Category: ಚಿಕ್ಕಮಗಳೂರು

  • ಜಿಲ್ಲಾ ಸವಿತಾ ಸಮಾಜದ ವತಿಯಿಂದ ಶ್ರೀರಾಮನವಮಿಯ-ಹನುಮ ಜಯಂತಿ

    ಜಿಲ್ಲಾ ಸವಿತಾ ಸಮಾಜದ ವತಿಯಿಂದ ಶ್ರೀರಾಮನವಮಿಯ-ಹನುಮ ಜಯಂತಿ

    ಚಿಕ್ಕಮಗಳೂರು: ನಾವು ಹೇಗೆ ಬದುಕುತ್ತೇವೆ ಎಂಬುದರ ಮೇಲೆ ಗೌರವ ಎನ್ನುವುದು ಪ್ರಾಪ್ತವಾಗುತ್ತದೆ ಸವಿತಾ ಸಮಾಜದ ಬಂಧುಗಳು ಶಿಕ್ಷಣ ಕ್ಷೇತ್ರದಲ್ಲೂ ಮತ್ತು ಸರ್ಕಾರದಿಂದ ಸಿಗುವ ನೆರವುಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸಬರಾಗುವ ಮೂಲಕ ಬದುಕು ಕಟ್ಟಿಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಹೇಳೀದರು.

    ಜಿಲ್ಲಾ ಸವಿತಾ ಸಮಾಜದ ವತಿಯಿಂದ ನಗರದ ಆಜಾದ್ ಪಾರ್ಕ್ ವೃತದಲ್ಲಿ ಇಂದು ಆಯೋಜಿಸಿದ್ದ ಶ್ರೀರಾಮನವಮಿಯ ಹಾಗೂ ಹನುಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯೆಯ ಮೂಲಕ ಬದುಕನ್ನು ಬದಲಾಯಿಸುವುದಕ್ಕೆ ಸಾಧ್ಯವಿದೆ ಎಂದರು.

    ಬದುಕು ಬದಲಿಸುವ ಶಕ್ತಿ ಶಿಕ್ಷಣಕ್ಕಿದೆ, ಮಕ್ಕಳಿಗೆ ಶಿಕ್ಷಣವನ್ನು ಕೊಟ್ಟು ಆ ಮೂಲಕ ಸಮಾಜ ಕಟ್ಟುವ ಕೆಲಸ ಮಾಡಬೇಕು. ಇರುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸವಿತಾ ಸಮಾಜದ ಬಂಧುಗಳು ಏಳಿಗೆ ಕಾಣಬೇಕು ಎಂದು ಹೇಳಿದರು.

    ಜಿಲ್ಲಾ ಸವಿತಾ ಸಮಾಜದ ಅಧ್ಯಕ್ಷ ಸಂಕಲ್ಪ ವಿಶ್ವನಾಥ್ ಸಂಕಲ್ಪ ಪ್ರಾಸ್ತಾವಿಕವಾಗಿ ಮಾತನಾಡಿ ನಾಲ್ಕು ಗೋಡೆಗೆ ಕಾರ್ಯಕ್ರಮಕ್ಕೆ ಸೀಮಿತವಾಗದೆ ಸಮಾಜದೊಂದಿಗೆ ಗುರುತಿಸಿಕೊಳ್ಳಬೇಕು. ಸವಿತಾ ಸಮಾಜದ ಬಾಂಧವರು ಸಂಘಟಿತರಾಗುವ ಮೂಲಕ ಆಧುನಿಕ ಸಮಾಜದಲ್ಲೂ ಶೋಷಿತರಾಗುತ್ತಿರುವ ನಾವು ನಮ್ಮ ಘರ್ಜನೆ ಸರ್ಕಾರಕ್ಕೆ ಕೇಳುವಂತಾಗಬೇಕು ಎಂದು ಹೇಳಿದರು.

    ದ್ವಿತೀಯ ಪಿಯುಸಿಯಲ್ಲಿ ಪಾಸ್ ಆಗಿರುವ ಸವಿತಾ ಸಮಾಜದ ವಿದ್ಯಾರ್ಥಿಗಳಾದ ಮದನ್ ಸಿ, ಶ್ರೇಯಸ್ ಡಿಕೆ ಇವರುಗಳನ್ನು ಸನ್ಮಾನಿಸಲಾಯಿತು. ಗ್ಲಾಮರ್ ಕೇರ್ ಸಂಸ್ಥೆಯ ವತಿಯಿಂದ ಜೀವಿತ್ ಭಾರತೀಯ ಅವರು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.

    ಶ್ರೀ ರಾಮನವಮಿಯ ಮತ್ತು ಹನುಮ ಜಯಂತಿ ಅಂಗವಾಗಿ ಏರ್ಪಡಿಸಿದ್ದ ಕೋಸಂಬರಿ ಮತ್ತು ಪಾನಕ ವಿತರಣೆಗೆ ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿಯವರು ಚಾಲನೆ ನೀಡಿದರು.

    ಶಾಸಕರಾದ ಎಚ್ ಡಿ ತಮ್ಮಯ್ಯನವರು ಕಾರ್ಯಕ್ರಮಕ್ಕೆ ಆಗಮಿಸಿ ಸವಿತಾ ಮಹರ್ಷಿಗಳಿಗೆ ಪುಷ್ಪಾರ್ಚನೆಯನ್ನು ಮಾಡಿ ಸಮಾಜದ ಬಂಧುಗಳಿಗೆ ಶುಭ ಹಾರೈಕೆಯನ್ನು ಹೇಳಿದರು.

    ಕಾರ್ಯಕ್ರಮದಲ್ಲಿ ದೀಪಕ್ ದೊಡ್ಡಯ್ಯ, ಕಲ್ಮುರುಡಪ್ಪ, ಮಂಜೇಗೌಡ, ಎ. ಎನ್. ಮಹೇಶ್,ಕುರುವಂಗಿ ವೆಂಕಟೇಶ್, ಜಿಲ್ಲಾ ಸವಿತಾ ಸಮಾಜ ದ ಜಿ ಉಮೇಶ್, ಜೆ ಸತ್ಯನಾರಾಯಣ,ಹೆಚ್ ವಿ ಮಹೇಶ್, ಸೇರಿದಂತೆ ಹಲವರಿದ್ದರು.

    Sri Ram Navami-Hanuman Jayanti by District Savita Samaj

  • ಕರ್ನಾಟಕದ ಜಾತಿ ಗಣತಿಗೆ ಸಂಬಂಧಿಸಿದ ವರದಿಗೆ ವಿರೋಧ

    ಕರ್ನಾಟಕದ ಜಾತಿ ಗಣತಿಗೆ ಸಂಬಂಧಿಸಿದ ವರದಿಗೆ ವಿರೋಧ

    ಚಿಕ್ಕಮಗಳೂರು: ರಾಜ್ಯ, ರಾಷ್ಟ್ರಾದ್ಯಂತ ಸದ್ದು ಮಾಡುತ್ತಿರುವ ಕರ್ನಾಟಕದ ಜಾತಿ ಗಣತಿಗೆ ಸಂಬಂಧಿಸಿದ ವರದಿಯನ್ನು ವಿರೋಧಿಸುವುದಾಗಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷರಾದ ಸುಧಾರಕರ ಶೆಟ್ಟಿ ತಿಳಿಸಿದ್ದಾರೆ.

    ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈಗ ಬಹಿರಂಗವಾಗಿರುವ ಜಾತಿಗಣತಿ ವರದಿಯಲ್ಲಿ ಬಂಟರು ೩.೫೨ ಲಕ್ಷ ಜನರಿದ್ದಾರೆ ಎಂದು ತಿಳಿಸಲಾಗಿದೆ. ಆದರೆ ನನ್ನ ಪ್ರಕಾರ ರಾಜ್ಯದಲ್ಲಿ ೧೨ ಲಕ್ಷ ಜನ ಬಂಟರಿದ್ದಾರೆ. ಹೊರ ರಾಜ್ಯಗಳಲ್ಲಿ ೨ ಲಕ್ಷ ಮಂದಿ ಇದ್ದಾರೆ. ಹೀಗಿರುವಾಗಿ ಜಾತಿಗಣತಿಗೆ ಅಳವಡಿಸಿರುವ ಮಾನದಂಡಗಳೇನು ಎನ್ನುವುದು ಗೊತ್ತಾಗುತ್ತಿಲ್ಲ ಎಂದರು.

    ನನ್ನ ಮನೆ ಹಾಗೂ ನನ್ನ ಕುಟುಂಬದಲ್ಲೇ ಯಾರ ಮನೆಯಲ್ಲೂ ಜಾತಿ ಗಣತಿ ನಡೆದಿಲ್ಲ. ಹಾಗಾದರೆ ಉಪಗ್ರಹ ಸರ್ವೇ ಏನಾದರೂ ಮಾಡಿದ್ದಾರಾ? ಅಥವಾ ಪಂಚಾಯ್ತಿ ಮಟ್ಟದಲ್ಲಿ ಎಂಟತ್ತು ಜನರ ಅಭಿಪ್ರಾಯ ಪಡೆದು ಚುನಾವಣೆ ಸಮೀಕ್ಷೆ ಏನಾದರೂ ಮಾಡಿದ್ದೀರಾ? ಎಂದು ಪ್ರಶ್ನಿದ ಅವರು, ಅವೈಜ್ಞಾನಿಕವಾಗಿ ಜಾತಿಗಣತಿ ವರದಿ ತಯಾರಿಸಲಾಗಿದೆ ಎಂದು ದೂರಿದರು.

    ಜಾತಿ ಜನಗಣತಿ ಮಾಡಲು ಬಹಳ ಸಮಯ ಬೇಕಾಗುತ್ತದೆ. ಹಿಂದೆ ಕಾಂತರಾಜು ಅವರನ್ನು ಆಯೋಗದ ಅಧ್ಯಕ್ಷರಾಗಿ ಏಪ್ರಿಲ್ ೨೦೧೪ ರಲ್ಲಿ ನೇಮಕ ಮಾಡಲಾಗುತ್ತದೆ. ಆದರೆ ಕೇವಲ ೯ ತಿಂಗಳಲ್ಲಿ ಅಂದರೆ ೨೦೧೫ ವರದಿ ಸಲ್ಲಿಸುತ್ತಾರೆ. ಅಂದರೆ ೫.೯೮ ಕೋಟಿ ಜನರನ್ನು ಇಷ್ಟು ಕಡಿಮೆ ಅವಧಿಯಲ್ಲಿ ಮುಟ್ಟಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ಅದಕ್ಕಾಗಿ ಸೆನ್ಸಸ್ ರೀತಿಯಲ್ಲಿ ಪ್ರತಿ ಮನೆ ಮನೆಗೆ ಹೋಗಬೇಕಾಗುತ್ತದೆ. ಎಷ್ಟು ಆಧಾರ್ ಕಾರ್ಡ್, ವೋಟರ್ ಕಾರ್ಡ್, ರೇಷನ್ ಕಾರ್ಡ್ ಎಲ್ಲದಕ್ಕೂ ಕೆಲವು ಸಂದರ್ಭದಲ್ಲಿ ವ್ಯತ್ಯಾಸವಿರುತ್ತದೆ. ಕಾರಣಾಂತರದಿಂದ ಮನೆ ಸದಸ್ಯರು ಕೆಲವು ಸಂದರ್ಭದಲ್ಲಿ ಮನೆಯಿಂದ ಹೊರಗಿರುತ್ತಾರೆ. ಅದೆಲ್ಲವನ್ನೂ ಗಮನಿಸಬೇಕಾಗುತ್ತದೆ ಎಂದರು.

    ಬ್ರಿಟೀಷರ ಕಾಲದಲ್ಲಿ ೧೯೩೧ ರಲ್ಲಿ ಜಾತಿ ಗಣತಿ ಆಗಿತ್ತು. ಪ್ರತಿ ವರ್ಷಕ್ಕೊಮ್ಮೆ ಅಂಕಿ ಅಂಶಗಳು ಬದಲಾಗುತ್ತವೆ. ಇಂದಿನ ವರದಿ ಪ್ರಕಾರ ೭.೧೨ ಕೋಟಿ ಜನರು ಕರ್ನಾಟಕದಲ್ಲಿದ್ದಾರೆ. ನಿಮ್ಮ ವರದಿ ೫.೯೮ ಕೋಟಿ ಜನರಿಗೆ ಸಂಬಂಧಿಸಿದ್ದಾಗಿದೆ. ಹಾಗಾದರೆ ೧.೪೦ ಕೋಟಿ ಜನರನ್ನು ಜಾತಿಗಣತಿ ವರದಿಯಲ್ಲಿ ಏಕೆ ತೋರಿಸುತ್ತಿಲ್ಲ. ಅವರಿಗೆ ಮೋಸವಾಗುತ್ತಿದೆ. ಹೀಗಿರುವಾಗ ಏತಕ್ಕಾಗಿ ಈ ತರಾತುರಿ ಎಂದು ಪ್ರಶ್ನಿಸಿದರು.

    ೨೦೧೫ ರಿಂದ ೨೦೧೮ ರ ವರೆಗೆ ಕಾಂಗ್ರೆಸ್ ಸರ್ಕಾರವೇ ಇತ್ತು. ಆಗ ಏಕೆ ವರದಿಯನ್ನು ಮಂಡಿಸಿರಲಿಲ್ಲ. ಇಂದು ನಿಮ್ಮ ಉಳಿವಿಗಾಗಿ ವರದಿ ಬಿಡುಗಡೆ ಮಾಡಲು ಹೊರಟಿದ್ದೀರಿ. ಇದರಿಂದ ಇಡೀ ರಾಜ್ಯಕ್ಕೆ ಅನ್ಯಾಯವಾಗುತ್ತದೆ. ಬಿಲ್ಲವ ಸಮಾಜ ೪ ಲಕ್ಷ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯೊಂದರಲ್ಲೇ ೯ ಲಕ್ಷ ಬಿಲ್ಲವರಿದ್ದಾರೆ. ಇಡೀ ರಾಜ್ಯದಲ್ಲಿ ೧೪ ಲಕ್ಷ ಜನ ಬ್ರಾಹ್ಮಣರು ಎನ್ನುತ್ತೀರಿ. ಇನ್ನೊಂದೆಡೆ ಅವರು ಮುಂದುವರಿದ್ದಾರೆ ೪೪ ಲಕ್ಷ ಜನರಿದ್ದಾರೆ ಎಂದು ನೀವೇ ಹೇಳುತ್ತೀರಿ ಇದೆಷ್ಟು ಸರಿ ಎಂದರು.

    ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜಾತಿ ಗಣತಿ ವರದಿಗೆ ಯಾವುದೇ ಆಧಾರ ಇಲ್ಲ ಎನ್ನುತ್ತಿದ್ದಾರೆ. ಕ್ಯಾಬಿನೆಟ್ ಸದಸ್ಯರಿಗೆ ಸರಿಯಾದ ಮಾಹಿತಿ ಇಲ್ಲವಾದರೆ ಸಾಮಾನ್ಯ ಜನರಿಗೆಲ್ಲಿದೆ. ಹಿಂದೆ ಜನರಿಗೆ ಜಾತಿಗಣತಿಯ ಮಹತ್ವ ಗೊತ್ತಾಗದೆ ಇದ್ದಿರಬಹುದು. ಇಂದು ವರದಿಯಲ್ಲಿ ತೋರಿಸಲಾಗಿರುವ ಎಲ್ಲಾ ಜಾತಿಗಳಿಗೆ ಅನ್ಯಾಯವಾಗಿದೆ. ನಿಮ್ಮ ಮನಸ್ಸಿನಲ್ಲಿ ಯಾವುದೋ ಕಲ್ಪನೆ ಇಟ್ಟುಕೊಂಡು ವರದಿ ಹೊರ ತಂದರೆ ಅನ್ಯಾಯ ಮಾಡಿದಂತಾಗುತ್ತದೆ ಎಂದರು.

    ರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರ ಈ ಜಾತಿ ಜನಗಣತಿ ವರದಿಯನ್ನು ಒಪ್ಪಬಾರದು. ವಾಸ್ತವಿಕವಾದ ಗಣತಿ ಆದ ಮೇಲೆ ಒಪ್ಪಬೇಕು. ಹೊಸದಾಗಿ ಸೆನ್ಸಸ್ ಮಾದರಿ ಗಣತಿ ಮಾಡಬೇಕು. ಆಧಾರ್ ಕಾರ್ಡ್, ರೇಷನ್ ಕಾರ್ಡ್‌ಗಳಲ್ಲಿರುವ ಲೋಪಗಳನ್ನು ಸಹ ಅದರಿಂದ ಸರಿಪಡಿಸಬಹುದು ಎಂದರು.

    ಹಿಂದುಳಿದ ಮುಂಡಾಳು ಸಮಾಜಕ್ಕೆ ನಿಮ್ಮ ವರದಿಯಲ್ಲಿ ನ್ಯಾಯವೇ ಸಿಕ್ಕಿಲ್ಲ.ಈ ರೀತಿ ಹಲವಾರು ಸಂಶಯಗಳನ್ನು ಈ ವರದಿ ಹುಟ್ಟುಹಾಕಿದೆ. ಅಲ್ಲದೆ ಜಾತಿ ಜಾತಿಗಳ ನಡುವೆ ದೊಡ್ಡದಾದ ಕಂದವನ್ನು ಸೃಷ್ಠಿಸಲಾಗಿದೆ. ಕೆಲವರಿಗಾಗಿ ಮಾತ್ರ ಗಣತಿ ಮಾಡಿದಂತಿದೆ. ಎಲ್ಲರಿಗೂ ನ್ಯಾಯ ಸಿಗಬೇಕೆಂದಿದ್ದರೆ ಮತ್ತೊಮ್ಮೆ ಅಮೂಲಾಗ್ರ ಸಮೀಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

    ಯಾಕೆ ೧೧ ವರ್ಷದ ವರೆಗೆ ವರದಿ ಬಿಡುಗಡೆ ಮಾಡದೆ ಸುಮ್ಮನಿದ್ದಿರಿ. ನಿಮ್ಮ ಅವಧಿಯಲ್ಲಿ ನೀಡಿದ ವರದಿಯನ್ನು ಹಾಗೆ ಇಟ್ಟುಕೊಂಡು ಮತ್ತೊಂದು ಅವಧಿಯಲ್ಲಿ ಜಿಲ್ಲಾ ಪಂಚಾಯ್ತಿ ಚುನಾವಣೆಗಾಗಿ ವರದಿ ಬಿಡುಗಡೆ ಮಾಡುತ್ತಿದ್ದೀರ ಎಂದು ಆರೋಪಿಸಿದರು.

    Opposition to the report related to the caste census in Karnataka

  • ಪ್ರಜೆಗಳು ಬದಲಾಗದ ವಿನಾ ವ್ಯವಸ್ಥೆ ಬದಲಾಗದು

    ಪ್ರಜೆಗಳು ಬದಲಾಗದ ವಿನಾ ವ್ಯವಸ್ಥೆ ಬದಲಾಗದು

    ಚಿಕ್ಕಮಗಳೂರು:  ದೇಶದ ಎಲ್ಲ ಜನರಿಗೂ ಡಾ.ಬಿ.ಆರ್.ಅಬೇಡ್ಕರ್ ಅವರು ಸಂವಿಧಾನದ ಮೂಲಕ ರಾಜಕೀಯ ಸಮಾನ ಹಕ್ಕು ನೀಡಿದ್ದಾರೆ. ಆ ಹಕ್ಕನ್ನು ಪ್ರಾಮಾಣಿಕವಾಗಿ ಚಲಾಯಿಸುತ್ತಿದ್ದೇವೆಯೇ ಎಂಬ ಬಗ್ಗೆ ಎಲ್ಲರೂ ಆತ್ಮವಾಲೋಕನ ಮಾಡಿಕೊಳ್ಳಬೇಕಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಕಾರದ ಸದಸ್ಯ ಕಾರ್ಯದರ್ಶಿ ವಿ.ಹನುಮಂತಪ್ಪ ಹೇಳಿದರು.

    ಐಡಿಎಸ್‌ಜಿ ಕಾಲೇಜಿನಲ್ಲಿ ಐಸಿರಿ ಫೌಂಡೇಶನ್ ಮಂಗಳವಾರ ಹಮ್ಮಿಕೊಂಡಿದ್ದ ವಿ ದ ಪೀಪಲ್ ಆಫ್ ಇಂಡಿಯಾ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿ ಸಂವಿಧಾನ ಪೀಠಿಕೆಯಲ್ಲಿ ಧರ್ಮ ನಿರಪೇಕ್ಷತೆ, ಸೌಹಾರ್ದತೆ, ಸಹಬಾಳ್ವೆ ಮತ್ತಿತರೆ ಅಂಶಗಳ ಬಗ್ಗೆ ತಿಳಿದಿದ್ದೇವೆ. ಸ್ವಾತಂತ್ರ್ಯ, ಸಮಾನತೆ, ಭಾತೃತ್ವ ಅಂಬೇಡ್ಕರ್ ಆಶಯವಾಗಿತ್ತು

    ಅದರಂತೆ ದೇಶ ಮುನ್ನೆಡೆಯುತ್ತಿದೆಯೇ ಎಂಬ ಚಿಂತನೆ ಅಗತ್ಯ. ಅಂದು ಪದವಿ ಪಡೆದವರಿಗೆ,ಭೂಮಾಲೀಕರಿಗೆ, ಶ್ರಿಮಂತರಿಗೆ ಓಟಿನ ಹಕ್ಕು ಕೊಡೋಣ ಎಂಬ ಚರ್ಚೆ ನಡೆದಿತ್ತು. ಆಗ ಅಂಬೇಡ್ಕರ್ ಹಾಗೆ ಮಾಡಿದರೆ ದೇಶದ ಶೇ.೨೦ ಜನರಿಗಷ್ಟೇ ಹಕ್ಕು ಕೊಟ್ಟಂತಾಗುತ್ತದೆ. ಹೀಗಾಗಿ ಎಲ್ಲರಿಗೂ ವಯಸ್ಸಿನ ಆಧಾರದ ಮೇಲೆ ಮತದಾನದ ಹಕ್ಕು ನೀಡಬೇಕು

    ಎಂದು ವಾದಿಸಿ ಅದರಲ್ಲಿ ಯಶಸ್ವಿಯಾದರು. ಈ ದೇಶದಲ್ಲಿರುವ ಎಲ್ಲರಿಗೂ ಸಮಾನವಾದ ರಾಜಕೀಯ ಓಟಿನ ಹಕ್ಕನ್ನು ಅಂಬೇಡ್ಕರ್ ನೀಡಿದ್ದಾರೆ. ಮತದ ಮೌಲ್ಯ ಬಡವ, ಬಲ್ಲಿದ ಎಲ್ಲರಿಗೂ ಒಂದೇ. ಮತ ಎಂಬ ವಜ್ರಾಯುಧವನ್ನು ನಮ್ಮ ಕೈಲಿ ಕೊಟಿದ್ದಾರೆ. ಅದನ್ನು ಪ್ರಾಮಾಣಿಕವಾಗಿ ಚಲಾಯಿಸದೆ ಹಣ, ಆಮಿಷಕ್ಕೆ ಮಾರಾಟ ಮಾಡಿಕೊಳ್ಳುತ್ತಿದ್ದೇವೆ ಎಂದು ವಿಷಾಸಿದರು.

    ಅಷ್ಟೊಂದು ಮೌಲ್ಯಯುತವಾದ ವಜ್ರಾಯುಧಕ್ಕೆ ಸಮನಾದ ಓಟಿನ ಹಕ್ಕನ್ನು ಮಾರಿಕೊಳ್ಳುವ ಮೂಲಕ ವ್ಯವಸ್ಥೆ ಹಾಳಾಗಿದೆ. ಪ್ರಜೆಗಳು ಬದಲಾಗದ ವಿನಾ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಹೇಳಿದರು.

    ವಕೀಲ ಸತ್ಯನಾರಾಯಣ ಉಪನ್ಯಾಸ ನೀಡಿ ಅಂಬೇಡ್ಕರ್ ವಿಚಾರ ಸಿದ್ದಾಂತ ಬಿಟ್ಟು ಅವರನ್ನು ಪೂಜೆ ಮಾಡಿ ಆಡಂಭರದ ಕಾರ್ಯಕ್ರಮ ಮಾಡಿದಲ್ಲಿ ಅರ್ಥವಿಲ್ಲ ಎಂದರು.

    ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಅಂಬೇಡ್ಕರ್ ಅವರು ಹಿಂದೂ ಬಿಲ್ ಕೋಡ್ ತಂದಿದ್ದರಿಂದ ಇಲ್ಲಿರುವ ಹೆಚ್ಚು ವಿದ್ಯಾರ್ಥಿನಿಯರಿಗೆ ಸಾಮಾಜಿಕ, ಶೈಕ್ಷಣಿಕ ರಾಜಕೀಯವಾದ ಹಕ್ಕು ದೊರೆತಿದೆ ಎಂದರು.

    ಐಸಿರಿ ಫೌಡೇಶನ್ ನ ಮೋಹನ್ ಭಾರ್ಗವಪುರಿ ಪ್ರಾಸ್ತಾವಿಸಿ, ವಿದ್ಯಾರ್ಥಿಗಳಿಗೆ ಅಂಬೇಡ್ಕರ್ ವಿಚಾರ ಮತ್ತು ತತ್ವ ಆದರ್ಶಗಳು ಬೇಕು. ಈ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು.ಸೋಮಶೇಖರ್ ಸ್ವಾಗತಿಸಿದರು. ಐಡಿಎಸ್‌ಜಿ ಕಾಲೇಜಿನ ಪ್ರಾಂಶುಪಾಲರಾದ ಪುಷ್ಪಾಭಾರತಿ ಅಧ್ಯಕ್ಷತೆ ವಹಿಸಿದ್ದರು.

    The system will not change unless the citizens change.

  • ಜೈಭೀಮ್ ವ್ಯಾಯಮ ಶಾಲೆ ಸದ್ಭಳಕೆಯಾಗಲಿ

    ಜೈಭೀಮ್ ವ್ಯಾಯಮ ಶಾಲೆ ಸದ್ಭಳಕೆಯಾಗಲಿ

    ಚಿಕ್ಕಮಗಳೂರು: ಸದೃಢ ಆರೋಗ್ಯಕ್ಕೆ ವ್ಯಾಯಾಮ ಮುಖ್ಯ. ಆರೋಗ್ಯವೇ ಭಾಗ್ಯ. ಈ ನಿಟ್ಟಿನಲ್ಲಿ ನಗರದಲ್ಲಿ ವ್ಯಾಯಾಮ ಶಾಲೆ ನಿರ್ಮಿಸಿದ್ದು ಯುವಕರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.

    ನಗರದ ಆಜಾದ್ ಪಾರ್ಕಿನ ಬಳಿ ನಿರ್ಮಿಸಿರುವ ನೂತನ ಜೈಭೀಮ್ ವ್ಯಾಯಾಮ ಶಾಲೆಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.ಶೋಷಿತ ಸಮುದಾಯ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಅಂಬೇಡ್ಕರ್ ಅವರು ಸ್ವಾತಂತ್ರ್ಯ ಪೂರ್ವ ಮತ್ತು ನಂತರ ಹೋರಾಡಿದ್ದಾರೆ. ಜಗತ್ತೇ ಮೆಚ್ಚುವಂತಹ ಸಂವಿಧಾನ ರಚಿಸಿದ್ದಾರೆ. ಅವರ ಜನ್ಮದಿನದಂದೇ ಜೈಭೀಮ್ ವ್ಯಾಯಾಮ ಶಾಲೆ ಉದ್ಘಾಟಿಸುತ್ತಿರುವುದು ಸಂತಸದ ಕ್ಷಣವಾಗಿದೆ ಎಂದರು.

    ಶಾಸಕ ಸಿ.ಟಿ.ರವಿ ಮಾತನಾಡಿ, ೬೪ ಲಕ್ಷ ರೂ.ವೆಚ್ಚದಲ್ಲಿ ವ್ಯಾಯಾಮ ಶಾಲೆ ನಿರ್ಮಿಸಿ ಉದ್ಘಾಟನೆ ಆಗುತ್ತಿದೆ. ಯುವಕರು ಬಾಹುಬಲಕ್ಕೆ ವ್ಯಾಯಾಮಶಾಲೆ ಉಪಯೋಗಿಸಿಕೊಳ್ಳಿ, ಬುದ್ದಿ ಬಲಕ್ಕೆ ಗ್ರಂಥಾಲಯ ಬಳಸಿಕೊಳ್ಳಿ. ಬುದ್ದಿ ಮತ್ತು ಬಾಹುಬಲ ಸಮಾಜದ ಉನ್ನತಿ, ರಾಷ್ಟ್ರ ನಿರ್ಮಾಣಕ್ಕೆ ಉಪಯೋಗವಾಗುತ್ತದೆ. ಸಮಾಜಕ್ಕೆ ಉಪಯೋಗವಾಗದ ಬುದ್ದಿ ಮತ್ತು ಬಾಹುಬಲ ರಾಕ್ಷಸ ಬಲವಾಗಿ ಪರಿವರ್ತನೆಯಾಗವ ಅಪಾಯವಿದೆ ಎಂದರು.

    ಇಲ್ಲಿನ ವ್ಯಾಯಾಮ ಶಾಲೆಗೆ ಸುದೀರ್ಘ ಇತಿಹಾಸವಿದೆ. ಈ ಹಿಂದೆ ಸಿಟಿ ಜಿಮ್ ಇತ್ತು. ಸಿಎಸ್‌ಆರ್ ಫಂಡ್‌ನಲ್ಲಿ ಕಾಲೇಜು ಕಟ್ಟಡ ನಿರ್ಮಿಸುವಾಗ ಅದು ತೆರವಾಗಿತ್ತು. ಮಾತುಕೊಟ್ಟಂತೆ ವ್ಯಾಯಾಮ ಶಾಲೆಯನ್ನು ನಿರ್ಮಿಸಿದ್ದೇವೆ. ಜೈಭೀಮ್ ಎಂಬ ಹೆಸರಿಡಬೇಕು ಎಂದಾಗ ತಕರಾರಿಲ್ಲದೆ ಇಟ್ಟಿದ್ದೇವೆ ಅಂಬೇಡ್ಕರ್‌ಜನ್ಮದಿನದಂದೇ ಉದ್ಘಾಟಿಸಿದ್ದೇವೆ ಎಂದರು.

    ನಗರಸಭೆ ಅಧ್ಯಕ್ಷೆ ಸಜಾತ ಶಿವಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವ್ಯಾಯಾಮ ಶಾಲೆ ಯುವಕರಿಗೆ ಅನುಕೂಲ ಆಗಲಿ. ಕಟ್ಟಡ ಮತ್ತು ಸಲಕರಣೆಗಳನ್ನು ಹಾಳುಮಾಡದೆ ತಮ್ಮದೆಂದು ಸದ್ಬಳಕೆ ಮಾಡಿಕೊಳ್ಳಬೇಕು. ರಿಯಾಯಿತಿ ದರ ನಿಗ ಮಾಡಿದ್ದು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

    ನಗರಸಭೆ ಉಪಾಧ್ಯಕ್ಷೆ ಅನುಮಧುಕರ್, ಆಯುಕ್ತ ಬಸವರಾಜು, ಮಾಜಿ ಅಧ್ಯಕ್ಷ ವೇಣುಗೋಪಾಲ್, ಮುಖಂಡರಾದ ರಾಧಕೃಷ, ಶ್ರೀನಿವಾಸ್, ವೆಂಕಟೇಶ್, ನಗರಸಭೆ ಸದಸ್ಯರು, ಮತ್ತಿರರು ಉಪಸ್ಥಿತರಿದ್ದರು.

    New Jaibhim Gymnasium inaugurated

  • ಡಾ. ಬಿ.ಆರ್. ಅಂಬೇಡ್ಕರ್ ಬಹುಮುಖಿ ವ್ಯಕ್ತಿತ್ವದ ವಿಶ್ವಜ್ಞಾನಿ

    ಡಾ. ಬಿ.ಆರ್. ಅಂಬೇಡ್ಕರ್ ಬಹುಮುಖಿ ವ್ಯಕ್ತಿತ್ವದ ವಿಶ್ವಜ್ಞಾನಿ

    ಚಿಕ್ಕಮಗಳೂರು:  ದೇಶದಲ್ಲಿನ ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಹಗಲಿರುಳು ಶ್ರಮಿಸಿ ಸಮಸಮಾಜದ ಬಲವರ್ಧನೆಗೆ ದಿಟ್ಟತನದಿಂದ ಹೋರಾಡಿದ ಡಾ. ಬಿ.ಆರ್. ಅಂಬೇಡ್ಕರ್ ಮಹಾನ್ ತಪಸ್ವಿಯಾಗಿದ್ದಾರೆ ಅವರೊಬ್ಬ ಬಹುಮುಖಿ ವ್ಯಕ್ತಿತ್ವದ ವಿಶ್ವಜ್ಞಾನಿ ಎಂದು ವಿಧಾನ ಸಭೆ ಕ್ಷೇತ್ರದ ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಂಯುಕ್ತ ಆಶ್ರಯದಲ್ಲಿ ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್‌ರವರ ೧೩೪ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಡಿದರು.

    ಅಂಬೇಡ್ಕರ್ ಅವರ ವೈಜ್ಞಾನಿಕ ಚಿಂತನೆಗಳು ಪ್ರಸ್ತುತ ಮನುಕುಲದ ಉಳಿವಿಗೆ ಹಾಗೂ ದೇಶದ ಪ್ರಗತಿಗೆ ಆಧಾರ ಸ್ಥಂಭಗಳಾಗಿದೆ. ಅವರು ವಿಶ್ವದ ಮಹಾನ್ ಸಂಶೋಧಕರು, ದೇಶದ ಸಾಮಾಜಿಕ, ರಾಜಕೀಯ, ಶೈಕ್ಷಣಿಕ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳ ಜ್ವಲಂತ ಸಮಸ್ಯೆಗಳಿಗೆ ವೈಜ್ಞಾನಿಕ ಸುಧಾರಣೆಗಳನ್ನು ಅವಿಷ್ಕರಿಸುವ ಮೂಲಕ ದೇಶದ ಭದ್ರತೆಗೆ ಸಂವಿಧಾನ ರಚಿಸಿದ್ದಾರೆ. ಅವರ ಮೌಲ್ಯಯುತ ಚಿಂತನೆ ಮತ್ತು ಸಾಧನೆಯನ್ನು ಯುವ ಜನಾಂಗ ಸ್ಮರಿಸಿಕೊಂಡು ಹೊಸತನದ ಸಮಾಜಕ್ಕೆ ಸ್ವತಂತ್ರ ಮನಸ್ಸಿನಿಂದ ತೆರೆದುಕೊಳ್ಳಬೇಕಿದೆ ಎಂದರು.

    ಸಮಾನತೆಯ ಸಂದೇಶ ಸಾರಿದ ಡಾ. ಬಿ.ಆರ್ ಅಂಬೇಡ್ಕರ್ ಅವರ ಅಧ್ಯಯನದ ಶಿಸ್ತು, ಕಾರ್ಯಬದ್ಧತೆ ಮತ್ತು ಕರ್ತವ್ಯ ಪ್ರಜ್ಞೆಯ ಮೂಲಕ ಇಡೀ ಜಗತ್ತನ್ನೇ ಬೆಳಗಿದರು. ಸಮಾಜದ ಎಲ್ಲಾ ವರ್ಗಗಳ ಬದಲಾವಣೆಗೆ ಬೆಳಕು ತೋರಿದರು. ಅವರು ಕೌಟುಂಬಿಕ ಬದುಕಿಗೆ ಆದ್ಯತೆ ನೀಡದೆ ಶೋಷಿತ ಹಾಗೂ ದುರ್ಬಲರ ಪರವಾಗಿ ದಿಟ್ಟತನದಿಂದ ಹೋರಾಡಿದ ಮಹಾನ್ ಚೇತನ ಎಂದು ಹೇಳಿದರು.

    ವಿಧಾನ ಪರಿಷತ್ ಶಾಸಕರಾದ ಸಿ.ಟಿ ರವಿ ಮಾತನಾಡಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ತತ್ವ ಸಿದ್ದಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಅವರು ದೇಶಕ್ಕೆ ನೀಡಿದ ಸಂವಿಧಾನದ ಆಶಯಕ್ಕೆ ಚ್ಯುತಿಯಾಗದಂತೆ ಪ್ರತಿಯೊಬ್ಬರು ಅದನ್ನು ಉಳಿಸುವ ಪ್ರಯತ್ನ ಮಾಡಿದಾಗ ಅಂಬೇಡ್ಕರ್ ಜಯಂತಿಗೆ ಪರಿಪೂರ್ಣ ಅರ್ಥ ದೊರೆಯುತ್ತದೆ ಎಂದು ಹೇಳಿದರು

    ಒಂದು ಧರ್ಮವೇ ಅತ್ಯುನ್ನತ, ಅದರ ಸಾರವೇ ಶ್ರೇಷ್ಠ ಎನ್ನುವವರು ಕೋಮುವಾದಿಗಳು. ಇನ್ನೊಂದು ಧರ್ಮವನ್ನು ಸಹ ಪ್ರೀತಿ ವಿಶ್ವಾಸದಿಂದ ಕಂಡಾಗ, ಸಂವಿಧಾನದ ಆಶಯದಂತೆ ಸರ್ವಧರ್ಮ ಭಾವೈಕ್ಯತೆಯ ಸಂದೇಶವನ್ನು ಪಸರಿಸಬಹುದು ಅಂಬೇಡ್ಕರ್ ಅವರು ತಮ್ಮ ಮನಸ್ಸಿನ ಮೇಲಾದ ಗಾಯಕ್ಕೆ ಪ್ರತಿಯಾಗಿ ಸೆಟೆದು ನಿಂತು, ಶಿಕ್ಷಣದ ಕ್ರಾಂತಿಯನ್ನು ಹುಟ್ಟು ಹಾಕಿದರು. ಹಾಗಾಗಿ ಪ್ರತಿಯೊಬ್ಬರಿಗೂ ಶಿಕ್ಷಣ ದೊರಕದಿದ್ದರೆ, ಅಸ್ಪೃಶ್ಯತೆ ಹಾಗೂ ಅಸಮಾನತೆಯು ಸಮಾಜದಿಂದ ನಿರ್ಮೂಲನೆಯಾಗುವುದಿಲ್ಲ ಎಂದು ಹೇಳಿದರು.

    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕಿ ಡಾ. ಮಂಜುಳಾ ಹುಲ್ಲಹಳ್ಳಿ ಉಪನ್ಯಾಸ ನೀಡಿ ಬಾಬಾ ಸಾಹೇಬ ಡಾ. ಬಿ. ಆರ್ ಅಂಬೇಡ್ಕರ : ಭಾರತ ಭವ್ಯ ಭಾಗ್ಯದ ನೇತಾರ!’ನೋವಲ್ಲಿ ಹುಟ್ಟಿ ನೋವಲ್ಲೇ ಬೆಳೆದು ನೋವೆಂದರೇನೆಂದು ಕ್ಷಣಕ್ಷಣವೂ ಅನುಭವಿಸಿದ ಧೀರ ಮಾನಸ ತ್ಯಾಗಿ.ತಾನುಂಡ ನೋವು, ಮತ್ತಾರಿಗೂ ಬೇಡೆಂದು ತನ್ನ ಜೀವನವನ್ನೇ ತೇದು ಅರಿವಿನಹಣತೆ ಬೆಳಗಿದ ಅನನ್ಯ ಕಾಯಕ ಯೋಗಿ!ಬಾಬಾ ಸಾಹೇಬ ಡಾ, ಬಿ.ಆರ್. ಅಂಬೇಡ್ಕರನಿಮ್ಮ ತತ್ವ ಸಂದೇಶಗಳು ಜಗದ ಎಲ್ಲೆಡೆ ಹರಡಿ,ನಲಿವ ತರಲಿ, ಮನುಜ ಕುಲದ ನೋವ ನೀಗಿ’.
    ಮಧ್ಯಪ್ರದೇಶದ ಮಾವು ಗ್ರಾಮದ ಮಿಲಿಟರಿ ಕ್ಯಾಂಪ್. ಇಲ್ಲಿ ಮಿಲಿಟರಿ ಶಾಲೆಯ ಉಪಾದ್ಯಾಯರು ಮಹರ್ ಸಮುದಾಯದ ರಾಮಜಿ ಮಲೋಜಿ ಸಂಕಪಾಲ್. ಪತ್ನಿ ಭೀಮಾ ಬಾಯಿ, ಈ ಪುಣ್ಯ ದಂಪತಿಗಳಿಗೆ ೧೪ ನೇ ಮಗುವಾಗಿ ೧೮೯೧ ರ ಏಪ್ರಿಲ್ ೧೪ ರಂದು ಹುಟ್ಟಿದ ಮಗು ಭೀಮರಾವ್ ೧೪ ಮಕ್ಕಳು ಒಡಹುಟ್ಟಿದರೂ ಉಳಿದಿದ್ದು ಐದೇ ಜನ. ಮಂಜುಳಾ, ತುಳಸಿ, ಬಲರಾಮ, ಆನಂದರಾವ್ ಮತ್ತು ಭೀಮರಾವ್.
    ಸತಾರದಲ್ಲಿ ಭೀಮರಾವ್ ಪ್ರಾಥಮಿಕ ಶಿಕ್ಷಣ ಆರಂಭವಾಯಿತು ಆದರೆ, ಆರು ವ?ದ ಎಳೆತನದಲ್ಲೇ ತಾಯಿಯ ಮರಣದ ನೋವು ಬಾಲಕನ ಮೇಲೆ ಅಪಾರ ಪರಿಣಾಮ ಬೀರಿತು. ಆ ನೋವನ್ನು ಕಿಂಚಿತ್ತಾದರೂ ಶಮನ ಮಾಡುವ ಹೊಣೆಯನ್ನು ತಂದೆಯ ತಂಗಿ, ಸೋದರತ್ತೆ ಮೀರಬಾಯಿ ವಹಿಸಿಕೊಂಡರು.

    ಮನೆಯ ನೋವನ್ನು ಹೇಗೋ ನುಂಗಬಹುದು, ಆದರೆ, ಶಾಲೆ? ಆರನೇ ವಯಸ್ಸಿನಲ್ಲೇ, ಭೀಮರಾ??ಗೆ ಶಾಲೆಯಲ್ಲಿ ಅಸ್ಪೃಶ್ಯತೆಯ ಕರಾಳ ಮುಖದ ಪರಿಚಯ ಆಗತೊಡಗಿತು. ತರಗತಿಯ ಹೊರಗೆ ಕುಳಿತು ಪಾಠ ಕೇಳಬೇಕಾದ ದುರ್ಭರ ಸ್ಥಿತಿ ಈ ಪುಟ್ಟ ಮಗುವಿನ ಮನವನ್ನು ಘಾಸಿ ಮಾಡಿತ್ತು. ಆದರೆ ಇದು ಆರಂಭ ಮಾತ್ರ, ಮುಂದಿನ ಶಾಲಾ ದಿನಗಳೆಲ್ಲಾ ಇವೇ, ಹೀಗೆ ಎಂಬ ಅರಿವು ಹೆಚ್ಚಿದಾಗ ಶಿಕ್ಷಣ ಪಡೆಯುವುದೇ ಅಸಹ್ಯ ಅನುಭವವಾಯಿತು. ಇಂಥ ದಿನಗಳಲ್ಲಿ ಸಹನೀಯರೆನಿಸಿದ ಒಬ್ಬರೇ ಗುರುಗಳು ಫೆಂಡಸೇ ಅಂಬೇಡ್ಕರ್. ಇವರ ಕಾರಣದಿಂದಲೇ ಭೀಮರಾವ್ ಹೆಸರಿನ ಮುಂದೆ ರಾಮಜಿ ಅಂಬೇಡ್ಕರ್ ಹೆಸರು ಶಾಶ್ವತವಾಗಿ ಸೇರುವಂತಾಯಿತು. ಮುಂದೆ ಮಾಧ್ಯಮಿಕ ಶಿಕ್ಷಣಕ್ಕೆ ಬಾಂಬೆ ಸರ್ಕಾರಿ ಪ್ರೌಢಶಾಲೆ, ಎಲಿಫ??ಸ್ಟನ್ ಹೈಸ್ಕೂಲಿಗೆ ಬಂದಾಗ ಪಟ್ಟಣದ ಶಿಕ್ಷಣ ಸಹನೀಯ ಆಗಬಹುದೇನೋ ಎನ್ನುವ ನಿರೀಕ್ಷೆಯು ಪೂರ್ಣ ತಲೆಕೆಳಕಾಗಿ ಹಳ್ಳಿಗಿಂತಲೂ ಹೆಚ್ಚಿನ ಶೋ?ಣೆ, ಅನ್ಯಾಯ, ಚುಚ್ಚುಮಾತು, ಅವಮಾನಗಳಿಗೆ ಒಳಗಾಗಬೇಕಾಯಿತು. ಕಹಿ ಅನುಭವಗಳ ಮಧ್ಯೆಯೇ (೧೯೧) ರಲ್ಲಿ ೧೦ ನೇ ತರಗತಿ ಉತ್ತೀರ್ಣರಾದದ್ದು ಇಡೀ ಸಮುದಾಯದ ಹೆಮ್ಮೆಯಾಗುತ್ತದೆ. ಸನ್ಮಾನ ಕಾರ್ಯಕ್ರಮಕ್ಕೆ ಆಗಮಿಸಿದ ಕೆ.ಎ. ಕೆಲಸ್ಕರ್ ರವರು ನೀವು ನಮ್ಮ ಸಮಾಜದ ಮತ್ತು ಭಾರತದ ಸುಧಾರಕರಾಗಬೇಕು’ ಎಂದು ಹರಸಿ, ಉನ್ನತ ವ್ಯಾಸಂಗಕ್ಕೆ ಸಹಾಯ ಮಾಡುವುದಾಗಿ ವಚನವನ್ನು ನೀಡುತ್ತಾರೆ. ಅವರು ಅಂದು ನೀಡಿದ ಭಗವಾನ್ ಬುದ್ದನ ಚರಿತೆ ಬುದ್ದನ ಬಗೆಗಿನ ಅಂಬೇಡ್ಕರ್ ಭಾವಧಾರೆಗೆ ಅಡಿಗಲ್ಲಾಯಿತು.

    ೧೯೧೩ ರಿಂದ ೧೯೧೬ ರವರೆಗೆ ಅಮೇರಿಕಾದಲ್ಲಿ ಅಂಬೇಡ್ಕರ್ ಕಳೆದ ಸಮಯ ಅವರ ಜೀವನದ ಅತ್ಯಂತ ಮಹತ್ವದ ಕ್ಷಣಗಳಾಗಿದ್ದುವು. ಆ ಮುಕ್ತ ಪರಿಸರ ಅವರ ಪ್ರತಿಭೆಗೆ ಉತ್ತಮ ಅವಕಾಶ ನೀಡಿತು. ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಇತಿಹಾಸ, ತತ್ವಜ್ಞಾನ, ತರ್ಕಶಾಸ್ತ್ರ, ರಾಜ್ಯಶಾಸ್ತ್ರಗಳ ಅಧ್ಯಯನ, ೧೯೧೬ ರಲ್ಲಿ ‘ಭಾರತದಲ್ಲಿ ರಾಷ್ಟ್ರೀಯ ಪ್ರಾಚೀನ ಭಾರತದ ವಾಣಿಜ್ಯ ಉತ್ಪನ್ನಪ್ರಬಂಧಕ್ಕೆ ಪಿ.ಹೆಚ್.ಡಿ ‘ಭಾರತೀಯ ಜಾತಿಗಳು’ ‘ಭಾರತದಲ್ಲಿ ರಾಷ್ಟ್ರೀಯ ಹಣಕಸಿನ ವಿಕಾಸ’ ಮುಂತಾದ ಪ್ರಬಂಧಗಳು ಅಂಬೇಡ್ಕರ್ ಅವರಿಗೆ ವಿಶೇ? ಹೆಸರು ತಂದುಕೊಟ್ಟವು.

    ಭಾರತದಲ್ಲಿ, ಎಲ್ಲಿ ಕಾಲಿಟ್ಟರು ಮತ್ತೇ ಮತ್ತೇ ಅದೇ ಯಾತನೆ ಶೋ?ಣೆ ಅಪಮಾನಗಳ ಪುನಾರಾವರ್ತನೆ. ವಿದೇಶದ ವಾಸ ಕೊಟ್ಟಿದ್ದ ಗಟ್ಟಿತನದಲ್ಲಿ ಅಂಬೇಡ್ಕರ್ ಅಂದೇ ಪ್ರತಿಜ್ಞೆ ಮಾಡಿದರು, ತನಗಲ್ಲ ತನ್ನವರಿಗಾಗಿ. ಶತ ಶತಮಾನಗಳಿಂದ ಶೋ?ಣೆಗೆ ಒಳಗಾಗಿ ದಮನಿಸಲ್ಪಟ್ಟವರಿಗಾಗಿ ॒ಆ ನೋವು ಶೋ?ಣೆಗಳಿಗೆ ಒಂದು ತಾತ್ವಿಕ ಅಂತ್ಯ ನೀಡುವುದಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟರು.

    ಈಗ ಅವರಿಗೆ ‘ಮನು? ವಿಧಿಯ’ ಕೈಗೊಂಬೆ ಅಲ್ಲ, ಅವನ ಭವಿ?ವನ್ನು ಅವನೇ ರೂಪಿಸಿಕೊಳ್ಳಬಲ್ಲ. ಹಿರಿಯ ವಂಶದಲ್ಲಿ ಹುಟ್ಟಿದ ಮಾತ್ರಕ್ಕೆ ಒಬ್ಬ ವ್ಯಕ್ತಿ ದೊಡ್ಡವನಾಗಲಾರ ಎಂದು ಸಾವಿರ ವ?ಗಳ ಹಿಂದೆಯೇ ಸಾರಿ ಸಾರಿ ಹೇಳಿದ್ದ ಬುದ್ದನ ಮಾತುಗಳು ಪ್ರಿಯವಾಗತೊಡಗಿದವು. ‘ಭಾರತದಲ್ಲಿ ಜಾತಿಗಳು, ಅವುಗಳ ರಚನೆ, ಉತ್ಪತ್ತಿ ಮತ್ತು ಬೆಳವಣಿಗೆ’ ಕೃತಿರಚನೆಯ ವೇಳೆಗೆ ಅವರು ಬೌದ್ದ ಸಾಹಿತ್ಯದ ಅಮೂಲಾಗ್ರವನ್ನು ಅಧ್ಯಯನ ಮಾಡಿದ್ದರು.

    ಭಾರತಕ್ಕೆ ರಾಜಕೀಯ ಸ್ವಾತಂತ್ರ್ಯಕ್ಕಿಂತ ಸಾಮಾಜಿಕ ಸ್ವಾತಂತ್ರ್ಯ ಅಗತ್ಯ ಬಹಳ ಹೆಚ್ಚಿದೆ ಎಂದು ಪ್ರತಿಪಾದಿಸಿದ್ದ ಜ್ಯೋತಿ ಬಾ ಫುಲೆ ರಾಜಕೀಯ ತತ್ವಶಾಸ್ತ್ರಗಳ ಅಪೂರ್ವ ಚಿಂತಕ ಎಂ.ಜಿ ರಾನಡೆ, ಅವರ ಅಪಾರ ಪ್ರಭಾವವೂ ಅಂಬೇಡ್ಕರ್ ಅವಿರಿಗಾಯಿತು.

    ಮತ್ತೇ ಕೊಲಂಬಿಯಾ ವಿಶ್ವವಿದ್ಯಾನಿಲಯಕ್ಕೆ ತೆರಳಲು ಸಿಕ್ಕಿದ ಅವಕಾಶವನ್ನು ಸಾರ್ಥಕ ಮಾಡಿಕೊಂಡ ಅಂಬೇಡ್ಕರ್ ಅಲ್ಲಿ ವರ್ತಮಾನ, ವಾಸ್ತವಿಕ ಸಮಸ್ಯೆಗಳನ್ನು ಚರಿತೆ, ಮತ, ಧರ್ಮ, ರಾಜ್ಯಾಶಾಸ್ತ್ರ, ಅರ್ಥಶಾಸ್ತ್ರಗಳಂತಹ ವಿ?ಯಗಳ ಒಳಗೆ ಇಳಿದು ಅಂತರಾಷ್ಟ್ರೀಯ ಅಧ್ಯಯನದ ಮೂಲಕ ವಿಶ್ಲೇಷಿಸಿದರು ಇಲ್ಲಿಯೂ ಪದವಿಗಳ ಸರಮಾಲೆಯನ್ನೇ ತೊಡಿಸಿಕೊಂಡರು. ಒಂದು ಅಧ್ಯಯನದ ಪ್ರಕಾರ ವಿಶ್ವದಲ್ಲೇ ಅತಿ ಹೆಚ್ಚು ಪದವಿ ಪಡೆದ, ಅತಿ ಹೆಚ್ಚು ಪುಸ್ತಕಗಳನ್ನು ಅಧ್ಯಯನ ಮಾಡಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ.

    ಮೂಕನಾಯಕ ಪತ್ರಿಕೆ, ಬಹಿ?ತ ಹಿತಕಾರಣಿ ಸಭಾ, ಮಹತ್ ಸತ್ಯಾಗ್ರಹಿ, ದೇಗುಲ ಪ್ರವೇಶ ಮುಂತಾದ ಹೋರಾಟಗಳು ಅಂಬೇಡ್ಕರ್ ಜೀವನದ ಭಾಗಗಳಾಗಿದ್ದವು. ಈ ಹೋರಾಟದ ಸಂದರ್ಭದಲ್ಲೇ ಅಂಬೇಡ್ಕರ್ ಹಿಂದೂ ಮನಃ ಪರಿವರ್ತನೆಯ ಮೂಲಕ ಅಸ್ಪೃಶ್ಯರ ಏಳಿಗೆಯ ಕನಸು ನನಸಾಗಲಾರದು. ಅಸ್ಪೃಶ್ಯ ಸಮಾಜಕ್ಕೆ ಈಗ ಅಗತ್ಯವಾಗಿ ಬೇಕಾಗಿರುವುದು ಶಿಕ್ಷಣ, ಮೀಸಲಾತಿ ಮತ್ತು ರಾಜಕೀಯ ಹಕ್ಕುಗಳು ಎನ್ನುವುದನ್ನು ಮನಗಂಡರು. ಇದಾದ ಮೇಲೆ ಅವರ ಗುರಿ ಪಾರ್ಲಿಮೆಂಟಿನ ಪ್ರಜಾ ಪ್ರಭುತ್ವದ ಕಡೆಗೆ ಹೊರಳಿತು. ೧೯೩೦ ರ ನಂತರ ಅಂಬೇಡ್ಕರ್ ಪ್ರಬಲ ಸಾಮಾಜಿಕ ಕ್ರಾಂತಿಕಾರಿ ಆದರು. ಬ್ರಿಟೀ?ರ ಒಡೆದು ಆಳುವ ನೀತಿಯ ಕಾರಣದಿಂದ ಆ ಸಮಯದ ಭಾರತ ಛಿದ್ರ ಛಿದ್ರವಾಗುತ್ತಿತ್ತು, ಬಲಿ?ವಾಗುತ್ತಿದ್ದ ರಾಷ್ಟ್ರೀಯ ಚಳುವಳಿಯಲ್ಲಿ ದೇಶೀಯ ರಾಜರು; ಮುಸ್ಲಿಂ ಸಮುದಾಯ; ದಲಿತರು; ಅಲ್ಪಸಂಖ್ಯಾತರು, ಇವರ ಸ್ಥಾನಮಾನಗಳು ತಳುಕು ಹಾಕಿಕೊಂಡು ಗೊಂದಲಮಯ ವಾತಾವರಣ ಉಕ್ಕತೊಡಗಿತ್ತು.

    ರಾಜಕೀಯ ಏಳು ಬೀಳುಗಳು ಅಂಬೇಡ್ಕರ್ ಮನವನ್ನು ಹಿಂಡಿ ಹಿಪ್ಪೆ ಮಾಡಿದರೂ ಬೌದ್ಧಿಕವಾಗಿ ಅವರು ಪ್ರಜ್ವಲಿಸುತ್ತಲೇ ಬೆಳೆದರು. ೧೯೪೬ ರಲ್ಲಿ ಬಂಗಾಳದಿಂದ ಆಯ್ಕೆಯಾಗಿ ೧೯೪೭ರ ದೇಶದ ವಿಭಜನೆಯ ಕಾರಣದಿಂದ ಮತ್ತೇ ಬಾಂಬೆ ವಿಧಾನಸಭೆ ಮೂಲಕ ಸಂಸತ್ ಪ್ರವೇಶಿಸಿ ಸಂವಿಧಾನ ರಚನಾ ಸಭೆಗೆ ನೇಮಕಗೊಂಡಿದ್ದು ನಮ್ಮ ಇತಿಹಾಸದ ಸುವರ್ಣ ಕ್ಷಣಗಳು. ನೆಹರೂ ಮಂತ್ರಿಮಂಡಲದಲ್ಲಿ ಕಾನೂನು ಮಂತ್ರಿಯಾಗಿ, ಭಾರತದ ಸಂವಿಧಾನದ ಕರಡು ಪ್ರತಿಯ ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ ಕ್ಷಣ ಕಾಲದ ವಿಶ್ರಾಂತಿಯೂ ಇಲ್ಲದೇ ದುಡಿದ ಅಪ್ರತಿಮ ತ್ಯಾಗಿಯಾದರು. ನವಭಾರತವು ಚಿರಕಾಲ ಬದುಕಬೇಕೆಂಬ ಆಶಯದಿಂದ ಅದಕ್ಕೆ ಸ್ವಾತಂತ್ರ್ಯ, ಸಮಾನತೆ, ಮತ್ತು ಭ್ರಾತೃತ್ವದ ಭದ್ರ ಬುನಾದಿ ಹಾಕಿ ಸಂವಿಧಾನ ರಚಿಸಿದರು. ಪ್ರಜಾಪ್ರಭುತ್ವ ಎಂದರೆ ಅಂಬೇಡ್ಕರ್ ಪಾಲಿಗೆ ಕೇವಲ ಆಡಳಿತ ಕ್ರಮ ಆಗಿರಲಿಲ್ಲ, ಅದು ಭಾರತೀಯ ಜೀವನ ವಿಧಾನವೇ ಆಗಿತ್ತು.

    ಶೋಷಿತ ಸಮುದಾಯಗಳ ಉದ್ಧಾರಕ್ಕಾಗಿ ಹಗಲಿರುಳು ಶ್ರಮಿಸಿದ ಮಹಾನ್ ಚೇತನ ಅಂಬೇಡ್ಕರ್ ಈಗ ಹೆಸರಿಗೆ ಮಾತ್ರ ಮಹಾರಾ?ದವರು! ಆದರೆ ಅಕ್ಷರಶಃ ಅವರು ಭಾರತದ ಮನೆಮನೆಯ ಬೆಳಕು! ಇಡೀ ಭಾರತೀಯರಿಗೆ ‘ತಮ್ಮತನ’ ವನ್ನು ಕಲ್ಪಿಸಿಕೊಟ್ಟ, ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿಕೊಟ್ಟ ಅಂಬೇಡ್ಕರ್ ಅವರನ್ನು ಪ್ರತಿಯೊಬ್ಬರೂ ಮನದಾಳದಿಂದ ಅಭಿವಂದಿಸಬೇಕು.ಎಂದು ಹೇಳಿದರು.

    ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬಿ.ಆರ್ ಅಂಬೇಡ್ಕರ್ ಅವರ ಆದರ್ಶ ವ್ಯಕ್ತಿತ್ವ ಮತ್ತು ಜ್ಞಾನವನ್ನು ಇಡೀ ಜಗತ್ತು ಸ್ಮರಿಸಿ ಗೌರವಿಸುತ್ತಿದೆ. ದೇಶದ ಆರ್ಥಿಕ ಬಿಕ್ಕಟ್ಟು ಮತ್ತು ಸಾಮಾಜಿಕ ಸಮಸ್ಯೆಗಳನ್ನು ವೈಜ್ಞಾನಿಕ ಚಿಂತನೆಗಳ ಮೂಲಕ ಸರಳೀಕರಿಸಿ ಸುಧಾರಣೆ ಮಾಡಿದ ಮೇಧಾವಿ ಎನಿಸಿಕೊಂಡಿದ್ದಾರೆ. ಅವರ ಮಾನವೀಯತೆ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳು ಇಂದಿಗೂ ಪ್ರಸ್ತುತವಾಗಿದೆ. ಯುವ ಜನಾಂಗ ಅವರ ಚಿಂತನೆಗಳನ್ನು ಅಧ್ಯಯನ ಮಾಡುವ ಮೂಲಕ ಅವರ ಆದರ್ಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕಾಗಿದೆ ಎಂದರು.

    ಸಾಮಾಜಿಕ ಅಸಮಾನತೆ ವಿರುದ್ಧ ಹೋರಾಡಿದ ಡಾ. ಬಿ.ಆರ್ ಅಂಬೇಡ್ಕರ್ ಅವರ ಜೀವನ, ಸಾಧನೆ, ವ್ಯಕ್ತಿತ್ವ ಎಲ್ಲರಿಗೂ ದಾರಿದೀಪವಾಗಿದೆ. ಅವರು ದೇಶಕ್ಕೆ ಕೊಡುಗೆಯಾಗಿ ನೀಡಿದ ಸಂವಿಧಾನದಿಂದ ವಿಶ್ವದಲ್ಲಿಯೇ ಭಾರತ ಮಾದರಿ ಪ್ರಜಾಪ್ರಭುತ್ವ ರಾಷ್ಟವಾಗಿ ಹೊರಹೊಮ್ಮಿದೆ ಎಂದು ತಿಳಿಸಿದರು.
    ಕಾರ್ಯಕ್ರಮದಲ್ಲಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಚ್.ಎಸ್ ಕೀರ್ತನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ,ಕ.ರಾ.ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಪ್ತು ನಿಗಮದ ಅಧ್ಯಕ್ಷ ಬಿ.ಹೆಚ್.ಹರೀಶ್,ಹಾಗೂ ದಲಿತ ಸಂಘದ ಮುಖಂಡರು ಮುಂತಾದವರು ಉಪಸ್ಥಿತರಿದ್ದರು.

    ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾ ಪಂಚಾಯಿತಿ ಆವರಣದಲ್ಲಿರು ಡಾ.ಬಿ ಆರ್ ಅಂಬೇಡ್ಕರ್ ಪುತ್ತಳಿಗೆಗೆ ಗಣ್ಯರಿಂದ ಮಾಲರ್ಪಣೆ ನಡೆಯಿತು. ನಂತರ ನಗರದ ತಾಲ್ಲೂಕು ಕಛೇರಿಯಿಂದ ಕುವೆಂಪು ಕಲಾಮಂದಿರದ ವೆರೆಗೆ ವಿವಿಧ ಕಲಾತಂಡಗಳೊಂದಿಗೆ ಅಂಬೇಡ್ಕರ್ ರವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಯಿತು.

    Dr. B.R. Ambedkar was a multi-faceted cosmologist

  • ಸಂವಿಧಾನದ ಆಶಯದಂತೆ ನಡೆಯುತ್ತಿದೆ ಕಾಂಗ್ರೆಸ್ ಸರ್ಕಾರ

    ಅಜ್ಜಂಪುರ: ಸಮಗ್ರ ಭಾರತ ನಿರ್ಮಾಣಕ್ಕೆ ಸಂವಿಧಾನದ ಮೂಲಕ ಭದ್ರ ಅಡಿಪಾಯ ಹಾಕಿಕೊಟ್ಟ ಡಾ.ಬಾಬಾ ಸಾಹೇಬ್ ಅಂಬೇಡ್ಕರ ರವರ ಚಿಂತನೆಗಳನ್ನು ಜಾರಿಗೊಳಿಸುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದು ಕಾಂಗ್ರೇಸ್ ಸರ್ಕಾರ ಎಂದು ತರೀಕೆರೆ ಶಾಸಕ ಜಿ,ಎಚ್,ಶ್ರೀನಿವಾಸ್ ತಿಳಿಸಿದರು.

    ಸೋಮವಾರ ಅಜ್ಜಂಪುರದ ಅಂಬೇಡ್ಕರ್ ಭವನದಲ್ಲಿ ನಡೆದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್‍ರಾಂ ರವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಮಹನೀಯರು ತೋರಿಸದ ಹಾದಿಯಲ್ಲಿ ನಡೆದಾಗ ಇಂತಹ ಕಾರ್ಯಕ್ರಮಗಳಿಗೆ ನಿಜವಾದ ಅರ್ಥಬರಲಿದೆ ಅಂಬೇಡ್ಕರ್‍ರವರ ಸಂವಿಧಾನದ ಆಶಯದಂತೆ ಮಹಿಳೆಯರಿಗೆ ಸಮಾನತೆ ಹಿಂದುಳಿದವರ ಅಭಿವೃದ್ದಿ ಹೀಗೆ ಹತ್ತು ಹಲವು ಯೋಜನೆಗಳ ಮೂಲಕ ಕಾಂಗ್ರೇಸ್ ಸರ್ಕಾರ ಸಂವಿದಾನವನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದ್ದೆವೆ ಎಂದರು.

    ವಿಶೇಷ ಉಪನ್ಯಾಸ ನೀಡಿದ ಭದ್ರವತಿ ಪದವಿಪೂರ್ವ ಕಾಲೇಜೀನ ಉಪನ್ಯಾಸಕರಾದ ಕಿರಣ್ ಮಾತನಾಡಿ ಮಹನೀಯರನ್ನು ಜಾತಿಗೆ ಸಿಮೀತಗೊಳಿಸದೆ ವಿಶ್ವವ್ಯಾಪಿಗೊಳಿಸಬೇಕಿದೆ, ಜಾತಿ ವ್ಯವಸ್ಥೆ ದೂರವಾದಾಗ ಮಾತ್ರ ಸಶಕ್ತ ಭಾರತ ನಿರ್ಮಾಣವಾಗುವುದು ಎಂದರು.ಜ್ಞಾನಕ್ಕೆ ಪರ್ಯಾಯ ಹೆಸರು ಅಂಬೇಡ್ಕರ್ ಅಂತಹ ಮಾಹಾನ್ ವ್ಯಕ್ತಿಗಳ ಆದರ್ಶಗಳು ಪರಿಪಾಲನೆಯದಾಗ ಸದೃಡ ದೇಶ ನಿರ್ಮಾಣವಾಗಲಿದೆ ಎಂದರು.

    ಬಾಬು ಜಗಜೀವನರಾಂ ರವರು ಹಸಿರು ಕ್ರಾಂತಿಯ ಹರಿಕಾರರು ಸ್ವಾತಂತ್ರ್ಯ ನಂತರದ ಭಾರತದಲ್ಲಿ ಆಹಾರ ಉತ್ಪಾದನೆ ಕಡಿಮೆಯಾಗಿದ್ದು ಆ ಸಂಧರ್ಭದಲ್ಲಿ ತಮ್ಮ ದೂರ ದೃಷ್ಠಿಯಿಂದ ಕೃಷಿಯಲ್ಲಿ ವೈಜ್ಞಾನಿಕ ಪದ್ದತಿ ಅಳವÀಡಿಸಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭಿ ಭಾರತವನ್ನು ಕಟ್ಟಿದವರು ಅಂತಹ ಮಹಾನ್ ನಾಯಕರು ಜಾತಿ ವ್ಯವಸ್ಥೆಯಿಂದ ಪ್ರಾಧಾನಿ ಹುದ್ದೆ ವಂಚಿತರಾದರು ಇದು ಈ ದೇಶದ ವಿಪರ್ಯಾಸ ಎಂದರು.

    ತಹಶಿಲ್ದಾರ್ ವಿನಾಯಕ ಸಾಗರ್ ಮಾತನಾಡಿ ತುಳಿತಕ್ಕೆ ಒಳಗಾದವರ ಧ್ವನಿಯಾಗಿ ಹೋರಾಡಿದವರು ಅಂಬೇಡ್ಕರ್ ಸಂವಿಧಾನದ ಮೂಲಕ ಸಮಾನತೆಗೆ ಮುನ್ನುಡಿ ಬರೆದವರು ಅಂಬೇಡ್ಕರ್ ರವರು ಅಂತಹ ಮಹನೀಯರ ಜಯಂತಿಗಳು ಮನೆ ಮನೆಗಳಲ್ಲಿ ಆಚರಿಸುವಂತಾಗಬೇಕು ಅವರ ಆದರ್ಶಗಳು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು ಎಂದರು.

    ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಯಲ್ಲಿ ಅಧಿಕ ಅಂಕ ಗಳಿಸಿ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

    ಅಂತರಜಾತಿ ವಿವಾಹವಾದ ದಂಪತಿಗಳನ್ನು ಸನ್ಮಾನಿಸಲಾಯಿತು.

    ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ರವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ವಿವಿಧ ಜಾನಪದ ಕಲಾ ತಂಡಗಳ ಸಮ್ಮುಖದಲ್ಲಿ ಮೆರವಣಿಗೆ ನಡೆಸಲಾಯಿತು.

    ಕಾರ್ಯಕ್ರಮದಲ್ಲಿ ತಾ,ಪಂ,ಇಲಾಖೆಯ ನವೀನ್,ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ್,ಕಂದಾಯ ಇಲಾಖೆ ಶಿರಸ್ತೆದಾರ್ ನಟರಾಜು,ಮುಖಂಡರಾದ ಮಹೇಂದ್ರಸ್ವಾಮಿ,ಶಿವಣ್ಣ,ಬಸವರಾಜು,ಶಿವಮೂರ್ತಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.

  • ಅಂಬೇಡ್ಕರ್‍ರವರ ಚಿಂತನೆಗಳನ್ನು ಜಾರಿಗೊಳಿಸಿದ್ದು ಕಾಂಗ್ರೇಸ್ ಸರ್ಕಾರ.

    ಅಂಬೇಡ್ಕರ್‍ರವರ ಚಿಂತನೆಗಳನ್ನು ಜಾರಿಗೊಳಿಸಿದ್ದು ಕಾಂಗ್ರೇಸ್ ಸರ್ಕಾರ.

    ಸಮಗ್ರ ಭಾರತ ನಿರ್ಮಾಣಕ್ಕೆ ಸಂವಿಧಾನದ ಮೂಲಕ ಭದ್ರ ಅಡಿಪಾಯ ಹಾಕಿಕೊಟ್ಟ ಡಾ.ಬಾಬಾ ಸಾಹೇಬ್ ಅಂಬೇಡ್ಕರ ರವರ ಚಿಂತನೆಗಳನ್ನು ಜಾರಿಗೊಳಿಸುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದು ಕಾಂಗ್ರೇಸ್ ಸರ್ಕಾರ ಎಂದು ತರೀಕೆರೆ ಶಾಸಕ ಜಿ,ಎಚ್,ಶ್ರೀನಿವಾಸ್ ತಿಳಿಸಿದರು.
    ಸೋಮವಾರ ಅಜ್ಜಂಪುರದ ಅಂಬೇಡ್ಕರ್ ಭವನದಲ್ಲಿ ನಡೆದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್‍ರಾಂ ರವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಮಹನೀಯರು ತೋರಿಸದ ಹಾದಿಯಲ್ಲಿ ನಡೆದಾಗ ಇಂತಹ ಕಾರ್ಯಕ್ರಮಗಳಿಗೆ ನಿಜವಾದ ಅರ್ಥಬರಲಿದೆ ಅಂಬೇಡ್ಕರ್‍ರವರ ಸಂವಿಧಾನದ ಆಶಯದಂತೆ ಮಹಿಳೆಯರಿಗೆ ಸಮಾನತೆ ಹಿಂದುಳಿದವರ ಅಭಿವೃದ್ದಿ ಹೀಗೆ ಹತ್ತು ಹಲವು ಯೋಜನೆಗಳ ಮೂಲಕ ಕಾಂಗ್ರೇಸ್ ಸರ್ಕಾರ ಸಂವಿದಾನವನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದ್ದೆವೆ ಎಂದರು.
    ವಿಶೇಷ ಉಪನ್ಯಾಸ ನೀಡಿದ ಭದ್ರವತಿ ಪದವಿಪೂರ್ವ ಕಾಲೇಜೀನ ಉಪನ್ಯಾಸಕರಾದ ಕಿರಣ್ ಮಾತನಾಡಿ ಮಹನೀಯರನ್ನು ಜಾತಿಗೆ ಸಿಮೀತಗೊಳಿಸದೆ ವಿಶ್ವವ್ಯಾಪಿಗೊಳಿಸಬೇಕಿದೆ, ಜಾತಿ ವ್ಯವಸ್ಥೆ ದೂರವಾದಾಗ ಮಾತ್ರ ಸಶಕ್ತ ಭಾರತ ನಿರ್ಮಾಣವಾಗುವುದು ಎಂದರು.ಜ್ಞಾನಕ್ಕೆ ಪರ್ಯಾಯ ಹೆಸರು ಅಂಬೇಡ್ಕರ್ ಅಂತಹ ಮಾಹಾನ್ ವ್ಯಕ್ತಿಗಳ ಆದರ್ಶಗಳು ಪರಿಪಾಲನೆಯದಾಗ ಸದೃಡ ದೇಶ ನಿರ್ಮಾಣವಾಗಲಿದೆ ಎಂದರು.
    ಬಾಬು ಜಗಜೀವನರಾಂ ರವರು ಹಸಿರು ಕ್ರಾಂತಿಯ ಹರಿಕಾರರು ಸ್ವಾತಂತ್ರ್ಯ ನಂತರದ ಭಾರತದಲ್ಲಿ ಆಹಾರ ಉತ್ಪಾದನೆ ಕಡಿಮೆಯಾಗಿದ್ದು ಆ ಸಂಧರ್ಭದಲ್ಲಿ ತಮ್ಮ ದೂರ ದೃಷ್ಠಿಯಿಂದ ಕೃಷಿಯಲ್ಲಿ ವೈಜ್ಞಾನಿಕ ಪದ್ದತಿ ಅಳವÀಡಿಸಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭಿ ಭಾರತವನ್ನು ಕಟ್ಟಿದವರು ಅಂತಹ ಮಹಾನ್ ನಾಯಕರು ಜಾತಿ ವ್ಯವಸ್ಥೆಯಿಂದ ಪ್ರಾಧಾನಿ ಹುದ್ದೆ ವಂಚಿತರಾದರು ಇದು ಈ ದೇಶದ ವಿಪರ್ಯಾಸ ಎಂದರು.
    ತಹಶಿಲ್ದಾರ್ ವಿನಾಯಕ ಸಾಗರ್ ಮಾತನಾಡಿ ತುಳಿತಕ್ಕೆ ಒಳಗಾದವರ ಧ್ವನಿಯಾಗಿ ಹೋರಾಡಿದವರು ಅಂಬೇಡ್ಕರ್ ಸಂವಿಧಾನದ ಮೂಲಕ ಸಮಾನತೆಗೆ ಮುನ್ನುಡಿ ಬರೆದವರು ಅಂಬೇಡ್ಕರ್ ರವರು ಅಂತಹ ಮಹನೀಯರ ಜಯಂತಿಗಳು ಮನೆ ಮನೆಗಳಲ್ಲಿ ಆಚರಿಸುವಂತಾಗಬೇಕು ಅವರ ಆದರ್ಶಗಳು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು ಎಂದರು.
    ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ಪಿಯುಸಿ ಯಲ್ಲಿ ಅಧಿಕ ಅಂಕ ಗಳಿಸಿ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
    ಅಂತರಜಾತಿ ವಿವಾಹವಾದ ದಂಪತಿಗಳನ್ನು ಸನ್ಮಾನಿಸಲಾಯಿತು.
    ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ರವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ವಿವಿಧ ಜಾನಪದ ಕಲಾ ತಂಡಗಳ ಸಮ್ಮುಖದಲ್ಲಿ ಮೆರವಣಿಗೆ ನಡೆಸಲಾಯಿತು.
    ಕಾರ್ಯಕ್ರಮದಲ್ಲಿ ತಾ,ಪಂ,ಇಲಾಖೆಯ ನವೀನ್,ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ್,ಕಂದಾಯ ಇಲಾಖೆ ಶಿರಸ್ತೆದಾರ್ ನಟರಾಜು,ಮುಖಂಡರಾದ ಮಹೇಂದ್ರಸ್ವಾಮಿ,ಶಿವಣ್ಣ,ಬಸವರಾಜು,ಶಿವಮೂರ್ತಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.

  • ನಗರದಲ್ಲಿ ಎಕೆಬಿಎಂಎಸ್ ಅಧ್ಯಕ್ಷ ಸ್ಥಾನದ ಚುನಾವಣೆ – ಶೇ.೩೯.೮೬ ರಷ್ಟು ಮತದಾನ

    ನಗರದಲ್ಲಿ ಎಕೆಬಿಎಂಎಸ್ ಅಧ್ಯಕ್ಷ ಸ್ಥಾನದ ಚುನಾವಣೆ – ಶೇ.೩೯.೮೬ ರಷ್ಟು ಮತದಾನ

    ಚಿಕ್ಕಮಗಳೂರು: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯಲ್ಲಿ ಒಟ್ಟು ೮೧೮ ಮತದಾರರ ಪೈಕಿ ೩೨೬ ಮಂದಿ ಮತದಾರರು ಮತ ಚಲಾಯಿಸಿದ್ದು, ಒಟ್ಟು ಶೇ. ೩೯.೮೬ ರಷ್ಟು ಮತದಾನವಾಗಿದೆ.

    ಬೆಳಿಗ್ಗೆ ೮ ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಾಗ ನೀರಸವಾದ ಪ್ರತಿಕ್ರಿಯೆ ಕಂಡು ಬಂದಿತು. ೧೧.೩೦ರ ಬಳಿಕ ಮತದಾನ ಕೊಂಚ ವೇಗ ಪಡೆದುಕೊಂಡು ೧೨.೩೦ ರವರೆಗೆ ಸ್ವಲ್ಪಮಟ್ಟಿಗೆ ಬಿರುಸು ಕಂಡು ಬಂದಿತು. ಮಧ್ಯಾಹ್ನ ೧.೩೦ರ ಸುಮಾರಿಗೆ ಕೇವಲ ಶೇ.೩೦ ರಷ್ಟು ಮಾತ್ರ ಮತದಾನವಾಗಿತ್ತು.

    ಮಧ್ಯಾಹ್ನ ೨ ಗಂಟೆ ನಂತರ ಮತದಾನದಲ್ಲಿ ಸ್ವಲ್ಪ ಮಟ್ಟಿಗೆ ಚೇತರಿಕೆ ಕಂಡರೂ ಅನಂತರ ಮಂದಗತಿಗೆ ಇಳಿಯಿತು. ಸಂಜೆ ೪ ಗಂಟೆಯ ವೇಳೆಗೆ ಮತದಾನ ಮುಕ್ತಾಯಗೊಂಡಾಗ ಒಟ್ಟು ೩೨೬ ಮಂದಿ ಮತ ಚಲಾಯಿಸಿದ್ದು, ಶೇ.೩೯.೮೬ ರಷ್ಟು ಮತದಾನವಾಗಿದೆ.

    ನಗರದ ಬ್ರಹ್ಮಸಮುದ್ರ ಶ್ರೀ ರಂಗಣ್ಣನ ಛತ್ರದಲ್ಲಿ ಏರ್ಪಡಿಸಿದ್ದ ಮತಗಟ್ಟೆಯು ಚಿಕ್ಕಮಗಳೂರು, ಕಳಸಾಪುರ, ಬೆಳವಾಡಿ, ಮೂಡಿಗೆರೆ, ಸಖರಾಯಪಟ್ಟಣ, ಕಡೂರು, ತರೀಕೆರೆ, ಬೀರೂರು ಹಾಗೂ ಅಜ್ಜಂಪುರ ವ್ಯಾಪ್ತಿಗೆ ಒಳಪಟ್ಟಿದೆ.

    ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಸ್ಥಾನಕ್ಕೆ ವೇದಮೂರ್ತಿ ಡಾ.ಭಾನುಪ್ರಕಾಶ್ ಶರ್ಮ ಹಾಗೂ ರಘುನಾಥ್ ಎಸ್. ಸ್ಪರ್ಧಿಸಿದ್ದು, ಇವರಲ್ಲಿ ಒಬ್ಬರ ಆಯ್ಕೆಗಾಗಿ ಶಾಂತಿಯುತವಾಗಿ ಮತದಾನ ನಡೆಯಿತು. ಅನಂತರ ಮತ ಎಣಿಕೆ ಕಾರ್ಯ ನಡೆಯಿತು. ಸಹಕಾರ ಇಲಾಖೆಯ ಒಟ್ಟು ಎಂಟು ಮಂದಿ ಅಧಿಕಾರಿ, ಸಿಬ್ಬಂದಿ ಕಾರ್ಯ ನಿರ್ವಹಿಸಿದ್ದು, ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಪೊಲೀಸ್ ರಕ್ಷಣಾ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.

    ಎಕೆಬಿಎಂಎಸ್‌ನ ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಜಿಲ್ಲೆಯಿಂದ ಜಿಲ್ಲಾ ಬ್ರಾಹ್ಮಣ ಸಭಾದ ಅಧ್ಯಕ್ಷ ಡಾ.ಜಿ.ಎಸ್.ಮಹಾಬಲ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವರಿಗೆ ಎದುರಾಳಿಯಾಗಿ ಯಾರೂ ನಾಮಪತ್ರ ಸಲ್ಲಿಸದಿರುವುದರಿಂದ ಅವರ ಆಯ್ಕೆ ಅವಿರೋಧವಾಗಿ ಆಗಲಿದೆ.

    Election for the post of AKBMS president in the city

  • ಜಾತಿ ಜನಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ-ರಾಜ್ಯ ಸರ್ಕಾರಕ್ಕೆ ಇಲ್ಲ

    ಜಾತಿ ಜನಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ-ರಾಜ್ಯ ಸರ್ಕಾರಕ್ಕೆ ಇಲ್ಲ

    ಚಿಕ್ಕಮಗಳೂರು: ‘ರಾಜ್ಯದ ಜನಸಂಖ್ಯೆಯಲ್ಲಿ 2ನೇ ದೊಡ್ಡ ಸಂಖ್ಯೆಯಲ್ಲಿ ಇರುವ ಮುಸ್ಲಿಮರು ಹೇಗೆ ಅಲ್ಪಸಂಖ್ಯಾತರಾಗುತ್ತಾರೆ. ಜಾತಿ ಜನಗಣತಿ ಮಾಡುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ, ರಾಜ್ಯ ಸರ್ಕಾರಕ್ಕೆ ಇಲ್ಲ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದರು.

    ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿ ‘ಮುಸ್ಲಿಂ ಸಮುದಾಯದಲ್ಲಿ 56 ಜಾತಿಗಳಿವೆ. ಅಲ್ಲಿಯೂ ಅಸ್ಪೃಶ್ಯರು ಇದ್ದಾರೆ. ಈ ಬಗ್ಗೆ ಯಾರೂ ಚರ್ಚೆ ಮಾಡುವುದಿಲ್ಲ. ಪಸ್ಮಾಂಡ ಮುಸ್ಲಿಮರು ಇದ್ದಾರೆ. ಯಾರು ಪ್ರವಾದಿ ವಂಶಸ್ಥರು ಎಂದು ಭಾವಿಸಿದ್ದಾರೆಯೋ ಅವರು ಈ ಸಮುದಾಯವರಿಗೆ ಹೆಣ್ಣು ಕೊಡುವುದಿಲ್ಲ. ಮುಸ್ಲಿಮರನ್ನು ಇಡಿಯಾಗಿ ಇಡುವ ಹಾಗೂ ಹಿಂದೂಗಳನ್ನು ಒಡೆದಾಳುವ ನೀತಿಗೆ ನಾವು ಬೆಂಬಲ ನೀಡುವುದಿಲ್ಲ. ಸಾಮಾಜಿಕ ನ್ಯಾಯ ಬಿಜೆಪಿಯ ಬದ್ಧತೆ’ ಎಂದು

    ಕಾಂಗ್ರೆಸ್ ನೇತೃತ್ವದ ಸರ್ಕಾರ ನಡೆಸಿದ್ದ ಜಾತಿಗಣತಿ ವರದಿ ಅಧಿಕೃತವಾಗಿ ಬಿಡುಗಡೆಯಾಗಿಲ್ಲ. ರಾಜ್ಯದಲ್ಲಿ ಅಲ್ಪಸಂಖ್ಯಾತರು ಯಾರು, ರಾಜ್ಯದ ಜನಸಂಖ್ಯೆಯಲ್ಲಿ ಎರಡನೇ ದೊಡ್ಡ ಸಂಖ್ಯೆಯಲ್ಲಿ ಇರುವ ಸಮುದಾಯ ಅಲ್ಪಸಂಖ್ಯಾತ ಎಂದರೆ ಹೇಗೆ. ಮೀಸಲಾತಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದಾಗ ಕೇಂದ್ರ ಸರ್ಕಾರ ಬಡ್ತಿ ಮೀಸಲಾತಿ ಪರ ಪ್ರಮಾಣ ಪತ್ರ ಸಲ್ಲಿಸಿತ್ತು. ಇದು ಮೀಸಲಾತಿ ಬಗ್ಗೆ ಬಿಜೆಪಿಗೆ ಇರುವ ಬದ್ಧತೆ ಎಂದರು.

    ಕೆಲವರು ಹಿಂದೂ ಸಮಾಜವನ್ನು ಜಾತಿವಾರು ಒಡೆಯುವ ಕೆಲಸ ಮಾಡುತ್ತಿದ್ದಾರೆ. ವಕ್ಫ್ ಕಾಯ್ದೆ ವಿಷಯದಲ್ಲಿ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ. ಹಿಂದೆ ಸಿಎಎ ವಿರುದ್ಧವು ಕಾಂಗ್ರೆಸ್ ಇದೇ ರೀತಿ ಅಪಪ್ರಚಾರ ಮಾಡಿತ್ತು. ಇಂಥವು ಕಾಂಗ್ರೆಸ್ ಪಕ್ಷದ ರಾಷ್ಟ್ರ ಘಾತುಕ ನಿಲುವುಗಳಾಗಿವೆ ಎಂದರು.

    ‘ವಕ್ಫ್ ಕಾಯ್ದೆ ವಿಷಯದಲ್ಲಿ ಅಪಪ್ರಚಾರ ಮಾಡುತ್ತಿದ್ದಾರೆ. ನ್ಯಾಯಬದ್ಧವಾಗಿ ವಕ್ಫ್‌ಗೆ ಸೇರಿದ ಜಮೀನನ್ನು ಯಾರೂ ಕಿತ್ತುಕೊಳ್ಳುವುದಿಲ್ಲ. ಅಕ್ರಮವಾಗಿರುವ ಆಸ್ತಿಯನ್ನು ಯಾವುದೇ ಕಾರಣಕ್ಕೂ ಬಿಡಲೇಬೇಕು. ರೈತರ ಜಮೀನು, ಸಾವಿರಾರು ವರ್ಷಗಳ ಇತಿಹಾಸವಿರುವ ದೇವಸ್ಥಾನದ ಜಮೀನನ್ನು ನಮ್ಮದೇ ಎನ್ನುತ್ತಾರೆ. ಇಂತಹ ಆಸ್ತಿಗಳನ್ನು ಬಿಡಲೇಬೇಕು. ವಿಧಾನಸೌಧ, ಸುಪ್ರೀಂ ಕೋರ್ಟ್, ಹೈಕೋರ್ಟ್ ಎಲ್ಲವೂ ನಮ್ಮದೇ ಎನ್ನಲು ಅವರಿಗೆ ಅವಕಾಶ ನೀಡಬೇಕೆ’ ಎಂದು ಪ್ರಶ್ನಿಸಿದರು.

    Only the central government has the authority to conduct a caste census.

  • ಕಲರ್ಸ್ ಕನ್ನಡದಲ್ಲಿ ಹೊಸ ಕೌಟುಂಬಿಕ ಧಾರಾವಾಹಿ ‘ಮುದ್ದು ಸೊಸೆ’

    ಕಲರ್ಸ್ ಕನ್ನಡದಲ್ಲಿ ಹೊಸ ಕೌಟುಂಬಿಕ ಧಾರಾವಾಹಿ ‘ಮುದ್ದು ಸೊಸೆ’

    ವಿದ್ಯಾಗೆ ವಿದ್ಯೆ ಬೇಕು, ಮನೆಯವರಿಗೆ ಮದುವೆ!
    ಸ್ಕೂಲ್ ಬೆಂಚಿಂದ ಹಸೆಮಣೆ ಏರುವ ವಿದ್ಯಾಳ ಬದುಕಿನ ಕತೆ

    ಕಲರ್ಸ್ ಕನ್ನಡ ವಾಹಿನಿ ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ, ಮನಮಿಡಿಯುವ ಧಾರಾವಾಹಿಗಳನ್ನು ನೀಡುವ ಮೂಲಕ ಜನಪ್ರಿಯವಾಗಿದೆ. ಇದೀಗ, ಮತ್ತೊಂದು ಹೃದಯಸ್ಪರ್ಶಿ ಕತೆ ‘ಮುದ್ದು ಸೊಸೆ’ಯನ್ನು ಪ್ರೇಕ್ಷಕರಿಗೆ ತಲುಪಿಸುತ್ತಿದೆ. ತ್ರಿವಿಕ್ರಮ್ ನಾಯಕರಾಗಿ ಪ್ರತಿಮಾ ಠಾಕುರ್ ನಾಯಕಿಯಾಗಿರುವ, ಮುನಿ ಮತ್ತು ಹರಿಣಿ ಶ್ರೀಕಾಂತ್ ತಾರಾಗಣದ ಈ ಬಹುನಿರೀಕ್ಷಿತ ಧಾರಾವಾಹಿ ಏಪ್ರಿಲ್ 14ರಿಂದ ಸೋಮವಾರದಿಂದ ಶುಕ್ರವಾರ ರಾತ್ರಿ 7:30ಕ್ಕೆ ನಿಮ್ಮ ಕಲರ್ಸ್ ಕನ್ನಡದಲ್ಲಿ ಪ್ರಸಾರಗೊಳ್ಳಲಿದೆ.

    ವೈದ್ಯೆ ಆಗಬೇಕೆಂಬ ಕನಸನ್ನು ಕಾಣುತ್ತಿರುವ ಪ್ರತಿಭಾವಂತ ವಿದಾರ್ಥಿನಿ ವಿದ್ಯಾ; ಸ್ಕೂಲ್ ಬೆಂಚಿಂದ ಹಸೆಮಣೆ ಏರುವ ವಿದ್ಯಾಳ ಬದುಕಿನ ಕತೆಯನ್ನು ಹೇಳುತ್ತದೆ ‘ಮುದ್ದು ಸೊಸೆ’. ಮನಸ್ತುಂಬಾ ಓದು ತುಂಬಿರುವ, ಮನಸೊಪ್ಪದ ಮದುವೆಯಾಗಿರುವ ‘ಮುದ್ದು ಸೊಸೆ’ ಮನೆಮಂದಿಯೆಲ್ಲ ಸೇರಿ ನೋಡಲೇಬೇಕಾದ ಧಾರಾವಾಹಿ. ಪ್ರೀತಿ, ಸಂಬಂಧಗಳ, ಆತ್ಮವಿಶ್ವಾಸ -ಪ್ರಬಲ ಸಂಕಲ್ಪ ಹೊಂದಿರುವ ನಾಯಕಿಯ ಸುತ್ತ ಹೆಣೆದಿರುವ ಕಥಾ ಹಂದರದಿಂದ ‘ ‘ಮುದ್ದು ಸೊಸೆ’ ಪ್ರೇಕ್ಷಕರ ಹೃದಯ ಗೆಲ್ಲಲಿದೆ.

    ‘ಎಸ್ಟ್ರೆಲ್ಲಾ ಸ್ಟೋರೀಸ್ ‘ ನಿರ್ಮಿಸುತ್ತಿರುವ ‘ಮುದ್ದು ಸೊಸೆ’ ಧಾರಾವಾಹಿಯು ಬೊಗಸೆಗಣ್ಣಿನ ಬಯಕೆಯ ವಿದ್ಯಾಳ ಕತೆಯನ್ನು ಹೇಳುತ್ತದೆ. ವಿದ್ಯಾಗೆ ವಿದ್ಯೆ ಬೇಕು, ಮನೆಯವರಿಗೆ ಅವಳ ಮದುವೆ ಮಾಡಬೇಕು, ಅಷ್ಟೇ! ವೈದ್ಯೆಯಾಗಬೇಕೆಂಬ ವಿದ್ಯಾಳ ಕನಸು, ಮದುವೆಯ ಕಾರಣದಿಂದ ಬದಿಗಿಡಲ್ಪಡುತ್ತದೆ. ಸಾಮಾಜಿಕ ಒತ್ತಡ ಮತ್ತು ಕುಟುಂಬದ ನಿರೀಕ್ಷೆಗಳ ನಡುವೆ ಅವಳ ಆಸೆ ಆಕಾಂಕ್ಷೆಗಳು ಮನದೊಳಗೆ ಮುದುಡಿದರೂ ಅವಳು ತನ್ನ ಕನಸುಗಳನ್ನು ಹೂವಾಗಿ ಅರಳಿಸಲು ಏನೆಲ್ಲಾ ಮಾಡುತ್ತಾಳೆ ಎನ್ನುವ ಕತೆ ಹೇಳುತ್ತದೆ ಈ ಧಾರಾವಾಹಿ. ಜೀವನದಲ್ಲಿ ಏನೇ ಅಡೆತಡೆ ಬಂದರೂ ತನ್ನ ಕನಸನ್ನು ನನಸಾಗಿಸಲು ಸಮಾಜದಲ್ಲಿ ತಲೆಯೆತ್ತಿ ನಿಲ್ಲಲು ನಿರ್ಧರಿಸುವ ವಿದ್ಯಾಳ ಜೀವನದ ಕತೆಯೇ ‘ಮುದ್ದು ಸೊಸೆ’.

    ಸಕ್ಕರೆ ನಗರ ಮಂಡ್ಯದಲ್ಲಿ ಚಿತ್ರೀಕರಿಸಲಾಗಿರುವ ಈ ಧಾರಾವಾಹಿ, ಭಾರತದ ಗ್ರಾಮೀಣ ಕುಟುಂಬಗಳ ಸಂಸ್ಕೃತಿ ಮತ್ತು ಸಾಮಾಜಿಕ ಮೌಲ್ಯಗಳನ್ನು ಸೂಕ್ಷ್ಮವಾಗಿ ಚಿತ್ರಿಸುತ್ತದೆ. ಈ ಎಲ್ಲ ಚೌಕಟ್ಟಿನಲ್ಲಿ ಒಬ್ಬ ಮಹಿಳೆಯ ರೂಪಾಂತರವನ್ನು ಜನರಿಗೆ ಮನಮುಟ್ಟುವಂತೆ ಹೇಳುತ್ತದೆ. ಧಾರಾವಾಹಿಯು ಪ್ರೀತಿ, ಗೌರವ ಮತ್ತು ಕುಟುಂಬ ಮೌಲ್ಯಗಳ ನಡುವಿನ ಸಮತೋಲನವನ್ನು ಪ್ರತಿಬಿಂಬಿಸುತ್ತ ಎಲ್ಲ ವಯಸ್ಸಿನವರಿಗೂ ಇಷ್ಟವಾಗುತ್ತ ಹೋಗುತ್ತದೆ.
    ಕಥಾ ಹಂದರ

    ಹೊನ್ನೆಮಡು ಎಂಬ ಹಳ್ಳಿಯ ಒಂದು ಸಾಮಾನ್ಯ ಕುಟುಂಬದಿಂದ ಬಂದ ವಿದ್ಯಾ, ವೈದ್ಯೆಯಾಗಬೇಕೆಂಬ ಕನಸಿನೊಂದಿಗೆ ಬೆಳೆದ ಪ್ರತಿಭಾವಂತ ವಿದ್ಯಾರ್ಥಿನಿ. ಆದರೆ, ಹುಲಿಕೆರೆಯ ಶ್ರೀಮಂತ ಕುಟುಂಬದಿಂದ ಬಂದ ಭದ್ರಗೌಡ, ತನ್ನ ತಂದೆ ಶಿವರಾಮೇಗೌಡರ ಆದೇಶಗಳನ್ನು ಪಾಲಿಸುವವನು. ಭದ್ರನ ಪಾಲಿಗೆ ಅಪ್ಪನೇ ದೇವ್ರು, ಅಪ್ಪನೇ ಉತ್ಸವ ಮೂರ್ತಿ. ತನ್ನ ತಂದೆಯ ಗೌರವ ಹೆಚ್ಚಿಸುವುದಕ್ಕಾಗಿ ಯಾವುದೇ ಕೆಲಸ ಮಾಡಬಲ್ಲ, ಕೆಣಕಿದರೆ ಯಾರನ್ನೂ ಬಿಡದ ಭದ್ರ ಮತ್ತು ಶಿವರಾಮೇಗೌಡನ ನಡುವೆ ಯಾರೂ ಮುರಿಯಲಾಗದ ಪ್ರೀತಿಯ ಬಂಧವಿರುತ್ತದೆ.

    ಯಾರಿಗೂ ಬಗ್ಗದ ಕಠಿಣ ವ್ಯಕ್ತಿತ್ವದ ಜಮೀನ್ದಾರ ಶಿವರಾಮೇಗೌಡರಿಗೆ ಹೆಣ್ಣು ಮಕ್ಕಳು ವಿದ್ಯಾಭ್ಯಾಸ ಮಾಡಿದರೆ ಹಾಳಾಗುತ್ತಾರೆ ಎಂಬ ಗಟ್ಟಿಯಾದ ನಂಬಿಕೆ. ಶಿವರಾಮೇಗೌಡರು ತಮ್ಮ ಮಗನಿಗೆ ವಿದ್ಯಾಳನ್ನು ಮದುವೆ ಮಾಡಿಸುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ. ವಿದ್ಯಾಳ ತಂದೆ ಚೆಲುವರಾಯನಿಗೂ ಹೆಣ್ಣುಮಕ್ಕಳು ಓದುವುದರ ಬಗ್ಗೆ ವಿರೋಧ ಇರುವುದರಿಂದ ಅವನು ಕೂಡಾ ಈ ಮದುವೆಗೆ ಒಪ್ಪುತ್ತಾನೆ. ತನ್ನ ಕನಸುಗಳ ಬೆನ್ನತ್ತಿರುವ ವಿದ್ಯಾ ಒತ್ತಾಯದಿಂದ ಮದುವೆಯಾಗಬೇಕಾದಾಗ, ಆಕೆ ಪತ್ನಿಯಾಗಿ, ಸೊಸೆಯಾಗಿ ತನ್ನ ಸ್ವಂತ ಬದುಕನ್ನು ಕನಸನ್ನು ನಿಜ ಮಾಡಲು ಹೋರಾಡಬೇಕಾಗುತ್ತದೆ.

    ವಿದ್ಯಾಳ ಮದುವೆ ಅವಳ ಕನಸುಗಳಿಗೆ ಅಡ್ಡಿಯಾಗುತ್ತದೆಯೇ? ತಂದೆಯ ಆದೇಶಗಳಿಗೆ ತಲೆಬಾಗುವ ಭದ್ರ, ವಿದ್ಯಾಳ ಕನಸುಗಳನ್ನು ಅರಿತಾಗ ತಂದೆಯ ವಿರೋಧ ಕಟ್ಟಿಕೊಂಡು ವಿದ್ಯಾಳನ್ನು ಓದಿಸುವನೇ? ಅವಳ ಮನದ ಒಳಗಿನ ನೋವನ್ನು ಅರ್ಥಮಾಡಿಕೊಳ್ಳುತ್ತಾನೆಯೇ? ಭದ್ರ ಮತ್ತು ವಿದ್ಯಾಳ ದಾಂಪತ್ಯವು ವಿದ್ಯಾಳ ಭವಿಷ್ಯಕ್ಕೆ ಸಹಾಯ ಮಾಡುತ್ತದೆಯೇ?

    ಏಪ್ರಿಲ್ 14 ರಿಂದ ಸೋಮವಾರದಿಂದ -ಶುಕ್ರವಾರ ರಾತ್ರಿ 7:30ಕ್ಕೆ ಕಲರ್ಸ್ ಕನ್ನಡದಲ್ಲಿ, ಸ್ಕೂಲ್ ಬೆಂಚಿಂದ ಹಸೆಮಣೆ ಏರುವ ‘ಮುದ್ದು ಸೊಸೆ’ಯ ಕತೆ ಶುರುವಾಗುತ್ತಿದೆ – ತಪ್ಪದೆ ನೋಡಿ.

    Colors Kannada’s new family serial ‘Muddu Sose’