Category: ಚಿಕ್ಕಮಗಳೂರು

  • ಕಾರ್ಮಿಕರ ಆರೋಗ್ಯ ಜೀವನಕ್ಕಾಗಿ ಸಂಚಾರಿ ವಾಹನ

    ಕಾರ್ಮಿಕರ ಆರೋಗ್ಯ ಜೀವನಕ್ಕಾಗಿ ಸಂಚಾರಿ ವಾಹನ

    ಚಿಕ್ಕಮಗಳೂರು: – ಕಾರ್ಮಿಕರಿಗೆ ಎಲ್ಲಾ ರೀತಿಯ ಚಿಕಿತ್ಸೆಗೆ ಒಳಗಾಗಿಸುವ ನಿಟ್ಟಿನಲ್ಲಿ ರಾ ಜ್ಯಸರ್ಕಾರ ಆಧುನಿಕ ತಂತ್ರಜ್ಞಾನ ಹಾಗೂ ಪರಿಣಿತ ವೈದ್ಯರ ತಂಡದೊಂದಿಗೆ ಸಂಚಾರಿ ಆರೋಗ್ಯ ವಾಹನ ವನ್ನು ಶ್ರಮಿಕರಿಗಾಗಿ ಪೂರೈಸಲಾಗಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

    ನಗರದ ಕಾರ್ಮಿಕ ಕಚೇರಿಯಲ್ಲಿ ಮಂಗಳವಾರ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೂತನ ಎರಡು ಸಂಚಾರಿ ಆರೋಗ್ಯ ಘಟಕದ ವಾಹನಕ್ಕೆ ಚಾಲನೆ ನೀಡಿ ಅವರು ಮಾತನಾಡಿ ಕಟ್ಟಡ ಕಾರ್ಮಿಕರಿಗೆ ತುರ್ತು ಆರೋಗ್ಯ ಪರಿಸ್ಥಿತಿ ಕಂಡುಬಂದ ಸಂದರ್ಭಗಳಲ್ಲಿ ಸಮೀಪದ ಆಸ್ಪತ್ರೆತೆ ಅಂಬ್ಯೂಲೆನ್ಸ್ ಮಾದರಿಯಲ್ಲಿ ಸೇವೆಯನ್ನು ಒದಗಿಸಿ, ತದನಂತರ ಮಂಡಳಿಯೊಂದಿಗೆ ಸಮನ್ವಯ ಸಾಧಿಸಿ ಕಾರ್ಮಿಕರಿಗೆ ಅಗತ್ಯ ಚಿಕಿತ್ಸೆ ಒದಗಿಸುವ ಜೊತೆಗೆ ಪ್ರತಿ ವಾಹನದಲ್ಲೂ ಎಂಬಿಬಿಎಸ್ ನುರಿತ ವೈದ್ಯರ ತಂಡ ಕಾರ್ಯನಿರ್ವಹಿಸಲಿದೆ ಎಂದರು.

    ಸಂಚಾರಿ ವಾಹನವು ಜಿಲ್ಲೆಯಾದ್ಯಂತ ಸಂಚರಿಸಿ ರಕ್ತದೊತ್ತಡ, ರಕ್ತಹೀನತೆ, ಅಪೌಷ್ಠಿಕತೆ, ತುರ್ತು ಔಷಧ, ಮೂರ್ಛೆರೋಗ, ಮಧುಮೇಹ, ಬಿಪಿ, ತಾಯಿಯ ಆರೋಗ್ಯ, ನವ ಜನನ ಮತ್ತು ಶಿಶು ಆರೋಗ್ಯ, ದೀರ್ಘಕಾಲದ ಸಂವಹನ ರೋಗಗಳ ನಿರ್ವಹಣೆ, ಕ್ಷಯರೋಗ, ಹೆಚ್‌ಐವಿ, ಕುಷ್ಠ, ಮಲೇರಿಯಾ ಸೇರಿ ದಂತೆ ಇಪ್ಪತ್ತಕ್ಕೂ ಹೆಚ್ಚು ಚಿಕಿತ್ಸೆಯನ್ನು ಉಚಿತವಾಗಿ ನೀಡಲಿದೆ ಎಂದು ಹೇಳಿದರು.

    ಪ್ರಸ್ತುತ ಜಿಲ್ಲೆಯಲ್ಲಿ ೧.೪೦ ಲಕ್ಷ ಕಾರ್ಮಿಕರು ಇಲಾಖೆಯಲ್ಲಿ ನೋಂದಾಯಿಸಿಕೊಂಡಿದ್ದು ಮದುವೆ, ವೈದ್ಯಕೀಯ ವೆಚ್ಚ, ಹೆರಿಗೆ ಸೌಲಭ್ಯವನ್ನು ನೀಡುತ್ತಿದೆ. ಪ್ರಸಕ್ತ ಸಾಲಿನ ಅಪಘಾತದಲ್ಲಿ ಮೃತರಾದ ಕಾರ್ಮಿಕರ ಕುಟುಂಬಕ್ಕೆ ರಾಜ್ಯಸರ್ಕಾರ ೫.೧೩ ಕೋಟಿ ಹಣವನ್ನು ನೇರ ಖಾತೆಗೆ ಜಮಾಯಿಸಿ ನೊಂದವರಿಗೆ ಆಸರೆ ಯಾಗಿದೆ ಎಂದರು.

    ಈಗಾಗಲೇ ರಾಜ್ಯದಲ್ಲಿ ೪೬ ಕೋಟಿ ರೂ. ವೆಚ್ಚದಲ್ಲಿ ಒಟ್ಟು ೧೦೦ ವಾಹನಗಳನ್ನು ರಾಜ್ಯಾದ್ಯಂತ ಸಂಚರಿ ಸುತ್ತಿದ್ದು ಎಲ್ಲಾ ಕಾರ್ಮಿಕರು ಮತ್ತು ಅವಲಂಬಿತರಿಗೆ ಅಗತ್ಯ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಯನ್ನು ಕಾರ್ಮಿಕರಿರುವ ಸ್ಥಳಕ್ಕೆ ತೆರಳಿ ನೀಡುತ್ತಿದೆ. ಅದರಂತೆ ಜಿಲ್ಲಾ ಕೇಂದ್ರಕ್ಕೂ ಎರಡು ವಾಹನಗಳನ್ನು ನೀಡಿ ಕಾ ರ್ಮಿಕರಿಗೆ ಸ್ಪಂದಿಸಿದೆ ಎಂದರು.

    ಕಾರ್ಮಿಕರ ಬದುಕಿನ ಶ್ರೇಯೋಭಿವೃದ್ದಿಗಾಗಿ ಕಟ್ಟಡ ನಿರ್ಮಿಸುವ ಮಾಲೀಕರಿಂದ ಶೇ.೧ರ ಸುಂಕವನ್ನು ಕಾರ್ಮಿಕ ಇಲಾಖೆಗೆ ಕಡ್ಡಾಯಗೊಳಿಸಿದ್ದು ಇದರಿಂದ ಬಡಕಾರ್ಮಿಕ ವರ್ಗಕ್ಕೆ ಸಕಲಸವಲತ್ತನ್ನು ಪೂರೈಸಿ ತುರ್ತು ವೇಳೆಯಲ್ಲಿ ಸಹಕರಿಸುತ್ತಿದೆ. ಜೊತೆಗೆ ವಾಹನದಲ್ಲಿ ಕಾರ್ಯನಿರ್ವಹಿಸುವ ವೈದ್ಯರು, ಶುಶ್ರೂಷಕರು ಸೇವಾಮನೋಭಾವನದಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಕಿವಿಮಾತು ಹೇಳಿದರು.

    ಕಾರ್ಮಿಕ ಅಧಿಕಾರಿ ಸುರೇಶ್ ಮಾತನಾಡಿ ಹೈಟೆಕ್ ಸಂಚಾರಿ ಆರೋಗ್ಯ ಕ್ಲಿನಿಕ್ ವಾಹನವು ಕಾರ್ಮಿ ಕರು ತುರ್ತು ಸಂದರ್ಭದಲ್ಲಿ ಸ್ಪಂದಿಸಲು ರಾಜ್ಯಸರ್ಕಾರ ಎರಡು ವಾಹಗಳನ್ನು ಒದಗಿಸಿಕೊಟ್ಟಿದ್ದು ೨೦ಕ್ಕೂ ಹೆಚ್ಚು ವಿವಿಧ ಸೌಲಭ್ಯಗಳು ಈ ವಾಹನದಿಂದ ಅಡಕವಾಗಿದೆ ಎಂದು ತಿಳಿಸಿದರು.

    ಇದೇ ವೇಳೆ ೨೦ ಬಡಗಾರೆ ಕೆಲಸಗಾರರಿಗೆ ಟೂಲ್‌ಕಿಟ್ ಹಾಗೂ ಅಪಘಾತದಲ್ಲಿ ಮೃತಪಟ್ಟ ವಾಣಿಜ್ಯ ಚಾಲಕರ ಈರ್ವರ ಕುಟುಂಬಕ್ಕೆ ತಲಾ ೫ ಲಕ್ಷ ರೂ.ಗಳ ಆದೇಶ ಪ್ರತಿಯನ್ನು ವಿತರಿಸಲಾಯಿತು.

    ಈ ಸಂದರ್ಭದಲ್ಲಿ ಸಹಾಯಕ ಕಾರ್ಮಿಕ ಆಯುಕ್ತ ಎಂ.ಸುಭಾಶ್, ಕಾರ್ಮಿಕ ನಿರೀಕ್ಷಕರಾದ ಪ್ರಭಾಕರ್, ಪ್ರವೀಣ್‌ಕುಮಾರ್, ತರೀಕೆರೆ ಕಾರ್ಮಿಕ ನಿರೀಕ್ಷಕ ಮಹಾದೇವಪ್ಪ, ಕಾರ್ಮಿಕ ಕಲ್ಯಾಣ ಮಂಡಳಿ ಅಭಿ ಯಂತರ ಹ್ಯಾರಿಸ್, ಇಲಾಖೆ ಸಿಬ್ಬಂದಿಗಳು, ಫಲಾನುಭವಿಗಳು ಉಪಸ್ಥಿತರಿದ್ದರು.

    Transport for the health and well-being of workers

  • ಜನಬಳಕೆಯ ಪದದಲ್ಲೇ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಕಾವ್ಯಸೃಷ್ಟಿ

    ಜನಬಳಕೆಯ ಪದದಲ್ಲೇ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಕಾವ್ಯಸೃಷ್ಟಿ

    ಚಿಕ್ಕಮಗಳೂರು: ಜನಬಳಕೆಯ ಪದಗಳನ್ನು ತಿಣುಕದೆ ಸುಲಲಿತವಾಗಿ ಬಳಸಿ ಸಾಹಿತ್ಯ ಸೃಷ್ಟಿಸುತ್ತಿದ್ದರಲ್ಲ, ಅದುವೇ ಎಚ್ಚೆಸ್ವಿಯವರ ಕಾವ್ಯ ರಚನೆಯ ದೊಡ್ಡ ಶಕ್ತಿ. ಅದುವೇ ನಾವೆಂದಿಗೂ ಅವರನ್ನು ನೆನಪಿನಂಗಳದಲ್ಲಿ ಸ್ಮರಣೆ ಮಾಡಿಕೊಳ್ಳಲು ಕಾರಣ ಎಂದು ಸಾಹಿತಿ ಡಾ.ಎಚ್.ಎಸ್.ಸತ್ಯನಾರಾಯಣ ಅಭಿಪ್ರಾಯ ವ್ಯಕ್ತಪಡಿಸಿದರು.

    ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾ, ಪೂರ್ವಿ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್, ಸಾಂಸ್ಕೃತಿಕ ಸಂಘ ಹಾಗೂ ಸುಗಮ ಸಂಗೀತ ಗಂಗಾ ಸಹಯೋಗದಲ್ಲಿ ಭಾನುವಾರ ಸಂಜೆ ನಗರದ ಬ್ರಹ್ಮಸಮುದ್ರ ಶ್ರೀ ರಂಗಣ್ಣನವರ ಛತ್ರದಲ್ಲಿ ಆಯೋಜಿಸಿದ್ದ `ನೆನಪಿನಂಗಳದಲ್ಲಿ ಎಚ್ಚೆಸ್ವಿ’ ಡಾ.ಎಚ್.ಎಸ್.ವೆಂಕಟೇಶಮೂರ್ತಿಯ ಕಾವ್ಯ ಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

    ಗೋಪಿಕಾ ಸ್ತ್ರೀಯರಂತೆ ಕೃಷ್ಣನನ್ನು ಪ್ರೀತಿಸಿದವರಿಗೆ ಮಾತ್ರ ಕೃಷ್ಣನ ಮೇಲೆ ಅಷ್ಟೊಂದು ಭಾವ ತೀವ್ರತೆಯಿಂದ ಕಾವ್ಯ ಸೃಷ್ಟಿಸಲು ಸಾಧ್ಯ, ಎಚ್ಚೆಸ್ವಿಯವರ `ಡಿವೈನ್ ಲವ್’ ಆ ರೀತಿಯದು ಎಂದ ಅವರು, ಎಚ್ಚೆಸ್ವಿಯವರ ರಚನೆ `ತೂಗು ಮಂಚದಲ್ಲಿ ಕೂತು.. ಮೇಘ ಶ್ಯಾಮ ರಾಧೆಗಾತು.. ಆಡುತಿರುವನು ಏನೋ ಮಾತು.. ರಾಧೆ ನಾಚುತ್ತಿದ್ದಳು.. ಸೆರಗ ಬೆರಳಿನಲ್ಲಿ ಸುತ್ತಿ, ಜಡೆಯ ತುದಿಯ ಕೆನ್ನೆಗೊತ್ತಿ, ಜುಮ್ಮ ಕೊಡುವ ಮುಖವನೆತ್ತಿ ಕಣ್ಣು ಮುಚ್ಚುತ್ತಿದ್ದಳು’ ಅವಳು ನಾಚುತ್ತಿದ್ದಳೆಂದರೆ ಮಿಲನದ, ಶೃಂಗಾರದ ಮಾತನ್ನೇ ಕೃಷ್ಣ ಆಡುತ್ತಿದ್ದ ಎಂದೆನಿಸುತ್ತದೆ. `ಮುಖವ ಎದೆಯ ನಡುವೆ ಒತ್ತಿ, ತೋಳಿನಿಂದ ಕೊರಳ ಸುತ್ತಿ, ತುಟಿಯ ತೀಡಿ ಬೆಂಕಿಗೊತ್ತಿ ಹಮ್ಮನುಸಿರಬಿಟ್ಟಳು.. ಅದು ದೈವಿಕ ಪ್ರೇಮ ಎನ್ನುವ ಅರಿವಿರುವ ಕವಿ ಎಚ್ಚೆಸ್ವಿ ತಮ್ಮ ಕಾವ್ಯವನ್ನು ಅಶ್ಲೀಲಗೊಳಿಸದೆ ಸೊಗಸಾಗಿ ಚಿತ್ರಿಸಿದ್ದಾರೆ ಎಂದು ಬಣ್ಣಿಸಿದರು.

    `ಮಧುರೆಗೆ ಹೋದನು ಮಾಧವ.. ಬರುವನೊ.. ಬಾರನೊ ಹೋದವ..’ ಆ ಎರಡು ಸಾಲುಗಳಲ್ಲಿರುವ ಸುದೀರ್ಘ ವಿರಹದ ತೀವ್ರತೆ ಇದೆಯಲ್ಲ, ಆ ಹಾಡು ನಮಗೆ ಪ್ರಿಯವಾಗುವುದಕ್ಕೆ ಅದೇ ಕಾರಣ ಎಂದು ವಿಶ್ಲೇಷಿಸಿದರು. ರಾಘವೇಂದ್ರ ಬೀಜಾಡಿ ಸ್ವರ ಸಂಯೋಜನೆ ಮಾಡಿ ಹಾಡಿದ `ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ’ ಗೀತೆ ೪೯ ಲಕ್ಷ ಜನರನ್ನು ತಲುಪಿದ್ದು, ನಮ್ಮ ಕಾಲಕ್ಕೆ ಅದು ಅತ್ಯಂತ ದೊಡ್ಡ ದಾಖಲೆ. `ಲೋಕದ ಕಣ್ಣಿಗೆ ರಾಧೆಯು ಕೂಡ.. ಎಲ್ಲರಂತೆ ಹೆಣ್ಣು’, `ಅಮ್ಮ ನಾನು ದೇವರಾಣೆ.. ಬೆಣ್ಣೆ ಕದ್ದಿಲ್ಲಮ್ಮ’, `ಇಷ್ಟು ಕಾಲ ಒಟ್ಟಿಗಿದ್ದು..’ ಇತ್ಯಾದಿ ಗೀತೆಯ ಮೂಲಕ ಸಾಗರದಾಚೆಯ ಜನರಿಗೂ ಎಚ್ಚೆಸ್ವಿ ತಲುಪಿದ್ದಾರೆ ಎಂದರು.

    ಎಚ್ಚೆಸ್ವಿ ಸುಮಾರು ೨೨ ಕವಿತಾ ಸಂಕಲನಗಳು, ನಾಲ್ಕು ವಿಮರ್ಶಾ ಕೃತಿಗಳು, ರಂಗಭೂಮಿಯನ್ನು ಆಳಿ ಪ್ರಸಿದ್ಧಿಯಾದ ೧೧ ನಾಟಕಗಳು, ಮಕ್ಕಳಿಗಾಗಿ ೨೭ ಕೃತಿಗಳು, ಗೀತ ನಾಟಕಗಳು, ಎರಡು ಖಂಡ ಕಾವ್ಯಗಳು ಸೇರಿದಂತೆ ಒಟ್ಟು ೧೨೭ ಕೃತಿಗಳನ್ನು ರಚಿಸಿದ್ದಾರೆ. ಎರಡು ವರ್ಷಗಳಲ್ಲಿ ಐದು ಮುದ್ರಣ ಕಂಡಿರುವ ಅವರ `ಬುದ್ಧಚರಣ’ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಬರಬೇಕೆನ್ನುವ ನಿರೀಕ್ಷೆ ಇತ್ತು. ಆದರೆ ಅನುವಾದ ಸಾಹಿತ್ಯ ಮತ್ತು ಮಕ್ಕಳ ಸಾಹಿತ್ಯಕ್ಕಾಗಿ ಅವರಿಗೆ ಎರಡು ಬಾರಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿತ್ತು ಎಂದು ಹೇಳಿದರು.

    ಮಕ್ಕಳಿಗಾಗಿ ಕಾದಂಬರಿ ಬರೆದವರಲ್ಲಿ ಎಚ್ಚೆಸ್ವಿ ಮೊದಲಿಗರು. ಅವರಿಗಾಗಿ ಅನೇಕ ನಾಟಕಗಳು ಹಾಗೂ ಕಥೆಗಳನ್ನು ಬರೆದಿದ್ದಾರೆ. ಮಕ್ಕಳನ್ನು ಸಾಹಿತ್ಯ ಓದುವುದಕ್ಕೆ ಹಚ್ಚಬೇಕೆಂದರೆ ಚಿಕ್ಕ ಪುಸ್ತಕ ನೀಡಿ ಅವರ ಭಾವಕೋಶ ಜಾಗೃತಗೊಳಿಸಿ ಸಾಹಿತ್ಯದ ಸಂಸ್ಕಾರ ನೀಡಬೇಕು. ಅದಕ್ಕಾಗಿಯೇ ಪಂಜೆ ಮಂಗೇಶರಾಯರು, ಕುವೆಂಪು, ಕಾರಂತ, ಮಾಸ್ತಿ, ಬೇಂದ್ರೆ, ರಾಜರತ್ನಂ, ಶಿಶು ಸಂಗಮೇಶ ಇವರೆಲ್ಲ ಮಕ್ಕಳಿಗಾಗಿ ಮೊದಲು ಬರೆದರು ಎಂದು ಎಚ್ಚೆಸ್ವಿ ಹೇಳಿದ್ದರು ಎಂದರು.

    ಸಂಗೀತ ಶಿಕ್ಷಕಿ ಬೀರೂರಿನ ಜ್ಯೋತಿ ಅನಂತು ಉದ್ಘಾಟಿಸಿದ ಈ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ, ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಪಿ.ಮಂಜುನಾಥ ಜೋಷಿ, ಆದಿಚುಂಚನಗಿರಿ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಸಿ.ಕೆ.ಸುಬ್ಬರಾಯ, ಹಿರಿಯ ಪತ್ರಕರ್ತ ಸ.ಗಿರಿಜಾಶಂಕರ, ಸಾಹಿತಿ ಬೆಳವಾಡಿ ಮಂಜುನಾಥ, ಸಾಂಸ್ಕೃತಿಕ ಸಂಘದ ಅಧ್ಯಕ್ಷ ಆನಂದ್ ಕುಮಾರ್ ಶೆಟ್ಟಿ ಮತ್ತಿತರರು ಇದ್ದರು. ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಉಜ್ವಲ್ ಪಡುಬಿದ್ರಿ ಸ್ವಾಗತಿಸಿದರು. ಬಿಎಂಎಸ್ ಜಂಟಿ ಕಾರ್ಯದರ್ಶಿ ಎ.ಎನ್.ಗೋಪಾಲಕೃಷ್ಣ ವಂದಿಸಿದರು. ಬಿಎಂಎಸ್ ನಿರ್ದೇಶಕಿ ಸುಮಾ ಪ್ರಸಾದ್ ನಿರೂಪಿಸಿದರು.

    ಎಂ.ಎಸ್.ಸುಧೀರ್ ನೇತೃತ್ವದಲ್ಲಿ ಪೂರ್ವಿ ತಂಡದ ಗಾಯಕರಾದ ಚೇತನ್‌ರಾಮ್, ವಿಷ್ಣು ಭಾರದ್ವಾಜ್, ರೂಪ ಅಶ್ವಿನ್, ಅನುಷ, ರುಕ್ಸಾನಾ ಕಾಚೂರು, ರಾಯನಾಯಕ್, ಜ್ಯೋತಿ ವಿನೀತ್‌ಕುಮಾರ್, ಪೃಥ್ವಿಶ್ರೀ, ಸ್ವೇಚಿತ್, ಚಿನ್ಮಯಿ ಕೆ.ಎಸ್., ಮಾನ್ಯತ ಭಾಗಮನೆ, ಮಾನ್ಯ ಭಟ್ ಎಚ್ಚೆಸ್ವಿ ರಚನೆಯ ಗೀತೆಗಳಿಗೆ ಧ್ವನಿಯಾಗಿ ಸಂಗೀತ ಪ್ರಿಯರನ್ನು ರಂಜಿಸಿದರು. ಪಕ್ಕವಾದ್ಯದಲ್ಲಿ ಗಣೇಶ್ ಭಟ್(ಕೀಬೋರ್ಡ್), ಅರುಣ್‌ಕುಮಾರ್ (ರಿದಮ್ ಪ್ಯಾಡ್), ವೇಣುಗೋಪಾಲ್ (ತಬಲ), ಪ್ರದೀಪ್ ಕಿಗ್ಗಾಲ್ (ಗಿಟಾರ್) ಸಾಥ್ ನೀಡಿದರು.

    Dr. H.S. Venkateshamurthy’s poetry creation in popular terms

  • ಜೂ.18 ರಂದು ನಗರದಲ್ಲಿ ಸಿಪಿಐ ತಾಲೂಕು ಸಮ್ಮೇಳನ

    ಜೂ.18 ರಂದು ನಗರದಲ್ಲಿ ಸಿಪಿಐ ತಾಲೂಕು ಸಮ್ಮೇಳನ

    ಚಿಕ್ಕಮಗಳೂರು: ಭಾರತ ಕಮ್ಯುನಿಷ್ಟ ಪಕ್ಷ ಸ್ಥಾಪನೆಯಾಗಿ ಇಲ್ಲಿಗೆ ೧೦೦ ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ, ರಾಜ್ಯ, ಜಿಲ್ಲಾ ಸಮ್ಮೇಳನಗಳು ನಡೆಯುತ್ತಿದ್ದು, ಅದಕ್ಕೆ ಪೂರಕವಾಗಿ ಜೂ.೧೮ ರಂದು ನಗರದಲ್ಲಿ ಸಿಪಿಐ ತಾಲೂಕು ಸಮ್ಮೇಳನ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ತಾಲೂಕು ಕಾರ್ಯದರ್ಶಿ ಕೆರೆಮಕ್ಕಿ ರಮೇಶ್ ತಿಳಿಸಿದರು.

    ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಸಿಪಿಐ ಕಚೇರಿಯ ಬಿ.ಕೆ.ಸುಂದರೇಶ್ ಸಭಾಂಗಣದಲ್ಲಿ ಅಂದು ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಪ್ರಸ್ತುತ ದೇಶ, ರಾಜ್ಯದ ರಾಜಕೀಯ ಪರಿಸ್ಥಿತಿ ಕುರಿತು ವಿಶ್ಲೇಷಣೆ ನಡೆಯಲಿದೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಜನಸಾಮಾನ್ಯರ ಮೂಲಭೂತ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿವೆ. ದಿನೇ ದಿನೆ ನಿರುದ್ಯೋಗ ಸಮಸ್ಯೆ, ಬಡತನ ವೃದ್ಧಿಯಾಗುತ್ತಿದೆ ಎಂದು ದೂರಿದರು.

    ಅಗತ್ಯ ವಸ್ತುಗಳು ಹಾಗೂ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಬಡವರು ಮತ್ತು ಶ್ರೀಮಂತರ ಮಧ್ಯೆ ಅಂತರ ತೀವ್ರಗೊಳ್ಳುತ್ತಿದೆ. ಕೂಲಿ ಕಾರ್ಮಿಕರು ಸಂಕಷ್ಟದ ಬದುಕನ್ನು ಕಳೆಯುತ್ತಿದ್ದಾರೆ. ಗುಣಮಟ್ಟದ ಶಿಕ್ಷಣ, ಆರೋಗ್ಯ ಕೈಗೆಟುಕದಂತಾಗಿದೆ. ಬಡವರಿಗೆ ವಾಸಿಸಲು ಮನೆ, ನಿವೇಶನ ಇಲ್ಲ ಈ ಎಲ್ಲ ಸಮಸ್ಯೆಗಳ ಬಗ್ಗೆ ಸಮಾವೇಶದಲ್ಲಿ ಸುದೀರ್ಘ ಚರ್ಚೆ ನಡೆಯಲಿದೆ ಎಂದರು.

    ಸರಕಾರದ ಈ ಜನವಿರೋಧಿ ಧೋರಣೆಗಳ ವಿರುದ್ಧ ಹೋರಾಟ ರೂಪಿಸಲು ಸಿಪಿಐ ಸಮಾವೇಶದಲ್ಲಿ ನಿರ್ಣಯ ಕೈಗೊಳ್ಳಲಾಗುವುದು. ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕಾಪಾಡುವಂತಹ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದರು.

    ಪತ್ರಿಕಾಗೋಷ್ಠಿಯಲ್ಲಿ ಸಿಪಿಐ ಸಹಕಾರ್ಯದರ್ಶಿ ಹೆಡದಾಳ್‌ಕುಮಾರ್, ನಗರ ಕಾರ್ಯದರ್ಶಿ ರಮೇಶ್, ಜಿಲ್ಲಾ ಮಂಡಳಿ ಸದಸ್ಯ ವಸಂತಕುಮಾರ್ ಉಪಸ್ಥಿತರಿದ್ದರು.

    CPI Taluk Conference in the city on June 18

  • ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ

    ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ

    ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಮಲೆನಾಡು ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿದೆ. 

    ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ, ಕುದುರೆಮುಖ, ಕಳಸ, ಕೊಪ್ಪ, ಶೃಂಗೇರಿ, ಬಾಳೆಹೊನ್ನೂರು, ಕೊಟ್ಟಿಗೆಹಾರ, ಆಲ್ದೂರು, ಎನ್.ಆರ್.ಪುರ, ಆಲ್ದೂರು ಸೇರಿ ಹಲವೆಡೆ ಮಳೆ ಸುರಿಯುತ್ತಿದೆ. ಚಿಕ್ಕಮಗಳೂರು ನಗರದಲ್ಲೂ ಭಾನುವಾರ ಬೆಳಿಗ್ಗೆಯಿಂದ ಜಿಟಿಜಿಟಿ ಮಳೆ ಸುರಿಯಿತು.

    ಶೃಂಗೇರಿಯ ಸಮೀಪದ ಸುಂಕದ ಮಕ್ಕಿ– ನೆಮ್ಮಾರ್ ಸಮೀಪ ವಿಪರೀತ ಮಳೆಗೆ ಹೆದ್ದಾರಿ ಮೇಲೆ ಗುಡ್ಡದ ಮಣ್ಣು ಬಿದ್ದಿದೆ. ಇದರಿಂದ ಎಸ್.ಕೆ. ಬಾರ್ಡರ್ ಮತ್ತು ಕಾರ್ಕಳಕ್ಕೆ ಸಂಪರ್ಕ ಕಡಿತಗೊಂಡಿತ್ತು. 

    ಮಳೆಯ ನಡುವೆ ಮುಳ್ಳಯ್ಯನಗಿರಿ ಭಾಗದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿತ್ತು. ಮಳೆಯ ನಡುವೆ ವಾಹನ ದಟ್ಟಣೆಯಲ್ಲಿ ಸಿಲುಕಿ ಪ್ರವಾಸಿಗರು ಪರದಾಡಿದರು.

    ಬಿರುಸುಗೊಂಡ ಮಳೆ: ಮೂಡಿಗೆರೆ ತಾಲ್ಲೂಕಿನಾದ್ಯಂತ ಭಾನುವಾರ ಬೆಳಿಗ್ಗೆಯಿಂದ ಸಂಜೆಯವರೆಗೂ ಎಡೆಬಿಡದೇ ಮಳೆ ಸುರಿದು ಜನಜೀವನ ಅಸ್ತವ್ಯಸ್ತಗೊಳಿಸಿತು.

    ತೀವ್ರ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಸ್ಥಗಿತವಾಗಿದ್ದು, ಕಾರ್ಮಿಕರಿಗೆ ರಜೆ ಘೋಷಿಸಲಾಗಿತ್ತು. ಕಳೆದ 24 ಗಂಟೆಗಳಲ್ಲಿ ಕೊಟ್ಟಿಗೆಹಾರದಲ್ಲಿ 147.2 ಮಿ.ಮೀ, ಜನ್ನಾಪುರ 40 ಮಿ.ಮೀ, ಜಾಣಿಗೆ 73 ಮಿ.ಮೀ, ಪಟ್ಟಣದಲ್ಲಿ 35 ಮಿ.ಮೀ, ಮಗ್ಗಲಮಕ್ಕಿ 48 ಮಿ.ಮೀ ನಷ್ಟು ಮಳೆಯಾಗಿದೆ.

    ನಿರಂತರ ಮಳೆ: ಆಲ್ದೂರು ಹೋಬಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿರಂತರವಾಗಿ ಮಳೆ ಸುರಿಯಿತು. ಸಂಜೆ ವೇಳೆ ಕೊಂಚ ಬಿಡುವು ಪಡೆದುಕೊಂಡಿತು.

    ಯಲಗುಡಿಗೆ, ಹೊಸಳ್ಳಿ, ತುಡುಕೂರು, ಬನ್ನೂರು, ಚಿಕ್ಕಮಾಗರವಳ್ಳಿ, ದೊಡ್ಡ ಮಾಗರವಳ್ಳಿ ಹಳಿಯೂರು, ತೋರಣ ಮಾವು, ಗುಲ್ಲನ್ ಪೇಟೆ, ಸತ್ತಿಹಳ್ಳಿ, ಹಾಂದಿ, ಹಂಗರವಳ್ಳಿ, ಬೈಗೂರು, ಆವತಿ, ಕೆರೆಮಕ್ಕಿ, ಮಾಗೋಡು, ಅರೇನೂರು, ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ.

    ಬಿರುಸಿನ ವರ್ಷಧಾರೆಯಿಂದ ರೈತರು ಸಂತಸಗೊಂಡಿದ್ದು, ಭತ್ತದ ನಾಟಿ ಚಟುವಟಿಕೆ ಗರಿಗೆದರಿವೆ. ಮಳೆ ಕೊಂಚ ಬಿಡುವು ನೀಡಿದರೆ ಇನ್ನಷ್ಟು ಅನುಕೂಲವಾಗಲಿದೆ ಎಂದು ಕೆರೆಮಕ್ಕಿ ಕಾಫಿ ಬೆಳೆಗಾರ ಮಹೇಶ್ ತಿಳಿಸಿದರು‌.

    ಸಾಧಾರಣ ಮಳೆ: ಕಡೂರು ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಭಾನುವಾರ ಸಾಧಾರಣ ಮಳೆಯಾಗಿದೆ.

    ಕಡೂರು ಪಟ್ಟಣ, ಬೀರೂರು ಪಟ್ಟಣ, ಹಿರೇನಲ್ಲೂರು, ಎಮ್ಮೆದೊಡ್ಡಿ, ಸಖರಾಯಪಟ್ಟಣ, ಪಂಚನಹಳ್ಳಿ, ಸಿಂಗಟಗೆರೆ, ಮೊದಲಾದ ಕಡೆ ಬೆಳಿಗ್ಗೆಯಿಂದ ಮೋಡಕವಿದ ವಾತಾವರಣವಿದ್ದು, ಆಗಾಗ ತುಂತುರು ಮಳೆ ಸುರಿದಿದೆ.

    ಚುರುಕುಗೊಂಡ ಮಳೆ: ನರಸಿಂಹರಾಜಪುರ ತಾಲ್ಲೂಕಿನಾದ್ಯಂತ ಶನಿವಾರ ಬೆಳಿಗ್ಗೆಯಿಂದ ಕ್ಷೀಣಿಸಿದ್ದ ಮಳೆ ‌ರಾತ್ರಿಯಿಂದ ಚುರುಕು ಪಡೆದುಕೊಂಡಿದೆ.

    ಭಾನುವಾರ ಬೆಳಿಗ್ಗೆಯಿಂದಲೇ ಬಿಟ್ಟು, ಬಿಟ್ಟು ಗಾಳಿ ಸಹಿತ ಮಳೆ ಸುರಿಯಿತು. ಮಧ್ಯಾಹ್ನದ ವೇಳೆಗೆ ಬಿರುಸು ಪಡೆಯಿತು. ಸಂಜೆ ಮೋಡ ಕವಿದ ವಾತಾವರಣ ಇತ್ತು.

    ಬಿರುಸಿನ ಮಳೆ: ಕೊಪ್ಪ ಪಟ್ಟಣವೂ ಸೇರಿದಂತೆ ತಾಲ್ಲೂಕಿನಲ್ಲಿ ಭಾನುವಾರ ಬೆಳಿಗ್ಗೆಯಿಂದ ಸಂಜೆವರೆಗೆ ಬಿರುಸಿನ ಮಳೆಯಾಗಿದೆ. ಶನಿವಾರ ರಾತ್ರಿಯೂ ಮಳೆಯಾಗಿತ್ತು. ಗಾಳಿ, ಮಳೆಗೆ ಗ್ರಾಮೀಣ ಭಾಗದಲ್ಲಿ ಕೆಲವೆಡೆ ವಿದ್ಯುತ್ ವ್ಯತ್ಯಯವಾಗಿತ್ತು.

    Heavy rains in the Malenadu region of Chikkamagaluru district

  • ವ್ಯಕ್ತಿ ಶಾಶ್ವತವಲ್ಲ ಆದರೆ ವ್ಯಕ್ತಿತ್ವ ಶಾಶ್ವತ

    ವ್ಯಕ್ತಿ ಶಾಶ್ವತವಲ್ಲ ಆದರೆ ವ್ಯಕ್ತಿತ್ವ ಶಾಶ್ವತ

    ಚಿಕ್ಕಮಗಳೂರು-ವ್ಯಕ್ತಿ ಶಾಶ್ವತವಲ್ಲ. ಆದರೆ ವ್ಯಕ್ತಿತ್ವ ಶಾಶ್ವತ. ಹುಟ್ಟು ಸಾವಿನ ನಡುವೆ ಇರುವುದೇ ಜೀವನ. ಈ ಅಂತರದಲ್ಲಿನ ಜೀವನ ಮೌಲ್ಯವೇ ನಮ್ಮನ್ನು ಶಾಶ್ವತವಾಗಿ ಇರುವಂತೆ ಮಾಡುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.

    ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೊಗಸೆ ದೇವರಗದ್ದೆ ಕೃಷ್ಣ ಶೆಟ್ಟರ ಸಂಸ್ಮರಣೆ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ನಮ್ಮ ಜೀವನ ಮೌಲ್ಯವೇ ಸಾವಿನ ನಂತರವೂ ಉಳಿಯುತ್ತವೆ. ಜೀವನ ಮೌಲ್ಯಗಳು ಕಟಿಬದ್ಧರಾದವರು ಮರಣದ ಬಳಿಕವೂ ಶಾಶ್ವತವಾಗಿ ಜನಮಾನಸದಲ್ಲಿ ಉಳಿಯುತ್ತಾರೆ ಎಂದು ಪ್ರತಿಪಾದಿಸಿದರು.

    ರಾಮ ಹಾಗೂ ರಾಮಾಯಣ ಹತ್ತರಿಂದ ಹದಿನೈದು ಸಾವಿರ ವರ್ಷಪೂರ್ವದ್ದು. ಆದರೆ ರಾಮ ಇಂದಿಗೂ ಜನಮಾನಸದಲ್ಲಿ ಓರ್ವ ಆದರ್ಶ ಪುರುಷ ದೇವತಾ ಸ್ವರೂಪವಾಗಿ ಉಳಿದುಕೊಂಡಿದ್ದಾನೆ. ಸತ್ಯಹರಿಶ್ಚಂದ್ರ ಮೌಲ್ಯಗಳಿಗೆ ಕಟಿಬದ್ಧನಾದ ಕಾರಣದಿಂದಲೇ ಆತನ ಹೆಸರಿನೊಂದಿಗೆ ಸತ್ಯ ಇದುವರೆಗೆ ಉಳಿದುಕೊಂಡು ಬಂದಿದೆ. ಶ್ರೀಮಂತರಾದ ಕ್ಷಣ ಅವರ ಹೆಸರು ಜನಮಾನಸದಲ್ಲಿ ಉಳಿಯುವುದಿಲ್ಲ. ಸಾಮ್ರಾಟರಾದರೂ ಅವರನ್ನು ಯಾರು ನೆನೆಯುವುದಿಲ್ಲ. ಆದರೆ ಜೀವನ ಮೌಲ್ಯವನ್ನು ಉಳಿಸಿಕೊಂಡು ಬದುಕಿದಾಗ ಅವರ ಹೆಸರು ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂದರು.

    ದೇವರ ಮನೆ ಕೃಷ್ಣ ಶೆಟ್ಟಿ ಅವರು ಮರಣ ಹೊಂದಿ ೨೫ ವರ್ಷಗಳ ನಂತರ ಅವರ ಸಂಸ್ಮರಣೆ ಅಂಗವಾಗಿ ಪುಸ್ತಕ ಹೊರ ತರುತ್ತಿರುವುದು ಅವರು ಎಷ್ಟರಮಟ್ಟಿಗೆ ತಮ್ಮ ಪ್ರಭಾವ ಬೀರುದ್ದರು ಹಾಗೂ ಎಷ್ಟು ಜೀವನ ಮೌಲ್ಯ ಎಲ್ಲರಲ್ಲೂ ತುಂಬಿದ್ದರು ಎಂಬುದನ್ನು ತೋರುತ್ತದೆ ಎಂದು ಸ್ಮರಿಸಿದರು.

    ಹಿಂದುಗಳ ಜನಸಂಖ್ಯೆ ಕಡಿಮೆಯಾಗದಂತೆ ನೋಡಿಕೊಳ್ಳಬೇಕಿದೆ. ಇಂದು ಮದುವೆಯಾಗುವ ಯುವಕರಿಗೆ ಹುಡುಗಿಯನ್ನು ಕೊಡುವವರಿಲ್ಲ. ಮದುವೆಯಾದವರು ಮಕ್ಕಳು ಬೇಡ ಎನ್ನುತ್ತಿದ್ದಾರೆ. ಮುಂದೆ ನಾವಿರುವುದಿಲ್ಲ ಆದರೆ ಸಂಘರ್ಷ ಇರುತ್ತದೆ. ಹೀಗಾಗಿ ಮುಂದಿನ ದಿನಗಳಲ್ಲಿ ನಮ್ಮ ಜನಸಂಖ್ಯೆ ಕಡಿಮೆಯಾದಲ್ಲಿ ಹಿಂದೂ ಧರ್ಮಕ್ಕೆ ಧಕ್ಕೆಯಾಗುವ ಸಾಧ್ಯತೆ ಇದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಹಿಂದಿನ ಗಾಂಧಾರ ಇಂದು ಅಫ್ಘಾನಿಸ್ತಾನವಾಗಿದೆ. ಇತ್ತೀಚೆಗೆ ಪಾಕಿಸ್ತಾನವು ಸೃಷ್ಟಿಯಾಗಿದೆ. ಬಾಂಗ್ಲಾದೇಶದಲ್ಲಿ ಸೇವೆ ಮಾಡುತ್ತಿದ್ದ ಇಸ್ಕಾನ್ ನವರನ್ನು ಭಯೋತ್ಪಾದಕರು ಎಂದು ಜೈಲಿಗಟ್ಟಿದ್ದಾರೆ ಎಂದು ಹೇಳಿದರು.

    ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಶಾಸಕ ಎಚ್ ಡಿ ತಮ್ಮಯ್ಯ ಮಾತನಾಡಿ, ನಮ್ಮ ದೇಶ ಸಂಸ್ಕೃತಿ ಬಗ್ಗೆ ಅಭಿಮಾನ ಇದ್ದರೆ ಯುವ ಪೀಳಿಗೆ ತಮ್ಮ ಕುಟುಂಬದ ಹಿರಿಯರು ಹಾಗೂ ಸಮಾಜದ ಹಿರಿಯರ ಬಗ್ಗೆ ಸಾಮಾಜಕ್ಕೆ ತಿಳಿಸಿಕೊಡುವ ಕೆಲಸ ಮಾಡುತ್ತಾರೆ. ಕೇವಲ ಕುಟುಂಬಕ್ಕಾಗಿ ಮಾತ್ರವಲ್ಲದೆ ಸಮಾಜಕ್ಕಾಗಿ ಹಾಗೂ ದೇಶದ ಹಿತಕ್ಕಾಗಿ ಬದುಕಿದಾಗ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯ ಎಂದು ಪ್ರತಿಪಾದಿಸಿದರು.

    ಬೊಗಸೆ ದೇವರಗದ್ದೆ ಕುಟುಂಬದ ಮಂಜಪ್ಪ ಶೆಟ್ಟಿ ಮಾತನಾಡಿ, ಕೃಷ್ಣ ಶೆಟ್ಟಿ ಅವರು ತಾವು ಬದುಕಿರುವವರೆಗೂ ಸಮಾಜ ಸೇವಕರಾಗಿ ದಾನ ಧರ್ಮ ಮಾಡಿಕೊಂಡು ಹಲವು ಸಾಮಾಜಿಕ ಕಾರ್ಯ ಮಾಡಿದ್ದಾರೆ. ತಮ್ಮ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಇತರೆ ಹಲವು ಮಕ್ಕಳ ಓದಿಗೆ ನೆರವಾಗಿದ್ದಾರೆ. ಇದಲ್ಲದೆ ತಮ್ಮ ಗ್ರಾಮದ ಅಕ್ಕಪಕ್ಕದ ಹಲವು ಗ್ರಾಮಗಳ ಜನರ ಸಮಸ್ಯೆಗಳನ್ನು ಬಗೆಹರಿಸಿ ಜನಾನುರಾಗಿ ಜೀವನ ನಡೆಸಿದ್ದಾರೆ ಎಂದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೊಗಸೆಯ ಬಿ.ಕೆ.ಶೇಷಪ್ಪ ಶೆಟ್ಟರು ವಹಿಸಿದ್ದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಮಂಜಪ್ಪ ಶೆಟ್ಟಿ ಮಸಗಲಿ, ಬೆಂಗಳೂರಿನ ಪತ್ರಿಕೆಯ ಬೆಳ್ಳಿಚುಕ್ಕಿ ವೀರೇಂದ್ರ, ಶ್ರೀ ನೀಲಕಂಠೇಶ್ವರ ಕುರುಹಿನ ಶೆಟ್ಟಿ ಸಂಘದ ಅಧ್ಯಕ್ಷ ಸಿ.ಎಚ್.ಇಂದುಕುಮಾರ್, ಕೋಲಾರದ ಡಿ.ಡಿ.ಎಲ್.ಆರ್. ಬಿ.ಕೆ.ಸಂಜಯ್, ಪುಸ್ತಕದ ಸಂಪಾದಕ ಎಚ್.ಎನ್.ಕೃಷ್ಣ ಶೆಟ್ಟಿ, ಕುಟುಂಬದ ಹಿರಿಯರಾದ ಜಯಲಕ್ಷ್ಮಮ್ಮ ಉಪಸ್ಥಿತರಿದ್ದರು.

    The person is not eternal but the personality is eternal.

  • ಸಾಹಿತ್ಯ ಸಮ್ಮೇಳನ ನಿತ್ಯ ನಿರಂತರ ಮಹಿಳೆಯರಿಗೆ ಚಿಂತನೆಯ ದಾರಿಯಾಗಬೇಕು

    ಸಾಹಿತ್ಯ ಸಮ್ಮೇಳನ ನಿತ್ಯ ನಿರಂತರ ಮಹಿಳೆಯರಿಗೆ ಚಿಂತನೆಯ ದಾರಿಯಾಗಬೇಕು

    ಚಿಕ್ಕಮಗಳೂರು: ಸಾಹಿತ್ಯ ಸಮ್ಮೇಳನ ಕೇವಲ ನುಡಿಜಾತ್ರೆಯಲ್ಲ. ನಿತ್ಯ ನಿರಂತರ ಮಹಿಳೆಯರಿಗೆ ಚಿಂತನೆಯ ದಾರಿಯಾಗಬೇಕು. ನಮ್ಮಿಂದ ಈ ಸಮಾಜಕ್ಕೆ ಒಳ್ಳೆದಾಗುವ ಬಗೆ ಹಾಗೂ ಯಾವ ದಾರಿಯಲ್ಲಿ ನಡೆಯಬೇಕು ಎಂಬುದರ ಬಗ್ಗೆ ಚರ್ಚಿಸಬೇಕು ಎಂದು ಸಮ್ಮೇಳನಾಧ್ಯಕ್ಷೆ ಲಕ್ಷ್ಮೀ ಶ್ಯಾಮರಾವ್ ತಿಳಿಸಿದರು.

    ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಪ್ರಪ್ರಥಮ ಸಮ್ಮೇಳನ ಕಾರ್ಯಕ್ರಮದ ಅಧ್ಯಕ್ಷರಾಗಿ ಅವರು ಮಾತನಾಡಿದರು.

    ಗೃಹಿಣಿ ಗೃಹ ಮುಚ್ಚತೆ ಎಂಬ ಮಾತಿನಂತೆ ವೃತ್ತಿನಿರತ ಮಹಿಳೆಯರು ಮನೆಯ ನಿರ್ವಹಣೆ ಮಾಡುತ್ತಾ ಇರುವ ಸಮಯವನ್ನೆ ದಿಟ್ಟತನದಿಂದ ಸಾಧನೆ ಮಾಡುವ ಮಹಿಳೆಯರು ಸಾಧಿಸಲು ಹೊರಟ ಮಹಿಳೆಯರು ಇಂದು ಭಾರತದ ಉದ್ದಗಲಕ್ಕೂ ಇದ್ದಾರೆನ್ನುವುದು ಸತ್ಯವಾಗಿದೆ ಎಂದರು.

    ಪ್ರಾಚೀನ ಕಾಲದಿಂದಲೂ ಇಲ್ಲಿ ಮಹಿಳೆಯರು ಸ್ಥಾನಮಾನಕ್ಕೆ ಅಡ್ಡಿ ಆತಂಕಗಳು ಇದ್ದೇ ಇವೆ. ಮಹಿಳೆಯರ ಹಾದಿ ಅಷ್ಟೇನು ಸುಗಮ ಹಾದಿಯಲ್ಲ. ಇಲ್ಲಿ ಯಾವ ಯೋಜನೆಗಳು ಬಂದರೂ ಸಮಗ್ರವಾದ ಬದಲಾವಣೆ ಆಗುತ್ತಿಲ್ಲ. ಇಲ್ಲಿ ನಮ್ಮ ಹೋರಾಟವನ್ನು ಪುರುಷರ ವಿರುದ್ಧ ಎಂದುಕೊಳ್ಳದೆ ಮಹಿಳಾ ಶೋಷಣೆಯ ವಿರುದ್ಧ ಹೋರಾಟವೆಂದುಕೊಳ್ಳಬೇಕು ಎಂದರು.

    ಹೆಣ್ಣು ಸಂಸಾರದ ಕಣ್ಣೆಂದರೂ ಅವಳ ಮೇಲೆ ಆಗುತ್ತಿರುವ ಅನ್ಯಾಯ, ದೌರ್ಜನ್ಯ, ಅತ್ಯಾಚಾರ, ಭ್ರೂಣಹತ್ಯೆ, ಲೈಂಗಿಕ ಕಿರುಕುಳ, ಬಾಲ್ಯವಿವಾಹ ಇದರಂಥಹ ಸಾಮಾಜಿಕ ಪಿಡುಗಗಳು ಅವಳ ಜೀವನ ನರಕವಾಗದಂತೆ ಸಿಡಿದೇಳಬೇಕಾಗಿದೆ. ಮಹಿಳೆಯರು ಕಾನೂನುಗಳನ್ನು ಅರ್ಥಮಾಡಿಕೊಂಡು ದಿಟ್ಟತನದಿಂದ ಹೋರಾಡಬೇಕಿದೆ ಎಂದು ತಿಳಿಸಿದರು.

    ಅಕ್ಷರ ಹಾದಿಯ ಬೆಳಕಿನಿಂದ ವಂಚಿತಳಾಗಿದ್ದ ಮಹಿಳೆಗೆ ಶತಮಾನಕ್ಕೂ ಮೀರಿದ ಹೋರಾಟದ ಫಲವಾಗಿ ಇಂದು ಶಿಕ್ಷಣದಲ್ಲಿ ಪಳಗಿ ಉದ್ಯೋಗದ ಅವಕಾಶಗಳು ಸಿಗುತ್ತಿವೆ. ಜಾಗತಿಕ ಮಟ್ಟದಲ್ಲಿ ಮಹಿಳೆಯರು ಕ್ರಿಯಾಶೀಲರಾಗಿದ್ದಾರೆ ಎಂದು ಹೇಳಿದರು.

    ಸಾಹಿತ್ಯದ ವಿಷಯಕ್ಕೆ ಬಂದರೆ ಹಿಂದೆ ಅಡುಗೆಮನೆ ಸಾಹಿತ್ಯ ಎಂದು ಮಹಿಳಾ ಸಾಹಿತ್ಯವನ್ನು ಅಲ್ಲಗಳೆಯುತ್ತಿದ್ದರು. ಆದರೂ ಮಹಿಳೆಯರು ರಚಿಸಿದ ಸಾಹಿತ್ಯವನ್ನು ಓದಲು ಅಂದು ಓದುಗರ ಗುಂಪೇ ಸೃಷ್ಟಿಯಾಗಿತ್ತು. ಹಿಂದೆ ಲೇಖಕಿಯರು ಬರೆದ ಸಾಹಿತ್ಯವು ಧಾರವಾಹಿಗಳಾಗಿ, ಚಲನಚಿತ್ರಗಳಾಗಿ ಹಾಗೂ ಕಥೆಗಳು ಕಣ್ಣಮುಂದೆ ಅಚ್ಚಳಿಯದಂತಿದೆ ಎಂದರೆ ತಪ್ಪಾಗುವುದಿಲ್ಲ ಎಂದರು.

    ಭಾರತದಾದ್ಯಂತ ಮಹಿಳೆಯರು ಅಡುಗೆ ಮನೆಯಿಂದ ಅಂತರಿಕ್ಷದವರೆಗೆ, ಕೃಷಿ ಭೂಮಿಯಿಂದ ಯುದ್ಧಭೂಮಿಯವರೆಗೆ ತಮ್ಮ ಸ್ಥಾನವನ್ನು ವಿಸ್ತರಿಸಿಕೊಂಡಿದ್ದಾರೆ. ಶಿಕ್ಷಕರಾಗಿ, ವಕೀಲರಾಗಿ, ನ್ಯಾಯಾಧೀಶರಾಗಿ ವೈದ್ಯರಾಗಿ, ಉಪರಾಷ್ಟ್ರಪತಿಗಳಾಗಿ, ಸಾಹಿತ್ಯ, ಸಂಗೀತ, ಕಲೆ ನಾಟಕ, ರಂಗಭೂಮಿ ಎಲ್ಲದರಲ್ಲೂ ಉನ್ನತ ಸ್ಥಾನಗಳನ್ನು ಅಲಂಕರಿಸಿ ಅಪಾರ ಸಾಧನೆ ಮಾಡುತ್ತಿದ್ದಾರೆ ಎಂದರು.

    The Sahitya Sammelan should be a constant source of thought for women.

  • ಸಾಹಿತ್ಯ ಕ್ಷೇತ್ರಕ್ಕೆ ಮಹಿಳಾ ಕೊಡುಗೆ ಅಪಾರ

    ಸಾಹಿತ್ಯ ಕ್ಷೇತ್ರಕ್ಕೆ ಮಹಿಳಾ ಕೊಡುಗೆ ಅಪಾರ

    ಚಿಕ್ಕಮಗಳೂರು: ಮಹಿಳೆಯರ ಸಾಹಿತ್ಯ ಕ್ಷೇತ್ರದ ಸಾಧನೆ ನಿನ್ನೆ-ಮೊನ್ನೆಯಿಂದಲ್ಲ, ಹತ್ತನೇ ಶತಮಾನದಿಂದಲೇ ಜಾನಪದ ಗೀತೆಗಳ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಮಹಿಳಾ ಮಣಿಯರು ತಮ್ಮದೇ ಶೈಲಿಯಲ್ಲಿ ಕೊಡುಗೆ ನೀಡಿದ್ದಾರೆ ಎಂದು ಮೈಸೂರು ವಿಶ್ರಾಂತ ಸಹ ಪ್ರಾಧ್ಯಾಪಕಿ ಡಾ. ಎಸ್.ಪಿ.ಉಮಾ ದೇವಿ ಪುತ್ತೂರು ಹೇಳಿದರು.

    ನಗರದ ಕುವೆಂಪು ಕಲಾಮಂದಿರದಲ್ಲಿ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಘಟಕದ ಪ್ರಪ್ರಥಮ ಸಮ್ಮೇಳನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಹಿಂದಿನಿಂದಲೇ ಮಹಿಳೆಯರು ಜಾನಪದ ಗೀತೆಗಳನ್ನು ಕಟ್ಟಿ ಬೆಳೆಸಿದ ಪರಿಣಾಮ ವಿಶ್ವಮಾನ್ಯದಲ್ಲಿ ಮನ್ನಣೆ ಗಳಿಸಿ ಕನ್ನಡ ಸಾಹಿತ್ಯಕ್ಕೆ ವಿಶೇಷ ಸ್ಥಾನಮಾನ ಸಿಕ್ಕಿದೆ. ಇಂದು ಕನ್ನಡಭಾಷೆಗೆ ಇರುವಂಥ ಜೀವಂತಿಕೆ ಬೇರೆ ಯಾವುದೇ ಭಾಷೆಗೆ ದೊರೆತಿಲ್ಲ. ಹಿರಿಯರ ಜಾನಪದವು ಜನವಾಣಿ, ಕವಿವಾಣಿಯಾಗಿ ಇಂದು ಸುಗಂಧಭರಿತ ಹೂವಾಗಿ ಎಲ್ಲೆಡೆ ಹಬ್ಬಿಕೊಂಡಿದೆ ಎಂದರು.

    ಪುರುಷರಂತೆಯೇ ಹೆಣ್ಣು ಸಾಹಿತ್ಯ ಲೋಕದಲ್ಲಿ ಹಿಂದೆ ಬಿದ್ದಿಲ್ಲ. ಜೀವನದ ನೋವುನಲಿವು, ಬದುಕಿನ ಬವಣೆ, ಕರುಣಜನಕ ಸ್ಥಿತಿಗತಿಯನ್ನು ಉಕ್ಕಿ ಹರಿಸಿ ಬರವಣಿಗೆ ಮುಖೇನಾ ಪುಸ್ತಕಗಳನ್ನು ರಚಿಸಿ ಸಮಾಜದ ಮುಂದಿಟ್ಟು ಸಾಧನೆ ಮಾಡಲು ಸಾಹಿತ್ಯ ಕ್ಷೇತ್ರ ಸ್ಪೂರ್ತಿ ನೀಡಿದೆ ಎಂದು ಹೇಳಿದರು.

    ಹನ್ನೆರಡನೇ ಶತಮಾನದಲ್ಲಿ ಹಲವಾರು ವಚನಗಾರ್ತಿಯರು ಕನ್ನಡದಲ್ಲಿ ವಚನಗಳನ್ನು ರಚಿಸಿ ಒಂದು ಚಳವಳಿಯನ್ನೇ ನಡೆಸಿದರು. ಮಹಿಳೆಯರು ತಮ್ಮ ಸಾಹಿತ್ಯದಲ್ಲಿ ಸಮಾಜದ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ, ಸಾಹಿತ್ಯ ರಚಿಸತೊಡಗಿದ್ದನ್ನು ಕೆಲವು ಹಂತಗಳಲ್ಲಿ ಗುರುತಿಸಲಾಗಿದ್ದು, ಸಾಹಿತ್ಯ ಎಂದಿಗೂ ಒಂದು ಸಮಾಜಕ್ಕೆ ಸೀಮಿತಗೊಳ್ಳದೇ ಪ್ರತಿ ಜನಾಂಗದಲ್ಲೂ ಹುಟ್ಟಿಕೊಂಡಿತು ಎಂದರು.

    ಇತಿಹಾಸ ಚರಿತ್ರೆಗಳ ಪುಟಗಳಲ್ಲಿ ಸಂಚಿಹೊನ್ನಮ್ಮ, ಶೃಂಗಾರಮ್ಮ, ತಿರುಮಲಾಂಬ, ಅಕ್ಕಮಹಾದೇವಿ ಸೇರಿದಂತೆ ಅನೇಕ ಮಹಾನ್ ವಚನಗಾರ್ತಿಯರು ಸಾಹಿತ್ಯಕ್ಕೆ ಕೊಡುಗೆ ನೀಡಿದರು. ಕಾಲಕಳೆಯದಂತೆ ಆಧುನಿಕತೆ ಜಗತ್ತಿನಲ್ಲಿ ಬಹಳಷ್ಟು ಕವಿಯತ್ರಿಯರು ಉದಯಿಸಿ ವಿಶಿಷ್ಟ ಹಾಗೂ ವಿಭಿನ್ನ ಶೈಲಿಯಲ್ಲಿ ಕಥೆ, ಕವನಗಳನ್ನು ರಚಿಸಿ ಸಾಹಿತ್ಯ ಲೋಕಕ್ಕೆ ತಮ್ಮದೇಯಾದ ಕೊಡುಗೆ ನೀಡುತ್ತಿದ್ದಾರೆ ಎಂದರು.

    ಸಾಹಿತ್ಯ ಮತ್ತು ಕಲೆ ಎಂದರೆ ಮನಸ್ಸಿನಲ್ಲಿರುವ ಗೊಂದಲ, ಅಶಾಂತಿ ಹಾಗೂ ನಕಾರಾತ್ಮಕ ಚಿಂತನೆಗಳನ್ನು ಹೊರಹಾಕುವ ಭವ್ಯವಾದ ಸಾಧನ. ಯಾವುದೇ ವ್ಯಕ್ತಿ ತನ್ನನ್ನು ಸಾಹಿತ್ಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾನೆ, ಜೀವನದಲ್ಲಿ ಸಂತೋಷವನ್ನು ಕಾಣಲು ಸಾಧ್ಯ. ಜೊತೆಗೆ ಹೃದಯಭಾಷೆ ಮರೆತರೆ ಬದುಕು ಶೂನ್ಯವಾಗಲಿದೆ ಎಂಬುದು ಅರಿಯಬೇಕು ಎಂದು ಹೇಳಿದರು.

    ಮಲೆನಾಡು ಪ್ರಕೃತಿಯ ಮಡಿಲಿನಲ್ಲಿ ಆಯೋಜಿಸಿರುವ ಮಹಿಳಾ ಸಮ್ಮೇಳನ ಬಹಳಷ್ಟು ಲೇಖಕಿಯರು, ಬರಹಗಾರ್ತಿಯರಿಗೆ ಮೆರುಗು ತಂದಿದೆ. ಈ ಮಣ್ಣಿನಲ್ಲಿ ಸಾಹಿತ್ಯ ಪ್ರೇಮ ರಕ್ತದ ಕಣಕಣದಲ್ಲಿ ತುಂಬಿ ಕೊಂಡಿವೆ. ಸಾಹಿತಿಗಳಿಗೆ ಭಾರತೀಯ ಹಾಗೂ ಕನ್ನಡಿಗನೆಂಬ ಎರಡಕ್ಕೂ ವಿಶೇಷ ಗೌರವವಿದ್ದು, ಮೊದಲ ಪ್ರಾಶಸ್ತ್ರ್ಯ ಮಾತೃಭಾಷೆಗೆ ನೀಡುವುದು ಕನ್ನಡಾಭಿಮಾನಿಗಳ ಕರ್ತವ್ಯ ಎಂದು ತಿಳಿಸಿದರು.

    ಮಹಿಳಾ ಹಾಗೂ ಪುರುಷರ ಸಾಹಿತ್ಯದಲ್ಲಿ ವಿಭಜಿಸುವುದು ಊರ್ಜಿತವಲ್ಲ. ಸಾಹಿತ್ಯದ ಒಲವಿನ ಕಡೆ ಹೆಚ್ಚು ಬೆಳವಣಿಗೆ ಹೊಂದಿ ಕನ್ನಡ ಸಾಹಿತ್ಯ ಮುಂಚೂಣಿಯಲ್ಲಿ ಬೆಳಗುವುದೇ ಮುಖ್ಯವಾಗಬೇಕು. ಜಿಲ್ಲೆಯಲ್ಲೂ ಸಾಕಷ್ಟು ಲೇಖಕಿಯರು, ಬರಹಗಾರರನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವಾದರೆ ಸಮ್ಮೇಳನ ಮೂಲ ಆಶಯ ಈಡೇರಿದಂತೆ ಎಂದರು.

    ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಶಾಸಕ ಹೆಚ್.ಡಿ.ತಮ್ಮಯ್ಯ ಮಾತನಾಡಿ, ಮಹಿಳಾ ಕವಿಯತ್ರಿಯರ ಧ್ವನಿ ಹಾಗೂ ಹೆಜ್ಜೆ ಗುರುತಿಸಿ ಈ ವೇದಿಕೆ ಸಾಕ್ಷಿಯಾಗಬೇಕು. ಈ ಸಮ್ಮೇಳನ ಮಹಿಳಾ ಸಾಹಿತ್ಯ ಪ್ರೇಮಿಗಳಿಗೆ ಹೊಸದಾರಿಯಾಗುವ ಜೊತೆಗೆ ಶಾಲೆಗಳಲ್ಲಿ ಪುಟ್ಟ ಹೆಣ್ಣುಮಕ್ಕಳ ಸಾಹಿತ್ಯದ ಆಸಕ್ತಿ ಬೆಳೆಸುವಂಥ ಕಾರ್ಯಕ್ರಮ ಹಮ್ಮಿಕೊಳ್ಳಲಿ ಎಂದು ಶುಭ ಹಾರೈಸಿದರು.

    ಇತ್ತೀಚಿನ ದಿನಗಳಲ್ಲಿ ಒತ್ತಡ ಜೀವನದಲ್ಲಿ ಓದು, ಬರವಣಿಗೆ, ಚಿಂತನೆ ಹಾಗೂ ಆರೋಗ್ಯಕರ ಚರ್ಚೆಗಳು ಮಾಯಾವಾಗುವ ಅಭದ್ರತೆ ಮನುಷ್ಯನಲ್ಲಿ ಕಾಡುತ್ತಿದೆ. ಇವುಗಳನ್ನು ದೂರವಾಗಿಸಲು ಮಹಿಳಾ ಸಾಹಿತಿಗಳಲ್ಲಿ ಪರಿಹರಿಸುವ ಹಾಗೂ ಆತ್ಮವಿಶ್ವಾಸ ಮೂಡಿಸುವ ಗುಣವಿದೆ ಎಂದರು.

    ನಾಡಿನ ಕನ್ನಡ ಸಾಹಿತ್ಯದಲ್ಲಿ ೧೨ನೇ ಶತಮಾನದ ಅಕ್ಕಮಹಾದೇವಿ, ಸಾವಿತ್ರಿಬಾಯಿ ಫುಲೆ ಕಾಲದಿಂದ ಇಂದಿನ ಸುಧಾಮೂರ್ತಿ, ಗೌರಿಲಂಕೇಶ್, ಪ್ರತಿಭಾ ನಂದಕುಮಾರ್ ಸೇರಿದಂತೆ ಹಿರಿಯ-ಕಿರಿಯರು ಸೇರಿದಂತೆ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ಕೊಡುಗೆಗಳನ್ನು ನೀಡಿರುವುದು ನೆನಪಿಸಿಕೊಳ್ಳಬೇಕಿದೆ ಎಂದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಸಾಹಿತ್ಯ ಲೋಕಕ್ಕೆ ರಾಜಾಶ್ರಯಕ್ಕಿಂತ ಪ್ರಜಾಶ್ರಾಯ ಮುಖ್ಯವಾಗಿದೆ. ರಾಜಾಶ್ರಯವಿದ್ದಲ್ಲಿ ಸಾಹಿತ್ಯ ಬೆಳವಣಿಗೆಯಾಗದು. ಪ್ರಜಾಶ್ರಯದಿಂದ ಸಾಹಿತ್ಯ ಬೆಳೆದಿರುವ ಕಾರಣ ವಿಶ್ವದೆಲ್ಲೆಡೆ ಪಸರಿಸಲು ಕಾರಣವಾಗಿದೆ. ಹಿರಿಯರ ಗಾಧೆ, ವಚನ, ಜಾನಪದ ಗೀತೆಗಳು ಹುಟ್ಟಿದ್ದು ಜನರ ಮದ್ಯದಿಂದಲೇ ಎಂಬುದು ಅರಿತು ಸಾಗಿದರೆ ಯಶಸ್ಸು ಲಭಿಸಲಿದೆ ಎಂದರು.

    ಇತ್ತೀಚೆಗೆ ಕುಟುಂಬದ ನಡುವೆಯೇ ಮಾತೃಭಾಷೆ ಕಳೆದುಹೋಗುವ ಆತಂಕ ಕಾಡುತ್ತಿದೆ. ಅಪ್ಪ-ಅಮ್ಮ ಎನ್ನುವ ಬದಲು ಮಮ್ಮಿ-ಡ್ಯಾಡಿ ಸಂಸ್ಕೃತಿ ಆಧುನಿಕತೆಯಲ್ಲಿ ಬೆಳೆಯುತ್ತಿದೆ. ಮೊದಲು ಕುಟುಂಬದಲ್ಲಿ ಭಾಷಾ ಅಭಿಮಾನ ಬೆಳೆಸಿಕೊಂಡರೆ, ಸಮಾಜದಲ್ಲಿ ಕನ್ನಡ ತನವನ್ನು ಎತ್ತಿಹಿಡಿಯಬಹುದು. ಕುಟುಂಬದಲ್ಲೇ ಭಾಷಾಭಿಮಾನ ಇಲ್ಲದಿದ್ದರೆ ಸಂಪೂರ್ಣ ಶೂನ್ಯವಾಗುತ್ತದೆ ಎಂದು ಹೇಳಿದರು.

    ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲೇ ಪ್ರಪ್ರಥಮ ಭಾರಿಗೆ ಜಿಲ್ಲಾ ಕೇಂದ್ರದಲ್ಲಿ ಮಹಿಳಾ ಸಮ್ಮೇಳನ ಹಮ್ಮಿಕೊಳ್ಳುವ ಮೂಲಕ ಪ್ರತಿಯೊಂದು ಕಾರ್ಯಕ್ರಮವು ಜಿಲ್ಲೆಯಿಂದಲೇ ಪ್ರಥಮವಾಗಿ ಆರಂಭಿಸಲಾಗುತ್ತಿದೆ. ಗಮಕ, ಕಾವ್ಯಕಮ್ಮಟ, ದಾಸ, ವಚನ ಸಾಹಿತ್ಯ ಸಮ್ಮೇಳನಗಳು ದೊಡ್ಡಮಟ್ಟಿನಲ್ಲಿ ನಡೆಸುವುದು ಮೂಲ ಆಶಯವಾಗಿದೆ ಎಂದರು.

    ವಿಶೇಷವಾಗಿ ಕನ್ನಡ ಕಟ್ಟುವ ಕೆಲಸದಲ್ಲಿ ನಿರಂತರ ದುಡಿಯುತ್ತಿರುವ ರಾಜ್ಯದ ಕಸಾಪ ಜಿಲ್ಲಾಧ್ಯಕ್ಷರಿಗೆ ಊರಿನಿಂದ ರಾಜಧಾನಿಗೆ ಅಥವಾ ಇನ್ನಿತರೆ ತೆರಳಲು ಸರ್ಕಾರ ಉಚಿತ ಪಾಸ್ ನೀಡಿ ಪ್ರೋತ್ಸಾಹಿಸುತ್ತಿದೆ. ಮುಖ್ಯವಾಗಿ ಜಿಲ್ಲೆಯಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದು ೪೭ ವರ್ಷಗಳು ಕಳೆದಿದ್ದು ಈ ಬಾರಿಗೆ ಜಿಲ್ಲೆಯಲ್ಲಿ ಸಮ್ಮೇಳನಕ್ಕೆ ಅವಕಾಶ ಕಲ್ಪಿಸಲು ಶಾಸಕರುಗಳು ಸ್ಪಂದಿಸಬೇಕು ಎಂದು ಒತ್ತಾಯಿಸಿದರು.

    ಸಮ್ಮೇಳನ ಅಧ್ಯಕ್ಷತೆಯನ್ನು ಲಕ್ಷ್ಮೀ ಶ್ಯಾಮರಾವ್ ವಹಿಸಿದ್ದರು. ಸ್ವಾಗತ ಸಮಿತಿ ಅಧ್ಯಕ್ಷೆ ರೇಖಾಹುಲಿಯಪ್ಪಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಹೆಚ್.ಕೆ. ವಿಜಯಲಕ್ಷ್ಮೀ ವಿಶ್ವನಾಥ್ ಸಮ್ಮೇಳನಾಧ್ಯಕ್ಷರ ಪರಿಚಯ ನಡೆಸಿಕೊಟ್ಟರು.

    ಈ ಸಂದರ್ಭದಲ್ಲಿ ಬೆಂಗಳೂರು ಕಸಾಪ ಕೋಶಾಧ್ಯಕ್ಷ ಪಟೇಲ್ ಪಾಂಡು, ಕಸಾಪ ಜಿಲ್ಲಾಧ್ಯಕ್ಷೆ ನಿರ್ಮಲಾ ಮಂಜೇಗೌಡ, ತಾಲ್ಲೂಕು ಅಧ್ಯಕ್ಷ ಮಾವಿನಕೆರೆ ದಯಾನಂದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಎಸ್.ವೆಂಕಟೇಶ್, ಕೋಶಾಧ್ಯಕ್ಷ ಬಿ.ಪ್ರಕಾಶ್, ಸಾಹಿತಿ ಶೈಲಾ ನಾಗರಾಜ್, ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್, ಉಪಾಧ್ಯಕ್ಷೆ ಅನುಮಧುಕರ್, ಕನ್ನಡಸೇನೆ ಜಿಲ್ಲಾಧ್ಯಕ್ಷೆ ಪಿ.ಸಿ.ರಾಜೇಗೌಡ, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ರಾಜೇಶ್, ಸಂಸ್ಕೃತಿ ಚಿಂತಕಿ ಎ. ವರ್ಷ, ಬ್ರಹ್ಮಕುಮಾರೀಸ್ ಜಿಲ್ಲಾ ಸಂಚಾಲಕಿ ಭಾಗ್ಯಕ್ಕ, ಕಸಾಪ ನಗರಾಧ್ಯಕ್ಷ ಸಚಿನ್‌ಸಿಂಗ್, ಮತ್ತಿತರರು ಉಪಸ್ಥಿತರಿದ್ದರು.

    Women’s contribution to the field of literature is immense.

  • ಸಿರಿ ಸಂಪತ್ತುಗಳಿಗಿಂತ ಮನುಷ್ಯನಿಗೆ ನೆಮ್ಮದಿ ಮುಖ್ಯ

    ಸಿರಿ ಸಂಪತ್ತುಗಳಿಗಿಂತ ಮನುಷ್ಯನಿಗೆ ನೆಮ್ಮದಿ ಮುಖ್ಯ

    ಚಿಕ್ಕಮಗಳೂರು: ಬಹು ಜನ್ಮಗಳ ಪುಣ್ಯ ಫಲದಿಂದ ಮಾನವ ಜನ್ಮ ಪ್ರಾಪ್ತವಾಗಿದೆ. ಮನುಷ್ಯ ಜೀವನದಲ್ಲಿ ಅಂದವಾಗಿ ಇರುವುದಕ್ಕಿಂತ ಆನಂದದಿಂದ ಬಾಳುವುದು ಉತ್ತಮ. ಭೌತಿಕ ಸಿರಿ ಸಂಪತ್ತುಗಳಿಗಿಂತ ಮನುಷ್ಯನಿಗೆ ಆಧ್ಯಾತ್ಮ ಸಂಪತ್ತು ಮತ್ತು ಶಾಂತಿ ಮುಖ್ಯವೆಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

    ಅವರು ಶುಕ್ರವಾರ ಶ್ರೀ ಜಗದ್ಗುರು ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಭಕ್ತಿ ಭಂಡಾರಿ ಬಸವೇಶ್ವರ ಜಯಂತಿ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವಚನ ನೀಡುತ್ತಿದ್ದರು.

    ಸಕಲ ಮಾನವರಿಗೂ ಒಳಿತನ್ನು ಬಯಸುವುದೇ ನಿಜವಾದ ಧರ್ಮ. ವೀರಶೈವ ಧರ್ಮ ವೃಕ್ಷದ ಬೇರು ಶ್ರೀ ಜಗದ್ಗುರು ರೇಣುಕಾಚಾರ್ಯರಾದರೆ ಆ ವೃಕ್ಷದ ಹಣ್ಣು ಶ್ರೀ ಬಸವೇಶ್ವರರು. ಆಚಾರ್ಯರ ತತ್ವ ಸಿದ್ಧಾಂತ ಶರಣರ ಸಾಮಾಜಿಕ ಚಿಂತನ ಬದುಕಿ ಬಾಳುವ ಮನುಷ್ಯನಿಗೆ ದಾರಿದೀಪ. ಹಚ್ಚುವುದಾದರೆ ದೀಪ ಹಚ್ಚು ಬೆಂಕಿಯನ್ನಲ್ಲ. ಆರಿಸುವುದಾದರೆ ನೋವನ್ನು ಆರಿಸು ನಗುವನ್ನಲ್ಲ ಎಚಿದು

    ಶ್ರೀ ಜಗದ್ಗುರು ರೇಣುಕಾಚಾರ್ಯರು ರೇಣುಕ ಗೀತೆಯಲ್ಲಿ ಬೋಧಿಸಿದ್ದಾರೆ. ಸಪ್ತ ಸೂತ್ರ ಹೇಳಿದ ಬಸವೇಶ್ವರರು ಸುಳ್ಳು ಮಾತನಾಡಬಾರದೆಂದು ಹೇಳಿದ್ದಾರೆ. ಅರಿತು ಆಚರಿಸಿ ಬಾಳುವುದೇ ನಿಜವಾದ ಧರ್ಮವೆಂದು ಪೂರ್ವಜರು ಒತ್ತಿ ಹೇಳಿದ್ದಾರೆ. ಡೋಣಿ ಮುಳುಗಲು ಒಂದು ಸಣ್ಣ ರಂಧ್ರ ಸಾಕು. ಬದುಕು ಮುಳುಗಲು ಒಂದು ಕೆಟ್ಟ ನಿರ್ಧಾರ ಸಾಕು.

    ಆದ್ದರಿಂದ ಮನುಷ್ಯ ಬಹಳಷ್ಟು ವಿವೇಚನೆಯಿಂದ ಮಾತನಾಡುವುದು ಶ್ರೇಯಸ್ಕರ. ಶ್ರೀ ಜಗದ್ಗುರು ರೇಣುಕಾಚಾರ್ಯ ಟ್ರಸ್ಟಿನಿಂದ ಪ್ರತಿ ವರುಷ ಸಂಯುಕ್ತವಾಗಿ ಜಯಂತ್ಯುತ್ಸವ ಆಚರಿಸಿಕೊಂಡು ಬರುತ್ತಿರುವುದು ತಮಗೆ ಸಂತೋಷ ತಂದಿದೆ ಎಂದರು.

    ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮಿಗಳು ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಮಾನವ ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಧರ್ಮವೇ ಮೂಲ. ಶ್ರೀ ಜಗದ್ಗುರು ರೇಣುಕಾಚಾರ್ಯರು ತತ್ವ ಸಿದ್ಧಾಂತಗಳನ್ನು ಸಾರ್ವಕಾಲಿಕ ಸತ್ಯ ಸಂಗತಿಗಳನ್ನು ಬೋಧಿಸಿದ್ದಾರೆ. ಆ ಉನ್ನತ ದಾರಿಯಲ್ಲಿ ಶ್ರೀ ಬಸವಣ್ಣನವರು ಮುನ್ನಡೆದು ಆಧ್ಯಾತ್ಮ ರಂಗದಲ್ಲಿ ಅದ್ಭುತ ಸಾಧನೆಗೈದರೆಂದು

    ಹರುಷ ವ್ಯಕ್ತಪಡಿಸಿದರು. ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು ಶ್ರೀ ಜಗದ್ಗುರು ರೇಣುಕಾಚಾರ್ಯರ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳ ಕುರಿತು ಉಪದೇಶವನ್ನಿತ್ತರು. ಶಂಕರದೇವರ ಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಭಕ್ತಿ ಭಂಡಾರಿ ಬಸವೇಶ್ವರರು ವೀರಶೈವ ಧರ್ಮವನ್ನು ಸ್ವೀಕರಿಸಿ ಮತ್ತಷ್ಟು ಬೆಳೆಸಿ ಬಲಿಸಿದ್ದನ್ನು ಮರೆಯಲಾಗದು.

    ಶ್ರೀ ಜಗದ್ಗುರು ರೇಣುಕಾಚಾರ್ಯರ ಮತ್ತು ಶ್ರೀ ಬಸವೇಶ್ವರರ ವಿಚಾರ ಧಾರೆಗಳು ಬದುಕಿ ಬಾಳುವ ಜನಾಂಗಕ್ಕೆ ಆಶಾ ಕಿರಣವೆಂದರು. ಸಮಾರಂಭದ ಅಧ್ಯಕ್ಷತೆಯನ್ನು ಟ್ರಸ್ಟಿನ ಖಜಾಂಚಿ ಯು.ಎಂ.ಬಸವರಾಜ್ ವಹಿಸಿ ಮಾತನಾಡಿದರು. ಟ್ರಸ್ಟಿನ ಗೌರವ ಕಾರ್ಯದರ್ಶಿ ಸಿ.ವಿ.ಮಲ್ಲಿಕಾರ್ಜುನ್, ಸದಸ್ಯರಾದ ಎಮ್.ಡಿ.ಪುಟ್ಟಸ್ವಾಮಿ, ಹೆಚ್.ಎನ್.ನಂಜೇಗೌಡ ಸೇರಿದಂತೆ ಎಲ್ಲ ಸದಸ್ಯರು ಉಪಸ್ಥಿತರಿದ್ದರು. ಶ್ರೀ ಜಗದ್ಗುರು ರೇಣುಕಾಚಾರ್ಯ ಮಂದಿರದ ಪ್ರಧಾನ ಅರ್ಚಕರಾದ ವೇ. ಪುಷ್ಪಯ್ಯ ಸ್ವಾಮಿ ಅವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ವಿಶೇಷ ಗುರುರಕ್ಷೆಯಿತ್ತು ಶುಭ ಹಾರೈಸಿದರು. ಎಸ್.ಎಂ.ದೇವಣ್ಣಗೌಡ ಸ್ವಾಗತಿಸಿದರು. ಟ್ರಸ್ಟ್ ಸದಸ್ಯರಾದ ಬಿ.ಎಂ.ಶಿವಶಂಕರ್ ನಿರೂಪಿಸಿದರು.

    ಸಮಾರಂಭಕ್ಕೂ ಮುನ್ನ ಪ್ರಾತ:ಕಾಲ ೧೫ ಜನ ವಟುಗಳಿಗೆ ಶಿವದೀಕ್ಷಾ ಸಂಸ್ಕಾರ ಜರುಗಿತು. ನಂತರ ಶ್ರೀ ರಂಭಾಪುರಿ ಜಗದ್ಗುರುಗಳವರ ಇ?ಲಿಂಗ ಮಹಾಪೂಜಾ ಸಕಲ ಸದ್ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ಜರುಗಿತು. ಸಮಾರಂಭದ ನಂತರ ಅನ್ನ ದಾಸೋಹ ಜರುಗಿತು.

    Peace of mind is more important to a person than wealth.

  • ರಾಷ್ಟ್ರದ ಸಮಗ್ರತೆ- ಐಕ್ಯತೆ ಎತ್ತಿಹಿಡಿಯಲು ಸಜ್ಜಾಗಿ

    ರಾಷ್ಟ್ರದ ಸಮಗ್ರತೆ- ಐಕ್ಯತೆ ಎತ್ತಿಹಿಡಿಯಲು ಸಜ್ಜಾಗಿ

    ಚಿಕ್ಕಮಗಳೂರು:  ರಾಷ್ಟ್ರದ ಸಮಗ್ರತೆ ಹಾಗೂ ಐಕ್ಯತೆಯನ್ನು ಎತ್ತಿಹಿಡಿಯಲು ಕಾರ್ಯ ಕರ್ತರು ಮಾನಸಿಕವಾಗಿ ಸಜ್ಜಾಗಬೇಕು. ವಿಕಸಿತ ಭಾರತದ ಅಭಿವೃದ್ದಿಯನ್ನು ಸಮಾಜದ ಮುಂದಿಡಲು ಪಕ್ಷಾತೀತವಾಗಿ ಶ್ರಮಿಸಬೇಕು ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುಣ್ಯಪಾಲ್ ಹೇಳಿದರು.

    ನಗರದ ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ನಗರ ಮಂಡಲದಿಂದ ಶುಕ್ರವಾರ ನಡೆದ ಸೇವೆ, ಸುಶಾಸನ, ಬಡವರ ಕಲ್ಯಾಣದ ಮೋದಿ ಸರ್ಕಾರಕ್ಕೆ ೧೧ ವರ್ಷ ಪೂರೈಸಿದ ಅಂಗವಾಗಿ ವಿಕಸಿತ ಭಾರತ ಸಂಕಲ್ಪ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿ ಹಿಂದಿನ ಕಾಂಗ್ರೆಸ್ ಆಳ್ವಿಕೆಯಲ್ಲಿ ಭಾರತ ನಿರುದ್ಯೋಗ, ಬಡತನ, ನಕ್ಸಲ್ ಹಾಗೂ ಭಯೋತ್ಪಾದನೆ ಚಟುವಟಿಕೆಗಳಿಂದ ನಲುಗಿ ಹೋಗಿತ್ತು. ೨೦೧೪ರಲ್ಲಿ ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿದ ಬಳಿಕ ದೇ ಶದ ಕಟ್ಟಕಡೆಯ ವ್ಯಕ್ತಿಗೂ ಸಮಾನತೆ ಯೋಜನೆಗಳನ್ನು ರೂಪಿಸಿ ಹಂತ ಹಂತವಾಗಿ ರಾಷ್ಟ್ರವನ್ನು ಬಲಿಷ್ಟ ಗೊಳಿಸಲು ಮುಂದಾದರು.

    ಭಾರತ ಸ್ವಾತಂತ್ರ್ಯಗೊಂಡು ಏಳು ದಶಕ ಪೂರೈಸಿದರೂ ಬಡವರ ಪಾಲಿಗೆ ಕನಸಾಗಿದ್ಧ ಬ್ಯಾಂಕ್ ಖಾ ತೆ, ಅಡುಗೆ ಸಿಲಿಂಡರ್, ಜನೌಷಧಿ ಕೇಂದ್ರ ತೆರೆದರು. ಯುವಕರ ಸ್ವಾವಲಂಬಿ ಬದುಕಿಗೆ ಕೌಶಾಲ್ಯಾಭಿ ವೃದ್ದಿ ತರಬೇತಿ ನೀಡಿದರು. ಅಲ್ಲದೇ ಪ್ರತಿದಿನವು ರಾಷ್ಟ್ರೀಯ ಹೆದ್ದಾರಿ ಅಭಿವೃದ್ದಿಗೊಳಿಸಿ ಅಸಾಧ್ಯವಾಗಿದ್ದನ್ನು ಸಾ ಧ್ಯಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ಹೇಳಿದರು.

    ದೇಶದ ಕೋಟ್ಯಾಂತರ ಜನರ ದೈನಂದಿನ ವ್ಯಾಪಾರವನ್ನು ಡಿಜಿಟಲೀಕರಣಗೊಳಿಸಿದ ಪರಿಣಾಮ ಇ ಂದು ದೇಶದಲ್ಲಿ ೨೪ ಲಕ್ಷ ಕೋಟಿ ವಹಿವಾಟು ಯುಪಿಐನಿಂದ ನಡೆಯುತ್ತಿದೆ. ಕೋವಿಡ್ ವೇಳೆಯಲ್ಲಿ ಆತ್ಮ ನಿರ್ಭಾರ ಪ್ಯಾಕೇಜ್ ಘೋಷಣೆ ಹಾಗೂ ದೇಶದ ಪ್ರಜೆಗಳು ಸೇರಿದಂತೆ ವಿದೇಶಗಳಿಗೂ ಕೋವಿಡ್ ಲಸಿಕೆ ಯನ್ನು ವಿತರಿಸಿದ ದೇಶವೆಂದರೆ ಭಾರತ ಎಂದರು

    ದೇಶದ ೨೮೫ ಜಿಲ್ಲೆಗಳಲ್ಲಿ ಸೂಕ್ಷ್ಮವಾಗಿ ಅಡಗಿದ್ದ ನಕ್ಸಲ್ ಚಟುವಟಿಕೆ ಕಡಿವಾಣಕ್ಕೆ ಮುನ್ನುಡಿ ಬರೆದ ವರು ಮೋದಿ. ಕಾಂಗ್ರೆಸ್ ಅವಧಿಯಲ್ಲಿ ಮಂಡಿಯೂರಿ ನಿಲ್ಲಿಸಿದ್ಧ ದೇಶವನ್ನು ಭುಜದೆತ್ತರಕ್ಕೆ ಕೊಂಡೊ ಯ್ದು ರಾಷ್ಟ್ರದ ಪ್ರಗತಿಗೆ ಭದ್ರಬುನಾದಿ ಹಾಕಿದವರು. ಭಾರತದ ನೆಲದಲ್ಲಿ ವಿದೇಶಿ ಪ್ರಖ್ಯಾತ ಕಂಪನಿಗಳ ತಯಾರಿಕಾ ಘಟಕ ಸ್ಥಾಪಿಸಲು ಮೋದಿಯವರ ಸ್ನೇಹತ್ವವೇ ಕಾರಣ ಎಂದು ಹೇಳಿದರು.

    ವಿಶ್ವಮಟ್ಟದಲ್ಲಿ ಭಾರತ ಮೂರನೇ ಅತಿದೊಡ್ಡ ರಾಷ್ಟ್ರವಾಗಲು ಕಾರ್ಯಕರ್ತರು ಜೊತೆಗೆ ಜನಸಾಮಾ ನ್ಯರು ತಮ್ಮ ಜವಾಬ್ದಾರಿ ಅರಿತು ದೇಶದ ಕರ್ತವ್ಯ ನೆನಪು ಮಾಡಿಕೊಳ್ಳಬೇಕು. ಆ ನಿಟ್ಟಿನಲ್ಲಿ ಕೇಂದ್ರ ಸರ್ಕಾ ರದ ಜನಪರ ಆಡಳಿತ ಯೋಜನೆಗಳನ್ನು ಜಿಲ್ಲೆ, ಹೋಬಳಿ, ವಾರ್ಡ್ ಹಾಗೂ ಬೂತ್‌ಗಳಲ್ಲಿ ನಿರಂತರವಾ ಗಿ ಕಾರ್ಯಾಗಾರ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.

    ಭಾರತೀಯರ ಶಾಂತಿ ಕದಡಲು ಯತ್ನಿಸುತ್ತಿದ್ದ ನೆರೆದೇಶ ಪಾಕಿಸ್ತಾವನ್ನು ಮೋದಿ ಆಡಳಿತದಲ್ಲಿ ಎರ್ ಮತ್ತು ಸರ್ಜಿಕಲ್ ಸ್ಟ್ರೈಕ್, ಉರಿ ಮುಖಾಂತರ ತಕ್ಕಪಾಠ ಕಲಿಸಿದೆ. ಈಚೆಗೆ ಆಪರೇಷನ್ ಸಿಂಧೂರ್‌ದ ಮೂ ಲಕ ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಒಂಟಿಕಾಲಿನಲ್ಲಿ ನಿಲ್ಲುವಂತೆ ಮಾಡಲು ಮೋದಿಯವರ ಆಡಳಿತ ವೈಖರಿಯೇ ಕಾರಣವಾಗಿದೆ ಎಂದು ಹೇಳಿದರು.

    ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಸವಿತಾ ರಮೇಶ್ ಮಾತನಾಡಿ ವಾಜಪೇಯಿ ಬಳಿಕ ದೇಶದ ಆರ್ಥಿಕತೆ, ರಕ್ಷಣೆ ವಿಚಾರದಲ್ಲಿ ಮುಂಚೂಣಿ ನಾಯಕರಾಗಿ ರಾಷ್ಟ್ರಕ್ಕಾಗಿ ದುಡಿಯುತ್ತಿರುವ ನರೇಂದ್ರ ಮೋದಿಯವರು ಸದಾಕಾಲ ದೇಶದ ಮಕ್ಕಳ ಭವಿಷ್ಯ, ಜನತೆಗೆ ಬೆಂಗವಲಾಗಿ ನಿಂತಿರುವುದು ಶ್ಲಾಘನೀಯ ಎಂದರು.

    ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿಜೆಪಿ ನಗರಾಧ್ಯಕ್ಷ ಪುಷ್ಪರಾಜ್ ಗುಜರಾತ್‌ನಲ್ಲಿ ೧೫ ವರ್ಷ ಮುಖ್ಯಮಂತ್ರಿ ಹಾಗೂ ಪ್ರಧಾನಿಗಳಾಗಿ ೧೧ ವರ್ಷ ಪೂರೈಸಿರುವುದು ದೊಡ್ಡ ಸಾಧನೆ. ದೇಶದ ಸುಮಾರು ೧೮ ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ, ೨೯ ಕೋಟಿ ಬ್ಯಾಂಕ್‌ಖಾತೆಗೆ ಅಡಿಪಾಯ ಹಾಗೂ ಭಾರತೀಯ ಕನಸಾಗಿದ್ದ ಶ್ರೀರಾಮಮಂದಿರದ ನಿರ್ಮಾಣಕ್ಕೆ ಕಾರಣೀಭೂತರಾದವರು ಎಂದು ಹೇಳಿದರು.

    ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಪ್ರೇಮ್‌ಕುಮಾರ್, ಕೋಟೆ ರಂಗನಾಥ್, ಓಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ನಗರಸಭಾ ಸದಸ್ಯ ಮಧುಕುಮಾರ್‌ರಾಜ್ ಅರಸ್, ಮುಖಂ ಡರುಗಳಾದ ಬಸವರಾಜ್, ಕೌಶಿಕ್, ವೆಂಕಟೇಶ್ ಅರಸ್ ಮತ್ತಿತರರು ಹಾಜರಿದ್ದರು.

    Ready to uphold the integrity and unity of the nation

  • ಇಪಿಎಸ್ ಕಾರ್ಮಿಕರ ಬೇಡಿಕೆ ಹೋರಾಟಕ್ಕೆ ಎನ್‌ಎಸಿ ಜಿಲ್ಲಾ ಘಟಕ ಆರಂಭ

    ಇಪಿಎಸ್ ಕಾರ್ಮಿಕರ ಬೇಡಿಕೆ ಹೋರಾಟಕ್ಕೆ ಎನ್‌ಎಸಿ ಜಿಲ್ಲಾ ಘಟಕ ಆರಂಭ

    ಚಿಕ್ಕಮಗಳೂರು: ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ನಿವೃತ್ತ ಎಲ್ಲಾ ಇಪಿಎಸ್ ಕಾರ್ಮಿಕರಿಗೆ, ಅಸಂಘಟಿತ ಕಾರ್ಮಿಕರಿಗೆ ೭೫೦೦ ರೂ ಪಿಂಚಣಿ ಹಾಗೂ ಆರೋಗ್ಯ ವಿಮೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ನೀಡಬೇಕೆಂದು ಎನ್‌ಎಸಿ ರಾಜ್ಯಾಧ್ಯಕ್ಷ ಜಿಎಸ್‌ಎಂ ಸ್ವಾಮಿ ಆಗ್ರಹಿಸಿದರು.

    ಅವರು ಇಂದು ನಗರದಲ್ಲಿ ನೂತನ ಎನ್‌ಎಸಿ ಘಟಕವನ್ನು ಉದ್ಘಾಟಿಸಿ ಮಾತನಾಡಿ, ನಿವೃತ್ತ ನೌಕರರಿಗೆ ಡಿಎ, ವಿಧವೆಯರಿಗೆ ಶೇ.೧೦ ರಷ್ಟು ಪಿಂಚಣಿ ಕೊಡಬೇಕೆಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಹೇಳಿ ಇಪಿಎಸ್ ಕಾರ್ಮಿಕರು ಭವಿಷ್ಯ ನಿಧಿಯಲ್ಲಿ ಹಣ ತೊಡಗಿಸಿದ್ದು, ಈ ಹಣದಿಂದಲೇ ಪಿಂಚಣಿ ಕೊಡಬಹುದಾಗಿದೆ, ೯೦ ಸಾವಿರ ಕೋಟಿ ರೂ ಬಡ್ಡಿ ಬರುತ್ತಿದೆ ಎಂದು ಮಾಹಿತಿ ನೀಡಿದರು.

    ೬೮ ಸಾವಿರ ಪಿಂಚಣಿದಾರರಿಗೆ ೭೫೦೦ ರೂ ಮಾಸಿಕ ಪಿಂಚಣಿ ಕೊಡಬಹುದು. ಈ ನಾಲ್ಕು ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರದ ಮುಂದಿಟ್ಟು ರಾಷ್ಟ್ರಾಧ್ಯಂತ ಪ್ರವಾಸ ಕೈಗೊಂಡು ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎನ್‌ಎಸಿ ಘಟಕಗಳನ್ನು ಸ್ಥಾಪಿಸುತ್ತಿರುವುದಾಗಿ ತಿಳಿಸಿದರು.

    ಭಾರತದ ೫೪೩ ಸಂಸದರನ್ನು ಈಗಾಗಲೇ ಭೇಟಿಮಾಡಿ, ಸಂಸತ್‌ನಲ್ಲಿ ನಮ್ಮ ಪರವಾಗಿ ಧ್ವನಿ ಎತ್ತುವಂತೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಸಂಸದರನ್ನು ಆಯ್ಕೆಮಾಡುವ ಚುನಾವಣೆ ಪ್ರಕ್ರಿಯೆಯಲ್ಲಿ ಇಪಿಎಸ್ ನೌಕರರ ಪಾತ್ರ ಅತೀ ಮುಖ್ಯ ಎಂದರು.

    ಇದೂವರೆಗೆ ರಾಜ್ಯದ ೨೮ ಸಂಸದರುಗಳು ನಮ್ಮ ಪರವಾಗಿ ಧ್ವನಿ ಎತ್ತಿಲ್ಲ ಎಂದು ದೂರಿದ ಅವರು ಕನಿಷ್ಟ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ್ ಬೊಮ್ಮಾಯಿ ಅವರು ನಮ್ಮ ಪರವಾಗಿ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಹೇಳಿದರು.

    ಬೆಂಗಳೂರಿನಲ್ಲಿ ಇದೇ ಜೂ.೧೭ ರಂದು ರಾಜ್ಯದ ಎನ್‌ಎಸಿ ಕಾರ್ಯಕಾರಿ ಸಭೆಯನ್ನು ಕರೆಯಲಾಗಿದ್ದು, ಸಂಘಟನೆಯ ಸರ್ವ ಸದಸ್ಯರು ಸಂಘಟಿತರಾಗಿ ಭಾಗವಹಿಸುವ ಮೂಲಕ ನಮ್ಮ ಹೋರಾಟಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

    ಎನ್‌ಎಸಿ ಸಂಘಟನೆಯ ಮೂಲ ಉದ್ದೇಶ ಇಪಿಎಸ್ ನೌಕರರಿಗೆ ಹಲವು ಬೇಡಿಕೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸಂಘಟನೆಯ ರಾಷ್ಟ್ರಾಧ್ಯಕ್ಷ ರಮಾಕಾಂತ್ ನರಗುಂದ, ಅಶೋಕ್ ರಾವತ್, ಸಿಂಗ್ ಇವರುಗಳ ನೇತೃತ್ವದಲ್ಲಿ ೩೪ ರಾಜ್ಯಗಳಲ್ಲಿ ಸಂಘಟನೆಯನ್ನು ಸ್ಥಾಪಿಸಿ ಹೋರಾಟ ಮಾಡುತ್ತಿದ್ದೇವೆಂದು ಹೇಳಿದರು.

    ಎನ್‌ಎಸಿ ಕಾರ್ಯಾಧ್ಯಕ್ಷ ಹಾಗೂ ಉಪಾಧ್ಯಕ್ಷ ವಿ.ಕೆ. ಗಡಾದ ಮಾತನಾಡಿ, ೧೯೫೨ ರಲ್ಲಿ ಭವಿಷ್ಯ ನಿಧಿ ಜಾರಿಮಾಡಿದರು, ೧೯೭೨ ರಲ್ಲಿ ಕುಟುಂಬ ಪಿಂಚಣಿ ಯೋಜನೆಯನ್ನು ಜಾರಿಮಾಡಿದರು. ೧೯೯೫ ರಲ್ಲಿ ಇಪಿಎಸ್-೯೫ ಪಿಂಚಣಿ ಯೋಜನೆ ಜಾರಿಗೆ ತಂದರು. ಇದನ್ನು ಜಾರಿಮಾಡಿದ ಸಂದರ್ಭದಲ್ಲಿ ರಾಜ್ಯ ಮತ್ತು ಕೇಂದ್ರಸರ್ಕಾರ ಹೆಚ್ಚಿನ ಪಿಂಚಣಿ ನೀಡುತ್ತದೆ ಎಂದು ಹೇಳಿದ್ದರು ಎಂದರು.

    ಆದರೆ, ಟ್ರೇಡ್ ಯೂನಿಯನ್ ಮುಖಂಡರು ಈ ಹೇಳಿಕೆ ಬಗ್ಗೆ ಕ್ರಮವಹಿಸದೆ ಉದಾಸೀನ ತಾಳಿದ ಹಿನ್ನೆಲೆಯಲ್ಲಿ ಇಂದು ನಾವುಗಳೆಲ್ಲರೂ ನಮ್ಮ ಬೇಡಿಕೆಗಳಿಗಾಗಿ ಸಂಘಟಿತರಾಗಿ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದರು.

    ಪ್ರಾಸ್ತಾವಿಕವಾಗಿ ಮಾತನಾಡಿದ ಎನ್‌ಎಸಿ ರಾಜ್ಯ ಸಂಯೋಜಕ ಸುಬ್ಬಣ್ಣ ಎನ್‌ಎಸಿ ಎಂಬುದೇ ರಾಷ್ಟ್ರೀಯ ಸಂಘರ್ಷ ಸಮಿತಿ. ಇದರಲ್ಲಿ ಹೋರಾಟದ ಬಲವಿದೆ, ದೇಶಾದ್ಯಂತ ೭೮ ಲಕ್ಷ ಭವಿಷ್ಯ ನಿಧಿ ಪಿಂಚಣಿದಾರರ ಅತೀ ದೊಡ್ಡ ಸಂಘಟನೆಯಾಗಿ ಹೊರಹೊಮ್ಮಿದೆ ಎಂದರು.

    ಪ್ರಸ್ತುತ ರಾಜ್ಯದಲ್ಲಿ ಮಾದರಿ ಎನ್‌ಎಸಿ ಸಂಘಟನೆಯಾಗಿ ಕೆಲಸ ಮಾಡುತ್ತಿದ್ದು, ಬುದ್ದಿವಂತರ, ವಿಚಾರವಂತರ ನಾಡು ಚಿಕ್ಕಮಗಳೂರಿನಲ್ಲಿ ಇಂದು ಎನ್‌ಎಸಿ ಘಟಕ ಉದ್ಘಾಟನೆಯಾಗುತ್ತಿರುವುದು ಸಂತಸ ತಂದಿದೆ ಎಂದರು.

    ಕಾರ್ಯಕ್ರಮದಲ್ಲಿ ಎನ್‌ಎಸಿ ಸಂಘಟನೆ ಮುಖಂಡರಾದ ನಂಜುಂಡೇಗೌಡ, ಅನಿಲ್ ಇನಾಂದಾರ, ಎಸ್.ಎನ್. ಕುಲಕರ್ಣಿ, ಆರ್. ಸುಬ್ಬಣ್ಣ, ಹುಚ್ಚಪ್ಪ, ಜಿಲ್ಲಾಧ್ಯಕ್ಷ ಶಿವಕುಮಾರ್ ಯಗಟಿಪುರ, ಪ್ರಧಾನ ಕಾರ್ಯದರ್ಶಿ ಬಿ.ಟಿ.ಕುಮಾರ್ ಉಪಸ್ಥಿತರಿದ್ದರು.

    NAC district unit launched to fight for EPS workers’ demands