ಬಾಳೆಹೊನ್ನೂರು: ಹೆಂಡತಿ ಬಿಟ್ಟು ಹೋಗಿದ್ದಕ್ಕೆ ಮನನೊಂದು ಅತ್ತೆ, ನಾದಿನಿ ಹಾಗೂ 7ವರ್ಷದ ಮಗುವನ್ನು ಕೊಲೆ ಮಾಡಿ ತಾನು ಆತ್ಮಹತ್ಯೆಗೆ ಶರಣಾಗಿರುವ ಮನ ಕಲಕುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಕೌಟುಂಬಿಕ ಕಲಹದ ಕಾರಣಕ್ಕೆ ನಾಡ ಬಂದೂಕಿನಿಂದ ಮೂವರ ಹತ್ಯೆ ನಡೆಸಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಖಾಂಡ್ಯ ಹೋಬಳಿಯ ಮಾಗಲುನಲ್ಲಿ ನಡೆದಿದೆ. ರತ್ನಾಕರ್ ಎಂಬುವವನಿಂದ ಈ ಕೃತ್ಯ ನಡೆದಿದ್ದು, ಸ್ಥಳೀಯ ಖಾಸಗಿ ಶಾಲೆಯಲ್ಲಿ ಬಸ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ರತ್ನಾಕರ್ ನನ್ನು ಆತನ ಹೆಂಡತಿ ಬಿಟ್ಟು ಎರಡು ವರ್ಷಗಳಾಗಿದ್ದು ಪತ್ನಿಯಿಂದ ದೂರವಿದ್ದನು.
ಆ ಸಿಟ್ಟು ಅತ್ತೆ ಮತ್ತು ನಾದಿನಿ ಮೇಲೆ ತೋರಿಸಿದ್ದು ಇಬ್ಬರನ್ನೂ ಹತ್ಯೆಗೈಯುವ ಜೊತೆಗೆ ತನ್ನ ಮಗಳನ್ನು ಸಹ ಗುಂಡಿಕ್ಕಿ ಕೊಲೆಗೈದಿರುವ ಅಮಾನವೀಯ ಕೃತ್ಯ ನಡೆದಿದೆ
ಕೃತ್ಯದ ನಂತರ ಆರೋಪಿ ಮನೆಯ ಹಿಂಬಾಗದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾವಿಗೆ ಶರಣಾಗುವ ಮುಂಚೆ ವಿಡಿಯೋ ಮಾಡಿದ್ದ ಆರೋಪಿ: ಮೂವರ ಕೊಲೆ ಮಾಡಿದ ಆರೋಪಿ ರತ್ನಾಕರ್ ತಾನು ಆತ್ಮಹತ್ಯೆಗೆ ಶರಣಾಗುವ ಮುನ್ನ ವಿಡಿಯೋ ಮಾಡಿದ್ದು, ತನ್ನ ಪತ್ನಿ ದೂರವಾದ ಬಳಿಕ ಎಲ್ಲರೂ ಮಗುವಿನ ಬಳಿ ತಾಯಿಯ ಬಗ್ಗೆ ಕೇಳುತ್ತಿದ್ದಾರೆ.
ಆದ್ರೆ ಆಕೆ ಬಿಟ್ಟು ಹೋಗಿ 2 ವರ್ಷ ಆಗಿದೆ. ನನ್ನ ಕುಟುಂಬದವರಿಗೆ ಯಾರಿಗೂ ತಿಳಿಸದೆ ಈ ನಿರ್ಧಾರ ತೆಗೆದುಕೊಂಡಿದ್ದೇನೆ ಎಂದು 47 ಸೆಕೆಂಡ್ ಗಳ ವಿಡಿಯೋ ಮಾಡಿದ್ದಾನೆ. ಇನ್ನು ಘಟನೆ ನಡೆದ ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ, ಬಾಳೆಹೊನ್ನೂರು ಪೊಲೀಸ್ ಠಾಣೆಯ PSI ರವೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
The father who did not commit the gruesome murder of three people, including his daughter
