ಬೆಂಗಳೂರು: ಅಕ್ರಮ ಬೆಟ್ಟಿಂಗ್ ಪ್ರಕರಣದಲ್ಲಿ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿಯನ್ನ ಈಗಾಗಲೇ ಬಂಧಿಸಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ 50 ಕೋಟಿ ರೂ. ಮೌಲ್ಯದ 44 ಕೆಜಿ ಚಿನ್ನವನ್ನು ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಆ ಮೂಲಕ ಈವರೆಗೆ 150 ಕೋಟಿಗೂ ಅಧಿಕ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.
ಇತ್ತೀಚೆಗೆ ಆನ್ಲೈನ್ ಬೆಟ್ಟಿಂಗ್ ಆ್ಯಪ್ ಮತ್ತು ಕ್ಯಾಸಿನೋಗಳಲ್ಲಿ ಅಕ್ರಮ ಹಣ ವರ್ಗಾವಣೆ ಸಂಶಯದಡಿ ವೀರೇಂದ್ರ ಪಪ್ಪಿ ಮೇಲೆ ಇಡಿ ದಾಳಿ ನಡೆದಿತ್ತು. ಸುಮಾರು 30 ಕಡೆ ನಡೆದ ದಾಳಿಯಲ್ಲಿ 12 ಕೋಟಿ ರೂ ನಗದು, 6 ಕೋಟಿ ರೂ ಮೌಲ್ಯದ ಚಿನ್ನ, ವಿದೇಶಿ ಕರೆನ್ಸಿ ಸೇರಿದಂತೆ ಕೋಟ್ಯಂತರ ಮೌಲ್ಯದ ಆಸ್ತಿ ವಶಕ್ಕೆ ಪಡೆದಿದ್ದರು.
ಸಿಕ್ಕಿಂನ ಗ್ಯಾಂಗ್ಟಕ್ನಲ್ಲಿದ್ದ ಪಪ್ಪಿಯನ್ನ ಕೊಲ್ಕತ್ತಾ ಇಡಿ ಅಧಿಕಾರಿಗಳ ಮೂಲಕ ಬಂಧಿಸಿ, ತಡರಾತ್ರಿ ಬೆಂಗಳೂರಿಗೆ ಕರೆತಂದಿದ್ದರು. ಬಳಿಕ ಕೋರಮಂಗಲದ ಜಡ್ಜ್ ನಿವಾಸದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ 35 ನೇ ಸಿಸಿಹೆಚ್ ಕೋರ್ಟ್ ನ್ಯಾಯಾಧೀಶರು 5 ದಿನಗಳ ಕಾಲ ವೀರೇಂದ್ರ ಪಪ್ಪಿಯನ್ನ ಇಡಿ ಕಸ್ಟಡಿಗೆ ನೀಡಿ ಆದೇಶಿಸಿತ್ತು. ಆಗಸ್ಟ್ 28 ರವರೆಗೆ ಇಡಿಯಿಂದ ವೀರೇಂದ್ರ ಪಪ್ಪಿ ವಿಚಾರಣೆ ನಡೆದಿತ್ತು. ಆಗಸ್ಟ್ 28 ರಂದು ಪಪ್ಪಿ ಪರ ವಕೀಲರು ಬೇಲ್ಗೆ ಅರ್ಜಿ ಸಲ್ಲಿಸಿದ್ದರು.
ED seizes 44 kg gold belonging to Congress MLA Veerendra Pappi

Leave a Reply