Category: ಚಿಕ್ಕಮಗಳೂರು ನಗರ

  • ಜೂ.14 ಕ್ಕೆ ವಿರೂಪಾಕ್ಷಲಿಂಗಶ್ರೀಗಳ 80ನೇ ಜನ್ಮದಿನೋತ್ಸವ

    ಜೂ.14 ಕ್ಕೆ ವಿರೂಪಾಕ್ಷಲಿಂಗಶ್ರೀಗಳ 80ನೇ ಜನ್ಮದಿನೋತ್ಸವ

    ಚಿಕ್ಕಮಗಳೂರು: ಹುಲಿಕೆರೆ ದೊಡ್ಡಮಠದ ಶ್ರೀ ಷ.ಬ್ರ.ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ ಅವರ ೮೦ನೆಯ ಜನ್ಮದಿನೋತ್ಸವ ಜೂನ್ ೧೪ರಂದು ಶ್ರೀಮದ್ರಂಭಾಪುರಿ ಜಗದ್ಗುರುಗಳವರ ದಿವ್ಯ ಸಾನಿಧ್ಯದಲ್ಲಿ ೨೦ಶಿವಾಚಾರ್ಯರ ಸಮ್ಮುಖದಲ್ಲಿ ಆಯೋಜಿಸಲಾಗಿದೆ.

    ಶನಿವಾರ ಬೆಳಗಿನಜಾವ ಹುಲಿಕೆರೆ ಶ್ರೀಮಠದಲ್ಲಿ ಕರ್ತೃಗದ್ದುಗೆಗೆ ಬಿಲ್ವಾರ್ಚನೆ, ರುದ್ರಾಭಿಷೇಕ, ಪುಣ್ಯಾಹ, ನವಗ್ರಹ-ಮೃತ್ಯುಂಜಯ-ಗಣಪತಿಹೋಮ ಮತ್ತಿತರರ ಧಾರ್ಮಿಕ ಕಾರ್‍ಯಕ್ರಮಗಳು ಜರುಗಲಿವೆ. ಗಾಯಕ ಹುಲಿಕೆರೆ ಪುಲಿಕೇಶಿ ಅವರಿಂದ ಸುಗಮ ಸಂಗೀತ ಹಾಗೂ ಅಂತರರಾಷ್ಟ್ರೀಯ ಭರತನಾಟ್ಯ ಕಲಾವಿದರಾದ ನಾಟ್ಯ ಮಯೂರಿ ಪಿ.ನಿತ್ಯಾ ಮತ್ತು ಎಸ್.ಶೃತಿ ಅವರಿಂದ ಭರತನಾಟ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್‍ಯಕ್ರಮಗಳು ನೆರವೇರಲಿದೆ.

    ಶ್ರೀಮದ್ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ೧೦೦೮ ಜಗದ್ಗುರು ಪ್ರಸನ್ನರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ದಿವ್ಯಸಾನಿಧ್ಯದಲ್ಲಿ ಪೂರ್ವಾಹ್ನ ೧೧ಗಂಟೆಗೆ ಹುಲಿಕೆರೆ ಜಾತ್ರಾ ಮೈದಾನದಲ್ಲಿ ಶ್ರೀವಿರೂಪಾಕ್ಷಲಿಂಗ ಶಿವಾಚಾರ್ಯರ ಜನ್ಮದಿನೋತ್ಸವ ನಿಮಿತ್ತ ಧರ್ಮ ಜಾಗೃತಿ ಕಾರ್‍ಯಕ್ರಮ ಆಯೋಜಿಸಲಾಗಿದೆ. ವೀರಾಪುರಮಠದ ಶ್ರೀ ಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯರು ರಚಿಸಿರುವ ‘ವರಯೋಗಿ’ ಅಭಿನಂದನಾ ಗ್ರಂಥವನ್ನು ಹುಲಿಕೆರೆಶ್ರೀಗಳಿಗೆ ಸಮರ್ಪಿಸಲಾಗುವುದು.

    ಅಖಿಲಭಾರತ ಶಿವಾಚಾರ್ಯ ಸಂಸ್ಥೆಯ ಗೌರವಾಧ್ಯಕ್ಷರಾದ ಎಡೆಯೂರು ಶ್ರೀರೇಣುಕ ಶಿವಾಚಾರ್ಯ ನೇತೃತ್ವದಲ್ಲಿ ಹುಲಿಕೆರೆ ಶ್ರೀಮಠದ ಕಿರಿಯಶ್ರೀಗಳಾದ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರು ಉಪನ್ಯಾಸ ನೀಡುವರು. ಶಾಸಕ ಎಚ್.ಡಿ.ತಮ್ಮಯ್ಯ ಅಧ್ಯಕ್ಷತೆಯಲ್ಲಿ ಸಂಸದ ಕೋಟಾಶ್ರೀನಿವಾಸ ಪೂಜಾರಿ ಸಮಾರಂಭ ಉದ್ಘಾಟಿಸುವರು. ಮೈಸೂರಿನ ಸಂಶೋಧಕ ಗಿರಿಜಾಪತಿ ಉಪನ್ಯಾಸ ನೀಡಲಿದ್ದಾರೆ. ವಿಧಾನಪರಿಷತ್ ಸದಸ್ಯರುಗಳಾದ ಎಸ್.ಎಲ್.ಭೋಜೇಗೌಡ ಮತ್ತು ಸಿ.ಟಿ.ರವಿ, ಮಾಜಿಸದಸ್ಯೆ ಗಾಯತ್ರಿಶಾಂತೇಗೌಡ, ಅಪೇಕ್ಸ್ ಬ್ಯಾಂಕ್‌ಅಧ್ಯಕ್ಷ ಬೆಳ್ಳಿಪ್ರಕಾಶ್, ಮಾಲಿನ್ಯ ಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಸೇರಿದಂತೆ ವಿವಿಧ ಗಣ್ಯರು ಶ್ರೀಗಳಿಗೆ ಗೌರವ ಸಮರ್ಪಿಸುವರು.

    ವೀರಾಪುರ ಶ್ರೀಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯರು, ಕೆ.ಬಿದರೆ ದೊಡ್ಡಮಠದ ಶ್ರೀಪ್ರಭುಕುಮಾರ ಶಿವಾಚಾರ್ಯರು, ಹುಣಸಘಟ್ಟದ ಶ್ರೀಗುರುಮೂರ್ತಿ ಶಿವಾಚಾರ್ಯರು, ಶಂಕರದೇವರಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯರು, ಬಿಳಕಿ ಶ್ರೀರಾಚೋಟೇಶ್ವರ ಶಿವಾಚಾರ್ಯರು, ಯಳನಾಡು ಮಠದ ಡಾ.ಶ್ರೀ ಜ್ಞಾನಪ್ರಭುಸಿದ್ದರಾಮ ಸ್ವಾಮೀಜಿ, ತಾವರೆಕೆರೆ ಡಾ.ಶ್ರೀ ಅಭಿನವಸಿದ್ದಲಿಂಗ ಶಿವಾಚಾರ್ಯರು, ತರೀಕೆರೆ ಶ್ರೀಜಗದೀಶ ಶಿವಾಚಾರ್ಯರು, ಬೀರೂರಿನ ಶ್ರೀರುದ್ರಮುನಿ ಶಿವಾಚಾರ್ಯರು, ಹಣ್ಣೆಮಠದ ಶ್ರೀಮರುಳಸಿದ್ದ ಪಂಡಿತಾರಾಧ್ಯ ಶಿವಾಚಾರ್ಯರು, ಬೇರುಗಂಡಿಮಠದ ಶ್ರೀರೇಣುಕಮಹಾಂತ ಶಿವಾಚಾರ್ಯರು, ನಂದೀಪುರದ ಶ್ರೀ ನಂದೀಶ್ವರ ಶಿವಾಚಾರ್ಯರು, ಮಾದಿಹಳ್ಳಿಯ ಶ್ರೀಚನ್ನಮಲ್ಲಿಕಾರ್ಜುನ ಶಿವಾಚಾರ್ಯರು, ಕರಡಿಗವಿಮಠದ ಶ್ರೀಶಿವಯೋಗಿ ಶಿವಶಂಕರ ಶಿವಾಚಾರ್ಯರು, ಕುಪ್ಪೂರು ಗದ್ದುಗೆಮಠದ ಶ್ರೀತೇಜೇಶ್ವರ ಶಿವಾಚಾರ್ಯರು, ಫಲಹಾರಸ್ವಾಮಿ ಮಠದ ಶ್ರೀ ಮರುಘೇಂದ್ರ ಶಿವಾಚಾರ್ಯರು. ಹಾರನಹಳ್ಳಿ ಶ್ರೀಕೋಡಿಮಠದ ಉತ್ತರಾಧಿಕಾರಿ ಚೇತನದೇವರು, ಕೂಡ್ಲಿಮಠದ ಶ್ರೀಮಹಾಂತ ಸ್ವಾಮೀಜಿ ಮತ್ತು ಹಿರಿಕೊಡ್ಲಿಮಠದ ಶ್ರೀ ಸದಾಶಿವ ಶಿವಾಚಾರ್ಯರು ಸೇರಿದಂತೆ ನಾಡಿನ ಇಪ್ಪತ್ತಕ್ಕೂ ವಿವಿಧ ಮಠಾಧೀಶರು ಪಾಲ್ಗೊಳ್ಳುವರು.

    ಕಿರಿಯಶ್ರೀಗಳಾದ ಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯರ ೨ನೆಯ ವರ್ಷದ ಪಟ್ಟಾಧೀಕಾರ ಮಹೋತ್ಸವ ಹಾಗೂ ಹಿಂದಿನ ಶ್ರೀಗಳಾದ ಲಿಂಗೈಕ್ಯಬಸವರಾಜದೇಶಿಕೇಂದ್ರ ಶಿವಾಚಾರ್ಯರ ಪುಣ್ಯಾ ಸ್ಮರಣಾರಾಧನೆಯು ಶನಿವಾರ ನೆರವೇರಲಿದೆ. ಶ್ರೀಮಠದ ಅಭಿವೃದ್ಧಿಗೆ ನೆರವನಿತ್ತ ಸುಮಾರು ೧೦೦ಕ್ಕೂ ಹೆಚ್ಚು ಸದ್ಭಕ್ತರಿಗೆ ಗುರುರಕ್ಷೆ ನೀಡಿ ಗೌರವಿಸಲಾಗುವುದೆಂದು ಹುಲಿಕೆರೆದೊಡ್ಡಮಠದ ಚ್.ಸಿ.ಮಹಾಲಿಂಗಯ್ಯ ತಿಳಿಸಿದ್ದಾರೆ.

    Virupaksha Lingasree’s 80th birthday celebration on June 14

  • ಜಿಲ್ಲೆಯಲ್ಲಿ ಖಾಸಗಿ ಡ್ರೋಣ್ ಬಳಕೆಗೆ ನಿಷೇಧ

    ಜಿಲ್ಲೆಯಲ್ಲಿ ಖಾಸಗಿ ಡ್ರೋಣ್ ಬಳಕೆಗೆ ನಿಷೇಧ

    ಚಿಕ್ಕಮಗಳೂರು: ಜಿಲ್ಲೆಯಲ್ಲಿರುವ ಎಲ್ಲಾ ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸಂಬಂಧಪಟ್ಟ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಪಡೆಯದೆ ಡ್ರೋಣ್‌ಗಳನ್ನು ಬಳಸಬಾರದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.

    ಈ ಬಗ್ಗೆ ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿರುವ ಅವರು, ಡ್ರೋಣ್ ಬಳಕೆಯನ್ನು ಪ್ರಮುಖವಾಗಿ ಸೂಕ್ಷ್ಮ ಸ್ಥಳಗಳು ಮತ್ತು ಪ್ರಮುಖ ಸ್ಥಾವರಗಳ ಸುತ್ತಮುತ್ತ ವಿಶೇಷವಾಗಿ ನಿರ್ಬಂಧಿಸಲಾಗಿದೆ.

    ಜಿಲ್ಲೆಯ ಎಲ್ಲ ಕೈಗಾರಿಕೆ, ವಾಣಿಜ್ಯ ಸಂಸ್ಥೆಗಳು, ಭದ್ರತೆ ಒದಗಿಸುವ ಎಲ್ಲ ಖಾಸಗಿ ಭದ್ರತಾ ಸಂಸ್ಥೆಗಳು, ಕಣ್ಗಾವಲು ಅಥವಾ ಇತರ ಉದ್ದೇಶಗಳಿಗಾಗಿ ಸಂಬಂಧಪಟ್ಟ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೆ ಡ್ರೋಣ್‌ಗಳನ್ನು ಹಾರಿ ಬಿಡುವುದು, ಬಳಕೆ ಮಾಡಬಾರದೆಂದು ಅವರು ಹೇಳಿದ್ದಾರೆ.

    ಭಾರತ, ಪಾಕ್ ಗಡಿಯಲ್ಲಿನ ಇತ್ತೀಚಿನ ಬೆಳವಣಿಗೆಗಳ ಕುರಿತು ಮತ್ತು ಭದ್ರತಾ ಪಡೆಗಳ ಅನಿಯಂತ್ರಿತ ಮತ್ತು ಗುರುತಿಸಲಾಗದ ಡ್ರೋಣ್ ಚಟುವಟಿಕೆಯ ಬಗ್ಗೆ, ವಿಶೇಷವಾಗಿ ಸೂಕ್ಷ್ಮ ಮಿಲಿಟರಿ ಮತ್ತು ಪ್ರಮುಖ ಸ್ಥಾವರಗಳ ಬಳಿ (ಸಂಸ್ಕಾರಣಾಗಾರಗಳು, ಬಂದರುಗಳು, ವಿದ್ಯುತ್ ಸ್ಥಾವರಗಳು, ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು, ತೈಲ ಡಂಪ್‌ಗಳು ಮತ್ತು ಸಾರ್ವಜನಿಕರ ಸ್ಥಾವರಗಳು) ಎದ್ದಿರುವ ಭದ್ರತಾ ಕಾಳಜಿಗಳನ್ನು ಗಮನದಲ್ಲಿಟ್ಟುಕೊಂಡು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಈ ಬಗ್ಗೆ ಮಾಹಿತಿ ನೀಡಿರುವುದಾಗಿ ರಾಜ್ಯದ ಗೃಹ ಇಲಾಖೆ (ಕಾನೂನು ಸುವ್ಯವಸ್ಥೆ) ಕಾರ್ಯದರ್ಶಿ ಉಲ್ಲೇಖಿತ ಪತ್ರದಲ್ಲಿ ತಿಳಿಸಿರುವುದಾಗಿ ಎಸ್.ಪಿ. ಮಾಹಿತಿ ನೀಡಿದ್ದಾರೆ.

    Ban on the use of private drones in the district

  • ಕಾಗದರಹಿತ ಸೇವೆ ಉತ್ತೇಜಿಸಲು ಲ್ಯಾಪ್‌ಟಾಪ್ ವಿತರಣೆ

    ಕಾಗದರಹಿತ ಸೇವೆ ಉತ್ತೇಜಿಸಲು ಲ್ಯಾಪ್‌ಟಾಪ್ ವಿತರಣೆ

    ಚಿಕ್ಕಮಗಳೂರು: ಸರ್ಕಾರ ಪೇಪರ್‌ಲೆಸ್ ಸೇವೆ ಉತ್ತೇಜಿಸುವ ಉದ್ದೇಶದೊಂದಿಗೆ ರಾಜ್ಯದ ಕಂದಾಯ ಇಲಾಖೆ ಅಧಿಕಾರಿಗಳಿಗೆ ಅನುಕೂಲವಾಗುವಂತೆ ಲ್ಯಾಪ್‌ಟಾಪ್ ವಿತರಣೆಗೆ ಮುಂದಾಗಿದೆ ಎಂದು ಶಾಸಕ ಹೆಚ್.ಡಿ. ತಮ್ಮಯ್ಯ ತಿಳಿಸಿದರು.

    ಅವರು ಇಂದು ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಏರ್ಪಡಿಸಲಾಗಿದ್ದ ಲ್ಯಾಪ್‌ಟಾಪ್ ವಿತರಣಾ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿ ಲ್ಯಾಪ್‌ಟಾಪ್ ಪಡೆದುಕೊಂಡ ಕಂದಾಯ ಇಲಾಖೆ ಅಧಿಕಾರಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು, ಬೇರೆಯವರಿಗೆ ಲ್ಯಾಪ್‌ಟಾಪ್ ಕೊಡುವ ಮೂಲಕ ಸರ್ಕಾರದ ಅಗತ್ಯ ಮಾಹಿತಿಗಳು ಸೋರಿಕೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

    ಇದೂವರೆಗೆ ಗ್ರಾಮ ಲೆಕ್ಕಾಧಿಕಾರಿಗಳು ಮೊಬೈಲ್‌ನಲ್ಲಿ ದಾಖಲೆ ಪತ್ರಗಳನ್ನು ಸಿದ್ಧಪಡಿಸುವ ಮೂಲಕ ಸೇವೆ ಸಲ್ಲಿಸುತ್ತಿದ್ದರು. ಇದನ್ನರಿತ ಕಂದಾಯ ಸಚಿವ ಕೃಷ್ಣಭೈರೇಗೌಡ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರುಗಳು ಚರ್ಚಿಸಿ ರಾಜ್ಯದ ಎಲ್ಲ ಗ್ರಾಮ ಲೆಕ್ಕಾಧಿಕಾರಿಗಳಿಗೆ ಲ್ಯಾಪ್‌ಟಾಪ್ ವಿತರಿಸಿಲು ನಿರ್ಧರಿಸಿದ್ದಾರೆ ಎಂದರು.

    ಪ್ರತೀ ಲ್ಯಾಪ್‌ಟಾಪ್‌ಗೆ ೪೦ ಸಾವಿರ ರೂ ವೆಚ್ಚವಾಗುತ್ತಿದ್ದು, ಈಗಾಗಲೇ ಕಂದಾಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಜಿಲ್ಲಾ ಅಧಿಕಾರಿಗಳು, ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮ ಸಹಾಯಕರಿಗೆ ಒತ್ತಡವನ್ನು ಮುಕ್ತಗೊಳಿಸುವ ಗುರಿಯೊಂದಿಗೆ ಸರ್ಕಾರ ಈ ಸೌಲಭ್ಯ ನೀಡಲು ಮುಂದಾಗಿದೆ ಎಂದರು.

    ಲ್ಯಾಪ್‌ಟಾಪ್ ಪಡೆದುಕೊಂಡ ಎಲ್ಲಾ ಕಂದಾಯ ಇಲಾಖೆ ಅಧಿಕಾರಿಗಳು ರಾಜ್ಯ ಕಂದಾಯ ಇಲಾಖೆಗೆ ಜಿಲ್ಲೆಯ ಸಮಗ್ರ ಮಾಹಿತಿಯನ್ನು ನೀಡುವುದರ ಜೊತೆಗೆ ಸಾರ್ವಜನಿಕರಿಗೆ, ಬಡವರಿಗೆ ಸರಳವಾಗಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.

    ತಹಶೀಲ್ದಾರ್ ರೇಷ್ಮಾ ಮಾತನಾಡಿ, ಕಂದಾಯ ಇಲಾಖೆಗೆ ಸಂಬಂಧಿಸಿದ ಬಗರ್ ಹುಕ್ಕುಂ, ೧-೫ ಸೇರಿದಂತೆ ಎಲ್ಲಾ ರೀತಿಯ ಯೋಜನೆಗಳನ್ನು ಲ್ಯಾಪ್‌ಟಾಪ್‌ನಲ್ಲಿ ದಾಖಲು ಮಾಡಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಇದೂವರೆಗೆ ಇಲಾಖೆಯಲ್ಲಿ ಮೂಲ ಸೌಕರ್ಯವಿಲ್ಲ, ನೆಟ್‌ವರ್ಕ್ ಸಿಗಲ್ಲ ಎಂಬಿತ್ಯಾದಿ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಿ ಲ್ಯಾಪ್‌ಟಾಪ್ ವಿತರಿಸಲಾಗಿದ್ದು, ಇದರಿಂದ ಗ್ರಾಮ ಲೆಕ್ಕಾಧಿಕಾರಿಗಳಿಗೆ ಅನುಕೂಲವಾಗಲಿದೆ ಎಂದರು.

    ಒಟ್ಟು ೪೪ ಗ್ರಾಮ ಲೆಕ್ಕಾಧಿಕಾರಿಗಳಿದ್ದು, ಇದರಲ್ಲಿ ಅವಶ್ಯಕತೆಗನುಗುಣವಾಗಿ ೩೪ ಜನರ ಪಟ್ಟಿ ಮಾಡಿದ್ದು, ಶಾಸಕ ಹೆಚ್.ಡಿ. ತಮ್ಮಯ್ಯ ನೇತೃತ್ವದಲ್ಲಿ ವಿತರಣೆ ಮಾಡಿದ್ದೇವೆ ಎಂದು ತಿಳಿಸಿದರು.

    ಈ ಸಂದರ್ಭದಲ್ಲಿ ಶಿರಸ್ತೇದಾರ್ ಪ್ರಸನ್ನ, ಕಂದಾಯ ಇಲಾಖೆಯ ರಾಜಸ್ವ ನಿರೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.

    Laptop distribution to promote paperless services

  • ಜೂ.5ರಿಂದ ಉಚಿತ ಯೋಗ ತರಬೇತಿ ಶಿಬಿರ

    ಜೂ.5ರಿಂದ ಉಚಿತ ಯೋಗ ತರಬೇತಿ ಶಿಬಿರ

    ಚಿಕ್ಕಮಗಳೂರು:  ಆರೋಗ್ಯವಂತ ಸಮಾಜ ನಿರ್ಮಾಣ ಮಾಡಬೇಕೆಂಬ ಉದ್ದೇಶದೊಂದಿಗೆ ಒಂದು ಭೂಮಿ ಒಂದು ಆರೋಗ್ಯ ಎಂಬ ಘೋಷವಾಕ್ಯದ ಮೂಲಕ ಯೋಗ ಶಿಕ್ಷಣ, ಪ್ರಾಣಾಯಾಮ ಹಾಗೂ ಧ್ಯಾನ ಉಚಿತ ತರಗತಿಯನ್ನು ಜೂ.೫ ರಿಂದ ನಗರದೆಲ್ಲೆಡೆ ಆರಂಭಿಸಲಾಗುವುದೆಂದು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಸಿ.ಎಸ್. ಶ್ರೀನಿವಾಸ್ ತಿಳಿಸಿದರು.

    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೂ.೨೧ ರಂದು ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಜಿಲ್ಲಾ ವ್ಯಾಪ್ತಿಯಲ್ಲಿ ಉಚಿತ ಯೋಗ ತರಬೇತಿ ಶಿಬಿರಗಳನ್ನು ಜೂ.೫ ರಿಂದ ೨೦ ರವರೆಗೆ ಒಟ್ಟು ೧೫ ದಿನಗಳ ಕಾಲ ಜಿಲ್ಲೆಯ ೨೩ ಸ್ಥಳಗಳಲ್ಲಿ ನಡೆಸಲಾಗುವುದೆಂದು ಹೇಳಿದರು.

    ಜೂ.೨೧ ರಂದು ಜಿಲ್ಲಾಡಳಿತ ಹಾಗೂ ಪತಂಜಲಿ ಯೋಗ ಶಿಕ್ಷಣ ಸಮಿತಿ ಆಶ್ರಯದಲ್ಲಿ ವಿಜಯಪುರದ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದು, ಚಿಕ್ಕಮಗಳೂರು ನಗರ, ಕಡೂರು, ಶೃಂಗೇರಿ, ಲಿಂಗದಹಳ್ಳಿ ಈ ನಾಲ್ಕು ಕಡೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

    ಇಂದಿನ ಯಾಂತ್ರಿಕ ಜಗತ್ತಿನಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಒತ್ತಡ, ಮಾನಸಿಕ ಕ್ಷೆಭೆಗಳಿಂದ ಮನಸ್ಸು, ದೇಹವನ್ನು ಪ್ರಶಾಂತವಾಗಿಡಲು ಯೋಗ ಒಂದೇ ಸಾಧನವಾಗಿದ್ದು, ಆಧುನಿಕ ಜೀವನದ ಕೊಡುಗೆಗಳಾಗಿ ರಕ್ತದೊತ್ತಡ, ಮಧುಮೇಹ, ಆಲಸ್ಯ, ಬೊಜ್ಜು, ಮೂಲವ್ಯಾಧಿ, ಅಸಿಡಿಟಿ, ಅಜೀರ್ಣ, ಸಂಧಿವಾತ, ನಿದ್ರಾಹೀನತೆ, ಮಾನಸಿಕ ಒತ್ತಡ, ಮಂಡಿನೋವು ಮತ್ತು ಬೆನ್ನುನೋವು ಇವುಗಳಿಗೆ ಸೂಕ್ತ ಚಿಕಿತ್ಸಾ ಕ್ರಮವನ್ನು ಯೋಗಾಭ್ಯಾಸದ ಮೂಲಕ ಪಡೆದು ಗರಿಷ್ಠ ಪ್ರಮಾಣದಲ್ಲಿ ನಿಯಂತ್ರಿಸಿಕೊಳ್ಳಬಹುದಾಗಿದೆ ಎಂದರು.

    ವಿದ್ಯಾರ್ಥಿಗಳು, ಉದ್ಯೋಗಿಗಳು, ಗೃಹಿಣಿಯರು ಸೇರಿದಂತೆ ಎಲ್ಲಾ ವರ್ಗದ ಸಾರ್ವಜನಿಕರು ಮತ್ತು ಯೋಗಾಸಕ್ತರು ಈ ಶಿಬಿರಗಳಲ್ಲಿ ಪಾಲ್ಗೊಳ್ಳುವ ಮೂಲಕ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

    ಪ್ರತಿನಿತ್ಯ ಬೆಳಗ್ಗೆ ೬ ರಿಂದ ೭ ಗಂಟೆಯವರೆಗೆ ದಿನದಲ್ಲಿ ೧ ಗಂಟೆಗಳ ಕಾಲ ಶಿಬಿರ ನಡೆಯಲಿದ್ದು, ಸಾರ್ವಜನಿಕರು ಹೆಚ್ಚಿನ ಮಾಹಿತಿಗೆ ಚಿಕ್ಕಮಗಳೂರಿನ ಪುಷ್ಪಪ್ರಕಾಶ್-೮೩೧೦೫೮೭೩೨೬, ಶಾರದಾ-೯೪೪೯೧೭೫೯೩೯, ಶ್ರೀನಿವಾಸ್-೯೪೪೯೧೬೭೪೭೯, ಶೃಂಗೇರಿ ನಾಗೇಶ್ ಕಾಮತ್-೭೨೫೯೧೦೨೬೭೭, ಮಂಜುನಾಥ್ ಕಡೂರು-೯೯೦೦೪೪೦೦೮೭, ಪಾರ್ವತಿ ಲಿಂಗದಹಳ್ಳಿ-೯೭೪೩೦೪೨೫೭೫ ಇವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ನಗರ ಸಂಚಾಲಕ ಸೋಮಣ್ಣ, ಶಿಕ್ಷಕರುಗಳಾದ ಅವಿನಾಶ್ ಬಿ.ಎನ್, ಜಿಲ್ಲಾ ಸಂಚಾಲಕಿ ಶಾರದಾ, ಲಕ್ಷ್ಮಿ ಉಪಸ್ಥಿತರಿದ್ದರು.

    Free yoga training camp from June 5th

  • ಭದ್ರಾ ಅಭಯಾರಣ್ಯದ 43 ಎಕರೆ ಅರಣ್ಯ ಒತ್ತುವರಿ ಭೂಮಿ ತೆರವು

    ಭದ್ರಾ ಅಭಯಾರಣ್ಯದ 43 ಎಕರೆ ಅರಣ್ಯ ಒತ್ತುವರಿ ಭೂಮಿ ತೆರವು

    ಚಿಕ್ಕಮಗಳೂರು:  ಮಿಂಚಿನ ಕಾರ್ಯಾಚರಣೆ ನಡೆಸಿ ೪೩ ಎಕರೆ ಅರಣ್ಯ ಒತ್ತುವರಿ ಭೂಮಿಯನ್ನು ತೆರವು ಮಾಡುವ ಮೂಲಕ ಅಧಿಕಾರಿಗಳು ಇದೇ ಮೊದಲ ಭಾರಿಗೆ ದಿಟ್ಟ ಕ್ರಮ ಕೈಗೊಂಡಿದ್ದಾರೆ.

    ಜಿಲ್ಲೆಯ ಭದ್ರಾ ಅಭಯಾರಣ್ಯದ ಹುಲಿ ಮೀಸಲು ವ್ಯಾಪ್ತಿಯ ಮುತ್ತೋಡಿ ವಲಯದ ಕೆಸವಿನ ಮನೆ ಸರ್ವೇ ನಂಬರ್ ೪೩ರಲ್ಲಿ ನಗರದ ನರೇಂದ್ರ ಪೈ ಎಂಬುವರಿಗೆ ಸೇರಿದ ಕೆಸವಿನಮನೆ ಹಕ್ಲು ತೋಟದಲ್ಲಿ ಅಭಯಾರಣ್ಯಕ್ಕೆ ಸೇರಿದ ೪೩ ಎಕರೆ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಲಾಗಿತ್ತು. ಈ ಸಂಬಂಧ ೨೦೨೨-೨೩ನೇ ಸಾಲಿನಲ್ಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆ ೧೯೭೨ರ ಅನ್ವಯ ಪ್ರಕರಣವು ಕೂಡ ದಾಖಲಾಗಿತ್ತು.

    ನ್ಯಾಯಾಲಯದ ಆದೇಶ:
    ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರಾತ್ರೀಶ್ವರ ಸ್ವಾಮಿ ಅವರ ಘನ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಅರಣ್ಯ ಒತ್ತುವರಿ ಅಂಶ ಸಾಬೀತಾದ ಹಿನ್ನೆಲೆಯಲ್ಲಿ ಒತ್ತುವರಿ ತೆರವುಮಾಡಿಕೊಡುವಂತೆ ಒತ್ತುವರಿದಾರರಿಗೆ ಏಪ್ರಿಲ್ ಒಂದು ತಿಂಗಳು ಕಾಲಾವಕಾಶ ನೀಡಿ ಆದೇಶ ಮಾಡಲಾಗಿತ್ತು.

    ಸದರಿ ಒತ್ತುವರಿದಾರರು ಯಾವುದೇ ಅರಣ್ಯ ಒತ್ತುವರಿ ತೆರವು ಮಾಡಿಕೊಡದ ಹಿನ್ನೆಲೆಯಲ್ಲಿ, ಇಲಾಖಾ ಮುಖ್ಯಸ್ಥರ ಸಮ್ಮುಖದಲ್ಲಿ ಕಳೆದ ೩ ದಿನಗಳಿಂದ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ಬೆಳೆದಿದ್ದ ಕಾಫಿ ತೆಗೆದು ಭದ್ರಾ ಅಭಯಾರಣ್ಯ ಹುಲಿ ಮೀಸಲು ಇಲಾಖಾ ವ್ಯಾಪ್ತಿಗೆ ಸದರಿ ೪೩ ಎಕರೆ ಪ್ರದೇಶವನ್ನು ವಶಕ್ಕೆ ಪಡೆಯಲಾಗಿದೆ.

    ಒತ್ತುವರಿ ತೆರವಿಗೆ ಒತ್ತಾಯ:
    ಹಲವು ವ?ಗಳಿಂದ ಭದ್ರಾ ಅಭಯಾರಣ್ಯ ವ್ಯಾಪ್ತಿಯ ಅರಣ್ಯ ಒತ್ತುವರಿ ತೆರವು ಮಾಡಬೇಕೆಂದು ಒತ್ತಾಯ ಕೇಳಿಬಂದಿತ್ತು. ಅದರಲ್ಲೂ ಪ್ರತಿಷ್ಠಿತ ವ್ಯಕ್ತಿಗಳೇ ಅರಣ್ಯ ಒತ್ತುವರಿಗೆ ಮುಂದಾಗಿದ್ದರು. ಭದ್ರಾ ಅಭಯಾರಣ್ಯ ಹುಲಿ ಮೀಸಲು ವ್ಯಾಪ್ತಿಗೆ ಒಳಪಟಿದ್ದು, ಇಲ್ಲಿ ಯಾವುದೇ ರೀತಿಯಲ್ಲೂ ಒತ್ತುವರಿಗೆ ಅವಕಾಶ ಇರುವುದಿಲ್ಲ.

    ಅರಣ್ಯ ಸಚಿವರ ಆದೇಶ ಪಾಲನೆ:
    ಇತ್ತೀಚೆಗೆ ರಾಜ್ಯ ಸರ್ಕಾರದ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ಅರಣ್ಯ ಒತ್ತುವರಿ ತೆರವುಮಾಡಿ ಅರಣ್ಯ ವನ್ಯಜೀವಿ ನೆಲೆಗಳನ್ನು ರಕ್ಷಿಸಬೇಕೆಂದು ಆದೇಶ ಮಾಡಿದ್ದರು. ಸದ್ಯ ಯಾವುದೇ ಮುಲಾಜು ಇಲ್ಲದೆ ಎ? ಒತ್ತಡ ಬಂದರೂ ಅಧಿಕಾರಿಗಳು ಒತ್ತುವರಿ ತೆರವು ಮಾಡಿದ್ದಾರೆ. ತ್ವರಿತವಾಗಿ ಒತ್ತುವರಿ ಪ್ರಕರಣವನ್ನು ಇಲಾಖೆ ಕೈಗೆತ್ತಿಕೊಂಡಿದೆ. ಈ ಕ್ರಮವನ್ನು ಪರಿಸರಾಸಕ್ತರು ಸ್ವಾಗತಿಸಿದ್ದಾರೆ.

    ಈ ಕಾರ್ಯಾಚರಣೆಯನ್ನು ಚಿಕ್ಕಮಗಳೂರು ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಯಸ್ಪಾಲ್ ಕ್ಷೀರಸಾಗರ ಮಾರ್ಗದರ್ಶನದಲ್ಲಿ ಭದ್ರಾ ಹುಲಿ ಮೀಸಲು ಉಪ ಅರಣ್ಯ ಸಂರಕ್ಷಣಾಧಿಕಾರಿ ಪುಲ್ಕಿತ್ ಮೀನ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವರಾತ್ರೀಶ್ವರ ಸ್ವಾಮಿ ನೇತೃತ್ವದಲ್ಲಿ ಅರಣ್ಯ ಒತ್ತುವರಿ ತೆರವು ಕಾರ್ಯಾಚರಣೆ ಮಾಡಲಾಯಿತು.

    ಇದೇ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿಗಳಾದ ಜಗದೀಶ್ ಮೇದ, ಗೌರವ್, ಸುಧಾಕರ ಸೇರಿದಂತೆ ನೂರಾರು ಸಿಬ್ಬಂದಿಗಳು ಪಾಲ್ಗೊಂಡಿದ್ದರು.

    Clearance of 43 acres of forest encroachment land

  • ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-ಅವಧಿ ವಿಸ್ತರಣೆ

    ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-ಅವಧಿ ವಿಸ್ತರಣೆ

    ಚಿಕ್ಕಮಗಳೂರು: ಪರಿಶಿಷ್ಟ ಜಾತಿಯಲ್ಲಿನ ೧೦೧ ಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಿ ದತ್ತಾಂಶವನ್ನು (ಎಂಪೆರಿಕಲ್ ಡಾಟಾ) ಸಂಗ್ರಹಿಸಿ ಹೊಸದಾದ ಸಮೀಕ್ಷೆಯನ್ನು ನಡೆಸಲು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಡಾ.ಹೆಚ್.ಎನ್.ನಾಗಮೋಹನ್‌ದಾಸ್ ಇವರ ಅಧ್ಯಕ್ಷತೆಯ ಏಕ ಸದಸ್ಯ ಆಯೋಗದ ಮಧ್ಯಂತರ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾದ ಹಿನ್ನೆಲೆಯಲ್ಲಿ ಮೇ ೫ರಿಂದ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯ ಕೈಗೊಳ್ಳಲಾಗಿದೆ. ಅದರಂತೆ ರಾಜ್ಯಾದ್ಯಂತ ಈಗಾಗಲೇ ಸಮೀಕ್ಷೆ ನಡೆಯುತ್ತಿದ್ದು, ಇದೀಗ ಆ ಸಮೀಕ್ಷೆಯ ದಿನಾಂಕವನ್ನು ವಿಸ್ತರಿಸಲಾಗಿದೆ.

    ಬಿಬಿಎಂಪಿ ವ್ಯಾಪ್ತಿಯ ವಲಯಗಳಲ್ಲಿ ಮಳೆ, ಹವಾಮಾನ ವೈಪರೀತ್ಯಗಳಿಂದಾಗಿ ಪರಿಶಿಷ್ಟ ಜಾತಿ, ಜನಾಂಗದ ಸಮೀಕ್ಷೆ ಕಾರ್ಯವು ನಿರೀಕ್ಷಿತ ಮಟ್ಟದಲ್ಲಿ ಪೂರ್ಣಗೊಂಡಿರುವುದಿಲ್ಲವೆಂಬ ಕಾರಣಕ್ಕಾಗಿ ಸಮೀಕ್ಷಾ ಅವಧಿಯನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ವಿಸ್ತರಿಸುವಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳು ವಿನಂತಿಸಿದ್ದಾರೆ.

    ಜೊತೆಗೆ ಪರಿಶಿಷ್ಟ ಜಾತಿಯ ಜನರೆಲ್ಲರೂ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಲು ಅನುವಾಗುವಂತೆ ಈ ವಿಸ್ತರಣೆ ಮಾಡಲಾಗಿದ್ದು, ವಿಶೇಷ ಶಿಬಿರ (ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ)ವನ್ನು ಜೂನ್ ೨ ರಿಂದ ಜೂ.೮ರವರೆಗೆ ವಿಸ್ತರಿಸಲಾಗಿದೆ ಮತ್ತು ಆನ್‌ಲೈನ್ ಮೂಲಕ ಸ್ವಯಂಘೋಷಣೆ ಜೂನ್ ೮ ರವರೆಗೆ ಮುಂದುವರೆಯಲಿದೆ.

    ಅಲ್ಲದೆ, ಗಣತಿದಾರರು ರಜಾ ದಿನಗಳಲ್ಲಿಯೂ  ಸಹ ಸಮೀಕ್ಷಾ ಬ್ಲಾಕ್‌ನ ವಿಶೇಷ ಶಿಬಿರಗಳಲ್ಲಿ ಕಾರ್ಯ ನಿರ್ವಹಿಸಿ ಸಮೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಆಯೋಗದ ಅಧ್ಯಕ್ಷರು ನಿರ್ದೇಶನ ನೀಡಿರುವುದಾಗಿ ಆಯೋಗದ ಕಾರ್ಯದರ್ಶಿಗಳು ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

    Comprehensive Survey of Scheduled Castes-Extension of Period

  • ವಿವಿಧ ಬೇಡಿಕೆಗೆ ಆಗ್ರಹಿಸಿ ವಸತಿ ಶಾಲೆಗಳ ಖಾಯಂ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

    ವಿವಿಧ ಬೇಡಿಕೆಗೆ ಆಗ್ರಹಿಸಿ ವಸತಿ ಶಾಲೆಗಳ ಖಾಯಂ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

    ಚಿಕ್ಕಮಗಳೂರು: ವಸತಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಖಾಯಂ ನೌಕರರ ಸಂವಿಧಾನಾತ್ಮಕ ಸಾರ್ವತ್ರಿಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದು ಅಜಾದ್ ವೃತ್ತದಲ್ಲಿ ವಸತಿ ಶಾಲೆಗಳ ನೌಕರರ ಸಂಘದ ಜಿಲ್ಲಾ ಶಾಖೆ ವತಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಯಿತು.

    ಇಂದು ವಸತಿ ಶಾಲೆಗಳ ನೌಕರರ ಸಂಘದ ಜಿಲ್ಲಾಧ್ಯಕ್ಷೆ ದೀಪಾ ನೇತೃತ್ವದಲ್ಲಿ ಸಮಾವೇಶಗೊಂಡ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ತಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಕೂಡಲೇ ಈಡೇರಿಸುವಂತೆ ಒತ್ತಾಯಿಸಿದರು.

    ಸಮಾಜ ಕಲ್ಯಾಣ ಇಲಾಖೆಯ ಕ್ರೈಸ್ ಅಧೀನದಲ್ಲಿ ನಡೆಯುತ್ತಿರುವ ಎಸ್ಸಿ, ಎಸ್‌ಟಿ, ಓಬಿಸಿ ವಸತಿ ಶಾಲೆಗಳ ನಿರ್ವಹಣೆಗಾಗಿ ಕರ್ನಾಟಕ ವಸತಿ ಶಿಕ್ಷಣ ನಿರ್ದೇಶನಾಲಯ ಸ್ಥಾಪಿಸಬೇಕು ಅಥವಾ ಕ್ರೈಸ್ ಅಧೀನದ ವಸತಿ ಶಾಲೆಗಳನ್ನು ಖಾಯಂ ಸಿಬ್ಬಂದಿಗಳೊಂದಿಗೆ ಸಂಬಂಧಿಸಿದ ಇಲಾಖೆಗಳ ವಶಕ್ಕೆ ನೀಡಬೇಕೆಂದು ಆಗ್ರಹಿಸಿದರು.

    ಆರೋಗ್ಯ ಸಂಜೀವಿನಿ, ಜ್ಯೋತಿ ಸಂಜೀವಿನಿ ಯೋಜನೆಯನ್ನು ಅನುಷ್ಠಾನಗೊಳಿಸಬೇಕು, ಮರಣ ಮತ್ತು ನಿವೃತ್ತಿ ಉಪದಾನ ಯೋಜನೆಯನ್ನು ಕ್ರೈಸ್ ಖಾಯಂ ನೌಕರರಿಗೆ ವಿಸ್ತರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ಕಳೆದ ೧೨ ವರ್ಷದಿಂದ ಕ್ರೈಸ್ ಸಂಸ್ಥೆ ಮೂಲಕ ವಸತಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಆದರೆ, ನಮ್ಮನ್ನು ಈವರೆಗೂ ಸರಕಾರಿ ನೌಕರರೆಂದು ಸರಕಾರ ಪರಿಗಣಿಸಿಲ್ಲ. ಸರಕಾರಿ ಶಾಲೆಗಳ ಶಿಕ್ಷಕರಂತೆ ನಾವೂ ಕೂಡ ವಸತಿ ಶಾಲೆಯಲ್ಲಿ ಉತ್ತಮ ಫಲಿತಾಂಶ ನೀಡಿದ್ದರೂ ನಮಗೆ ಮಲತಾಯಿ ಧೋರಣೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

    ನಗದುರಹಿತ ಚಿಕಿತ್ಸೆಗಾಗಿ ಜ್ಯೋತಿ ಸಂಜೀವಿನಿ ಅನುಷ್ಠಾನಗೊಳಿಸಬೇಕು. ಶಿಕ್ಷಕ ನೌಕರರು ಮರಣ ಹೊಂದಿದರೆ ೨೦ ಲಕ್ಷ ರೂ. ನೀಡಬೇಕು. ನಿವೃತ್ತಿ ಉಪದಾನ ಸೌಲಭ್ಯ ಒದಗಿಸಬೇಕು. ಮನೆ ಬಾಡಿಗೆ ಭತ್ಯೆ ಕಡಿತದಿಂದ ವಿನಾಯಿತಿ ನೀಡುವುದು, ಹೆಚ್ಚುವರಿ ಕಾರ್ಯಾಭಾರ ಇರುವುದರಿಂದ ಶೇ.೧೦ ರಷ್ಟು ವಿಶೇಷ ಭತ್ಯೆ ಮಂಜೂರಾತಿ ಮಾಡುವಂತೆ ಒತ್ತಾಯಿಸಿದರು.

    ಈ ಎಲ್ಲ ಬೇಡಿಕೆಗಳನ್ನು ಮುಂದಿಟ್ಟು ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ ನಡೆಸಲಾಗಿದ್ದು, ಆದರೆ, ಸರಕಾರ ಯಾವುದೇ ಸ್ಪಂದನೆ ನೀಡದಿರುವ ಹಿನ್ನೆಲೆಯಲ್ಲಿ ೩೧ ರಂದು ಜಿಲ್ಲಾಧಿಕಾರಿಗೆ ಬೇಡಿಕೆ ಬಗ್ಗೆ ಮನವಿ ಸಲ್ಲಿಸಿದ್ದು, ಇಂದಿನಿಂದ ೩ ದಿನಗಳ ಕಾಲ ಅಜಾದ್ ವೃತ್ತದಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದೇವೆ ಎಂದರು.

    ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ರವಿಕುಮಾರ್, ಸಂಘಟನಾ ಕಾರ್ಯದರ್ಶಿ ಧನರಾಜ್, ಜಗದೀಶ್, ಲಕ್ಷ್ಮಣ್, ರೇಖಾ, ಪ್ರಭುಕುಮಾರ್, ಲಿಂಗರಾಜು, ಜಿಲ್ಲೆಯ ಎಲ್ಲಾ ತಾಲ್ಲೂಕು ಸಂಘಟನೆಗಳ ಪದಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.

    Permanent employees of residential schools go on indefinite strike demanding various demands

  • ಅಣಬೆ ಬೇಸಾಯ ಉಚಿತ ತರಬೇತಿಗೆ ಅರ್ಜಿ ಆಹ್ವಾನ

    ಅಣಬೆ ಬೇಸಾಯ ಉಚಿತ ತರಬೇತಿಗೆ ಅರ್ಜಿ ಆಹ್ವಾನ

    ಚಿಕ್ಕಮಗಳೂರು: : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್‌ನ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಅಣಬೆ ಬೇಸಾಯ ಕುರಿತ ೧೦ ದಿನಗಳ ಉಚಿತ ತರಬೇತಿಯನ್ನು ಜೂನ್ ೧೭ ರಿಂದ ಹಮ್ಮಿಕೊಳ್ಳಲಾಗಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರಿಂದ ಅರ್ಜಿ ಆಹ್ವಾನಿಸಲಾಗಿದೆ.

    ಆಸಕ್ತರು ೧೮ ರಿಂದ ೪೫ ವರ್ಷ ವಯೋಮಾನದವರಾಗಿದ್ದು, ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು. ಬಿಪಿಎಲ್ ಕಾರ್ಡ್ ಅಥವಾ ಜಾಬ್ ಕಾರ್ಡ್ ಹಾಗೂ ಆಧಾರ್ ಕಾರ್ಡ್ ಕಡ್ಡಾಯವಾಗಿ ಹೊಂದಿರಬೇಕು. ಆಸಕ್ತರು ತಮ್ಮ ಹೆಸರನ್ನು ನೋಂದಾಯಿಸಲು ಜೂನ್ ೧೨ ಕೊನೆಯ ದಿನವಾಗಿದೆ.

    ತರಬೇತಿಯು ಕಡ್ಡಾಯವಾಗಿ ವಸತಿಯುತವಾಗಿದ್ದು, ತರಬೇತಿಯ ಅವಧಿಯಲ್ಲಿ ಉಚಿತವಾಗಿ ಊಟ ಮತ್ತು ವಸತಿ ನೀಡಲಾಗುವುದು ಹಾಗೂ ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣಪತ್ರವನ್ನು ವಿತರಿಸಲಾಗುವುದು.

    ಆಸಕ್ತರು ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ರುಡ್‌ಸೆಟ್ ಸಂಸ್ಥೆ, ಅರಿಶಿನಕುಂಟೆ, ನೆಲಮಂಗಲ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಮೊಬೈಲ್ ಸಂಖ್ಯೆ: ೯೭೪೦೯೮೨೫೮೫, ೯೨೪೧೪೮೨೫೪೧, ೯೧೧೩೮೮೦೩೨೪ ಅನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯ ಬೆಂಗಳೂರು ಶಾಖೆಯ ನಿರ್ದೇಶಕ ರವಿಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Applications invited for free training in mushroom cultivation

  • ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-ಅವಧಿ ವಿಸ್ತರಣೆ

    ಪರಿಶಿಷ್ಟ ಜಾತಿಗಳ ಸಮಗ್ರ ಸಮೀಕ್ಷೆ-ಅವಧಿ ವಿಸ್ತರಣೆ

    ಚಿಕ್ಕಮಗಳೂರು: ಪರಿಶಿಷ್ಟ ಜಾತಿಯಲ್ಲಿನ ೧೦೧ ಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಿ ದತ್ತಾಂಶವನ್ನು (ಎಂಪೆರಿಕಲ್ ಡಾಟಾ) ಸಂಗ್ರಹಿಸಿ ಹೊಸದಾದ ಸಮೀಕ್ಷೆಯನ್ನು ನಡೆಸಲು ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಡಾ.ಹೆಚ್.ಎನ್.ನಾಗಮೋಹನ್‌ದಾಸ್ ಇವರ ಅಧ್ಯಕ್ಷತೆಯ ಏಕ ಸದಸ್ಯ ಆಯೋಗದ ಮಧ್ಯಂತರ ವರದಿಯಲ್ಲಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾದ ಹಿನ್ನೆಲೆಯಲ್ಲಿ ಮೇ ೫ರಿಂದ ಗಣತಿದಾರರು ಮನೆ-ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯ ಕೈಗೊಳ್ಳಲಾಗಿದೆ. ಅದರಂತೆ ರಾಜ್ಯಾದ್ಯಂತ ಈಗಾಗಲೇ ಸಮೀಕ್ಷೆ ನಡೆಯುತ್ತಿದ್ದು, ಇದೀಗ ಆ ಸಮೀಕ್ಷೆಯ ದಿನಾಂಕವನ್ನು ವಿಸ್ತರಿಸಲಾಗಿದೆ.

    ಬಿಬಿಎಂಪಿ ವ್ಯಾಪ್ತಿಯ ವಲಯಗಳಲ್ಲಿ ಮಳೆ, ಹವಾಮಾನ ವೈಪರೀತ್ಯಗಳಿಂದಾಗಿ ಪರಿಶಿಷ್ಟ ಜಾತಿ, ಜನಾಂಗದ ಸಮೀಕ್ಷೆ ಕಾರ್ಯವು ನಿರೀಕ್ಷಿತ ಮಟ್ಟದಲ್ಲಿ ಪೂರ್ಣಗೊಂಡಿರುವುದಿಲ್ಲವೆಂಬ ಕಾರಣಕ್ಕಾಗಿ ಸಮೀಕ್ಷಾ ಅವಧಿಯನ್ನು ರಾಜ್ಯದ ವಿವಿಧ ಜಿಲ್ಲೆಗಳಲ್ಲಿಯೂ ವಿಸ್ತರಿಸುವಂತೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರುಗಳು ವಿನಂತಿಸಿದ್ದಾರೆ.

    ಜೊತೆಗೆ ಪರಿಶಿಷ್ಟ ಜಾತಿಯ ಜನರೆಲ್ಲರೂ ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸಲು ಅನುವಾಗುವಂತೆ ಈ ವಿಸ್ತರಣೆ ಮಾಡಲಾಗಿದ್ದು, ವಿಶೇಷ ಶಿಬಿರ (ಸಮೀಕ್ಷಾ ಬ್ಲಾಕ್ ವ್ಯಾಪ್ತಿಯಲ್ಲಿ)ವನ್ನು ಜೂನ್ ೨ ರಿಂದ ಜೂ.೮ರವರೆಗೆ ವಿಸ್ತರಿಸಲಾಗಿದೆ ಮತ್ತು ಆನ್‌ಲೈನ್ ಮೂಲಕ ಸ್ವಯಂಘೋಷಣೆ ಜೂನ್ ೮ ರವರೆಗೆ ಮುಂದುವರೆಯಲಿದೆ.

    ಅಲ್ಲದೆ, ಗಣತಿದಾರರು ರಜಾ ದಿನಗಳಲ್ಲಿಯೂ ಸಹ ಸಮೀಕ್ಷಾ ಬ್ಲಾಕ್‌ನ ವಿಶೇಷ ಶಿಬಿರಗಳಲ್ಲಿ ಕಾರ್ಯ ನಿರ್ವಹಿಸಿ ಸಮೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವಂತೆ ಆಯೋಗದ ಅಧ್ಯಕ್ಷರು ನಿರ್ದೇಶನ ನೀಡಿರುವುದಾಗಿ ಆಯೋಗದ ಕಾರ್ಯದರ್ಶಿಗಳು ತಿಳಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

    Comprehensive Survey of Scheduled Castes-Extension of Period

  • ವಚನ ಸಾಹಿತ್ಯ ಎಂಬುದು ಕೊನೆಯಿರದ ತೀರ

    ವಚನ ಸಾಹಿತ್ಯ ಎಂಬುದು ಕೊನೆಯಿರದ ತೀರ

    ಚಿಕ್ಕಮಗಳೂರು:  ವಚನ ಸಾಹಿತ್ಯ ಎಂಬುದು ಕೊನೆಯಿರದ ತೀರ, ಅದರಲ್ಲಿ ಮಾನವ ನೆಮ್ಮದಿ ಜೀವನಕ್ಕೆ ಅಗತ್ಯವಿರುವ ಸಂಸ್ಕಾರ, ಸಂಸ್ಕೃತಿ ಅಡಗಿದೆ. ಅದನ್ನು ಅರಿತು ಮುನ್ನಡೆದವನೆ ನಿಜ ಶರ ಣನಾಗುತ್ತಾನೆ ಎಂದು ಬಸವತತ್ವ ಪೀಠದ ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ ಹೇಳಿದರು.

    ಕಲ್ಯಾಣನಗರದ ಎಂ.ಎಸ್.ಲೋಕಶಪ್ಪ ಸಭಾಂಗಣದಲ್ಲಿ ಭಾನುವಾರ ಸಂಜೆ ನಡೆದ ಎಸ್.ಎಂ.ಲೋ ಕೇಶಪ್ಪ ಮತ್ತು ಸಹೋದರರ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತ ನಾಡಿ ವಚನ ಸಾಹಿತ್ಯದಲ್ಲಿ ಜೀವನ ಮೌಲ್ಯ ಕುರಿತು ಸಂದೇಶಗಳಿವೆ. ಮನಸ್ಸಿನಿಂದ ಮನಸ್ಸಿನ ಸಂಪರ್ಕವೇ ಅನುಭಾವ. ಅದುವೇ ವಚನದ ಜೀವಾಳ. ಮನು?ನಿಗೆ ಜ್ಞಾನಕ್ಕಿಂತ ದೊಡ್ಡ ಸಂಪತ್ತು ಇನ್ನೊಂದಿಲ್ಲ ಎಂದು ತೋರಿಸಿಕೊಟ್ಟ ವಚನ ಸಾಹಿತ್ಯದಿಂದ ಸಮಾಜ ಕಲಿಯುವುದು ಸಾಕಷ್ಟಿದೆ ಎಂದರು.

    ಸಂಸ್ಕಾರದಿಂದ ಬದುಕು ಸಾರ್ಥಕವಾಗುತ್ತದೆ. ಆಧುನಿಕತೆಯ ಭರಾಟೆಯಲ್ಲಿ ಕಳೆದು ಹೋಗುತ್ತಿರುವ ಇಂದಿನ ಪೀಳಿಗೆಯವರಿಗೆ ಸಂಸ್ಕಾರ ಅಗತ್ಯವಿದೆ. ಈ ನಿಟ್ಟಿನಲ್ಲಿ ತಾಯಂದಿರ ಪಾತ್ರ ಮಹತ್ತರವಾಗಿದೆ. ಜೀವ ನದ ನಿಜ ಸತ್ಯ, ಅಂಕು-ಡೊಂಕುಗಳನ್ನು ತಿದ್ದಿ ಹೇಳುವುದು ಹಿರಿಯರ ಕೆಲಸ. ಅದನ್ನು ಪಾಲಿಸುವುದು, ಆಚರಣೆಗೆ ತರುವುದು ಕಿರಿಯರ ಜವಾಬ್ದಾರಿ ಎಂದು ಹೇಳಿದರು.

    ಬಸವಾದಿ ಶರಣರು ತಮ್ಮ ವಚನ ಸಾಹಿತ್ಯದಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ಭಾ?ಯನ್ನು ಕೊಟ್ಟು ಕನ್ನಡ ಭಾ?ಯ ಹಿರಿಮೆ ಗರಿಮೆ ಹೆಚ್ಚಿಸಿದರು. ವಚನಗಳಲ್ಲಿ ಜೀವನ ಮೌಲ್ಯ ಅಡಗಿದೆ ಮತ್ತು ಅದರಿಂದ ತಿಳಿಯುವುದು ಪ್ರಸ್ತುತ ಸಮಾಜದ ಬಹಳಷ್ಟಿದೆ ಎಂದು ತಿಳಿಸಿದರು.

    ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಪಂ. ಮಾಜಿ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ ಮಾತೃ ಭಾಷೆಯಿಂದಲೇ ಭಾವನೆ, ಸಂತಸ ಹಾಗೂ ವಿಚಾರಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಸಾಧ್ಯ. ಆ ನಿಟ್ಟಿ ನಲ್ಲಿ ಇಂದು ೧೦೦ನೇ ದತ್ತಿ ಉಪನ್ಯಾಸ ವೈವಿದ್ಯಮ ಮತ್ತು ವಿಶೇಷವಾಗಿ ಆಚರಿಸುತ್ತಿರುವುದು ಸಂತಸ ಸಂ ಗತಿ ಎಂದರು.

    ಸಾಹಿತಿ ಬಿ.ತಿಪ್ಪೇರುದ್ರಪ್ಪ ಮಾತನಾಡಿ ಪ್ರಸ್ತುತ ಕಾಲಘಟ್ಟದಲ್ಲಿ ಹಣದಾಸೆಯಿಂದ ಗುಣ, ನಡವಳಿಕೆ, ಆ ಚಾರ-ವಿಚಾರಗಳು ಅಪಮೌಲ್ಯವಾಗುತ್ತಿದೆ. ಧರ್ಮದ ಹೆಸರಿನಲ್ಲಿ ಮತಾಂತಧೆ ತಾಂಡವ, ಮಾನವೀಯ ನೆಲೆ ಹಾಗೂ ಮನುಷ್ಯತ್ವ ನಶಿಸುತ್ತಿದ್ದು ಇವುಗಳನ್ನು ಮರಕಳಿಸುವಲ್ಲಿ ವಚನ ಸಾಹಿತ್ಯಗಳು ಪೂರಕವಾಗಿದೆ ಎಂದು ತಿಳಿಸಿದರು.

    ಕಸಾಪ ಜಿಲ್ಲಾಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ ಪರಿಷತ್ ಈಗಾಗಲೇ ವೇದಿಕೆಗಳಲ್ಲಿ ಕಾರ್ಯಕ್ರ ಮ ಆಯೋಜಿಸುವ ಜೊತೆಗೆ ಮಕ್ಕಳಲ್ಲಿ ಸಾಹಿತ್ಯಾಭಿರುಚಿ ಬೆಳೆಸಲು ಶಾಲಾ-ಕಾಲೇಜುಗಳಲ್ಲಿ ಕಾರ್ಯಾಗಾ ರ ಹಮ್ಮಿಕೊಂಡಿದೆ ಎಂದ ಅವರು ಬಾಲ್ಯದಿಂದಲೇ ಎಳೆಮನಸ್ಸಿಗೆ ಕನ್ನಡಕಂಪು ರಸದೌತಣ ಉಣಬಡಿಸಿ ದರೆ ಭವಿಷ್ಯದಲ್ಲಿ ಹೆಮ್ಮರವಾಗಿ ಬೆಳೆದು ನೂರಾರು ಯುವಕವಿಗಳಿಗೆ ನೆರಳಾಗಲಿದೆ ಎಂದರು.

    ಈ ಸಂದರ್ಭದಲ್ಲಿ ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಸ್.ವೆಂಕಟೇಶ್, ಪ್ರಧಾನ ಸಂಚಾಲ ಕ ಎಸ್.ಎಂ.ಲೋಕೇಶಪ್ಪ, ನಿವೃತ್ತ ಮುಖ್ಯಶಿಕ್ಷಕ ಎಸ್.ಎಂ.ಮಲ್ಲೇಶಪ್ಪ, ತಾಲ್ಲೂಕು ಅಧ್ಯಕ್ಷ ಮಾವಿನಕೆರೆ ದ ಯಾನಂದ್, ನಿಕಟಪೂರ್ವ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್, ಮಹಿಳಾ ಘಟಕದ ಅಧ್ಯಕ್ಷೆ ವಿಜಯ ಲಕ್ಷ್ಮೀ, ಪತ್ರಕರ್ತ ರಮೇಶ್ ನಾರಿನಿಂಗಜ್ಜಿ ಮತ್ತಿತರರು ಉಪಸ್ಥಿತರಿದ್ದರು.

    The literature of Vachana is an endless shore.