Category: ರಾಜ್ಯ
-

ಅಂಬೇಡ್ಕರ್ರವರ ಚಿಂತನೆಗಳನ್ನು ಜಾರಿಗೊಳಿಸಿದ್ದು ಕಾಂಗ್ರೇಸ್ ಸರ್ಕಾರ.
ಸಮಗ್ರ ಭಾರತ ನಿರ್ಮಾಣಕ್ಕೆ ಸಂವಿಧಾನದ ಮೂಲಕ ಭದ್ರ ಅಡಿಪಾಯ ಹಾಕಿಕೊಟ್ಟ ಡಾ.ಬಾಬಾ ಸಾಹೇಬ್ ಅಂಬೇಡ್ಕರ ರವರ ಚಿಂತನೆಗಳನ್ನು ಜಾರಿಗೊಳಿಸುವ ಮೂಲಕ ಸಮ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದು ಕಾಂಗ್ರೇಸ್ ಸರ್ಕಾರ ಎಂದು ತರೀಕೆರೆ ಶಾಸಕ ಜಿ,ಎಚ್,ಶ್ರೀನಿವಾಸ್ ತಿಳಿಸಿದರು.
ಸೋಮವಾರ ಅಜ್ಜಂಪುರದ ಅಂಬೇಡ್ಕರ್ ಭವನದಲ್ಲಿ ನಡೆದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ರಾಂ ರವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹನೀಯರು ತೋರಿಸದ ಹಾದಿಯಲ್ಲಿ ನಡೆದಾಗ ಇಂತಹ ಕಾರ್ಯಕ್ರಮಗಳಿಗೆ ನಿಜವಾದ ಅರ್ಥಬರಲಿದೆ ಅಂಬೇಡ್ಕರ್ರವರ ಸಂವಿಧಾನದ ಆಶಯದಂತೆ ಮಹಿಳೆಯರಿಗೆ ಸಮಾನತೆ ಹಿಂದುಳಿದವರ ಅಭಿವೃದ್ದಿ ಹೀಗೆ ಹತ್ತು ಹಲವು ಯೋಜನೆಗಳ ಮೂಲಕ ಕಾಂಗ್ರೇಸ್ ಸರ್ಕಾರ ಸಂವಿದಾನವನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದ್ದೆವೆ ಎಂದರು.
ವಿಶೇಷ ಉಪನ್ಯಾಸ ನೀಡಿದ ಭದ್ರವತಿ ಪದವಿಪೂರ್ವ ಕಾಲೇಜೀನ ಉಪನ್ಯಾಸಕರಾದ ಕಿರಣ್ ಮಾತನಾಡಿ ಮಹನೀಯರನ್ನು ಜಾತಿಗೆ ಸಿಮೀತಗೊಳಿಸದೆ ವಿಶ್ವವ್ಯಾಪಿಗೊಳಿಸಬೇಕಿದೆ, ಜಾತಿ ವ್ಯವಸ್ಥೆ ದೂರವಾದಾಗ ಮಾತ್ರ ಸಶಕ್ತ ಭಾರತ ನಿರ್ಮಾಣವಾಗುವುದು ಎಂದರು.ಜ್ಞಾನಕ್ಕೆ ಪರ್ಯಾಯ ಹೆಸರು ಅಂಬೇಡ್ಕರ್ ಅಂತಹ ಮಾಹಾನ್ ವ್ಯಕ್ತಿಗಳ ಆದರ್ಶಗಳು ಪರಿಪಾಲನೆಯದಾಗ ಸದೃಡ ದೇಶ ನಿರ್ಮಾಣವಾಗಲಿದೆ ಎಂದರು.
ಬಾಬು ಜಗಜೀವನರಾಂ ರವರು ಹಸಿರು ಕ್ರಾಂತಿಯ ಹರಿಕಾರರು ಸ್ವಾತಂತ್ರ್ಯ ನಂತರದ ಭಾರತದಲ್ಲಿ ಆಹಾರ ಉತ್ಪಾದನೆ ಕಡಿಮೆಯಾಗಿದ್ದು ಆ ಸಂಧರ್ಭದಲ್ಲಿ ತಮ್ಮ ದೂರ ದೃಷ್ಠಿಯಿಂದ ಕೃಷಿಯಲ್ಲಿ ವೈಜ್ಞಾನಿಕ ಪದ್ದತಿ ಅಳವÀಡಿಸಿ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಭಿ ಭಾರತವನ್ನು ಕಟ್ಟಿದವರು ಅಂತಹ ಮಹಾನ್ ನಾಯಕರು ಜಾತಿ ವ್ಯವಸ್ಥೆಯಿಂದ ಪ್ರಾಧಾನಿ ಹುದ್ದೆ ವಂಚಿತರಾದರು ಇದು ಈ ದೇಶದ ವಿಪರ್ಯಾಸ ಎಂದರು.
ತಹಶಿಲ್ದಾರ್ ವಿನಾಯಕ ಸಾಗರ್ ಮಾತನಾಡಿ ತುಳಿತಕ್ಕೆ ಒಳಗಾದವರ ಧ್ವನಿಯಾಗಿ ಹೋರಾಡಿದವರು ಅಂಬೇಡ್ಕರ್ ಸಂವಿಧಾನದ ಮೂಲಕ ಸಮಾನತೆಗೆ ಮುನ್ನುಡಿ ಬರೆದವರು ಅಂಬೇಡ್ಕರ್ ರವರು ಅಂತಹ ಮಹನೀಯರ ಜಯಂತಿಗಳು ಮನೆ ಮನೆಗಳಲ್ಲಿ ಆಚರಿಸುವಂತಾಗಬೇಕು ಅವರ ಆದರ್ಶಗಳು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಯಲ್ಲಿ ಅಧಿಕ ಅಂಕ ಗಳಿಸಿ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಅಂತರಜಾತಿ ವಿವಾಹವಾದ ದಂಪತಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಅಂಬೇಡ್ಕರ್ ಹಾಗೂ ಬಾಬು ಜಗಜೀವನರಾಂ ರವರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ವಿವಿಧ ಜಾನಪದ ಕಲಾ ತಂಡಗಳ ಸಮ್ಮುಖದಲ್ಲಿ ಮೆರವಣಿಗೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ತಾ,ಪಂ,ಇಲಾಖೆಯ ನವೀನ್,ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ್,ಕಂದಾಯ ಇಲಾಖೆ ಶಿರಸ್ತೆದಾರ್ ನಟರಾಜು,ಮುಖಂಡರಾದ ಮಹೇಂದ್ರಸ್ವಾಮಿ,ಶಿವಣ್ಣ,ಬಸವರಾಜು,ಶಿವಮೂರ್ತಿ ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು. -

ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ.ಲಯನ್ಸ್ ಕ್ಲಬ್ ಅಧ್ಯಕ್ಷ ಜಿ,ಎಂ,ಪ್ರಕಾಶ್ ಅಭಿಮತ
ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ.ಲಯನ್ಸ್ ಕ್ಲಬ್ ಅಧ್ಯಕ್ಷ ಜಿ,ಎಂ,ಪ್ರಕಾಶ್ ಅಭಿಮತ
ಅಜ್ಜಂಪುರ: ಪ್ರತಯೊಬ್ಬರು ನಮ್ಮ ಸಂಸ್ಕøತಿ ಪರಂಪರೆಯನ್ನು ವಿಶ್ವಕ್ಕೆ ಸಾರಿದ ಮಹನೀಯರ ಆದರ್ಶಗಳ್ನು ಅಳವಡಿಸಿಕೊಂಡಾಗ ಸುಸಂಸ್ಕøತ ಸಮಾಜ ನಿರ್ಮಾಣವಾಗಲಿದೆ ಎಂದು ಅಜ್ಜಂಪುರ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಜಿ,ಎಂ,ಪ್ರಕಾಶ್ ತಿಳಿಸಿದರು.
ಶುಕ್ರವಾರ ಕಾಟಿಗನೆರೆ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಧರ್ಮ ಸಂಸ್ಖøತಿಯ ಶ್ರೀಮಂತಿಕೆಯನ್ನು ಎತ್ತಿ ಹಿಡಿದ ಮಹಾನೀಯರ ಪೋಟೋಗಳನ್ನು ಕೊಡುಗೆ ನೀಡಿ ಮಾತನಾಡಿದರು.
ಮಕ್ಕಳÀು ಗುರು ಹಿರಿಯರನ್ನು ಗೌರವಿಸುವ ಜೊತೆಗೆ ನಮ್ಮ ಸಂಸ್ಖøತಿಯನ್ನು ಮೈಗೋಡಿಸಿಕೊಂಡಾಗ ಉತ್ತಮ ಪ್ರಜೆಗಳಾಗಬಹದು ಎಂದರು.
ಮಕ್ಕಳಿಗೆ ಸಿಹಿ ಹಂಚಿ ಸಂಭ್ರಮಿಸಿದರು.
ಇದೇ ಸಂಧರ್ಭದಲ್ಲಿ ಲಯನ್ಸ್ ಕ್ಲಬ್ ಕಾರ್ಯದರ್ಶಿ ಸತೀಶ್,ಸದಸ್ಯರಾದ ಮಲ್ಲಿಕಾರ್ಜುನ್,ವಿಶ್ವನಾಥ್ ಸೇರಿದಂತೆ ಹಲರು ಉಪಸ್ಥಿತರಿದ್ದರು. -

ಕಾಫಿ ನಾಡಿನಲ್ಲಿ ಘಮ ಘಮಿಸುವ ಕಾಫಿ | ಶತಮಾನದಲ್ಲೇ ಕಾಫಿ ದಾಖಲೆ ಬೆಲೆ ಪ್ಲಾಂಟರ್ ಮುಖದಲ್ಲಿ ಮಂದಹಾಸ
ಆಸ್ವಾದಕ್ಕೆ ಅವಿದ್ಯಕ್ಕೆ ಹೆಸರಾದ ಕಾಫಿ ಬಗೆಗೆ ತಿಳಿದ ನಾವು ಜಗತ್ತಿನಾದ್ಯಂತ ಜನಪ್ರಿಯವಾಗಿರುವ ಈ ಕಾಪಿ ಎಲ್ಲರಿಗೂ ಪ್ರಿಯವಾದ ಪಾನೀಯ. ಬೆಳಿಗ್ಗೆ ಎಚ್ಚರವಾದಾಗ ಅರ್ಧ ಕಾಫಿ, ತಿಂಡಿಯ ನಂತರ ಕಾಫಿ, ಕಾಫಿ ಇಲ್ಲದೆ ಸ್ಪೂರ್ತಿ ಇಲ್ಲ ಕಾಫಿಯಲ್ಲಿರುವ ಹಲವಾರು ಗುಣಗಳು ಮನುಷ್ಯ ಕೋಟಿಯನ್ನು ಕಾಫಿ ಎಲ್ಲಾ ಕ್ಷೇತ್ರಗಳಲ್ಲೂ ಪ್ರಿಯವಾಗಿ ವೇದಕವಾಗಿ ಮಧುರವಾಗಿ ಹಬ್ಬಿ ,ತಬ್ಬಿದೆ ಹಳ್ಳಿಯಿಂದ ದಿಲ್ಲಿಯವರೆಗೂ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದ ಹಲವಾರು ದೇಶಗಳಲ್ಲಿ ಆಕರ್ಷಿಸಿದೆ .ಇದೀಗ ಈ ಕಾಫಿಗೆ ಶತಮಾನದಲ್ಲೇ ಕಂಡರಿಯದ ಕಾಫಿ ಬೆಲೆ ಬಂದಿದ್ದು ಪ್ಲಾಂಟರ್ ಮುಖದಲ್ಲಿ ಮಂದಹಾಸ ಬೀರಿದೆ. ಬನ್ನಿ ಹಾಗಾದ್ರೆ ಒಂದು ಕಪ್ ಕಾಫಿ ಕುಡಿದು ಕಾಫಿಯ ಇತಿಹಾಸವನ್ನು ಒಮ್ಮೆಮೆಲಕು ಹಾಕೋಣ* .ಕರ್ನಾಟಕದಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಒಂದು ವಿಶಿಷ್ಟವಾದ ಸ್ಥಾನಮಾನ ಇದೆ. ಇಲ್ಲಿನ ನೆಲ, ಜಲ, ಪ್ರಕೃತಿ ಸಂಪತ್ತು ಇಲ್ಲಿನ ಜನರ ಸೌಮ್ಯ ಗುಣ, ಸಜ್ಜನಿಕೆ ಎಲ್ಲೆಡೆ ಪ್ರಸಿದ್ಧಿಯಾಗಿದೆ. ಪ್ರಕೃತಿಯ ಮಡಿಲಲ್ಲಿ ರಮಣೀಯವಾದ ಸ್ಥಾನದಲ್ಲಿ ವೈವಿಧ್ಯತೆಗಳೊಡನೆ ಏಕತೆಯನ್ನು ಸಾಧಿಸುತ್ತಾ ಬಂದಿರುವುದೇ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಶತ ಶತಮಾನಗಳಿಂದ ಕಾಫಿ ಉದ್ಯಮವು ಕರ್ನಾಟಕದಲ್ಲಿ ವಿಶಿಷ್ಟ ಕೃಷಿ ಉದ್ಯಮವಾಗಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸಿರುವ ಈ ಘಮ ಘಮಿಸುವ ಕಾಫಿ ಈಗ ವಿಶ್ವದಲ್ಲಿಯೇ ದಾಖಲೆ ಕಾಫಿಗೆ ಬೆಲೆ ಬಂದಿರುವುದು ನಮ್ಮ ಪ್ಲಾಂಟರ್ ಗಳ ಮುಖದಲ್ಲಿ ಮಂದಹಾಸ ಮೂಡಿದೆ.
ಚಿಕ್ಕಮಗಳೂರು ಜಿಲ್ಲೆಯು ಬಹುಭಾಗ ದಟ್ಟ ಅರಣ್ಯ ಹಾಗೂ ಬೆಟ್ಟಗುಡ್ಡಗಳಿಂದ ಕೂಡಿದ ಮಲ್ನಾಡು ಪ್ರದೇಶ. ಉಳಿದ ಪ್ರದೇಶ ಪೂರ ಬಯಲುಸೀಮೆ. ಈ ಜಿಲ್ಲೆಯ ಪೂರ್ವಕ್ಕೆ ಹಾಸನ, ತುಮಕೂರು ಜಿಲ್ಲೆಗಳು ಬಂದರೆ…. ಪಶ್ಚಿಮಕ್ಕೆ ಉಡುಪಿ ಜಿಲ್ಲೆ ಕೂಡ ಬರುತ್ತದೆ. ಪಶ್ಚಿಮಘಟ್ಟ ಸಾಲಿನಲ್ಲಿ ಬರುವ ದಕ್ಷಿಣ ಕನ್ನಡ, ಉತ್ತರಕ್ಕೆ ಶಿವಮೊಗ್ಗ ಮತ್ತು ಚಿತ್ರದುರ್ಗ ಜಿಲ್ಲೆಗಳು ಕೂಡ ಇವೆ. ಜಿಲ್ಲೆಯಲ್ಲಿ 9 ತಾಲೂಕುಗಳನ್ನು ಹೊಂದಿರುವುದೇ ವಿಶೇಷ. ಭೂಮಿ ನಂಬಿ, ಪ್ರಕೃತಿಯನ್ನು ಅವಲಂಬಿಸಿ ಬೆಳೆಯುವ ಬೆಳೆ ಯಾವುದಾದರು ಇದ್ದರೆ ಅದು ಕೃಷಿ ಅಲ್ಲವೇ ಎಂಬಂತೆ…ಮಲ್ನಾಡು ತಾಲೂಕುಗಳಾದ ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಹೊಂದಿಕೊಂಡಂತೆ ಚಿಕ್ಕಮಗಳೂರು ತಾಲೂಕು ಹಾಗೂ ಮೂಡಿಗೆರೆ, ಶೃಂಗೇರಿ ಕೊಪ್ಪ ಮತ್ತು ನರಸಿಂಹರಾಜಪುರ ಕಳಸ ತಾಲೂಕುಗಳಲ್ಲಿ ದಟ್ಟ ಮರಗಳ ನಡುವೆ ಕಾಫಿ ಆ ಪ್ರಮುಖ ಬೆಳೆ ಇದರೊಂದಿಗೆ ಉಪ ಬೆಳೆಗಳಾದ ಅಡಿಕೆ, ಮೆಣಸು, ಏಲಕ್ಕಿ ,ಜಾಯಿಕಾಯಿ, ಬಾಳೆ ಬೆಳೆಯುತ್ತಾರೆ.
ಕರ್ನಾಟಕದಲ್ಲಿ ಸಾಂಬಾರು ಪದಾರ್ಥಗಳು ಕಾಫಿ ನಾಡಿನಲ್ಲಿ ಹೇರಳವಾಗಿ ದೊರೆಯುತ್ತದೆ. ಮತ್ತು ಸ್ಪೈಸಿ ಪದಾರ್ಥಗಳಿಗೆ ಖ್ಯಾತಿಗಳಿಸಿದೆ . ಇದರ ನಡುವೆ 150 ವರ್ಷಗಳ ಇತಿಹಾಸ ಹೊಂದಿರುವ ಕಾಫಿ ಈಗ ವಿಶ್ವದಾದ್ಯಂತ ಮುನ್ನಲೆಗೆ ಬಂದಿದೆ, ಕಾರಣ ಕಾಫಿ ಬೆಲೆ ಈಗ ಗಗನಕ್ಕೇರಿ ದಾಖಲೆಯನ್ನು ಸೃಷ್ಟಿಸುತ್ತಿದೆ.ಕಾಫಿ ಕೇವಲ ಬೆಳಗಿನ ಜಾವ ಹೀರುವ ಪೇಯವಲ್ಲ, ಕಾಫಿ ನಮ್ಮ ಸಂಸ್ಕೃತಿ, ಸಂಪ್ರದಾಯ ಸಂಕೇತ. ಕಾಫಿ ನಮ್ಮ ಜೀವನದ ಅವಿಭಾಜ್ಯ ಅಂಗ, ಕಾಫಿ ಸ್ಟೈಲಿನ ಐಕಾನ್, ಕಾಫಿ ತಲೆ ಸಿಡಿತ ಸೇರಿದಂತೆ ಮುಂತಾದ ಕಾಯಿಲೆಗಳಿಗೆ ಟಾನಿಕ್ ಎಂದು ಹೇಳಲಾಗುತ್ತದೆ. ಮನೆ, ಕಚೇರಿ ಅತಿಥಿಗಳು ಬಂದಾಗ ಕಪ್ಪು ಕಾಫಿ ಕುಡಿಯೋಣ ಎಂದು ಹೇಳುವುದು ನಮ್ಮ ನಾಡಿನ ಸಂಪ್ರದಾಯ, ಸಂಸ್ಕೃತಿ. ಮನೆಗೆ ಬಂದವರಿಗೆ ಕಾಫಿ ಕುಡಿಸದೆ ಕಳಿಸುವುದಿಲ್ಲ. ಕಚೇರಿ, ಸಭೆ, ಗೋಷ್ಠಿ ಸಮ್ಮೇಳನಗಳಿಗೆ ಕಾಫಿಗೆ ಬ್ರೇಕ್ ಇಲ್ಲದೆ ಒಂದು ಅರ್ಧ ಕಾಫಿಯನ್ನು ಕುಡಿಯದೆ ಮುಕ್ತವಾಗುವುದಿಲ್ಲ. ಇಷ್ಟೆಲ್ಲ ಮಹತ್ವ ಹೊಂದಿರುವ ಕಾಫಿಯ ಇತಿಹಾಸದ ಬಗ್ಗೆ ಅರ್ಧ ಕಾಫಿ ಕುಡಿಯುತ್ತಾ ಒಂದಿಷ್ಟು ಮೆಲಕು ಹಾಕುತ್ತಾ ಹೋಗೋಣ….ವಿಶ್ವದಲ್ಲಿ ಕಾಫಿ ತಯಾರಿಸಿದ್ದು ಕ್ರಿ.ಶ 1000 ವರ್ಷದಲ್ಲಂತೆ, ಕಾಫಿ ಈ ಹಿಂದೆ” ಕ್ವಾವಾ” ಎಂದು ಕರೆಯುತ್ತಿದ್ದರು. ಆನಂತರ ದಿನಗಳಲ್ಲಿ ಮನುಷ್ಯನ ಅವಿಷ್ಕಾರಗಳಿಂದ ಕಾಫಿ ಬೀಜ ಹುರಿದು ಪುಡಿಯನ್ನು ತಯಾರಿಸಿದರು. ಈಗಂತೂ ಕಾಫಿಯಲ್ಲಿ ಹಲವು ಬಗೆಯದ್ದು, ಕೋಲ್ಡ್ ಕಾಫಿ, ಬ್ಲಾಕ್ ಕಾಫಿ, ಫಿಲ್ಟರ್ ಕಾಫಿ, ಚಾಕಲೇಟ್ ಕಾಫಿ ಇತ್ಯಾದಿ, ಇತ್ಯಾದಿ ಗಟ್ಟಿ ಹಾಲಿನ ನೊರೆಯೊಂದಿಗೆ ಬೆರಸಿ ರುಚಿಗೆ ತಕ್ಕಂತೆ ಸಕ್ಕರೆ ಬೆರೆಸಿ ಕಾಫಿ ಕುಡಿಯುವುದಂತೂ ಸ್ವರ್ಗವೇ ಧರೆಗಿಳಿದಂತೆ .
ಕಾಫಿ ಪ್ರಪಂಚದ ಅತ್ಯಂತ ಜನಪ್ರಿಯ ಪಾನೀಯ, ಕಾಫಿ ಪ್ರಪಂಚದ ಅತ್ಯಂತ 6 ನೇ ಅತಿ ಹೆಚ್ಚು ರಫ್ತು ಮಾಡುವ ದೇಶ ಭಾರತ,ಕಾಫಿ ಚರಿತ್ರೆ ಶತ ಶತಮಾನಗಳದ್ದು ಎಂಬುದು ವಾಸ್ತವಿಕ. ಇತಿಯೋಫಿಯದಲ್ಲಿ ಮೊದಲು ಬೆಳಕಿಗೆ ಬಂದ “ಕಾಪಿ” ಈಜಿಪ್ಟ್ ಮತ್ತು ಯುರೋಪ್ ಗಳ ಮುಖಾಂತರ ಪ್ರಪಂಚದ ಬೇರೆ ಬೇರೆ ಭಾಗಗಳಿಗೆ ಹಬ್ಬಿತು.ಕಾಫಿ ಎಂಬ ಪದ ಇತೋಪಿಯನ್ನರ “ಕಾಪಾ” ಎಂಬ ಹೆಸರಿನಿಂದ ಉತ್ಪನ್ನವಾದದ್ದು ಎಂದು ನಂಬಲಾಗಿದೆ.ಕಾಫಿ ಉದ್ಯಮ ಕರ್ನಾಟಕದಲ್ಲಿ ಒಂದು ವಿಶಿಷ್ಟ ಉದ್ಯಮವಾಗಿದೆ. ಅನೇಕ ಶತಮಾನಗಳನ್ನು ಹೊಂದಿದೆ. ಕ್ರಿ.ಶ.1600 ರಲ್ಲಿ ಕಾಫಿಯನ್ನು ಬೆಳೆಯಲಾಯಿತು ಎನ್ನಲಾಗಿದೆ. 18ನೇ ಶತಮಾನದಲ್ಲಿ ಬ್ರಿಟಿಷ್ ಉದ್ಯಮಗಳು ಕಾಫಿ ತೋಟಗಳಲ್ಲಿ ಬಂಡವಾಳ ಹೂಡಿ ಕಾಫಿ ತೋಟಗಳನ್ನು ವಾಣಿಜ್ಯಕವಾಗಿ ನಡೆಸಲು ಆರಂಭಿಸಿದರು.19ನೇ ಶತಮಾನದಲ್ಲಿ ಭಾರತೀಯ ವಾಣಿಜ್ಯೋದ್ಯಮಿಗಳು ಕಾಫಿ ತೋಟಗಳನ್ನು ಹೊಂದಲು ಆರಂಭಿಸಿದರು, ಕಾಫಿಯನ್ನು ಲಂಡನ್ ಮೂಲಕ ಯುರೋಪ್ ಮಾರುಕಟ್ಟೆಗೆ ರಫ್ತು ಮಾಡಲು ಪ್ರಾರಂಭಿಸಲಾಯಿತು.ಕಾಫಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸರಕು, ವಿದೇಶ ವಿನಿಮಯ ಮತ್ತು ದೇಶದ ಆರ್ಥಿಕತೆಗೆ ಕೊಡುಗೆ ನೀಡಲು ಆರಂಭಿಸಲಾಯಿತು. 150 ವರ್ಷಗಳಿಂದ ಕಾಫಿ ಬೆಳೆಯಲು ಒಂದು ಪ್ರಮುಖ ಸ್ಥಾನ ಪಡೆದು ಸಾಂಪ್ರದಾಯಕವಾಗಿ ಬೆಳೆಯಲಾಗುತ್ತಿದೆ.ಒಂದು ಶತಮಾನಕ್ಕೂ ಹೆಚ್ಚು ಮತ್ತು ತಲೆತಲಾಂತರಗಳಿಂದಲೂ ತಮ್ಮ ಪೂರ್ವಜರು ಕಾಫಿ ತೋಟಗಳನ್ನು ಮಾಡಿಕೊಂಡು ಕಾಫಿ ಬೆಳೆಗಾರರು ಅನುವಂಶೀಯವಾಗಿ ಅನುಭವಿಸುತ್ತಾ, ಕೆಲವರು ಬ್ರಿಟಿಷರ ಮಾಲೀಕರಿಂದ ತೋಟಗಳನ್ನು ಖರೀದಿಸಿ ಈ ಕೃಷಿಯನ್ನು ಮಾಡಿಕೊಂಡು ಬರುತ್ತಿದ್ದಾರೆ. ಕಾಫಿಯು ಪ್ರಮುಖ ರಫ್ತು ಸರಕುಗಳಲ್ಲಿ ಒಂದಾಗಿದೆ ಮತ್ತು ಸಾವಿರಾರು ಕೋಟಿ ವಿದೇಶ ವಿನಿಮಯವನ್ನು ಗಳಿಸುತ್ತಿದೆ.17ನೇ ಶತಮಾನದಲ್ಲಿ ಯುರೋಪಿನಲ್ಲಿ ಜನಪ್ರಿಯವಾದ ಕಾಫಿಯನ್ನು ಮೊದಲ ಬಾರಿಗೆ ” *ಡಚ್* ” ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಲು ಆರಂಭಿಸಿದರು ಇಂಗ್ಲೆಂಡಿನಲ್ಲಿ ಕಾಫಿ ಮನೆಗಳು ಜನಪ್ರಿಯ, ಸುಮಾರು 3000ಕ್ಕೂ ಅಧಿಕ ಕಾಪಿ ಕೇಂದ್ರಗಳು ಅಲ್ಲಿವೆ.ಅಂತರಾಷ್ಟ್ರೀಯ ಮಟ್ಟದಲ್ಲಿ 1953/ 1954_55 ಇಸ್ವಿಯಲ್ಲಿ ಕಾಫಿ ಬೆಳೆಯುವ ದೇಶದಿಂದ ಪ್ರಪಂಚದ ರಫ್ತು ವ್ಯಾಪಾರದಲ್ಲಿ ಹಸಿರು ಕಾಪಿ* “( *green coffee* ) ಮೊದಲ ಸ್ಥಾನವನ್ನು ಪೆಟ್ರೋಲಿಯಂ ಉತ್ಪನ್ನ ವಸ್ತುಗಳು ಹೊಂದಿದ್ದರೆ ಎರಡನೇ ಸ್ಥಾನವನ್ನು ಕಾಫಿ ಅಂತರಾಷ್ಟ್ರೀಯ ಮುಖ್ಯಸ್ಥಾನ ಪಡೆಯಿತು. ವಿಶ್ವದಲ್ಲೇ 120ಕ್ಕೂ ಅಧಿಕ ದೇಶಗಳು ಕಾಫಿಯನ್ನು ಸೇವಿಸುತ್ತಿದ್ದಾರೆ.ಕಾಫಿ ಬೆಳೆಯುವ ರಾಷ್ಟ್ರಗಳಲ್ಲಿ ಭಾರತವು 6ನೇ ಸ್ಥಾನ. ಜಾಗತಿಕ ಉತ್ಪಾದನೆಗೆ ಶೇಕಡ 4.5 ರಷ್ಟು ಪಾಲು ನೀಡುತ್ತಿದ್ದಾರೆ.ಭಾರತದ ಒಟ್ಟು ಉತ್ಪಾದನೆಯ ಶೇಕಡ 80ರಷ್ಟು ಕಾಫಿಯನ್ನು ಇಟಲಿ, ರಷ್ಯಾ ಮತ್ತು ಜರ್ಮನಿಗೆ ರಫ್ತು ಮಾಡಲಾಗುತ್ತದೆ.258 ಮಿಲಿಯನ್ ಡಾಲರ್ ವಿದೇಶ ವಿನಿಮಯ ಆಗುತ್ತಿದೆ ಭಾರತದಲ್ಲಿ ಸುಮಾರು 250 ಮೆಟ್ರಿಕ್ ಟನ್ ಕಾಫಿ ಉತ್ಪಾದನೆ ಆಗುತ್ತಿದ್ದರೆ 3.55 ಲಕ್ಷ ಹೆಕ್ಟರ. ಪ್ರದೇಶದಲ್ಲಿ ಕಾಫಿ ಬೆಳೆಯಲಾಗುತ್ತಿದೆ.ಭಾರತದ ಕಾಫಿ 1980ರಲ್ಲಿ ಯುರೋಪ್ ದೇಶಗಳಿಗೆ ರಫ್ತಾಗಲು ಆರಂಭಿಸಲಾಯಿತು. ಮೊದಲು ಯುರೋಪ್ ದೇಶಗಳಿಗೆ ಆರಂಭಗೊಂಡು ನಂತರ ಫ್ರಾನ್ಸ್ ,ಯು.ಕೆ. ರಫ್ತು ಮಾಡುತ್ತಾ.. ಫ್ರಾನ್ಸ್ ನಲ್ಲಿ ಕಾಫಿಗೆ ದೊಡ್ಡ ಮಾರುಕಟ್ಟೆ ಇದೆ ಕಾಫಿ ಮಂಡಳಿಯ ಅಂಕಿ, ಅಂಶ ಪ್ರಕಾರ 20 ವರ್ಷದ ಹಿಂದೆ ಭಾರತದ ಕಾಫಿ ರಫ್ತಿನಲ್ಲಿ ಶೇಕಡ 42ರಷ್ಟು ಏರಿಕೆಯಾಗಿದೆ ಎನ್ನಲಾಗಿದೆ ಭಾರತದ ಖಜಾನೆಗೆ ಕಾಫಿ ಉದ್ಯಮದಿಂದ 1045 ಮಿಲಿಯನ್ ಅಮೆರಿಕನ್ ಡಾಲರ್ ಅಂದರೆ 8000 ಕೋಟಿ ಎಂದು ಅಂದಾಜಿಸಲಾಗಿದೆ. ಕಾಫಿ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸರಕು ವಿದೇಶ ವಿನಿಮಯ ಮತ್ತು ದೇಶದ ಆರ್ಥಿಕತೆಗೆ ಕೊಡುಗೆ ನೀಡಲು ಆರಂಭಿಸಿತು. ಕಾಫಿಯು ಪ್ರಮುಖ ರಫ್ತು ಸರಕುಗಳಲ್ಲಿ ಒಂದಾಗಿದೆ ಮತ್ತು ಉತ್ತಮ ವಿದೇಶಿ ವಿನಿಮಯವನ್ನು ಗಳಿಸುತ್ತಿದೆ.ಕರ್ನಾಟಕದಲ್ಲಿ ಪ್ರಮುಖ ಕಾಫಿ ಬೆಳೆಯುವ ಜಿಲ್ಲೆಗಳುಕರ್ನಾಟಕದಲ್ಲಿ ಹಾಸನ, ಕೊಡಗು ,ಚಿಕ್ಕಮಗಳೂರು ಮೂರು ಜಿಲ್ಲೆಗಳು ಅಧಿಕವಾಗಿ ಕಾಫಿ ಬೆಳೆಯುವ ಪ್ರದೇಶವಾಗಿದೆ ಕರ್ನಾಟಕದಲ್ಲಿ 2016-17ರಲ್ಲಿ ಗರಿಷ್ಠ 2,29,345. ಟನ್ ಉತ್ಪಾದನೆ ಗುರಿ ಹೊಂದಿತ್ತು, ಇದೀಗ 4 ಲಕ್ಷ ಅಧಿಕ ಹೆಕ್ಟರ್ ಗಳಲ್ಲಿನ ಕಾಫಿ ಬೆಳೆಯಲಾಗುತ್ತಿದ್ದು, ಭಾರತದಲ್ಲಿ 3 ಲಕ್ಷ ಟನ್ ಕಾಫಿ ಉತ್ಪಾದನೆ ಮಾಡಲಾಗುತ್ತಿದೆ. ಬಹುತೇಕ ಕರ್ನಾಟಕದಲ್ಲಿ ಮೂರು ಜಿಲ್ಲೆಗಳು ಕಾಫಿ ಬೆಳಗೆ ಖ್ಯಾತಿಗಳಿಸಿದೆ.ಅದರಲ್ಲೂ ಕರ್ನಾಟಕ ಈ ಜಿಲ್ಲೆಗಳಲ್ಲಿ ಅತಿ ಹೆಚ್ಚು ಕಾಫಿ ಉತ್ಪಾದಿಸುವ ಪ್ರದೇಶವಾಗಿದೆ.1942 ರಲ್ಲಿ ನಿಯಂತ್ರಣ ಮಂಡಳಿ : ಅಂದು ಕಾಫಿ ಬೆಳೆದರೂ ಮುಕ್ತವಾಗಿ ಮಾರಾಟ ಮಾಡುವ ಹಾಗಿರಲಿಲ್ಲ 1942 ರಲ್ಲಿ ಕಾಫಿ ನಿಯಂತ್ರಣ ಮಂಡಳಿಯನ್ನು ಅಸ್ತಿತ್ವಕ್ಕೆ ತರಲಾಯಿತು ಅದು ಕಾಫಿ ಬೆಳೆಯುವವರು ಬೆಳೆದ ಕಾಫಿಯನ್ನು ಯಾರಿಗೆ ಎಂದು ಅವರಿಗೆ ಮಾರುವಂತೆ ಇರಲಿಲ್ಲ, ಕಾಫಿಯನ್ನು ಕಾಫಿ ಬೋರ್ಡ್ ಗೆ ಮಾರಬೇಕು ಸ್ವಂತಕ್ಕೆ ನೂರು ಕೆಜಿ ಸುಂಕ ನೀಡಿದರೆ ಇಟ್ಟುಕೊಳ್ಳಬಹುದಿತ್ತು. ನಂತರ 1991. 98 ರಲ್ಲಿ ಕಾಫಿಗೆ ಮುಕ್ತ ಮಾರುಕಟ್ಟೆಯಾಗಿ ಪರಿವರ್ತನೆ ಆಯಿತು. ಮುಕ್ತ ಮಾರುಕಟ್ಟೆ ಇಂದ ಬೆಳೆದವರಿಗೆ ಕಾಫಿ ಅಧಿಕ ಬೆಲೆ ಸಿಕ್ಕರು ಅನುಕೂಲವಾದರೂ ಮುಕ್ತ ಮಾರುಕಟ್ಟೆಯಿಂದ ಕಾಫಿಗಿದ್ದ ಪ್ರಾಮುಖ್ಯತೆ ಕಡಿಮೆ ಆಯಿತು ಭಾರತದಲ್ಲಿ ಬೆಳೆದ ಕಾಫಿ ಶೇಕಡ 80 ರಷ್ಟು ರಪ್ತಾಗುತ್ತದಕರ್ನಾಟಕದಲ್ಲಿ ಕಾಫಿಯ ಪ್ರಮುಖ ಪಾತ್ರಕರ್ನಾಟಕವು ಭಾರತದ ಕಾಫಿ ನಕ್ಷೆಯಲ್ಲಿ ಮಹತ್ವದ ಪಾತ್ರ ವಹಿಸಿ ಕಾಫಿಯನ್ನು ಬೆಳೆದು ಸಾವಿರಾರು ಕೋಟಿ ವಿದೇಶಿ ವಿನಿಮಯ ಸರ್ಕಾರಕ್ಕೆ ಹಲವಾರು ತೆರಿಗೆಗಳನ್ನು ತುಂಬಲಾಗುತ್ತಿದೆ.ಒಂದು ಶತಮಾನಕ್ಕೂ ಹೆಚ್ಚು ಮತ್ತು ತಲೆತಲಾಂತರ ಗಳಿಂದರೂ ಪೂರ್ವಜರ ಕಾಲದಿಂದಲೂ ಕಾಫಿ ತೋಟಗಳನ್ನು ಬೆಳೆಗಾರರು ಅನುವಂಶಿಕವಾಗಿ ಅನುಭವಿಸುತ್ತಾ ಬರುತ್ತಿದ್ದಾರೆ. ಬ್ರಿಟಿಷರ ಮಾಲೀಕರಿಂದ ಕಾಫಿ ತೋಟಗಳನ್ನು ಖರೀದಿಸುತ್ತಾ ಕೃಷಿ ಮಾಡುತ್ತಿದ್ದರು. ಬ್ರಿಟಿಷ್ ಕಾಲದಲ್ಲಿ ಕಾಫಿಗೆ ಹೆಚ್ಚು ಪ್ರೋತ್ಸಾಹವಿತ್ತು.*ಕಾಫಿಯ ಪ್ರಭೇದಗಳುಕಾಫಿಯಲ್ಲಿಎರಡು ಪ್ರಭೇದಗಳಿದ್ದು *ಅರಬಿಕಾ* ಹಾಗೂ *ರೋಬಸ್ಟಾ* ತಳಿಗಳಿದ್ದು, ಅರಭಿಕ ತಳಿಯು ” *ಇಥಿಯೋಪಿ* “ಯಾದಲ್ಲಿ ಉಗಮಗೊಂಡರೆ, *ರೋಬೊಸ್ಟ್* ತಳಿಯು ಇಂದಿನ ” *ಉಗಾಂಡ* “ದೇಶದಲ್ಲಿ ಉಗಮ ಆಯಿತು ಎನ್ನಲಾಗಿದೆ.ಇದು ಹೆಚ್ಚು ಕಹಿ ಯಾಗಿರುತ್ತದೆ, ಆದರೆ ಇವುಗಳನ್ನು ಕುಡಿಯುವಾಗ ಬರುವ ಪರಿಮಳ ಸುತ್ತಲೂ ಸುಹಾಸಿನಿ ಬೀರುತ್ತದೆ ಅರಬಿಕಾ ತಳಿಯ ಕಾಫಿ ಹೆಚ್ಚು ಜನಪ್ರಿಯವಾಗಿದೆ.ಭೌಗೋಳಿಕವಾಗಿ ಮಲ್ನಾಡು ಮತ್ತು ಬಯಸಿಮೆ ಎರಡನ್ನು ಹೊಂದಿರುವ ಜಿಲ್ಲೆ ಚಿಕ್ಕಮಗಳೂರು ಕೃಷಿ ಮತ್ತು ಬೆಳೆಗಳ ವಿಷಯದಲ್ಲಿ ಜಿಲ್ಲೆ ವೈವಿಧ್ಯಮಯ ಕಾಫಿ ಹೆಚ್ಚು ಬ್ರಿಟಿಷರ ಕಾಲದಲ್ಲಿ ವಿಸ್ತಾರವಾಯಿತು ಎನ್ನಲಾಗಿದೆ ಚಿಕ್ಕಮಗಳೂರಲ್ಲಿ ಮೊಟ್ಟ ಮೊದಲ ಬಾರಿಗೆ ಕಾಫಿ ಆರಂಭವಾಯಿತು ಎಂದು ಊಹಿಸಲಾಗಿದೆ ಅಲ್ಲದೆ ಇಂಡಿಯಾದಲ್ಲಿ ಪ್ಲಾಂಟೇಶನ್ ಇಂಡಸ್ಟ್ರಿ ಕಾಫಿಯಿಂದಲೇ ಆರಂಭವಾಯಿತು ಎಂದು ಹೇಳಬಹುದು.ಶತಮಾನದಲ್ಲಿ ಕಾಫಿ ದಾಖಲೆ ಬೆಲೆಹವಮಾನ ವೈಪರೀತ್ಯ ದಿಂದ ಬ್ರೆಜಿಲ್ ಹಾಗೂ ವಿಯೆಟ್ನಾಮಿನಲ್ಲಿ ಕಾಫಿ ಬೆಳೆ ಭಾರಿ ಪ್ರಮಾಣದಲ್ಲಿ ನಷ್ಟವಾಗಿದ್ದು ಹಾಗೂ ಅಧಿಕ ಕಾಫಿ ಬೆಳೆಯುವ ಪ್ರದೇಶದಲ್ಲಿ ಕಾಫಿ ಬದಲಿಗೆ ಪರ್ಯಾಯ ಬೆಳೆಯನ್ನು ಮುಂದಾಗಿದ್ದಾರೆ. ಇದರ ಪರಿಣಾಮವಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಕೊರತೆ ಉಂಟಾಗಿದ್ದು, ದೇಶದಲ್ಲಿ ಶತಮಾನಗಳಿಂದ ಇಲ್ಲದ ಕಾಫಿಗೆ ಅಧಿಕ ದರ ಬಂದಿದ್ದು ಕಾಫಿ ನಾಡಿನಲ್ಲಿ ಕಾಫಿ ಪ್ಲಾಂಟರ್ ಗಳ ಮುಖದಲ್ಲಿ ಮಂದಹಾಸ ಬೀರಿದೆ.ಅದರಲ್ಲೂ ಕಾಫಿ ನಾಡು ಚಿಕ್ಕಮಗಳೂರು.ಹಾಸನ, ಮಡಿಕೇರಿ ಜಿಲ್ಲೆಗಳಲ್ಲಿ ಇಲ್ಲಿನ ಹವಾಮಾನಕ್ಕೆ ಹೊಂದಿಕೊಂಡಂತೆ ನೆರಳಿನಲ್ಲಿ ಕಾಫಿಯನ್ನು ಬೆಳೆಯಲಾಗುತ್ತಿದ್ದು ಅದರ ಗುಣಮಟ್ಟ ಹೆಚ್ಚಾಗಿರುತ್ತದೆ, ಹಾಗಾಗಿ ಭಾರತೀಯ ಕಾಫಿಗೆ ಬಹಳ ಬೇಡಿಕೆ ಇದೆ.ಕಾಫಿ ಎಲ್ಲಾ ಕ್ಷೇತ್ರಗಳಲ್ಲೂ ಪ್ರಮುಖವಾಗಿ ವೇದಕವಾಗಿ ಮಧುರವಾಗಿ ಹಬ್ಬಿ ತಬ್ಬಿದೆ, ಹಳ್ಳಿಯಿಂದ ದಿಲ್ಲಿವರೆಗೂ, ದೇಶ ವಿದೇಶಗಳಿಗೂ ವಿಸ್ತಾರವಾಗಿದೆ. ಇಂದು ಮಾನವ ಯತ್ರಕ್ಕೆ ಅತ್ಯುತ್ತಮವಾದ ಕೀಲಣ್ಣೇ ಕಾಫಿ.ಕಾಫಿಯಲ್ಲಿರುವ ಹಲವಾರು ಗುಣಗಳನ್ನು ಮನುಷ್ಯ ಕೋಟೆಯನ್ನು ಭಾರತದಲ್ಲಿ ಮಾತ್ರವಲ್ಲ ಪ್ರಪಂಚದ ಹಲವಾರು ದೇಶಗಳಲ್ಲಿ ಬಹಳಷ್ಟು ಆಕರ್ಷಿಸಿದೆ ಬಹಳ ಹಿಂದಿನಿಂದಲೂ ಕಾಪಿ ಜನಪ್ರಿಯ ಪಾನೀಯ.ಕಾಫಿ ಎಲ್ಲರಿಗೂ ಅತಿ ಪ್ರಿಯವಾದ ಪಾನೀಯ ಬೆಳಗ್ಗೆ ಎಚ್ಚರವಾದಾಗ ಅರ್ಧ ಕಾಫಿ ಕುಡಿಯದಿದ್ದರೆ ಕೆಲವರಿಗೆ ಸ್ಪೂರ್ತಿಯ ಇಲ್ಲವೆನ್ನುವ ತಾಗುತ್ತದೆ.ಪ್ರಪಂಚದಲ್ಲಿ ಸಸ್ಯ ಸೃಷ್ಟಿ ಆದಾಗ ಕಾಪಿ ಸೃಷ್ಟಿಯಾಗಿರಬೇಕು, ಅದು ಕೊಟ್ಟ ಫಲವನ್ನು ಪಕ್ಷಿಗಳು , ಮನುಷ್ಯರುಗಳು ಬಹಳ ವರ್ಷಗಳ ಹಿಂದೆಯೇ ಒಂದಲ್ಲ ಒಂದು ರೀತಿಯಲ್ಲಿ ಉಪಯೋಗಿಸುತ್ತಾ ಬಂದಿದ್ದಾರೆ.ನಮ್ಮಲ್ಲಿ ಸಹ ಹಾಲು ಸಕ್ಕರೆ ಹಾಕಿದ ಕಾಫಿಯನ್ನು ಕುಡಿದರೆ, ಫ್ರಾನ್ಸ್ ನಲ್ಲಿ ಸಕ್ಕರೆ ಹಾಕದೆ ಕರಿ ಕಾಫಿ ಕುಡಿಯುತ್ತಾರೆ. ಅಮೆರಿಕದಲ್ಲಿ ಕಾಫಿಗೆ ಹಿಮಗಡ್ಡೆ ಹಾಕಿ ಕಿಮತಣ್ಣೀರಿನ ಕಾಫಿ ಕುಡಿಯುತ್ತಾರೆ, ಆದರೆ ನಮಗೆ ಅದು ಸದಾ ಬಿಸಿ ಬಿಸಿ ಕಾಫಿ ಆಗಿರಬೇಕು.ಕಾಫಿಗೆ ರೋಗನಿರೋಧಕ ಗುಣವಿದ್ದು ಮೆದುಳಿಗೆ ಸಮಾಧಾನವನ್ನು ಹಾಗೂ ತಲೆನೋವು ,ಸೋಮಾರಿತನ ಮತ್ತು ಕೆಮ್ಮುಗಳನ್ನು ನಿವಾರಿಸುವ ಶಕ್ತಿ ಇದೆ ಎಂದು ಹೇಳಲಾಗುತ್ತಿದೆ. ಹಾಗಾಗಿ ಕಾಫಿಯನ್ನು ವಿಶ್ವದಲ್ಲಿಯೇ 120 ದೇಶಗಳಲ್ಲಿ ಯಥೇಚ್ಛವಾಗಿ ಕಾಫಿಯನ್ನು ಕುಡಿಯುತ್ತಾರೆ.ಶತಮಾನದ ಕಾಫಿ ದರ ದಾಖಲೆ..ಇಂಡಿಯನ್ ಕಾಫಿಯು ಗುಣಮಟ್ಟದಲ್ಲಿ ಪ್ರಪಂಚದ ಮಾರುಕಟ್ಟೆಯಲ್ಲಿ ಅದ್ವಿತೀಯ ಸಂಕೇತ ಎನಿಸಿತು. 1820ರ ಅತ್ಯಂತ. ನಂತರ ವಾಣಿಜ್ಯ ತೋಟಗಳನ್ನು ದಕ್ಷಿಣ ಭಾರತದಲ್ಲಿ ಬ್ರಿಟಿಷರ ಮೇಲ್ವಿಚಾರಣೆ ಮತ್ತು ಬಂಡವಾಳದಲ್ಲಿ ಪ್ರಾರಂಭವಾಯಿತು.ಕರ್ನಾಟಕ ಕಾಫಿ ನಾಡಿನ ಕಾಫಿಗೆ ರುಚಿ ಹಾಗೂ ಪರಿಮಳವನ್ನು ನಿರ್ಧರಿಸುವ ಅಂಶಗಳು ಅನೇಕ ಸಸ್ಯದ ಅನುವಂಶಿಕ ಲಕ್ಷಣ, ಬೆಳೆಯುವ ಮಣ್ಣಿನ ಗುಣ ವಾಯುಗುಣ ಏರಿಳಿತಗಳನ್ನು ಅವುಗಳಲ್ಲಿ ಪ್ರಮುಖವಾದದ್ದು ನಿರ್ಧರಿಸುವ ಅಂಶಗಳು ಅನೇಕ ಸಮುದ್ರಮಟ್ಟದ ಎತ್ತರ ಗಾಳಿ ಬೀಸುವಿಕೆ ಏರಿಳಿತ ಮೊದಲಾದವುಗಳು ಕಾಫಿ ಗುಣಮಟ್ಟವನ್ನು ಕಾಪಾಡುತ್ತದೆ.ಕಾಫಿ ಎಲ್ಲರಿಗು ಅಪ್ಪಯ್ಯಮಾನವಾದ ಪಾನೀಯ ಬೆಳಿಗ್ಗೆ ಎಚ್ಚರವಾದಾಗ ಅರ್ಧ ಕಾಫಿ, ತಿಂಡಿಯ ನಂತರ ಕಾಫಿ ಕುಡಿಯದಿದ್ದರೆ ಸ್ಪೂರ್ತಿ ಇಲ್ಲ. ಕಾಫಿಯಲ್ಲಿರುವ ಹಲವಾರು ಗುಣಗಳನ್ನು ಮನುಷ್ಯ ಕೋಟೆಯನ್ನು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಲ್ಲಿ ಹಲವಾರು ದೇಶಗಳಲ್ಲಿ ಆಕರ್ಷಿಸಿದೆ, ಹಾಗಾಗಿ ಈ ಬಾರಿ ಕಾಫಿ ಬೆಳೆಯ ದೇಶಗಳಲ್ಲಿ ಭಾರತ ಕಾಫಿಗೆ ಡಿಮ್ಯಾಂಡ್ ಆಗಿ ಕಾಫಿ ಬೆಲೆ ಹೊಸ ಇತಿಹಾಸ ಬರೆದಿದೆ.ಭಾರತೀಯ ಕಾಫಿಗೆ ವಿದೇಶಿ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಸಿಕ್ಕ ಪರಿಣಾಮ ಬೆಲೆ ಗಣನೀಯವಾಗಿ ಏರಿಕೆಯಾಗಲು ಆರಂಭಿಸಿದೆ. ಎಂದು ಸಿಗದ ಕಾಫಿಯ ದರ ಬೆಳೆಗಾರರ ಕೈ ಸೇರುತ್ತಿದ್ದು ಕಾಫಿ ಪ್ಲಾಂಟರ್ ಗಳು ದಿಲ್ ಖುಷ್ ಆಗಿದ್ದಾರೆ.*50 ಕೆಜಿ ಕಾಫಿಗೆ ರೂ* . *30,000*ಈ ಹಿಂದೆ ಕಾಫಿ ಆಯಾ ವರ್ಷದಲ್ಲಿ ಏರುಪೇರು ಕಂಡುಬರುತ್ತಿತ್ತು ಅಂದಾಜು 30 ವರ್ಷಗಳನ್ನು ಕಾಫಿ ಬೆಲೆ ತುಲನೆ ಮಾಡಿದರೆ ಅಧಿಕ ದರೆಂದರೆ 12,000 ಒಮ್ಮೆ ಮಾತ್ರ 1997ರಲ್ಲಿ ನಂತರದಲ್ಲಿ ಒಮ್ಮೆ ಕೂಡ ಈ ರೀತಿ ಬೆಲೆ ಬಂದಿರಲಿಲ್ಲ. ಅದು ಹೊರತುಪಡಿಸಿದರೆ ಅರಬಿಕಾ ಚರಿ ಕಾಫಿಯ ಐವತ್ತು ಕೆಜಿಗೆ 800 ..900 ಇದ್ದಿದ್ದು,ಇದೀಗ 2025 ರಲ್ಲಿ ಇದೇ ಚರಿಗೆ 14000 ಬೆಲೆ ಕಂಡಿದೆ.ಅರಬ್ಬಿಕಾ ಫಾರ್ಚುಮೆಂಟಿಗೆ 1900 ರಿಂದ 8000 ವರೆಗೂ ಮಾತ್ರ ಬೆಳೆಗಾರರು ಬೆಲೆ ಕಂಡಿದ್ದರು ಇದೀಗ ಈ ಬಾರಿ ಇದೇ ಪಾರ್ಚಮೆಂಟಿಗೆ 30.000 ಬೆಲೆ ಬಂದಿರುವುದು ಬೆಳಗಾರರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ ಇದು ಶತಮಾನಗಳ ದಾಖಲೆಯನ್ನು ಮುರಿದಿದೆ.ಕಾಫಿ ಮತ್ತೊಂದು ವಿಧವಾದ ರೋಬಸ್ಟ ಅದು ಕೂಡ 30 ವರ್ಷಗಳ ಹಿಂದಿನ ಬೆಲೆಯಲ್ಲಿ ಕೇವಲ 600 ರಿಂದ 2200ಮಾತ್ರ ಬೆಲೆ ಕಂಡಿತ್ತು. ಇದೀಗ ಮಾರುಕಟ್ಟೆಯಲ್ಲಿ ರೋಬಸ್ಟ ಕಾಫಿ ಚರಿಗೆ 10 ರಿಂದ 14 ಸಾವಿರ ಇದ್ದರೆ. ರೋಬೋಸ್ಟ ಪಾರ್ಸಿಮೆಂಟಿಗೆ ಅಂದು ಹೆಚ್ಚೆಂದರೆ 1000 ಇಂದ 4000 ಇತ್ತು, ಆದರೆ ಈಗ ಈ ಬಾರಿ 20,000 ಗಡಿ ದಾಟಿ 30 000 ಕಾಫಿ ದರ ಬಂದಿರುವುದು ವಿಶೇಷವಾಗಿದೆ.ವಿದೇಶದಲ್ಲಿ ಕಾಫಿ ಬೆಳೆ ಹಾನಿಯಾಗಿರುವುದರಿಂದ ಭಾರತದ ಕಾಫಿಗೆ ಎಲ್ಲಿಲ್ಲದ ಡಿಮ್ಯಾಂಡು ಬಂದಿದೆ. ದಿನದಿಂದ ದಿನಕ್ಕೆ ಕಾಫಿ ದರ ಅಧಿಕವಾಗುತ್ತಾ ಬರುತ್ತಿದ್ದು ಶತಮಾನದಲ್ಲಿ ಕಾಫಿಗೆ ಈ ರೀತಿ ಬೆಲೆ ಬಂದಿರುವುದಿಲ್ಲಒಟ್ಟಾರೆ ಇಂದು ಕಾಫಿ ತೋಟಗಳಿಗೆ ಡಿಮ್ಯಾಂಡು.. ಡಿಮ್ಯಾಂಡು ಕಾಫಿ ತೋಟ ಎಕರೆಗೆ ಅಂದು ಐದರಿಂದ ಹತ್ತು ಲಕ್ಷ ಇದ್ದರೆ ಇಂದು ಕೆಲವು ಕಡೆ 50 ಲಕ್ಷ 75 ಲಕ್ಷ ವರೆಗೂ ಮಾರಾಟವಾಗುತ್ತಿದೆ. ನೂರಾರು ವರ್ಷಗಳಿಂದ ಕಾಫಿ ಕೃಷಿಯನ್ನು ಮಾಡಿಕೊಂಡು ಬರುತ್ತಿರುವ ಬೆಳಗಾರರಿಗೆ ಇಂದು ಬಂಪರ್ ಲಾಟರಿ ಹೊಡೆದಿದೆ.ಮುಂದಿನ ದಿನಗಳಲ್ಲಿ ಘಮ ಘಮಿಸುವ ಕಾಫಿ ಗ್ರಾಹಕರ ಬಾಯಿ ಸುಡುವ ರೀತಿಯಲ್ಲಿ ಹೋಟೆಲ್ ಹಾಗೂ ಕಾಫಿ ಕೇಂದ್ರಗಳಲ್ಲಿ ಕಾಫಿಯ ದರ . ಬಿಸಿ ಬಿಸಿಯಾಗಿ ಬಾಯಿ ಸುಡುವುದು ಖಂಡಿತ. -

‘Boys V/S Girls’ on Maja Talkies:‘ಬಾಯ್ಸ್ V/S ಗರ್ಲ್ಸ್’ ಮಜಾ ಟಾಕೀಸ್ ಕಲರ್ಫುಲ್ ಕಲರವ ಕಲರ್ಸ್ನಲ್ಲಿ ನೋಡಿ
ಜನಪ್ರಿಯ ಟಿವಿ ಚಾನೆಲ್ ಕಲರ್ಸ್ ಕನ್ನಡವು ಎರಡು ಹೊಸ ರಿಯಾಲಿಟಿ ಶೋಗಳನ್ನು ಶುರುಮಾಡುತ್ತಿದೆ. ‘ಬಾಯ್ಸ್ V/S ಗರ್ಲ್ಸ್’ ಎಂಬ ಗೇಮ್ ಶೋ ಮತ್ತು ಕಚಗುಳಿಯಿಟ್ಟು ನಗಿಸುವ ‘ಮಜಾ ಟಾಕೀಸ್’ ಶೋಗಳು ಫೆಬ್ರವರಿ 1ರಿಂದ ಪ್ರಸಾರ ಆರಂಭಿಸಲಿವೆ. ಪ್ರತಿ ಶನಿವಾರ ಮತ್ತು ಭಾನುವಾರ ಏಳೂವರೆಗೆ ‘ಬಾಯ್ಸ್ V/S ಗರ್ಲ್ಸ್’ ಹಾಗೂ 9 ಗಂಟೆಗೆ ʼಮಜಾ ಟಾಕೀಸ್ʼ ಕಾರ್ಯಕ್ರಮಗಳು ನಿಮ್ಮನ್ನು ರಂಜಿಸಲಿವೆ.
‘ಬಾಯ್ಸ್ V/S ಗರ್ಲ್ಸ್’
ಹೊಸ ರೀತಿಯ ರಿಯಾಲಿಟಿ ಶೋಗಳಿಗೆ ಹೆಸರಾಗಿರುವ ಕಲರ್ಸ್ ಕನ್ನಡ ಶುರುಮಾಡುತ್ತಿರುವ ‘ಬಾಯ್ಸ್ V/S ಗರ್ಲ್ಸ್’ ಒಂದು ರೋಮಾಂಚಕ ಗೇಮ್ ಶೋ. ಹುಡುಗ ಮತ್ತು ಹುಡುಗಿಯರ ಗುಂಪುಗಳು ಜಿದ್ದಾಜಿದ್ದಿಗೆ ಬಿದ್ದು ನೋಡುಗರ ಬಿಸಿ ಏರಿಸುವ ಆಟದ ಶೋ ‘ಬಾಯ್ಸ್ ವರ್ಸಸ್ ಗರ್ಲ್ಸ್’ ಕನ್ನಡ ಕಿರುತೆರೆಗೆ ಹೊಸದೆನಿಸುವ ಥ್ರಿಲ್ ಅನ್ನು ಹೊತ್ತು ತರಲಿದೆ.
ಬಾಯ್ಸ್ ತಂಡವನ್ನು ಬಿಗ್ ಬಾಸ್ ಖ್ಯಾತಿಯ ವಿನಯ್ ಗೌಡ ಮುನ್ನಡೆಸಿದರೆ, ಹುಡುಗಿಯರ ಗುಂಪಿನ ನಾಯಕಿ ನಟಿ ಶುಭಾ ಪೂಂಜಾ. ಇನ್ನು ಸ್ಪರ್ಧಿಗಳ ಪಟ್ಟಿಯೂ ಅಷ್ಟೇ ರೋಚಕವಾಗಿದೆ. ಈಗಷ್ಟೇ ಬಿಗ್ ಬಾಸ್ ಗೆದ್ದಿರುವ ಹನುಮಂತ ಲಮಾಣಿ, ಬಿಗ್ ಬಾಸ್ ಮನೆಯಲ್ಲಿ ಗಮನ ಸೆಳೆಯುವಂಥ ಆಟವಾಡಿದ ಧನರಾಜ್ ಆಚಾರ್, ಐಶ್ವರ್ಯಾ ಶಿಂದೊಗಿ, ಶೋಭಾ ಶೆಟ್ಟಿ, ಚೈತ್ರಾ ಕುಂದಾಪುರ ಮತ್ತು ರಜತ್ ಕೂಡ ಇಲ್ಲಿ ನಿಮಗೆ ಸಿಗುತ್ತಾರೆ. ಜೊತೆಗೆ ಕಿರುತೆರೆಯ ಜನಪ್ರಿಯ ಮುಖಗಳಾದ ಪ್ರಶಾಂತ್, ಮಂಜು ಪಾವಗಡ, ನಿವೇದಿತಾ ಗೌಡ, ಸೂರಜ್, ವಿಶ್ವಾಸ್, ಸ್ನೇಹಿತ್, ವಿವೇಕ್ ಸಿಂಹ, ರಕ್ಷಿತ್, ಚಂದನ, ರಮ್ಯ, ಪ್ರಿಯಾ ಸವಡಿ, ಸ್ಪಂದನಾ ಮತ್ತು ಐಶ್ವರ್ಯಾ ವಿನಯ್ ಕೂಡ ಆಟಕ್ಕೆ ಕಿಚ್ಚು ಹಚ್ಚಲಿದ್ದಾರೆ. ಈ ಪಟ್ಟಿಯನ್ನೊಮ್ಮೆ ನೋಡಿದರೂ ಸಾಕು, ಆಟದ ಬಿಸಿ ಎಷ್ಟಿರುತ್ತೆ ಎಂಬುದನ್ನು ಊಹಿಸಬಹುದು.
ಶೋನ ಉದ್ದಕ್ಕೂ ಸ್ಪರ್ಧಿಗಳಿಗೆ ರೋಚಕ ಸವಾಲುಗಳಿರುತ್ತವೆ. ಹುಡುಗ ಹುಡುಗಿಯರು ತಮ್ಮ ಚಾಕಚಕ್ಯತೆ, ಸೃಜನಶೀಲತೆ ಮತ್ತು ಒಟ್ಟಾಗಿ ಆಡುವ ಮನೋಭಾವದಿಂದ ಈ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಗೇಮುಗಳ ಜೊತೆಗೆ ನೃತ್ಯ ಸೇರಿದಂತೆ ಉಳಿದ ಟಾಸ್ಕುಗಳೂ ಇಲ್ಲಿರುತ್ತವೆ.
ಇವೆಲ್ಲದರ ಜೊತೆಗೆ ಹಳ್ಳಿ ಸೆಟಪ್, ಕಾಲೇಜ್ ಸೆಟಪ್ ನಂಥ ಮೋಜಿನ ಥೀಮುಗಳೂ ನಿಮ್ಮನ್ನು ಈ ಶೋನಲ್ಲಿ ರಂಜಿಸಲಿವೆ. ಚುರುಕು ಬುದ್ಧಿ ಹಾಗೂ ದೈಹಿಕ ಶಕ್ತಿಗಳೆರಡನ್ನೂ ಒಟ್ಟಿಗೆ ಪರೀಕ್ಷೆಗೊಳಪಡಿಸುವ ‘ಬಾಯ್ಸ್ V/S ಗರ್ಲ್ಸ್’ ನ ಪ್ರತಿ ಸಂಚಿಕೆಯನ್ನೂ ವೀಕ್ಷಕರನ್ನು ತುದಿಗಾಲಲ್ಲಿ ಕೂರಿಸಲು ತಕ್ಕಂತೆ ರೂಪಿಸಲಾಗಿದೆ.‘ಬಾಯ್ಸ್ V/S ಗರ್ಲ್ಸ್’ ಶೋನ ನಿರೂಪಣೆಯ ಹೊಣೆ ಹೊತ್ತಿರುವುದು ಚೈತನ್ಯದ ಚಿಲುಮೆ ಅನುಪಮಾ ಗೌಡ. ವಿನೂತನ ಫಾರ್ಮ್ಯಾಟ್ ಮತ್ತು ವಿಭಿನ್ನ ಸವಾಲುಗಳಿಂದ ಸಿದ್ಧಗೊಂಡಿರುವ ‘ಬಾಯ್ಸ್ V/S ಗರ್ಲ್ಸ್’ ನೋಡಲು ಮರೆಯಬೇಡಿ.
ಮಜಾ ಟಾಕೀಸ್
ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಸಾರಥ್ಯದಲ್ಲಿ ಈಗಾಗಲೇ ಮೂರು ಯಶಸ್ವೀ ಸೀಸನ್ನುಗಳನ್ನು ಮುಗಿಸಿರುವ ‘ಮಜಾ ಟಾಕೀಸ್’ ಇದೀಗ ಮತ್ತೊಂದು ಹೊಸ ಸೀಸನ್ ಗೆ ತಯಾರಾಗಿದೆ. ಎಲ್ಲ ವಯಸ್ಸಿನ ವೀಕ್ಷಕರನ್ನೂ ಮರುಳು ಮಾಡುವ ಮಾತುಗಾರ ಸೃಜನ್ ಈ ಹೊಸ ಸೀಸನ್ನಿಗೆ ಹಲವು ಹೊಸ ಸಂಗತಿಗಳನ್ನು ಸೇರಿಸಿರುವುದು ಅಭಿಮಾನಿಗಳ ಕುತೂಹಲ ಕೆರಳಿಸಿದೆ.
ಮಜಾ ಮನೆಗೆ ಈ ಸಲ ಹೊಸ ಅತಿಥಿಗಳ ದಂಡೇ ಬಂದಿಳಿದಿದೆ. ವಿಶೇಷ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿರುವ ನಿರ್ದೇಶಕ ಯೋಗರಾಜ ಭಟ್ರು ತಮ್ಮದೇ ಶೈಲಿಯ ಹುಡುಗಾಟಿಕೆಯನ್ನು ತಂದಿದ್ದಾರೆ. ಮಜಾ ಟಾಕೀಸಿನ ಹಳೇ ಹುಲಿಗಳಾದ ಕುರಿ ಪ್ರತಾಪ್ ಮತ್ತು ವಿಶ್ವ ತಮ್ಮ ಎಂದಿನ ತಮಾಷೆ ಮಾತುಗಳೊಂದಿಗೆ ತಯಾರಾಗಿದ್ದಾರೆ. ಅವರ ಪಂಚ್ ತುಂಬಿದ ಡೈಲಾಗುಗಳು ಮತ್ತು ಆಂಗಿಕ ಅಭಿನಯ ನಿಮ್ಮನ್ನು ಎಂದೂ ನಿರಾಸೆಗೊಳಿಸುವುದಿಲ್ಲ.
ಈ ಸಲದ ಮಜಾ ಟಾಕೀಸಿನಲ್ಲಿ ಹಲವು ಹೊಸ ಪಾತ್ರಗಳು ನಿಮ್ಮನ್ನು ಎದುರಾಗಲಿವೆ. ತಲೆ ತಿನ್ನುವ ಸೆಕ್ಯುರಿಟಿ ಗಾರ್ಡ್ ಆಗಿ ತುಕಾಲಿ ಸಂತೋಷ್, ವೈರಲ್ ಸೋಶಿಯಲ್ ಮೀಡಿಯಾ ಸೆನ್ಸೇಶನ್ ಆಗಿ ಪಿಕೆ ನಿಮ್ಮನ್ನು ರಂಜಿಸಿದರೆ, ಎದುರು ಮನೆಯ ಕಿರಿಕ್ ಅಜ್ಜಿಯಾಗಿ ಚಂದ್ರಪ್ರಭಾ ಎಲ್ಲರನ್ನೂ ಕಾಡಲಿದ್ದಾರೆ. ಕಲರ್ಸ್ ನ ಮತ್ತೊಂದು ಸುಪರ್ ಹಿಟ್ ಶೋ ‘ಗಿಚ್ಚಿಗಿಚ್ಚಿ ಗಿಲಿಗಿಲಿ’ಯ ಪ್ರತಿಭೆಗಳಾದ ಶಿವು, ವಿನೋದ್ ಗೊಬ್ಬರಗಾಲ, ಸೌಮ್ಯ ಮತ್ತು ಪ್ರಿಯಾಂಕಾ ಕಾಮತ್ ನಿಮ್ಮನ್ನು ಎಡೆಬಿಡದೆ ನಗಿಸಲಿದ್ದಾರೆ.ಇವರಷ್ಟೇ ಅಲ್ಲದೆ, ದೀಪಾ ಭಾಸ್ಕರ್, ಮಿಮಿಕ್ರಿ ಗೋಪಿ, ಶ್ರೀ ಭವ್ಯ ಮತ್ತು ಅಗ್ನಿಸಾಕ್ಷಿ ಖ್ಯಾತಿಯ ಪ್ರಿಯಾಂಕ ಕೂಡ ನಿಮ್ಮ ಖುಷಿಯನ್ನು ದುಪ್ಪಟ್ಟು ಮಾಡಲು ಕಾದಿದ್ದಾರೆ. ಇಷ್ಟೊಂದು ಹೊಸ ಮುಖಗಳನ್ನು ಸ್ವಾಗತಿಸಲು ಮಜಾ ಮನೆ ಕೂಡ ಹೊಸ ರೂಪದಲ್ಲಿ ನವೀಕರಣಗೊಂಡು ಮಧುಮಗಳಂತೆ ಸಿಂಗರಿಸಿಕೊಂಡು ಸಜ್ಜಾಗಿದೆ.
ಬರೀ ಮನೆಯೊಳಗಿನ ಪಾತ್ರಗಳಷ್ಟೇ ಅಲ್ಲ, ಈ ಸೀಸನ್ನಿನಲ್ಲಿ ಮಜಾ ಮನೆಗೆ ಬರಲಿರುವ ಅತಿಥಿಗಳ ಪಟ್ಟಿಯೂ ಹೊಸ ರೀತಿ ಇರಲಿದೆ. ಚಿತ್ರ ತಾರೆಗಳಷ್ಟೇ ಅಲ್ಲದೆ, ಈ ಸಲ ಮಜಾ ಮನೆಗೆ ವಿವಿಧ ಕ್ಷೇತ್ರಗಳ ಜನಪ್ರಿಯ ಸಾಧಕರು ಅತಿಥಿಗಳಾಗಿ ಬರಲಿದ್ದಾರೆ. ಕ್ರೀಡಾ ತಾರೆಗಳು, ರಾಜಕಾರಣಿ, ಉದ್ಯಮಿಗಳನ್ನು ಸಹ ನೀವಿಲ್ಲಿ ಎದುರು ನೋಡಬಹುದು. ಅವರ ಜೀವನಾನುಭವದ ಮಾತುಗಳನ್ನು ಕಚಗುಳಿಯಿಡುವ ಮಾತುಕತೆಯ ಮುಖಾಂತರ ಹೊರ ಹಾಕಲಿದ್ದಾರೆ ನಿರೂಪಕ ಸೃಜನ್ ಲೋಕೇಶ್.
ಈಗಾಗಲೇ ಬಿಡುಗಡೆಯಾಗಿರುವ ಮಜಾಟಾಕೀಸ್ ನ ಪ್ರೊಮೊ ಜನರ ಮೆಚ್ಚುಗೆ ಗಳಿಸಿ, ಅವರ ಕುತೂಹಲ ಕೆರಳಿಸಿ ತುದಿಗಾಲಲ್ಲಿ ನಿಲ್ಲಿಸಿದೆ. ಇನ್ನು ನಿಮ್ಮ ವಾರಾಂತ್ಯಗಳಿಗೆ ನಗುವಿನ ಬಣ್ಣ ಬರುವುದರಲ್ಲಿ ಸಂಶಯವೇ ಇಲ್ಲ.
Watch ‘Boys V/S Girls’ on Maja Talkies’ Colorful Kalarava Colors
-

ವಧು ಮತ್ತು ಯಜಮಾನ: ಕಲರ್ಸ್ ಕನ್ನಡದಲ್ಲಿ ಎರಡು ಹೊಸ ಧಾರಾವಾಹಿಗಳು
ಸಿನಿಮಾ ತಾರೆಯರಾದ ಶ್ರುತಿ ಮತ್ತು ಸಪ್ತಮಿ ಗೌಡ ಪರಿಚಯಿಸುವ ಎರಡು ಹೊಸ ಕತೆಗಳು
ಕನ್ನಡ ವೀಕ್ಷಕರ ಮನಸಿಗೆ ಲಗ್ಗೆಯಿಡುವ ಕತೆಗಳನ್ನು ಹೇಳುತ್ತಾ ಬಂದಿರುವ ಕಲರ್ಸ್ ಕನ್ನಡ ಚಾನೆಲ್, ಇದೀಗ ಮತ್ತೆರೆಡು ಹೊಸ ಧಾರಾವಾಹಿಗಳನ್ನು ನಿಮ್ಮ ಮುಂದೆ ತರಲು ಸಜ್ಜಾಗಿದೆ. ‘ವಧು’ ಮತ್ತು ‘ಯಜಮಾನ’ ದೈನಿಕ ಧಾರಾವಾಹಿಗಳು ಜನವರಿ 27ರಂದು ಪ್ರಸಾರವಾಗಲಿವೆ. ಜೋಡಿ ಕತೆಗಳಾದ ಡಿವೋರ್ಸ್ ಲಾಯರ್ ಮದುವೆ ಕತೆ ‘ವಧು’ ರಾತ್ರಿ 9.30ಕ್ಕೆ ಪ್ರಸಾರವಾಗಲಿದೆ. ಕಾಂಟ್ರಾಕ್ಟ್ ಮದುವೆಯ ಕತೆ ‘ಯಜಮಾನ’ ರಾತ್ರಿ 10 ಗಂಟೆಗೆ ಪ್ರಸಾರವಾಗಲಿದೆ.
ವಧು
ಸಂಬಂಧಗಳನ್ನು ಪ್ರೀತಿಸುವ, ಅಷ್ಟೇ ಗೌರವಿಸುವ ‘ವಧು’ ಒಬ್ಬ ಅವಿವಾಹಿತೆ, ವೃತ್ತಿಯಲ್ಲಿ ಡಿವೋರ್ಸ್ ಲಾಯರ್. ಮನುಷ್ಯ ಸಂಬಂಧಗಳ ಬಗ್ಗೆ ಅವಳಿಗಿರುವ ಗೌರವವೇ ಅವಳನ್ನು ತನ್ನ ವೃತ್ತಿಯಲ್ಲಿ ಹಿಂದುಳಿಯುವಂತೆ ಮಾಡಿದೆ ಅಂದರೂ ತಪ್ಪಾಗದು!.
ಗಂಡ ಹೆಂಡತಿ ನಡುವೆ ಬಿರುಕು ಮೂಡಿ ವಿಚ್ಛೇದನ ಕೋರಿ ಬಂದ ಜೋಡಿಗಳ ನಡುವೆ ಸಾಮರಸ್ಯ ಮೂಡಿಸಿ ಅವರನ್ನು ಒಂದು ಮಾಡುವುದರಲ್ಲೇ ಅವಳಿಗೆ ಆಸಕ್ತಿ. ಹೀಗಿರುವಾಗ ಒಂದು ಮಹತ್ವದ ಕೇಸು ಎಲ್ಲವನ್ನೂ ತಲೆಕೆಳಗು ಮಾಡುತ್ತದೆ. ಮೋಸ್ಟ್ ಸಕ್ಸಸ್ ಫುಲ್ ಬ್ಯುಸಿನೆಸ್ ಮ್ಯಾನ್ ಸಾರ್ಥಕ್ ದಾಂಪತ್ಯದಲ್ಲಿ ಬಿರುಕುಂಟಾಗಿ, ಪತ್ನಿ ಪ್ರಿಯಾಂಕಾ ಡಿವೋರ್ಸ್ ಕೇಸ್ ಫೈಲ್ ಮಾಡಿದಾಗ ವಧು ಹತ್ತಿರ ಸಹಾಯ ಕೋರಿ ಬರುತ್ತಾನೆ. ಈ ವೇಳೆ ಕತೆ ಕುತೂಹಲಕರ ತಿರುವು (ಟರ್ನ್) ಪಡೆಯುತ್ತದೆ.
ಸಂಬಂಧಗಳನ್ನು ಪರೀಕ್ಷೆಗೊಳಪಡಿಸುವ ‘ವಧು’ ಧಾರಾವಾಹಿಯು ವೃತ್ತಿಧರ್ಮ ಮತ್ತು ಆತ್ಮಸಾಕ್ಷಿಗಳ ನಡುವಿನ ತಿಕ್ಕಾಟವನ್ನು ಹೇಳುತ್ತದೆ. ಪ್ರೀತಿ, ಮೋಸ ಮತ್ತು ನಂಬಿಕೆಗಳು ನಮ್ಮನ್ನು ಹೇಗೆಲ್ಲಾ ಘಾಸಿಗೊಳಿಸಬಹುದೆಂಬುದನ್ನು ಬಿಡಿಸಿಡುತ್ತದೆ. ತನ್ನ ಭಾವನೆಗಳ ಜೊತೆಗೆ ಗುದ್ದಾಡುತ್ತಲೇ ತನಗೆ ಸಿಕ್ಕಿರುವ ಈ ಹೊಸ ಕೇಸನ್ನು ವಧು ಸರಿಯಾಗಿ ನಿಭಾಯಿಸುತ್ತಾಳಾ? ಪ್ರೀತಿ ಮತ್ತು ಬದ್ಧತೆಗಳ ಬಗೆಗಿನ ಅವಳ ನಿಲುವುಗಳನ್ನು ಈ ಕೇಸ್ ಬದಲಾಯಿಸುತ್ತಾ ಅನ್ನುವುದೇ ಕತೆಯನ್ನು ಮುನ್ನೆಡೆಸುವ ಎಳೆ.
ಹೆಸರಾಂತ ಕಲಾವಿದರಾದ ವಿನಯಾ ಪ್ರಸಾದ್, ಸುಧಾ ಬೆಳವಾಡಿ, ರವಿ ಭಟ್, ರವಿ ಕುಮಾರ್ ಮತ್ತು ರೇಖಾ ಸಾಗರ್ ಅವರು ಅಭಿನಹಿಸಿದ್ದಾರೆ. ಸಾರ್ಥಕ್ ಪಾತ್ರದಲ್ಲಿ ಲಕ್ಷಣ ಧಾರಾವಾಹಿ ಖ್ಯಾತಿಯ ಅಭಿಷೇಕ್ ಶ್ರೀಕಾಂತ್, ವಧು ಪಾತ್ರದಲ್ಲಿ ದುರ್ಗಾಶ್ರೀ ಮತ್ತು ಪ್ರಿಯಾಂಕಾ ಪಾತ್ರದಲ್ಲಿ ಸೋನಿ ಮುಲೇವಾ ನಟಿಸಲಿದ್ದಾರೆ. ಕುತೂಹಲ ಮತ್ತು ನಾಟಕೀಯ ಸನ್ನಿವೇಶಗಳ ಸಂಗಮವಾಗಿರುವ ‘ವಧು’ ವೀಕ್ಷಕರ ಮನ ಸೂರೆಗೊಳ್ಳುವುದರಲ್ಲಿ ಸಂಶಯವಿಲ್ಲ. ಈಗಾಗಲೇ ಪ್ರೊಮೊ ಮೂಲಕ ಸಿಎಸ್ ಪಿ ಪಾತ್ರ ಎಲ್ಲರ ಮನಸನ್ನ ಗೆದ್ದಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.
ಯಜಮಾನ
ಚೂರೂ ಸ್ವಾರ್ಥವಿಲ್ಲದ ಸರಳ ವ್ಯಕ್ತಿ ರಘುಗೆ ತನ್ನ ಕುಟುಂಬದ ಪ್ರೀತಿ ಗಳಿಸುವ ಮಹದಾಸೆ. ಝಾನ್ಸಿ ಹಾಗಲ್ಲ. ತಾತನ ಮಡಿಲಲ್ಲಿ ಬೆಳೆದ ಈಕೆ ಗಂಡಸರನ್ನು ದ್ವೇಷಿಸುವ ಹಠಮಾರಿ ಹುಡುಗಿ. ವಿಧಿ ಇವರಿಬ್ಬರನ್ನೂ ಒಂದು ಮದುವೆಯ ರೂಪದಲ್ಲಿ ಹತ್ತಿರ ತರುತ್ತದೆ. ತನ್ನ ಕಷ್ಟದಲ್ಲಿರುವ ಕುಟುಂಬದ ಒಳಿತಿಗೆ ಈ ಮದುವೆ ದಾರಿಯಾದೀತೆಂದು ಬಗೆಯುವ ರಘು ಮದುವೆಗೆ ಒಪ್ಪುತ್ತಾನೆ. ಮದುವೆಯ ನಂತರ ಅನೇಕ ಅನೂಹ್ಯ ತಿರುವುಗಳು ಬಂದು ಕತೆಯನ್ನು ಮತ್ತೆಲ್ಲಿಗೋ ಸೆಳೆದೊಯ್ಯುತ್ತವೆ.
ರಘು ಮತ್ತು ಝಾನ್ಸಿ ತಮ್ಮ ವ್ಯಕ್ತಿತ್ವದಲ್ಲಿರುವ ಭಿನ್ನತೆಯನ್ನು ಎದುರಿಸಬೇಕಾಗುತ್ತದೆ. ಅನುಕೂಲಕ್ಕೆಂದು ಆರಂಭವಾದ ಅವರಿಬ್ಬರ ಸಂಬಂಧ ಈಗ ಗಾಢವಾಗುತ್ತಾ ಬೆಳೆದರೂ ಯಾವುದೇ ಕ್ಷಣದಲ್ಲೂ ಒಡೆದುಹೋಗುವ ಭಯವನ್ನೂ ಹುಟ್ಟಿಸುತ್ತದೆ. ಪ್ರೀತಿ, ಮಹತ್ವಾಕಾಂಕ್ಷೆ ಮತ್ತು ಸ್ವಾರ್ಥದ ಆಟ ‘ಯಜಮಾನ’ದ ಕತೆಯನ್ನು ಬೆಳೆಸುತ್ತಾ ಹೋಗುವ ತಂತು. ರಘು ಮತ್ತು ಝಾನ್ಸಿ ಎಂದಾದರೂ ಬದುಕು ತಮಗೆ ಒಡ್ಡುವ ಸವಾಲುಗಳನ್ನು ಗೆಲ್ಲುತ್ತಾರಾ? ಅಥವಾ ಅವರ ವ್ಯಕ್ತಿತ್ವದಲ್ಲಿರುವ ಭಿನ್ನತೆಯೇ ಅವರನ್ನು ದೂರಾಗಿಸುತ್ತದೆಯಾ? ಉತ್ತರಕ್ಕೆ ಸಂಚಿಕೆಗಳನ್ನು ಕಾದು ನೋಡಬೇಕು.
ಹೊಸ ಮುಖಗಳಾದ ಹರ್ಷ ಬಿ. ಎಸ್. ಮತ್ತು ಮಧುಶ್ರೀ ಭೈರಪ್ಪ ‘ಯಜಮಾನ’ದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅವರಿಗೆ ಬೆಂಬಲವಾಗಿ ರಮೇಶ್ ಭಟ್, ನಾಗಾಭರಣ, ಮಂಜುಳ, ಅಂಕಿತಾ ಜೈರಾಮ್, ತಿಲಕ್, ಸ್ಪೂರ್ತಿ, ಪ್ರದೀಪ್ ಮತ್ತು ವಿಶ್ವ ಇಲ್ಲಿದ್ದಾರೆ.
‘ವಧು’ ಮತ್ತು ‘ಯಜಮಾನ’ ಎರಡೂ ಕತೆಗಳು ಆಧುನಿಕ ಬದುಕಿನ ಸಂಬಂಧಗಳ ಹೊಸ ಸಂಕೀರ್ಣತೆಯನ್ನು ಎಳೆಎಳೆಯಾಗಿ ಬಿಡಿಸಿಡುವ ಹೊಸ ಬಗೆಯ ಕತೆಗಳು. ಭಾವನೆಗಳ ಸಂಘರ್ಷವನ್ನು ಅದರ ಮಿತಿಗಳಾಚೆಗೆ ಜಗ್ಗಿ ಪರೀಕ್ಷಿಗೊಳಪಡಿಸುವ ಈ ಎರಡು ಕತೆಗಳನ್ನು ನೋಡಲು ಮರೆಯದಿರಿ.ಕಲರ್ಸ್ ಕನ್ನಡ
ಕಲರ್ಸ್ ಕನ್ನಡ ಒಂದು ಕುಟುಂಬ ಮನರಂಜನಾ ಚಾನಲ್ ಆಗಿದ್ದು, ಕನ್ನಡದ ಶ್ರೀಮಂತ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಗುಣಮಟ್ಟದ ಕಾರ್ಯಕ್ರಮಗಳನ್ನು ವೀಕ್ಷಕರಿಗೆ ಒದಗಿಸುತ್ತದೆ. ಭಾಗ್ಯಲಕ್ಷ್ಮಿ, ಲಕ್ಷ್ಮೀ ಬಾರಮ್ಮ, ರಾಮಚಾರಿ, ನಿನಗಾಗಿ, ದೃಷ್ಟಿಬೊಟ್ಟು, ಕರಿಮಣಿ, ನೂರು ಜನ್ಮಕೂ, ಗಿಚ್ಚಿ ಗಿಲಿ ಗಿಲಿ, ರಾಜಾ ರಾಣಿ, ನನ್ನಮ್ಮ ಸೂಪರ್ಸ್ಟಾರ್, ಫ್ಯಾಮಿಲಿ ಗ್ಯಾಂಗ್ಸ್ಟಾರ್ಸ್ ಮತ್ತು ಬಿಗ್ ಬಾಸ್ ಕನ್ನಡ ಚಾನಲ್ನ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕೆಲವು.
Vadhu and Yajamana: Two new serials on Colors Kannada
ಪಂಚ ಗ್ಯಾರಂಟಿ ಯೋಜನೆ ಫಲಾನುಭವಿಗಳ ಸಮಾವೇಶದಲ್ಲಿ ಜಿಲ್ಲಾಧ್ಯಕ್ಷ ಶಿವಾನಂದಸ್ವಾಮಿ ಹೇಳಿಕೆ.