ಅಯ್ಯಪ್ಪನ ಭಕ್ತರೇ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

    ನಗರದ ಶ್ರೀ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪಿಸುವ ೫೨ ನೇ ವರ್ಷದ ಶ್ರೀ ಅಯ್ಯಪ್ಪಸ್ವಾಮಿ ಪ್ರತಿಷ್ಠಾಪನಾ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.

    ನಮ್ಮ ದೇಶದಲ್ಲಿ ಶಬರಿಮಲೆಗೆ ಮಾಲೆ ಹಾಕಿಕೊಂಡು ಹೋಗಿ ಸ್ವಾಮಿ ದರ್ಶನ ಪಡೆಯವುದು ವಿಶೇಷ. ೪೮ ದಿನ ಕಠಿಣ ವ್ರತ ಮಾಡುವವರಿಗೆ ಮೊದಲ ಪಾದ ಎಂದೂ, ಹೊಸದಾಗಿ ಮಾಲೆ ಹಾಕಿದವರನ್ನು ಕನ್ನಿ ಸ್ವಾಮಿಗಳು ಎಂದು ಕರೆಯುವ ಪದ್ದತಿ ಇದೆ. ನಾನೂ ಕೂಡ ೧೯೮೨ ನೇ ಸಾಲಿನಿಂದಲೂ ಅಯ್ಯಪ್ಪಸ್ವಾಮಿ ಭಕ್ತನಾಗಿದ್ದೇನೆ.

    ಪೂಜಾಕಾರ್ಯಗಳಲ್ಲಿ ಭಾಗಿಯಾಗುತ್ತಿದ್ದೇನೆ ಎಂದರು. ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ಗಟ್ಟಿಯಾಗಿರುವ ದೇಶ ನಮ್ಮದು. ಧರ್ಮದ ನೆಲೆಗಟ್ಟಿನಲ್ಲೂ ನಿಂತಿದೆ. ದೇವನೊಬ್ಬ ನಾಮ ಹಲವು ಎನ್ನುವಂತೆ ಒಬ್ಬೊಬ್ಬರು ಒಂದೊಂದು ದೇವರನ್ನು ಆರಾಧಿಸುತ್ತಾರೆ. ದೇಶದ ರೈತರಿಗೆ ಉತ್ತಮ ಬೆಳೆ, ಬೆಲೆ ನೀಡಲಿ ಎಂದು ಅಯ್ಯಪ್ಪನಲ್ಲಿ ನಾನು ಪ್ರಾರ್ಥಿಸುತ್ತೇನೆ ಎಂದು ಹೇಳಿದರು.

    ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ಪ್ರತಿವರ್ಷ ಶ್ರೀ ಬೋಳರಾಮೇಶ್ವರ ದೇವಾಲಯದ ಆವರಣದಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಶ್ರೀ ಅಯ್ಯಪ್ಪಸ್ವಾಮಿಯನ್ನು ಆರಾಧಿಸಿಕೊಂಡು ಬಂದಿರುವುದನ್ನು ನೋಡಿದ್ದೇವೆ. ಇಂದು ಮಾಲೆ ಹಾಕಿದವರೆಲ್ಲಾ ಜನವರಿ ೧೪ ಕ್ಕೆ ಶಬರಿಮಲೆಯಲ್ಲಿ ಮೂಡಿಬರುವ ಜ್ಯೋತಿ ನೋಡಿ ತಮ್ಮ ವೃತಾ ಕೊನೆಗೊಳಿಸುತ್ತರೆ ಎಂದರು.

    ನಗರಸಭೆ ಉಪಾಧ್ಯಕ್ಷೆ ಲಲಿತಾಬಾಯಿ, ಸದಸ್ಯರಾದ ಎ.ಸಿ.ಕುಮಾರಗೌಡ, ರೂಪನಾಯಕ್, ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮಿತಿಯ ಅಧ್ಯಕ್ಷ ಅಶೋಕ್ ಸಚ್ಚಿದೇವ್, ಮಾಜಿ ಅಧ್ಯಕ್ಷ ನಾರಾಯಣಗೌಡ, ಸಮಿತಿಯ ಸದಸ್ಯರುಗಳು ಮತ್ತು ಅಯ್ಯಪ್ಪಸ್ವಾಮಿ ಭಕ್ತರು ಮತ್ತಿತರರಿದ್ದರು.

    There is no caste or religion in the worship of Sri Ayyappa

     

  • ನಗರ ವ್ಯಾಪ್ತಿಯಲ್ಲಿ ಯುಜಿಡಿ-ಅಮೃತ್ ಕಾಮಗಾರಿ ಶೀಘ್ರ ಪೂರ್ಣ

    ನಗರ ವ್ಯಾಪ್ತಿಯಲ್ಲಿ ಯುಜಿಡಿ-ಅಮೃತ್ ಕಾಮಗಾರಿ ಶೀಘ್ರ ಪೂರ್ಣ

    ಚಿಕ್ಕಮಗಳೂರು: ನಗರ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ೨೦೧೨ರಲ್ಲಿ ಆರಂಭಗೊಂಡಿದ್ದು ೧೩ ವ?ವಾದರೂ ಪೂರ್ಣಗೊಂಡಿಲ್ಲ. ಹಾಗೆಯೇ ಅಮೃತ್ ಯೋಜನೆಯ ಕಾಮಗಾರಿಗಳು ೨೦೧೫ರಲ್ಲಿ ಆರಂಭಗೊಂಡಿದ್ದು ೧೦ ವ?ವಾದರೂ ಮುಕ್ತಾಯಗೊಂಡಿಲ್ಲ. ಶೀಘ್ರವೇ ಈ ಎರಡು ಕಾಮಗಾರಿಗಳನ್ನು ಪೂರ್ಣಗೊಳಿಸುವುದಾಗಿ ಶಾಸಕ ಎಚ್. ಡಿ.ತಮ್ಮಯ್ಯ ಭರವಸೆ ನೀಡಿದರು.

    ನಗರದ ಗಾಂಧಿನಗರ ಆಟೋ ನಿಲ್ದಾಣದ ಬಳಿ ನಗರದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ನೆರವೇರಿಸಿ ಮಾತನಾಡಿದ ಅವರು, ಈ ಎರಡು ಕಾಮಗಾರಿಗಳನ್ನು ಆರಂಭಿಸಿದವರು ಯಾರು? ಯಾವ ಕಾರಣಕ್ಕೆ ಇದುವರೆಗೂ ಕಾಮಗಾರಿಗಳು ಮುಗಿದಿಲ್ಲ ಎಂಬ ಬಗ್ಗೆ ನಾನು ಮಾತನಾಡುವುದಿಲ್ಲ. ಬೇರೆಯವರನ್ನು ದೂರುವ ಬದಲು ಕಾಮಗಾರಿ ಮುಗಿಸಲು ಕ್ರಮ ಕೈಗೊಳ್ಳುತ್ತೇನೆ ಎಂದರು.

    ಯುಜಿಡಿ ಕಾಮಗಾರಿ ಹಾಗೂ ಅಮೃತ್ ಯೋಜನೆಯ ಕಾಮಗಾರಿಗಳು ನಡೆಯುತ್ತಿರುವ ಕಾರಣದಿಂದಾಗಿ ನಗರ ವ್ಯಾಪ್ತಿಯ ರಸ್ತೆಗಳು ಹಾಳಾಗಿದ್ದವು. ವಿವಿಧ ಈ ಎರಡು ಯೋಜನೆಗಳ ಕಾಮಗಾರಿಗಳು ಮುಕ್ತಾಯಗೊಳ್ಳುವ ಹಂತಕ್ಕೆ ಬಂದಿವೆ. ಹೀಗಾಗಿ ಶೀಘ್ರವೇ ರಸ್ತೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

    ನಗರದ ಪ್ರತಿಯೊಂದು ರಸ್ತೆಯನ್ನು ಅಭಿವೃದ್ಧಿಗೊಳಿಸುವ ಸಂಬಂಧ ಕ್ರಮ ಕೈಗೊಳ್ಳಲಾಗಿದೆ. ನಗರದ ರಸ್ತೆಗಳ ಅಭಿವೃದ್ಧಿಗಾಗಿ ಸಿಎಂ ೧೦ ಕೋಟಿ ರೂ. ವಿಶೇಷ ಅನುದಾನ ನೀಡಿದ್ದಾರೆ. ಇದಲ್ಲದೆ ವಿಧಾನಸಭಾ ಕ್ಷೇತ್ರಕ್ಕೆ ನೀಡ ಸರ್ಕಾರದ ವಿಶೇ? ಅನುದಾನದಡಿಯಲ್ಲಿ ನೀಡಲಾಗಿದ್ದ ೫೦ ಕೋಟಿ ರೂ. ಅನುದಾನದಲ್ಲಿ ೧೦ ಕೋಟಿ ರೂ. ನಗರದ ರಸ್ತೆಗಳ ಅಭಿವೃದ್ಧಿಗೆ ಬಳಸಿಕೊಳ್ಳಲಾಗುತ್ತದೆ. ಜೊತೆಗೆ ಲೋಕೋಪಯೋಗಿ ಇಲಾಖೆಯಿಂದ ೨.೫೦ ಕೋಟಿ ರೂ. ಬಿಡುಗಡೆಯಾಗಿದ್ದು, ಈ ಅನುದಾನಗಳಲ್ಲಿ ರಸ್ತೆಗಳ ಅಭಿವೃದ್ಧಿ ಕಾರ್ಯ ನಡೆಸಲಾಗುವುದು ಎಂದು ಮಾಹಿತಿ ನೀಡಿದರು.

    ನವೆಂಬರ್ ತಿಂಗಳ ಅಂತ್ಯದೊಳಗಾಗಿ ನಗರದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತೇವೆ. ಡಿ. ೧ರಿಂದಲೇ ಕಾಮಗಾರಿ ಆರಂಭಿಸುತ್ತೇವೆ. ಮುಂದಿನ ಮಾರ್ಚ್ ತಿಂಗಳು ಮುಗಿಯುವುದರ ಒಳಗಾಗಿ ಎಲ್ಲಾ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಿ ಪ್ರತಿಯೊಂದು ರಸ್ತೆ ಉದ್ಘಾಟನೆ ಕಾರ್ಯ ನೆರವೇರಿಸುತ್ತೇವೆ ಎಂದರು.

    ನಗರ ಸಭೆ ವ್ಯಾಪ್ತಿಯ ಟಿಪ್ಪು ನಗರ ಬಡಾವಣೆ ವ್ಯಾಪ್ತಿಯಲ್ಲಿ ಸುಮಾರು ೭೦ ಲಕ್ಷ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ. ಇದಲ್ಲದೆ ನಗರದ ಪ್ರತಿಯೊಂದು ಬಡಾವಣೆಯಲ್ಲಿಯೂ ಅಭಿವೃದ್ಧಿ ಕಾರ್ಯ ಕೈಗೊಳ್ಳುತ್ತೇವೆ ಎಂದರು.

    ಹಿಂದೆ ಕ್ಷೇತ್ರದ ಶಾಸಕರಾದವರು ಸ್ಲಂ ಬೋರ್ಡ್ ನಿಂದ ೮೦೦ ಮನೆಗಳ ನಿರ್ಮಾಣ ಕಾಮಗಾರಿಗೆ ಮಂಜೂರಾತಿ ಕೊಡಿಸಿದ್ದರು. ಆದರೆ ಸೂಕ್ತ ಅನುದಾನ ಬಿಡುಗಡೆಯಾಗಿರಲಿಲ್ಲ. ಹೀಗಾಗಿ ಕಾಮಗಾರಿ ಅರ್ಧಕ್ಕೆ ನಿಂತಿತ್ತು. ಇದರಿಂದ ಅನಿವಾರ್ಯವಾಗಿ ಸ್ಲಂ ನಿವಾಸಿಗಳು ಬಾಡಿಗೆ ಮನೆಯಲ್ಲಿ ವಾಸಿಸುವಂತಾಗಿತ್ತು. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸ್ಥಳೀಯ ನಿವಾಸಿಗಳು ದೂರು ನೀಡಿದ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದೇನೆ. ಶೀಘ್ರವೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಸತಿ ಇಲಾಖೆ ಹಿರಿಯ ಅಧಿಕಾರಿಗಳ ಸಭೆಯನ್ನು ಚಿಕ್ಕಮಗಳೂರಿನಲ್ಲಿಯೇ ನಡೆಸಿ ಶೀಘ್ರವೇ ಮನೆಗಳ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

    ನಗರಸಭಾಧ್ಯಕ್ಷೆ ಶೀಲಾ ದಿನೇಶ್ ಮಾತನಾಡಿ, ರಸ್ತೆ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ಪಡೆದಿರುವ ಗುತ್ತಿಗೆದಾರರು ನಿಗದಿತ ಅವಧಿಯ ಒಳಗಾಗಿ ಗುಣಮಟ್ಟದ ರಸ್ತೆ ಕಾಮಗಾರಿ ನಡೆಸಿ ಜನರಿಗೆ ಅನುಕೂಲ ಒದಗಿಸಬೇಕು ಎಂದು ಹೇಳಿದರು.

    ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷ ಲಲಿತಾ ರವಿ ನಾಯಕ್, ಸದಸ್ಯರಾದ ರೂಪ ಕುಮಾರ್, ಎ.ಸಿ.ಕುಮಾರ್, ಗೋಪಿ, ಪರಮೇಶ್ ರಾಜ್ ಅರಸ್, ಲಕ್ಷ್ಮಣ್, ನಗರಸಭೆ ಆಯುಕ್ತ ಬಿ.ಸಿ.ಬಸವರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ.ಮಂಜೇಗೌಡ, ಸಿಡಿಎ ಅಧ್ಯಕ್ಷ ನಯಾಜ್ ಅಹಮದ್, ತಾಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಮಲ್ಲೇಶ್ ಸ್ವಾಮಿ, ಕಾಂಗ್ರೆಸ್ ಮುಖಂಡರಾದ ಲಾಕೇಶ್, ಬೆಟ್ಟಗೆರೆ ಪ್ರವೀಣ್, ಶ್ರೀಕಾಂತ್

    UGD-Amrit work to be completed soon in city area

  • ಪುರಸಭೆ- ಪ.ಪಂ.ಗೆ ನೇಮಿಸಿದ ಆಡಳಿತಾಧಿಕಾರಿ ಹಿಂಪಡೆಯಲು ಮನವಿ

    ಪುರಸಭೆ- ಪ.ಪಂ.ಗೆ ನೇಮಿಸಿದ ಆಡಳಿತಾಧಿಕಾರಿ ಹಿಂಪಡೆಯಲು ಮನವಿ

    ಚಿಕ್ಕಮಗಳೂರು: ಅವಧಿ ಪೂರ್ವ ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳಿಗೆ ಮಾಡಿರುವ ಆಡಳಿತಾಧಿಕಾರಿಗಳ ನೇಮಕ ಹಿಂಪಡೆಯಬೇಕು ಎಂದು ವಿವಿಧ ಪುರಸಭೆ, ಪಟ್ಟಣ ಪಂಚಾ ಯಿತಿ ಆಡಳಿತ ಮಂಡಳಿ ಪದಾಧಿಕಾರಿಗಳು ಶನಿವಾರ ಅಪರ ಜಿಲ್ಲಾಧಿಕಾರಿ ನಾರಾಯಣಕನಕರಡ್ಡಿ ಮುಖಾ ಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಈ ವೇಳೆ ಕಡೂರು ಪುರಸಭೆ ಅಧ್ಯಕ್ಷ ಶ್ರೀನಿವಾಸ್ ಭಂಡಾರಿ ಮಾತನಾಡಿ ಜಿಲ್ಲೆಯ ಕಡೂರು, ಬೀರೂ ರು ಪುರಸಭೆ ಮತ್ತು ಮೂಡಿಗೆರೆ, ನ.ರಾ.ಪುರ ಹಾಗೂ ಶೃಂಗೇರಿ ಪಟ್ಟಣ ಪಂಚಾಯಿತಿಗಳಿಗೆ ಜಿಲ್ಲಾಡಳಿತ ಅವಧಿಗೂ ಮುನ್ನವೇ ಆಡಳಿತಾಧಿಕಾರಿ ನೇಮಕ ಮಾಡಿರುವುದು ಸರಿಯಲ್ಲ. ಈ ಕೂಡಲೇ ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು.

    ಆಡಳಿತಾಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಆದರೆ ಆಯಾ ಅಧಿಕಾ ರದ ಅವಧಿಯು ಎರಡನೇ ಅವಧಿ ಅಧ್ಯಕ್ಷರು, ಉಪಾಧ್ಯಕ್ಷರ ಚುನಾವಣೆಯು ಅವಧಿ ೩೦ ತಿಂಗಳು ಆಗಿರು ತ್ತದೆ. ಎರಡನೇ ಅವಧಿಯು ಚುನಾವಣೆಯು ನಡೆದು ೩೦ ತಿಂಗಳು ಅಪೂರ್ಣಗೊಂಡಿರುವುದಿಲ್ಲ ಎಂದು ತಿಳಿಸಿದರು.

    ಕಡೂರು ಹಾಗೂ ಬೀರೂರು ಪುರಸಭೆಯ ಎರಡನೇ ಅವಧಿಯ ಚುನಾವಣೆ ಕಳೆದ ವರ್ಷ ಆಗಸ್ಟ್ ನಲ್ಲಿ ನಡೆದಿದೆ. ಅಲ್ಲದೇ ಈ ವಿಚಾರವಾಗಿ ಈಗಾಗಲೇ ರಾಜ್ಯಾದ್ಯಂತ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆ ದಾಖಲಾಗಿದೆ. ದಾವೆಗೆ ಸಂಬಂಧಿಸಿದ ದಾಖಲೆಗಳನ್ನು ಜಿಲ್ಲಾಡಳಿತ ಒದಗಿಸಲಾಗಿದೆ ಎಂದು ಹೇಳಿ ದರು.

    ದಾಖಲೆ ಸಮೇತ ಜಿಲ್ಲಾಡಳಿತ ಸಮಗ್ರ ಮಾಹಿತಿ ಒದಗಿಸಿದರೂ ಆಡಳಿತಾಧಿಕಾರಿ ನೇಮಕ ಮಾಡಲಾ ಗಿದೆ. ಆದ್ದರಿಂದ ಪ್ರಜಾಪ್ರಭುತ್ವದ ಅಡಿಯಲ್ಲಿ ಪ್ರತಿನಿಧಿಗಳ ಹಕ್ಕು ಮೊಟಕುಗೊಳಿಸದೇ ಪೂರ್ಣಗೊಳಿಸಲು ಅವಕಾಶ ನೀಡಬೇಕು ಹಾಗೂ ಸರ್ಕಾರಕ್ಕೆ ಈ ಮನವಿ ಶೀಘ್ರವೇ ಸಲ್ಲಿಸಿ ರಾಜಕೀಯ ನ್ಯಾಯ ಒದಗಿಸಿಕೊ ಡಬೇಕು ಎಂದು ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ಕಡೂರು ಪುರಸಭೆ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಬೀರೂರು ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮೀ ಮೋಹನ್, ಉಪಾದ್ಯಕ್ಷ ಎನ್.ಎಂ.ನಾಗರಾಜು, ಮೂಡಿಗೆರೆ ಪ.ಪಂ. ವೆಂಕಟೇಶ್, ಪುರಸಭೆ ಮಾಜಿ ಅಧ್ಯಕ್ಷ ಎಂ.ಪಿ.ಸುದರ್ಶನ್, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮೋಹನ್‌ಕುಮಾರ್, ವಿವಿಧ ಸದಸ್ಯ ರಾದ ಕಾಂತರಾಜು, ಮನುಮರಗುದ್ದಿ, ಪುರಸಭೆ ಸದಸ್ಯರಾದ ಸುಬ್ಬಣ್ಣ, ಗೋವಿಂದರಾಜ್, ವಿಜಯಚಿನ್ನ ರಾಜು, ಯತೀರಾಜ್, ಜ್ಯೋತಿ ವೆಂಕಟೇಶ್, ಶಾರದಾ ರುದ್ರಪ್ಪ, ಸುಮಿತ್ರ ಹಾಜರಿದ್ದರು.

    Appeal to withdraw administrator appointed to municipal council

  • ಕಾಯಕ ಗ್ರಾಮ ಯೋಜನೆಯಡಿ 6 ಗ್ರಾ.ಪಂ ಗಳ ಆಯ್ಕೆ

    ಕಾಯಕ ಗ್ರಾಮ ಯೋಜನೆಯಡಿ 6 ಗ್ರಾ.ಪಂ ಗಳ ಆಯ್ಕೆ

    ಚಿಕ್ಕಮಗಳೂರು: ಮಾದರಿ ಗ್ರಾಮ ಪಂಚಾಯಿತಿ ಮಾಡುವ ಉದ್ದೇಶದಿಂದ ರಾಜ್ಯಸರ್ಕಾರ ಜಾರಿಗೆ ತಂದಿರುವ ಕಾಯಕ ಗ್ರಾಮ ಯೋಜನೆಯಡಿ ತಾಲ್ಲೂಕಿನ ೬ ಗ್ರಾಮ ಪಂಚಾಯಿತಿಗಳನ್ನು ಗುರ್ತಿಸಿ ಆಯ್ಕೆಮಾಡಿಕೊಳ್ಳಲಾಗಿದೆ ಎಂದು ಜಿ.ಪಂ ಉಪಕಾರ್ಯದರ್ಶಿ(ಆಡಳಿತ) ಶಂಕರ್ ಕೊರವರ್ ತಿಳಿಸಿದರು.

    ಅವರು ಇಂದು ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ಏರ್ಪಡಿಸಲಾಗಿದ್ದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ತಾಲ್ಲೂಕಿನ ವಾರ್ಷಿಕ ಕರಡು ಯೋಜನೆಯನ್ನು ಶಾಸಕ ಹೆಚ್.ಡಿ. ತಮ್ಮಯ್ಯ ಅವರ ಅಧ್ಯಕ್ಷತೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲು ನಿರ್ಧರಿಸಲಾಗಿದೆ. ಆಲ್ದೂರು, ಮೇಲಿನಹುಲುವತ್ತಿ, ಆಣೂರು, ಕಡವಂತಿ ಸೇರಿದಂತೆ ೬ ಗ್ರಾಮ ಪಂಚಾಯಿತಿಗಳನ್ನು ಗುರ್ತಿಸಲಾಗಿದೆ ಎಂದರು.

    ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಏನೇನು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಬೇಕೆಂಬ ಬಗ್ಗೆ ಹಾಗೂ ಪಂಚಾಯಿತಿಯ ಬೇಡಿಕೆ ಕೊರತೆಗಳನ್ನು ಗುರುತಿಸಿ ಪಟ್ಟಿ ತಯಾರಿಸಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.

    ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ ಸಂಬಂಧಿಸಿದಂತೆ ತೆರಿಗೆ ವಸೂಲಿ, ಆರೋಗ್ಯ, ಶೈಕ್ಷಣಿಕ, ಸಾಮಾಜಿಕ ಅವಶ್ಯಕತೆಗಳಿಗೆ ಉದ್ಯೋಗಾಧಾರಿತ ಕಾರ್ಯಕ್ರಮಗಳ ಆಯೋಜನೆಗೆ ಅವಕಾಶವಿದ್ದು, ಪಟ್ಟಿಮಾಡಿ ಕ್ರಿಯಾಯೋಜನೆ ತಯಾರಿಸಲು ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದರು.

    ಎಲ್ಲಾ ಇಲಾಖಾಧಿಕಾರಿಗಳು ಗ್ರಾಮ ಪಂಚಾಯಿತಿಯಲ್ಲಿ ನಡೆಯುವ ಗ್ರಾಮ ಸಭೆಗಳಿಗೆ ತಪ್ಪದೆ ಕಡ್ಡಾಯವಾಗಿ ಹಾಜರಾಗಬೇಕೆಂದು ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

    ಕುಡಿಯುವ ನೀರಿನ ಯೋಜನೆಗಳಿಗೆ ಸಮರ್ಪಕ ವಿದ್ಯುತ್ ಸಂಪರ್ಕ ನೀಡಿ ಗುಣಮಟ್ಟದ ವಿದ್ಯುತ್ ಸರಬರಾಜು ಮಾಡುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ತುರ್ತಾಗಿ ಪೂರ್ಣಗೊಳಿಸಲು ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

    ಫಲಾನುಭವಿ ಆಧಾರಿತ ಕಾರ್ಯಕ್ರಮಗಳ ಮೂಲಕ ಸೌಲಭ್ಯಗಳನ್ನು ನೀಡುವ ಬಗ್ಗೆ ಫಲಾನುಭವಿಗಳನ್ನು ಆಯ್ಕೆಮಾಡಿ ಪ್ರಾಧಿಕಾರ ಗುರ್ತಿಸಿ ಆಯಾ ಯೋಜನೆವಾರು ಆರ್ಥಿಕ, ಭೌತಿಕ ಸೌಲಭ್ಯ ನೀಡಲು ಮುಂದಾಗಬೇಕೆಂದು ತಿಳಿಸಿದರು.

    ದುರಸ್ಥಿಯಲ್ಲಿರುವ ಶಾಲಾ ಕಟ್ಟಡಗಳು ಮತ್ತು ಸುಸ್ಥಿತಿಯಲ್ಲಿರುವ ಶಾಲಾ ಕಟ್ಟಡಗಳ ಮಾಹಿತಿಯನ್ನು ಕೂಡಲೇ ಸಲ್ಲಿಸುವಂತೆ ಪಿಆರ್‌ಡಿ ಇಂಜಿನಿಯರ್‌ಗಳಿಗೆ ಆದೇಶಿಸಿದ್ದು, ಶಿಕ್ಷಣ ಇಲಾಖೆ ಮತ್ತು ಇಂಜಿನಿಯರಿಂಗ್ ಇಲಾಖೆ ಇಬ್ಬರ ಸಹಕಾರದೊಂದಿಗೆ ಕೂಡಲೇ ಪಟ್ಟಿ ತಯಾರಿಸಿ ನೀಡುವಂತೆ ನಿರ್ದೇಶನ ನೀಡಿರುವುದಾಗಿ ಹೇಳಿದರು.

    ತಾಲ್ಲೂಕಿನ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅವಶ್ಯಕತೆಗನುಗುಣವಾಗಿ ಮಾಸಿಕ ಕರಡು ಯೋಜನೆಯನ್ನು ತಯಾರು ಮಾಡಲು ಇಂದಿನ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

    ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ವಿಜಯ್‌ಕುಮಾರ್ ಮಾತನಾಡಿ, ಸರ್ಕಾರ ಜಾರಿಗೆ ತಂದಿರುವ ಕಾಯಕ ಗ್ರಾಮ ಯೋಜನೆಯಡಿ ಹಿಂದುಳಿದ ಗ್ರಾಮ ಪಂಚಾಯಿತಿಗಳನ್ನು ಗುರ್ತಿಸಿ ಮಾದರಿ ಗ್ರಾಮ ಪಂಚಾಯಿತಿಗಳಾಗಿ ಅಭಿವೃದ್ಧಿಪಡಿಸಲು ಸಂಬಂಧಿಸಿದ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಹೇಳಿದರು.

    ಪಶುಗಳಿಗೆ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ರೋಗಗಳ ಬಗ್ಗೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳಿಂದ ಮಾಹಿತಿ ಪಡೆದು ಚರ್ಚಿಸಲಾಗಿದ್ದು, ಎಲ್ಲಾ ರೀತಿಯ ರಾಸುಗಳಿಗೆ ಸಮರ್ಪಕ ವ್ಯಾಕ್ಸಿನೇಷನ್ ನೀಡಲು ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

    ಸಭೆಯಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದು ಮಾಹಿತಿ ನೀಡಿದರು.

    Selection of 6 Gram Panchayats under Kayaka Gram Yojana

  • ಬುಡಕಟ್ಟು ಜನಾಂಗದ ಅಸಾಮಾನ್ಯ ಮಹಾ ಪುರುಷ ಬಿರ್ಸಾಮುಂಡಾ

    ಬುಡಕಟ್ಟು ಜನಾಂಗದ ಅಸಾಮಾನ್ಯ ಮಹಾ ಪುರುಷ ಬಿರ್ಸಾಮುಂಡಾ

    ಚಿಕ್ಕಮಗಳೂರು: ಭಗವಾನ್ ಬಿರ್ಸಾಮುಂಡಾ ಅವರು ಸಾಮಾನ್ಯರಾಗಿ ಹುಟ್ಟಿದ ಅಸಾಮಾನ್ಯ ಮಹಾ ಪುರುಷ; ಬಾಲ್ಯದಿಂದಲೇ ಸಮಾಜದ ಕಟ್ಟ ಕಡೆಯ ಶೋಷಿತ ವರ್ಗದವರ ಧ್ವನಿಯಾಗಿ ಕಾರ್ಯ ನಿರ್ವಹಿಸಿದವರು ಎಂದು ಶಾಸಕ ಹೆಚ್,ಡಿ ತಮ್ಮಯ್ಯ ಹೇಳಿದರು.
    ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಶಿವಮೊಗ್ಗದ ಕೇಂದ್ರ ಸಂವಹನ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಂಯುಕ್ತ ಆಶ್ರಯದಲ್ಲಿ ನಗರದ ಕುವೆಂಪು ಕಲಾಮಂದಿರದಲ್ಲಿ ಇಂದು ನಡೆದ ಜನಜಾತೀಯ ಗೌರವ ದಿನದ ಪ್ರಯುಕ್ತ ಭಗವಾನ್ ಬಿರ್ಸಾಮುಂಡಾರವರ ೧೫೦ನೇ ಜನ್ಮ ವಾರ್ಷಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಬಿರ್ಸಾಮುಂಡ ಅವರು ಸಾಮಾಜಿಕ ಹೋರಾಟಗಾರರು, ಚಿಂತಕರು ಮಾತ್ರವಲ್ಲ, ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು, ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಹಲವಾರು ಹೆಸರುಗಳಲ್ಲಿ ಬಿರ್ಸಾಮುಂಡಾರವರ ಹೆಸರು ಕೂಡ ಸೇರ್ಪಡೆಯಾಗಿದೆ ಎಂದ ಅವರು, ಕೇವಲ ೨೫ ವರ್ಷ ಬದುಕಿ ಬುಡಕಟ್ಟು ಜನಾಂಗzವರ ಧ್ವನಿಯಾಗಿ ಕೆಲಸ ಮಾಡಿದ್ದಾರೆ, ಹಾಗಾಗಿ ಅವರು ಎಷ್ಟು ವರ್ಷ ಬದುಕಿದ್ದರು ಎನ್ನುವುದಕ್ಕಿಂತ ಬದುಕಿದಷ್ಟು ದಿನವೂ ಸಮಾಜದ ಶೋಷಿತ ವರ್ಗದವರ ಪರ ಗಟ್ಟಿ ಧ್ವನಿಯಾಗಿ ಮಾಡಿದ್ದ ಸಾಧನೆ ಮುಖ್ಯವಾಗುತ್ತದೆ.
    ಇವರು ೧೮೭೫ರಲ್ಲಿ ಜಾರ್ಖಂಡ್ ರಾಜ್ಯದ ಕುಗ್ರಾಮದಲ್ಲಿ ಬುಡಕಟ್ಟು ಜನಾಂಗದಲ್ಲಿ ಜನಿಸಿ ಆ ಜನಾಂಗದ ಸಂಸ್ಕೃತಿಯನ್ನು ಉಳಿಸುವ ಸಲುವಾಗಿ ಹೋರಾಡಿದ್ದರು. ಅಂದಿನ ಬ್ರಿಟಿಷರ ಆಳ್ವಿಕೆಯಲ್ಲಿ ಜೈಲುವಾಸಕ್ಕೆ ಒಳಗಾದ ಅವರು ೧೯೦೦ ರಲ್ಲಿ ಜೈಲಿನಲ್ಲೇ ಸಾವಿಗೀಡಾದರು ಎಂದು ಹೇಳಿದರು. ಒಂದೆಡೆ ದೇಶ ಬ್ರಿಟಿಷರ ಆಳ್ವಿಕೆಯಲ್ಲಿದ್ದರೆ, ಇನ್ನೊಂದೆಡೆ ಜಮೀನ್ದಾರರ ದಬ್ಬಾಳಿಕೆ ಇತ್ತು. ಬ್ರಿಟಿಷರಿಂದ ಜೈಲುವಾಸಕ್ಕೆ ಒಳಗಾದ ಅವರು ೧೯೦೦ ರಲ್ಲಿ ಜೈಲಿನಲ್ಲೇ ಸಾವಿಗೀಡಾದರು ಎಂದರು.
    ಬಿರ್ಸಾಮುಂಡಾ ಅವರು ಮದ್ಯಪಾನ, ಮೂಢನಂಬಿಕೆಯ ವಿರುದ್ಧ ಹೋರಾಡಿದ್ದರು. ಭೂಮಿಯನ್ನೇ ತಾಯಿ, ತಂದೆ ಎಂದು ಪೂಜಿಸುತ್ತಿದ್ದರು. ಅವರ ಹೋರಾಟದ ಫಲವಾಗಿ ಅನೇಕ ಬುಡಕಟ್ಟು ಸಮುದಾಯದವರು ಜಮೀನ್ದಾರರಿಂದ ಮರಳಿ ತಮ್ಮ ಜಮೀನನ್ನು ಪಡೆದುಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು.
    ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಮಾತನಾಡಿ ಯುವ ವಯಸ್ಸಿನಲ್ಲೇ ಆದಿವಾಸಿ ಸಮುದಾಯವನ್ನು ಪ್ರತಿನಿಧಿಸಿದವರು ಬಿರ್ಸಾಮುಂಡರವರು, ಇವರು ಭಾರತೀಯರಲ್ಲಿ ಅಪ್ರತಿಮ ಆದಿವಾಸಿ ನಾಯಕ. ಸ್ವಾತಂತ್ರ್ಯ ಹೋರಾಟಗಾರರಾಗಿದ್ದಂತೆ ಸಾಮಾಜಿಕ ಸಾಧಕರೂ ಆಗಿದ್ದವರು. ಕಳೆದ ಕೆಲವು ವರ್ಷಗಳಿಂದ ಈ ಕಾರ್ಯಕ್ರಮ ಆಯೋಜನೆ ಮಾಡಿ ಅವರ ಬಗ್ಗೆ ಹೆಚ್ಚು ಮಾಹಿತಿಯನ್ನು ತಿಳಿದುಕೊಳ್ಳುತ್ತಿದ್ದೇವೆ ಇವರ ಛಲ, ಸಾಧನೆ, ಧೈರ್ಯವನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇವರು ತಮಗೆದುರಾದ ಹಲವಾರು ಸಮಸ್ಯೆಗಳ ನಡುವೆ ಅವರು ನೀಡಿರುವ ಕೊಡುಗೆ ಶಾಶ್ವತವಾಗಿದೆ. ಅದಕ್ಕಾಗಿ ಅವರ ನಾಯಕತ್ವವನ್ನು ನಾವು ಸ್ಮರಿಸಿ ಅವರು ಮಾಡಿರುವ ದೈರ್ಯ, ಸಾಹಸಗಳು ಅವರ ಜಾತಿಯನ್ನು ಮುನ್ನೆಲೆಗೆ ತಂದಿರುವುದೇ ಅವರ ಹೋರಾಟದಲ್ಲಿ ಎಂದು ಹೇಳಿದರು.
    ಐ,ಡಿ.ಎಸ್.ಜಿ ಸರ್ಕಾರಿ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯ್ಯಾಪಕರಾದ ಕೆ.ಜೆ.ವಸಂತ್ ಕುಮಾರ್ ಉಪನ್ಯಾಸ ನೀಡಿ, ಬುಡಕಟ್ಟು ಸಮುದಾಯಗಳಿಂದ ಭಗವಾನ್ ಎಂದು ಪೂಜಿಸಲ್ಪಡುವ ಬಿರ್ಸಾಮುಂಡಾ, ಶೋ?ಣೆ, ವಸಾಹತುಶಾಹಿ ವ್ಯವಸ್ಥೆಯ ವಿರುದ್ಧ ತೀವ್ರ ಪ್ರತಿರೋಧವನ್ನು ಒಡ್ಡಿದವರು. ಅವರ ಅನುಯಾಯಿಗಳಾಗಿರುವ ಆದಿವಾಸಿ ಜನಾಂಗದಿಂದಲೇ ಇಂದು ಅರಣ್ಯ ಉಳಿದಿದೆ. ಅವರಲ್ಲಿ ಮೂಡುವ ಕರಕುಶಲತೆ ಅತ್ಯದ್ಬುತವಾದದ್ದು, ಅವರ ನಡುವೆ ಲಿಂಗ ತಾರಮ್ಯವಿಲ್ಲ. ಸಮಾನ ಮನೋಭಾವದಿಂದ ಜೀವನ ಸಾಗಿಸುತ್ತಾರೆ ಎಂದರು.
    ಕಾರ್ಯಕ್ರಮದಲ್ಲಿ ಜಿ.ಪಂ.ಮುಖ್ಯ ಕಾರ್ಯನಿರ್ವಣಾಧಿಕಾರಿ ಹೆಚ್,ಎಸ್.ಕೀರ್ತನಾ, ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ, ಕೇಂದ್ರ ಸಂವಹನ ಇಲಾಖೆಯ ಶಿವಮೊಗ್ಗದ ಕ್ಷೇತ್ರ ಪ್ರಚಾರ ಅಧಿಕಾರಿ ಅಕ್ಷತಾ ಸಿ.ಹೆಚ್, ಜಂಟಿ ಕೃಷಿ ನಿರ್ದೇಶಕರಾದ ಎಂ.ತಿರುಮಲೇಶ್, ಬುಡಕಟ್ಟು ಸಮಾಜದ ಮುಖಂಡರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು,
    ಕಾರ್ಯಕ್ರಮಕ್ಕೆ ಮುನ್ನ ತಾಲ್ಲೂಕು ಕಚೇರಿಯಿಂದ ಕುವೆಂಪು ಕಲಾಮಂದಿರದವರೆಗೆ ಬಿರ್ಸಾಮುಂಡ ಅವರ ಭಾವಚಿತ್ರದೊಂದಿಗೆ ನಡೆದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಹುಲಿವೇಷ, ಚಿಟ್ಟಿಮೇಳ, ಚೋಮನ ಕುಣಿತ, ಬೊಂಬೆ ಕುಣಿತ ಗಮನ ಸೆಳೆದರೆ, ವಿದ್ಯಾರ್ಥಿಗಳು ವಾದ್ಯಗೋಷ್ಠಿಯ ಶಬ್ದಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.
    An unusual great man of the tribe is Birsamunda
  • ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

    ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

    ಬೆಂಗಳೂರು: ಪದ್ಮಶ್ರೀ ಪುರಸ್ಕೃತೆ ಸಾಲು ಮರದ ತಿಮ್ಮಕ್ಕ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

    ಅವರು ಇಂದು ವೃಕ್ಷಮಾತೆ ಸಾಲು ಮರದ ತಿಮ್ಮಕ್ಕ ಅವರ ಅಂತಿಮ ದರ್ಶನ ಪಡೆದ ನಂತರ ಮಾಧ್ಯಮದವರೊಂದಿಗೆ ಮಾತನಾಡಿ  114 ವರ್ಷಗಳ ಕಾಲ ಬದುಕಿದ ಸಾಲು ಮರದ ತಿಮ್ಮಕ್ಕನವರು ಇಂದು ದೈವಾಧೀನರಾಗಿದ್ದಾರೆ. ಅವರು ಹುಟ್ಟೂರು ಮಾಗಡಿ ತಾಲ್ಲೂಕು ಹುಲಿಕಲ್ ಗ್ರಾಮ ಜನಿಸಿದರು.

    ಮಕ್ಕಳಿಲ್ಲದ ತಿಮ್ಮಕ್ಕನವರು ಮರಗಿಡಗಳನ್ನೇ ತಮ್ಮ ಮಕ್ಕಳಂತೆ ಸಾಕುತ್ತಿದ್ದರು. ಅವರು ನೆಟ್ಟಿರುವ ಮರಗಳು ಇವತ್ತು ಹೆಮ್ಮರವಾಗಿ ಬೆಳೆದು ನಿಂತಿದೆ. ಪರಿಸರವಾದಿಯಾಗಿದ್ದ ತಿಮ್ಮಕ್ಕನವರ ಸೇವೆಯನ್ನು ಪರಿಗಣಿಸಿ , ಕೇಂದ್ರಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು ಎಂದರು.

    ತಿಮ್ಮಕ್ಕ ಅವರ ಕೊನೆ ಆಸೆಯ ಪತ್ರ ಕೊಟ್ಟಿದ್ದಾರೆ. ಬೇಲೂರಿನಲ್ಲಿ ತಿಮ್ಮಕ್ಕ ವಸ್ತು ಸಂಗ್ರಹಾಲಯವನ್ನು ಮಾಡಬೇಕು ಎಂದು ಹೇಳಿದ್ದು, ಈ ಬಗ್ಗೆ ಸರ್ಕಾರ ಪರಿಶೀಲಿಸಿ ಪರಿಗಣಿಸಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

    ತಿಮ್ಮಕ್ಕ ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಸಾವಿನಿಂದ ಉಂಟಾದ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ಕೊಡಲಿ ಎಂದು ಪ್ರಾರ್ಥನೆ ಮಾಡುವುದಾಗಿ ಹೇಳಿದರು.

    ತಿಮ್ಮಕ್ಕ ಅವರ ಅಂತ್ಯಕ್ರಿಯೆಯ ಬಗ್ಗೆ ಕುಟುಂಬದವರು ಎರಡು ಮೂರು ಸ್ಥಳಗಳನ್ನು ಗೊತ್ತು ಮಾಡಿದ್ದು, ಅಂತ್ಯಕ್ರಿಯೆ ಎಲ್ಲಿ ಮಾಡಬೇಕೆಂದು ಸದ್ಯದಲ್ಲಿಯೇ ನಿರ್ಧರಿಸಲಾಗುವುದು ಎಂದರು.

    Chief Minister condoles the death of Thimmakka, a Padma Shri awardee

  • ಬಿಹಾರದಲ್ಲಿ ಎನ್‌ಡಿಎಗೆ ಅಭೂತಪೂರ್ವ ಗೆಲುವು ಬಿಜೆಪಿ ಸಂಭ್ರಮಾಚರಣೆ

    ಬಿಹಾರದಲ್ಲಿ ಎನ್‌ಡಿಎಗೆ ಅಭೂತಪೂರ್ವ ಗೆಲುವು ಬಿಜೆಪಿ ಸಂಭ್ರಮಾಚರಣೆ

    ಚಿಕ್ಕಮಗಳೂರು: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಅತಿಹೆಚ್ಚು ಸ್ಥಾನ ಪಡೆದುಕೊಂಡು ಅಪೂತಪೂರ್ವ ಗೆಲುವು ಸಾಧಿಸಿದ ಹಿನ್ನೆಲೆ ಶುಕ್ರವಾರ ಜಿಲ್ಲಾ ಬಿಜೆ ಪಿ ಕಚೇರಿ ಮುಂಭಾಗದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸುವ ಮೂಲಕ ಪರಸ್ಪರ ಸಿಹಿಹಂಚಿ ಸಂಭ್ರಮಾ ಚರಣೆ ನಡೆಸಿದರು.

    ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಬಿಹಾರ ಚುನಾವಣೆಯಲ್ಲಿ ಎನ್‌ಡಿಎ ವಿರುದ್ಧ ವಿ.ಪಕ್ಷದ ಮುಖಂಡರುಗಳು ಮತಗಳ್ಳತನ ಹಾಗೂ ಹಣದ ಆಮಿಷವನ್ನೇ ಹರಿಸಿದರೂ, ಕೊನೆಗೂ ಮತದಾರರು ಆಮಿಷಕ್ಕೆ ಒಳಗಾಗದೇ ಎನ್‌ಡಿಎಗೆ ಸಂಪೂರ್ಣವಾಗಿ ಬೆಂಬಲಿಸಿ ಗೆಲುವನ್ನು ತಂ ದುಕೊಟ್ಟಿದ್ದಾರೆ ಎಂದರು.

    ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಸ್ವೀಕರಿಸಿದ ನಂತರ ದೇಶದ ವಿವಿಧ ರಾಜ್ಯಗಳಲ್ಲಿ ಚು ನಾವಣೆಗಳಲ್ಲಿ ಭಾಗಿಯಾಗಿ ನೂರರ ಗೆಲುವು ಸಾಧಿಸಿದೆ. ಆದರೆ ರಾಹುಲ್‌ಗಾಂಧಿ ನೇತೃತ್ವದ ನಡೆದ ಚುನಾ ವಣೆಗಳಲ್ಲಿ ಸಂಪೂರ್ಣವಾಗಿ ಠೇವಣಿ ಕಳೆದುಕೊಂಡು ಸತತ ನೂರನೇ ಸೋಲಿಗೆ ಕಾರಣವಾಗಿದೆ ಎಂದು ಟೀಕಿಸಿದರು.

    ಇವಿಎಂ ಹ್ಯಾಕ್, ಮತಗಳ್ಳತನ ಎಂಬ ಸುಳ್ಳು ಸುದ್ದಿ ಹರಡುವ ಮೂಲಕವೇ ಜನರನ್ನು ದಿಕ್ಕುತಪ್ಪಿಸಲು ಯತ್ನಿಸಿದ ವಿ.ಪಕ್ಷದ ನಾಯಕರಿಗೆ ಬಿಹಾರ ರಾಜ್ಯದ ಮತದಾರರು ಎನ್‌ಡಿಗೆ ಬೆಂಬಲಿಸಿ ತಕ್ಕಉತ್ತರ ನೀಡಿ ದೆ. ಈ ತೀರ್ಪನ್ನು ಕಾಂಗ್ರೆಸ್ ಎಚ್ಚೆತ್ತುಕೊಂಡು ಜನಸಾಮಾನ್ಯರ ನಡುವೆ ಅನುಕೂಲವಾಗುವ ಕೆಲಸಗಳನ್ನು ಮಾಡಬೇಕು ಎಂದು ತಿಳಿಸಿದರು.

    ಬಿಹಾರ ಚುನಾವಣೆಯಲ್ಲಿ ಪ್ರಮುಖವಾಗಿ ಕಾರ್ಯನಿರ್ವಹಿಸಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡ, ಗೃಹ ಸಚಿವ ಅಮತ್‌ಶಾ ಹಾಗೂ ಬಿಹಾರ ಮುಖ್ಯಮಂತ್ರಿ ನಿತೀಶ್‌ಕುಮಾರ್ ಅವರಿ ಗೆ ಜಿಲ್ಲಾ ಬಿಜೆಪಿ ಕಾರ್ಯಕರ್ತರು ತುಂಬು ಹೃದಯ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ಹೇಳಿದರು.

    ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್ ಮಾತನಾಡಿ ಕೇಂದ್ರದ ಮೋದಿ ಸರ್ಕಾರ ಹಾಗೂ ಬಿಹಾರ ಮುಖ್ಯ ಮಂತ್ರಿ ನಿತೀಶ್‌ಕುಮಾರ್ ಸಾಧನೆಗಳೇ, ಈ ಬಾರಿಯ ವಿಧಾನಸಭಾ ಚುನಾವಣೆಗಳಲ್ಲಿ ಅತ್ಯಧಿಕ ಸ್ಥಾನ ಗಳಿ ಸಲು ಸಾಧ್ಯವಾಗಿದ್ದು, ಮುಂದೆ ಕರ್ನಾಟಕದಲ್ಲೂ ಜನತೆ ದೊಡ್ಡ ಬದಲಾವಣೆ ತಂದು ಬಿಜೆಪಿ ಗೆಲುವಿಗ ದೊಡ್ಡ ಕ್ರಾಂತಿಯನ್ನು ಮಾಡಲಿದ್ದಾರೆ ಎಂದರು.

    ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗಿ ವೆಂಕಟೇಶ್ ಮಾತನಾಡಿ ಎನ್‌ಡಿಎ ನೇತೃತ್ವದ ಪಕ್ಷ ದೇಶದ ಎಲ್ಲಾ ರಾಜ್ಯಗಳಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್ ಪಕ್ಷವನ್ನು ತಿರಸ್ಕಾರಗೊಳಿ ಸುತ್ತಿದೆ. ಇದಕ್ಕೆ ಅಂದಿನ ಸರ್ಕಾರದಲ್ಲಿ ನಡೆದ ದುರಾಡಳಿತವೇ ನೇರ ಕಾರಣವಾಗಿದೆ ಎಂದು ತಿಳಿಸಿದರು.

    ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಖಜಾಂಚಿ ನಾರಾಯಣಗೌಡ, ವಕ್ತಾರ ಪುಟ್ಟಸ್ವಾಮಿ, ಕಾರ್ಯದರ್ಶಿ ಅರುಣ್, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಚಿನ್‌ಗೌಡ, ಓಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ನಗರಾಧ್ಯಕ್ಷ ಜೀವನ್, ಮಾದ್ಯಮ ಪ್ರಮುಖ್ ದಿನೇಶ್, ಮುಖಂಡರುಗಳಾದ ಹಂಪಯ್ಯ, ಕೌಶಿಕ್, ಹೆಚ್.ಕೆ.ಕೇಶವಮೂರ್ತಿ, ರೇವನಾಥ್, ಸೋಮಶೇಖರ್, ಸೀತರಾಮಭರಣ್ಯ ಇದ್ದರು.

    BJP celebrates unprecedented victory for NDA in Bihar

  • ವಿದ್ಯಾರ್ಥಿದೆಸೆಯಲ್ಲಿ ಮಕ್ಕಳು ಪುಸ್ತಕ ಸ್ನೇಹಿಗಳಾಗಿ

    ವಿದ್ಯಾರ್ಥಿದೆಸೆಯಲ್ಲಿ ಮಕ್ಕಳು ಪುಸ್ತಕ ಸ್ನೇಹಿಗಳಾಗಿ

    ಚಿಕ್ಕಮಗಳೂರು:  ವಿದ್ಯಾರ್ಥಿದೆಸೆಯಲ್ಲಿ ಮಕ್ಕಳು ಪುಸ್ತಕ ಸ್ನೇಹಿಗಳಾಗಬೇಕು. ಭವಿ ಷ್ಯದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸಲು ಗ್ರಂಥಾಲಯಗಳಲ್ಲಿ ದೊರೆಯುವ ಪುಸ್ತಕ ಗಳನ್ನು ಬದುಕಿಗೆ ಹೊಸಮಾರ್ಗ ನೀಡಲಿದೆ ಎಂದು ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್ ಹೇಳಿದರು.

    ನಗರದ ಹೊಸಮನೆ ಬಡಾವಣೆ ಸಮೀಪದ ಕೇಂದ್ರ ಗ್ರಂಥಾಲಯದಲ್ಲಿ ಶುಕ್ರವಾರ ಸಾರ್ವಜನಿಕ ಗ್ರಂ ಥಾಲಯ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ಧ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯ ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಶಾಲಾ-ಕಾಲೇಜು ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಸಾರ್ವಜನಿಕರ ಓದಿಗಾಗಿ ಗುಣಮಟ್ಟದ ಗ್ರಂಥಾಲ ಯ ಕಟ್ಟಡ ಸೇರಿದಂತೆ ಸ್ವಚ್ಚಂಧ ವಾತಾವರಣ ನಿರ್ಮಾಣ ಮಾಡಿದೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ದಿಗೆ ದೇಶದ ಖ್ಯಾತ ವ್ಯಕ್ತಿಗಳ ಜೀವನಚರಿತ್ರೆ ಹಾಗೂ ಉನ್ನತ ವಿದ್ಯಾಭ್ಯಾಸಕ್ಕಾಗಿ ಎಲ್ಲಾ ರೀತಿಯ ಪು ಸ್ತಕಗಳನ್ನು ಅಡಕಗೊಳಿಸಲಾಗಿದೆ ಎಂದರು.

    ಮುಂದಿನ ದಿನಗಳಲ್ಲಿ ಗ್ರಂಥಾಲಯಕ್ಕೆ ಅವಶ್ಯಕತೆ ಇರುವ ಮೂಲಸವಲತ್ತನ್ನು ಪ್ರಾಮಾಣಿಕವಾಗಿ ಒದ ಗಿಸಲಾಗುವುದು ಎಂದು ಭರವಸೆ ನೀಡಿದ ಅವರು, ದೇಶದ ಮುಂದಿನ ಯುವಪ್ರಜೆಗಳನ್ನು ಸಮಾಜದ ಮುಂಚೂಣಿಗೆ ಕೊಂಡೊಯ್ಯುವುದೇ ಪ್ರಮುಖ ಧ್ಯೇಯ ಎಂದು ಹೇಳಿದರು.

    ಹಿರಿಯ ಸಾಹಿತಿ ಬಿ.ತಿಪ್ಪೇರುದ್ರಪ್ಪ ಮಾತನಾಡಿ ಗ್ರಂಥಾಲಯಗಳು ಜ್ಞಾನವನ್ನು ಉಣಬಡಿಸುವ ಕೇಂದ್ರ ಗಳು. ಕನಿಷ್ಟ ದಿನದ ಒಂದುಗಂಟೆಗಳ ಕಾಲ ಬಿಡುವು ಮಾಡಿಕೊಂಡು ಗ್ರಂಥಾಲಯಕ್ಕೆ ತೆರಳಿ ದಿನಪತ್ರಿಕೆ, ಪುಸ್ತಕಗಳು ಓದುವ ಅಭ್ಯಾಸಿವಿರಬೇಕು. ಇದು ಸಮಾಜದ ಆಗು-ಹೋಗುಗಳನ್ನು ಸಮಗ್ರವಾಗಿ ತಿಳಿದು ಕೊಳ್ಳಲು ಸಾಧ್ಯ ಎಂದು ತಿಳಿಸಿದರು.

    ನಗರ ಕೇಂದ್ರ ಗ್ರಂಥಾಲಯಾಧಿಕಾರಿ ಜಿ.ಉಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಇಂದಿನಿಂದ ನ.೨೦ ರವರೆಗೆ ಸಪ್ತಾಹ ಅಂಗವಾಗಿ ಶಾಲಾ-ಕಾಲೇಜುಗಳಲ್ಲಿ ಪ್ರಬಂಧ, ಚಿತ್ರಕಲೆ ಸ್ಪರ್ಧೆ ಹಾಗೂ ಗ್ರಂಥಾಲಯ ಮಹತ್ವ ಕುರಿತು ಉಪನ್ಯಾಸ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಾಗು ವುದು ಎಂದು ಹೇಳಿದರು.

    ನಗರಸಭೆ ಸದಸ್ಯೆ ಸುಜಾತ ಶಿವಕುಮಾರ್ ಮಾತನಾಡಿ ವಿದ್ಯಾಕ್ಷೇತ್ರದಲ್ಲಿ ಪುಸ್ತಕಗಳು ಮಕ್ಕಳ ತಲೆ ಎತ್ತು ವಂತೆ ಮಾಡಲಿದ್ದು, ಹೆಚ್ಚು ಮೊಬೈಲ್‌ಗಳ ಚಟಕ್ಕೆ ಬಲಿಯಾಗದೇ, ನಿರಂತರ ಕಲಿಕೆಯತ್ತ ಅಭ್ಯಾಸ ಹೊಂದಿ, ದೇಶದ ಉತ್ತಮ ಪ್ರಜೆಗಳಾಗಬೇಕು ಎಂದು ತಿಳಿಸಿದರು.

    ಕಾರ್ಯಕ್ರಮದಲ್ಲಿ ನಗರಸಭೆ ಉಪಾಧ್ಯಕ್ಷೆ ಲಲಿತಾ ನಾಯ್ಕ್, ಸ್ಪರ್ಧಾತ್ಮಕ ತರಬೇತಿ ಸಂಸ್ಥೆ ಮುಖ್ಯಸ್ಥ ತುಳಸಿದಾಸ್, ಗ್ರಂಥಾಲಯ ಸಿಬ್ಬಂದಿಗಳಾದ ರಾಘವೇಂದ್ರ, ರೂಪ, ಶಂಕರೇಗೌಡ, ಸಿದ್ದೇಗೌಡ, ಸೌಮ್ಯ, ಕೃಪ, ಕೆ.ಬಿ.ವೀಣಾ, ಓದಿಗರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು..

    Children become book-friendly in student life

  • ಜಿಲ್ಲೆಯ ಸಹಕಾರ ಸಂಘಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಣೆ

    ಜಿಲ್ಲೆಯ ಸಹಕಾರ ಸಂಘಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಣೆ

    ಚಿಕ್ಕಮಗಳೂರು: ಜಿಲ್ಲೆಯ ಸಹಕಾರಿ ಕ್ಷೇತ್ರದ ಸಹಕಾರಿ ಸಂಘಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸಾಲಸೌಲಭ್ಯ ಒದಗಿಸುವ ಮೂಲಕ ಆರ್ಥಿಕ ಶಕ್ತಿಯಾಗಿ ಯಶಸ್ಸು ಸಾಧಿಸುತ್ತಿದೆ ಎಂದು ಕಾಸ್ಕಾರ್ಡ್ ಬ್ಯಾಂಕ್ ಜಿಲ್ಲಾ ನಿರ್ದೇಶಕ ಈಶ್ವರಹಳ್ಳಿ ಮಹೇಶ್ ಹೇಳಿದರು.

    ನಗರದ ಜಿಲ್ಲಾ ಸಹಕಾರ ಯೂನಿಯನ್ನಿನ ಸಭಾಂಗಣದಲ್ಲಿ ಶುಕ್ರವಾರ ರಾಜ್ಯ ಸಹಕಾರ ಮಹಾಮಂಡ ಳ, ಸಹಕಾರ ಯೂನಿಯನ್, ಸಹಕಾರ ಕೇಂದ್ರ ಬ್ಯಾಂಕ್, ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂ ಟದ ಸಹಯೋಗದಲ್ಲಿ ಹಮ್ಮಿಕೊಂಡಿದ್ಧ ೭೨ನೇ ಅಖಿಲ ಭಾರತ ಸಹಕಾರ ಸಪ್ತಾಹದ ಉದ್ಘಾಟನೆ ನೆರವೇರಿ ಸಿ ಅವರು ಮಾತನಾಡಿದರು.

    ಜಿಲ್ಲೆಯ ಡಿಸಿಸಿ ಬ್ಯಾಂಕ್, ಹಾಲು ಒಕ್ಕೂಟ, ಪಿಸಿಎಲ್‌ಡಿ ಬ್ಯಾಂಕ್ ಹಾಗೂ ಸಹಕಾರ ಸಂಘಗಳು ಸದ ಸ್ಯ ಬಂಧುಗಳಿಗೆ ಸಕಾಲಕ್ಕೆ ಸಾಲಸೌಲಭ್ಯ ಪೂರೈಸುವ ಮೂಲಕ, ನಿಗಧಿತ ಸಮಯಕ್ಕೆ ಸದಸ್ಯರು ಮರುಪಾ ವತಿಸುತ್ತಿರುವ ಕಾರಣ ಲಾಭದಾಯಕವಾಗಿ ಮುನ್ನೆಡೆ ಸಾಧಿಸುತ್ತಿದೆ ಎಂದರು.

    ಸಹಕಾರ ಚಳುವಳಿ ಹಲವಾರು ಸವಾಲು, ಸ್ಪರ್ಧೆಗಳನ್ನು ಎದುರಿಸಿದರೂ ದೃತಿಗೆಡದೇ ಮುಂದುವರಿ ದಿದೆ. ಸ್ವಾವಲಂಬಿ ಆರ್ಥಿಕತೆಯತ್ತ ದಾಪುಗಾಲಿಡುತ್ತಿರುವ ಕಾರಣ ರಾಷ್ಟ್ರದಲ್ಲಿ ಸಹಕಾರಿ ಸಂಸ್ಥೆಗಳು ವೇಗ ವರ್ಧಕವಾಗಿ ಕೆಲಸ ಮಾಡುತ್ತಿವೆ ಎಂದು ತಿಳಿಸಿದರು.

    ಸುಸ್ಥಿರ ಅಭಿವೃದ್ದಿ, ಸಮ ಸಮಾಜ ನಿರ್ಮಾಣ, ಸಂಪನ್ಮೂಗಳ ಸಮಾನ ಹಂಚಿಕೆ ಹಾಗೂ ಸಾಂಘಿಕ ಭವ್ಯತೆಯನ್ನು ಆತ್ಮನಿರ್ಭಾರ ಭಾರತ ಕಲ್ಪನೆಯಲ್ಲಿ ಕಾಣುತ್ತಿದ್ದು ೭೨ನೇ ಅಖಿಲ ಭಾರತ ಸಹಕಾರ ಸಪ್ತಾಹದ ಅವಧಿಯಲ್ಲಿ ವಿಚಾರಗೋಷ್ಠಿ, ಸ್ಪರ್ಧೆ, ಮುಂತಾದವು ಸಹಕಾರ ಕ್ಷೇತ್ರದ ಬಗ್ಗೆ ಜನಜಾಗೃತಿ ಉಂಟು ಮಾಡು ತ್ತಿದೆ ಎಂದು ಹೇಳಿದರು.

    ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಪ್ರಧಾನ ನಿರ್ದೇಶಕಿ ಡಾ|| ಆರ್.ಎಸ್.ರೇಣುಕಾ ಮಾತನಾಡಿ ಸಹಕಾ ರ ಸಂಘಗಳಲ್ಲಿ ಡಿಜಿಲೀಕರಣದ ಅಳವಡಿಕೆಯು ದಕ್ಷತೆ ಮತ್ತು ಹೊಂದಾಣಿಕೆಯ ಕೆಲಸದ ಸಂಸ್ಕೃತಿಗೆ ಹೊ ಸ ಅವಕಾಶಗಳನ್ನು ತೆರೆಯಲಿದೆ. ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮೂಲಕ ಸಹಕಾರಿ ಸಂಸ್ಥೆಗಳು ದತ್ತಾಂ ಶ ಚಾಲಿತ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ಎಂದರು.

    ಅನೇಕ ಸಹಕಾರಿ ಸಂಸ್ಥೆಗಳು ಇತ್ತೀಚಿನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಪರಿಣಾಮಕಾರಿಯಾ ಗಿ ಬಳಸುತ್ತಿವೆ. ಆದರೆ ತಮ್ಮ ಸ್ವಂತ ಅಗತ್ಯಗಳಿಗೆ ಅನುಗುಣವಾಗಿ ಕಸ್ಟಮೈಸ್ ಮಾಡಬಹುದಾದ ತಂತ್ರಜ್ಞಾ ನವನ್ನು ಉಪಯೋಗಿಸಿಕೊಂಡು ಉತ್ಪನ್ನಗಳನ್ನು ಹೆಚ್ಚಿಸಿಕೊಂಡು ಮಾರಾಟ ಹಾಗೂ ಸೇವೆಯನ್ನು ವಿಸ್ತರಿ ಸಿಕೊಳ್ಳಲು ಅವಕಾಶಗಳಿವೆ ಎಂದು ತಿಳಿಸಿದರು.

    ಆತ್ಮನಿರ್ಭಾರ ಭಾರತದ ಗುರಿಯನ್ನು ತಲುಪಲು ಸಹಕಾರ ಸಂಸ್ಥೆಗಳು ಮುಂದಾಗಲು ಪ್ರಮುಖ ಪಾ ತ್ರವನ್ನು ನಿರ್ವಹಿಸುತ್ತಿವೆ. ಸಹಕಾರ ಸಂಸ್ಥೆಗಳು ಆರ್ಥಿಕ ಸ್ವಾವಲಂಬನೆ ಸುಸ್ಥಿರ ಅಭಿವೃಧ್ದಿ ಸ್ಥಳೀಯ ಸಂಸ್ಥೆ ಗಳ ಪ್ರಕ್ರಿಯೆ ಯಶಸ್ಸಿಗೆ ಕಾರಣವಾಗಲಿದೆ ಎಂದು ಹೇಳಿದರು.

    ಇದೇ ವೇಳೆ ತಾಲ್ಲೂಕಿನಲ್ಲಿ ಕೆ.ಆರ್.ಪೇಟೆ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ಮುಗುಳುವಳ್ಳಿ ಗ್ರಾಮ ದ ಹಾಲು ಉತ್ಪಾದಕರ ಸಂಘಕ್ಕೆ ಉತ್ತಮ ಸಹಕಾರ ಸಂಘವೆಂದು ಗುರುತಿಸಿ ಪ್ರಶಸ್ತಿ ನೀಡಲಾಯಿತು.

    ಕಾರ್ಯಕ್ರಮದಲ್ಲಿ ಜಿಲ್ಲಾ ಸಹಕಾರ ಯೂನಿಯನ್ ಉಪಾಧ್ಯಕ್ಷರಾದ ಹೆಚ್.ಬಿ.ಸತೀಶ್, ಜಿ.ಕೆ.ದಿವಾ ಕರ್, ನಿರ್ದೇಶಕರಾದ ಸಿ.ಎಸ್.ರಂಗನಾಥ್, ವರಸಿದ್ದಿ ವೇಣುಗೋಪಾಲ್, ಎಂ.ಪರಮೇಶ್ವರಪ್ಪ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಂ.ಎಸ್.ದಯಾನಂದ್, ಮುಖ್ಯಕಾರ್ಯನಿರ್ವಹಣಾಧಿಕಾರಿ ಯಶಸ್, ವ್ಯವಸ್ಥಾಪಕ ಇಂದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.

    District cooperative societies are performing well.

  • ಬಿಜೆಪಿ ಪಕ್ಷ ಹತ್ತಿಕ್ಕುವ ಉದ್ದೇಶದಿಂದ ಸಂತೋಷ್‌ ಕೋಟ್ಯಾನ್‌ ಬಂಧನ

    ಬಿಜೆಪಿ ಪಕ್ಷ ಹತ್ತಿಕ್ಕುವ ಉದ್ದೇಶದಿಂದ ಸಂತೋಷ್‌ ಕೋಟ್ಯಾನ್‌ ಬಂಧನ

    ಚಿಕ್ಕಮಗಳೂರು: ರಾಜ್ಯ ಸರ್ಕಾರದ ದುರಾಡಳಿತವನ್ನು ವಿರೋಧಿಸಿ ಹೋರಾಟ ನಡೆಸುತ್ತಿರುವ ಬಿಜೆಪಿ ಪಕ್ಷವನ್ನು ಹತ್ತಿಕ್ಕುವ ಉದ್ದೇಶದಿಂದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್‌ ಕೋಟ್ಯಾನ್‌ ಅವರನ್ನು ಬಂಧಿಸಲಾಗಿದೆ ಎಂದು ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾದ ಜಿಲ್ಲಾಧ್ಯಕ್ಷ ಕೆ.ಪಿ.ವೆಂಕಟೇಶ್‌ ಹೇಳಿದರು.

    ಗುರುವಾರ ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ,ಕಾರಾಗೃಹದಲ್ಲಿ ಖೈದಿಗಳಿಗೆ ರಾಜ್ಯಾಥಿತ್ಯ ಹಾಗೂ ರಾಜ್ಯ ಸರ್ಕಾರದ ವೈಪಲ್ಯದ ಬಗ್ಗೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಜಾತಿನಿಂಧನೆ ಪದವನ್ನು ಸಂತೋಷ್‌ ಕೋಟ್ಯಾನ್‌ ಬಳಕೆ ಮಾಡಿಲ್ಲ. ಆದರೂ. ಆತನ ಮೇಲೆ ಜಾತಿ ನಿಂಧನೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ. ಪೊಲೀಸ್‌ ಇಲಾಖೆ ಕ್ರಮವನ್ನು ಬಿಜೆಪಿ ಪಕ್ಷ ಖಂಡಿಸುತ್ತದೆ ಎಂದರು.

    ಪೊಲೀಸ್‌ ಇಲಾಖೆ ಕಾನೂನುಬದ್ಧವಾಗಿ ಕೆಲಸ ಮಾಡಬೇಕಿತ್ತು. ಆದರೆ, ಕಾಂಗ್ರೆಸ್‌ ಪಕ್ಷದ ಅಣತಿಯಂತೆ ಸಂವಿಧಾನಬಾಹೀರವಾಗಿ ನಡೆದುಕೊಳ್ಳುತ್ತಿದೆ. ಸರ್ಕಾರದ ವೈಪಲ್ಯವನ್ನು ಯಾರು ಖಂಡಿಸುತ್ತಾರೋ ಅವರ ಆತ್ಮಸೈರ್ಯ ವನ್ನು ಕುಗ್ಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ದೂರಿದರು.

    ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಆರೋಪ ಹೊರಿಸಿ ಜೈಲಿಗೆ ಕಳಿಸುವುದು ಇದೆ ಮೊದಲಲ್ಲಾ ಎಂದ ಅವರು, ನೈಜ್ಯ ಜಾತಿ ನಿಂಧನೆಗೆ ಒಳಗಾದವರಿಗೆ ನ್ಯಾಯ ಸಿಗುತ್ತಿಲ್ಲ, ಜಾತಿ ನಿಂಧನೆ ಮಾಡಿದವರ ಮೇಲೆ ಯಾವುದೇ ಕ್ರಮವಾ ಗುತ್ತಿಲ್ಲ, ಇಂತಹ ಸುಳ್ಳು ಜಾತಿ ನಿಂಧನೆ ಪ್ರಕರಣವನ್ನು ದಾಖಲಿಸಿ, ನೈಜ್ಯ ಪ್ರಕರಣಗಳನ್ನು ಮರೆಮಾಚಲಾಗುತ್ತಿದೆ. ಪೊಲೀಸ್‌ ಇಲಾಖೆ ಸಂವಿಧಾನಾತ್ಮಕವಾಗಿ ಕೆಲಸ ಮಾಡಬೇಕು. ಯಾರೋ ಒತ್ತಡಕ್ಕೆ ಮಣಿಯಬಾರದು ಎಂದು ಒತ್ತಾಯಿಸಿದರು.

    ಬಿಜೆಪಿ ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿ, ಗೃಹಸಚಿವರ ವಿರುದ್ಧ ಪದ ಬಳಕೆಯನ್ನು ಪಕ್ಷ ಸಮರ್ಥಿಸಿಕೊಳ್ಳುವುದಿಲ್ಲ, ಆ ಕ್ಷಣದಲ್ಲಿಯೇ ತಿದ್ದಿಕೊಳ್ಳುವಂತೆ ಹೇಳಿದ್ದೇವೆ. ಅಟ್ರಾಸಿಟಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಸಂತೋಷ್‌ ಕೋಟ್ಯಾನ್‌ ತಮ್ಮ ಭಾಷಣದಲ್ಲಿ ಎಲ್ಲಿಯೂ ಜಾತಿನಿಂಧನೆ ಪದ ಬಳಕೆ ಮಾಡಿಲ್ಲ, ಮುಂದಿನ ದಿನಗಳಲ್ಲಿ ದತ್ತಜಯಂತಿ ಬರುತ್ತಿದ್ದು ಬಿಜೆಪಿ ಹೋರಾಟವನ್ನು ಹತ್ತಿಕ್ಕುವ ಉದ್ದೇಶದಿಂದ ಪೊಲೀಸ್‌ ಇಲಾಖೆ ಅಟ್ರಾಸಿಟಿ ಪ್ರಕರಣ ದಾಖಲಿಸಿದೆ ಎಂದು ದೂರಿದರು.

    ಗೃಹಸಚಿವರನ್ನು ಮೆಚ್ಚಿಸುವ ಉದ್ದೇಶದಿಂದ ಪೊಲೀಸ್‌ ಇಲಾಖೆ ಅಟ್ರಾಸಿಟಿ ಪ್ರಕರಣ ದಾಖಲಿಸಿದೆ. ಈ ವಿಚಾರದಲ್ಲಿ ಪೊಲೀಸ್‌ ಇಲಾಖೆ ಏಕಪಕ್ಷೀಯ ನಿರ್ಧಾರ ತಗೆದುಕೊಂಡಿರುವುದು ಖಂಡನೀಯ ಎಂದರು. ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಡಾ.ನರೇಂದ್ರ, ದೀಪಕ್‌ ದೊಡ್ಡಯ್ಯ, ಯತೀಶ್‌, ಹಂಪಯ್ಯ ಇದ್ದರು.

    Santosh Kotian arrested with the intention of suppressing the BJP party