Category: ಜಿಲ್ಲಾ ಸುದ್ದಿ

  • ಧರ್ಮದ ಹೆಸರಿನಲ್ಲಿ ಕಲಹ ಸೃಷ್ಟಿಸುವ ಸಂಘಟನೆಗೆ ಕಡಿವಾಣಕ್ಕೆ ಮನವಿ

    ಧರ್ಮದ ಹೆಸರಿನಲ್ಲಿ ಕಲಹ ಸೃಷ್ಟಿಸುವ ಸಂಘಟನೆಗೆ ಕಡಿವಾಣಕ್ಕೆ ಮನವಿ

    ಚಿಕ್ಕಮಗಳೂರು: ಜಾತಿ ಧರ್ಮ ಹೆಸರಿನಲ್ಲಿ ಕಲಹ ಸೃಷ್ಟಿಸಿ ಬೆಂಕಿ ಹಚ್ಚುವ ಬ್ರಾಹ್ಮಣ್ಯ ಪಾರಮ್ಯದ ಆರ್‌ಎಸ್‌ಎಸ್ ಸಂಘಟನೆಗೆ ಸಂವಿಧಾನ ಬದ್ಧ ಕಡಿವಾಣ ಹಾಕಬೇಕು ಎಂದು ದಸಂಸ ಮುಖ ಂಡರುಗಳು ತಹಶೀಲ್ದಾರ್ ಕೆ.ಎಸ್.ರೇಷ್ಮಾ ಮುಖಾಂತರ ಮುಖ್ಯಮಂತ್ರಿಗಳಿಗೆ ಸೋಮವಾರ ಮನವಿ ಸಲ್ಲಿ ಸಿದರು.

    ಈ ವೇಳೆ ಮಾತನಾಡಿದ ದಸಂಸ ತಾಲ್ಲೂಕು ಪ್ರಧಾನ ಸಂಚಾಲಕ ಮಂಜುನಾಥ್ ನಂಬಿಯಾರ್ ಸಂವಿಧಾನ ಬದ್ಧವಾಗಿ ನೋಂದಣಿಯಾಗದ ಆರ್‌ಎಸ್‌ಎಸ್ ಸಂಘಟನೆಯು ೧೮ವರ್ಷ ಮೇಲ್ಪಟ್ಟ ವಯ ಸ್ಕರನ್ನು ಮಾತ್ರ ಸಂಘಟನೆ ಸದಸ್ಯರನ್ನಾಗಿಸಿಕೊಳ್ಳಬಹುದಾಗಿದ್ದು, ಇದು ಅಪ್ರಾಪ್ತ ಮಕ್ಕಳ ಮೆದುಳಿನಲ್ಲಿ ಕೋ ಮುವಾದ, ಹಿಂದುತ್ವ ಜಾತಿ ಹೆಸರಿನಲ್ಲಿ ಕಲಹ ಸೃಷ್ಟಿಸುತ್ತಿದೆ ಎಂದರು.

    ಮುಖ್ಯವಾಗಿ ಆಯವ್ಯಯ ಲೆಕ್ಕಪತ್ರ ಆಡಿಟ್ ಮಾಡಿಸದೇ ಸರ್ಕಾರವನ್ನು ವಂಚಿಸುವ ಕಾರಣಕ್ಕೆ ೧೯೫೦ ರ ದಶಕದಲ್ಲಿಯೇ ಅಂಬೇಡ್ಕರ್ ಯಾವುದೇ ಕಾರಣಕ್ಕೂ ಆರ್‌ಎಸ್‌ಎಸ್ ಮತ್ತು ಹಿಂದೂಮಹಾಸಭಾದಂತ ಪ್ರಗತಿ ವಿರೋಧಿ ಸಂಘಟನೆಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದು ಎಂದು ತಮ್ಮ ರಾಜಕೀಯ ಪಕ್ಷ ಪ.ಜಾತಿ ಒಕ್ಕೂಟದ ಪ್ರಣಾಳಿಕೆಯಲ್ಲಿ ಎಚ್ಚರಿಸಿತು ಎಂದು ಹೇಳಿದರು.

    ಸ್ವಾತಂತ್ರ್ಯ ಪೂರ್ವದ ನಂತರ ಇದೇ ಸಂಘಟನೆ ಪತ್ರಿಕೆ ಆರ್ಗನೈಸರ್‌ನಲ್ಲಿ ಭಾರತದ ಸಂವಿಧಾನದಲ್ಲಿ ಭಾರತೀಯವಾದದ್ದೂ ಏನಿಲ್ಲ, ವಾಸ್ತವವಾಗಿ ಮನುಸ್ಮೃತಿ ಅತ್ಯಂತ ಪ್ರಾಚೀನವಾಗಿದ್ದು ಜಗತ್ತಿನ ಜನರೆಲ್ಲಾ ಸ್ವಪ್ರೇರಿತರಾಗಿ ಅದರ ಬಗ್ಗೆ ಅಪಾರ ಆದರವನ್ನು ವ್ಯಕ್ತಪಡಿಸುತ್ತಾರೆ. ಆದರೆ ನಮ್ಮ ಸಂವಿಧಾನ ಪಂಡಿತರಿಗೆ ಅದು ಏನಿಲ್ಲ ಎಂದು ಟೀಕಿಸಲಾಗಿತ್ತು ಎಂದು ತಿಳಿಸಿದರು.

    ಆರ್‌ಎಸ್‌ಎಸ್ ಮತ್ತು ಬಿಜೆಪಿ ಮತದಾರ ರಾಜಕೀಯ ಕೂಸು, ಇವರೆಡೂ ಸಹ ಬ್ರಾಹ್ಮಣ್ಯ ಶ್ರೇಷ್ಟತೆ ಒಪ್ಪುವ ಮೇಲ್ಜಾತಿ, ಮೇಲ್ವರ್ಗದ ಕೈಯಲಿ ಸದಾಕಾಲ ಅಧಿಕಾರವನ್ನು ಉಳಿಸಿಕೊಳ್ಳಲು ದಲಿತರು, ಆದಿವಾ ಸಿಗಳು ಮತ್ತು ಹಿಂದುಳಿದ ಜಾತಿಗಳ ಬಡಮಕ್ಕಳಲ್ಲಿ ಮುಸ್ಲೀಂ ವೇಷದ ಅಮಲನ್ನು ಏರಿಸಿ ತಮ್ಮ ಕಾಲಾಳು ಗಳನ್ನಾಗಿ ಮಾಡಿಕೊಂಡಿವೆ ಎಂದು ದೂರಿದರು.

    ಎಸ್ಸಿ, ಎಸ್ಟಿ ಮತ್ತು ಓಬಿಸಿ ಜನಾಂಗದ ಬಡಮಕ್ಕಳಿಗೆ ಗಣವೇಷ ತೊಡಿಸಿ, ಕೈಯಲ್ಲಿ ದೊಣ್ಣೆ, ಗೋಮಾ ತಾಕೀ ಜೈಕಾರ ಎಂದು ಬೀದಿಗಿಳಿಸುವ ಸಂಘಟನೆ, ತಮ್ಮ ಸ್ವಂತ ಮಕ್ಕಳನ್ನು ಮಾತ್ರ ಕಾನ್ವೆಂಟ್, ವಿದೇಶಿ ವಿಧಿ ಗಳಲ್ಲಿ ಹಾಗೂ ಪ್ರತಿಷ್ಟಿತ ವಿದ್ಯಾಸಂಸ್ಥೆಗಳಲ್ಲಿ ವಿದ್ಯಾಭ್ಯಾಸ, ಉನ್ನತ ಹುದ್ದೆ, ಶಾಸಕ, ಸಂಸದರನ್ನಾಗಿಸುತ್ತಾರೆ. ಆದರೆ ಬಡಮಕ್ಕಳನ್ನು ಮುಸ್ಲಿಮರ, ದಲಿತರ ವಿರುದ್ಧ ಜಗಳಕ್ಕಿಳಿಸಿ ಜೈಲುವಾಸಕ್ಕೆ ಸೇರುವಂತೆ ಮಾಡಿದೆ.

    ಆದ್ದರಿಂದ ರಾಜ್ಯಸರ್ಕಾರ ಸಂವಿಧಾನ ಪ್ರಜಾಪ್ರಭುತ್ವ ಜಾತ್ಯಾತೀತತೆ, ಕೋಮು, ಸಾಮರಸ್ಯ, ಶಾಂತಿ ಸೌಹಾರ್ದತೆ, ಸಹಬಾಳ್ವೆ ವಿರೋಧಿ ಜಾತಿ ಧರ್ಮ ಹೆಸರಿನಲ್ಲಿ ಕಲಹ ಸೃಷ್ಟಿಸುವ ಸಂಘಟನೆಗೆ ಸಂವಿಧಾನ ಬದ್ಧ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ದಸಂಸ ಸಂಘಟನಾ ಸಂಚಾಲಕರಾದ ನವೀನ್, ಪೂರ್ಣೇಶ್, ಸಂದೀಪ್, ಮಂಜುನಾಥ್, ಅಜಯ್, ಮಹೇಶ್, ಸಂದೀಪ್ ಕುಮಾರ್, ವಿಜಯ್, ದಿಲೀಪ್, ಸುಂದ್ರೇಶ್, ಜಿಲ್ಲಾ ಸಮಿತಿ ಸದಸ್ಯರಾದ ಮಂಜಯ್ಯ, ಶೇಖರ್, ಚಂದ್ರು ಹಾಜರಿದ್ದರು.

    Appeal to curb organization that creates strife in the name of religion

  • ನ.13 ರಂದು ನಗರದಲ್ಲಿ ಏಕತಾ ನಡಿಗೆ

    ನ.13 ರಂದು ನಗರದಲ್ಲಿ ಏಕತಾ ನಡಿಗೆ

    ಚಿಕ್ಕಮಗಳೂರು: ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ ಅವರ 150ನೇ ಜನ್ಮ ದಿನಾಚರಣೆ ಸ್ಮರಣಾ ರ್ಥ  ನ.13 ರಂದು ನಗರದಲ್ಲಿ ಏಕತಾ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

    ಬೆಳಿಗ್ಗೆ 7.30ಕ್ಕೆ ಶ್ರೀಕಂಠಪ್ಪ ವೃತ್ತದಿಂದ ಹೊರಟು ಬಸವನಹಳ್ಳಿ ರಸ್ತೆ, ಎಂ.ಜಿ.ರಸ್ತೆ, ಆಜಾದ್ ಪಾರ್ಕ್ ಮೂಲಕ ಹೊಸಮನೆ ಬಡಾವಣೆ ತನಕ ಪಾದಯಾತ್ರೆ ನಡೆಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

    ವಿದ್ಯಾರ್ಥಿಗಳು, ನಾಗರಿಕರು, ಸಂಘ-ಸಂಸ್ಥೆಗಳ ಮುಖಂಡರು ಏಕತಾ ನಡಿಗೆಯಲ್ಲಿ ಭಾಗವಹಿಸುವರು. ಸಾವಿರಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದರು.

    ನ.20 ರಂದು ಮೂಡಿಗೆರೆ ಪಟ್ಟಣದಲ್ಲಿ ಬೆಳಿಗ್ಗೆ 7.30ಕ್ಕೆ ಏಕತಾ ನಡಿಗೆ ಏರ್ಪಡಿಸಲಾಗಿದೆ. ಶಾಲಾ–ಕಾಲೇಜು ವಿದ್ಯಾರ್ಥಿಗಳು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.

    ‘ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಇಷ್ಟೊಂದು ಹದಗೆಟ್ಟಿರುವುದನ್ನು ನಾನು ನೋಡಿರಲಿಲ್ಲ’ ಎಂದು ಶ್ರೀನಿವಾಸ ಪೂಜಾರಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

    ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ. ಕಲ್ಮರುಡಪ್ಪ, ನಗರ ಘಟಕದ ಅಧ್ಯಕ್ಷ ಪುಷ್ಪರಾಜ್, ಪ್ರಧಾನ ಕಾರ್ಯದರ್ಶಿ ರವಿಂದ್ರ ಬೆಳವಾಡಿ, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ್ ಕೋಟ್ಯಾನ್, ರಾಜು, ದಿಶಾ ಸಮಿತಿ ಸದಸ್ಯ ಮಣಿಕಂಠ,  ಶಶಿ ಆಲ್ದೂರು, ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಪುಣ್ಯಪಾಲ್ ಇದ್ದರು.

    Unity walk in the city on November 13th

  • ಭೂರಹಿತ ಭೋವಿ ಮಹಿಳಾ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿಗೆ ನೆರವು

    ಭೂರಹಿತ ಭೋವಿ ಮಹಿಳಾ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿಗೆ ನೆರವು

    ಚಿಕ್ಕಮಗಳೂರು: ಭೂ ಒಡೆತನ ಯೋಜನೆಯಡಿ ಭೋವಿ ಸಮುದಾಯದ ಭೂ ರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಜಮೀನು ಖರೀದಿಸಲು ನಿಗಮದಿಂದ ರೂ. ೨೦ ಲಕ್ಷ ಧನಸಹಾಯ ನೀಡಲಾಗುವುದು ಎಂದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ರಾಮಪ್ಪ ಎಂ. ತಿಳಿಸಿದರು.
    ಇಂದು ನಗರದ ಜಿಲ್ಲಾ ಪಂಚಾಯಿತಿ ಅಬ್ದುಲ್ ನಜೀರ್‌ಸಾಬ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ನಿಗಮದ ಯೋಜನೆಗಳ ಕುರಿತು ಮಾತನಾಡಿ, ಫಲಾನುಭವಿಯು ವಾಸಿಸುತ್ತಿರುವ ಸ್ಥಳದಿಂದ ಗರಿಷ್ಠ ೧೦ ಕಿ.ಮೀ. ವ್ಯಾಪ್ತಿಯೊಳಗೆ ಜಮೀನು ಖರೀದಿಸಿ ಭೋವಿ ಸಮುದಾಯದ ಭೂರಹಿತ ಮಹಿಳಾ ಕೃಷಿ ಕಾರ್ಮಿಕರನ್ನು ಭೂ ಮಾಲೀಕರನ್ನಾಗಿ ಮಾಡುವುದು ಈ ಯೋಜನೆಯ ಉದ್ದೇಶವಾಗಿದೆ ಎಂದರು.
    ಜಿಲ್ಲೆಯಲ್ಲಿ ಭೋವಿ ಸಮುದಾಯವು ೫ ವಿಧಾನಸಭಾ ಕ್ಷೇತ್ರಗಳಿಂದ ೩೩.೦೦೦ ಜನಸಂಖ್ಯೆ ಇರುವುದಾಗಿ ಅಂಕಿ ಅಂಶದ ಮೂಲಕ ತಿಳಿದು ಬಂದಿದ್ದು, ಈ ಕಾರಣದಿಂದಾಗಿ ಅಧಿಕಾರಿಗಳು ಜೊತೆಗೂಡಿ ಸಂಪೂರ್ಣವಾಗಿ ಎಲ್ಲ ೮ ಯೋಜನೆಗಳ ಬಗ್ಗೆ ವಿವರಣೆಯನ್ನು ಕೊಡುವುದರ ಮೂಲಕ ಸರ್ಕಾರದ ಸೌಲಭ್ಯಗಳು ಸಮುದಾಯದ ಜನರಿಗೆ ತಲುಪಲು ಅಧಿಕಾರಿಗಳು ಹೆಚ್ಚು ಪ್ರಚಾರ ಕೈಗೊಂಡು ಯೋಜನೆಯ ಲಾಭ ದೊರೆಯುವಂತೆ ಮಾಡಬೇಕು ಎಂದರು.
    ಕುರಿ ಮೇಕೆ ಸಾಕಾಣಿಕೆ ಯೋಜನೆಯಡಿ ೧೦ ಕುರಿ ೧ ಟಗರು ಖರೀದಿಸಲು ಒಂದು ಲಕ್ಷ ಸಹಾಯಧನ ಪಡೆಯುವ ಅವಕಾಶವಿದ್ದು, ಸಮುದಾಯದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹೈನುಗಾರಿಕೆ ಮಾಡುವವರಿಗೆ ೨ ಹಸು ನೀಡಲಾಗುವುದು. ಸ್ವಯಂ ಉದ್ಯೋಗ ಕೈಗೊಳ್ಳಲು ಸ್ವಯಂ ಸ್ವಾವಲಂಬಿ ಎಂಬ ಸಾರಥಿ ಹಳದಿ ಬೋರ್ಡಿನ ಯೋಜನೆಯಡಿ ರೂ.೪ ಲಕ್ಷ ವಾಹನ ಖರೀದಿಗೆ ಧನಸಹಾಯ ನೀಡಲಾಗುತ್ತದೆ ಎಂದ ಅವರು ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ಕೊಳವೆ ಬಾವಿ ಕೊರೆದು ಪಂಪ್‌ಸೆಟ್ ಆಳವಡಿಸಿ ವಿದ್ಯುದ್ದೀಕರಣಗೊಳಿಸಿ ನೀರಾವರಿ ಸೌಲಭ್ಯ ಕಲ್ಪಿಸಲು ರೂ.೩.೭೫ ಲಕ್ಷ ಧನಸಹಾಯ ನೀಡಲಾಗುವುದು ಎಂದು ತಿಳಿಸಿದರು.
    ಮೈಕ್ರೋಕ್ರೆಡಿಟ್ ಯೋಜನೆಯಡಿ ೧೦ ಜನ ಮಹಿಳಾ ಸದಸ್ಯರು ಸಂಘವನ್ನು ನೋಂದಾಯಿಸಿಕೊಂಡಿದ್ದರೆ, ಅಂತಹ ಮಹಿಳಾ ಸಂಘದ ಮಹಿಳಾ ಸದಸ್ಯರಿಗೆ ೫ ಲಕ್ಷ ರೂ ಸಹಾಯಧನದೊಂದಿಗೆ ಸಾಲ ಸೌಲಭ್ಯ ನೀಡಲಾಗುವುದು. ಈ ಆರ್ಥಿಕ ನೆರವನ್ನು ಆವರು ಬಳಸಿಕೊಂಡು ತಮ್ಮದೇ ಆದ ಸ್ವಂತ ಉದ್ಯೋಗದ ಮೂಲಕ ಅವರನ್ನು ಸಬಲರನ್ನಾಗಿ ಮಾಡುವ ಉದ್ದೇಶ ನಮ್ಮ ನಿಗಮದ್ದಾಗಿದೆ. ಪ್ರತಿ ಜಿಲ್ಲೆಗೆ ಭೇಟಿ ನೀಡಿ ಫಲಾನುಭವಿಗಳಿಗೆ ಸಿಗಬೇಕಾದ ಸೌಲಭ್ಯವನ್ನು ಮಾರ್ಚ್ ೩೧ರೊಳಗೆ ನೇರವಾಗಿ ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
    ಗೋಷ್ಠಿಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಬಿ.ಮಾಲತಿ, ಕ್ಯಾಪ್ಟನ್ ರಾಜೇಶ್ ಜಯಸಿಂಹ, ನಿಗಮದ ಅಧಿಕಾರಿ ಮನೀಶ್ ನಾಯಕ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
    Assistance for land purchase for landless Bhovi women agricultural workers
  • ತೀರ್ಪುಗಾರರ ನಿರ್ಲಕ್ಷ್ಯದಿಂದ ರಾಜ್ಯಮಟ್ಟದ ಆಯ್ಕೆಯಲ್ಲಿ ಅನ್ಯಾಯ

    ತೀರ್ಪುಗಾರರ ನಿರ್ಲಕ್ಷ್ಯದಿಂದ ರಾಜ್ಯಮಟ್ಟದ ಆಯ್ಕೆಯಲ್ಲಿ ಅನ್ಯಾಯ

    ಮೂಡಿಗೆರೆ: ‘ಜಿಲ್ಲಾ ಯುವ ಜನೋತ್ಸವದಲ್ಲಿ ತೀರ್ಪುಗಾರರ ನಿರ್ಲಕ್ಷ್ಯದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗಬೇಕಿದ್ದ ನಮ್ಮ ಕಲಾ ಸಂಘಕ್ಕೆ ದ್ರೋಹವೆಸಗಲಾಗಿದೆ’ ಎಂದು ಮಿತ್ರ ಜಾನಪದ ಕಲಾ ಸಂಘದ ಸದಸ್ಯ ಕೆ.ಸಿ. ಚಂದ್ರಶೇಖರ್ ದೂರಿದರು.

    ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನ. 4ರಂದು ಚಿಕ್ಕಮಗಳೂರು ಕುವೆಂಪು ಕಲಾ ಮಂದಿರದಲ್ಲಿ ಜಿಲ್ಲಾಡಳಿತ, ಜಿ.ಪಂ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಆಶ್ರಯದಲ್ಲಿ ಜಿಲ್ಲಾಮಟ್ಟದ ಯುವ ಜನೋತ್ಸವ ಏರ್ಪಡಿಸಲಾಗಿತ್ತು. ಜಾನಪದ ಗೀತೆ ಹಾಗೂ ಜಾನಪದ ನೃತ್ಯ ಸ್ಪರ್ಧೆಯಲ್ಲಿ ನಮ್ಮ ತಂಡವು ಭಾಗವಹಿಸಿ ಗೆಲುವು ಸಾಧಿಸಿರುವುದು ಅಂಕಪಟ್ಟಿಯಲ್ಲಿ ಸ್ಪಷ್ಟವಾಗಿದೆ.

    ಆದರೆ, ಈ ಸ್ಪರ್ಧೆಗೆ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದ್ದ ಶಿವಕುಮಾರ್ ಬ್ಯಾರುವಳ್ಳಿ ನೀಡಿರುವ ಅಂಕಪಟ್ಟಿಯಲ್ಲಿರುವ ಫಲಿತಾಂಶ ಹೊರತುಪಡಿಸಿ, ಪಿ.ಗೌರೀಶ್ ಹಾಗೂ ಕೆ. ಸುಜಾತ ಅವರು ನೀಡಿರುವ ಅಂಕಗಳಲ್ಲಿ ತಿದ್ದಿಪಡಿಯಾಗಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. ಇದರಿಂದ ತಮ್ಮ ತಂಡಕ್ಕೆ ಮೋಸವಾಗಿದೆ ಎಂದು ಹೇಳಿದರು.

    ‘ಈ ಪ್ರಕ್ರಿಯೆ ಗಮನಿಸಿದರೆ ಪ್ರಭಾವಿ ವ್ಯಕ್ತಿಗಳು  ತೀರ್ಪುಗಾರರ ಮೇಲೆ ಒತ್ತಡ  ಹೇರಿ, ಗೆಲುವು ಪಡೆಯಬೇಕಿದ್ದ ನಮ್ಮ ತಂಡವನ್ನು ಅಂಕಪಟ್ಟಿ ತಿದ್ದುವ ಮೂಲಕ ಸೋಲಿಸಿ, ಬೇರೆ ತಂಡಗಳನ್ನು ಗೆಲ್ಲಿಸಿ ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗಿದೆ. ಹಾಗಾಗಿ ಪಾರದರ್ಶಕತೆ ಇಲ್ಲದ ಫಲಿತಾಂಶ ತಡೆ ಹಿಡಿದು, ತಿದ್ದುಪಡಿ ಮಾಡುವ ಮುನ್ನ ಅಂಕಪಟ್ಟಿಯಲ್ಲಿ ನಮೂದಿಸಿದ ಅಂಕಗಳ ಆಧಾರದ ಮೇಲೆ ನಮ್ಮ ತಂಡಕ್ಕೆ ಪ್ರಥಮ ಸ್ಥಾನ ಘೋಷಣೆ ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆ ಮಾಡಬೇಕು. ಇಲ್ಲವಾದರೆ ಯಾವುದೇ ತಂಡವನ್ನು ಕಳಿಸಬಾರದು’  ಎಂದು ಒತ್ತಾಯಿಸಿದರು.

    ಮಿತ್ರ ಜಾನಪದ ಕಲಾ ಸಂಘದ ಸದಸ್ಯರಾದ ಜಯಪಾಲ್, ನವೀನ್ ಕಣಚೂರು, ಸುನೀಲ್ ಹಂತೂರು, ಶಶಿ ಜೇನುಬೈಲ್ ಭಾಗವಹಿಸಿದ್ದರು.

    Injustice in state-level selection due to judges’ negligence

  • ಶೋಷಿತರನ್ನು ಸಮಾಜದ ಮುನ್ನಲೆಗೆ ತರಲು ಶ್ರಮಿಸಿದ್ದಾರೆ

    ಶೋಷಿತರನ್ನು ಸಮಾಜದ ಮುನ್ನಲೆಗೆ ತರಲು ಶ್ರಮಿಸಿದ್ದಾರೆ

    ಚಿಕ್ಕಮಗಳೂರು: ಶೋಷಿತ ವರ್ಗದ ಜನರನ್ನು ಸಮಾಜದ ಮುನ್ನಲೆಗೆ ತರಬೇಕೆಂಬ ಉದ್ದೇಶದೊಂದಿಗೆ ಸಂಕೀರ್ತನೆಗಳ ಮೂಲಕ ಕ್ರಾಂತಿ ಮಾಡಿ ಶ್ರಮಿಸಿದ ಮಹಾನ್ ಇತಿಹಾಸ ಪುರುಷ ಭಕ್ತ ಕನಕದಾಸರು ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ಬಣ್ಣಿಸಿದರು.

    ಅವರು ಇಂದು ಇಲ್ಲಿನ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಸಾರಿಗೆ ನಿಗಮದ ನೌಕರರು ಏರ್ಪಡಿಸಿದ್ದ ೫೩೮ನೇ ಶ್ರೀ ಕನಕಜಯಂತಿ ಕನಕ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿ ಸಮಾಜದಲ್ಲಿ ತಲೆದೋರಿದ್ದ ಮೂಡನಂಬಿಕೆಗಳ ವಿರುದ್ಧ ಸೌಮ್ಯ, ಶಾಂತಿಯಿಂದ ಸಾಮಾಜಿಕ ಹೋರಾಟ ಮಾಡಲು ಅದ್ಭುತ ಸಾಹಿತಿಗಳಾಗಿ ಹೃದಯ ಬೆಸೆಯುವ ಸಂಕೀರ್ತನೆಗಳನ್ನು ರಚಿಸಿ, ಸಾಮಾಜಿಕ ಸಾಮರಸ್ಯವನ್ನು ಕನಕದಾಸರು ಕಾಪಾಡಿದ್ದಾರೆ ಎಂದರು.

    ೧೫೯೪ ರಲ್ಲಿ ಹಾವೇರಿ ಜಿಲ್ಲೆಯ ಬಾಡಾ ಗ್ರಾಮದಲ್ಲಿ ಜನಿಸಿದ ತಿಮ್ಮಪ್ಪ ನಾಯಕ ಅವರು ಮುಂದೆ ಕನಕದಾಸರಾಗಿ ಕಾಗಿನೆಲೆಯಲ್ಲಿ ವ್ಯವಸಾಯ ಮಾಡುತ್ತಿದ್ದಾಗ ಚಿನ್ನದ ಗಣಿ ಸಿಗುತ್ತದೆ. ಅದನ್ನು ಸ್ವಾರ್ಥಕ್ಕೆ ಬಳಸದೆ ದೇವಾಲಯ ನಿರ್ಮಿಸುವಲ್ಲಿ ಮುಂದಾಗಿದ್ದರು ಎಂದು ವಿವರಿಸಿದರು.

    ಅಜ್ಞಾನದಿಂದ ಸುಜ್ಞಾನದ ಕಡೆ ಪ್ರಭಾವಿತರಾಗಿ ಮೋಹಿನಿ ತರಂಗಿಣಿಯಲ್ಲಿ ಕವಿತೆ, ಕವನ ರಚಿಸಿ ದಾಸ ಕೀರ್ತನೆಗಳ ಮೂಲಕ ಜಗತ್ತಿಗೆ ಭಕ್ತಿಯಿಂದ ದೇವರು ಒಲಿಯುತ್ತಾನೆ ಎಂಬುದನ್ನು ಕನಕದಾಸರು ತೋರಿಸಿ ಮಾರ್ಗದರ್ಶನ ನೀಡಿದ್ದಾರೆ ಎಂದರು.

    ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ, ವಾಲ್ಮೀಕಿ ಮುಂತಾದ ಮಹಾನ್ ಪುರುಷರನ್ನು ಕೇವಲ ಒಂದು ಜಾತಿಗೆ, ಒಂದು ಸಮುದಾಯಕ್ಕೆ ಸೀಮಿತಗೊಳಿಸದೆ ಎಲ್ಲಾ ವರ್ಗದ ಜನರು ಒಟ್ಟುಗೂಡಿ ಆಚರಿಸಿದಾಗ ಮಹಾನ್ ದಾರ್ಶನಿಕರ ಜಯಂತಿಗೆ ನಿಜ ಅರ್ಥ ಬರುತ್ತದೆ ಎಂದು ಹೇಳಿದರು.

    ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯಿತ್ರಿ ಶಾಂತೇಗೌಡ ಮಾತನಾಡಿ, ಭಕ್ತ ಕನಕದಾಸರ ಸಂಕೀರ್ತನೆಗಳ ಬಗ್ಗೆ ಸಂಸ್ಕೃತಿ, ಪರಂಪರೆ ನೆಲೆಯನ್ನು ಯುವಪೀಳಿಗೆಗೆ ಪರಿಚಯಿಸುವ ಅಗತ್ಯ ಇದೆ. ಕೇವಲ ಒಂದು ದಿನಕ್ಕೆ ಮಹಾನ್ ಪುರುಷರ ಜಯಂತಿಗಳು ಸೀಮಿತವಾಗದೆ ಪ್ರತೀ ಮನೆ ಮನದಲ್ಲಿ ಅಚರಣೆಗಳು ನಡೆಯುವಂತಾಗಬೇಕು ಎಂದು ತಿಳಿಸಿದರು.

    ಅಜ್ಞಾನದಿಂದ ಸುಜ್ಞಾನದ ಕಡೆಗೆ ಹೋಗಬೇಕೆಂಬ ನಿಟ್ಟಿನಲ್ಲಿ ಕನಕದಾಸರು ಉಡುಪಿಯಲ್ಲಿ ಶ್ರೀಕೃಷ್ಣನನ್ನು ದರ್ಶನ ಮಾಡಬೇಕು ಎಂಬ ಉದ್ದೇಶದೊಂದಿಗೆ ಮಠದಲ್ಲಿ ಮುಂದಾದಾಗ ಪುರೋಹಿತ ಶಾಹಿತಿಗಳು ತಡೆಯುತ್ತಾರೆ, ಆಗ ಕನಕದಾಸರು ಬಾಗಿಲನು ತೆರೆದು ದರುಶನವ ಕೊಡು ಹರಿಯೆ ಎಂಬ ಗೀತೆಯ ಮೂಲಕ ತನ್ನೆಡೆಗೆ ಶ್ರೀಕೃಷ್ಣನ ನೋಡಿದಾಗ ಅದೇ ಕನಕನ ಕಿಂಡಿಯಾಗಿ ಪ್ರಸಿದ್ಧಿಯಾಗಿದೆ ಎಂದರು.

    ಕನ್ನಡ ನಾಡಿನ ಸಂಸ್ಕೃತಿ, ಪರಂಪರೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಪಠ್ಯಗಳ ಮೂಲಕ ಜಾಗೃತಿ ಮೂಡಿಸಬೇಕು. ಇದು ಆದಾಗ ಎಲ್ಲರಲ್ಲೂ ಸಮಾನತೆಯ ಮನೋಭಾವ ಬರುತ್ತದೆ ಎಂದು ಹೇಳಿದರು. ಕೆಎಸ್‌ಆರ್‌ಟಿಸಿ ಯಲ್ಲಿ ಉದ್ಯೋಗದಲ್ಲಿರುವ ನೌಕರರು ಸಾರ್ವಜನಿಕರ ಪ್ರಾಣ ರಕ್ಷಣೆಯ ಬಹುದೊಡ್ಡ ಜವಾಬ್ದಾರಿಯನ್ನು ಹೊತ್ತು ಕರ್ತವ್ಯ ನಿರ್ವಹಿಸುತ್ತಿದ್ದಾರೆಂದು ಶ್ಲಾಘಿಸಿದರು.

    ಅಧ್ಯಕ್ಷತೆಯನ್ನು ಕನಕ ಸಮಿತಿ ಅಧ್ಯಕ್ಷ ಜಯಪ್ಪ ವಹಿಸಿದ್ದರು. ಘಟಕ ವ್ಯವಸ್ಥಾಪಕ ರವೀಶ್, ಉಪಾಧ್ಯಕ್ಷರಾದ ಸಿದ್ದೇಗೌಡ, ಕಾರ್ಯದರ್ಶಿ ಸುರೇಶ್, ಸಹ ಕಾರ್ಯದರ್ಶಿ ಬೀರೇಗೌಡ, ಖಜಾಂಚಿ ಚಂದ್ರಶೇಖರ್, ಸದಸ್ಯರುಗಳಾದ ವಸಂತ, ಪುಷೋತ್ತಮ, ರಘು, ಲೋಕೇಶ್, ದಿನೇಶ್, ಮೋಹನ್ ಗೌಡ ಸೇರಿದಂತೆ ಸಾರಿಗೆ ಸಂಸ್ಥೆ ಸಿಬ್ಬಂದಿಗಳು ಭಾಗವಹಿಸಿದ್ದರು.

    They have worked hard to bring the oppressed to the forefront of society.

  • ಭಕ್ತ-ಭಗವಂತನ ಸಂಬಂಧ ಸಾಕ್ಷಾತ್ಕರಿಸಿದವರು ಕನಕದಾಸರು

    ಭಕ್ತ-ಭಗವಂತನ ಸಂಬಂಧ ಸಾಕ್ಷಾತ್ಕರಿಸಿದವರು ಕನಕದಾಸರು

    ಚಿಕ್ಕಮಗಳೂರು:  ಭಕ್ತ ಹಾಗೂ ಭಗವಂತನ ಸಂಬಂಧವನ್ನು ಸಾಕ್ಷಾತ್ಕರಿಸಿ ತೋರಿಸಿದವರು ಭಕ್ತ ಶ್ರೇಷ್ಠ ಕನಕದಾಸರು; ಭಕ್ತಿಯ ಪರಾಕಾಷ್ಠೆಗೆ ಮತ್ತೊಂದು ಉದಾಹರಣೆಯೂ ಅವರೆ. ಆಧ್ಯಾತ್ಮಿಕ ಉನ್ನತಿಯ ನಿದರ್ಶನವೂ ಅವರೆ. ಹೀಗಾಗಿ ೫೩೮ ವರ್ಷಗಳ ನಂತರವೂ ಸಮಾಜಕ್ಕೆ ಪ್ರೇರಣೆಯಾಗಿ ಜನಮಾನಸದಲ್ಲಿ ಉಳಿದಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅಭಿಪ್ರಾಯ ವ್ಯಕ್ತಪಡಿಸಿದರು.

    ಜಿಲ್ಲಾಡಳಿತದ ವತಿಯಿಂದ ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ನಡೆದ ಭಕ್ತಶ್ರೇಷ್ಠ ಕನಕದಾಸರ ಜಯಂತ್ಯುತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿ ಧಾರ್ಮಿಕ ಪ್ರಜ್ಞೆಯನ್ನು ಜಾಗ್ರತೆಗೊಳಿಸಲು ಭಾರತದಲ್ಲಿ ಭಕ್ತಿ ಚಳುವಳಿ ಆಯಾ ಕಾಲ ಕಾಲಕ್ಕೆ ತನ್ನ ಪ್ರಭಾವವನ್ನು ಬೀರುತ್ತಾ ಬಂದಿದೆ. ಪರಕೀಯ ಆಕ್ರಮಣಕಾರರು, ಈ ದೇಶದ ಸಂಸ್ಕೃತಿಯನ್ನು ನಾಶ ಮಾಡಬೇಕೆಂದು ಬಂದವರನ್ನು ಜನಸಾಮಾನ್ಯರಲ್ಲಿದ್ದಂತಹ ಭಕ್ತಿ ಚಳುವಳಿಗಳು, ಭಕ್ತಿ, ಶ್ರದ್ಧೆ ಉದ್ದೇಶ ಸಾಧಿಸಲು ಹವಣಿಸಿದ ಅವರನ್ನು ಮಣಿಸಿತು. ಭೇದ ಅಳಿಸಿ, ವಿವಿಧತೆಯಲ್ಲಿ ಏಕತೆಯನ್ನು ಎತ್ತಿಹಿಡಿದವರು ಕನಕದಾಸರು. ಬಸವಣ್ಣನವರು, ಕನಕದಾಸರು, ಪುರಂದರದಾಸರು, ಸಂತ ಶಿಶುನಾಳ ಶರೀಫರು, ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಾವು ಗೌರವಿಸುತ್ತಿರುವುದು ಅವರ ಬದುಕಿನ ರೀತಿಯ ಕಾರಣಕ್ಕಾಗಿ ಎಂದರು.

    ಜಾತೀಯತೆ ಮತ್ತು ಅಸ್ಪಶ್ಯತೆಯ ಬಗ್ಗೆ ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದನೆಲೆಯನೇನಾದರೂ ಬಲ್ಲಿರಾ..ಬಲ್ಲಿರಾ..? ಎಂದು ಪ್ರಶ್ನಿಸಿ ಮಾನವ ಕುಲದ ಸಮಾನತೆಯನ್ನು ಎತ್ತಿ ಹಿಡಿದವರವರು ಕನಕದಾಸರು. ಭಗವಂತ ಕೂಡ ಕನಕದಾಸರ ಭಾವನೆಗೆ ಇಂಬು ಕೊಟ್ಟಂತೆ ಅವರಿರುವ ಕಡೆಗೇ ತಿರುಗಿ ದರ್ಶನ ನೀಡಿ ತಾನು ಭೇದ ಬಯಸುವವನಲ್ಲ ಎಂದು ಜಗತ್ತಿಗೆ ಸಂದೇಶವನ್ನು ನೀಡಿದ್ದಾನೆ ಎಂದು ಹೇಳಿದರು.

    ಶಾಸಕ ಹೆಚ್.ಡಿ.ತಮ್ಮಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೋಷಿತ ವರ್ಗಕ್ಕೆ ದೊಡ್ಡ ಧ್ವನಿಯಾಗಿದ್ದವರು ಕನಕದಾಸರು. ಅವರು ಮೂಢನಂಬಿಕೆಗಳ ವಿರುದ್ಧ ಬಹಳ ಸೌಮ್ಯವಾಗಿ ಪ್ರತಿಭಟಿಸುತ್ತಿದ್ದ ಅದ್ಭುತ ಸಾಹಿತಿ, ಹೃದಯ ಸ್ವರ್ಶಿ ಸಂಗೀತಗಾರ ಮಾತ್ರವಲ್ಲ ಸಾಮಾಜಿಕ ಹೋರಾಟಗಾರರಾಗಿದ್ದವರು. ದಾಸ ಶ್ರೇಷ್ಠರ ಸಾಲಿನಲ್ಲಿ ಕನಕದಾಸರಿಗೆ ವಿಶಿಷ್ಟವಾದ ಸ್ಥಾನವಿದೆ. ಕವಿಗಳಾಗಿ, ಕೀರ್ತನಕಾರರಾಗಿ, ಸಾಹಿತ್ಯ, ಸಂಗೀತ ಹಾಗೂ ಆಧ್ಯಾತ್ಮಿಕ ಸ್ತರಗಳಲ್ಲಿ ಅವರ ಸಾಧನೆ ಸ್ಮರಣೀಯ ಎಂದು ಹೇಳಿದರು.

    ಬುದ್ದ, ಬಸವಣ್ಣ, ಕನಕದಾಸರು, ಡಾ.ಅಂಬೇಡ್ಕರ್ ಈ ಎಲ್ಲ ಮಹಾಪುರುಷರ ಜಯಂತಿಯನ್ನು ವರ್ಷದಲ್ಲಿ ಒಮ್ಮೆ ಆಚರಿಸುತ್ತೇವೆ, ಅವರೆಲ್ಲ ಇಂತಹುದೇ ಧರ್ಮ ಬೇಕೆಂಬ ನಿರೀಕ್ಷೆಯಲ್ಲಿ ಹುಟ್ಟಲಿಲ್ಲ. ಇವರೆಲ್ಲ ಒಂದೊಂದು ಧರ್ಮದಲ್ಲಿ ಜನಿಸಿರಬಹುದು. ಆದರೆ ಈ ನಾಲ್ವರು ಮಹಾನುಭಾವರ ವಿಚಾರಧಾರೆ, ವರ್ಣಬೇಧ ನೀತಿ ವಿರುದ್ಧದ ನಿಲುವು ಶೋಷಿತ ವರ್ಗದವರನ್ನು ಸಮಾಜದ ಮುನ್ನೆಲೆಗೆ ತರುವುದಕ್ಕೆ ಪೂರಕವಾಗಿತ್ತು ಎಂದ ಅವರು ಇವರೆಲ್ಲರ ಹೋರಾಟದ ನಡುವೆಯೂ ಈ ದೇಶದಲ್ಲಿ ಜಾತಿ ವ್ಯವಸ್ಥೆ ಸಂಪೂರ್ಣವಾಗಿ ನಶಿಸಿಲ್ಲ ಎನ್ನುವುದು ವಿಷಾದದ ಸಂಗತಿ. ಈ ಮಹಾಪುರುಷರು ಒಂದು ಜಾತಿ ಅಥವಾ ಧರ್ಮಕ್ಕೆ ಸೀಮಿತರಾದವರಲ್ಲ. ಸಮ ಸಮಾಜದ ನಿರ್ಮಾಣಕ್ಕೆ ದುಡಿದವರನ್ನು ಒಂದು ಧರ್ಮಕ್ಕೆ ಸೀಮಿತಗೊಳಿಸಬಾರದು ಎಂದು ಹೇಳಿದರು.

    ಕೇಂದ್ರದ ರಾಜ್ಯ ಪರಿಸರ ಮೌಲ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್, ಉಪನ್ಯಾಸಕಿ ದೀಪಾ ಹಿರೇಗುತ್ತಿ ಕನಕದಾಸರ ಬಗ್ಗೆ ಉಪನ್ಯಾಸ ನೀಡಿದರು. ನಗರಸಭೆ ಅಧ್ಯಕ್ಷೆ ಶೀಲಾ ದಿನೇಶ್, ಉಪಾಧ್ಯಕ್ಷೆ ಲಲಿತಾಬಾಯಿ ರವಿನಾಯಕ್, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಸ್.ಶಾಂತೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯೆ ಎ.ವಿ.ಗಾಯತ್ರಿ ಶಾಂತೇಗೌಡ, ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ರಾಜು, ರಾಜ್ಯ ಕುರುಬರ ಸಂಘದ ನಿರ್ದೇಶಕರುಗಳಾದ ಪುಟ್ಟೇಗೌಡ ಹಾಗೂ ರೇಖಾ ಹುಲಿಯಪ್ಪಗೌಡ, ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಪಟ್ಟೇಗೌಡ, ಸಂಘದ ಪುಷ್ಪರಾಜ್, ಕನಕಶ್ರೀ ಮಹಿಳಾ ಸಮಾಜದ ಅಧ್ಯಕ್ಷೆ ಶಾರದಾ ಮಾಸ್ತೇಗೌಡ, ಮುಖಂಡರಾದ ಹೆಚ್.ಪಿ.ಮಂಜೇಗೌಡ, ಬೆಳವಾಡಿ ರವೀಂದ್ರ, ಈಶ್ವರಳ್ಳಿ ಮಹೇಶ್, ಚಂದ್ರೇಗೌಡ, ಕೆ.ವಿ.ಮಂಜುನಾಥ್, ಸುಜಾತ ಶಿವಕುಮಾರ್, ರಾಜೀವ್, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಮ್ ಅಮಟೆ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.

    ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿ.ರಮೇಶ್ ಸ್ವಾಗತಿಸಿದರು. ಕಾರ್ಯಕ್ರಮಕ್ಕೆ ಮುನ್ನ ನಗರದ ತಾಲ್ಲೂಕು ಕಚೇರಿ ಸಮೀಪ ಶ್ರೀ ಕನಕದಾಸರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಕುವೆಂಪು ಕಲಾಮಂದಿರದವರೆಗೆ ನಡೆದ ಮೆರವಣಿಗೆಯಲ್ಲಿ ಡೊಳ್ಳು ಕುಣಿತ, ಗೊಂಬೆ ಕುಣಿತ, ನಾದಸ್ವರ, ಕನಕದಾಸರ ವೇಷಭೂಷಣಧಾರಿ ಮಕ್ಕಳು ಗಮನ ಸೆಳೆದರು.

    Kanakadasa was the one who realized the relationship between the devotee and the Lord.

  • ವಂದೇ ಮಾತರಂ ಗೀತೆಯ ಪಯಣ ಅವಿಸ್ಮರಣೀಯ

    ವಂದೇ ಮಾತರಂ ಗೀತೆಯ ಪಯಣ ಅವಿಸ್ಮರಣೀಯ

    ಚಿಕ್ಕಮಗಳೂರು:  ಭಾರತೀಯರ ಜನಮಾನಸದಲ್ಲಿ ಅಚ್ಚಳಿಯದ ವಂದೇ ಮಾತರಂ ಗೀತೆಯ ಪಯಣ ಅವಿಸ್ಮರಣೀಯ. ಬಂಕಿಮ ಚಂದ್ರ ಚಟರ್ಜಿಯವರ ಸ್ಫೂರ್ತಿ, ರವೀಂದ್ರನಾಥ ಟಾಗೋ ರರ ಗಾಯನ ಮಹತ್ವದ್ದಾಗಿದೆ ಎಂದು ಜಿಲ್ಲಾ ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಹೇಳಿದರು.

    ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ‘ವಂದೇ ಮಾತರಂ’ ಗೀತೆ ೧೫೦ನೇ ವರ್ಷದ ಸಂಭ್ರ ಮಾಚರಣೆ ಅಂಗವಾಗಿ ಕಚೇರಿ ಮುಂಭಾಗದಲ್ಲಿ ಕಾರ್ಯಕರ್ತರು ರಾಷ್ಟ್ರ ದ್ವಜಾಹಿಡಿದು ವಂದೇ ಮಾತರಂ ಗೀತೆ ಗಾಯನ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ಪ್ರಸಕ್ತ ಸಾಲಿನಲ್ಲಿ ದೇಶವು ಹಲವಾರು ಇತಿಹಾಸಗಳ ಸಂಭ್ರಮ ಆಚರಿಸುತ್ತಿವೆ. ಆರ್‌ಎಸ್‌ಎಸ್ ಶತಬ್ದಿ, ವಂದೇ ಮಾತರಂ ಗೀತೆಗೆ ೧೫೦ ರ ಸಂವತ್ಸರ ಹಾಗೂ ಸರ್ದಾರ್ ವಲ್ಲಬಾಯ್ ಪಟೇಲ್ ಜಯಂತಿಗಳು ಪ್ರಸ್ತುತ ಕಾಲಮಾನದಲ್ಲಿ ನಾವೆಲ್ಲರೂ ಆಚರಿಸುತ್ತಿರುವುದು ಖುಷಿಯ ಸಂಗತಿ ಎಂದು ಹೇಳಿದರು.

    ಕೇಂದ್ರದಲ್ಲಿ ಭಾಜಪ ಅಧಿಕಾರಕ್ಕೆ ಬಂದು ಜನಸಾಮಾನ್ಯರ ಮೂಲಬೇಡಿಕೆಗಳನ್ನು ಈಡೇರಿಸಿ ಪ್ರಶಂಸೆ ಗೆ ಪಾತ್ರವಾಗಿದೆ. ಅಲ್ಲದೇ ಸಮಸ್ತ ಹಿಂದೂಬಾಂಧವರ ಬಹುದಿನಗಳ ಕನಸಾದ ಶ್ರೀರಾಮ ಮಂದಿರವನ್ನು ನಿರ್ಮಾಣಗೊಳಿಸಿದೆ. ಜೊತೆಗೆ ಸ್ವದೇಶಿ ಉತ್ಪನ್ನ, ಬಳಕೆ ಹಾಗೂ ಖರೀದಿಯಲ್ಲಿ ಪ್ರತಿಯೊಬ್ಬರು ತೊಡಗಿಸಿ ಕೊಂಡು ಆತ್ಮನಿರ್ಭಾರವೆಂಬ ಕರೆಗೆ ಬದ್ಧರಾಗಬೇಕು ಎಂದರು.

    ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವೀಂದ್ರ ಬೆಳವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತ ನಾಡಿ ವಂದೇ ಗೀತೆ ಆಲನೆಯಿಂದ ಒಂದು ಕ್ಷಣ ಶರೀರವು ದೇಶಭಕ್ತಿಯತ್ತ ಒಲುಮೆ ಹೊಂದಲಿದೆ. ಅಂತ ಶಕ್ತಿ ವಂದೇ ಮಾತರಂ ಗೀತೆಯ ಸಾರಾಂಶವು ಜನರನ್ನು ಸೆಳೆಯುತ್ತವೆ ಎಂದು ಹೇಳಿದರು

    ಇಡೀ ವಿಶ್ವದಲ್ಲಿ ವಂದೇ ಮಾತರಂ ಗೀತೆ ಎಲ್ಲರೂ ಒಗ್ಗೂಡಿಸುವ ಶಕ್ತಿಯಿದೆ. ಆದರೆ ಸ್ವಾತಂತ್ರ್ಯ ಪೂ ರ್ವದ ನಂತರ ಕಾಂಗ್ರೆಸ್ ಅಧಿಕಾರ ರಾಜ್ಯಗಳಲ್ಲಿ ವಂದೇ ಮಾತರಂ ಗೀತೆಯನ್ನು ನಿಷೇಧಕ್ಕೆ ಮುಂದಾಗಿ ದ್ದವು. ಈಚೆಯ ೨೦೧೭ರಲ್ಲಿ ಓವೈಸಿ ಕೂಡಾ ಆಂಧ್ರ ಪ್ರದೇಶದಲ್ಲಿ ಗೀತೆ ನಿಷೇಧಕ್ಕೆ ಪಣ ತೊಟ್ಟಿದ್ದು ಎಲ್ಲಾ ಏರುಪೇರುಗಳ ನಡುವೆ ಇಂದು ಬೃಹದಾಕಾರವಾಗಿ ಬೆಳೆದಿದೆ ಎಂದರು.

    ಕೇಂದ್ರದಲ್ಲಿ ನರೇಂದ್ರ ಮೋದಿ ಆಡಳಿತದಲ್ಲಿ ವಂದೇ ಮಾತರಂ ಗೀತೆಯನ್ನು ಹೆಚ್ಚಿನ ಒತ್ತು ನೀಡಿ ದೇ ಶದ ಎಲ್ಲಾ ಶಾಲಾ-ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಗೀತೆ ಕಡ್ಡಾಯಗೊಳಿಸಿ, ರಾಷ್ಟ್ರಪ್ರೇಮ ಸಂಕೇತವಾಗಿ ಜನಮಾನಸದಲ್ಲಿ ಉಳಿಯುವಂತೆ ಮಾಡಿತು ಎಂದು ತಿಳಿಸಿದರು.

    ಇದೇ ವೇಳೆ ಶಿಕ್ಷಕಿ ಅಕ್ಷತ ಹೆಗ್ಡೆ ಅವರಿಂದ ವಂದೇ ಮಾತರಂ ಗೀತಗಾಯನ ನಡೆಯಿತು. ಈ ಸಂದ ರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕನಕರಾಜ್‌ಅರಸ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜಸಂತ ಅನಿಲ್ ಕು ಮಾರ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಕುರುವಂಗ ವೆಂಕಟೇಶ್, ಎಸ್ಟಿ ಮೋರ್ಚಾ ಅಧ್ಯಕ್ಷ ನಂದೀಶ್ ಮದ ಕರಿ, ನಗರಸಭೆ ಸದಸ್ಯರಾದ ರೂಪ, ಸುಜಾತ, ಮುಖಂಡರುಗಳಾದ ಬಸವರಾಜ್, ಸಂತೋಷ್ ಕೋಟ್ಯಾ ನ್, ವೀಣಾಶೆಟ್ಟಿ, ಹೆಚ್.ಕೆ.ಕೇಶವಮೂರ್ತಿ, ಸಚಿನ್‌ಗೌಡ ಮತ್ತಿತರರು ಹಾಜರಿದ್ದರು.

    The journey of the Vande Mataram song is unforgettable.

  • ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿನೂತನ ಕಾರ್ಯಕ್ರಮ

    ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿನೂತನ ಕಾರ್ಯಕ್ರಮ

    ಚಿಕ್ಕಮಗಳೂರು: ವಿದ್ಯಾರ್ಥಿಗಳಲ್ಲಿ ಜ್ಞಾನ, ಕ್ರಿಯಾಶೀಲತೆ, ವ್ಯವಹಾರದ ಬಗ್ಗೆ ಅರಿವು ಮೂಡಿಸುವ ಗುರಿಯೊಂದಿಗೆ ಮಾರ್ಕೆಟ್ ಮೇಳ ಆಯೋಜನೆ ಮಾಡಿರುವುದು ಸಹಕಾರಿಯಾಗಲಿದೆ ಎಂದು ಪ್ರಾಂಶುಪಾಲ ಡಾ. ಮೂಡಲಗಿರಿಯಪ್ಪ ತಿಳಿಸಿದರು.

    ಅವರು ಇಂದು ಇಲ್ಲಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದ ಎಲ್ಲಾ ಪ್ರಾಧ್ಯಾಪಕರು ಒಟ್ಟಾಗಿ ಸೇರಿ ಆಯೋಜಿಸಲಾಗಿದ್ದ ಮಾರ್ಕೆಟ್ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಬದುಕು, ಚಟುವಟಿಕೆಗಳನ್ನು ಅರ್ಥಮಾಡಿಸಲು ಹಾಗೂ ವಿದ್ಯಾರ್ಥಿಗಳು ತಮ್ಮ ಭವಿಷ್ಯದಲ್ಲಿ ಸ್ವ-ಉದ್ಯೋಗ ಸ್ಥಾಪಿಸಿ ವ್ಯಾಪಾರ ವಹಿವಾಟು ನಡೆಸಲು ಪೂರಕವಾದ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಮಾರ್ಕೆಟ್ ಮೇಳ ಆಯೋಜಿಸಲಾಗಿದೆ ಎಂದರು.
    ವಿದ್ಯಾರ್ಥಿಗಳನ್ನು ವ್ಯಾವಹಾರಿಕ ಬದುಕಿನ ಬಗ್ಗೆ ಹುರಿದುಂಬಿಸಲು ಈ ಮಾರ್ಕೆಟ್ ಮೇಳ ಸಹಕಾರಿಯಾಗಿದ್ದು, ವಿದ್ಯಾರ್ಥಿಗಳು ಇದರ ಸದುಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

    ಉಪನ್ಯಾಸಕ ನಟೇಶ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಾಣಿಜ್ಯ ವ್ಯವಹಾರಗಳ ಕುರಿತು ಜ್ಞಾನ ಹೆಚ್ಚಿಸುವ ಉದ್ದೇಶದಿಂದ ಪ್ರತಿ ವರ್ಷ ರಿಟೇಲ್ ಗಲಾ ಎಂಬ ವಿನೂತನ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ ಎಂದರು. ಸುಮಾರು ವಿವಿಧ ರೀತಿಯ ವಸ್ತುಗಳನ್ನು ಮಾರಾಟ ಮಾಡುವ ಸಲುವಾಗಿ ೧೩ ಮಳಿಗೆಗಳನ್ನು ನಿರ್ಮಿಸಲಾಗಿದೆ. ಕಾಲೇಜಿನಲ್ಲಿ ಎಲ್ಲಾ ವಿದ್ಯಾರ್ಥಿಗಳು ಒಗ್ಗಟ್ಟಿನಿಂದ ಭಾಗವಹಿಸಿದ್ದು, ವಿಶೇಷವಾಗಿ ಈ ಮಾರ್ಕೆಟ್ ಮೇಳದಲ್ಲಿ ಮನೆಯಲ್ಲಿ ಬೆಳೆದ ಪದಾರ್ಥಗಳನ್ನು ಹೆಚ್ಚು ಬಳಕೆ ಮಾಡಲಾಗಿದೆ ಎಂದು ವಿವರಿಸಿದರು.

    ವಿದ್ಯಾರ್ಥಿಗಳಲ್ಲಿ ವ್ಯವಹಾರಿಕ ಜ್ಞಾನ ಹೆಚ್ಚಿಸುವ ಕಾರಣದಿಂದ ಈ ಮೇಳವನ್ನು ಆಯೋಜನೆ ಮಾಡಲಾಗಿದ್ದು, ಇದರ ಸದುಪಯೋಗ ಪಡೆದುಕೊಂಡು ಆರ್ಥಿಕವಾಗಿ ಸದೃಢರಾಗಬೇಕೆಂದು ತಿಳಿಸಿದರು.

    ವಿದ್ಯಾರ್ಥಿನಿ ಸ್ವಾತಿ ಮಾತನಾಡಿ, ನಮಗೆ ರಿಟೇಲ್ ಮ್ಯಾನೇಜ್‌ಮೆಂಟ್ ಎಂಬ ವಿಷಯವಿದ್ದು, ಅದಕ್ಕೆ ಪೂರಕವಾಗಿ ಇಂದು ಮಾರ್ಕೆಟ್ ಮೇಳದ ಮೂಲಕ ಆಚರಣೆ ಮಾಡುತ್ತಿದ್ದೇವೆ. ಇಲ್ಲಿ ಅಹಾರ ಪದಾರ್ಥ, ತರಕಾರಿ, ಮನೆಯಲ್ಲಿ ಕೈಯಿಂದ ತಯಾರಿಸಿದ ವಸ್ತುಗಳು ಮಾರಾಟಕ್ಕೆ ಮತ್ತು ಪ್ರದರ್ಶನಕ್ಕೆ ಇಡಲಾಗಿದೆ. ಇದರಿಂದ ಗ್ರಾಹಕರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

    ಈ ಸಂದರ್ಭದಲ್ಲಿ ದೀಕ್ಷಿತ್ ಕುಮಾರ್, ಪ್ರಾದ್ಯಾಪಕರಾದ ಲೋಕೇಗೌಡ, ಪೃಥ್ವಿ, ಹೇಮಮಾಲಿನಿ ಇತರರು ಉಪಸ್ಥಿತರಿದ್ದರು.

    Innovative program at Government Women’s First Grade College

  • ಕಬ್ಬಿನ ದರ ಹೆಚ್ಚಳಕ್ಕೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ

    ಕಬ್ಬಿನ ದರ ಹೆಚ್ಚಳಕ್ಕೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ

    ಚಿಕ್ಕಮಗಳೂರು: ಪ್ರತಿ ಟನ್‌ಗೆ ಕಬ್ಬಿಗೆ ₹3,500 ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿ ರೈತ ಸಂಘದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

    ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಕಬ್ಬಿನ ಹೊರೆ ಹೊತ್ತು ಬಂದಿದ್ದ ರೈತರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

    ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಘಟಕ ಅಧ್ಯಕ್ಷ ಡಿ.ಮಹೇಶ್, ‘ಕಬ್ಬಿಗೆ ನಿಗದಿತ ದರ ನೀಡುವಂತೆ ಬೆಳಗಾವಿಯಲ್ಲಿ ಚಳವಳಿ ನಡೆಸುತ್ತಿರುವ ರೈತರನ್ನು ಬೆಂಬಲಿಸಲು ಹೋರಾಟ ನಡೆಸಲಾಗುತ್ತಿದೆ’ ಎಂದರು.

    ಕಳೆದ ಒಂದು ವಾರದಿಂದ ಅಹೋರಾತ್ರಿ ಹೋರಾಟ ನಡೆಸುತ್ತಿರುವ ರೈತರಿಗೆ ಸರ್ಕಾರ ನ್ಯಾಯ ದೊರಕಿಸಿಕೊಡಬೇಕು. ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್‌ಗೆ ₹3,500 ನೀಡುತ್ತಿಲ್ಲ. ರಾಜ್ಯ ಸರ್ಕಾರ ರೈತರ ಸಮಸ್ಯೆ ಆಲಿಸುತ್ತಿಲ್ಲ. ಸರ್ಕಾರದ ನಡೆ ಗಮನಿಸಿದರೆ ಕಾರ್ಖಾನೆಗಳ ಒತ್ತಡಕ್ಕೆ ಮಣಿದಂತಿದೆ ಎಂದು ಹೇಳಿದರು.

    ನೆರೆಯ ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆಗಳಲ್ಲಿ ಪ್ರತಿ ಟನ್ ಕಬ್ಬಿಗೆ ₹3,500ರಿಂದ ₹3,600 ದರ ಸಿಗುತ್ತಿದೆ. ಆದರೆ, ಕರ್ನಾಟಕದ ಸಕ್ಕರೆ ಕಾರ್ಖಾನೆ ಮಾಲೀಕರು ಕೇವಲ ₹3,000 ದರದಲ್ಲಿ ಕಬ್ಬು ಖರೀದಿ ಮಾಡುತ್ತಿದ್ದಾರೆ. ಆ ಮೂಲಕ ರಾಜ್ಯದ ರೈತರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ದೂರಿದರು.

    ಭೂಸ್ವಾಧೀನ ಪರಿಹಾರ ಸಿಗದೆ ಮಂಡ್ಯ ಜಿಲ್ಲೆಯ ಮೂಡನಹಳ್ಳಿ ಗ್ರಾಮದ ರೈತ ಜಿಲ್ಲಾಧಿಕಾರಿ ಕಚೇರಿ ಎದುರು ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಇಂದಿಗೂ ಆ ರೈತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುತ್ತಿಲ್ಲ. ಹಾಗಾಗಿ, ರೈತರಿಗೆ ಭೂಸ್ವಾಧೀನ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

    ರೈತ ಸಂಘದ ಮುಖಂಡ ಗುರುಶಾಂತಪ್ಪ, ಪ್ರಧಾನ ಕಾರ್ಯದರ್ಶಿ ಎಂ.ಬಿ.ಚಂದ್ರಶೇಖರ್, ಗೌರವಾಧ್ಯಕ್ಷ ಎಂ.ಸಿ.ಬಸವರಾಜು, ಉಪಾಧ್ಯಕ್ಷ ಡಿ.ಕುಮಾರಸ್ವಾಮಿ, ಸಂಘಟನಾ ಕಾರ್ಯದರ್ಶಿ ದೇವರಾಜ್, ಖಜಾಂಚಿ ಕೆ.ಬಿ.ಲೋಕೇಶ್ ಭಾಗವಹಿಸಿದ್ದರು.

    Farmers’ association protests demanding increase in sugarcane prices

  • ಶ್ರೀ ರಂಭಾಪುರಿ ಪೀಠಕ್ಕೆ ಎನ್.ಚಲುವರಾಯಸ್ವಾಮಿ ಭೇಟಿ

    ಶ್ರೀ ರಂಭಾಪುರಿ ಪೀಠಕ್ಕೆ ಎನ್.ಚಲುವರಾಯಸ್ವಾಮಿ ಭೇಟಿ

    ಬಾಳೆಹೊನ್ನೂರು: ರಾಜ್ಯದ ಕೃಷಿ ಸಚಿವರಾದ ಎನ್. ಚೆಲುವರಾಯಸ್ವಾಮಿಯವರು ಗುರುವಾರ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠಕ್ಕೆ ಭೇಟಿ ನೀಡಿದರು.

    ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಹಾಗೂ ಯುಗಪುರು? ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ಪೂಜೆ ಸಲ್ಲಿಸಿದ ನಂತರ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡರು ಸೇರಿದಂತೆ ರಾಜಕೀಯ ಧುರೀಣರು ಇದ್ದರು.

    N. Chaluvarayaswamy visit to Sri Rambhapuri Peetha