Category: ಚಿಕ್ಕಮಗಳೂರು ನಗರ

  • ಕ್ರೀಡಾ ಚಟುವಟಿಕೆ ದೈಹಿಕ-ಮಾನಸಿಕ ಆರೋಗ್ಯ ವೃದ್ದಿ

    ಕ್ರೀಡಾ ಚಟುವಟಿಕೆ ದೈಹಿಕ-ಮಾನಸಿಕ ಆರೋಗ್ಯ ವೃದ್ದಿ

    ಚಿಕ್ಕಮಗಳೂರು:  ಕ್ರೀಡಾ ಚಟುವಟಿಕೆ ದೈಹಿಕ, ಮಾನಸಿಕ ಆರೋಗ್ಯವನ್ನು ವೃದ್ದಿಸು ತ್ತದೆ. ವಿದ್ಯಾರ್ಥಿ ಜೀವನದಲ್ಲಿ ಶಿಸ್ತು, ಸಮಯ ನಿರ್ವಹಣೆಯ ಪಾಠವನ್ನು ಬೋಧಿಸುತ್ತದೆ ಎಂದು ನೇಚರ್ ಕನ್ಸರ್‌ವೇಷನ್ ಟ್ರಸ್ಟ್ ಅಧ್ಯಕ್ಷ ಡಾ|| ಕೆ.ಸುಂದರಗೌಡ ಹೇಳಿದರು.

    ನಗರದ ಎಸ್.ಟಿ.ಜೆ ಮಹಿಳಾ ಪದವಿ ಕಾಲೇಜಿನಲ್ಲಿ ೨೦೨೫-೨೬ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೇಂಜರ್ಸ್ ಘಟಕಗಳ ಉದ್ಘಾಟನೆಯನ್ನು ಈಚೆಗೆ ನೆರವೇರಿಸಿ ಅವ ರು ಮಾತನಾಡಿದರು.

    ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿ ಕೊಳ್ಳಬೇಕು. ಪಠ್ಯದ ಜೊತೆಗೆ ಆಸಕ್ತಿ ಹೊಂದಿರುವ ರಂಗದಲ್ಲಿ ಗುರುತಿಸಿಕೊಂಡಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಲು ಸಾಧ್ಯವಾಗಲಿದೆ ಎಂದು ಹೇಳಿದರು.

    ಎಸ್ ಟಿ ಜೆ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲೆ ಭಾರತಿ ಮಾತನಾಡಿ ಉತ್ತಮ ಆರೋಗ್ಯಕ್ಕೆ ನಿಯಮಿತ ದೈಹಿಕ ಚಟುವಟಿಕೆ ಅತ್ಯಗತ್ಯ, ಇಂದಿನ ಮಕ್ಕಳು ಹಿಂದೆಗಿಂತಲೂ ಹೆಚ್ಚು ಸಮಯವನ್ನು ಕೇವಲ ಮೊಬೈಲ್‌ಗಳಿಗೆ ಅಂಟಿಕೊಂಡಿದ್ದು ಈ ಹೊರತಾಗಿ ಕ್ರೀಡೆ ಮತ್ತು ವ್ಯಾಯಾಮಕ್ಕೆ ಪ್ರಮುಖ ಆದ್ಯತೆ ಕೊಡ ಬೇಕು ಎಂದು ಕಿವಿಮಾತು ಹೇಳಿದರು.

    ಈ ಸಂದರ್ಭದಲ್ಲಿ ಎಸ್.ಟಿ.ಜೆ. ಮಹಿಳಾ ಪದವಿ ಕಾಲೇಜಿನ ಸಲಹಾ ಸಮಿತಿ ಅಧ್ಯಕ್ಷ ವಿನಾಯಕ್, ಎಸ್‌ಟಿಜೆ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶಿವನಗೌಡ, ಮುಖ್ಯೋಪಾಧ್ಯಾ ಯರಾದ ಚೇತನ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

    Improving mental health through sports activities

  • ಭವಿಷ್ಯದ ಪ್ರಜೆಗಳನ್ನು ಅಣಿಗೊಳಿಸುವ ಶಿಕ್ಷಕರು ದೈವಿಸಭೂತರು

    ಭವಿಷ್ಯದ ಪ್ರಜೆಗಳನ್ನು ಅಣಿಗೊಳಿಸುವ ಶಿಕ್ಷಕರು ದೈವಿಸಭೂತರು

    ಚಿಕ್ಕಮಗಳೂರು: ಸಮಾಜಕ್ಕೆ ಭವಿಷ್ಯದ ಪ್ರಜೆಗಳನ್ನು ಅಣಿಗೊಳಿಸುವ ಗುರುಗಳು ದೈವಸಭೂತರು. ಗುರುಗಳ ಹಾಕಿಕೊಟ್ಟ ಮಾರ್ಗದರ್ಶನ, ಸನ್ನಡತೆ, ಸದ್ವಿಚಾರದಡಿ ವಿದ್ಯಾರ್ಥಿಗಳು ಸಾಗಿ ದರೆ ದೇಶದಲ್ಲಿ ಉತ್ತಮ ನಾಗರೀಕರಾಗಿ ರೂಪುಗೊಳ್ಳಬಹುದು ಎಂದು ಕನ್ನಡ ಪೂಜಾರಿ ಹಿರೇಮಗಳೂ ರು ಕಣ್ಣನ್ ಹೇಳಿದರು.

    ನಗರದ ಜ್ಯೋತಿನಗರದ ಸಮೀಪದ ಮಲೆನಾಡು ವಿದ್ಯಾಸಂಸ್ಥೆಯ ಎಸ್.ಎಸ್.ಆರ್. ಪ್ರಾಯೋಗಿಕ ಪ್ರೌಢಶಾಲೆಯಲ್ಲಿ ಶನಿವಾರ ಹಳೇ ವಿದ್ಯಾರ್ಥಿಗಳಿಂದ ಆಯೋಜಿಸಿದ್ಧ ಗುರುವಂದನ ಹಾಗೂ ೨೫ನೇ ವರ್ಷ ದ ಬೆಳ್ಳಿ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಹಳೇ ವಿದ್ಯಾರ್ಥಿಗಳು ಹಾಗೂ ಹಿರಿಯ ಶಿಕ್ಷಕರ ಸಮ್ಮೀಲನವು ಅಪರೂಪವಾಗಿದೆ. ಹಿಂದಿನ ಗೆಳೆಯ ಮತ್ತು ಗೆಳತಿಯರ ಬಾಂಧವ್ಯವು ಇಂದಿಗೂ ಚಿರಸ್ಥಾಯಿಯಾಗಿ ಉಳಿದುಕೊಂಡಿರುವುದು ಹೆಮ್ಮೆಯ ಸಂಗ ತಿ. ಹಣವಿದ್ದಲ್ಲಿ ಜೀವನ ಸಾಗಿಸಬಹುದಷ್ಟೇ ಹೊರತು. ಪ್ರೀತಿ, ವಿಶ್ವಾಸ ಹಾಗೂ ಹಳೇ ನೆನಪುಗಳನ್ನು ಮೆಲು ಕು ಹಾಕಲು ಸಾಧ್ಯವಿಲ್ಲ ಎಂದರು.

    ಗುರುಗಳ ಆರ್ಶೀವಾದಿಂದ ವಿದ್ಯಾರ್ಥಿಗಳು ಬದುಕಿನಲ್ಲಿ ಸೋಲಾನುಭವಿಸಲು ಸಾಧ್ಯವಿಲ್ಲ. ಶಿಕ್ಷಕರ ಕೃಪೆಗೆ ಪಾತ್ರರಾಗಿ ಬದುಕುವುದೇ ನಿಜವಾದ ಧರ್ಮವಾಗಿದೆ. ಆ ನಿಟ್ಟಿನಲ್ಲಿ ಹಳೇ ವಿದ್ಯಾರ್ಥಿಗಳು ವಿದ್ಯಾ ಭ್ಯಾಸದ ಪೂರೈಸಿದ ಶಾಲೆಯನ್ನು ಉಳಿಸಿ, ಬೆಳೆಸುವ ಜೊತೆಗೆ ಪರರಿಗೂ ಶಾಲೆಯ ವೈಶಿಷ್ಟತೆಯ ಬಗ್ಗೆ ತಿಳಿ ಹೇಳಬೇಕು ಎಂದು ಕಿವಿಮಾತು ಹೇಳಿದರು.

    ಹಳೇ ವಿದ್ಯಾರ್ಥಿಗಳು ಮಾತನಾಡಿ ಶಾಲೆಯಲ್ಲಿ ನಡೆದ ತುಂಟಾಟ, ಕಿಟಲೇ, ಸಣ್ಣಪುಟ್ಟ ತಪ್ಪುಗಳಿಗೆ ಶಿಕ್ಷಕರಿಂದ ತಿಂದಥ ಪೆಟ್ಟುಗಳನ್ನು ಮೆಲುಕುಹಾಕಿ ಖುಷಿಪಟ್ಟರು. ಶಿಕ್ಷಕರು ನೀಡಿದಂಥ ಪೆಟ್ಟು ಕಲ್ಲಿನ ಬಂಡೆ ಯನ್ನು ಸುಂದರ ವಿಗ್ರಹರೂಪದಲ್ಲಿ ತಯಾರಾಗುವಂತೆ ಮಾಡಿ ಸಮಾಜಕ್ಕೆ ಮಾದರಿಯಾಗುವಂತೆ ಮಾಡಿ ದೆ ಎಂದು ಹೇಳಿದರು.

    ಇತ್ತೀಚಿನ ಶಿಕ್ಷಣ ವ್ಯವಸ್ಥೆಯು ಹಿಂದಿನ ಪದ್ಧತಿಯಲ್ಲಿಲ್ಲ. ಮಕ್ಕಳಿಗೆ ಒತ್ತಡದಿಂದ ಕಳೆಯುವಂಥ ಸ್ಥಿತಿ ನಿರ್ಮಾಣವಾಗಿದೆ. ಬೆದರುಗೊಂಬೆಯಂತೆ ತಯಾರಾಗಿ ತೆರಳುವಂತಾಗಿದೆ. ಕೆಜಿಗಟ್ಟಲೇ ನೋಟ್‌ಪುಸ್ತಕಗ ಳನ್ನು ಹೊರಬೇಕಾಗಿದೆ. ಹೀಗಾಗಿ ಮಕ್ಕಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಸ್ಥಳೀಯ ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸಲು ಪಾಲಕರು ಮುಂದಾಗಬೇಕು ಎಂದರು.

    ಇದೇ ವೇಳೆ ಶಾಲೆಯಲ್ಲಿನ ಹಳೇ ವಿದ್ಯಾರ್ಥಿಗಳಿಂದ ಶಿಕ್ಷಕರಿಗೆ ಗೌರವಯುತವಾಗಿ ಸನ್ಮಾನಿಸಿದರು. ಬಳಿಕ ಹಿರಿಯ ವಿದ್ಯಾರ್ಥಿಗಳು ಪರಸ್ಪರ ಪರಿಚಯ, ಅನಿಸಿಕೆಗಳನ್ನು ಹಂಚಿಕೊಂಡರು. ಎಸ್.ಎಸ್.ಆರ್. ಪ್ರಾಯೋಗಿಕ ಪ್ರೌಢಶಾಲೆ ಮುಖ್ಯಶಿಕ್ಷಕ ಬಿ.ಕೆ.ಸದಾಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು.

    ಈ ಸಂದರ್ಭದಲ್ಲಿ ಶಿಕ್ಷಕರಾದ ಕೆ.ಎಸ್.ಸೀತಾಲಕ್ಷ್ಮೀ, ಬಿ.ಎಲ್.ಜಗದೀಶ್, ಹೆಚ್.ಎನ್.ಸತೀಶ್, ಹೆಚ್. ಬಿ.ಹನುಮಂತಪ್ಪ, ಶಶಿಕಲಾ, ಬಿ.ಸಿ.ಯೋಗೀಶ್, ಹಳೇ ವಿದ್ಯಾರ್ಥಿಗಳಾದ ಎನ್.ಕೆ.ಮಂಜುನಾಥ್, ಡಿ.ಆರ್. ಅರುಣ್, ಮಂಜುನಾಥ್, ಮಧುಕುಮಾರ್, ಅಶೋಕ್ ಮತ್ತಿತರರಿದ್ದರು. ಬಿಂದಿಯಾ ಪ್ರಾರ್ಥಿಸಿದರು. ಬಿ.ಆರ್.ದಿವ್ಯ ಸ್ವಾಗತಿಸಿದರು. ಎಂ.ಎಂ.ಕವೀಶ್ ಪ್ರಾಸ್ತಾವಿಕ ನುಡಿದರು. ಜಿ.ಎಸ್.ಉಮಾ ನಿರೂಪಿಸಿ, ವಂ ದಿಸಿದರು.

    Teachers are divine beings who shape future citizens.

  • ಪದವೀಧರರ ಸಂಘಕ್ಕೆ 14.71 ಲಕ್ಷ ರೂ.ಗಳ ನಿವ್ವಳ ಲಾಭ

    ಪದವೀಧರರ ಸಂಘಕ್ಕೆ 14.71 ಲಕ್ಷ ರೂ.ಗಳ ನಿವ್ವಳ ಲಾಭ

    ಚಿಕ್ಕಮಗಳೂರು:  ಸಹಕಾರಿ ರಂಗದಲ್ಲಿನ ಬಹಳಷ್ಟು ಸವಾಲುಗಳ ನಡುವೆ ಪದವೀ ಧರರ ಸಂಘ ಹತ್ತು ವರ್ಷದಿಂದ ಸದಸ್ಯರಿಗೆ ಶೇ.೧೦ ಡಿವಿಡೆಂಟ್ ಒದಗಿಸಿಕೊಡುವ ಮೂಲಕ ಶ್ರೇಯೋಭಿ ವೃದ್ಧಿಗೆ ಶ್ರಮಿಸುತ್ತಿದೆ ಎಂದು ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಸಿ.ಲೋಕಪ್ಪಗೌಡ ಹೇಳಿ ದರು.

    ನಗರದ ಬಸವನಹಳ್ಳಿ ಸಮೀಪದ ಜಿಲ್ಲಾ ಪದವೀಧರರ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಶನಿ ವಾರ ಸರ್ವಸದಸ್ಯರ ೨೫ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಸಕ್ತ ಸಾಲಿ ನಲ್ಲಿ ೧೪.೭೧ ಲಕ್ಷ ರೂ. ನಿವ್ವಳ ಲಾಭ ಗಳಿಸುವ ಮೂಲಕ ಆರ್ಥಿಕವಾಗಿ ಗಟ್ಟಿಯಾಗಿದೆ ಎಂದು ತಿಳಿಸಿದರು.

    ಸದಸ್ಯರಿಗೆ ವೈಯಕ್ತಿಕ ೨ ಲಕ್ಷ ರೂ.ಗಳ ಸಾಲಸೌಲಭ್ಯದ ವ್ಯವಸ್ಥೆಯನ್ನು ಸಕಲ ಭದ್ರತೆಯಡಿ ಹೆಚ್ಚಳಗೊ ಳಿಸುವ ವಿಚಾರವನ್ನು ತೀರ್ಮಾನಿಸಲಾಯಿತು. ಅಲ್ಲದೇ ೭೫ ಲಕ್ಷ ಸಾಲಸೌಲಭ್ಯವನ್ನು ಮುಂದೆ ಹೆಚ್ಚಳಗೊಳಿ ಸುವ ಗುರಿಯಿದೆ. ಜೊತೆಗೆ ಪದವಿಧರರ ಸಂಘದ ಸದಸ್ಯರಾಗಿ ಠೇವಣಿ ಹೂಡಿಸಿದ್ದಲ್ಲಿ ಸದಸ್ಯರಿಗೂ ಅನುಕೂಲವಾಗುವ ಜೊತೆಗೆ ಸಂಘವು ಆರ್ಥಿಕವಾಗಿ ಪ್ರಗತಿ ಸಾಧಿಸಲಿದೆ ಎಂದು ತಿಳಿಸಿದರು.

    ಸಾಲಸೌಲಭ್ಯ ಒದಗಿಸುವ ಜೊತೆಗೆ ವಸೂಲಾತಿ ಕಾರ್ಯವು ಯಶಸ್ಸಿನಿಂದ ಸಾಗುತ್ತಿದೆ. ಇತರೆ ಸಹಕಾ ರಿ ಸಂಘ, ಬ್ಯಾಂಕ್‌ಗಳು ಹೊರತಾಗಿ ಪದವೀಧರರ ಸಂಘವು ಸದಸ್ಯರಿಗೆ ಹೆಚ್ಚು ಸ್ಪಂದಿಸುತ್ತಿದೆ. ಅಲ್ಲದೇ ಎಲ್ಲಾ ರೀತಿಯ ಸೌಕರ್ಯವು ಕಲ್ಪಿಸುತ್ತಿರುವ ಪರಿಣಾಮ ಪದವೀಧರರ ಸಂಘವು ಮುಂಚೂಣಿಯಲ್ಲಿರಲು ಸಾಧ್ಯವಾಗಿದೆ ಎಂದು ಹೇಳಿದರು.

    ನಗರದ ಬಹುತೇಕ ಸಹಕಾರಿ ಸಂಘದ ಆಡಳಿತ ಮಂಡಳಿ ಮನೆ ಮನೆ ತಿರುಗಿ ಸಂಘದ ಧ್ಯೇಯೋ ದ್ದೇಶವನ್ನು ಜನತೆಗೆ ಮನವರಿಕೆ ಮಾಡಿಕೊಟ್ಟಿರುವುದರಿಂದ ರಾಜ್ಯಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾ ಗಿದೆ. ಆ ನಿಟ್ಟಿನಲ್ಲಿ ಪದವೀಧರರ ಸಂಘವು ಹೆಚ್ಚಿನ ಶ್ರಮವಿಟ್ಟು ಕಾರ್ಯನಿರ್ವಹಿಸಿ ಸಂಘದ ಬೆಳ ವಣಿಗೆಗೆ ಕಾರ್ಯಪ್ರವೃತ್ತವಾಗಿದೆ ಎಂದು ಹೇಳಿದರು.

    ಸಂಘದ ನಿರ್ದೇಶಕ ಡಾ|| ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ ಸದಸ್ಯರುಗಳ ಸಹಕಾರದಿಂದ ಸ ಂಘವು ಆರ್ಥಿಕ, ಶೈಕ್ಷಣಿಕವಾಗಿ ಬೆಳವಣಿಗೆ ಹೊಂದುತ್ತಿದೆ. ಸಂಘದಲ್ಲಿ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ನೇರವಾಗಿ ಸಂಪರ್ಕಿಸಿ ಬಗೆಹರಿಸಿಕೊಂಡಲ್ಲಿ ಸಂಘವು ಸಮಾಜದ ಮುಂದೆ ಶಕ್ತಿಶಾಲಿಯಾಗಿ ಹೊರಹೊಮ್ಮ ಲು ಸಾಧ್ಯವಾಗಲಿದೆ ಎಂದರು.

    ಇದೇ ವೇಳೆ ಸಂಘದ ವ್ಯವಸ್ಥಾಪಕ ಸಿ.ಎಂ.ನಾರಾಯಣಸ್ವಾಮಿ ವಾರ್ಷಿಕ ಲೆಕ್ಕ ಪರಿಶೋಧನೆಯನ್ನು ಮಂಡಿಸಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಹೆಚ್.ಆರ್.ಮರುಳಪ್ಪ, ನಿರ್ದೇಶಕರುಗಳಾದ ಎಂ. ಸಿ.ಶಿವಾನಂದಸ್ವಾಮಿ, ಸಿ.ಆರ್.ಪ್ರೇಮ್‌ಕುಮಾರ್. ಎ.ಎನ್.ಮಹೇಶ್, ಯು.ಟಿ.ನಾಗರಾಜ್, ಕೆ.ವೆಂಕಟೇಶ್ ಪೈ, ಬಿ.ಹೆಚ್.ಶಂಕರ್, ಎಂ.ಪಿ.ಗಂಗೇಗೌಡ, ಸಿ.ಪಿ.ದುಗ್ಗೇಗೌಡ, ಗೋವಿಂದೇಗೌಡ ಮತ್ತಿತರರಿದ್ದರು.

    Net profit of Rs. 14.71 lakhs for the Graduate Association

  • ಯುವಸಮೂಹದ ಆರ್ಥಿಕ ಶಕ್ತಿಗೆ ಯುವನಿಧಿ ಸಹಕಾರಿ

    ಯುವಸಮೂಹದ ಆರ್ಥಿಕ ಶಕ್ತಿಗೆ ಯುವನಿಧಿ ಸಹಕಾರಿ

    ಚಿಕ್ಕಮಗಳೂರು: ರಾಜ್ಯದ ಬಡವರ್ಗದ ಜನರಿಗೆ ಹಾಗೂ ನಿರುದ್ಯೋಗ ಯುವಸ ಮೂಹದ ಕಲ್ಯಾಣಕ್ಕಾಗಿ ಪಂಚ ಗ್ಯಾರಂಟಿ ಯೋಜನೆಗಳು ಅನುಷ್ಟಾನಗೊಳಿಸುವ ಮೂಲಕ ರಾಜ್ಯಸರ್ಕಾರ ಜನತೆಗೆ ಆರ್ಥಿಕ ಶಕ್ತಿ ತುಂಬಿದೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಹೇಳಿದರು.

    ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಶನಿವಾರ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ಧ ಯುವನಿಧಿ ಕಾರ್‍ಯ ಕ್ರಮದ ಅಂಗವಾಗಿ ಶನಿವಾರ ಯುವನಿಧಿ ಕೈಪಿಡಿ ಬಿಡುಗಡೆಗೊಳಿಸಿ ಅವರು ಮಾತನಾಡಿ ಪ್ರಸ್ತತು ಜಿಲ್ಲೆಯಲ್ಲಿ ಯುವನಿಧಿ ಯೋಜನೆಯಡಿ ಒಟ್ಟು ೧೪ ಸಾವಿರ ಯುವಕ-ಯುವತಿಯರು ಅರ್ಜಿ ಸಲ್ಲಿಸಿ ಸರ್ಕಾರದ ಸೌಲಭ್ಯ ಪಡೆದುಕೊಳ್ಳುತ್ತಿದ್ದು ಚಿಕ್ಕಮಗಳೂರು ತಾಲ್ಲೂಕಿನಲ್ಲಿ ೩೪೦೦ಕ್ಕೂ ಹೆಚ್ಚು ಪದವಿ ಹಾಗೂ ಡಿಪ್ಲೋಮಾ ಪದವಿದರರು ಉದ್ಯೋಗದ ಸಂದರ್ಶನಕ್ಕಾಗಿ ಯುವನಿಧಿ ಬಳಸಿಕೊಳ್ಳುತ್ತಿದ್ದಾರೆ ಎಂ ದು ಹೇಳಿದರು.

    ದೇಶದ ಭವಿಷ್ಯದ ಪ್ರಜೆಗಳಾದ ಯುವಕರು ಉದ್ಯೋಗದ ಜೊತೆಗೆ ಜೀವನದಲ್ಲಿ ರಾಷ್ಟ್ರಪ್ರೇಮವನ್ನು ಬೆಳೆಸಿಕೊಳ್ಳಬೇಕು. ಭವಿಷ್ಯದಲ್ಲೇ ಎಲ್ಲೇ ಉದ್ಯೋಗಕ್ಕೆ ತೆರಳಿದರೂ ದೇಶ ಹಾಗೂ ತಾಯ್ನಾಡಿನ ಊರನ್ನು ಮರೆಯಬಾರದು. ಇದೀಗ ಕೆಲವೇ ವರ್ಷಗಳಲ್ಲಿ ಪದವಿಧರರಾಗುವ ಕಾಲೇಜಿನ ವಿದ್ಯಾರ್ಥೀಗಳು ಸರ್ಕಾ ರದ ಸವಲತ್ತನ್ನು ಪಡೆದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

    ಜಿಲ್ಲಾ ಗ್ಯಾರಂಟಿ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಎಂ.ಸಿ.ಶಿವಾನಂದಸ್ವಾಮಿ ಮಾತನಾಡಿ ಪದವಿದರ ರಾದ ವಿದ್ಯಾರ್ಥಿಗಳಿಗೆ ೩೦೦೦ ಹಾಗೂ ಡಿಪ್ಲೋಮಾ ವಿದ್ಯಾರ್ಥೀಗಳಿಗೆ ೧೫೦೦ರಂತೆ ಎರಡು ವರ್ಷಗಳ ಕಾಲ ಗಳದವರೆಗೆ ಸರ್ಕಾರವು ಮಾಶಾಸನವು ನೀಡುತ್ತಿದ್ದು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ಮಾಡಿದರು.

    ತಾಲ್ಲೂಕು ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಎಂ.ಮಲ್ಲೇಶ್‌ಸ್ವಾಮಿ ಮಾತನಾಡಿ ನಿರುದ್ಯೋಗದಿಂದ ಯು ವಜನಾಂಗ ಬಳಲಬಾರದೆಂಬ ದೃಷ್ಟಿಯಿಂದ ರಾಜ್ಯಸರ್ಕಾರ ಉದ್ಯೋಗ ಲಭಿಸುವವರೆಗೂ ಆರ್ಥಿಕ ಸಹಾ ಯಧನ ಕಲ್ಪಿಸಿದ್ದು ತಾಲ್ಲೂಕಿನಲ್ಲಿ ಒಟ್ಟು ೩೪೦೦ಕ್ಕೂ ಹೆಚ್ಚು ಯುವಜನಾಂಗದ ಸೌಲಭ್ಯದ ಪಡೆದುಕೊಂಡು ಯೋಜನೆ ಉಪಯೋಗ ಪಡೆದುಕೊಂಡಿದ್ದಾರೆ ಎಂದರು.

    ಮಲೆನಾಡು ವಿದ್ಯಾಸಂಸ್ಥೆ ಗೌರವ ಕಾರ್ಯದರ್ಶಿ ಡಾ|| ಡಿ.ಎಲ್.ವಿಜಯ್‌ಕುಮಾರ್ ಮಾತನಾಡಿ ಜಿ ಲ್ಲೆ, ರಾಜ್ಯ ಅಥವಾ ಹೊರರಾಜ್ಯಗಳಲ್ಲಿ ಉದ್ಯೋಗ ಹರಸಿ ತೆರಳುವ ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಖರ್ಚು ವೆಚ್ಚಗಳಿಗೆ ಯುವನಿಧಿ ಸೂಕ್ತವಾಗಿದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಯೋಜನೆಯ ಶಕ್ತಿ ಪಡೆದು ಪಾಲಕರ ಉದ್ಯೋಗದ ಕನಸನ್ನು ಈಡೇರಿಸಬೇಕು ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಮಲೆನಾಡು ವಿದ್ಯಾಸಂಸ್ಥೆ ಕಾಲೇಜಿನ ಪ್ರಾಂಶುಪಾಲ ಹಸೀನಾಬಾನು, ಶೈಕ್ಷಣಿಕ ಸಲ ಹೆಗಾರ ಮಂಜುನಾಥ್‌ಭಟ್, ಉದ್ಯೋಗ ಕಚೇರಿ ಅಧಿಕಾರಿ ಮಂಜುನಾಥ್ ಮತ್ತಿತರರಿದ್ದದರು.

    Youth Fund helps in the economic empowerment of the youth

  •  ಹಿಂದೂ ಮಹಾಗಣಪತಿ ಗಣೇಶಮೂರ್ತಿ ವಿಸರ್ಜನಾ ಮಹೋತ್ಸವ ಮೆರವಣಿಗೆ

     ಹಿಂದೂ ಮಹಾಗಣಪತಿ ಗಣೇಶಮೂರ್ತಿ ವಿಸರ್ಜನಾ ಮಹೋತ್ಸವ ಮೆರವಣಿಗೆ

    ಚಿಕ್ಕಮಗಳೂರು: ನಗರದ ಬಸವನಹಳ್ಳಿ ಮುಖ್ಯರಸ್ತೆಯ ಓಂಕಾರೇಶ್ವರ ದೇವಾಲಯ ಆವರಣದಲ್ಲಿ ಹಿಂದೂ ಮಹಾಗಣಪತಿ ಸೇವಾ ಸಂಘದಿಂದ ಪ್ರತಿಷ್ಠಾಪಿಸಿದ್ದ ಗಣೇಶಮೂರ್ತಿ ವಿಸರ್ಜನಾ ಮಹೋತ್ಸವ ಮೆರವಣಿಗೆ ನಗರದಲ್ಲಿ ಶನಿವಾರ ಅದ್ಧೂರಿಯಿಂದ ನಡೆಯಿತು.

    ಬಣ್ಣ–ಬಣ್ಣದ ಹೂವು, ಹಾರಗಳಿಂದ ಅಲಂಕಾರಗೊಂಡಿದ್ದ ಗಣಪತಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ಟ್ರ್ಯಾಕ್ಟರ್‌ ಮೇಲೆ ಪ್ರತಿಷ್ಠಾಪಿಸಲಾಯಿತು. ಬಸವನಹಳ್ಳಿ ಮುಖ್ಯರಸ್ತೆಯಿಂದ ಹೊರಟು, ವಿಜಯಪುರದ ಆಂಜನೇಯಸ್ವಾಮಿ ದೇವಾಲಯ ರಸ್ತೆ, ಶ್ರೀಕಂಠಪ್ಪ ವೃತ್ತ, ಕೆಇಬಿ ವೃತ್ತ, ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆ, ಆಜಾದ್ ಪಾರ್ಕ್ ವೃತ್ತದ ಮೂಲಕ ಮೆರವಣಿಗೆ ಸಾಗಿತು.

    ಬೃಹತ್ ಯಾತ್ರೆ ಹಾಗೂ ವಿಸರ್ಜನೆ ಮೆರವಣಿಗೆಯಲ್ಲಿ ವಿಶ್ವಹಿಂದೂ ಪರಿಷತ್‌, ಬಜರಂಗದಳ ಸೇರಿ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಸಾವಿರಾರು ಸಂಖ್ಯೆಯಲ್ಲಿದ್ದ ಯುವಕರು, ಯುವತಿಯರು, ಕಾರ್ಯಕರ್ತರು ಶ್ವೇತವಸ್ತ್ರಧಾರಿಗಳಾಗಿ ಕೇಸರಿ–ನೀಲಿ ಮಿಶ್ರಿತ ಶಾಲು ಹಾಕಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

    ಗೊಂಬೆ ಮೇಳ ಸೇರಿ ಕಲಾತಂಡಗಳು ಮೆರವಣಿಗೆಗೆ ಮೆರುಗು ನೀಡಿದ್ದವು. ಆಂಜನೇಯ ಮೂರ್ತಿ, ಚಲನಚಿತ್ರ ನಟ ರಾಜ್‌ ಬಿ.ಶೆಟ್ಟಿ ಹೋಲುವ ಎತ್ತರದ ಬೊಂಬೆ, ಬೇತಾಳ, ರಾಕ್ಷಸ ಮಾದರಿಯ ಮೆರವಣಿಗೆಯ ಆಕರ್ಷಣೆಯಾಗಿತ್ತು. ಗೊರಿಲ್ಲಾ ಮಾದರಿಯ ಗೊಂಬೆಗಳು ಜನರ ಸೆಲ್ಫಿ ಕೇಂದ್ರವಾಗಿದ್ದವು. ಚಂಡೆವಾದ್ಯ, ನಾದಸ್ವರ ಸೇರಿ ವಿವಿಧ ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಿದವು.

    ಯುವಕರು ಸಂಗೀತಕ್ಕೆ ಕುಣಿದು ಕುಪ್ಪಳಿಸಿದರು. ಮಹಿಳೆಯರಿಗೂ ಪ್ರತ್ಯೇಕ ಸಂಗೀತ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿ ಯುವತಿಯರು ಕುಣಿದು ಸಂಭ್ರಮಿಸಿದರು. ಆಜಾದ್ ಪಾರ್ಕ್ ವೃತ್ತದ ಮೂಲಕ ಮೆರವಣಿಗೆ ಬಳಿಕ ಗಣೇಶ ಮೂರ್ತಿಯನ್ನು ಬೇಲೂರು ರಸ್ತೆಯ ಕೋಟೆ ಕೆರೆಯ ಕಲ್ಯಾಣಿಯಲ್ಲಿ ವಿಸರ್ಜನೆ ಮಾಡಲಾಯಿತು.

    Hindu Maha Ganapati Ganesh idol immersion festival procession
  • ಸದೃಢ ಆರೋಗ್ಯಕ್ಕೆ ಕ್ರೀಡಾಕೂಟಗಳು ಸಹಕಾರಿ

    ಸದೃಢ ಆರೋಗ್ಯಕ್ಕೆ ಕ್ರೀಡಾಕೂಟಗಳು ಸಹಕಾರಿ

    ಚಿಕ್ಕಮಗಳೂರು:  ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ದಸರಾ ಕ್ರೀಡಾಕೂಟಗಳಲ್ಲಿ ಭಾಗವಹಿಸಿದಾಗ ಸದೃಢ ಆರೋಗ್ಯವಂತರಾಗಲು ಸಹಕಾರಿ ಎಂದು ಶಾಸಕ ಹೆಚ್.ಡಿ ತಮ್ಮಯ್ಯ ಹೇಳಿದರು.

    ಅವರು ಇಂದು ನಗರದ ನೇತಾಜಿ ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಮತ್ತಿತರೆ ಇಲಾಖೆಗಳ ಸಹಯೋಗದೊಂದಿಗೆ ಏರ್ಪಡಿಸಲಾಗಿದ್ದ ದಸರಾ ಕ್ರೀಡಾಕೂಟದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

    ಕಳೆದ ೨೫ ವರ್ಷಗಳಿಂದ ವೈವಿದ್ಯಮಯವಾಗಿ ವಿಜೃಂಭಣೆಯಿಂದ ನಡೆಯುತ್ತಿದ್ದ ದಸರಾ ಕ್ರೀಡಾಕೂಟ ಇತ್ತೀಚೆಗೆ ಕಳೆಗುಂದಿದೆ ಎಂದು ವಿಷಾಧಿಸಿದ ಅವರು, ಈ ಕ್ರೀಡಾಕೂಟ ತಾಲ್ಲೂಕು, ಜಿಲ್ಲಾ , ವಿಭಾಗ ಮಟ್ಟದ ನಂತರ ರಾಜ್ಯಮಟ್ಟದ ಕ್ರೀಡಾಕೂಟ ದಸರಾ ಸಂದರ್ಭದಲ್ಲಿ ಮೈಸೂರಿನಲ್ಲಿ ನಡೆಯಲಿದೆ ಎಂದರು.

    ಧಾರ್ಮಿಕವಾಗಿ ಇತಿಹಾಸ ಇರುವ ದಸರಾ ಕ್ರೀಡಾಕೂಟ ಮೈಸೂರಿನಲ್ಲಿ ವಿಜಯ ದಶಮಿ ದಿನ ಚಾಮುಂಡೇಶ್ವರಿ ದಸರಾ ಮಹೋತ್ಸವದ ಅಂಗವಾಗಿ ರಾಜ್ಯಾದ್ಯಂತ ನಡೆಯುತ್ತಿದೆ. ತೀರ್ಪುಗಾರರು ಪ್ರಾಮಾಣಿಕವಾಗಿ ತೀಪು ನೀಡಿ, ಸಮಸ್ತರನ್ನು ಆಯ್ಕೆಮಾಡಬೇಕೆಂದು ಮನವಿ ಮಾಡಿದರು.

    ದುಷ್ಟ ಶಕ್ತಿಗಳನ್ನು ಸಂಹಾರ ಮಾಡಲು ಎಲ್ಲಾ ದೇವತೆಗಳು ತಮ್ಮ ಶಕ್ತಿಯನ್ನು ಧಾರೆಯೆರೆದು ಚಾಮುಂಡೇಶ್ವರಿಗೆ ಕೊಡುತ್ತಾರೆ. ಈ ದುಷ್ಟಶಕ್ತಿ ಸಂಹಾರ ಹಿಂದಿನ ಕಾಲದಲ್ಲಿ ಮಾತ್ರ ಇರದೆ ಈಗಾಲೂ ಬೇರೆ ಬೇರೆ ರೂಪದಲ್ಲಿ ನಮ್ಮ ನಡುವೆ ಇದ್ದಾರೆ ಎಂದು ಹೇಳಿದರು.

    ಗ್ರಾಮೀಣ ಕ್ರೀಡೆಗಳು ಈ ದಸರಾ ಕ್ರೀಡಾಕೂಟದಲ್ಲಿ ಹೆಚ್ಚು ಪ್ರೋತ್ಸಾಹಿಸುವ ಜೊತೆಗೆ ಕಬ್ಬಡ್ಡಿ, ಖೋಖೋ, ಲಾಂಗ್ ಜಂಪ್, ಹೈ ಜಂಪ್, ಗುಂಡು ಎಸೆತ ಮುಂತಾದವುಗಳು ನಶಿಸುತ್ತಿರುವ ಈ ಸಂದರ್ಭದಲ್ಲಿ ಅವುಗಳನ್ನು ಉಳಿಸಿ ಬೆಳೆಸಲು ಜಿಲ್ಲಾಡಳಿತ ಮತ್ತು ಕ್ರೀಡಾ ಇಲಾಖೆ ಮುಂದಾಗಬೇಕೆಂದು ಸೂಚಿಸಿದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಮಾತನಾಡಿ, ನಾಡಹಬ್ಬ ದಸರಾ ಉತ್ಸವಕ್ಕೆ ಧಾರ್ಮಿಕ, ಚಾರಿತ್ರಿಕ ಇತಿಹಾಸ ಇದೆ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ದಸರೆ ಕೇಂದ್ರ ಬಿಂದುವಾಗಿದ್ದು, ಹೊರದೇಶಗಳಿಂದ ಸಾಂಸ್ಕೃತಿಕ ನಗರಿ ಮೈಸೂರಿಗೆ ಬಂದ ಪ್ರವಾಸಿಗರು ದಸರಾ ಕ್ರೀಡಾಕೂಟವನ್ನು ವೈಭವೀಕರಿಸಿದ್ದನ್ನು ನೋಡಿದ್ದೇವೆ ಎಂದರು.

    ನಮ್ಮೊಳಗಿರುವ ಅಸುರ ಶಕ್ತಿ ದಮನಗೊಳಿಸಲು ಸಜ್ಜನ ಶಕ್ತಿ ವಿಜಯವಾಗಬೇಕು, ಅಸುರ ದಹನವಾಗಬೇಕು. ಆ ರೀತಿ ಪೌರಾಣಿಕ, ಧಾರ್ಮಿಕ ಹಿನ್ನೆಲೆಯಾದರೆ ದಸರಾ ಕ್ರೀಡಾಕೂಟವನ್ನು ವಿಜಯನಗರ ಸಾಮ್ರಾಜ್ಯ ಪಥನದ ನಂತರ ಮೈಸೂರು ಅರಸರು ಅದರ ಪರಂಪರೆಯನ್ನು ದಸರಾ ಕ್ರೀಡಾಕೂಟದ ನೆಪದಲ್ಲಿ ನಡೆಸುತ್ತಿದ್ದಾರೆಂದು ವಿವರಿಸಿದರು.

    ಯುವಕರು ಕುಸ್ತಿ ಸ್ಪರ್ಧೆಯಲ್ಲಿ ಭಾಗವಹಿಸಿ ಮನರಂಜನೆಯ ಜೊತೆಗೆ ಗರಡಿ ಮನೆಗಳಲ್ಲಿ ದೈಹಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕಾರಣವಾಗಿದೆ. ಈ ಮೂಲಕ ತರಬೇತಿ ನೀಡಿ ಸೈನ್ಯಕ್ಕೆ ಆಯ್ಕೆಮಾಡುವ ಪ್ರತೀತಿ ಇತ್ತು ಎಂದು ಹೇಳಿದರು.

    ಪ್ರತಿಯೊಬ್ಬರಲ್ಲಿ ಗೆಲುವಿನ ಹಂಬಲ, ಆತ್ಮವಿಶ್ವಾಸ ಮೂಡಿಸುವ ಈ ದಸರಾ ಕ್ರೀಡಾಕೂಟ ಕ್ರೀಡೆಯ ಜೊತೆಗೆ ಬದುಕಿನಲ್ಲಿ ಹಂಬಲ ಮೂಡಿಸಲು ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

    ಮೊತ್ತೋರ್ವ ವಿಧಾನ ಪರಿಷತ್ ಸದಸ್ಯ ಎಸ್.ಭೋಜೇಗೌಡ ಮಾತನಾಡಿ, ಸೋಲೇ ಗೆಲುವಿನ ಮೆಟ್ಟಿಲು ಎಂಬಂತೆ ತಮ್ಮ ಪ್ರತಿಭೆ ಹೊರಬರುವಲ್ಲಿ ಈ ಕ್ರೀಡಾಕೂಟ ಯಶಸ್ವಿಯಾಗಲಿ, ಎಲ್ಲಾ ಕ್ರೀಡಾಪಟುಗಳಲ್ಲಿ ಸಾಧನೆ ಮಾಡುತ್ತೇನೆ ಎಂಬ ಛಲದೊಂದಿಗೆ ಮುನ್ನಡೆಯಿರಿ ಎಂದು ಕಿವಿಮಾತು ಹೇಳಿದರು.
    ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಮಂಜುಳಹುಲ್ಲಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    Sports events contribute to good health

  • ಸುಳ್ಳು ಆರೋಪ ಮಾಡಿದ ಆರೋಪಿಗಳ ಗಡಿಪಾರು ಮಾಡಬೇಕು

    ಸುಳ್ಳು ಆರೋಪ ಮಾಡಿದ ಆರೋಪಿಗಳ ಗಡಿಪಾರು ಮಾಡಬೇಕು

    ಚಿಕ್ಕಮಗಳೂರು: ‘ಅಲ್ಲಂಪುರ ನಿವಾಸಿ ಓಂಕಾರಮೂರ್ತಿ ಮೇಲಿನ ಹಲ್ಲೆ ಸಂಬಂಧ ಪೊಲೀಸರು ತನಿಖೆ ನಡೆಸಿ ನ್ಯಾಯಾಲಯಕ್ಕೆ ‘ಬಿ’ ವರದಿ ಸಲ್ಲಿಸಿದ್ದಾರೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡಿದ ಆರೋಪಿಗಳನ್ನು ಗಡಿಪಾರು ಮಾಡಬೇಕು’ ಎಂದು ವಕೀಲ ಅನಿಲ್‌ಕುಮಾರ್ ಒತ್ತಾಯಿಸಿದರು.

    ‘18 ವರ್ಷದಿಂದ ವಕೀಲ ವೃತ್ತಿ ಜತೆಗೆ ಬುದ್ಧ, ಬಸವ, ಅಂಬೇಡ್ಕರ್ ಆಶಯ ಸಾರುವ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದೇನೆ. 2025 ಜ. 8ರಂದು ಭೀಮಾ ಕೊರಂಗಾವ್ ವಿಜಯೋತ್ಸವ ಕಾರ್ಯಕ್ರಮ ನಡೆಸಲಾಗಿದೆ. ದೇಣಿಗೆ ಸಂಗ್ರಹಿಸಿದ ಹಣ ಹಾಗೂ ರಶೀದಿ ಪುಸ್ತಕವನ್ನು ದಂಟರಮಕ್ಕಿ ಶ್ರೀನಿವಾಸ್‌ ಕೊಡಲಿಲ್ಲ. ನಾನೇ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುತ್ತೇನೆ ಎಂದಿದ್ದರು. ಎಲ್ಲರ ಅಭಿಪ್ರಾಯ ಪಡೆದು ಹೊನ್ನೇಶ್ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಸಲಾಯಿತು’ ಎಂದು ಸುದ್ದಿಗೋಷ್ಠಿಯಲ್ಲಿ ಗುರುವಾರ ಹೇಳಿದರು.

    ‘ಸಂಗ್ರಹವಾದ ದೇಣಿಗೆ ಹಣದ ಲೆಕ್ಕ ಕೊಡುವಂತೆ ವ್ಯಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಕೇಳಿಕೊಂಡೆವು. ಕಾರ್ಯಕ್ರಮಕ್ಕೆ ಶ್ರಮಿಸಿದವರನ್ನು ವೇದಿಕೆಗೆ ಆಹ್ವಾನಿಸಲಾಗಿತ್ತು. ಇದರಿಂದ ಕುಪಿತಗೊಂಡಿದ್ದ ದಂಟರಮಕ್ಕಿ ಶ್ರೀನಿವಾಸ್ ಹಾಗೂ ವೇದಿಕೆಗೆ ಆಹ್ವಾನವಿಲ್ಲದ ಮರ್ಲೆ ಅಣ್ಣಯ್ಯ, ಕೃಷ್ಣಮೂರ್ತಿ, ಛಲವಾದಿ ರಘು, ಲಕ್ಕಾ ಸಂತೋಷ್, ಲಕ್ಷ್ಮೀಪುರ ಸಂತೋಷ್, ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ ಪರಮೇಶ್‌ ಅವರು ನನ್ನ ಮೇಲೆ ದ್ವೇಷ ಸಾಧಿಸಿದರು. ಏಳು ತಿಂಗಳಿನಿಂದ ನಿರಂತರ ಪತ್ರಿಕಾಗೋಷ್ಠಿ ನಡೆಸಿ ಅಪಪ್ರಚಾರ ಮಾಡಿ ಸುಳ್ಳು ಸುದ್ದಿ ಹರಡಿದರು’ ಎಂದು ದೂರಿದರು.

    ಇವರ ಕುಮ್ಮಕ್ಕಿನಿಂ ದಲೇ ಓಂಕಾರಮೂರ್ತಿ, ಅವರ ಸಹೋದರ ವಿರೂಪಾಕ್ಷ ಮತ್ತು ಪಲ್ಲವಿ ಸೇರಿ ಬಸವನಹಳ್ಳಿ ಠಾಣೆಯಲ್ಲಿ ಸುಳ್ಳು ದೂರು ನೀಡಿದರು. ಅಪಘಾತ ಪ್ರಕರಣವನ್ನು ತಿರುಚಿ ಹಲ್ಲೆ ಪ್ರಕರಣ ದಾಖಲಿಸಿದ್ದರು ಎಂದರು.

    ಬೀಕನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಂತೋಷ್ ಲಕ್ಯಾ ಅವರ ಪತ್ನಿ ನರ್ಸಿಂಗ್ ಆಫೀಸರ್ ಆಗಿದ್ದಾರೆ. ಖಾಲಿ ಇರುವ ನಿಲಯ ಪಾಲಕರ ಹುದ್ದೆಯನ್ನು ಕಾನೂನು ಬಾಹಿರವಾಗಿ ಪಡೆಯಲು ಶಾಲೆಯ ಆಂತರಿಕ ವಿಚಾರದಲ್ಲಿ ವಿನಾಕಾರಣ ಇದೇ ತಂಡ ಹಸ್ತಕ್ಷೇಪ ಮಾಡಿತು. ವಸತಿ ಶಾಲೆಗೆ ಅತಿಕ್ರಮ ಪ್ರವೇಶ ಮಾಡಿ ಸಿಬ್ಬಂದಿಗೆ ಮೇಲೂ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಈ ತಂಡ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ವಿವರಿಸಿದರು.

    ಸುದ್ದಿಗೋಷ್ಠಿಯಲ್ಲಿ ಕನ್ನಡ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಸಿ.ರಾಜೇಗೌಡ, ಭೀಮ್ ಆರ್ಮಿ ಗೌರವಾಧ್ಯಕ್ಷ ಹೊನ್ನೇಶ, ಜಯ ಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷ ಕೋಟೆ ಅನೀಲ್, ರಮೇಶ್, ಹುಣಸೇಮಕ್ಕಿ ಲಕ್ಷ್ಮಣ, ರಾಜು, ನಾಗರಿಕ ಹೋರಾಟ ಸಮಿತಿ ಸದಸ್ಯ ಈಶ್ವರ್ ಇದ್ದರು.

    Those accused of making false accusations should be deported.

     

  • ಧರ್ಮದ ವಿರುದ್ಧ ಅಪಪ್ರಚಾರ ಮಾಡುವವರಿಗೆ ತಕ್ಕಉತ್ತರ ನೀಡಿ

    ಧರ್ಮದ ವಿರುದ್ಧ ಅಪಪ್ರಚಾರ ಮಾಡುವವರಿಗೆ ತಕ್ಕಉತ್ತರ ನೀಡಿ

    ಚಿಕ್ಕಮಗಳೂರು:  ಸನಾತನ ಹಿಂದುತ್ವ ಧರ್ಮವನ್ನು ಉಳಿಸಲು ಧರ್ಮಸ್ಥಳದಲ್ಲಿ ಸೇವೆ ಸಲ್ಲಿಸುವ ಧರ್ಮಾಧಿಕಾರಿ ಹಾಗೂ ಕ್ಷೇತ್ರದ ವಿರುದ್ಧ ಅಪಪ್ರಚಾರ ಮಾಡುವವರಿಗೆ ತಕ್ಕಪಾಠ ಕಲಿಸು ವುದು ಪ್ರತಿಯೊಬ್ಬ ಹಿಂದೂವಿನ ಜವಾಬ್ದಾರಿ ಎಂದು ಪತ್ರಕರ್ತ ವಸಂತ್ ಗಿಳಿಯಾರ್ ಹೇಳಿದರು.

    ನಗರದ ಬಸವನಹಳ್ಳಿ ಸಮೀಪದ ಹಿಂದೂ ಮಹಾಗಣಪತಿ ವೇದಿಕೆಯಲ್ಲಿ ‘ಸತ್ಯ ಅರಿಯೋಣ ಬನ್ನಿ’ ಎಂಬ ಕಾರ್ಯಕ್ರಮದಲ್ಲಿ ಬುಧವಾರ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡುತ್ತಿದ್ದರು.

    ಹಿಂದೂಗಳ ಪವಿತ್ರ ಆರಾಧ್ಯ ಕ್ಷೇತ್ರವಾಗಿರುವ ಧರ್ಮಸ್ಥಳದ ಏಳಿಗೆಯನ್ನು ಸಹಿಸಿಕೊಳ್ಳಲಾಗದ ಕೆಲವ ರು ಸನ್ನಿಧಾನವನ್ನು ಅಪಚಾರಗೊಳಿಸಲು ಒಂದಿಲ್ಲೊಂದು ಪ್ರಕರಣವನ್ನು ತಂದಿಡುತ್ತಿವೆ. ಇದರಿಂದ ಕ್ಷೇತ್ರದ ಧರ್ಮಾಧಿಕಾರಿಗಳಿಗೆ ನೋವು, ಸಂಕಟ ಎದುರಾದರೂ ಈ ಕಾಲದ ಜನಾಂಗದವರು ಅಭಿಮಾನ ಶೂನ್ಯ ರಾಗಿರುವುದು ದುರ್ದೈವ ಸಂಗತಿ ಎಂದರು.

    ಸೌಜನ್ಯ ಹೆಣ್ಣು ಮಗಳ ಸಾವಿನ ತನಿಖೆ ನಡೆಸಲು ಮೊದಲು ಧರ್ಮಾಧಿಕಾರಿಗಳೇ ಪತ್ರಬರೆದವರು. ಈ ಪ್ರಕರಣದಲ್ಲಿ ಕೆಲವು ರಾಜಕೀಯ ಪಕ್ಷಗಳು ಪ್ರಕರಣವನ್ನು ತಿರುಚಿ ಕ್ಷೇತ್ರಕ್ಕೆ ಅಪಚಾರಗೊಳಿಸುವುದೇ ಮೂಲಧ್ಯೇವಾಗಿದ್ದು ಈ ಕಾರಣದಿಂದ ನಿರಂತರವಾಗಿ ಸುಳ್ಳಿನ ಕಥೆಯನ್ನು ಕಟ್ಟುತ್ತಿವೆ ಎಂದು ದೂರಿದರು.

    ಸೌಜನ್ಯ ಸಾವಿನಿಂದ, ಅಂತ್ಯಸಂಸ್ಕಾರದವರೆಗೆ ಸಾಕ್ಷಿಗಳನ್ನು ಮರೆಮಾಚಲು ಯತ್ನಿಸಲಾಗಿದೆ. ಈ ನಡು ವೆ ಕೆಲವು ಟ್ಯೂಬರ್‌ಗಳು ಎಐ ವೀಡಿಯೋ ರಚಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಮಾಡಿವೆ. ಅದ ನ್ನೇ ನಂಬಿಕೆಕೊಂಡು ಪವಿತ್ರ ಕ್ಷೇತ್ರವನ್ನು ದೂರುವುದು ಸರಿಯಲ್ಲ. ಅಸತ್ಯದ ಕಥೆಗಳನ್ನು ಟ್ಯೂಬರ್‌ಗಳು ಬ ಳಸಿಕೊಂಡು ಕ್ಷೇತ್ರಕ್ಕೆ ಮಸಿ ಬಳಿಯುವ ಕೆಲಸ ಮಾಡುತ್ತಿವೆ ಎಂದರು.

    ತಲೆಬುರುಡೆ ಹುಡುಕಿಕೊಂಡು ಬಂದ ಅನಾಮಿಕ ವ್ಯಕ್ತಿಯ ಸುಳ್ಳಿನ ಕಥೆ ಬಯಲಾಗಿದೆ. ಸುಜಾತಭಟ್ ಅಸತ್ಯವು ಎಲ್ಲಾರೆದುರು ಸಾಬೀತಾಗಿದೆ. ಈ ಎಲ್ಲಾ ಅಂಶಗಳನ್ನು ನಂಬಿಕೊಂಡಿದ್ದ ಅದೆಷ್ಟೋ ಭಕ್ತರು, ತಪ್ಪು ಕಾಣಿಕೆಯನ್ನು ಸಲ್ಲಿಸಲು ಕ್ಷೇತ್ರಕ್ಕೆ ಧಾವಿಸುತ್ತಿದ್ದಾರೆ. ಹಿಂದೂಗಳು ದೈವ, ಧರ್ಮದ ಬಗ್ಗೆ ಅಪನಂಬಿಕೆ ಹುಟ್ಟಿ ಸುವವರ ವಿರುದ್ಧ ಧರ್ಮಾಧಿಕಾರಿಗಳ ಕೈಬಲಪಡಿಸಬೇಕು ಎಂದರು.

    ಧರ್ಮಸ್ಥಳ ಧರ್ಮಾಧಿಕಾರಿ ಕೇವಲ ಕ್ಷೇತ್ರದಲ್ಲಿ ಪೂಜಾಕೈಂಕಾರ್ಯಗೆ ಸೀಮಿತವಾಗಿಲ್ಲ. ಸಾವಿರಾರು ತುಳುತುಟಿ ಮಕ್ಕಳಿಗೆ ಉಚಿತ ಚಿಕಿತ್ಸೆ, ಸಾಮೂಹಿಕ ಮದುವೆ, ಕಡಿಮೆ ಶುಲ್ಕದಲ್ಲಿ ವಿದ್ಯಾಭ್ಯಾಸ, ಲೆಕ್ಕವಿಲ್ಲದಷ್ಟು ದೇವಾಲಯಗಳಿಗೆ ಅನುದಾನ, ಜೀರ್ಣೋದ್ದಾರಕ್ಕೆ ಸಹಾಯಹಸ್ತ ನೀಡಿದೆ ಅಲ್ಲದೇ ಸಹಪಂಥೀಯ ಬೋ ಜನಕ್ಕೆ ಮೊದಲು ಹೆಜ್ಜೆಯಿಟ್ಟು ದೊಡ್ಡ ಕ್ರಾಂತಿಯನ್ನೇ ಧರ್ಮಾಧಿಕಾರಿ ಮಾಡಿದ್ದಾರೆ ಎಂದರು.

    ದೇವಾಲಯ ನಮ್ಮ ಸ್ವತ್ತು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದ ಹಿರೇಮಗಳೂರು ಕಣ್ಣನ್ ಮ ನುಷ್ಯನನ್ನು ಎಚ್ಚರಿಸುವ, ಸಂಸ್ಕಾರ, ಸಂಸ್ಕೃತಿ ಕಲಿಸುವ ಹಾಗೂ ಸಮಭಾಂಧವ್ಯ ಮೂಡಿಸುವುದು ದೇವಾಲ ಯಗಳು. ಮೊದಲು ದೇಹದೊಳಗಿನ ದೇವಾಲಯ ಶುದ್ಧವಾಗಿರಬೇಕು. ಆಗಮಾತ್ರ ಭಗವಂತನ ಕೃಪೆಗೆ ಪಾ ತ್ರರಾಗಬಹುದು ಎಂದು ಹೇಳಿದರು.

    ಹಿಂದೂ ಎಂದರೆ ಐದು ಗ್ಯಾರಂಟಿ, ಸರ್ಕಾರ ನೀಡಿದ್ದಲ್ಲ. ಪಂಚಭೂತಗಳಲ್ಲಿರುವ ಸಮ್ಮೀಲನದ ಶಕ್ತಿ. ದೇವಾಲಯ ಜಾತಿ ಸಂಕುಚಿತ ಭಾವನೆ ಇಲ್ಲದೇ ಕರೆದುಕೊಂಡು ಸಾಗುವ ಶ್ರದ್ದಾಕೇಂದ್ರ. ಕೈಮುಗಿದು ಒಳ ಪ್ರವೇಶಿದರೆ ಬದುಕಿನ ಸಂಕಟವನ್ನು ಸಣ್ಣದೆಂದು ತಿಳಿದು ಆತ್ಮವಿಶ್ವಾಸದಿಂದ ಹೊರಬರುವ ಆರ್ಶೀವಾದ ದೇವರ ಸನ್ನಿಧಾನದಲ್ಲಿದೆ ಎಂದು ತಿಳಿಸಿದರು.

    ಸಾಹಿತಿ ನಾಗಶ್ರೀ ತ್ಯಾಗರಾಜ್ ಮಾತನಾಡಿ ಗುಡಿಯೊಳಗೆ ತೆರಳುವ ಮುನ್ನ ಹಣ್ಣು-ಹಂಪಲು, ಹೂವು ಸಾಮಾನ್ಯವಾಗಿರುತ್ತವೆ. ಪೂಜೆ ನೆರವೇರಿಸಿದ ನಂತರ ಎಲ್ಲವೂ ಪ್ರಸಾದವಾಗಿ ಕಣ್ಣೋತ್ತಿಕೊಂಡು ಇರಿಸುತ್ತೇ ವೆ. ಹಾಗೆಯೇ ಮನುಷ್ಯ ಗುಡಿಯೊಳಗೆ ಪ್ರವೇಶಿ ಹೊರಬಂದ ನಂತರ ಸಾತ್ವಿಕ ಜೀವನತ್ತ ಚಿಂತಿಸಿ, ಸನ್ನಡತೆ ಯ ದಾರಿಯಲ್ಲಿ ಸಾಗಬೇಕಿದೆ ಎಂದು ಹೇಳಿದರು.

    ಈ ಸಂದರ್ಭದಲ್ಲಿ ಹಿಂದೂ ಮಹಾಗಣಪತಿ ಸೇವಾ ಸಮಿತಿ ಅಧ್ಯಕ್ಷ ಆಟೋ ಶಿವಣ್ಣ, ಕಾರ್ಯದರ್ಶಿ ಕೃಷ್ಣ ಹಾಗೂ ಸದಸ್ಯರುಗಳು, ಭಕ್ತಾಧಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

    Give a befitting reply to those who spread slander against religion.

  • ಮುಸ್ಲಿಂ ಬಾಂಧವರಿಂದ ಸಂಭ್ರಮದಿಂದ ಈದ್‌–ಮಿಲಾದ್ ಹಬ್ಬ ಆಚರಣೆ

    ಮುಸ್ಲಿಂ ಬಾಂಧವರಿಂದ ಸಂಭ್ರಮದಿಂದ ಈದ್‌–ಮಿಲಾದ್ ಹಬ್ಬ ಆಚರಣೆ

    ಚಿಕ್ಕಮಗಳೂರು: ಪ್ರವಾದಿ ಮಹಮ್ಮದ್ ಜನ್ಮದಿನದ ಅಂಗವಾಗಿ ನಗರದಲ್ಲಿ ಮುಸ್ಲಿಂ ಬಾಂಧವರು ಈದ್‌–ಮಿಲಾದ್ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ ಮಾಡಿದರು.

    ನಗರದ ಹಲವು ಬಡಾವಣೆಗಳಲ್ಲಿ ಗುರುವಾರದಿಂದಲೇ ಹಬ್ಬದ ವಾತಾವರಣ ಮನೆ ಮಾಡಿತ್ತು. ಟಿಪ್ಪುನಗರ, ಶಾಂತಿನಗರ, ಜ್ಯೋತಿ ಸರ್ಕಲ್, ಅಂಡೆಛತ್ರ, ಉಪ್ಪಳ್ಳಿ ಮತ್ತಿತರೆ ಬಡಾವಣೆಗಳ ಪ್ರಮುಖ ವೃತ್ತ ಮತ್ತು ಬೀದಿಯನ್ನು ಬಂಟಿಂಗ್ಸ್, ಬ್ಯಾನರ್, ಹೂವು, ವಿದ್ಯುತ್ ದೀಪದಿಂದ ಅಲಂಕರಿಸಲಾಗಿತ್ತು. ಇಡೀ ಎಂ.ಜಿ.ರಸ್ತೆ ಹಸಿರು ಮಯವಾಗಿತ್ತು.

    ಶುಕ್ರವಾರ ಸಂಜೆ ವೇಳೆಗೆ ಮಾರ್ಕೆಟ್ ರಸ್ತೆ, ಶಾಂತಿನಗರ, ಕೆಂಪನಹಳ್ಳಿ, ಉಪ್ಪಳ್ಳಿ ಮತ್ತಿತರೆ ಬಡಾವಣೆಗಳಿಂದ ತಂಡೋಪ ತಂಡವಾಗಿ ಬಂದ ಸಾವಿರಾರು ಜನ ಅಂಡೆಛತ್ರದ ಬಳಿ ಸಮಾವೇಶಗೊಂಡರು.

    ಅಲ್ಲಿಂದ ಎಂ.ಜಿ.ರಸ್ತೆ, ಪ್ರಧಾನ ಅಂಚೆ ಕಚೇರಿ ರಸ್ತೆ ಮೂಲಕ ಐ.ಜಿ. ರಸ್ತೆ, ಎನ್ಎಂಸಿ ವೃತ್ತ, ಹನುಮಂತಪ್ಪ ವೃತ್ತದವರೆಗೂ ಮೆರವಣಿಗೆ ನಡೆಸಿದರು. ಬಿಳಿ ಬಣ್ಣದ ವಸ್ತ್ರ ಧರಿಸಿ ಕೈಯಲ್ಲಿ ಹಸಿರು ಧ್ವಜಗಳನ್ನು ಹಿಡಿದು ಮಾರ್ಗದ ಉದ್ದಕ್ಕೂ ಘೋಷಣೆಗಳನ್ನು ಕೂಗುತ್ತಾ ಸಾಗಿದರು. ಯುವಕರು ಡಿ.ಜೆ ಹಾಡಿಗೆ ಕುಣಿದು ಸಂಭ್ರಮಿಸಿದರು.

    ಮೆಕ್ಕಾದ ಪ್ರಾರ್ಥನಾ ಮಂದಿರದ ಅಲಂಕೃತ ಮಾದರಿ ಬೃಹತ್‌ ಮೆರವಣಿಗೆಯನ್ನು ‌ನಗರದ ಎಂಜಿ ರಸ್ತೆ, ಐಜಿ ರಸ್ತೆಯ ಇಕ್ಕೆಲಗಳು ಹಾಗೂ ಕಟ್ಟಡಗಳ ಅಂತಸ್ತಿನ ಮೇಲೆ ನಿಂತು ಮಹಿಳೆಯರು, ಮಕ್ಕಳು ಕಣ್ತುಂಬಿಕೊಂಡರು. ಕೆಲವರು ಮೆರವಣಿಗೆಯ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು, ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು.

    ಟಿಪ್ಪು ಸುಲ್ತಾನ್, ಸಮುದಾಯದ ಸಂಕೇತವಿದ್ದ ಬೃಹತ್ ಬಾವುಟಗಳನ್ನು ವೃತ್ತಾಕಾರದಲ್ಲಿ ತಿರುಗಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ದಾರಿಯುದ್ದಕ್ಕೂ ಸಮುದಾಯದ ಹಿರಿಯರು ಮೆರವಣಿಗೆಯನ್ನು ವ್ಯವಸ್ಥಿತವಾಗಿ ಸಾಗಲು ಮಾರ್ಗದರ್ಶನ ನೀಡುತ್ತಿದ್ದರು.

    ಪೊಲೀಸರು ಎಲ್ಲೆಡೆ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು. ಎಂ.ಜಿ. ರಸ್ತೆಯಲ್ಲಿ ವಾಹನ ಸಂಚಾರವನ್ನು ಬೆಳಿಗ್ಗೆಯಿಂದಲೇ ನಿರ್ಬಂಧಿಸಲಾಗಿತ್ತು. ಪೊಲೀಸರು ಎಲ್ಲೆಡೆ ಬ್ಯಾರಿಕೇಡ್ ಅಳವಡಿಸಿ ಪರ್ಯಾಯ ಮಾರ್ಗಗಳ ವ್ಯವಸ್ಥೆ ಮಾಡಿದ್ದರು. ಅಹಿತಕರ ಘಟನೆಗಳು ನಡೆಯದಂತೆ ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದರು. ಮಫ್ತಿಯಲ್ಲೂ ನೂರಾರು ಪೊಲೀಸರು ಕಾರ್ಯನಿರ್ವಹಿಸಿ ನಿಗಾ ಇರಿಸಿದ್ದರು.

    Muslim community celebrates Eid-Milad with enthusiasm

  • ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ

    ಕ್ರೀಡೆಯಲ್ಲಿ ಸೋಲು-ಗೆಲುವು ಮುಖ್ಯವಲ್ಲ ಭಾಗವಹಿಸುವಿಕೆ ಮುಖ್ಯ

    ಚಿಕ್ಕಮಗಳೂರು: ಕ್ರೀಡಾಸಕ್ತಿ ಕೇವಲ ಶಾಲಾವಧಿಯಲ್ಲಿ ಮಾತ್ರ ಇರದೆ ಜೀವನ ಪರ್ಯಂತ ಇರಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಕರೆನೀಡಿದರು.

    ಅವರು ಇಂದು ಸುಭಾಷ್ ಚಂದ್ರಬೋಸ್ ಜಿಲ್ಲಾ ಆಟದ ಮೈದಾನದಲ್ಲಿ ಜಿ.ಪಂ, ತಾ.ಪಂ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಇವರುಗಳ ಸಂಯುಕ್ತಾಶ್ರಯದಲ್ಲಿ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ದಂಟರಮಕ್ಕಿ ಇವರುಗಳ ಸಹಯೋಗದಲ್ಲಿ ಏರ್ಪಡಿಸಲಾಗಿದ್ದ ಕಸಬಾ-೩ ವಲಯ ಮಟ್ಟದ ಹಿರಿಯ ಪ್ರಾಥಮಿಕ ಶಾಲೆಗಳ ಕ್ರೀಡಾಕೂಟ ೨೦೨೫-೨೬ ನ್ನು ಉದ್ಘಾಟಿಸಿ ಅವರು ಮಾತನಾಡಿದರು.

    ಗ್ರಾಮೀಣ ಕ್ರೀಡೆಗಳಾದ ಕಬ್ಬಡ್ಡಿ, ಖೋಖೋ ಮುಂತಾದ ದೈಹಿಕ ಶ್ರಮದ ಆಟಗಳನ್ನು ಆಡುವುದರಿಂದ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ ಎಂದ ಅವರು, ಎಲ್ಲಾ ಕ್ರೀಡಾಪಟುಗಳು ಈ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿ ಕ್ರೀಡಾಸಕ್ತಿಯನ್ನು ಹೆಚ್ಚಿಸಿಕೊಳ್ಳಬೇಕೆಂದು ಕರೆನೀಡಿದರು.

    ಮಗು ಊಟ ಮಾಡುವುದಿಲ್ಲವೆಂದು ವೈದ್ಯರ ಬಳಿ ದೂರು ಹೇಳುವವರು ಹೆಚ್ಚಾಗಿದ್ದಾರೆ. ನಾವು ಚಿಕ್ಕವರಾಗಿದ್ದಾಗ ಊಟ ಹಾಕಿಕೊಟ್ಟರೆ ಸಾಕು ಎಂದು ಖಾಲಿಮಾಡಿ ತಟ್ಟೆ ಬಡಿಯುತ್ತಿದ್ದೆವು. ಕಾರಣ ಬೆಳಗ್ಗೆ ಎದ್ದು ಕೃಷಿ ಚಟುವಟಿಕೆಯಲ್ಲಿ ಭಾಗವಹಿಸಿ ದೈಹಿಕ ಶ್ರಮದ ಕೆಲಸ ಮಾಡುತ್ತಿದ್ದೆವು ಎಂದು ಹಿಂದಿನ ವಿದ್ಯಾರ್ಥಿ ಜೀವನದ ಮೆಲುಕು ಹಾಕಿದರು.

    ದೈಹಿಕ ಶ್ರಮದ ಕೆಲಸವನ್ನು ಮಾಡುವ ಮೂಲಕ ಹೆಚ್ಚು ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದ ಅವರು, ಕ್ರೀಡಾಪಟುಗಳಿಗೆ ಹಾಗೂ ಕ್ರೀಡಾ ಆಯೋಜಕರಿಗೆ ಈ ಸಂದರ್ಭದಲ್ಲಿ ಕೃತಜ್ಞತೆಗಳನ್ನು ಸಲ್ಲಿಸಿದರು.

    ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಮಹೇಶ್ ಮಾತನಾಡಿ, ೧ ರಿಂದ ೧೧ ವಲಯ ಮಟ್ಟದ ಕ್ರೀಡಾಪಟುಗಳಿಗೆ ಶಿಕ್ಷಕರ ಸಂಘದ ಎಲ್ಲಾ ಪದಾಧಿಕಾರಿಗಳು ಸಹಕಾರ ನೀಡಿದ್ದಾರೆ. ಬಿಇಓ ಮತ್ತು ಶಿಕ್ಷಣ ಸಂಯೋಜಕರು ತುಂಬಾ ಬೆಂಬಲ ನೀಡಿ ಬೆನ್ನು ತಟ್ಟಿದ್ದಾರೆ ಎಂದು ಶ್ಲಾಘಿಸಿದರು.

    ಪ್ರತಿದಿನ ಚಟುವಟಿಕೆ ಮತ್ತು ಸಂತಸದಿಂದ ಇದ್ದಾಗ ಮಾತ್ರ ಎಲ್ಲರೂ ದೈಹಿಕವಾಗಿ ಆರೋಗ್ಯವಾಗಿರಲು ಸಾಧ್ಯ ಎಂದು ಹೇಳಿದ ಅವರು, ಈ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಕಾರಣವಾಗುತ್ತದೆ ಎಂದರು.

    ದೈಹಿಕ ಶಿಕ್ಷಕರು ಮಳೆ, ಚಳಿ ಎನ್ನದೆ ಕ್ರೀಡಾಕೂಟ ಆಯೋಜನೆ ಮಾಡಿ ಪರಿಶ್ರಮ ವಹಿಸುತ್ತಿರುವುದು ಆರೋಗ್ಯಕರ ಬೆಳವಣಿಗೆ ಜೊತೆಗೆ ಇಲಾಖೆಗೆ ಶ್ರೇಯೋಭಿವೃದ್ಧಿ ಎಂದು ಶ್ಲಾಘಿಸಿದರು.

    ಈ ಸಂದರ್ಭದಲ್ಲಿ, ಎಸ್.ಡಿ.ಎಂ.ಸಿ ಅಧ್ಯಕ್ಷ ಮೊಹಮ್ಮದ್ ಇಸ್ಮಾಯಿಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಜ್ಜಯ್ಯ, ಕಾರ್ಯದರ್ಶಿ ರವಿ, ರಾಜ್ಯ ಸರ್ಕಾರಿ ನೌಕರರ ಸಂಘದ ಕಾಯಾಧ್ಯಕ್ಷ ಸುಂದರೇಶ್, ಕಿರಣ್ ಕುಮಾರ್, ಜಾನಕಮ್ಮ, ಸುಂದರೇಶ್, ಅರಸು, ಪೂರ್ಣೇಶ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ಪ, ಮುಖ್ಯ ಶಿಕ್ಷಕಿ ರುಕ್ಸಾನ ಉಪಸ್ಥಿತರಿದ್ದರು. ಶಂಕರ್ ಸ್ವಾಗತಿಸಿ ಕುಮಾರ ಸ್ವಾಮಿ ವಂದಿಸಿದರು.

    Winning or losing in sports is not important participation is important.