Category: ಚಿಕ್ಕಮಗಳೂರು ನಗರ

  • ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು

    ಮಕ್ಕಳು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು

    ಚಿಕ್ಕಮಗಳೂರು:  ಮಕ್ಕಳು ತಮ್ಮ ಬಾಲ್ಯಾವಸ್ಥೆಯನ್ನು ಆನಂದದಿಂದ ಕಳೆಯಬೇಕು. ಹಾಗೆಯೇ ಅವರು ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಸದಸ್ಯ ಕಾರ್ಯದರ್ಶಿ ವಿ. ಹನುಮಂತಪ್ಪ ಹೇಳಿದರು.

    ನಗರದ ಮಲೆನಾಡು ವಿದ್ಯಾಸಂಸ್ಥೆಯ ಶ್ರೀಮತಿ ಸುಂದರಮ್ಮ ಶಂಕರಮೂರ್ತಿ ಸಭಾಂಗಣದಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಪೊಲೀಸ್ ಇಲಾಖೆ, ವಕೀಲರ ಸಂಘ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸರ್ಕಾರೇತರ ಸಂಸ್ಥೆಗಳು ಹಾಗೂ ವೃತ್ತಿ ಸಂಘಟನೆಗಳ ಸಹಯೋಗದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ನಡೆದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಅವರನ್ನು ದುಡಿಮೆಗೆ ಹಚ್ಚಿದಲ್ಲಿ ಅವರ ಬಾಲ್ಯವನ್ನು ಕಸಿದುಕೊಂಡಂತಾಗುತ್ತದೆ ಎಂದು ಹೇಳಿದರು.

    ಬಾಲ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸುವ ಕಾಯ್ದೆ ೧೯೮೬ ರಲ್ಲಿ ಜಾರಿಗೆ ಬಂದಿತು. ಅನಂತರ ೨೦೧೬ರಲ್ಲಿ ಆ ಕಾಯ್ದೆ ತಿದ್ದುಪಡಿಯಾದ ಬಳಿಕ ೧೪ ರಿಂದ ೧೮ರ ವಯೋಮಾನದವರನ್ನು ಕೂಡ ಬಾಲಕಾರ್ಮಿಕರೆಂದು ಪರಿಗಣಿಸಲಾಯಿತು. ಮಕ್ಕಳು ಅದರಲ್ಲೂ ೫ ರಿಂದ ೧೪ ವರ್ಷದ ಒಳಗಿನವರು ಕಡ್ಡಾಯವಾಗಿ ಶಿಕ್ಷಣಕ್ಕೆ ಒಳಪಡಬೇಕು. ಶಿಕ್ಷಣ ಅವರ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದರು.

    ಹಲವಾರು ಕಾರಣಕ್ಕಾಗಿ ಮಕ್ಕಳನ್ನು ದುಡಿಮೆಗೆ ಹಚ್ಚುತ್ತಿರುವ ನಿದರ್ಶನಗಳು ಕಂಡು ಬಂದಿವೆ. ಮಕ್ಕಳನ್ನು ದುಡಿಸಿಕೊಳ್ಳುವ ಸಂದರ್ಭ ಅವರು ವಯಸ್ಕರಂತೆ ಕನಿಷ್ಠ ವೇತನ ಕಾಯ್ದೆಯ ಅನ್ವಯ ಬೇಡಿಕೆ ಮುಂದಿಡುವುದಿಲ್ಲ. ಅವರಿಂದ ಕಡಿಮೆ ವೇತನಕ್ಕೆ ಹೆಚ್ಚು ದುಡಿಸಿಕೊಳ್ಳಲು ಅವಕಾಶವಿದೆ. ಹಾಗೆಯೇ ಬೋನಸ್ ಹಾಗೂ ವಿಶ್ರಾಂತಿಯ ಬೇಡಿಕೆ ಸಹ ಅವರಿಂದ ಬರುವುದಿಲ್ಲ. ಬಡತನ, ನಿರುದ್ಯೋಗ, ಅನಕ್ಷರತೆ ಬಾಲಕಾರ್ಮಿಕ ಪದ್ಧತಿಗೆ ಕಾರಣವಾಗಿದೆ. ಅನೇಕ ಸಂದರ್ಭಗಳಲ್ಲಿ ಶಿಕ್ಷಣ ಕೊಡಿಸುವ ಸಾಮರ್ಥ್ಯವಿಲ್ಲದೆ, ಪಾಲಕರೇ ಮಕ್ಕಳನ್ನು ದುಡಿಮೆಗೆ ಹಚ್ಚಿರುವ ನಿದರ್ಶನಗಳಿವೆ. ಅವರ ದುಡಿಮೆಯಿಂದ ಕುಟುಂಬದ ಆರ್ಥಿಕ ಸ್ಥಿತಿಗೆ ಅನುಕೂಲವಾಗಬಹುದು ಎನ್ನುವುದೇ ಇದಕ್ಕೆ ಕಾರಣ ಎಂದರು.

    ಬಾಲಕಾರ್ಮಿಕ ಪದ್ಧತಿಯಿಂದ ರಕ್ಷಣೆ ಮಾಡಿದ ಬಳಿಕ ಅಂಥ ವಿದ್ಯಾರ್ಥಿಗಳಿಗೆ ವಯಸ್ಸಿಗೆ ಅನುಗುಣವಾಗಿ ಶಾಲೆಗೆ ಸೇರಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಈಗಾಗಲೇ ಈ ಜಿಲ್ಲೆಯಲ್ಲಿ ಕಾರ್ಮಿಕ ಇಲಾಖೆ ರಕ್ಷಿಸಿದ ನಾಲ್ವರು ವಿದ್ಯಾರ್ಥಿಗಳಿಗೆ ಎಸ್‌ಸಿಪಿ ಹಾಗೂ ಟಿಎಸ್‌ಪಿ ಮೊತ್ತದಲ್ಲಿ ಶಿಕ್ಷಣಕ್ಕೆ ಸಂಬಂಧಿಸಿದ ನೆರವನ್ನು ಒದಗಿಸಲಾಗಿದೆ. ಈ ನಿಟ್ಟಿನಲ್ಲಿ ವಿವಿಧ ಇಲಾಖೆಗಳು ಮಾತ್ರ ಜಾಗೃತಿ ಕೈಗೊಂಡರೆ ಸಾಲದು. ಸಾರ್ವಜನಿಕರು ಸಹ ಕೈಜೋಡಿಸಬೇಕು. ಸಾರ್ವಜನಿಕರು ಕೈಜೋಡಿಸದ ಹೊರತು ಯಾವ ಯೋಜನೆಗಳು ಕೂಡ ಫಲಪ್ರದವಾಗುವುದಿಲ್ಲ ಎಂದು ಹೇಳಿದರು.

    ಬಾಲಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡಲ್ಲಿ ಅಂಥವರಿಗೆ ೬ ತಿಂಗಳಿಂದ ೨ ವರ್ಷ ಜೈಲು ಹಾಗೂ ೨೦ ರಿಂದ ೫೦ ಸಾವಿರ ರೂ.ಗಳವರೆಗೆ ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ತಂದೆ, ತಾಯಿ, ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು ಎಂದರು.

    ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಉಪ ಕಾರ್ಯದರ್ಶಿ ಶಂಕರ ಕೊರವರ ಮಾತನಾಡಿ, ಮಕ್ಕಳು ತಮ್ಮ ಬಾಲ್ಯ ಜೀವನವನ್ನು ಸುಗಮವಾಗಿ ಕಳೆದು ಶಿಕ್ಷಣವನ್ನು ಪಡೆಯುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ತಡೆಯಲು ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು.

    ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸುಜೇಂದ್ರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕೆ.ಆರ್.ಜಯಶೀಲಾ, ಡಿವೈಎಸ್ಪಿ ಶೈಲೇಂದ್ರ, ಸಮಾಜ ಕಲ್ಯಾಣ ಅಧಿಕಾರಿ ರೇವಣ್ಣ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ರಮೇಶ್, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿ ಮಂಜುನಾಥ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಂಗನಾಥ್ ಮತ್ತಿತರ ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿದ್ದರು.

    Children should not be deprived of education for any reason

  • ಸಿಪಿಐ ರೇವಣ್ಣ ವಿರುದ್ದ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ದೂರು

    ಸಿಪಿಐ ರೇವಣ್ಣ ವಿರುದ್ದ ಕ್ರಮಕ್ಕೆ ಮೇಲಾಧಿಕಾರಿಗಳಿಗೆ ದೂರು

    ಬೇಲೂರು: ಪಟ್ಟಣದ ನೆಹರು ನಗರ ವೃತ್ತದ ಸಮೀಪ ಕಳೆದ ಗುರುವಾರ ಬೈಕ್ ಹಾಗೂ ಆಟೋ ನಡುವೆ ನಡೆದ ಘಟನೆಗೆ ಸಂಬಂಧಿಸಿದಂತೆ ವರದಿ ಮಾಡಿದ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ಸದಸ್ಯ ಹಾಗೂ ವಾರ್ತಾಭಾರತಿ ಪತ್ರಿಕೆಯ ವರದಿಗಾರ ಮಹಮದ್ ಅಬ್ರಾರ್ ಮಾಡಿರುವ ಸುದ್ದಿಗೆ ಬೇಲೂರು ವೃತ್ತ ನಿರೀಕ್ಷಕ ರೇವಣ್ಣ ರವರು ಬೆದರಿಸಿ ಧಮ್ಕಿ ಹಾಕಿ ಮಾನಸಿಕವಾಗಿ ಕಿರುಕುಳ ನೀಡಿರುವ ಹಿನ್ನೆಲೆಯಲ್ಲಿ ಅವರ ಮೇಲೆ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿ ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಜಿ ಎಂ ರಾಜಶೇಖರ್ ರವರ ನೇತೃತ್ವದಲ್ಲಿ ಪತ್ರಕರ್ತರು ಬುಧವಾರ ಅರಸೀಕೆರೆ ಡಿವೈಎಸ್ಪಿ ಗೋಪಿ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯಾಧ್ಯಕ್ಷ ಜಿ ಎಂ ರಾಜಶೇಖರ್ ಪೋಲೀಸ್ ಇಲಾಖೆ ಜನ ಸ್ನೇಹಿಯಾಗಿ ಕೆಲಸ ಮಾಡಬೇಕು ಸಮಾಜದಲ್ಲಿ ಪತ್ರಕರ್ತರು ಹಾಗೂ ಪೋಲಿಸ್ ಅಧಿಕಾರಿಗಳ ನಡುವೆ ಅವಿನಾಭಾವ ಸಂಬಂಧವಿದ್ದು ಈ ರೀತಿ ಘಟನೆ ಯಿಂದ ಪ್ರಾಮಾಣಿಕ ಪತ್ರಕರ್ತರ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ನಡೆಯುತ್ತಿದ್ದು, ಈ ಘಟನೆಯನ್ನು ರಾಜ್ಯ ಸಂಘವು ಖಂಡಿಸುತ್ತದೆ. ಇಂತಹ ಉಡಾಫೆ ವೃತ್ತ ನಿರೀಕ್ಷಕ ಅಧಿಕಾರಿಯ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

    ಮನವಿ ಸ್ವೀಕರಿಸಿ ಮಾತನಾಡಿದ ಡಿವೈಎಸ್ಪಿ ಗೋಪಿ ರವರು ಘಟನೆ ಬಗ್ಗೆ ಪರೀಶೀಲಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು, ಈ ಸಂದರ್ಭದಲ್ಲಿ ಪತ್ರಕರ್ತರಾದ ಹೆಚ್ ಡಿ ರಮೇಶ್, ಬಸವರಾಜು, ಅರುಣ್ ರಜಪೂತ್ ಮಹಮದ್ ಅಬ್ರಾರ್ ವಿನೋದ್ ಕುಮಾರ್, ಚೇತನ್, ನೂರ್ ಅಹಮದ್,ಸೋಮಶೇಖರ್, ಸುನಿಲ್ ಹಾಜರಿದ್ದರು

    Complaint to senior officials for action against CPI Revanna

  • ‘ಸರ್ವ ಧರ್ಮಕ್ಕೂ ದಯೆ, ಮಾನವೀಯತೆಯೇ ಮುಕುಟ’

    ‘ಸರ್ವ ಧರ್ಮಕ್ಕೂ ದಯೆ, ಮಾನವೀಯತೆಯೇ ಮುಕುಟ’

    ಬಾಳೆಹೊನ್ನೂರು: ‘ಜಗದಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರುತ್ತದೆ. ನೋಡುವ ದೃಷ್ಟಿ ಅವಲಂಬಿಸಿರುತ್ತದೆ. ಸಕಲ ಧರ್ಮಕ್ಕೂ ದಯೆ ಮತ್ತು ಮಾನವೀಯತೆ ಮುಕುಟಪ್ರಾಯ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಸ್ವಾಮೀಜಿ ಹೇಳಿದರು.

    ರಂಭಾಪುರಿ ಪೀಠದಲ್ಲಿ ಬುಧವಾರ ನಡೆದ ಪೌರ್ಣಿಮೆ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ‘ಕಷ್ಟ ಸುಖಗಳ ಬಗ್ಗೆ ಚಿಂತಿಸಿ ಅವುಗಳನ್ನು ಪರಿಹರಿಸುವ ಕಾರ್ಯದಲ್ಲಿ ತೊಡಗುವುದೇ ನಿಜವಾದ ಧರ್ಮ. ಜೀವನಾಧಾರಕ್ಕೆ ನೀರು, ಅನ್ನ, ಗಾಳಿ ಮತ್ತು ಒಳ್ಳೆಯ ಮಾತು ಮುಖ್ಯ. ಸತ್ಯ, ಸಂಸ್ಕೃತಿ ಗೌರವಿಸದಿದ್ದರೆ ಜೀವನ ನಾಶವಾಗುತ್ತದೆ. ವಸ್ತು, ಒಡವೆಗಳ ಹೊರ ರೂಪ ಬದಲಾಗಬಹುದು. ಆದರೆ, ಒಳಗಿರುವ ಮೂಲ ಸತ್ಯ ಬದಲಾಗುವುದಿಲ್ಲ’ ಎಂದರು.

    ‘ಈ ದೇಹ ನಾಶವಾಗುವ ಸಂಪತ್ತು ಮತ್ತು ಮಾಸಿ ಹೋಗುವ ಸೌಂದರ್ಯ. ಇವುಗಳನ್ನು ನೆಚ್ಚದೆ ಸತ್ಯ ಮತ್ತು ಶುದ್ಧ ಧರ್ಮದ ಮಾರ್ಗದಲ್ಲಿ ನಡೆಯುವುದರಿಂದ ಜೀವನದಲ್ಲಿ ಸಕಲ ಸಂಪತ್ತು, ಶಾಂತಿ ದೊರಕುವುದು ಎಂಬುದನ್ನು ರೇಣುಕಾಚಾರ್ಯರು ಜೀವನ ಸಿದ್ಧಾಂತದಲ್ಲಿ ಬೋಧಿಸಿದ್ದಾರೆ’ ಎಂದು ಹೇಳಿದರು.

    ‘ನಾವು ಏನು ಪಡೆದಿದ್ದೇವೆ ಎನ್ನುವುದಕ್ಕಿಂತ ಹೇಗೆ ದುಡಿದಿದ್ದೇವೆ ಎಂಬುದು ಮುಖ್ಯ. ಏನು ಗಳಿಸಿದ್ದೇವೆ ಎನ್ನುವುದಕ್ಕಿಂತ ಹೇಗೆ ಬೆಳೆದಿದ್ದೇವೆ ಎಂಬುದು ಮುಖ್ಯ. ಏನು ಹೇಳಿ ಕೇಳಿದೆವು ಎನ್ನುವುದಕ್ಕಿಂತ ಹೇಗೆ ಬಾಳಿದೆವು ಎಂಬುದು ಮುಖ್ಯ. ಅರಿತು ಬಾಳುವುದರಿಂದ ಬಾಳು ವಿಕಾಸಗೊಳ್ಳುತ್ತದೆ’ ಎಂದು ಪ್ರತಿಪಾದಿಸಿದರು.

    ನೆಗಳೂರು, ಆಲಮೇಲ, ಸೋನಪೇಟೆ, ಹುಡುಗಿ, ವೆಂಕಟಬೆನ್ನೂರು ಶ್ರೀಗಳು ಪಾಲ್ಗೊಂಡಿದ್ದರು. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಕೆ.ಪಿ.ಅಂಶುಮಂತ್, ಬಳ್ಳಾರಿ ಮಹಲಿಂಗಯ್ಯ, ಪ್ರಭುಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರು ಇದ್ದರು.

    13 ಜನ ವೀರಮಾಹೇಶ್ವರ ಪಟುಗಳಿಗೆ ಶಿವದೀಕ್ಷಾ ಮತ್ತು ಅಯ್ಯಾಚಾರ ಜರುಗಿತು. ಕ್ಷೇತ್ರದ ಎಲ್ಲಾ ದೈವಗಳಿಗೆ ಹುಣ್ಣಿಮೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯಗಳು ಜರುಗಿದವು.

    ಇದೇ ವೇಳೆ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ ಆರ್. ಪಾಟೀಲ ಅವರು ರಂಭಾಪುರಿ ಪೀಠಕ್ಕೆ ಭೇಟಿ ನೀಡಿ, ರೇಣುಕಾಚಾರ್ಯರಿಗೆ ಮತ್ತು ಕ್ಷೇತ್ರನಾಥ ವೀರಭದ್ರಸ್ವಾಮಿಗೆ ಪೂಜೆ ಸಲ್ಲಿಸಿದರು. ರಂಭಾಪುರಿ ಶ್ರೀಗಳ ಆಶೀರ್ವಾದ ಪಡೆದರು.

    ‘Kindness to all religions, humanity is the crown’

  • ಕೇಂದ್ರದ ಯೋಜನೆ ಜನರ ಮನೆ ಬಾಗಿಲಿಗೆ ತಲುಪಿಸಲು ಸಾರ್ವತ್ರಿಕ ಕಾರ್ಯಕ್ರಮ

    ಕೇಂದ್ರದ ಯೋಜನೆ ಜನರ ಮನೆ ಬಾಗಿಲಿಗೆ ತಲುಪಿಸಲು ಸಾರ್ವತ್ರಿಕ ಕಾರ್ಯಕ್ರಮ

    ಚಿಕ್ಕಮಗಳೂರು: ಕೇಂದ್ರ ಸರ್ಕಾರದ ಜನಪರ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಬೇಕೆಂಬ ಉದ್ದೇಶದೊಂದಿಗೆ ಟೂಲ್‌ಕಿಟ್ ವಿತರಣೆಯಂತಹ ಸಾರ್ವತ್ರಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದರು.

    ಅವರು ಇಂದು ನಗರಸಭೆ ಸಭಾಂಗಣದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಶ ಯೋಜನೆಯಾದ ಪಿ.ಎಂ ವಿಶ್ವಕರ್ಮ ಯೋಜನೆಯಡಿ ಫಲಾನುಭವಿಗಳಿಗೆ ಟೂಲ್‌ಕಿಟ್ ವಿತರಣೆ ಮಾಡಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ವಿವಿಧ ೧೮ ಕುಲ ಕಸುಬುಗಳ ಟೂಲ್‌ಕಿಟ್‌ಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೌಲಭ್ಯಗಳೇ ಆದರೂ ಎಲ್ಲರೂ ಒಟ್ಟಾಗಿ ಜನರಿಗೆ ತಲುಪಿಸಬೇಕು, ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಂಡು ಆರ್ಥಿಕ ಸಬಲರಾಗಬೇಕೆಂದು ಕರೆ ನೀಡಿದರು.

    ಪ್ರಧಾನಿ ನರೇಂದ್ರ ಮೋದಿಯವರು ಭಾರತದಲ್ಲಿ ವಿಶ್ವಕರ್ಮ ಯೋಜನೆ ಅನುಷ್ಠಾನಕ್ಕೂ ಮೊದಲು ೧೮ ವೃತ್ತಿಪರ ಕುಲ ಕಸುಬುಗಳನ್ನೊಳಗೊಂಡ ಈ ಕೆಲಸ ಕಾರ್ಯಗಳಿಗೆ ಆರ್ಥಿಕ ಶಕ್ತಿ ತುಂಬಿ, ತರಬೇತಿ ಕೊಟ್ಟು, ಸಾಲ ಸೌಲಭ್ಯ ನೀಡಿ ಸಲಕರಣೆಗಳನ್ನು ಕೊಟ್ಟು ಆಯಾ ವೃತ್ತಿಗೆ ಉತ್ತೇಜನ ನೀಡುವ ಸಲುವಾಗಿ ಸ್ವ-ಉದ್ಯೋಗ ಸ್ಥಾಪಿಸುವ ಆಲೋಚನೆಯ ಉದ್ದೇಶವೆ ವಿಶ್ವಕರ್ಮ ಯೋಜನೆ ಎಂದರು.

    ಚಮ್ಮಾರಿಕೆ, ಕುಂಬಾರಿಕೆ, ಮೀನುಗಾರಿಕೆ, ಗಾರೆ ಕೆಲಸ ಸೇರಿದಂತೆ ೧೮ ವಿವಿಧ ಕುಲ ಕಸುಬುಗಳಿಗೆ ಉತ್ತೇಜನ ಕೊಟ್ಟು ಆಧ್ಯತೆ ನೀಡಿದ್ದಾರೆ, ಇದಕ್ಕಾಗಿ ೧೩ ಸಾವಿರ ಕೋಟಿ ರೂಗಳನ್ನು ಬ್ಯಾಂಕ್‌ಗಳಿಗೆ ಭದ್ರತೆಗಾಗಿ ನೀಡಿದ್ದಾರೆ ಎಂದು ಮಾಹಿತಿ ನೀಡಿದರು.

    ಈ ವಿಶ್ವಕರ್ಮ ಯೋಜನೆಯನ್ನು ಅನುಷ್ಠಾನ ಮಾಡುತ್ತಿರುವ ಕಾಲಘಟ್ಟದಲ್ಲಿ ಇಂದು ನಾವು ಸುಮಾರು ೧೫ ಜನರಿಗೆ ಉಚಿತವಾಗಿ ಟೂರ್‌ಕಿಟ್ ವಿತರಣೆ ಮಾಡುತ್ತಿದ್ದೇವೆ, ಶಿಷ್ಯ ವೇತನದೊಂದಿಗೆ ತರಬೇತಿ ಪಡೆದು ಫಲಾನುಭವಿಗಳು ಉದ್ಯೋಗ ಸ್ಥಾಪಿಸಲು ಅದಕ್ಕೆ ಪೂರಕವಾದ ಟೂಲ್‌ಕಿಟ್ಟನ್ನು ನೀಡುತ್ತಿದ್ದೇವೆ ಎಂದರು.

    ಪ್ರಥಮವಾಗಿ ಶೇ ೫.ರ ಬಡ್ಡಿ ದರದಲ್ಲಿ ೧ ಲಕ್ಷ ರೂ ಸಾಲ ಸೌಲಭ್ಯವನ್ನು ನೀಡಿ ೧೮ ತಿಂಗಳ ಕಾಲಾವಕಾಶದೊಳಗೆ ಮರು ಪಾವತಿ ಮಾಡಿದ ಫಲಾನುಭವಿಗಳಿಗೆ ಎರಡರಿಂದ ಮೂರು ಲಕ್ಷ ರೂ ಸಾಲ ವಿತರಿಸುವ ಯೋಜನೆ ಇದಾಗಿದೆ ಎಂದು ವಿವರಿಸಿದರು.

    ಕುಂಬಾರರ ಕುಲ ಕಸುಬು ನಶಿಸಿ ಹೋಗಬಾರದೆಂಬ ಕಾರಣಕ್ಕೆ ಅಡುಗೆ ಮಾಡುತ್ತಿದ್ದ ಮಡಿಕೆ ಇಂದು ಅಲಂಕಾರಿಕ ಮಡಿಕೆಯಾಗಿ ಪರಿವರ್ತನೆಗೊಂಡು ವಿದೇಶಗಳಿಗೂ ರಫ್ತು ಮಾಡುವ ಮೂಲಕ ಕುಂಬಾರರನ್ನು ಆರ್ಥಿಕ ಸಬಲರನ್ನಾಗಿ ಮಾಡಲು ಗುರಿ ಹೊಂದಲಾಗಿದೆ ಎಂದು ಹೇಳಿದರು.

    ವೃತ್ತಿಪರತೆಯಲ್ಲಿ ವಯಸ್ಸಾದವರಿಗೆ ಆಧುನಿಕ ಹೇರ್ ಕಟಿಂಗ್ ವ್ಯವಸ್ಥೆಗಳಲ್ಲಿ ತೊಂದರೆಯಾಗುತ್ತಿರುವುದನ್ನು ಮನಗಂಡು, ಕ್ಷೌರಿಕನಿಗೆ ಆಧುನಿಕತೆಗೆ ತಕ್ಕಂತೆ ೧ ವಾರಗಳ ಕಾಲ ತರಬೇತಿ ನೀಡಲಾಗುವುದು, ಮೀನುಗಾರಿಕೆ ಮಾಡುವವರಿಗೂ ಇದೇ ಮಾದರಿ ಅನುಸರಿಸಲಾಗುತ್ತದೆ ಎಂದು ತಿಳಿಸಿದರು.

    ಇಲ್ಲಿಯ ವರೆಗೆ ೨೧೫೩ ಫಲಾನುಭವಿಗಳಿಗೆ ತಲಾ ೧ ಲಕ್ಷ ರೂಗಳಂತೆ ಅವರ ಖಾತೆಗೆ ಹಾಕಿ ಸಾಲ ಸೌಲಭ್ಯ ನೀಡಲಾಗಿದೆ, ಜಿಲ್ಲೆಯಲ್ಲಿ ೧೮, ೪೦, ೫೯೦೦೦ ರೂ ಪಾವತಿಸಲಾಗಿದೆ, ಪ್ರಥಮ ಹಂತದಲ್ಲಿ ೧೭೦೪ ಜನರಿಗೆ ಸಾಲ ನೀಡಲಾಗಿದ್ದು ೬೧೯ ಫಲಾನುಭವಿಗಳಿಗೆ ಇಂದು ಅಂಚೆ ಇಲಾಖೆ ಮೂಲಕ ಟೂಲ್‌ಕಿಟ್ ವಿತರಣೆ ಮಾಡಲಾಗುತ್ತಿದೆ ಎಂದರು.

    ಉಳಿದ ೫೮೦೩ ಫಲಾನುಭವಿಗಳಿಗೆ ಕಿಟ್ ಹಾಗೂ ಸಾಲ ಸೌಲಭ್ಯವನ್ನು ತ್ವರಿತವಾಗಿ ವಿತರಿಸುವಂತೆ ಸೂಚಿಸಲಾಗಿದೆ ಎಂದರು.

    hಈ ಸಂದರ್ಭದಲ್ಲಿ ಶಾಸಕ ಹೆಚ್.ಡಿ ತಮ್ಮಯ್ಯ, ವಿಧಾನ ಪರಿಷತ್ ಸದಸ್ಯರಾದ ಸಿ.ಟಿ ರವಿ, ಎಸ್.ಎಲ್ ಬೋಜೇಗೌಡ, ಬಿಜೆಪಿ ರೈತ ಮೋರ್ಚಾ, ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಸಿ ಕಲ್ಮರುಡಪ್ಪ, ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್, ಉಪಾಧ್ಯಕ್ಷೆ ಅನುಮಧುಕರ್ ಪೌರಾಯುಕ್ತ ಬಿ.ಸಿ ಬಸವರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಫಲಾನುಭವಿಗಳು ಭಾಗವಹಿಸಿದ್ದರು.

    Universal program to deliver central projects to people’s doorsteps

  • ಮೆಡಿಕಲ್ ಕಾಲೇಜಿಗೆ 3.5 ಕೋಟಿ ರೂ.ವೆಚ್ಚದಲ್ಲಿ ಮಳೆ ನೀರಿನ ಕೊಯ್ಲು ಯೋಜನೆ

    ಮೆಡಿಕಲ್ ಕಾಲೇಜಿಗೆ 3.5 ಕೋಟಿ ರೂ.ವೆಚ್ಚದಲ್ಲಿ ಮಳೆ ನೀರಿನ ಕೊಯ್ಲು ಯೋಜನೆ

    ಚಿಕ್ಕಮಗಳೂರು: ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನೀರಿನ ಸಮಸ್ಯೆ ಬಗೆಹರಿಸಲು ಮಳೆ ನೀರಿನ ಕೊಯ್ಲು ಯೋಜನೆಯನ್ನು ೩.೫ ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ ಅವರು ತಿಳಿಸಿದರು.

    ಇಂದು ಮಧ್ಯಾಹ್ನ ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಭೇಟಿ ನೀಡಿ ಅಲ್ಲಿನ ಅಭಿವೃದ್ಧಿ ವೀಕ್ಷಣೆ ಮಾಡಿದ ಬಳಿಕ ಅವರು ಮಾತನಾಡಿ, ಇಲ್ಲಿನ ನೀರಿನ ಸಮಸ್ಯೆ ಬಗ್ಗೆ ಈಗಾಗಲೇ ಕ್ಷೇತ್ರದ ಶಾಸಕರಾದ ಹೆಚ್.ಡಿ.ತಮ್ಮಯ್ಯ ಅವರು ಹಾಗೂ ಸಂಸ್ಥೆಯ ನಿರ್ದೇಶಕರು ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

    ತಾವು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ರಗತಿ ವೀಕ್ಷಣೆ ಸಲುವಾಗಿ ಆಗಮಿಸಿದ್ದಾಗಿ ತಿಳಿಸಿದ ಅವರು, ಈಗಾಗಲೇ ಸಂಸ್ಥೆಯ ಕಾಮಗಾರಿ ಶೇ.೯೮ ರಷ್ಟು ಪೂರ್ಣಗೊಂಡಿದೆ ಎಂದರು. ಹಾಗೆಯೇ ಬಹು ನಿರೀಕ್ಷಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ತಾಯಿ-ಮಗುವಿನ ಆರೈಕೆ ಕೇಂದ್ರದ ಕಾಮಗಾರಿ ಕೂಡ ಶೇ.೭೫ ರಷ್ಟು ಪೂರ್ಣಗೊಂಡಿದೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಶಾಸಕರುಗಳಾದ ಹೆಚ್.ಡಿ.ತಮ್ಮಯ್ಯ, ಜಿ.ಹೆಚ್.ಶ್ರೀನಿವಾಸ್, ಶಿವಮೊಗ್ಗ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್, ಡೀನ್ ಡಾ.ಹರೀಶ್, ಜಿಲ್ಲಾ ಸರ್ಜನ್ ಡಾ.ಮೋಹನ್ ಕುಮಾರ್ ಮುಂತಾದವರು ಇದ್ದರು.

    ೧೧ಸಿಕೆಎಂ೧: ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಭೇಟಿ ನೀಡಿದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಆರ್.ಪಾಟೀಲ ಅಭಿವೃದ್ಧಿ ವೀಕ್ಷಣೆ ಮಾಡಿದರು.

    Rainwater harvesting project for medical college at a cost of Rs. 3.5 crore

  • ಮೋದಿ ಸರ್ಕಾರದ ಸಾಧನೆಗಳು ಎಲ್ಲೆಡೆ ಪಸರಿಸಲಿ

    ಮೋದಿ ಸರ್ಕಾರದ ಸಾಧನೆಗಳು ಎಲ್ಲೆಡೆ ಪಸರಿಸಲಿ

    ಚಿಕ್ಕಮಗಳೂರು: ಸ್ವಾರ್ಥಕ್ಕೆ ಆಸೆಪಡದೇ, ನಿಸ್ವಾರ್ಥದಿಂದ ಭಾರತೀಯರ ಉಜ್ವಲ ಭವಿ ಷ್ಯಕ್ಕೆ ಹಗಲಿರುನ್ನದೇ ನಿರಂತರ ದುಡಿಯುತ್ತಿರುವ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಇಡೀ ವಿಶ್ವವೇ ಕಂಡ ಅಪರೂಪದ ಪ್ರಜಾಪ್ರಭುತ್ವ ಆಳ್ವಿಕೆಯಾಗಿದೆ ಎಂದು ಉಪಸಭಾಪತಿ ಎಂ.ಕೆ.ಪ್ರಾಣೇಶ್ ಹೇಳಿದರು.

    ನಗರದ ಜಿಲ್ಲಾ ಬಿಜೆಪಿ ಪಾಂಚಜನ್ಯ ಕಚೇರಿಯಲ್ಲಿ ಮಂಗಳವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜಿ ಅವರ ೧೧ ವ?ಗಳ ಅಭಿವೃದ್ಧಿ ಕುರಿತ ವಿಕಸಿತ ಭಾರತ ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾ ಟಿಸಿ ಅವರು ಮಾತನಾಡಿದರು.

    ಕೇಂದ್ರ ಸರ್ಕಾರ ಬಡವರು, ದೀನದಲಿತರ ಏಳಿಗೆಗೆ ಹಲವು ಯೋಜನೆಗಳನ್ನು ಅನುಷ್ಟಾನಕ್ಕೆ ತಂದು ದಶಕವನ್ನು ಪೂರೈಸಿ ಸಾಧನೆ ಮಾಡಿದೆ. ಸದಾಕಾಲ ರಾಷ್ಟ್ರ ಹಿತಕ್ಕಾಗಿ ದುಡಿಯುತ್ತಿರುವ ಪ್ರಧಾನಿ ಮಂತ್ರಿಗ ಳು ಭಾರತಾಂಬೆಗೆ ಚ್ಯುತಿ ಬಾರದಂತೆ ಕರ್ತವ್ಯ ನಿರ್ವಹಿಸುತ್ತಿರುವ ವಿಚಾರವನ್ನು ಎಲ್ಲೆಡೆ ಪಸರಿಸಬೇಕಿದೆ ಎಂದರು.

    ಹಿಂದಿನ ಆಟಲ್ ಬಿಹಾರಿ ವಾಜಪೇಯಿ ಅಭಿವೃದ್ದಿ ಕಾರ್ಯಗಳು ತಳಮಟ್ಟದಿಂದ ಪ್ರಚಾರಗೊಳ್ಳದ ಕಾ ರಣ ಅಧಿಕಾರದಿಂದ ಕೆಳಗಿಳಿಯಬೇಕಾಯಿತು. ಆದರೀಗ ಮೋದಿ ಸರ್ಕಾರದ ಯೋಜನೆಗಳು ಜನಸಾಮಾ ನ್ಯರಿಗೆ ಅರಿವು ಹಾಗೂ ವಿ.ಪಕ್ಷಗಳ ಸುಳ್ಳಿನ ಮಾಹಿತಿಗಳಿಂದ ಹೊರತಂದು ಸಾಧನೆಯ ಸತ್ಯಾಸತ್ಯತೆಯನ್ನು ಕಾರ್ಯಕರ್ತರು ಮನದಟ್ಟು ಮಾಡಬೇಕಿದೆ ಎಂದು ತಿಳಿಸಿದರು.

    ರಾಷ್ಟ್ರದಲ್ಲೇ ಭಾಜಪ ಅತ್ಯಂತ ಹೆಚ್ಚು ಸದಸ್ಯತ್ವ ಹೊಂದಿರುವ ದೊಡ್ಡ ರಾಜಕೀಯ ಪಕ್ಷವಾಗಿದೆ. ಹೀಗಾ ಗಿ ಕೇಂದ್ರದಿಂದ ಕೈಗೊಂಡಿರುವ ಅಭಿವೃಧ್ದಿ ಯೋಜನೆ, ಪ್ರವಾಸಿಗರ ಸಾವಿಗೆ ಆಪರೇಷನ್ ಸಿಂಧೂರ್ ಮೂ ಲಕ ತಕ್ಕಉತ್ತರದ ಪ್ರತೀಕಾರ, ಸರ್ಜಿಕಲ್ ಸ್ಟ್ರೈಕ್ ಯಶಸ್ವಿ ಸೇರಿದಂತೆ ಜನಪರ ಆಡಳಿತದ ಮಾ ಹಿತಿಗಳನ್ನು ತಿಳಿಸುವ ಕೆಲಸವಾಗಬೇಕು ಎಂದು ಹೇಳಿದರು.

    ದೇಶದಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯಪೂರ್ವದಿಂದಲೂ ಸುಳ್ಳನ್ನೇ ಸತ್ಯವೆಂದು ಪ್ರತಿಪಾದಿಸುವಿಕೆ, ತುರ್ತು ಪರಿಸ್ಥಿತಿ ಹೇರಿಕೆಯಿಂದ ಜನತೆಗೆ ದಿಕ್ಕು ತಪ್ಪಿಸುತ್ತಿದೆ. ಇಂದಿಗೂ ಆ ವಂಶದ ಕುಡಿ ರಾಹುಲ್‌ಗಾಂಧಿ ರಾಷ್ಟ್ರ ಹಾಗೂ ಪ್ರಧಾನಿಗಳ ವಿರುದ್ಧ ಸುಖಸುಮ್ಮನೆ ವಿರೋಧಿ ಹೇಳೀಕೆ ನೀಡಿ ಕೊನೆಗೆ ಆತನೇ ಪೇಚಾಡುವಂಥ ಸ್ಥಿತಿ ನಿರ್ಮಿಸಿಕೊಳ್ಳುತ್ತಿವೆ ಎಂದರು.

    ಪ್ರಪಂಚದಲ್ಲಿ ಭಾರತ ರಾಷ್ಟ್ರ ಪ್ರಸ್ತುತ ಐದನೇ ಸ್ಥಾನದ ಗರಿಯಲ್ಲಿದ್ದು ಮೂರನೇ ಸ್ಥಾನಕ್ಕೆ ಕೊಂಡೊ ಯ್ಯುವ ಶಕ್ತಿ ಕಾರ್ಯಕರ್ತರು ಮತ್ತು ಜನತೆಯಿಂದಾಗಬೇಕು. ಹೀಗಾಗಿ ಕೇಂದ್ರದ ಸಂಪೂರ್ಣ ಸಾಧನೆಯ ವರದಿಯನ್ನು ಪ್ರತಿಬೂತ್ ಹಾಗೂ ಅಕ್ಕಪಕ್ಕದಲ್ಲಿ ಅಳಿಲು ಸೇವೆಯಂತೆ ಪ್ರಚಾರಗೊಂಡಾಗ ಖಂಡಿತ ಭಾರತ ಮೂರನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ವಿ.ಪಕ್ಷಗಳ ಬೇಡದ ವಿಷಯಗಳಿಗೆ ಕಾರ್ಯಕರ್ತರು ಕಿವಿಗೊಡದೇ ಸಕಾರಾತ್ಮಕವಾಗಿ ಚಿಂತಿಸುವ ಆ ಲೋಚನೆ ಹೊಂದಬೇಕು. ಕೇಂದ್ರ ಸರ್ಕಾರದ ಸಾಧನೆ ಇಂದು ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ಸಮ ಯವಾಗಿದೆ. ಸಾಮಾನ್ಯವಾಗಿ ರಾಜಕೀಯ ಆಳ್ವಿಕೆ ಕೇಳಿದ್ದೇವೆ. ಆದರೆ ಮೋದಿ ಸರ್ಕಾರದ ವಿಭಿನ್ನ, ವಿಶೇಷ ಆಳ್ವಿಕೆ ಬೇರೆ ಯಾವ ಪಕ್ಷದಲ್ಲೂ ಕೇಳಲು ಸಾಧ್ಯವಿಲ್ಲ ಎಂದು ತಿಳಿಸಿದರು.

    ವಿಕಸಿತ ಭಾರತ ಕಾರ್ಯಾಗಾರದ ಸಂಚಾಲಕ ಈಶ್ವರಹಳ್ಳಿ ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿ ಭಾಜಪ ರಾಷ್ಟ್ರೀಯ ಅಧ್ಯಕ್ಷರ ಆದೇಶದಂತೆ ಜಿಲ್ಲೆಯಾದ್ಯಂತ ೧೧ನೇ ವರ್ಷದ ಕೇಂದ್ರದ ಸಾಧನೆ ಕುರಿತು ಕಾ ರ್ಯಾಗಾರ ಹಮ್ಮಿಕೊಳ್ಳಲಾಗಿದ್ದು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಧನೆ ಮಾಹಿತಿ ತಿಳಿಸುವಂತಾಗಲೂ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು.

    ಕಾರ್ಯಕರ್ತರು ಹುರುಪಿನಿಂದ ಕೇಂದ್ರದ ವಿಶ್ವಕರ್ಮ, ಗ್ರಾಮ್‌ಸಡಕ್, ಪಿಎಂಆವಾಜ್, ಮಹಿಳಾ ಸ ಬಲೀಕರಣದ ಯೋಜನೆಗಳ ವಿವರಗಳನ್ನು ಪ್ರತಿ ಬೂತ್‌ಗಳಲ್ಲಿ ಹಮ್ಮಿಕೊಳ್ಳಲು ಜೂನ್ ೨೫ ರಿಂದ ಜುಲೈ ಮಾಹೆತನಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಎಲ್ಲರೂ ಒಮ್ಮತ ಹಾಗೂ ಸಹಕಾರದಿಂದ ಸಾರ್ವಜನಿಕರಿ ಗೆ ಅರಿವು ಮೂಡಿಸಬೇಕು ಎಂದು ಕಿವಿಮಾತು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ರಾಜ್ಯ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಚ್.ಸಿ.ಕಲ್ಮರುಡಪ್ಪ, ಜಿಲ್ಲಾ ಬಿಜೆಪಿ ಪ್ರಧಾ ನ ಕಾರ್ಯದರ್ಶಿಗಳಾದ ಬೆಳವಾಡಿ ರವೀಂದ್ರ, ಪುಣ್ಯ ಪಾಲ್, ಡಾ.ನರೇಂದ್ರ, ರಾಜ್ಯ ಬಿಜೆಪಿ ಎಸ್ಸಿ ಮೋ ರ್ಚಾ ಕಾರ್ಯದರ್ಶಿ ಸೀತಾರಾಭರಣ್ಯ, ಕಾರ್ಯಗಾರದ ಸಹ ಸಂಚಾಲಕ ಶರತ್, ನಗರ ಮಂಡಲ ನಿಕಟ ಪೂರ್ವ ಅಧ್ಯಕ್ಷ ಮಧುಕುಮಾರರಾಜ ಅರಸ್, ರೈತ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ಮುಗು ಳುವಳ್ಳಿ ದಿನೇಶ್ ಉಪಸ್ಥಿತರಿದ್ದರು.

    May the achievements of the Modi government spread everywhere.

  • ಹೋಟೆಲ್ ಮಾಲೀಕರು ಸ್ವಚ್ಚತೆ ಕಾಪಾಡಿ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಿ

    ಹೋಟೆಲ್ ಮಾಲೀಕರು ಸ್ವಚ್ಚತೆ ಕಾಪಾಡಿ ಕೋವಿಡ್ ನಿಯಂತ್ರಣಕ್ಕೆ ಸಹಕರಿಸಿ

    ಚಿಕ್ಕಮಗಳೂರು:  ಕೋವಿಡ್ ಮಹಾಮಾರಿ ಪುನಃ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಹೋಟೆಲ್‌ಗೆ ಗ್ರಾಹಕರು, ಸಾರ್ವಜನಿಕರು ಬಂದಾಗ ಸ್ವಚ್ಚತೆ ಮತ್ತು ಅಂತರ ಕಾಪಾಡುವ ಮೂಲಕ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಂಡು ಕೋವಿಡ್ ನಿಯಂತ್ರಣಕ್ಕೆ ಸಹಕರಿಸಬೇಕೆಂದು ನಗರಸಭಾ ಅಧ್ಯಕ್ಷೆ ಸುಜಾತ ಶಿವಕುಮಾರ್ ತಿಳಿಸಿದರು.

    ಅವರು ಇಂದು ನಗರಸಭೆ ಆವರಣದಲ್ಲಿ ಕರೆಯಲಾಗಿದ್ದ ಹೋಟೆಲ್ ಮಾಲೀಕರು, ಲಾಡ್ಜ್ ಹಾಗೂ ತಿಂಡಿ ಗಾಡಿಗಳ ಮಾಲೀಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ ಹೋಟೆಲ್‌ನಲ್ಲಿ ನೀರು ಸಂಗ್ರಹಗಾರಗಳ ಮುಚ್ಚಳ ಮುಚ್ಚಿರಬೇಕು, ದಿನಕ್ಕೆ ಎರಡು ಬಾರಿ ಫಿನಾಯಲ್ ಹಾಕಿ ಹೋಟೆಲ್ ನೆಲವನ್ನು ಸ್ವಚ್ಚಗೊಳಿಸಬೇಕು ಎಂದು ಈ ಸಭೆಯ ಮೂಲಕ ಜಾಗೃತಿ ಮೂಡಿಸುತ್ತಿರುವುದಾಗಿ ಸೂಚಿಸಿದರು.

    ಚಿಕ್ಕಮಗಳೂರು ಜಿಲ್ಲೆ ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದ್ದು, ಬೆಂಗಳೂರು ಮತ್ತು ಮೈಸೂರು ಸೇರಿದಂತೆ ಹೊರ ಜಿಲ್ಲೆಗಳಿಂದ ಅತಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಿದ್ದಾರೆ, ಇದರಿಂದಾಗಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುವುದರಿಂದ ಅಗತ್ಯ ಮುಂಜಾಗ್ರೆತೆ ವಹಿಸಬೇಕೆಂದು ಹೇಳಿದರು.

    ಒಳ್ಳೆಯ ಆಹಾರ ಆರೋಗ್ಯಕ್ಕೆ ಪೂರಕವಾಗಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ಗ್ರಾಹಕರ ಆರೋಗ್ಯವನ್ನು ಕಾಪಾಡುವಲ್ಲಿ ಹೋಟೆಲ್ ಮಾಲೀಕರು ಶುಚಿ-ರುಚಿಗೆ ಆದ್ಯತೆ ನೀಡಬೇಕೆಂದು ಸಲಹೆ ನೀಡಿದರು.

    ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದಾಗ ಮಾತ್ರ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡಲು ಸಾದ್ಯ. ಪ್ರಕೃತಿ ವೀಕ್ಷಣೆಗೆ ಬರುವ ಪ್ರವಾಸಿಗರು ಪ್ಲಾಸ್ಟಿಕ್ ಬಾಟಲಿಯನ್ನು ಬಳಸುವುದರಿಂದ ಪರಿಸರ ಮಾಲಿನ್ಯ ಉಂಟಾಗಿ ಕಲುಷಿತ ವಾತಾವರಣಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.
    ನಗರದ ನಾಗರೀಕರು ಹಸಿ ಕಸ, ಒಣ ಕಸ ವಿಂಗಡಿಸಿ ಕಸದ ಗಾಡಿಗೆ ಹಾಕಿದ ಪರಿಣಾಮ ಕಸ ವಿಲೇವಾರಿಯಿಂದ ನಗರಸಭೆಗೆ ೧೦.೫೦ ಲಕ್ಷ ರೂ ಆದಾಯ ಬಂದಿದೆ, ಇದಕ್ಕೆ ಸಾರ್ವಜನಿಕರ ಸಹಬಾಗಿತ್ವ ಕಾರಣ ಎಂದರು.

    ಪೌರಾಯುಕ್ತ ಬಿ.ಸಿ ಬಸವರಾಜ್ ಮಾತನಾಡಿ ಹೋಟೆಲ್ ಮಾಲೀಕರು ಸ್ವಚ್ಚತೆ ಬಗ್ಗೆ ಗಮನ ಹರಿಸುವಂತೆ ನಗರಸಭೆಯಲ್ಲಿ ಸಭೆ ನೆಡೆಸಿ ಜಾಗೃತಿ ಮೂಡಿಸಲಾಗುತ್ತದೆ, ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಹೋಟೆಲ್‌ನಲ್ಲಿ ಸ್ವಚ್ಚತೆ ಕಾಪಾಡಿ ಎಂದು ತಿಳಿಸಿದರು.

    ಪ್ಲಾಸ್ಟಿಕ್ ಕವರುಗಳಲ್ಲಿ ಆಹಾರ ಪದಾರ್ಥಗಳನ್ನು ಪಾರ್ಸಲ್ ಕೊಡುತ್ತಿರುವುದರಿಂದ ಕ್ಯಾನ್ಸರ್ ಬರುವ ಸಾದ್ಯತೆ ಇದ್ದು, ತಕ್ಷಣ ಹೋಟೆಲ್ ಮತ್ತು ಲಾಡ್ಜ್‌ಗಳಲ್ಲಿ ಪ್ಲಾಸ್ಟಿಕ್ ಬಾಟೆಲ್‌ಗಳನ್ನು ಸಂಪೂರ್ಣ ನಿಷೇದಿಸಿ ಸಹಕರಿಸಬೇಕೆಂದು ಹೇಳಿದರು.

    ಲಾಡ್ಜ್, ಹೋಟೆಲ್, ಅಪಾರ್ಟ್‌ಮೆಂಟ್‌ನಲ್ಲಿ ನಗರಸಭೆ ನಿಬಂಧನೆಗಳನ್ನು ಪಾಲನೆ ಮಾಡುತ್ತಿಲ್ಲ, ಜೊತೆಗೆ ಪರವಾನಗಿಯನ್ನು ಪಡೆದುಕೊಂಡಿಲ್ಲ, ಸೂಚನೆ ಪತ್ರ ಕೊಡಲು ಅವಕಾಶ ಕೊಡದೆ ಅರ್ಜಿಯನ್ನು ಸಲ್ಲಿಸಿದ ೧ ವಾರದಲ್ಲಿ ಪರವಾನಿಗೆ ಕೊಡುತ್ತೇವೆ ಎಂದರು.

    ಹೋಟೆಲ್‌ನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಹಸಿ ಕಸ, ಒಣಕಸವನ್ನಾಗಿ ವಿಂಗಡಿಸಿ ನೀಡುವ ಮೂಲಕ ನಗರಸಭೆಯೊಂದಿಗೆ ಕೈ ಜೊಡಿಸಬೇಕೆಂದು ಮನವಿ ಮಾಡಿದರು.

    ಸಂಚಾರಿ ಠಾಣೆ ಪೊಲೀಸ್ ಅಧಿಕಾರಿ ಧನಂಜಯ ಮಾತನಾಡಿ ನಗರದಲ್ಲಿ ಎಲ್ಲಾ ರಸ್ತೆಗಳು ಕಿರಿದಾಗಿದ್ದು, ವಾಹನ ನಿಲುಗಡೆಯಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ, ಐಜಿ ರಸ್ತೆ, ಎಂಜಿ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡದೆ ಲಾಡ್ಜ್ ಮತ್ತು ಹೋಟೆಲ್‌ನಲ್ಲಿ ತಂಗಿರುವವರು ಅಲ್ಲಿಯೇ ಪಾರ್ಕಿಂಗ್ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

    ಇತ್ತೀಚೆಗೆ ನಗರದ ರಸ್ತೆಯ ಎರಡೂ ಬದಿಗಳಲ್ಲಿ ಪಾರ್ಕಿಂಗ್ ಮಾಡಲು ಅವಕಾಶ ನೀಡಲಾಗಿದೆ, ದ್ವಿ-ಚಕ್ರ, ನಾಲ್ಕು ಚಕ್ರ ವಾಹನಗಳ ನಿಲುಗಡೆಗೆ ಅಂತರ ನೀಡಲಾಗಿದ್ದು, ನಿಯಮ ಉಲ್ಲಂಘಿಸಿ ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

    ಶಿಕ್ಷಣ, ಪರಿಸರ, ಸಂಚಾರಿ ನಿಯಮಗಳ ಪಾಲನೆ ಬಗ್ಗೆ ಅರಿವು ಮೂಡಿಸುವ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆ ಆಯೋಜನೆ ಮಾಡುವ ಮೂಲಕ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದರು.

    ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷೆ ಅನುಮಧುಕರ್, ಇಂಜಿನಿಯರ್ ಲೋಕೇಶ್,ಆರೋಗ್ಯ ನಿರೀಕ್ಷಕರಾದ ವೆಂಕಟೇಶ್, ಈಶ್ವರ್, ನಾಗಪ್ಪ, ರಂಗಪ್ಪ, ವ್ಯವಸ್ಥಾಪಕರಾದ ರವಿ, ಸ್ಯಾನಿಟೇಜಿ ಸೂಪರ್‌ವೈಸರ್‌ಗಳಾದ ಅಣ್ಣಯ್ಯ, ಶ್ರೀನಿವಾಸ್, ವಿವೇಕ್, ಸತೀಶ್, ಹೋಟೆಲ್ ಮಾಲೀಕರು ಮತ್ತಿತರರು ಭಾಗವಹಿಸಿದ್ದರು.

    Hotel owners should maintain cleanliness and cooperate in controlling Covid

  • ರೈತ-ಅರಣ್ಯ ಇಲಾಖೆ ಸಂಘರ್ಷ ತಪ್ಪಿಸಿ ಮಲೆನಾಡಿನ ಜನಜೀವನ ಉಳಿಸುವಂತೆ ಮನವಿ

    ರೈತ-ಅರಣ್ಯ ಇಲಾಖೆ ಸಂಘರ್ಷ ತಪ್ಪಿಸಿ ಮಲೆನಾಡಿನ ಜನಜೀವನ ಉಳಿಸುವಂತೆ ಮನವಿ

    ಚಿಕ್ಕಮಗಳೂರು: ಚಿಕ್ಕಮಗಳೂರು ಕಂದಾಯ, ಅರಣ್ಯ , ಡೀಮ್ಡ್, ಒತ್ತುವರಿ, ಭೂ ಮಂಜೂರಾತಿ ಸೇರಿದಂತೆ ರೈತ-ಅರಣ್ಯ ಇಲಾಖೆ ಸಂಘರ್ಷ ತಪ್ಪಿಸಿ ಮಲೆನಾಡಿನ ಜನಜೀವನ ಉಳಿಸುವಂತೆ ಆಗ್ರಹಿಸಿ ಜಿಲ್ಲಾ ನಾಗರೀಕ ಮತ್ತು ರೈತ ಹೋರಾಟ ಸಮಿತಿ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬೃಹತ್ ರೈತ ಸಮಾವೇಶದಲ್ಲಿ ಸಮಸ್ಯೆಗಳ ಪರಿಹಾರಕ್ಕೆ ಒಕ್ಕೊರಲ ಅಭಿಪ್ರಾಯ ವ್ಯಕ್ತವಾಯಿತು.

    ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಕ್ಷಾತೀತವಾಗಿ ಸಮಾವೇಶದಲ್ಲಿ ಭಾಗವಹಿಸಿದ್ದರು. ಕೊಪ್ಪ, ಶೃಂಗೇರಿ, ಮೂಡಿಗೆರೆ, ಚಿಕ್ಕಮಗಳೂರು, ಸಕಲೇಶಪುರ ತಾಲೂಕಿನಿಂದ ಸಹಸ್ರಾರು ಜನ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಹಸಿರು ಸಾಲು ಹೊದ್ದು ಮಹಿಳೆಯರು ಸೇರಿದಂತೆ ಸಹಸ್ರಾರು ರೈತರು ನಗರದ ಹನುಮಂತಪ್ಪ ವೃತ್ತದಿಂದ ಎಂಜಿ ರಸ್ತೆ ಮೂಲಕ ಆಜಾದ್ ಪಾರ್ಕ್ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಲೆನಾಡಿನ ರೈತರ ಸಮಸ್ಯೆಗಳ ಬಗ್ಗೆ ಹೋರಾಟ ಸಮಿತಿ ಅಧ್ಯಕ್ಷ ಎಸ್.ವಿಜಯ್‌ಕುಮಾರ್ ಎಳೆಎಳೆಯಾಗಿ ಬಿಡಿಸಿಟ್ಟರು.

    ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ ಜಿಲ್ಲೆಯ ದೊಡ್ಡ ಬೆಳೆಗಾರರು ಭೂ ಒತ್ತುವರಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂಬುದು ರಾಜ್ಯ ಮಟ್ಟದ ಅಕಾರಿಗಳ ಧೋರಣೆಯಾಗಿದೆ. ಆದರೆ, ಇಲ್ಲಿ ಶೇ.೯೦ ರಷ್ಟು ಸಣ್ಣ ಬೆಳೆಗಾರು ೧-೫ ಎಕರೆ ಸಾಗುವಳಿ ಮಾಡಿ ಹಕ್ಕುಪತ್ರಕ್ಕೆ ಕಾಯುತ್ತಿದ್ದಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಅರಣ್ಯ ಸಚಿವರ ಸಮ್ಮುಖದಲ್ಲಿ ೫ ಮಂದಿ ಜಿಲ್ಲೆಯ ಶಾಸಕರು ಸಭೆ ನಡೆಸಿದ್ದೇವೆ. ಅರಣ್ಯ ಕಾಯಿದೆಗೆ ತಿದ್ದುಪಡಿ ತರುವ ಬಗ್ಗೆ, ೪(೧) ಅಸೂಚನೆ ಪುನರ್ ಪರಿಶೀಲನೆ, ಎಫ್‌ಎಸ್‌ಒ ಗಳ ವರದಿ ಅಂತಿಮ, ಇದಕ್ಕೆ ಡಿಸಿಎಫ್ ಸಹಿ ಬೇಕು ಎಂಬುದನ್ನು ತೆಗೆದುಹಾಕಬೇಕು ಎಂದು ಒತ್ತಾಯಿಸಿದ್ದೇವೆ. ಎಫ್‌ಎಸ್‌ಒ ಗಳು ಸ್ಥಳ ಪರಿಶೀಲನೆ ಮಾಡುವಾಗ ಒತ್ತವರಿಯಾಗದೆ ಉಳಿದಿರುವ ಭೂಮಿಯನ್ನು ಎ ಬ್ಲಾಕ್ ಎಂತಲೂ, ಒತ್ತುವರಿಯಾಗಿ ಗೊಂದಲವಿರುವ ಭೂಮಿಯನ್ನು ಬಿ ಬ್ಲಾಕ್ ಎಂದು ಪರಿಗಣಿಸಿ ಈ ಬಗ್ಗೆ ಸುಪ್ರೀಂ ಕೋರ್ಟಿಗೆ ವರದಿ ನೀಡಬೇಕು ಎಂಬುದನ್ನು ಮನವರಿಕೆ ಮಾಡಿದ್ದೇವೆ ಎಂದರು.

    ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿದರು. ಕಾಫಿಬೆಳೆಗಾರರ ಸಂಘದ ಬಾಲಕೃಷ್ಣ ನಿರೂಪಿಸಿದರು. ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಶಾಸಕ ಎಂ.ಪಿ.ಕುಮಾರಸ್ವಾಮಿ, ಗಾಯತ್ರಿಶಾಂತೇಗೌಡ, ಮುಖಂಡರಾದ ಹಳಸೆ ಶಿವಣ್ಣ, ಜಗನ್ನಾಥ್ ಅತ್ತಿಕಟ್ಟೆ, ಎಚ್.ಎಚ್.ದೇವರಾಜ್, ಡಾ.ಕೃಷ್ಣೇಗೌಡ, ರಾಧಕೃಷ್ಣ ವಿವಿಧ ರೈತ, ದಲಿತ, ಕನ್ನಡ ಪರ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

    ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ.ಪ್ರಾಣೇಶ್ ಮಾತನಾಡಿ ಶಾಸಕಾಂಗ, ಕಾರ್ಯಾಂಗ ಇದ್ದಾಗ್ಯೂ ಎಲ್ಲದಕ್ಕೂ ನ್ಯಾಯಾಂಗದ ಮೇಲೆ ಬೊಟ್ಟು ಮಾಡುವ ಕೆಲಸ ನಡೆಯುತ್ತಿದೆ. ಶಾಸಕಾಂಗ ಹೇಳಿದ್ದನ್ನು ಕಾರ್ಯಾಂಗ ಮಾಡದಿರುವುದೇ ಸಮಸ್ಯೆಗಳಿಗೆ ಕಾರಣ ಎಂದರೆ ತಪ್ಪಲ್ಲ. ಒತ್ತುವರಿ ಭೂಮಿ ಗುತ್ತಿಗೆ ನೀಡುವ ಬಿಲ್ ಪಾಸ್ ಮಾಡಿದ್ದೇವೆ ಅದನ್ನು ಅನುಷ್ಠಾನ ಗೊಳಿಸುವ ಕೆಲಸ ಎಲ್ಲ ಶಾಸಕರ ಮೇಲಿದೆ. ಸದನದಲ್ಲಿ ಎಲ್ಲರೂ ಪಕ್ಷಾತೀತವಾಗಿ ಜಿಲ್ಲೆಯ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ ಎಂದರು.

    ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ ಕೆಂದ್ರಕ್ಕೆ ಸಂಬಂಸಿದ ಸಮಸ್ಯೆಗಳ ಬಗ್ಗೆ ಕೇಂದ್ರ ಸಚಿವರ ಬಳಿ ನಿಯೋಗ ಕರೆದೊಯ್ದು ಚರ್ಚೆ ಮಾಡಿಸುತ್ತೇನೆ. ಸದ್ಯದಲ್ಲೇ ನಡೆಯಲಿರುವ ದಿಶಾ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿ ದರು.

    ಶಾಸಕ ಸಿ.ಟಿ.ರವಿ ಮಾತನಾಡಿ ನಮೂನೆ ೫೭ ರಲ್ಲಿ ಕೃಷಿ ಜತೆಗೆ ತೋಟಗಾರಿಕೆ ಬೆಳೆಯ ಸಾಗುವಳಿಯನ್ನು ಸೇರಿಸಿ ತಿದ್ದುಪಡಿ ತಂದಲ್ಲಿ ಈಗಿರುವ ಸಮಸ್ಯೆ ಪರಿಹಾರವಾಗಲಿದೆ. ನಮೂನೆ ೫೦-೫೩ ರಲ್ಲಿ ಆಗಿರುವ ಅಕ್ರಮವನ್ನು ಜಿಲ್ಲಾಕಾರಿಗಳು ಕಾಲಮಿತಿಯಲ್ಲಿ ತನಿಖೆಮಾಡಿ ನ್ಯಾಯಯುತವಾದದನ್ನು ಮಂಜೂರು ಮಾಡಿ, ಅಕ್ರಮವಾದುದನ್ನು ರದ್ದುಪಡಿಸಬಹುದು.

    ಡೀಮ್ಡ್ ಫಾರೆಸ್ಟ್ ಎಂಬ ಪರಿಕಲ್ಪನೆ ಒಪ್ಪುವಂತದಲ್ಲ, ಇದನ್ನು ಅರಣ್ಯ ಎಂದು ಪರಿಗಣಿಸುವಂತಿಲ್ಲಎಂದು ಹೈಕೋರ್ಟ್ ಹೇಳಿದೆ. ನ್ಯಾಯಾಲಯದ ಆದೇಶ ಇಟ್ಟುಕೊಂಡು ಈಗಿರುವ ಅಡೆತಡೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಎಫ್‌ಎಸ್‌ಒ ಗಳು ಅರೆ ನ್ಯಾಯಾಶರಾಗಿರುತ್ತಾರೆ. ಅವರ ವರದಿಯೇ ಅಂತಿಮವಾಗಬೇಕು. ಡಿಸಿಎಫ್ ಸಹಿ ಇರಬೇಕು ಎಂಬುದನ್ನು ರದ್ದುಪಡಿಸುವ ಬಗ್ಗೆ ಸದನದಲ್ಲಿ ಚರ್ಚೆ ನಡೆಸೋಣ ಎಂದರು

    ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ ಅರಣ್ಯ ಕಾಯಿದೆಗಳನ್ನು ಮಲೆನಾಡಿನ ರೈತರ ಮೇಲೆ ಹೇರಲಾಗುತ್ತಿದೆ. ಮೂಲ ಸೌಕರ್ಯ ಮತ್ತಿತರೆ ಉದ್ದೇಶಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತಂದಿರುವಾಗ ಅರಣ್ಯ ಕಾಯಿದೆಗೆ ಏಕೆ ತಿದ್ದುಪಡಿ ತರಬಾರದು ಎಂದು ಕೇಳಿದ್ದೇವೆ. ನಮೂನೆ ೫೭ ರಲ್ಲಿ ಪ್ಲಾಂಟೇಶನ್ ಕೃಷಿಗೆ ಅವಕಾಶ ನೀಡದಿದ್ದರೆ ಲೀಸ್‌ಗಾದರೂ ನೀಡಬೇಕು ಎಂದು ಸಚಿವರಲ್ಲಿ ಒತ್ತಾಯಿಸಿದ್ದೇವೆ. ಮಲೆನಾಡಿನ ಡೀಮ್ಡ್ ಫಾರೆಸ್ಟ್ ಪ್ರಸ್ತಾಪ ವಾಪಸ್ಸು ಪಡೆಯಬೇಕು. ಅರಣ್ಯ ಮಂತ್ರಿಗಳು, ಮೇಲಾಕಾರಿಗಳ ಆದೇಶವನ್ನು ಜಿಲ್ಲೆಯ ಅರಣ್ಯ ಅಕಾರಿಗಳು ಪಾಲಿಸಬೇಕು ಇಲ್ಲದಿದ್ದರೆ ನಮ್ಮ ಹೋರಾಟ ಇದ್ದೇ ಇದೆ ಎಂದರು.

    ಶಾಸಕ ನಯನ ಮೋಟಮ್ಮ ಮಾತನಾಡಿ ಡೀಮ್ಡ್ ರೀ ಸರ್ವೆ ಮಾಡಬೇಕು. ನಮೂನೆ ೫೦-೫೩ ರ ಅರ್ಜಿ ವಿಚಾರದಲ್ಲಿ ದಾಖಲಾತಿ ಸರಿಯಿದ್ದರೆ ಅರ್ಜಿದಾರರ ಪರ ನಾನಿರುತ್ತೇನೆ ಅವರಿಗೆ ಹಕ್ಕುಪತ್ರ ಕೊಡಿಸುತ್ತೇನೆ.ಲೀಸ್ ಅರ್ಜಿ ಸಲ್ಲಿಸುವ ಅವ ವಿಸ್ತರಣೆಗೆ ಅರಣ್ಯ ಸಚಿವರಲ್ಲಿ ಮನವಿ ಮಾಡಿದ್ದೇವೆ ಎಂದರು.

    Appeal to save lives of people in the mountainous region by avoiding conflict between farmers and the forest department

  • ಗುತ್ತಿಗೆ ಕಾರ್ಮಿಕರ ಮೂಲ ಬೇಡಿಕೆ ಈಡೇರಿಸಲು ಶಾಸಕರ ಭರವಸೆ

    ಗುತ್ತಿಗೆ ಕಾರ್ಮಿಕರ ಮೂಲ ಬೇಡಿಕೆ ಈಡೇರಿಸಲು ಶಾಸಕರ ಭರವಸೆ

    ಚಿಕ್ಕಮಗಳೂರು: ಜಿಲ್ಲಾ ವ್ಯಾಪ್ತಿಯಲ್ಲಿ ಹೊರಗುತ್ತಿಗೆ ನೌಕರರಾಗಿ ಕಾರ್ಯನಿರ್ವಹಿಸು ತ್ತಿರುವ ಸ್ವಚ್ಚತಾ ಕರ್ಮಚಾರಿಗಳಿಗೆ ಖಾಯಂ ನೇಮಕ ಹಾಗೂ ನೇರಪಾವತಿ ಸೌಲಭ್ಯ ಒದಗಿಸಲು ಪ್ರಾಮಾ ಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಭರವಸೆ ನೀಡಿದರು.

    ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ನಡೆದ ದಲಿತ ಚಳುವಳಿಯ ಹರಿಕಾರ ಪ್ರೊ.ಬಿ. ಕೃಷ್ಣ ಪ್ಪನವರ ೮೭ನೇ ಜಯಂತಿ ಮತ್ತು ದಸಂಸ ಸದಸ್ಯತ್ವ ಆಂದೋಲನದ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ ಜಿಲ್ಲೆಯ ನಗರಸಭೆ, ಪುರಸಭೆ, ಪ.ಪಂ., ಆಸ್ಪತ್ರೆ ಮತ್ತು ಗ್ರಾ.ಪಂ.ಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲ ಸ ನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ನೇರ ಪಾವತಿಯಡಿ ನೇಮಕಾತಿ ಮಾಡಿಕೊಂಡು ಗುತ್ತಿಗೆ ಪದ್ಧ ತಿ ರದ್ದುಗೊಳಿಸಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕಾರ್ಮಿಕ ವರ್ಗಕ್ಕೆ ಸ್ಪಂದಿಸಲಾಗುವುದು ಎಂದರು.

    ಜೀವನದ ಹಂಗನ್ನು ತೊರೆದು ನಗರಾದ್ಯಂತ ಸ್ವಚ್ಚತಾ ಕಾರ್ಯದಲ್ಲಿ ನಿರತರಾಗಿರುವ ಕಾರ್ಮಿಕರಿಗೆ ಸಮಸ್ಯೆಗಳನ್ನು ಸ್ಪಂದಿಸಲು ಸರ್ಕಾರ ಸದಾಸಿದ್ಧ. ಆ ನಿಟ್ಟಿನಲ್ಲಿ ಜಿಲ್ಲೆಯ ಸ್ವಚ್ಚತಾ ಕರ್ಮಚಾರಿಗಳು ಮನೆ, ನಿವೇಶನ, ನಿಗಧಿತ ಸಮಯಕ್ಕೆ ವೇತನದ ಬೇಡಿಕೆಗಳನ್ನು ಪುರಸ್ಕರಿಸಿ ಸದಾ ಬೆನ್ನೆಲುಬಾಗಿ ನಿಲ್ಲುತ್ತೇನೆ ಎಂ ದು ತಿಳಿಸಿದರು.

    ನಾಡಿನ ದಲಿತ ಚಳುವಳಿ ಹರಿಕಾರ ಪ್ರೊ.ಬಿ.ಕೃಷ್ಣಪ್ಪನವರು ಅಸಮಾನತೆ, ಅಸ್ಪಸ್ಥಶ್ಯತೆ ವಿರುದ್ಧ ಹೋರಾ ಡಿದ್ದಲ್ಲದೇ ಶೋಷಿತರ ಧ್ವನಿಯಾದವರು. ಕೇವಲ ದಲಿತ ಜನಾಂಗಕ್ಕೆ ಸೀಮಿತರಾಗದೇ ಬದುಕಿನ ನೊಂದ ವರ ಎಲ್ಲಾವರ್ಗಕ್ಕೆ ನ್ಯಾಯ ಕೊಡಿಸುವಲ್ಲಿ ಚಳುವಳಿಯನ್ನು ರೂಪಿಸಿ ಶೋಷಿತರ ಏಳಿಗೆಗೆ ಆಧಾರವಾದ ವರು ಎಂದರು.

    ಪ್ರತಿಯೊಬ್ಬ ಮನುಷ್ಯನಿಗೂ ಹುಟ್ಟು-ಸಾವು ಸಾಮಾನ್ಯ. ಈ ನಡುವೆ ಬಡವರು, ಶೋಷಿತರನ್ನು ಕಾ ಪಾಡುವನಲ್ಲಿ ಹೋರಾಡುವ ಸಂಸ್ಕೃತಿ ಬೆಳೆಸಿಕೊಂಡಲ್ಲಿ ಮರಣ ನಂತರವು ಜನಸಾಮಾನ್ಯರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಲು ಪ್ರೊ.ಬಿ.ಕೃಷ್ಣಪ್ಪನವರ ಹೋರಾಟವೇ ಸಾಕ್ಷಿ ಎಂದರು.

    ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ ಪ್ರೊ.ಬಿ.ಕೃಷ್ಣಪ್ಪನವರು ಬಿ.ಆರ್.ಅಂಬೇಡ್ಕರ್‌ರವರ ಆಶಯದ ರಥವನ್ನು ಎಳೆದವರು. ಸಾಧ್ಯವಾದಲ್ಲಿ ನಾವುಗಳು ಆ ರಥವನ್ನು ಮುಂದೇಳೆಯಲು ಪ್ರಯತ್ನಿಸ ಬೇಕೆ ಹೊರತು, ಹಿಂದಿಕ್ಕುವ ಕೆಲಸಕ್ಕೆ ಕೈಹಾಕಬಾರದು ಎಂದು ಹೇಳಿದರು.

    ಪ್ರಸ್ತುತ ಸಂವಿಧಾನದಡಿ ಮೀಸಲಾತಿ ಲಾಭವನ್ನು ಪಡೆದು ಸಾಮಾಜಿಕ ಹಾಗೂ ಆರ್ಥಿಕವಾಗಿ ಉನ್ನತ ಸ್ಥಾನಕ್ಕೇರಿರುವ ಜನರು ತನ್ನ ಬೇರನ್ನು ಮರೆಯಬಾರದು. ಒಂದುವೇಳೆ ಮೂಲ ಮರೆತರೇ ಅಂಬೇಡ್ಕರ್ ರವರ ತ್ಯಾಗಕ್ಕೆ ಅಪಪ್ರಚಾರ, ಶಕ್ತಿಕೊಟ್ಟ ವೇದಿಕೆಗೆ ದ್ರೋಹವೆಸಗಿದಂತೆ. ಹೀಗಾಗಿ ಮೂಲವನ್ನು ಸಮಾಜ ದ ವೈಚಾರಿಕ ಚಿಂತನೆಗಳಡಿ ಜೀವಿಸಬೇಕಿದೆ ಎಂದರು.

    ದಸಂಸ ಸದಸ್ಯತ್ವ ಆಂದೋಲನ ಕೇವಲ ರಶೀದಿಗಳಿಗೆ ಸೀಮಿತವಾಗದೇ, ಹೃದಯಕ್ಕೆ ನಾಟಬೇಕು. ವೈಚಾರಿಕವಾಗಿ ವಿಚಾರವನ್ನು ಅಳವಡಿಸಿಕೊಂಡು ಸದಸ್ಯತ್ವ ಪಡೆದಾಗ ಮಾತ್ರ ಸದಸ್ಯತ್ವಕ್ಕೆ ಶಕ್ತಿ ಬರಲಿದೆ. ಸು ಮ್ಮನೆ ರಶೀದಿ ಕೊಟ್ಟಲ್ಲಿ ಆಶಯಗಳು ಈಡೇರುವುದಿಲ್ಲ. ವೈಚಾರಿಕತೆ ಅಳವಡಿಸಿಕೊಂಡು ಹೃದಯದಲ್ಲಿ ಪ್ರತಿ ಷ್ಟಾಪಿಸಿಕೊಂಡು ಅಂಭೇಡ್ಕರ್‌ರವರ ಸಾಮಾಜಿಕ ನ್ಯಾಯದ ಹೋರಾಟವನ್ನು ಮುನ್ನಡೆಸಬೇಕು ಎಂದರು.

    ನಗರಸಭೆ ಅಧ್ಯಕ್ಷೆ ಸುಜಾತ ಶಿವಕುಮಾರ್ ಮಾತನಾಡಿ ಗುತ್ತಿಗೆ ಕಾರ್ಮಿಕರಿಗೆ ಸರ್ಕಾರ ನಿಗಧಿಗೊ ಳಿಸಿರುವ ವೇತನ ಜೀವನಕ್ಕೆ ಸಾಕಾಗುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸ, ಕುಟುಂಬ ನಿರ್ವಹಣೆ ಹಾಗೂ ತುರ್ತು ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರು ಕಂಡುಬಂದಲ್ಲಿ ತೀವ್ರ ಸಂಕಷ್ಟ ಎದುರಾಗಲಿದೆ. ಹೀಗಾಗಿ ಸಮಾ ಜಕ್ಕಾಗಿ ದುಡಿಯುವ ಸ್ವಚ್ಚತಾ ಕರ್ಮಚಾರಿಗಳ ಮೂಲಬೇಡಿಕೆ ಈಡೇರಿಸಬೇಕು ಎಂದು ಹೇಳಿದರು.

    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಸಂಸ ರಾಜ್ಯ ಸಂಚಾಲಕ ತರೀಕೆರೆ ಎನ್.ವೆಂಕ ಟೇಶ್ ದಲಿತರ ಮೇಲಿನ ದೌರ್ಜನಗಳನ್ನು ತಡೆಗಟ್ಟಲು ೧೯೭೪ರಲ್ಲಿ ಪ್ರೊ.ಬಿ.ಕೃಷ್ಣಪ್ಪನವರು ದಸಂಸವನ್ನು ಹು ಟ್ಟುಹಾಕಿ ಶೋಷಿತರ ಪರ ಹೋರಾಟಕ್ಕಿಳಿದು ಬದುಕಿನುದ್ಧಕ್ಕೂ ತಾವು ನಂಬಿದ ಸಿದ್ಧಾಂತಕ್ಕೆ ಬದ್ಧರಾಗಿ ಮಹತ್ವದ ನಾಯಕರಾಗಿದ್ದರು ಎಂದರು.

    ಪ್ರಸ್ತುತ ರಾಜ್ಯಾದ್ಯಂತ ವಿವಿಧ ಗುತ್ತಿಗೆ ಆಧಾರದ ಕೆಲಸ ಮಾಡುತ್ತಿರುವ ಕಾರ್ಮಿಕರನ್ನು ರಾಜ್ಯಸರ್ಕಾ ರ ಪರಿಗಣನೆಗೆ ತೆಗೆದುಕೊಳ್ಳಬೇಕಿದೆ. ನಿರಂತರವಾಗಿ ಸ್ವಾಸ್ಥ್ಯ ಸಮಾಜಕ್ಕೆ ಸೇವೆಯಲ್ಲಿರುವ ಪೌರಕಾರ್ಮಿಕ ರನ್ನು ಮೂಲಬೇಡಿಕೆ ಈಡೇರಿಸುವ ಮೂಲಕ ಕಾರ್ಮಿಕರ ಬದುಕಿಗೆ ಆಸರೆಯಾಗಬೇಕು ಎಂದು ದಸಂಸ ಪದಾಧಿಕಾರಿಗಳು ಶಾಸಕರಿಗೆ ಮನವಿ ಸಲ್ಲಿಸಿದರು.

    ಇದೇ ವೇಳೆ ದಸಂಸ ಸದಸ್ಯತ್ವ ಆಂದೋನದಲ್ಲಿ ಸುಮಾರು ಸಾವಿರಕ್ಕೂ ಹೆಚ್ಚು ಮಂದಿ ನೊಂದಾಯಿಸಿ ದರು. ಈ ಸಂದರ್ಭದಲ್ಲಿ ತರೀಕೆರೆ ಶಾಸಕ ಜಿ.ಹೆಚ್.ಶ್ರೀನಿವಾಸ್, ಸಣ್ಣ ಮತ್ತು ಮಧ್ಯಮ ಪತ್ರಕರ್ತರ ಸಂಘದ ಅಧ್ಯಕ್ಷ ಜಿ.ಎನ್.ರಾಜಶೇಖರ್, ದಸಂಸ ಹಿರಿಯ ಮುಖಂಡ ಶ್ರೀಧರ್ ಕಲಿವೀರ್, ರಾಜ್ಯ ಸಂಘಟ ನಾ ಸಂಚಾಲಕರಾದ ಎಂ.ಶಿವಾನಂದ ಸಾವಳಗಿ, ಮಾರುತಿ ಬಿ.ಹೊಸಮನಿ, ರಾಜಶೇಖರ್, ವೆಂಕಟರಾ ಮ ಪ್ಪ, ದುರ್ಗಾದಾಸ್, ಎನ್.ಲೋಕೇಶ್, ಕೆ.ನಂಜಪ್ಪ, ಆದಿನಾರಾಯಣ, ತಮ್ಮಣ್ಣ ಕಾನಗಡ್ಡಿ, ಮಹದೇವ ಪ್ರಸಾ ದ್ ಮತ್ತಿತರರು ಉಪಸ್ಥಿತರಿದ್ದರು.

    MLAs promise to fulfill basic demands of contract workers

  • ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅನುದಾನ

    ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅನುದಾನ

    ಚಿಕ್ಕಮಗಳೂರು: ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿ ಭಾರತದ ಭೂಪಟದಲ್ಲಿ ಗುರುತಿಸುವ ಪ್ರಯತ್ನ ಮಾಡುವುದಾಗಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಭರವಸೆ ನೀಡಿದರು.

    ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಚಿಕ್ಕಮಗಳೂರಿಗೆ ಇನ್ನೂ 2 ಬಾರಿ ಭೇಟಿ ನೀಡಿದರೆ ನನಗೆ ಇಲ್ಲಿನ ಸ್ಪಷ್ಟ ಚಿತ್ರಣ ಸಿಗಲಿದೆ. ಜಿಲ್ಲೆಯಲ್ಲಿ ಹೆಚ್ಚು ಪ್ರವಾಸಿತಾಣಗಳಿವೆ. ಪ್ರವಾಸೋದ್ಯಮ ಮತ್ತು ಲೋಕೋಪಯೋಗಿ ಇಲಾಖೆಯಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದರೆ ಜಿಲ್ಲೆ ಆರ್ಥಿಕವಾಗಿ ಸಬಲವಾಗಲಿದೆ. ಆದ್ದರಿಂದ ಜಿಲ್ಲೆಯಲ್ಲಿ ಮತ್ತೊಮ್ಮೆ ಪರಿವೀಕ್ಷಣೆ ನಡೆಸಿ ಅಗತ್ಯ ಅನುದಾನ ನೀಡಲಾಗುವುದು’ ಎಂದು ಹೇಳಿದರು.

    ‘ಅರಣ್ಯ ಮತ್ತು ಕಂದಾಯ ಭೂಮಿ ಸಮಸ್ಯೆ ಇರುವ ಬಗ್ಗೆ ತಿಳಿದಿದ್ದೇನೆ. ಈ ಬಗ್ಗೆ ಕಂದಾಯ ಮತ್ತು ಅರಣ್ಯ ಸಚಿವರ ಗಮನ ಸೆಳೆದು ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುತ್ತೇನೆ’ ಎಂದರು.

    ‘ಜಿಲ್ಲಾ ಕಾಂಗ್ರೆಸ್ ಕಚೇರಿ ಕಟ್ಟಡ ವೀಕ್ಷಿಸಿದ್ದೇನೆ. ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಘಟಕದಿಂದ ಈ ಕಚೇರಿ ಕಟ್ಟಡ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡಲಾಗುವುದು. ಬೆಳಗಾವಿಯ ನಾಲ್ವರು ಅಧ್ಯಕ್ಷರನ್ನು ಇಲ್ಲಿಗೆ ಕರೆಸಿ ಸಹಾಯ ಮಾಡುವ ಬಗ್ಗೆ ಘೋಷಣೆ ಮಾಡುತ್ತೇವೆ’ ಎಂದು ಹೇಳಿದರು.

    ‘ಕೆಪಿಸಿಸಿಯಿಂದ ಭರ್ತಿ ಮಾಡಬೇಕಾದ ಹಲವು ಹುದ್ದೆಗಳು ಇನ್ನೂ ಬಾಕಿ ಇವೆ. ಮೂಲ ಕಾಂಗ್ರೆಸಿಗರಿಗೆ ಶೇ 70ರಷ್ಟು, ಹೊಸಬರಿಗೆ ಶೇ 30ರಷ್ಟು ಅನುಪಾತದಲ್ಲಿ ಅಧಿಕಾರ ಹಂಚಿಕೆ ಆಗಬೇಕು ಎಂದು ಪ್ರತಿಪಾದಿಸಿದ್ದೇನೆ. ಕಾರ್ಯಕರ್ತರಿಗೆ ಅತಿ ಶೀಘ್ರದಲ್ಲಿ ಅಧಿಕಾರ ಕೊಡಿಸುವ ಪ್ರಯತ್ನ ಮಾಡುತ್ತೇನೆ. 2028ರ ಚುನಾವಣೆಯನ್ನು ಕಾರ್ಯಕರ್ತರು ಸವಾಲಾಗಿ ಸ್ವೀಕರಿಸಬೇಕು’ ಎಂದು ತಿಳಿಸಿದರು. 

    ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ‘ಚಿಕ್ಕಮಗಳೂರು ಕ್ಷೇತ್ರದಲ್ಲಿ ಮಳೆಯಿಂದ ಹಾನಿಯಾದ ರಸ್ತೆ, ಸೇತುವೆಗಳನ್ನು ಸಚಿವರು ವೀಕ್ಷಣೆ ಮಾಡಿದ್ದಾರೆ. ಮಹಲ್‌ನಿಂದ ಕೆಮ್ಮಣ್ಣುಗುಂಡಿ ತನಕ 15 ಕಿ.ಮೀ. ರಸ್ತೆ ಅಭಿವೃದ್ಧಿ ಸಂಬಂಧ ಅರಣ್ಯ ಸಚಿವರೊಂದಿಗೆ ಚರ್ಚಿಸಿ ಈಗಿರುವ ಅಡೆತಡೆ ಸರಿಪಡಿಸಿ ರಸ್ತೆ ಮಾಡಿಸಿಕೊಡುವುದಾಗಿ ಸಚಿವರು ಭರವಸೆ ನೀಡಿದ್ದಾರೆ ಎಂದರು.

    ಚಿಕ್ಕೋಡಿ ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್‌ ಜಾರಕಿಹೊಳಿ, ಕಾಂಗ್ರೆಸ್ ಮುಖಂಡರಾದ ಮಂಜೇಗೌಡ, ಡಾ.ವಿಜಯಕುಮಾರ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ರೇಖಾ ಹುಲಿಯಪ್ಪಗೌಡ, ತನೋಜ್‌ ನಾಯ್ಡು, ಪ್ರಶಾಂತ್, ಮಹಮದ್ ಹನೀಫ್, ಅಕ್ಬರ್, ಮಲ್ಲೇಶಸ್ವಾಮಿ, ರಾಮಚಂದ್ರ ಇದ್ದರು.

    More grants for tourism development in the district