Category: ಚಿಕ್ಕಮಗಳೂರು

  • ಜಿಲ್ಲೆಯ 2.61 ಲಕ್ಷ ಕುಟುಂಬದ ಯಜಮಾನಿಯರಿಗೆ ಗೃಹಲಕ್ಷ್ಮೀ ಸೌಲಭ್ಯ

    ಜಿಲ್ಲೆಯ 2.61 ಲಕ್ಷ ಕುಟುಂಬದ ಯಜಮಾನಿಯರಿಗೆ ಗೃಹಲಕ್ಷ್ಮೀ ಸೌಲಭ್ಯ

    ಚಿಕ್ಕಮಗಳೂರು: ಗೃಹಲಕ್ಷ್ಮೀ ಯೋಜನೆಯಲ್ಲಿ ಜಿಲ್ಲೆಯ ೨,೬೧,೪೧೫ ಮಂದಿ ಯಜಮಾನಿಯರಿಗೆ ೫೨.೨೮ ಕೋಟಿ ರೂ. ನೇರವಾಗಿ ಸಂದಾಯವಾಗಿದೆ ಎಂದು ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ತಿಳಿಸಿದರು.

    ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ ಸಾರಿಗೆ ಸಂಸ್ಥೆಗೆ ಸರ್ಕಾರ ಶಕ್ತಿ ಯೋಜನೆಯಡಿ ಭರಪೂರ ಅನುದಾನ ಸರ್ಕಾರ ಬಿಡುಗಡೆ ಮಾಡಿರುವುದರಿಂದ ವಿಶೇಷವಾಗಿ ಮಾರ್ಚ್ ತಿಂಗಳಲ್ಲಿ ರಸ್ತೆ ಸಾರಿಗೆ ನಿಗಮದ ೪೭ ಹೊಸ ಬಸ್‌ಗಳು ಜಿಲ್ಲೆಗೆ ಬಂದಿದ್ದು.ಅವುಗಳನ್ನು ಅಗತ್ಯವಿರುವ ಹೆಚ್ಚು ಜನದಟ್ಟಣೆ ಇರುವ ಮಾರ್ಗಗಳಲ್ಲಿ ಸಂಚರಿಸಲು ಒದಗಿಸಲಾಗುವುದು ಎಂದು ಅವರು ಹರ್ಷ ವ್ಯಕ್ತಪಡಿಸಿದರು.

    ಆದಾಯ ತೆರಿಗೆ ಪಾವತಿದಾರರು ಹಾಗೂ ಜಿ.ಎಸ್.ಟಿ. ಪಾವತಿದಾರ ಕುಟುಂಬದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯ ಲಾಭವಾಗದಿರುವ ಬಗ್ಗೆ ಚರ್ಚಿಸಲಾಗಿದ್ದು, ಇದನ್ನು ಈ ಕುಟುಂಬಗಳಿಗೂ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ನಿರ್ಣಯಿಸಲಾಯಿತು.

    ಅನ್ನಭಾಗ್ಯ ಯೋಜನೆಯಡಿ ಡಿ.೨೪ರವರೆಗೆ ಫಲಾನುಭವಿಗಳ ಖಾತೆಗೆ ನೇರವಾಗಿ ನಗದು ಜಮಾ ಮಾಡಲಾಗುತ್ತಿದ್ದು, ಮಾರ್ಚ್ ತಿಂಗಳಿನಿಂದ ಫಲಾನುಭವಿಗಳಿಗೆ ಹಣದ ಬದಲಾಗಿ ತಲಾ ೫ ಕೆ.ಜಿ. ಅಕ್ಕಿಯನ್ನು ಉಚಿತವಾಗಿ ಜಿಲ್ಲೆಯ ೫೩೧ ಪಡಿತರ ವಿತರಣಾ ಕೇಂದ್ರಗಳ ಮೂಲಕ ಜಿಲ್ಲೆಯ ೮,೦೧,೫೩೬ ನೀಡಲಾಗಿದೆ ಎಂದು ಆಹಾರ ಇಲಾಖೆಯ ಅಧಿಕಾರಿ ಸವಿತಾ ಸಭೆಗೆ ತಿಳಿಸಿದರು.

    ಜಿಲ್ಲೆಯ ೩,೫೪,೧೬೫ ಬಳಕೆದಾರರ (ಮೀಟರ್‌ಗಳು) ಪೈಕಿ ೩,೧೧,೪೦೯ ಬಳಕೆದಾರರ (ಮೀಟರ್‌ಗಳು) ಸುಮಾರು ೧೦ ಲಕ್ಷ ಜನರು ಉಚಿತವಾಗಿ ವಿದ್ಯುತ್ ಸೌಲಭ್ಯ ಪಡೆಯುತ್ತಿದ್ದು, ಇದಕ್ಕಾಗಿ ರಾಜ್ಯ ಸರ್ಕಾರ ಮಾಹೆಯಾನ ೧೧.೭೯ ಕೋಟಿ ರೂ.ಗಳನ್ನು ಮೆಸ್ಕಾಂಗೆ ಭರಿಸುತ್ತಿದೆ ಎಂದು ಮೆಸ್ಕಾಂ ಸೂಪರಿಂಟೆಂಡಿಂಗ್ ಇಂಜಿನಿಯರ್ ಮಂಜುನಾಥ್ ಸಭೆಗೆ ತಿಳಿಸಿದರು. ಜನಸಂಪರ್ಕ ಸಭೆಯೂ ಸೇರಿದಂತೆ ಇಲಾಖೆಯ ಹಲವು ವಿಷಯಗಳ ಬಗ್ಗೆ ಸದಸ್ಯರು ಈ ಸಂದರ್ಭದಲ್ಲಿ ಚರ್ಚಿಸಿದರು.

    ಉದ್ಯೋಗ ವಿನಿಮಯ ಕೇಂದ್ರದಲ್ಲಿ ಇದುವರೆಗೂ ೧೮೧೧೧ ಪದವೀಧರರೂ, ೯೬ ಡಿಪ್ಲೊಮಾ ಪದವೀಧರರು ಯುವನಿಧಿಗೆ ಅರ್ಜಿ ಸಲ್ಲಿಸಿದ್ದು, ಅದಕ್ಕಾಗಿ ಇದುವರೆಗೆ ಸುಮಾರು ೬ ಕೋಟಿ ರೂ. ಭರಿಸಲಾಗಿದೆ ಎಂದು ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿ ನದಾಫ್ ತಿಳಿಸಿದರು.

    ಶಕ್ತಿ ಯೋಜನೆಯಡಿ ಜಿಲ್ಲೆಯ ಬಸ್‌ಗಳಲ್ಲಿ ಜೂನ್ ೨೦೨೩ ರಿಂದ ಈವರೆಗೆ ಅಂದರೆ ಮಾರ್ಚ್ ೨೦೨೫ರವರೆಗೆ ೩.೮೪ ಕೋಟಿ ಮಹಿಳೆಯರು ಉಚಿತವಾಗಿ ಸಂಚರಿಸಿದ್ದು,  ೧೪೭ ಕೋಟಿ ರೂ.ಗಳನ್ನು ಸರ್ಕಾರ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ನೀಡಿದೆ ಎಂದು ನಿಗಮದ ಸಂಚಾರಿ ವಿಭಾಗದ ಅಧಿಕಾರಿ ಚನ್ನಬಸಪ್ಪ ತಿಳಿಸಿದರು.

    ನ್ಯಾಯಬೆಲೆ ಅಂಗಡಿಗಳ ಮುಂಭಾಗದಲ್ಲಿ ಗ್ಯಾರಂಟಿ ಯೋಜನೆಗಳ ನಾಮಫಲಕವನ್ನು ತೂಗು ಹಾಕಬೇಕೆಂದು ಸದಸ್ಯರು ಸಭೆಯ ಗಮನಕ್ಕೆ ತಂದಾಗ ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹೆಚ್.ಎಸ್.ಕೀರ್ತನ ತಿಳಿಸಿದರು.

    ಪ್ರತೀ ತಿಂಗಳು ಮಾಸಿಕ ಪ್ರಗತಿ ಪರಿಶೀಲನಾ ಸಭೆಗಳು ನಡೆಯುತ್ತಿದ್ದು, ತಾಲ್ಲೂಕು ಸಮಿತಿಗಳು ತಾಲ್ಲೂಕು ಮಟ್ಟದಲ್ಲಿ ಸಭೆ, ಸಂವಾದ, ಫಲಾನುಭವಿಗಳ ಸಮಾವೇಶಗಳನ್ನು ಅಲ್ಲಲ್ಲಿ ನಡೆಸುತ್ತಿರುವ ಬಗ್ಗೆ ಪ್ರಸ್ತಾಪಿಸಿ ಪ್ರಶಂಸಿಸಿದ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು, ಸಂಜೀವಿನಿ ಗುಂಪುಗಳನ್ನು ರಚಿಸುವಲ್ಲಿ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರು ಪ್ರಮುಖ ಪಾತ್ರ ವಹಿಸಬೇಕೆಂದು ಸಲಹೆ ನೀಡಿದರು.

    ಜಿ.ಪಂ. ಉಪಕಾರ್ಯದರ್ಶಿ ಶಂಕರ್ ಕೊರವರ ಅವರು ಮಾತನಾಡಿ, ಪಂಚ ಗ್ಯಾರಂಟಿ ಅನುಷ್ಠಾನದ ವಿಚಾರದಲ್ಲಿ ಈಗಲೂ ಜಿಲ್ಲೆ ಪ್ರಥಮ ಸ್ಥಾನದಲ್ಲಿ ಉಳಿದಿದ್ದು, ಅಧಿಕಾರಿಗಳು ಅದನ್ನು ಉಳಿಸಿಕೊಳ್ಳುವಲ್ಲಿ ಶ್ರಮ ವಹಿಸಬೇಕು ಎಂದರು.

    ಸಭೆಯಲ್ಲಿ ಪ್ರಾಧಿಕಾರದ ಜಿಲ್ಲಾ ಉಪಾಧ್ಯಕ್ಷರುಗಳಾದ ಡೈರಿ ಮಂಜಣ್ಣ, ಶಫೀವುಲ್ಲ, ಹೆಚ್.ಎಸ್.ಕೃಷ್ಣೇಗೌಡ, ಡಿ.ಜಿ.ಚಂದ್ರಮೌಳಿ, ಹೇಮಾವತಿ ಸೇರಿದಂತೆ ಪ್ರಾಧಿಕಾರದ ತಾಲ್ಲೂಕು ಅಧ್ಯಕ್ಷರುಗಳು, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು, ಕೌಶಲ್ಯ ಅಭಿವೃದ್ಧಿ ಇಲಾಖೆ ಅಧಿಕಾರಿ ಹೆಚ್.ಜಿ.ಪ್ರಶಾಂತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಹಾಂತೇಶ ಭಜಂತ್ರಿ ಭಾಗವಹಿಸಿದ್ದರು.

    ೨೪ಸಿಕೆಎಂ ಫೋಟೋ ೩ ಹಾಗೂ ೩ಎ: ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಪಂಚ  ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿದರು.

    ೨೪ಸಿಕೆಎಂ ಫೋಟೋ ೪: ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದಿಂದ ಇಂದು ಡಾ.ರಾಜ್‌ಕುಮಾರ್ ಅವರ ೯೭ನೇ ಜನ್ಮ ದಿನಾಚರಣೆ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ, ಜಿ.ಪಂ. ಉಪ ಕಾರ್ಯದರ್ಶಿ ಶಂಕರ್ ಗೊರವರ, ಪ್ರಾಧಿಕಾರದ ಪದಾಧಿಕಾರಿಗಳು ಇದ್ದರು.

    Grihalakshmi facility for 2.61 lakh family heads in the district

  • ಡಾ.ರಾಜ್ ಕನ್ನಡ ಚಿತ್ರರಂಗದ ಐದು ದಶಕಗಳ ಕಾಲದ ಅನಭಿಷಿಕ್ತ ದೊರೆ

    ಡಾ.ರಾಜ್ ಕನ್ನಡ ಚಿತ್ರರಂಗದ ಐದು ದಶಕಗಳ ಕಾಲದ ಅನಭಿಷಿಕ್ತ ದೊರೆ

    ಚಿಕ್ಕಮಗಳೂರು: ಐದು ದಶಕಗಳ ಕಾಲ ಅನಭಿಷಿಕ್ತ ದೊರೆಯಾಗಿ ಕನ್ನಡ ಚಲನಚಿತ್ರೋದ್ಯಮದಲ್ಲಿ ತನ್ನದೇ ಛಾಪು ಉಳಿಸಿ ಕನ್ನಡಿಗರ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿದಿರುವವರು ನಟ ಸಾರ್ವಭೌಮ ಡಾ.ರಾಜ್‌ಕುಮಾರ್ ಅವರದು ಒಂದು ಮಾಸದ ನೆನಪು ಎಂದು ಹಿರಿಯ ಪತ್ರಕರ್ತ, ಸಾಹಿತಿ ಬಿ.ತಿಪ್ಪೇರುದ್ರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಇಂದು (ಏ.೨೪) ನಗರದ ಕುವೆಂಪು ಕಲಾಮಂದಿರದ ಹೇಮಾಂಗಣದಲ್ಲಿ ನಡೆದ ವರನಟ ಡಾ.ವರನಟ ಡಾ.ರಾಜ್‌ಕುಮಾರ್ ಅವರ ೯೭ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

    ಕನ್ನಡವನ್ನು ಉಸಿರಾಗಿಸಿಕೊಂಡ ಡಾ.ರಾಜ್‌ರವರು ಕನ್ನಡಕ್ಕಾಗಿ ಕೊನೆವರೆಗೂ ಬದುಕಿ ಕನ್ನಡದ ಹಿರಿಮೆ-ಗರಿಮೆಯನ್ನು ಗಗನದೆತ್ತರಕ್ಕೆ ಏರಿಸಿದರು. ವರನಟ, ನಟಸಾರ್ವಭೌಮನಾಗಿ ರಂಗಭೂಮಿ ಕಲಾವಿದರಾಗಿದ್ದ ತಂದೆಯವರಿಂದ ಪ್ರಭಾವಿತರಾಗಿ ರಂಗಭೂಮಿಯ ಎಲ್ಲಾ ಕಲಾಪ್ರಕಾರಗಳನ್ನು ಮೈಗೂಡಿಸಿಕೊಂಡು ಚಿತ್ರರಂಗದವರೆಗೂ ಬಂದು ಪರದೆಯ ಮೇಲೆ ವಿಜೃಂಭಿಸಿದವರು ಎಂದು ಬಣ್ಣಿಸಿದರು.

    ರಂಗಭೂಮಿಯ ಪ್ರಮುಖ ಆಶಯಗಳಾದ ಸಂಗೀತ, ಸಾಹಿತ್ಯ ಮತ್ತು ಗಾಯನ ಇವೆಲ್ಲವನ್ನು ಮೇಳೈಸಿಕೊಂಡು ಕಲೆಗಾಗಿ ಕಲೆಯಲ್ಲ, ಕಲೆ ಒಂದು ವಿಶಿಷ್ಟ ಗುಣ ಎಂದು ಆರಾಧಿಸಿ ೨೦೦ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿ ಕನ್ನಡಕ್ಕೆ ತಮ್ಮನ್ನು ಸಮರ್ಪಿಸಿಕೊಂಡವರು ಡಾ. ರಾಜ್ ಎಂದು ಹೇಳಿದರು.

    ಪಾತ್ರಗಳಲ್ಲಿ ವೈವಿಧ್ಯತೆಯನ್ನು ಕಾಯ್ದುಕೊಂಡು ಪರಕಾಯ ಪ್ರವೇಶ ಮಾಡಿ ಆ ಪಾತ್ರಗಳಿಗೆ ಜೀವ ತುಂಬಿದವರು. ಸಮಾಜಕ್ಕೆ, ನೀತಿ ಸಂದೇಶವನ್ನು ಬೋಧಿಸುವ ಚಿತ್ರಗಳು ಇವರದಾಗಿದ್ದು, ಐತಿಹಾಸಿಕ ಪಾತ್ರಗಳಿಂದ ಹಿಡಿದು ಜೇಮ್ಸ್‌ಬಾಂಡ್‌ವರೆಗೆ ತಮ್ಮ ಕಲಾ ನೈಪುಣ್ಯತೆಯನ್ನು ಮೆರೆದವರು ಡಾ.ರಾಜ್. ಭಕ್ತಿ ಪ್ರದಾನ ಚಿತ್ರಗಳಲ್ಲಂತೂ ಭಕ್ತಿಯ ಪರಾಕಾಷ್ಠೆ ಪ್ರದರ್ಶಿಸಿ ತನ್ಮಯತೆಯನ್ನು ಪ್ರದರ್ಶಿಸುತ್ತಿದ್ದವರು. ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ಸರಳತೆ ಹಾಗೂ ವಿನಯತೆಯ ಸಾಕಾರಮೂರ್ತಿಯಾಗಿದ್ದರು. ವ್ಯಾಸಂಗ ಮಾಡಿರುವುದು ಕೇವಲ ೪ನೇ ತರಗತಿಯವರೆಗಾದರೂ ಯಾವುದೇ ವಿಶ್ವವಿದ್ಯಾಲಯ ಮಟ್ಟದ ಶಿಕ್ಷಣವನ್ನು ಮೀರಿದ ಭಾಷೆ, ಸಂಭಾಷಣೆಯ ಪ್ರೌಢಿಮೆ ಅವರಿಗಿತ್ತು ಎಂದು ಅವರು ತಿಳಿಸಿದರು.

    ತಮ್ಮ ಚಿತ್ರಗಳಲ್ಲಿ ಕನ್ನಡ ಭಾಷೆಗೆ ಪ್ರಾಧಾನ್ಯತೆ ನೀಡಿ ಕನ್ನಡಿಗರ ಹೆಮ್ಮೆಯನ್ನು ಹೆಚ್ಚಿಸಿದವರು. ಗಾಯನದಲ್ಲಿ ಕೂಡ ತಮ್ಮ ಸುಮಧುರ ಕಂಠಸಿರಿಯಿಂದ ಶಾಶ್ವತವಾಗಿ ಉಳಿಯುವ ಗೀತೆಗಳನ್ನು ಕನ್ನಡಿಗರಿಗೆ ನೀಡಿದ್ದಾರೆ. ಕನ್ನಡಕ್ಕೋಸ್ಕರವೇ ಜೀವನ ಮುಡಿಪಾಗಿರಿಸಿದ ಡಾ.ರಾಜ್ ಗೋಕಾಕ್ ಚಳುವಳಿಗೆ ಜೀವ ತುಂಬಿ ಸರ್ಕಾರದ ಮನವೊಲಿಸಿ ಗೋಕಾಕ್ ವರದಿ ಜಾರಿಗೆ ಬರುವಂತೆ ಮಾಡಿದದವರು ಎಂದರು.

    ಚಿಕ್ಕಮಗಳೂರಿಗೂ ಅವರಿಗೂ ನಿಕಟ ಸಂಬಂಧವಿತ್ತು. ಅವರ ಬಹುತೇಕ ಚಿತ್ರಗಳು ಇಲ್ಲಿನ ನಿಸರ್ಗ ಸೌಂದರ್ಯದ ತಾಣಗಳಲ್ಲಿ ಸಾಕ್ಷಾತ್ಕಾರ, ಪ್ರೇಮದ ಕಾಣಿಕೆ, ಬಂಗಾರದ ಮನುಷ್ಯ, ಇತ್ಯಾದಿ ಚಿತ್ರಗಳ ಚಿತ್ರೀಕರಣವಾಗಿದ್ದವು ಎಂದು ಹೇಳಿದ ಅವರು, ವೀರಪ್ಪನ್ ಅಪಹರಣದಿಂದ ಕುಗ್ಗಿ ಹೋಗಿದ್ದ ಡಾ.ರಾಜ್ ನಂತರದಲ್ಲಿ ಆರು ವರ್ಷ ಬದುಕಿ ೨೦೦೬ ರ ಏ.೧೨ ರಂದು ನಮ್ಮನ್ನು ಅಗಲಿದರು. ಆದರೂ ಕನ್ನಡ ಇರುವವರೆಗೂ ನಮ್ಮ ಮನೆ-ಮನದಲ್ಲಿ ಅವರು ಶಾಶ್ವತವಾಗಿತ್ತಾರೆ ಎಂದರು.

    ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ, ಡಾ.ರಾಜ್‌ಕುಮಾರ್ ಅವರು ತಮ್ಮ ವಿಶಿಷ್ಟ ಪಾತ್ರಗಳು ಹಾಗೂ ಅಭಿನಯ ಪ್ರಬುದ್ಧತೆಯಿಂದ ನಮ್ಮನ್ನು ಕಾಡುತ್ತಾರೆ. ಅವರ ಅಭಿನಯವಾಗಲಿ, ಗೀತೆಗಳಾಗಲಿ ಜೀವನಕ್ಕೆ ಹತ್ತಿರವಾಗಿರುತ್ತವೆ. ರಾಜ್ ತಮ್ಮ ಪೌರಾಣಿಕ ಪ್ರಧಾನ ಪಾತ್ರಗಳು ಹಾಗೂ ಸಾಮಾಜಿಕ ಪಾತ್ರಗಳು, ಪ್ರೀತಿಪೂರಕವಾದ ಪಾತ್ರಗಳಿಂದ ಜನಮನದಲ್ಲುಳಿದವರು ಎಂದು ಹೇಳಿದರು.

    ಅಧ್ಯಕ್ಷತೆ ವಹಿಸಿದ್ದ ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ಡಾ.ರಾಜ್‌ಕುಮಾರ್ ಅವರು ಅವರಿಗಿದ್ದ ಗಾನಗಂಧರ್ವ ಬಿರುದಿಗೆ ಪೂರಕವಾಗಿ ಸರಸ್ವತಿಯ ವರಪುತ್ರರೇ ಆಗಿದ್ದರು. ಸಮಾಜಕ್ಕೆ ಆದರ್ಶಪ್ರಾಯರಾಗಿದ್ದ ಅವರಿಗೆ ಸಾಕಷ್ಟು ಬಿರುದುಗಳು ಬಂದಿವೆ. ಅವರ ಚಲನಚಿತ್ರಗಳಲ್ಲಿರುವ ನೈತಿಕತೆಗಳು ನಮಗೆ ಮತ್ತು ನಮ್ಮ ಮಕ್ಕಳಿಗೆ ಸ್ಫೂರ್ತಿದಾಯಕವಾಗಿದೆ ಎಂದರು.

    ಡಾ.ರಾಜ್ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷ ಕುಮಾರೇಗೌಡ ಮಾತನಾಡಿ, ಡಾ.ರಾಜ್‌ಕುಮಾರ್ ಅವರ ಸಾಕಷ್ಟು ಚಲನಚಿತ್ರಗಳ ಚಿತ್ರೀಕರಣಗಳು ನಡೆದಿವೆ. ಚಲನಚಿತ್ರ ರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರ ಎಂದು ಹೇಳಿದರು.

    ದಲಿತ ಸಂಘಟನೆಗಳ ಮುಖಂಡ ಕೆ.ಟಿ.ರಾಧಾಕೃಷ್ಣ ಮಾತನಾಡಿ, ಚಲನಚಿತ್ರಗಳಲ್ಲಿ ಲವ್‌ನಿಂದ ನೋವಿನವರೆಗೆ ಎಲ್ಲಾ ಪಾತ್ರಗಳಲ್ಲಿ ಅಭಿನಯಿಸಿದವರು. ಯಾವುದೇ ಮಾದಕ ವಸ್ತುಗಳ ಅಭ್ಯಾಸವಿಲ್ಲದವರು. ಮಹಿಳೆಯರನ್ನು ಗೌರವಿಸುವ ಮೌಲ್ಯಗಳು ಅವರ ಚಿತ್ರಗಳಲ್ಲಿರುತ್ತವೆ. ಈ ಎಲ್ಲ ಗುಣ ಲಕ್ಷಣಗಳಿಂದ ತಾವು ಪ್ರೇರಣೆ ಪಡೆದುದಾಗಿ ತಿಳಿಸಿದರು.

    ಕನ್ನಡ ಸೇನೆ ಅಧ್ಯಕ್ಷ ಪಿ.ಸಿ.ರಾಜೇಗೌಡ ಮಾತನಾಡಿ, ಡಾ.ರಾಜ್ ಅವರ ಬಗ್ಗೆ ಎಷ್ಟೇ ಮಾತನಾಡಿದರೂ ಅದು ಕಡಿಮೆಯೆ. ಅವರ ಅಭಿನಯವಾಗಲಿ, ಅವರ ಕಂಠಸಿರಿಯಾಗಲಿ ಅನುಪಮವಾದುದು ಎಂದರು. ಕನ್ನಡಸೇನೆ ಮುಖಂಡರಾದ ಹೆಚ್.ಎಸ್.ಲಕ್ಷ್ಮಣ ಮತ್ತಿತರರು ಮಾತನಾಡಿದರು.

    ಪತ್ರಕರ್ತ ಪಿ.ರಾಜೇಶ್, ಲೋಕೇಶ್ ಭಕ್ತನಕಟ್ಟೆ ಹಾಗೂ ದೇವರಾಜ್, ಡಾ.ರಾಜ್ ಅವರ ಗೀತೆಗಳ ಗಾಯನ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು. ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪುಟ್ಟನಾಯಕ ಅವರು ಡಾ.ರಾಜ್ ಅಭಿನಯದ ಚಲನಚಿತ್ರಗಳ ತುಣುಕು ಪ್ರದರ್ಶನಗಳನ್ನು ನೀಡಿ ರಂಜಿಸಿದರು.

    ಮುಖ್ಯ ಗ್ರಂಥಾಲಯಾಧಿಕಾರಿ ಜಿ.ಉಮೇಶ್ ಸ್ವಾಗತಿಸಿದರು. ಕಾರ್ಯಕ್ರಮ ನಿರೂಪಿಸಿದ ಗ್ರಂಥಾಲಯಾಧಿಕಾರಿ ಪ್ರಕಾಶ್ ಬೆಳವಾಡಿ ವಂದಿಸಿದರು. ಮುಖಂಡರಾದ ಹೆಚ್.ಪಿ.ಮಂಜೇಗೌಡ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಜೆ.ಮಂಜೇಗೌಡ, ಡಾ.ರಾಜ್ ಅಭಿಮಾನಿ ಸಂಘದ ಮುಖಂಡರು ಮತ್ತಿತರರು ಕಾರ್ಯಕಮದಲ್ಲಿದ್ದರು.

    ಸಮಾರಂಭಕ್ಕೆ ಮುನ್ನ ನಗರ ತಾಲ್ಲೂಕು ಕಚೇರಿಯಿಂದ ಡಾ.ರಾಜ್ ಅಭಿಮಾನಿಗಳ ಸಂಘ ಹಾಗೂ ಕನ್ನಡಪರ ಸಂಘಟನೆಗಳಿಂದ ಡಾ.ರಾಜ್ ಅವರ ಭಾವಚಿತ್ರಗಳ ಸಹಿತ ಕುವೆಂಪು ಕಲಾಮಂದಿರದವರೆಗೆ ಮೆರವಣಿಗೆ ನಡೆಯಿತು.

    Dr. Raj the uncrowned king of Kannada cinema for five decades

  • ಉಗ್ರರಿಗೆ ಪಾಠ ಕಲಿಸಲು ಪಿಓಕೆ ವಶಪಡಿಸಿಕೊಳ್ಳಿ

    ಉಗ್ರರಿಗೆ ಪಾಠ ಕಲಿಸಲು ಪಿಓಕೆ ವಶಪಡಿಸಿಕೊಳ್ಳಿ

    ಚಿಕ್ಕಮಗಳೂರು: ಇಡೀ ದೇಶವೇ ಕಣ್ಣೀರು ಸುರಿಸುವ ದಿನವಿದು. ಪ್ರವಾಸಿಗರ ಸ್ವರ್ಗ ಕಾಶ್ಮೀರದಲ್ಲಿ ರಕ್ತದೋಕುಳಿಯೇ ಹರಿದಿದ್ದು, ಹಿಂದುಗಳ ಮಾರಣ ಹೋಮ ನಡೆದಿದೆ. ಕಾಶ್ಮೀರಿ ಉಗ್ರರಿಗೆ ತಕ್ಕ ಪಾಠ ಕಲಿಸಲು ಕೂಡಲೇ ಪಿಓಕೆಯನ್ನು ವಶಪಡಿಸಿಕೊಳ್ಳಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ ಎಸ್‌ ಶೆಟ್ಟಿ ಒತ್ತಾಯಿಸಿದರು.

    ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಶ್ಮೀರಿ ಉಗ್ರರು ಹಿಂದೂ ಪ್ರವಾಸಿಗರ ಹೆಸರನ್ನು ಕೇಳಿ ಕೇಳಿ ಕೊಂದಿದ್ದಾರೆ. ಈ ಕೃತ್ಯದ ಹಿಂದೆ ಪಾಕಿಸ್ತಾನದ ಕುತಂತ್ರವು ಇರುವ ಸಾಧ್ಯತೆ ಇದೆ. ಹೀಗಾಗಿ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಲು ಪಿಓಕೆಯನ್ನು ಭಾರತ ವಶಕ್ಕೆ ಪಡೆಯಬೇಕು ಎಂದರು.

    ಕಾಶ್ಮೀರವನ್ನು ಆಜಾದ್ ಕಾಶ್ಮೀರ ಎಂದು ಕರೆಯುತ್ತೇವೆ. ಅದರಂತೆ ಪಿಓಕೆಯನ್ನು ಸಹ ವಶಪಡಿಸಿಕೊಂಡು ಸ್ವತಂತ್ರಗೊಳಿಸಬೇಕು. ಇದರೊಂದಿಗೆ ಭಾರತದಲ್ಲಿ ಅಡಗಿರುವ ಉಗ್ರರ ದಮನ ಮಾಡಬೇಕು. ಆರ್ಟಿಕಲ್ 370 ತೆಗೆದ ಮೇಲೆ ಕಾಶ್ಮೀರ ನಮ್ಮದು ಎಂದು ಹೇಳುವ ಧೈರ್ಯ ಬಂದಿದೆ. ಈ ಕಾರಣಕ್ಕಾಗಿಯೇ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ಹೋಗಲಾರಂಬಿಸಿದ್ದರು. ಇಲ್ಲಿಗೆ ಬರುವ ಪ್ರವಾಸಿಗರನ್ನು ತಡೆಯುವ ನಿಟ್ಟಿನಲ್ಲಿ ಉಗ್ರರು ಈ ಕೃತ್ಯಕ್ಕೆ ಕೈ ಹಾಕಿರುವ ಸಾಧ್ಯತೆ ಎದ್ದು ಕಾಣುತ್ತಿದೆ ಎಂದು ಅನುಮಾನ ವ್ಯಕ್ತಪಡಿಸಿದರು.

    ಕಾಶ್ಮೀರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಾಗ ಅಲ್ಲಿನ ಆರ್ಥಿಕತೆಯು ಪ್ರಬಲವಾಗುತ್ತದೆ. ಆಗ ಉಗ್ರ ಚಟುವಟಿಕೆಗಳಿಗೆ ಆಸ್ಪದ ಸಿಗುವುದಿಲ್ಲ. ಈ ಕಾರಣದಿಂದಾಗಿಯೇ ಹಿಂದು ಪ್ರವಾಸಿಗರ ಮೇಲೆ ದಾಳಿ ನಡೆದಿರುವ ಸಾಧ್ಯತೆ ಇದೆ. ಪಾಕಿಸ್ತಾನ ಹಾಗೂ ನಮ್ಮ ದೇಶದಲ್ಲಿರುವ ಉಗ್ರಸಂಘಟನೆಗಳ ಒಳಸಂಚಿನಿಂದ ಘಟನೆ ನಡೆದಿರಬಹುದು. ಪಾಕಿಸ್ತಾನದ ಉಗ್ರರು ಜಮ್ಮು ಕಾಶ್ಮೀರದಲ್ಲಿ ತಮ್ಮ ಕುಕೃತ್ಯವನ್ನು ನಿರಂತರವಾಗಿ ನಡೆಸುತ್ತಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಒತ್ತಾಯಿಸಿದರು.

    ಅನಂತನಾಗ್ ಜಿಲ್ಲೆಯಲ್ಲಿ ನಡೆದಿರುವ ಘಟನೆಗೆ ಸಂಬಂಧಪಟ್ಟಂತೆ ಉಗ್ರರಿಗೆ ತಕ್ಕ ಪಾಠ ಕಲಿಸದೇ ಇದ್ದಲ್ಲಿ ಪಾಕಿಸ್ತಾನಕ್ಕೂ ತಕ್ಕ ಉತ್ತರ ಕೊಟ್ಟಂತಾಗುವುದಿಲ್ಲ. ಹೀಗಾಗಿ ಭಾರತವನ್ನು ಕೆಣಕಿದರೆ ಪಾಕಿಸ್ತಾನದ ಸ್ಥಿತಿ ಏನಾಗುತ್ತದೆ ಎಂಬುದನ್ನು ತೋರಿಸಬೇಕು ಎಂದರು.

    ಉಗ್ರರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಏನೇ ನಿರ್ಧಾರ ಕೈಗೊಂಡರು ದೇಶದ ಜನರು ಅವರ ಬೆನ್ನಿಗೆ ನಿಲ್ಲಬೇಕು. ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ಉಗ್ರರ ವಿರುದ್ಧ ಸೂಕ್ತ ಕಾರ್ಯಾಚರಣೆ ನಡೆಸಿ ಮಟ್ಟ ಹಾಕಲಿದ್ದಾರೆ ಎಂಬ ನಂಬಿಕೆ ಇದೆ ಎಂದು ಹೇಳಿದರು.

    ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿದಂತೆ 28ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ದಾಳಿಯಲ್ಲಿ ಮೃತಪಟ್ಟ ಶಿವಮೊಗ್ಗದ ಮಂಜುನಾಥ್ ಕೊಪ್ಪ ಮೂಲದವರು. ಕೊಪ್ಪ ತಾಲೂಕು ಹಸಗೋಡು ಗ್ರಾಪಂ ವ್ಯಾಪ್ತಿಯ ಕುಣಿಮಕ್ಕಿ ಮೂಲದ ಮಂಜುನಾಥ್ ಎರಡು ದಶಕದ ಹಿಂದೆ ಶಿವಮೊಗ್ಗ ಹೋಗಿ ನೆಲೆಸಿದ್ದರು. ಉಗ್ರ ದಾಳಿಯಲ್ಲಿ ಮೃತಪಟ್ಟ ಕುಟುಂಬದವರ ಕಣ್ಣೀರಿನ ಭಾಗ ನಾವು ಆಗಿದ್ದೇವೆ. ಶಿವಮೊಗ್ಗದಲ್ಲಿ ನಡೆಯಲಿರುವ ಮಂಜುನಾಥ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಲಿದ್ದೇನೆ. ಬಳಿಕ ಉಗ್ರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಹೋರಾಟ ರೂಪಿಸುತ್ತೇವೆ ಎಂದರು

    Capture PoK to teach terrorists a lesson

  • ಆತ್ಮವಿಶ್ವಾಸದ ಜೊತೆಗೆ ಗೌರವ ಹೆಚ್ಚಿಸುವುದೇ ಸಂಸ್ಕೃತಿ

    ಆತ್ಮವಿಶ್ವಾಸದ ಜೊತೆಗೆ ಗೌರವ ಹೆಚ್ಚಿಸುವುದೇ ಸಂಸ್ಕೃತಿ

    ಚಿಕ್ಕಮಗಳೂರು: ಜೀವನದ ಒಂದು ಭಾಗವಾಗಿ ಆತ್ಮವಿಶ್ವಾಸದ ಜೊತೆಗೆ ಗೌರವ ಹೆಚ್ಚಿಸುವುದೇ ಸಂಸ್ಕೃತಿ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಅಭಿಪ್ರಾಯಿಸಿದರು.

    ಅವರು ಇಂದು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇವರುಗಳ ಸಂಯುಕ್ತಾಶ್ರಯದಲ್ಲಿ ಮಹಿಳಾ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿದ್ದ ಜಾನಪದ ಉತ್ಸವ-೨೦೨೫ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ವೈವಿಧ್ಯಮಯ ಜೀವನದ ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಂಡು ಭಾರತದ ಸಂಸ್ಕಾರ ಇಡೀ ವಿಶ್ವಕ್ಕೆ ಬಹಳ ದೊಡ್ಡ ಪಾತ್ರ ವಹಿಸಿ ಮಾದರಿಯಾಗಿದೆ ಎಂದು ಹೇಳಿದರು.

    ನಾವು ಸಾಂಪ್ರದಾಯಿಕವಾಗಿ ಆಚರಿಸುವ ಪ್ರತಿಯೊಂದು ಹಬ್ಬಗಳು ಸಂಸ್ಕೃತಿಯನ್ನು ಜೀವಂತವಾಗಿ ಉಳಿಸಿವೆ. ಭಾರತದಂತ ಜಾತ್ಯಾತೀತ ರಾಷ್ಟ್ರದಲ್ಲಿ ವಿವಿಧ ಧರ್ಮಗಳ ಸಮುದಾಯದವರು ಆಚರಿಸುವ ಹಬ್ಬಗಳು ಜೊತೆಗೆ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವ ರೀತಿ ಸಂಸ್ಕೃತಿಯನ್ನು ಬಿಂಬಿಸುತ್ತಿವೆ ಎಂದು ತಿಳಿಸಿದರು.

    ರೈತರ ಜೀವನಾಡಿಯಾಗಿರುವ ಭತ್ತ, ರಾಗಿ, ಏಲಕ್ಕಿ, ಅಡಿಕೆ, ಕಾಫಿ, ತೆಂಗು, ಮೆಣಸು ಜೋಡಿಸಿ ಸಿಂಗರಿಸಿರುವುದರ ಜೊತೆಗೆ ಕಾಲೇಜಿನ ಆವರಣದಲ್ಲಿ ವಿವಿಧ ರೀತಿಯ ಚಿತ್ರಾಕಾರದ ರಂಗೋಲಿಯನ್ನು ಬಿಡಿಸಿ ಕಂಗೊಳಿಸುವಂತೆ ಮಾಡಿದ್ದೀರಿ ಎಂದು ಶ್ಲಾಘಿಸಿದರು.

    ಪೂರ್ವಜರು ಬಳಸುತ್ತಿದ್ದ ಸೇರು, ಪಾವು, ಚವೆ ಮಣಿ, ಬುಗುರಿ, ಕಡಗೋಲು ಮುಂತಾದ ಎಲ್ಲಾ ವಸ್ತುಗಳನ್ನು ಪ್ರದರ್ಶನಕ್ಕಿಟ್ಟಿರುವುದು ಆಧುನಿಕ ಜಗತ್ತಿಗೆ ಪರಿಚಯಿಸಲು ಸಹಕಾರಿಯಾಗಿರುವುದರ ಜೊತೆಗೆ ಜಾನಪದ ಉತ್ಸವಕ್ಕೆ ಮೆರಗು ನೀಡಿದೆ ಎಂದು ಹೇಳಿದರು.

    ರಾಷ್ಟ್ರಕವಿ ಕುವೆಂಪು ಜನಿಸಿದ ಕವಿಶೈಲಕ್ಕೆ ವಿದ್ಯಾರ್ಥಿಗಳಾದ ನೀವು ಹೋಗಲು ವಾಹನ ವ್ಯವಸ್ಥೆ ಮಾಡಲು ಭರವಸೆ ನೀಡಿದ ಅವರು, ಕುವೆಂಪುರವರ ಮನೆ ಮುಂದೆ ಬರೆದಿರುವ ಮನೆಮನೆ ನಾನು ಹುಟ್ಟಿದ ಮನೆ, ಮನೆಮನೆ ನಾನು ಆಡಿ ಬೆಳೆದ ಮನೆ, ನಡೆದಾಡುವಾಗ ಎತ್ತಿ ಬೆಳೆಸಿದ ಮನೆ, ಬುಗುರಿ, ಗೋಲಿ ಆಡಿದ ಮನೆ ಎಂದು ವರ್ಣಿಸಲಾಗಿದೆ ಎಂದು ಬಣ್ಣಿಸಿದರು.

    ಜಾನಪದ ಸೊಗಡು, ಜಾನಪದ ಗೀತೆ, ಜಾನಪದ ಆಟಗಳು ಸರಳವಾದ ಕೆಲಸದ ಸಮಯದಲ್ಲಿ ತಾಯಂದಿರ ಬಾಯಿಂದ ಬಂದ ನುಡಿಮುತ್ತುಗಳು ಎಂದ ಶಾಸಕರು, ಕಬ್ಬಡ್ಡಿ, ಲಗೋರಿ, ಕುಂಟೆಬಿಲ್ಲೆ, ಖೋಖೋ, ಕೂಸುಮರಿ ಮುಂತಾದ ಆಟಗಳು ಭಾರತದ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಬಿಂಬಿಸುತ್ತವೆ ಎಂದು ಹೇಳಿದರು.

    ಮೊದಲು ತಾವು ಜನಿಸಿದ ಧರ್ಮವನ್ನು ಗೌರವಿಸಬೇಕು. ಇನ್ನೊಂದು ಸಮುದಾಯದ ಧರ್ಮವನ್ನು ದ್ವೇಷ ಮಾಡದೇ ಇರುವುದು ಮುಖ್ಯ ಎಂದು ತಿಳಿಸಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ| ಕೆ.ದಾಮೋದರ್‌ಗೌಡ ವಹಿಸಿ ಮಾತನಾಡಿದರು. ನಗರಸಭೆ ಸದಸ್ಯ ಶಾದಬ್ ಆಲಂಖಾನ್, ಮಹೇಶ್ವರಪ್ಪ, ಮೂಡಲಗಿರಿಯಪ್ಪ, ಡಾ. ಶ್ರೀನಿವಾಸ್, ಹೇಮ ಮಾಲಿನಿ ಸಿ.ಎನ್, ದೀಕ್ಷಿತ್ ಕುಮಾರ್, ಮತ್ತು ಬೋಧಕರು, ಕಾಲೇಜು ಸಿಬ್ಬಂದಿ ಉಪಸ್ಥಿತರಿದ್ದರು. ಹಂಪಾಪುರದಿಂದ ಎತ್ತಿನ ಗಾಡಿಯನ್ನು ನಿಖಿಲ್ ಸಹೋದರರು ತಂದಿದ್ದು ವಿಶೇಷ ಗಮನ ಸೆಳೆಯಿತು.

    Culture is about increasing self-confidence and respect.

  • ಲೋಕಾಯುಕ್ತ ತನಿಖೆಗೆ ಸಂಪೂರ್ಣ ಸಹಕಾರ ಉಸ್ತುವಾರಿ ಸಚಿವ ಜಾರ್ಜ್

    1. ಇಂಧನ ಇಲಾಖೆಯ ಸ್ಮಾರ್ಟ್ ಮೀಟರ್ ಖರೀದಿಯಲ್ಲಿ ಅವ್ಯವಹಾರ ನಡೆದಿದ್ದು ಇದರಲ್ಲಿ ಸಚಿವ ಜಾರ್ಜ್ ಅವರ ಪಾತ್ರವಿದೆ ಎಂದು ಬಿಜೆಪಿ ಅಶ್ವತ್ ನಾರಾಯಣ್ ಲೋಕಾಯುಕ್ತಕ್ಕೆ ದೂರು ನೀಡಿದ್ದು ಒಳ್ಳೆಯ ಕಾರ್ಯ ಪ್ರತಿ ಬಾರಿ ಆರೋಪ ಮಾಡಿ ದೂರ ಸರಿಯುತ್ತಿದ್ದ ಬಿಜೆಪಿ ಯವರು ಇದೀಗ ದೂರು ನೀಡಿರುವುದು ಒಳ್ಳೆಯದು ಎಂದು ವ್ಯಂಗ್ಯವಾಡಿದರು ಲೋಕಾಯುಕ್ತ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇನೆ ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಹಗರಣದ ವಿಚಾರದಲ್ಲಿ ತಾರ್ಕಿಕ ಅಂತ್ಯ ಕಾಣಬೇಕು ಎಂಬುದು ನಮ್ಮ ಆಶಯ ಎಂದರು

      Oplus_131072
  • ಸಹಕಾರ ಸಂಸ್ಥೆಗಳು ರಾಜಕೀಯ ಮುಕ್ತವಾಗಿರಲಿ

    ಸಹಕಾರ ಸಂಸ್ಥೆಗಳು ರಾಜಕೀಯ ಮುಕ್ತವಾಗಿರಲಿ

    ಚಿಕ್ಕಮಗಳೂರು: ಯಾವುದೇ ಸಹಕಾರ ಸಂಸ್ಥೆಗಳು ರಾಜಕೀಯ ಮುಕ್ತವಾಗಿ ಜಾತ್ಯತೀತ ಹಾಗೂ ಪಕ್ಷಾತೀತವಾಗಿ ಕಾರ್ಯ ನಿರ್ವಹಿಸಿ ಆಡಳಿತ ಮಂಡಳಿ ಆಯಾ ಸಂಸ್ಥೆಗಳನ್ನು ಆರ್ಥಿಕವಾಗಿ ಲಾಭದ ಹಾದಿಗೆ ಕೊಂಡೊಯ್ಯಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದರು.
    ನಗರದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಭಾಂಗಣದಲ್ಲಿ ಇಂದು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ, ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಮತ್ತಿತರ ಸಹಕಾರ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
    ಸಾರ್ವಜನಿಕರ ಅನುಕೂಲಕ್ಕಾಗಿ  ಜಿಲ್ಲೆಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೊಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ನೋಂದಾಯಿಸಿ ಅವುಗಳನ್ನು ಸರ್ಕಾರದ ನಿಯಮಾನುಸಾರ ಆರ್ಥಿಕ ಶಿಸ್ತು ಕಾಪಾಡಿಕೊಂಡು ರೈತರಿಗೆ ಉಪಯೋಗ ಆಗುವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದ ಅವರು, ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಟ್ಟಣ ಸಹಕಾರ ಬ್ಯಾಂಕ್‌ಗಳು ಹಣಕಾಸಿಗೆ ಸಂಬಂಧಪಟ್ಟ ಬಾಕಿ ಇರುವ ಪ್ರಕರಣಗಳನ್ನು ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
    ೨೦೨೫ ಮಾರ್ಚ್ ೩೧ ರ ಅಂತ್ಯಕ್ಕೆ ಬಾಕಿ ಇರುವ ಅದಿಭಾರ ಅರ್ಜಿ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಹಣವನ್ನು ವಸೂಲಿ ಮಾಡಲು ಸಂಸ್ಥೆಗಳ ಅಧಿಕಾರಿಗಳು, ಆಡಳಿತ ಮಂಡಳಿ ಕ್ರಮ ಕೈಗೊಂಡು ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಹೇಳಿದರು.
    ಸಹಕಾರ ಕೇಂದ್ರ ಬ್ಯಾಂಕ್ ಹಾಗೂ ಸಹಕಾರ ಇಲಾಖೆಯ ಅಧಿಕಾರಿಗಳು ಸಮನ್ವಯತೆ ಸಾಧಿಸಿ ಆರ್ಥಿಕವಾಗಿ ಹಿನ್ನಡೆಯಾಗಿರುವ ಸಹಕಾರಿ ಸಂಸ್ಥೆಗಳನ್ನು ಗಮನಿಸಿ ಅವುಗಳನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು. ಮೇಲ್ವಿಚಾರಕರು, ಅಭಿವೃದ್ಧಿ ಅಧಿಕಾರಿಗಳು  ಆಗಿಂದಾಗ್ಗೆ ಹೆಚ್ಚು ಹೆಚ್ಚು ಸಭೆಗಳನ್ನು ನಡೆಸಿ ಸಹಕಾರ ಸಂಸ್ಥೆಗಳಲ್ಲಿ ನಡೆಯುವ ಆರ್ಥಿಕ ವ್ಯವಹಾರಗಳನ್ನು ಗಮನಿಸಿ ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲು ತಿಳಿಸಬೇಕು. ಯಶಸ್ವಿನಿ ಯೋಜನೆ ಶೇ.೧೦೦ ರಷ್ಟು ಗುರಿ ಸಾಧಿಸಬೇಕು ಎಂದ ಸಚಿವರು, ಪ್ರತೀ ವರ್ಷ ಎಲ್ಲ ಬ್ಯಾಂಕ್, ಸಂಘಗಳ ಲೆಕ್ಕಪರಿಶೋಧನೆ ನಡೆಸಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು.
    ಹಣಕಾಸು ವಿಚಾರದಲ್ಲಿ ಡಿಸಿಸಿ ಬ್ಯಾಂಕ್‌ಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಕಾಲ ಕಾಲಕ್ಕೆ ನೀಡುವ ರೈತರ ಉಪಯುಕ್ತ ಯೋಜನೆಗಳನ್ನು ಸರಿಯಾದ ಸಮಯಕ್ಕೆ ಅರ್ಹ ಫಲಾನುಭವಿಗಳಿಗೆ ನೀಡಬೇಕು. ರಾಜ್ಯ ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆಯನ್ನು ಸಮರ್ಪಕವಾಗಿ ಜಾರಿ ಮಾಡಬೇಕು. ಅದೇ ರೀತಿ ಕಾನೂನು ಇತಿಮಿತಿಯನ್ನು ಅರಿತು ವಸೂಲಿ ಕ್ರಮಗಳನ್ನು ಕೈಗೊಳ್ಳಬೇಕು. ಲೆಕ್ಕಪತ್ರಗಳ ಮಾಹಿತಿಗಳನ್ನು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಸೈಬರ್ ಅಪರಾಧಗಳು ನಡೆಯದಂತೆ ಎಚ್ಚರ ವಹಿಸಿ ಕೆಲಸ ಮಾಡಬೇಕು ಎಂದರು.
    ಇದಕ್ಕೂ ಮುನ್ನ ಸಚಿವರನ್ನು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಉಪಾಧ್ಯಕ್ಷರಾದ ಹೆಚ್.ಎಂ.ಸತೀಶ್ ಹಾಗೂ ನಿರ್ದೇಶಕರುಗಳು ಸಚಿವರನ್ನು ಗೌರವಿಸಿ ಅಭಿನಂದಿಸಿದರು.
    ಜಿಲ್ಲೆಯ ಹಿರಿಯ ಸಹಕಾರಿ ಬಿ.ಸಿ.ಲೋಕಪ್ಪಗೌಡ ಅವರು ಮಾತನಾಡಿ, ಸಹಕಾರ ಕೇಂದ್ರ ಬ್ಯಾಂಕ್ ಕೆಲಸ ಹಾಗೂ ಇರುವ ಸಮಸ್ಯೆಗಳನ್ನು ಸಚಿವರ ಮುಂದೆ ಹಂಚಿಕೊಂಡರು. ಅವುಗಳಲ್ಲಿ ನಬಾರ್ಡ್ ಯೋಜನೆಯಲ್ಲಿ ಕೃಷಿ ಕ್ಷೇತ್ರಕ್ಕೆ ಶೇ. ೫೮ ರಷ್ಟು ಮೊತ್ತ ಕಡಿಮೆಯಾಗಿ ಹಲವು ಗೊಂದಲಗಳು ತಲೆದೋರಿವೆ. ಅದರ ನಿವಾರಣೆಗೆ ಕ್ರಮ ಕೈಗೊಳ್ಳಬೇಕು. ಡಿಸಿಸಿ ಬ್ಯಾಂಕ್ ಇಂದು ೧೪೨೬.೭೯ ಕೋಟಿ ಹಣ ಠೇವಣಿ ಹೊಂದಿದ್ದರೆ, ೧೩೪೮.೮೧ ಕೋಟಿ ಸಾಲ ವಿತರಣೆ ಮಾಡಿದೆ. ಜಿಲ್ಲೆಯ ರೈತರ, ಗ್ರಾಹಕರ ವಿಶ್ವಾಸ, ನಂಬಿಕೆ ಗಳಿಸಿದೆ. ಬ್ಯಾಂಕ್‌ನ ಆಡಳಿತ ಮಂಡಳಿ ಮಾರ್ಗದರ್ಶನದಿಂದ ನಿರಂತರ ಲಾಭ ಗಳಿಸುತ್ತಾ ಪ್ರಸ್ತುತ `ಎ’ ಗ್ರೇಡ್‌ನಲ್ಲಿ ಗುರುತಿಸಿಕೊಂಡು ಪ್ರಸಕ್ತ ಸಾಲಿನಲ್ಲಿ ೬.೫೮ ಕೋಟಿ ರೂ.ಗಳ ಲಾಭ ಗಳಿಸಿದೆ ಎಂದು ತಿಳಿಸಿದರು.
    ಶಾಸಕರಾದ ಟಿ.ಡಿ.ರಾಜೇಗೌಡ, ಹೆಚ್.ಡಿ.ತಮ್ಮಯ್ಯ, ನಿರ್ದೇಶಕರುಗಳಾದ ರಾಮಸ್ವಾಮಿ, ಹಳಸೆ ಶಿವಣ್ಣ, ರಾಮಜ್ಜ, ಪರಮೇಶ್ವರಪ್ಪ, ಬಸವರಾಜಪ್ಪ ಮತ್ತಿತರ ನಿರ್ದೇಶಕರುಗಳು, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಜಿ.ಎಸ್.ರಮಣ್ಣ ರೆಡ್ಡಿ, ಮಹೇಶ್, ಸಹಕಾರ ಸಂಘಗಳ ಉಪ ನಿಬಂಧಕ ತೇಜಸ್ವಿನಿ, ಬ್ಯಾಂಕ್ ವ್ಯವಸ್ಥಾಪಕ ತಿಮ್ಮಯ್ಯ ಹಾಗೂ ಹಿರಿಯ ಅಧಿಕಾರಿಗಳು, ವಿವಿಧ ಸಹಕಾರ ಬ್ಯಾಂಕ್‌ಗಳ  ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತಿತರರು ಸಭೆಯಲ್ಲಿದ್ದರು.
    Cooperatives should be free from politics.
  • ಮೊಬೈಲ್ ಗ್ರಾಹಕರಿಗೆ ಅಡೆತಡೆಗಳಿಲ್ಲದೇ ಸುಲಲಿತ ಸಿಗ್ನಲ್

    ಮೊಬೈಲ್ ಗ್ರಾಹಕರಿಗೆ ಅಡೆತಡೆಗಳಿಲ್ಲದೇ ಸುಲಲಿತ ಸಿಗ್ನಲ್

    ಚಿಕ್ಕಮಗಳೂರು:  ಮೊಬೈಲ್ ಗ್ರಾಹಕರಿಗೆ ಅಡೆತಡೆಗಳಿಲ್ಲದೇ ಸುಲಲಿತವಾಗಿ ಸಿಗ್ನಲ್ ಲಭಿಸುವ ಸದುದ್ದೇಶದಿಂದ ನೂತನವಾಗಿ ಬಿ.ಎಸ್.ಎನ್.ಎಲ್. ಟವರ್ ನಿರ್ಮಿಸಿ ಗ್ರಾಮಸ್ಥರಿಗೆ ಅನು ಕೂಲ ಮಾಡಲಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟಾ ಶ್ರೀನಿವಾಸ್ ಪೂ ಜಾರಿ ಹೇಳಿದರು.

    ಮೂಡಿಗೆರೆ ತಾಲ್ಲೂಕಿನ ಬಾಳೂರು ಹೋಬಳಿಯ ಆಲೇಖಾನ್ ಹೊರಟ್ಟಿ ಗ್ರಾಮದಲ್ಲಿ ಸೋಮವಾರ ೮೦ ಲಕ್ಷ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಿಸಿರುವ ಬಿಎಸ್‌ಎನ್‌ಎಲ್ ಸಂಸ್ಥೆಯ ಸೆಟಲೈಟ್ ಬೇಸಿಕ್ ಮೊ ಬೈಲ್ ಟವರ್ ಸಾರ್ವಜನಿಕರಿಗೆ ಸಮರ್ಪಣೆಗೊಳಿಸಿ ಅವರು ಮಾತನಾಡಿದರು.

    ರಾಜ್ಯದಲ್ಲಿ ಮೊಟ್ಟಮೊದಲ ಬಾರಿಗೆ ಹೊರಟ್ಟಿ ಗ್ರಾಮಕ್ಕೆ ಸೆಂಟಲೈಟ್ ಟವರ್ ನಿರ್ಮಾಣಗೊಂಡಿದೆ. ಇದರಿಂದ ಮೊಬೈಲ್ ಗ್ರಾಹಕರಿಗೆ ಸಿಗ್ನಲ್‌ಗಳು ಅಡೆತಡೆಗಳಿಲ್ಲದೇ ಮಾತುಕತೆ ಮಾಡಬಹುದು. ಈ ಹಿಂ ದಿನ ಸಂಸದರು ಈ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಇದೀಗ ಪೂರ್ಣಗೊಳಿಸಿ ಸಮರ್ಪಿಸಿದ್ದೇವೆ ಎಂದು ತಿಳಿಸಿದರು.

    ಹೊರಟ್ಟಿ ಬೆಟ್ಟದ ತುದಿಯಲ್ಲಿರುವ ಗ್ರಾಮವಾದ ಹಿನ್ನೆಲೆ ಮಾಲಿನ್ಯ ರಹಿತ ಹಾಗೂ ಕಲಶವಿಲ್ಲದ ಪರಿ ಸರವನ್ನು ಹೊಂದಿದೆ. ಆಧುನಿಕತೆ ಕಡಿಮೆಯಿದ್ದರೂ ಹಚ್ಚಹಸಿರಿನಂದ ಸ್ವರ್ಗದಂತೆ ಕಂಗೊಳಿಸುತ್ತಿದ್ದು ಮುಂದಿನ ದಿನಗಳಲ್ಲಿ ಆದ್ಯತೆಗನುಸಾರ ಮೂಲಭೂತ ಸೌಕರ್ಯಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.

    ಬಿಜೆಪಿ ಮುಖಂಡ ದೀಪಕ್‌ದೊಡ್ಡಯ್ಯ ಮಾತನಾಡಿ ಚುನಾವಣೆ ಮುನ್ನ ಒಂದು ಪಕ್ಷಕ್ಕೆ ಸೀಮಿತರಾಗಿ ರುತ್ತೇವೆ. ಗೆಲುವಿನ ಬಳಿಕ ಸರ್ವಜನರ ಅಭಿವೃದ್ದಿಗೆ ಶ್ರಮಿಸಬೇಕು. ಆ ಸಾಲಿನಲ್ಲಿ ಸಂಸದರು ಜಿಲ್ಲೆಯಾದ್ಯಂ ತ ಪ್ರವಾಸ ಕೈಗೊಂಡು ಕೇಂದ್ರ ಸರ್ಕಾರದ ಸವಲತ್ತನ್ನು ಭೇದಭಾವಿಲ್ಲದೇ ಪೂರೈಸುತ್ತಿದ್ದಾರೆ ಎಂದು ತಿಳಿ ಸಿದರು.

    ಈ ಸಂದರ್ಭದಲ್ಲಿ ಬಾಳೂರು ಗ್ರಾ.ಪಂ. ಅಧ್ಯಕ್ಷ ಮಂಜುನಾಥ್, ಸದಸ್ಯ ಸಂದೀಪ್, ಮೂಡಿಗೆರೆ ಬಿಜೆ ಪಿ ಮಂಡಲ ಅಧ್ಯಕ್ಷ ಗಜೇಂದ್ರ, ಕಡವಂತಿ ಗ್ರಾ.ಪಂ. ಸದಸ್ಯ ವಿನೋದ್ ಬೊಗಸೆ, ಮುಖಂಡರುಗಳಾದ ಪರೀಕ್ಷಿತ್‌ಗೌಡ, ಭರತ್, ಮಂಜು ಹಾಗೂ ಗ್ರಾಮಸ್ಥರು ಹಾಜರಿದ್ದರು.

    Smooth signal without interruptions for mobile customers

  • ವಿಜೃಂಭಣೆ ಶ್ರೀದೇವಮ್ಮ ದೇವಿ ರಥೋತ್ಸವ.

    1. ಅರಸೀಕೆರೆ ತಾಲೂಕ್ ಟಿ,ಕೋಡಿಹಳ್ಳಿ ಗ್ರಾಮದ ಶ್ರೀ ದೇವಮ್ಮ ದೇವಿ ಮಹಾ ದಿವ್ಯ ರಥೋತ್ಸವ ಭಾನುವಾರ ಅತ್ಯಂತ ವಿಜೃಂಭಣೆಯಿಂದ ನೆರವೆರಿತು.
      ತಳಿರು ತೋರಣ ವಿವಿಧ ಹೂವುಗಳಿಂದ ವಿಶೇಷವಾಗಿ ಅಲಂಕರಿಸಿದ ರಥದಲ್ಲಿ ಗ್ರಾಮದ ಶ್ರೀ ದೇವಮ್ಮ ದೇವಿ,ಹಾಗೂ ತಳಲೂರು ಗ್ರಾಮದ ಬನ್ನಿಮಹಾಕಾಳಿ ಅಮ್ಮನವರನ್ನು ಕೂರಿಸಿ ಗ್ರಾಮದ ಧೂತರಾಯಸ್ವಾಮಿ,ಚಲುವರಾಯಸ್ವಾಮಿ,ಕೆಂಚಯರಾಯಸ್ವಾಮಿ.ದೇವರುಗಳ ಸಮ್ಮುಖದಲ್ಲಿ ಸಾವಿರಾರು ಭಕ್ತರು ಜಯಘೋಷದೊಂದಿಗೆ ರಥವನ್ನು ಎಳೆದರು.
      ರಥೋತ್ಸವಕ್ಕೂ ಮುನ್ನ ದೇವಿಯವರ ಮಧುವಣಿಗೆಶಾಸ್ತ್ರ,ಕಂಕಣ ಬಂಧನ,ಅಮ್ಮನವರಿಗೆ,ರುದ್ರಾಭಿಷೇಕ,ಧ್ವಜಾರೋಹಣ,ಕಳಸಾರೋಹಣ,
      ಸೂರ್ಯಮಂಡಲೋತ್ಸವ ಸೇರಿದಂತೆ ಹಲವು ಧಾರ್ಮಿಕ ವಿಧಿವಿಧಾನಗಳು ಜರುಗಿದವು.
      ಭಕ್ತರು ರಥದ ಗಾಲಿಗೆ ತೆಂಗಿನಕಾಯಿ ಹೊಡೆಯುವುದು, ರಥದ ಗಾಲಿಗೆ ಎಣ್ಣೆ ಹಚ್ಚುವ ಮೂಲಕ ಹರಕೆ ತೀರಿಸಿದರು.
      ರಥದ ಕಳಸಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಕೋರಿಕೆ ಹಿಡೆರುವಂತೆ ದೇವರಲ್ಲಿ ಪ್ರಾರ್ಥಿಸಿದ್ದು ವಿಶೇಷವಾಗಿತ್ತು.
      ಬಂದಂತಹ ಭಕ್ತಾಧಿಗಳಿಗೆ ಪಾನಕ ಫಲಹಾರ ಅನ್ನಸಂತರ್ಪಣೆ ಕಾರ್ಯ ನೆರವೆರಿತು.

     

  • ಸದೃಢ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ

    ಸದೃಢ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ

    ಚಿಕ್ಕಮಗಳೂರು: ಸದೃಢ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ. ಶಿಬಿರದಲ್ಲಿ ಪಾಲ್ಗೊಂಡು ಸದೃಢ ದೇಹ ಮತ್ತು ಮನಸ್ಸನ್ನು ಹೊಂದಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ|ವಿಕ್ರಮ್ ಅಮಟೆ ಮಕ್ಕಳಿಗೆ ಕಿವಿಮಾತು ಹೇಳಿದರು.

    ಭಾನುವಾರ ನಗರದ ಪೊಲೀಸ್ ಮೀಸಲು ಪಡೆ ಆಟದ ಮೈದಾನದಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಆಯೋಜಿಸಿರುವ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಪೊಲೀಸ್ ಇಲಾಖೆಯಿಂದ ೧೦ ದಿನಗಳ ಕಾಲ ಬೇಸಿಗೆ ಶಿಬಿರವನ್ನು ಆಯೋಜಿಸಿದ್ದು, ಶಿಬಿರದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ವಿವಿಧ ಆಟೋಟ ಸೇರಿದಂತೆ ಇತರೆ ಚಟುವಟಿಕೆಗಳನ್ನು ಹಮ್ಮಿಕೊಳ್ಳ ಲಾಗಿದೆ ಎಂದರು.

    ಶಿಬಿರದಲ್ಲಿ ವಿವಿಧ ಆಟೋಟಗಳ ಜತೆಗೆ ಶೈಕ್ಷಣಿಕ ಪ್ರವಾಸ, ಹಾಲು ಉತ್ಪಾದನಾ ಕೇಂದ್ರ, ಕಾಫಿ ಎಸ್ಟೇಟ್, ಲೈಫ್‌ಲೈನ್ ಇಂಡಸ್ಟಿçà ಹಾಗೂ ಬೇಲೂರು, ಹಳೇಬೀಡಿಗೆ ಪ್ರವಾಸ ಕರೆದೊಯ್ಯಲಾಗುವುದು ಎಂದ ಅವರು, ಮಕ್ಕಳು ಬೆಳಿಗ್ಗೆ ೧೦ಗಂಟೆಯಿAದ ಮಧ್ಯಾಹ್ನ ೧ಗಂಟೆಯವರೆಗೂ ಶಿಬಿರದಲ್ಲಿ ಪಾಲ್ಗೊಂಡು ಉತ್ಸಹದಿಂದ ಇಲ್ಲಿ ನಡೆಯುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು.

    ವಿಷಯ ತಜ್ಞರು ಉಪನ್ಯಾಸ ನೀಡಲಿದ್ದಾರೆ. ಯೋಗ ತರಬೇತಿದಾರರು ಯೋಗ ತಿಳಿಸಿಕೊಡಲಿದ್ದಾರೆ. ಹಾಗೇ ರಂಗ ತರಬೇತಿದಾ ರರು ರಂಗ ಕಲೆಯ ಬಗ್ಗೆ ಕಲಿಸಿಕೊಡಲಿದ್ದಾರೆ. ವೈದ್ಯರು ಶಿಬಿರಕ್ಕೆ ಆಗಮಿಸಿ ಪ್ರಥಮ ಚಿಕತ್ಸೆ ಎಂದರೇನು ಎನ್ನುವ ವಿಚಾರಗಳನ್ನು ತಿಳಿಸಿಕೊಡಲಿದ್ದಾರೆ ಹೀಗೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

    ಶಿಬಿರದಲ್ಲಿ ಪಾಲ್ಗೊಂಡಿರುವ ಮಕ್ಕಳು ತನ್ನ ಸ್ನೇಹಿತರನ್ನು ಅಕ್ಕಪಕ್ಕದಲ್ಲಿನ ಮಕ್ಕಳನ್ನು ಶಿಬಿರಕ್ಕೆ ಕರೆತಂದು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು. ಪ್ರತಿದಿನ ನಡೆಯುವ ಇವೆಂಟ್‌ನಲ್ಲಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ನೀಡಲಾಗುವುದು ಎಂದ ಅವರು, ಶಿಬಿರ ಆಯೋಜಿಸುವ ಉದ್ದೇಶ ಬೇಸಿಗೆ ರಜೆಯಲ್ಲಿ ಮಕ್ಕಳು ಬಹುತೇಕ ಮಕ್ಕಳು ಶಿಬಿರಗಳಿಗೆ ಹೋಗುತ್ತಾರೆ. ಆದರೆ, ಪೊಲೀಸ್ ಸಿಬ್ಬಂದಿ ಮಕ್ಕಳು ಸೇರಿದಂತೆ ಇತರೆ ಉದ್ಯೋಗಿಗಳ ಮಕ್ಕಳು ಶಿಬಿರಕ್ಕೆ ಹೋಗಲು ಸಾಧ್ಯವಾಗುವುದಿಲ್ಲ. ಅಂತವರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶಿಬಿರ ಆಯೋಜಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಸಿಬ್ಬಂದಿಗಳು, ಮಕ್ಕಳು ಹಾಗೂ ಪೋಷಕರು ಇದ್ದರು.

    A strong mind resides in a strong body.

  • ಏ.26ರೊಳಗೆ ಬಾಲ್ಯ ವಿವಾಹ ನಿಷೇಧದ ಸಭೆ ನಡೆಸಲು ಸೂಚನೆ

    ಏ.26ರೊಳಗೆ ಬಾಲ್ಯ ವಿವಾಹ ನಿಷೇಧದ ಸಭೆ ನಡೆಸಲು ಸೂಚನೆ

    ಚಿಕ್ಕಮಗಳೂರು: ಅಕ್ಷಯ ತೃತೀಯ ದಿನವಾದ ಏ.೩೦ ರಂದು ಬಾಲ್ಯ ವಿವಾಹಗಳು ನಡೆಯುವ ಸಾಧ್ಯತೆ ಇರುವುದರಿಂದ ಬಾಲ್ಯ ವಿವಾಹ ನಿಷೇಧಕ್ಕೆ ಸಂಬಂಧಿಸಿದಂತೆ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಏ.೨೬ರೊಳಗೆ ಸಭೆ ಆಯೋಜಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್ ಸೂಚಿಸಿದರು.

    ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದ ಕೆಸ್ವಾನ್‌ನಲ್ಲಿ ಶನಿವಾರ (ಏ.೧೯) ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಜೊತೆ ನಡೆಸಿದ ವೀಡಿಯೋ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ಜಿಲ್ಲೆಯ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಮಕ್ಕಳ ರಕ್ಷಣಾ ಸಮಿತಿ ಬಗ್ಗೆ ಪರಿಶೀಲನೆ ಮಾಡುವುದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಬಾಲ್ಯ ವಿವಾಹ ನಿಷೇಧದ ಬಗ್ಗೆ ಅರಿವು ಕಾರ್ಯಕ್ರಮ ಹಾಗೂ ಐ.ಇ.ಸಿ. ಚಟುವಟಿಕೆಗಳನ್ನು ಕಡ್ಡಾಯವಾಗಿ ಮಾಡಿಸುವುದು, ಪೊಲೀಸ್ ಠಾಣೆಗಳಲ್ಲಿ ತೆರೆದ ಮನೆ ಕಾರ್ಯಕ್ರಮಗಳನ್ನು ಹೆಚ್ಚಿಸುವಂತೆ ಸೂಚನೆ ನೀಡಿದರು.

    ಎಲ್ಲಾ ಪ್ರಾಥಮಿಕ, ಪ್ರೌಢ ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ವಾರ್ಷಿಕವಾಗಿ ಎರಡು ಅರಿವು ಕಾರ್ಯಕ್ರಮಗಳನ್ನು ಆಯೋಜಿಸುವುದು ಕಡ್ಡಾಯವಾಗಿದೆ ಎಂದು ತಿಳಿಸಿದ ಅವರು, ಗ್ರಾಮ ಪಂಚಾಯಿತಿಯಲ್ಲಿ ಮಕ್ಕಳ ಕಾವಲು ಸಮಿತಿಯನ್ನು ಮಾಸಿಕವಾಗಿ ಆಯೋಜಿಸಿ ತಾಲ್ಲೂಕು ಕಾರ್ಯ ನಿರ್ವಹಣಾಧಿಕಾರಿಗಳ ಮುಖೇನ ಹಾಗೂ ತಾಲ್ಲೂಕು ಮಟ್ಟದ ಮಹಿಳೆಯರು ಮತ್ತು ಮಕ್ಕಳ ಕಾವಲು ಸಮಿತಿಗಳನ್ನು ಆಯೋಜಿಸಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಮುಖಾಂತರ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳಿಗೆ ಕಡ್ಡಾಯವಾಗಿ ವರದಿ ಸಲ್ಲಿಸಬೇಕು ಎಂದು ಹೇಳಿದರು.

    ಬಾಲ್ಯ ವಿವಾಹಕ್ಕೆ ಸಂಬಂಧಿಸಿದಂತೆ ಸಮುದಾಯಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿ ಜಾಗೃತಿ ಮೂಡಿಸಲು ತಿಳಿಸಿದ ಅವರು, ಎಸ್.ಹೆಚ್.ಜಿ. (ಮಹಿಳಾ ಸ್ವಸಹಾಯ ಗುಂಪುಗಳು) ಮುಖಾಂತರ ಹೆಚ್ಚು ಅರಿವು ಕಾರ್ಯಕ್ರಮಗಳನ್ನು ಏರ್ಪಡಿಸಬೇಕು ಎಂದು ಸೂಚಿಸಿದರು.

    ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಮಹಾಂತೇಶ್ ಭಜಂತ್ರಿ, ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕಿನ ತಹಶೀಲ್ದಾರರು, ತಾಪಂ ಕಾರ್ಯ ನಿರ್ವಹಣಾಧಿಕಾರಿಗಳು, ಪೊಲೀಸ್ ವೃತ್ತ ನಿರೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಹಾಗೂ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

    Instructions to hold a meeting on banning child marriage by April 26