Category: ಚಿಕ್ಕಮಗಳೂರು ನಗರ

  • ಅಹಲ್ಯರ ಉತ್ತಮ ಆಡಳಿತವು ಸಮಾಜಕ್ಕೆ ಮಾದರಿ

    ಅಹಲ್ಯರ ಉತ್ತಮ ಆಡಳಿತವು ಸಮಾಜಕ್ಕೆ ಮಾದರಿ

    ಚಿಕ್ಕಮಗಳೂರು:  ಭಾರತೀಯರ ಮನದಾಳದಲ್ಲಿ ಸ್ಥಿರಸ್ಥಾಯಿಯಾಗಿ ಉಳಿದಿರುವ ಅಹಲ್ಯ ಬಾಯಿ ಹೊಳ್ಕರ್ ಉತ್ತಮ ಆಡಳಿತ, ಜನಾನುರಾಗಿ ಕಾರ್ಯ ಮತ್ತು ಧಾರ್ಮಿಕ, ಶೈಕ್ಷಣಿಕ ಮತ್ತು ಸಾಂಸ್ಕೃ ತಿಕ ಅಭಿವೃದ್ಧಿಗಳಿಂದಾಗಿ ಮಾದರಿಯಾಗಿದ್ದಾರೆ ಎಂದು ಭಾಜಪ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂ ಜುಳಾ ಹೇಳಿದರು.

    ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಿಲ್ಲಾ ಮಹಿಳಾ ಮೋರ್ಚಾದಿಂದ ಶನಿವಾರ ನಡೆದ ಲೋಕಮಾ ತೆ ಅಹಲ್ಯ ಬಾಯಿ ಹೊಳ್ಕರ್ ೩೦೦ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ ಮಹರಾಷ್ಟ್ರದಲ್ಲಿ ಜನಿಸಿ ಮಧ್ಯಪ್ರದೇಶದ ಸೊಸೆಯಾಗಿ ತೆರಳಿದ ಅಹಲ್ಯ ಬಾಯಿ ಸತತ ಮೂರು ದಶಕ ದಿಂದ ರಾಜ್ಯದ ಆಳ್ವಿಕೆಯನ್ನು ನಿಭಾಯಿಸಿ ನಾರಿ ಶಕ್ತಿಯನ್ನು ಎತ್ತಿಹಿಡಿದವರು. ಅತಿ ಕಡಿಮೆ ವಯಸ್ಸಿನಲ್ಲಿ ಬಾಲ್ಯ ವಿವಾಹವಾಗಿ ಪತಿಯನ್ನೇ ಕಳೆದು ಅಹಲ್ಯರವರು ಇಡೀ ರಾಜ್ಯಭಾರವನ್ನು ಹತೋಟಿಗೆ ತಂದು ಬಾ ಲ್ಯವಿವಾಹ ಕನಿಷ್ಟ ಪದ್ಧತಿಯನ್ನು ಹೋಗಲಾಡಿಸಿದರು ಎಂದರು.

    ಮಹಿಳಾ ಸಬಲೀಕರಣಕ್ಕಾಗಿ ನೇಯ್ಗೆ ವೃತ್ತಿ, ಹತ್ತಿ ಬೆಳೆ ಕೃಷಿ ಹಾಗೂ ಆಭರಣ ತಯಾರಿಸುವ ತರಬೇ ತಿಗಳನ್ನು ಹೆಣ್ಣುಮಕ್ಕಳಿಗೆ ಒದಗಿಸಿ ಸ್ವಾವಲಂಬಿ ಬದುಕಿಗೆ ಭದ್ರಬುನಾದಿ ಹಾಕಿದ್ದರು. ಅಲ್ಲದೇ ರಾಜ್ಯದ ಆಳ್ವಿಕೆ ಯಲ್ಲೂ ಮಹಿಳಾ ಸೈನ್ಯವನ್ನು ಬಲಿಷ್ಟಗೊಳಿಸಿ ವಿರೋಧಿ ಪಡೆಗಳ ಆಕ್ರಮಣದಿಂದ ಗೆಲುವು ಸಾಧಿಸಿದ ಕೀರ್ತಿ ಅವರಿಗೆ ದಕ್ಕಿದೆ ಎಂದು ಹೇಳಿದರು.

    ದೇಶದ ಹನ್ನೇರಡು ಜ್ಯೋರ್ತಿಲಿಂಗ ಜೀರ್ಣೋದ್ದಾರ, ನಾಡಿನ ಕರಾವಳಿ ಪ್ರದೇಶದ ದೇವಾಲಯ ನಿರ್ಮಾಣಕ್ಕೆ ಸಹಕಾರ ನೀಡಿ ಭವಿಷ್ಯದ ಪ್ರಜೆಗಳಿಗೆ ಭಾರತೀಯ ಸಂಸ್ಕೃತಿ ಜೀವತುಂಬಿದವರು. ಆ ಹಿನ್ನೆಲೆ ಯಲ್ಲಿ ಕೇಂದ್ರ ಸರ್ಕಾರ ಅಹಲ್ಯರ ಹೆಸರಿನಲ್ಲಿ ವಿಮಾನ ನಿಲ್ದಾಣ, ವಿಶ್ವವಿದ್ಯಾಲಯ ಮತ್ತು ಗ್ರಂಥಾಲಯಗ ಳನ್ನು ನಿರ್ಮಿಸಿ ಗೌರವಿಸಿದೆ ಎಂದರು.

    ಕೇಂದ್ರದ ನರೇಂದ್ರ ಮೋದಿ ಸರ್ಕಾರ ಸ್ತ್ರೀಸಮಾಜ ಶೈಕ್ಷಣಿಕ, ಆರ್ಥಿಕ ಪ್ರಗತಿ ಹೊಂದಲು ಸ್ತ್ರೀಶಕ್ತಿ ಸಂಜೀವಿನಿಯಡಿ ಸ್ವಾವಲಂಬಿ ಉತ್ಪನ್ನಗಳಿಗೆ ಒತ್ತು ನೀಡಿದ ಪರಿಣಾಮ ಸಂಜೀವಿನಿ ಒಕ್ಕೂಟದಿಂದ ೫೦೦ ಕೋಟಿ ವಹಿವಾಟು ನಡೆಸಿ ಸಾಧನೆ ಮಾಡಿವೆ. ಆದರೆ ರಾಜ್ಯಸರ್ಕಾರ ಶಕ್ತಿ ಯೋಜನೆಯಿಂದ ಮಹಿಳೆಯರು ಬಸ್‌ಗಳಲ್ಲಿ ಗಲಾಟೆ ಮಾಡಿಕೊಳ್ಳುವ ಸ್ಥಿತಿ ನಿರ್ಮಿಸಿದೆ ಎಂದು ಆರೋಫಿಸಿದರು.

    ಇಂದಿಗೂ ಕೆಲವು ಜಿಲ್ಲೆಗಳಲ್ಲಿ ಸರ್ಕಾರಿ ಬಸ್‌ಗಳು ಮಹಿಳಾ ಉದ್ಯೋಗಿಗಳು, ಕುಟುಂಬಸ್ಥರು ಕಂಡು ಬಂದರೆ ನಿಲುಗಡೆಗೊಳಿಸುತ್ತಿಲ್ಲ. ಮಹಾನಗರ ಬೆಂಗಳೂರಿನಲ್ಲಿ ೧೦ ನಿಮಿಷಕ್ಕೊಮ್ಮೆ ಬರುವ ಬಸ್‌ಗಳು ೪೦ ನಿಮಿಷ ತಡವಾಗುತ್ತಿವೆ ಎಂದ ಅವರು ಕೇಂದ್ರವು ಹೆಣ್ಣುಮಕ್ಕಳು ಸ್ವಬದುಕಿಗೆ ಆಧಾರವಾದರೆ, ರಾಜ್ಯಸರ್ಕಾ ರ ಮಹಿಳೆಯರಿಗೆ ಗ್ಯಾರಂಟಿಗಳಿಂದ ಪರಸ್ಪರ ಬಾಂಧವ್ಯ ಮುರಿಯುತ್ತಿದೆ ಎಂದರು.

    ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಜಸಂತಾ ಅನಿಲ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಅಹಲ್ಯರವರು ಕಡಿಮೆ ವಯಸ್ಸಿನಲ್ಲೇ ಗಂಡನನ್ನು ಕಳೆದುಕೊಂಡರೂ ದೃತಿಗೆಡದೇ ರಾಜ್ಯದ ಆಳ್ವಿಕೆಯನ್ನು ಚಾಕ್ಯತೆಯಿಂದ ನಿರ್ವಹಿಸಿ ಮಹಿಳಾ ಲೋಕಕ್ಕೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

    ಆ ನಿಟ್ಟಿನಲ್ಲಿ ಜಿಲ್ಲಾ ಗ್ರಾಮಾಂತರ ಮಂಡಲ, ಶಕ್ತಿ ಕೇಂದ್ರಗಳಲ್ಲಿ ಅಹಲ್ಯ ಬಾಯಿ ಜಯಂತಿಗಳನ್ನು ಆಚ ರಿಸುವ ಮೂಲಕ ಇತಿಹಾಸದ ಪುಟಗಳನ್ನು ತೆರೆದು ಜನತೆಗೆ ಮುಟ್ಟಿಸುವ ಕೆಲಸ ಮಾಡಬೇಕು. ಅಹಲ್ಯರ ಬದುಕಿನ ಸಂಕಷ್ಟಗಳ ನಡುವೆಯು ಪ್ರಜೆಗಳ ರಕ್ಷಣೆ, ಸ್ವಾವಲಂಬಿ ಜೀವನಕ್ಕೆ ಹೆಜ್ಜೆಯಿಟ್ಟ ವಿವರಗಳನ್ನು ಮುಂ ದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದರು.

    ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ ರಾಷ್ಟ್ರದಲ್ಲಿ ಮಹಾಪುರುಷರು ಸಾಧನೆಗೈ ಯಲು ತಾಯಿ, ಮಡದಿ ಬೆನ್ನಿಂದ ಶಕ್ತಿಯಾಗಿ ನಿಂತಿರಲು ಸಾಧ್ಯವಾಗಿದೆ. ಹೀಗಾಗಿ ನಾರಿಯ ಶಕ್ತಿ ಅತ್ಯಂತ ಪರಿಣಾಮಕಾರಿಯಾಗಿದೆ. ಅದೇ ರೀತಿ ಅಹಲ್ಯರ ಜೀವನಚರಿತ್ರೆಗಳನ್ನು ಪಾಲಕರು ಸೇರಿದಂತೆ ಮಕ್ಕಳು ಕೆಲ ಕಾಲ ಓದಬೇಕು ಎಂದು ತಿಳಿಸಿದರು.

    ಇದೇ ವೇಳೆ ವಾಗ್ಮಿ ಸುಮಾ ಪ್ರಸಾದ್ ಅವರು ಅಹಲ್ಯ ಬಾಯಿ ಹೊಳ್ಕರ್ ಜೀವನ ಕುರಿತು ವಿಶೇಷ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಭಾಜಪ ರಾಜ್ಯ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶಿಲ್ಪ ಸುವರ್ಣ, ಕಾರ್ಯಕಾರಿಣಿ ಸದಸ್ಯೆ ವಿಜಯಲಕ್ಷ್ಮೀ, ಮಹಿಳಾ ಮೋರ್ಚಾ ಜಿಲ್ಲಾ ಪ್ರಭಾರಿ ನಾರಾಯಣ ಗೌಡ, ಜಿಲ್ಲಾ ಉಪಾಧ್ಯಕ್ಷೆ ವೀಣಾಶೆಟ್ಟಿ, ಪ್ರಧಾನ ಕಾರ್ಯದರ್ಶಿಗಳಾದ ಶೃತಿ ರೋಹಿತ್, ರಾಜೇಶ್ವರಿ ರಾಜಶೇ ಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಡಾ.ನರೇಂದ್ರ, ಪುಣ್ಯಪಾಲ್, ಬೆಳವಾಡಿ ರವೀಂದ್ರ, ಸಾಮಾ ಜಿಕ ಜಾಲತಾಣ ಪ್ರಮುಖ್ ಚೈತ್ರಗೌಡ ಮತ್ತಿತರರು ಉಪಸ್ಥಿತರಿದ್ದರು.

    Ahalya’s good governance is a model for society

  • ಪೌರಸೇವಾ ನೌಕರರ ಬೇಡಿಕೆ ಈಡೇರಿಸಿದ ಸರ್ಕಾರ-ಸಂಭ್ರಮಿಸಿದ ಪೌರಸೇವಾ ನೌಕರರು

    ಪೌರಸೇವಾ ನೌಕರರ ಬೇಡಿಕೆ ಈಡೇರಿಸಿದ ಸರ್ಕಾರ-ಸಂಭ್ರಮಿಸಿದ ಪೌರಸೇವಾ ನೌಕರರು

    ಚಿಕ್ಕಮಗಳೂರು: ಕಳೆದ ನಾಲ್ಕು ದಿನಗಳಿಂದ ನಗರಸಭೆ ಆವರಣದಲ್ಲಿ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ನಡೆಸುತ್ತಿದ್ದ ಪೌರಸೇವಾ ನೌಕರರ ಅನಿದಿರ್ಷ್ಟಾವಧಿ ಮುಷ್ಕರ ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಅಂತ್ಯಗೊಳಿಸಿ ಇಂದಿನಿಂದ ಪೌರಕಾರ್ಮಿಕರು ಕರ್ತವ್ಯಕ್ಕೆ ಮರಳಿದ್ದಾರೆ.

    ಇಂದು ಬೆಳಗ್ಗೆ ನಗರಸಭೆ ಆವರಣದಿಂದ ಪೌರಸೇವಾ ನೌಕರರ ಸಂಘದ ನೇತೃತ್ವದಲ್ಲಿ ಮೆರವಣಿಗೆ ಹೊರಟ ಪೌರ ಕಾರ್ಮಿಕರು, ಆಜಾದ್ ವೃತ್ತದವರೆಗೆ ಸಾಗಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.

    ಸಂಘದ ಜಿಲ್ಲಾಧ್ಯಕ್ಷ ಎನ್.ಅಣ್ಣಯ್ಯ ಮಾತನಾಡಿ, ಪೌರ ಕಾರ್ಮಿಕರಿಗೆ ಕೆಜಿಐಡಿ ಮತ್ತು ಜ್ಯೋತಿ ಸಂಜೀವಿನಿ ಸೇರಿದಂತೆ ತಮ್ಮ ಬೇಡಿಕೆಗಳನ್ನು ಬಹುತೇಕ ಈಡೇರಿಸುವುದಾಗಿ ಪೌರಾಡಳಿತ ಸಚಿವರು ಲಿಖಿತ ಪತ್ರದ ಮೂಲಕ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರವನ್ನು ವಾಪಾಸ್ ಪಡೆಯಲಾಗಿದೆ ಎಂದು ಹೇಳಿದರು.

    ನಗರಸಭೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿದ್ದ ನೌಕರರಿಗೆ ನೇರ ಪಾವತಿಯೆಡೆಗೆ ಹಾಗೂ ಹಾಲಿ ನೇರ ಪಾವತಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ನೌಕರರನ್ನು ಕಾಯಂಗೊಳಿಸುವುದಾಗಿ ಲಿಖಿತ ಪತ್ರದ ಮೂಲಕ ಸಚಿವರು ತಿಳಿಸಿದ್ದಾರೆ ಎಂದು ವಿವರಿಸಿದರು.

    ಈಗಾಗಲೇ ಒಟ್ಟು ನಗರಸಭೆಯಲ್ಲಿ ನೇರಪಾವತಿಯಡಿ ೭೦ ನೌಕರರು ಸೇವೆ ಸಲ್ಲಿಸುತ್ತಿದ್ದು, ಅವರನ್ನು ಕೂಡಲೇ ಕಾಯಂಗೊಳಿಸುವಂತೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಆದೇಶ ಮಾಡುವ ಭರವಸೆ ನೀಡಿರುವ ಸಚಿವರು ಹಾಗೂ ಈ ನಮ್ಮ ಹೋರಾಟಕ್ಕೆ ಬೆಂಬಲಿಸಿದ ವಿವಿಧ ಪಕ್ಷ ಸಂಘಟನೆಗಳ ಮುಖಂಡರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

    ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಟಿ. ರವಿ ಮತ್ತು ಎಸ್.ಎಲ್. ಭೋಜೇಗೌಡ ಸೇರಿದಂತೆ ಎಲ್ಲರೂ ಬೆಂಬಲ ವ್ಯಕ್ತಪಡಿಸಿದ್ದಾರೆ. ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಪೌರಾಡಳಿತ ಸಚಿವ ರಹೀಂಖಾನ್‌ರೊಂದಿಗೆ ಮಾತುಕತೆ ನಡೆಸಿ ನಮ್ಮ ಬೇಡಿಕೆಗಳು ಈಡೇರಿಸುವ ಭರವಸೆ ನೀಡಿದ್ದಾರೆ. ಜೊತೆಗೆ ಪೌರಾಯುಕ್ತ ಬಿ.ಸಿ. ಬಸವರಾಜ್ ಅವರು ಪೌರ ಕಾರ್ಮಿಕರನ್ನು ಸ್ವಂತ ಮಕ್ಕಳಂತೆ ಕಾಣುತ್ತ ಮುಷ್ಕರಕ್ಕೆ ಬೆಂಬಲ ನೀಡಿದ್ದರು ಎಂದು ಶ್ಲಾಘಿಸಿದರು.
    ಇಂದಿನಿಂದ ಪೌರ ಕಾರ್ಮಿಕರು ಕರ್ತವ್ಯಕ್ಕೆ ಮರಳಿದ್ದು, ನಾಲ್ಕು ದಿನಗಳಿಂದ ನಗರ ವ್ಯಾಪ್ತಿಯಲ್ಲಿ ರಾಶಿ ಬಿದ್ದಿದ್ದ ಕಸವನ್ನು ಸಂಜೆವರೆಗೂ ಸ್ವಚ್ಚಗೊಳಿಸುವುದಾಗಿ ತಿಳಿಸಿದರು.

    ತಾಲ್ಲೂಕು ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಕುಂಟುತ್ತಾ ಸಾಗುತ್ತಿದ್ದ ಪೌರ ಕಾರ್ಮಿಕರ ಸಂಘಟನೆಗೆ ಎಲ್ಲರ ಬೆಂಬಲ ವ್ಯಕ್ತವಾಗಿ ಪೌರ ನೌಕರರು ಸಾತ್ ನೀಡಿದ್ದರಿಂದ ಮುಷ್ಕರ ನಡೆಸಲು ಚೇತನ ಮೂಡಿ ಪೌರ ನೌಕರರಲ್ಲಿ ಉತ್ಸಾಹ ಮೂಡಿತ್ತು. ಯಶಸ್ವಿಯಾಗಿ ಬೇಡಿಕೆ ಈಡೇರಿರುವುದಕ್ಕೆ ರಾಜ್ಯ ಸಂಘದ ಪದಾಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.

    ಪೌರಸೇವಾ ನೌಕರರ ಬೇಡಿಕೆ ಈಡೇರಿದೆ ಎಂದು ಪೌರಾಡಳಿತ ಸಚಿವರು ಲಿಖಿತ ಪತ್ರದ ಮೂಲಕ ತಿಳಿಸಿರುವುದರಿಂದ ನಮ್ಮ ಕೆಲಸದ ಮೂಲಕ ಸ್ವಚ್ಚವನ್ನು ಮಾಡಿ ನಾಗರೀಕರ ಆರೋಗ್ಯ ಕಾಪಾಡುವಲ್ಲಿ ಶ್ರಮಿಸೋಣ, ಒಗ್ಗಟ್ಟು ಪ್ರದರ್ಶಿಸೋಣ ಎಂದು ಕರೆನೀಡಿದರು.

    ಆರ್.ಓ ಶಿವಾನಂದ್, ಆರೋಗ್ಯ ನಿರೀಕ್ಷಕರಾದ ವೆಂಕಟೇಶ್, ಈಶ್ವರ್, ನಾಗಪ್ಪ, ರಂಗಪ್ಪ, ವಿವೇಕ್, ರಮೇಶ್, ಹೊರಗುತ್ತಿಗೆ ನೌಕರರಾದ ಕೃಷ್ಣ, ಮೂರ್ತಿ, ಪ್ರಸನ್ನ ಇತರರು ಉಪಸ್ಥಿತರಿದ್ದರು.

    Government fulfills demands of civil servants – Civil servants celebrate

  • ಜನೌಷಧಿ ಕೇಂದ್ರ ಸ್ಥಗಿತ ವಿರೋಧಿಸಿ ಬಿಜೆಪಿ ಪ್ರತಿಭಟನೆ

    ಜನೌಷಧಿ ಕೇಂದ್ರ ಸ್ಥಗಿತ ವಿರೋಧಿಸಿ ಬಿಜೆಪಿ ಪ್ರತಿಭಟನೆ

    ಚಿಕ್ಕಮಗಳೂರು: : ಬಡ ರೋಗಿಗಳ ಪಾಲಿಗೆ ವರದಾನವಾಗಿರುವ ಕೇಂದ್ರ ಸರ್ಕಾರದ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಇಂದು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.

    ನಗರದ ಮಲ್ಲೇಗೌಡ ಸಾರ್ವಜನಿಕ ಜಿಲ್ಲಾ ಆಸ್ಪತ್ರೆಯ ಮುಖ್ಯದ್ವಾರದಲ್ಲಿ ಧರಣಿ ನಡೆಸಿದ ಪ್ರತಿಭಟನಾಕಾರರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಮುಖ್ಯಮಂತ್ರಿಗಳು, ಆರೊಗ್ಯ ಸಚಿವರು ಬಡವರ ವಿರೋಧಿ ಧೋರಣೆ ತಳೆದಿದ್ದಾರೆಂದು ಆರೋಪಿಸಿದರಲ್ಲದೆ, ಕೂಡಲೇ ಜನೌಷಧಿ ಕೇಂದ್ರಗಳನ್ನು ತೆರವುಗೊಳಿಸುವ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

    ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ್‌ಶೆಟ್ಟಿ ಮಾತನಾಡಿ, ದೀನ, ದುರ್ಬಲರು, ಬಡವರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ರಿಯಾಯಿತಿ ದರದಲ್ಲಿ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿ ಆಸರೆಯಾಗಿದ್ದನ್ನು ಸಹಿಸದ ರಾಜ್ಯ ಸರ್ಕಾರ ಜನೌಷಧಿ ಕೇಂದ್ರ ಮುಚ್ಚಿಸಿ ಜನರಿಗೆ ಇನ್ನಷ್ಟು ಬರೆ ಎಳೆಯಲು ಮುಂದಾಗಿವೆ ಎಂದು ಆರೋಪಿಸಿದರು.

    ನರೇಂದ್ರ ಮೋದಿ ಜನಪರ ಆಡಳಿತವನ್ನು ಜನರ ಮನಸ್ಸಿನಿಂದ ಅಳಿಸುವ ದುರುದ್ದೇಶದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಹೊಸ ಹೊಸ ಯೋಜನೆಗಳನ್ನು ಹುಡುಕುತ್ತಿದೆ. ಹಾಗೂ ಆಸ್ಪತ್ರೆಗಳಲ್ಲಿ ಅಳವಡಿಸಿರುವ ಕೇಂದ್ರ ಸಕಾರದ ಫ್ಲೆಕ್ಸ್‌ಗಳನ್ನು ತೆಗೆದು ಹಾಕುವುದು ಸರ್ಕಾರದ ಹುನ್ನಾರ. ಸರ್ಕಾರಿ ಕಚೇರಿಗಳು ಸಾರ್ವಜನಿಕ ಆಸ್ತಿ. ಕಾಂಗ್ರೆಸ್ಸಿಗೆ ಬರೆದುಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ದೇಶದ ಜನರ ಸಮಯಕ್ಕೆ ಆರೋಗ್ಯ ಸುಧಾರಿಸಲು ಮೋದಿ ಸರ್ಕಾರ ಕಡಿಮೆ ವೆಚ್ಚದಲ್ಲಿ ಔಷಧಿ, ಶಸ್ತ್ರಚಿಕಿತ್ಸೆಗಾಗಿ ಪ್ರತಿಯೊಬ್ಬರಿಗೆ ಮೂರ್‍ನಾಲ್ಕು ಲಕ್ಷ ರೂ. ಆರ್ಥಿಕ ಸಹಾಯ ನೀಡಿದೆ. ಆದರೆ ರಾಜ್ಯದಲ್ಲಿ ಪಹಣಿ, ಹಾಲು, ಪೆಟ್ರೋಲ್ ಸೇರಿದಂತೆ ಇದೀಗ ರೋಗಿಗಳನ್ನು ಬಿಡದೇ ಖಾಸಗೀ ಮೆಡಿಕಲ್ ಶಾಪ್‌ಗಳಲ್ಲಿ ಖರೀದಿಸಬೇಕೆಂದು ರಾಜ್ಯ ಸರ್ಕಾರ ನಿರ್ಣಯಿಸಿ ಹಗಲು ದರೋಡೆ ಮಾಡುತ್ತಿದೆ ಎಂದರು.

    ರಾಜ್ಯಸರ್ಕಾರ ಜನಸಾಮಾನ್ಯರ ಕಾಳಜಿಯಿದ್ದಲ್ಲಿ ಆರನೇ ಗ್ಯಾರಂಟಿಯಾಗಿ ಉಚಿತ ಶಿಕ್ಷಣ, ಆರೋಗ್ಯ ಸೇವೆಯನ್ನು ಒದಗಿಸಲಿ. ಜೊತೆಗೆ ಪ್ರತಿ ಖಾಸಗೀ ಆಸ್ಪತ್ರೆಗಳಲ್ಲಿ ಬಡವರಿಗೆ ಉಚಿತ ಚಿಕಿತ್ಸೆ ನೀಡುವುದಾಗಿ ಘೋಷಿಸಲಿ ಇದನ್ನು ಮಾಡದೇ ಪ್ರತಿದಿನ ರಾಜ್ಯದ ಜನ ತಲೆ ತಗ್ಗಿಸುವಂತಹ ಕೆಲಸಗಳನ್ನೇ ಮಾಡುತ್ತಿದೆ ಎಂದು ಆರೋಪಿಸಿದರು.

    ಕೂಡಲೇ ರಾಜ್ಯಸರ್ಕಾರ ಕೇಂದ್ರ ಸರ್ಕಾರದ ಜನೌಷಧಿ ಕೇಂದ್ರಗಳನ್ನು ಮುಚ್ಚಿಸಲು ಕೈಗೊಂಡಿರುವ ನಿರ್ಣಯವನ್ನು ಹಿಂಪಡೆಯದಿದ್ದಲ್ಲಿ ರಾಜ್ಯಾದ್ಯಂತ ಭಾಜಪ ಉಗ್ರವಾದ ಪ್ರತಿಭಟನೆ ನಡೆಸುತ್ತದೆ. ಜೊತೆಗೆ ಪ್ರಧಾನಿ ಮೋದಿಯವರ ಫ್ಲೆಕ್ಸ್‌ಗಳ ತೆರವಿಗೆ ಮುಂದಾದರೆ ರಾಜ್ಯಸರ್ಕಾರ ಫ್ಲೆಕ್ಸ್‌ಗಳು ಬೆಂಕಿಗಾಹುತಿ ಯಾಗಲಿದೆ ಎಂದು ಎಚ್ಚರಿಸಿದರು.

    ನಗರಸಭೆ ಮಾಜಿ ಅಧ್ಯಕ್ಷ ಪ್ರೇಮ್‌ಕುಮಾರ್ ಮಾತನಾಡಿ ಗ್ಯಾರಂಟಿ ಹೆಸರಿನಲ್ಲಿ ರಾಜ್ಯಸರ್ಕಾರ ಔಷಧಿ ದಂಧೆಗೆ ಮುಂದಾಗಿದೆ. ಬಡವರು, ಮಧ್ಯಮವರ್ಗದವರ ಅನುಕೂಲಕ್ಕೆ ತೆರೆದಿರುವ ಜನೌಷಧಿ ಕೇಂದ್ರ ಗಳಲ್ಲಿ ಸುಮಾರು ೧೫೦೦ಕ್ಕೂ ಹೆಚ್ಚು ಔಷಧಿಗಳು ಕಡಿಮೆ ವೆಚ್ಚದಲ್ಲಿ ರೋಗಿಗಳಿಗೆ ದೊರಕುತ್ತಿರುವುದನ್ನು ಮುಚ್ಚಿಸಲು ಹೊರಟಿರುವುದು ನ್ಯಾಯಸಮಂಜಸವೇ ಎಂದು ಪ್ರಶ್ನಿಸಿದರು.

    ಭಾರತ ಸರ್ಕಾರ ಜಗತ್ತಿನ ಬಹುಪಾಲು ರಾಷ್ಟ್ರಗಳಿಗೆ ಔಷಧಿಗಳನ್ನು ಪೂರೈಸಿ ಸ್ಪಂದಿಸುತ್ತಿದೆ. ಆದರೆ ರಾಜ್ಯದಲ್ಲಿ ತದ್ವಿರುದ್ಧವಾಗಿ ಕಾಂಗ್ರೆಸ್ ಸರ್ಕಾರ ಜನೌಷಧಿ ಕೇಂದ್ರಗಳನ್ನು ಮುಚ್ಚಿಸಲು ನಿರ್ಧರಿಸಿರುವು ಸು ಸೂಕ್ತವಲ್ಲ. ಈಗಾಗಲೇ ರಾಜ್ಯದ ಜನತೆ ಬೆಲೆಏರಿಕೆಯಿಂದ ಕಂಗಾಲಾಗಿದ್ದು ಇದೀಗ ರೋಗಿಯ ಮೇಲೆ ಹೊರೆ ಹೆಚ್ಚಿಸಲು ಮುಂದಾಗುತ್ತಿದೆ ಎಂದರು.

    ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಸಿ.ಕಲ್ಮರುಡಪ್ಪ ಮಾತನಾಡಿ ಕಡಿಮೆ ದರದಲ್ಲಿ ಲಭ್ಯವಾಗುತ್ತಿದ್ದ ಜನೌಷಧಿ ಕೇಂದ್ರಗಳಿಗೆ ಕೊಡಲಿಪೆಟ್ಟು ಹಾಕುತ್ತಿರುವ ರಾಜ್ಯಸರ್ಕಾರ ನಡೆ ಖಂಡನೀಯ. ಮೊದಲು ಸರ್ಕಾರಿ ಆಸ್ಪತ್ರೆಗಳಲ್ಲಿ ಮೆಡಿಕಲ್ ಸೌಲಭ್ಯ ಸಂಪೂರ್ಣವಾಗಿದೆಯೇ ಎಂದು ತಿಳಿದು ಸರಿಪಡಿಸ ಬೇಕೇಹೊರತು ಜನೌಷಧಿ ಕೇಂದ್ರಗಳನ್ನು ತೆರವಿಗೆ ಮುಂದಾಗಿರುವುದು ನಾಚಿಕೇಡಿತನ ಸಂಗತಿ ಎಂದರು.

    ಬಿಜೆಪಿ ನಗರಾಧ್ಯಕ್ಷ ಕೆ.ಎಸ್.ಪುಷ್ಪರಾಜ್ ಮಾತನಾಡಿ ಖಾಸಗಿ ಮೆಡಿಕಲ್ ಶಾಪ್‌ಗಳಲ್ಲಿ ೧೦೦ ರೂ.ಗಳ ಬೆಲೆಯಲ್ಲಿ ಲಭ್ಯವಾಗುವ ಔಷಧಗಳು, ಜನೌಷಧಿ ಕೇಂದ್ರದಲ್ಲಿ ಕೇವಲ ೧೦ ರೂ.ಗೆ ಸಿಗುತ್ತಿದೆ. ಹೀಗಾಗಿ ಉತ್ತಮ ಔಷಧಿ ಕೇಂದ್ರಗಳನ್ನು ತೆರವಿಗೆ ನೇರವಾಗಿ ನಮ್ಮ ವಿರೋಧವಿದೆ ಎಂದರು.

    ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್, ರಾಜ್ಯ ಎಸ್ಸಿ ಮೋರ್ಚಾ ಕಾರ್ಯದರ್ಶಿ ಸೀತಾರಾಮ ಭರಣ್ಯ, ಓಬಿಸಿ ರಾಜ್ಯ ಕಾರ್ಯದರ್ಶಿ ಬಿ.ರಾಜಪ್ಪ, ತಾ.ಪಂ. ಮಾಜಿ ಅಧ್ಯಕ್ಷ ನೆಟ್ಟೆಕೆರೆಹಳ್ಳಿ ಜಯಣ್ಣ, ನಗರಸಭಾ ಸದಸ್ಯ ಕಾಯಿ ರವಿ, ವಕ್ತಾರ ಹಿರೇಮಗಳೂರು ಪುಟ್ಟಸ್ವಾಮಿ, ಮುಖಂಡರುಗಳಾದ ಡಾ.ನರೇಂದ್ರ, ಸಚ್ಚಿನ್‌ಗೌಡ, ಹೆಚ್.ಕೆ.ಕೇಶವಮೂರ್ತಿ, ಬಸವರಾಜ್, ಮೋಹನ್, ರೇವನಾಥ್, ಎಸ್‌ಡಿಎಂ ಮಂಜು ಮತ್ತಿತರರು ಪ್ರತಿಭನೆಯಲ್ಲಿ ಭಾಗವಹಿಸಿದ್ದರು.

    BJP protests against the closure of Janaushadhi Kendra

  • ರಾಜ್ಯದಲ್ಲಿ 100 ಕಾಲುಸಂಕ ನಿರ್ಮಾಣಕ್ಕೆ ನೀಲಿ ನಕ್ಷೆ

    ರಾಜ್ಯದಲ್ಲಿ 100 ಕಾಲುಸಂಕ ನಿರ್ಮಾಣಕ್ಕೆ ನೀಲಿ ನಕ್ಷೆ

    ಚಿಕ್ಕಮಗಳೂರು: ರಾಜ್ಯದಲ್ಲಿ ಪ್ರತೀವರ್ಷ ೧೦೦ ಕಾಲುಸಂಕ ನಿರ್ಮಿಸಲು ನೀಲಿ ನಕ್ಷೆ ತಯಾರಿಸಲಾಗಿದ್ದು, ಈಗಾಗಲೇ ೨೦ ಕೋಟಿ ರೂ. ಅನುದಾನದಲ್ಲಿ ೨೦ ಕಡೆ ಕಾಲುಸಂಕ ನಿರ್ಮಿಸುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಮಾನ್ಯ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದರು.

    ಇಂದು ಮೂಡಿಗೆರೆ ತಾಲ್ಲೂಕಿನ ಹಳಸೆ ಗ್ರಾಮದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಾಜ್ಯದ ೩೬ ಶಾಸಕರ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಲುಸಂಕ ನಿರ್ಮಿಸಲು ಪ್ರಾಥಮಿಕ ಹಂತದಲ್ಲಿ ತಲಾ ಒಂದು ಕೋಟಿ ರೂ. ಅನುದಾನ ಒದಗಿಸಲಾಗಿದೆ. ಮಲೆನಾಡು ಭಾಗದಲ್ಲಿ ಮುಂಗಾರು ಪೂರ್ವ ಮಳೆಯಿಂದ ರಸ್ತೆ, ಸೇತುವೆ, ರೈತರ ಬೆಳೆ ಮತ್ತಿತರ ಆಸ್ತಿಪಾಸ್ತಿಗಳಿಗೆ ಹಾನಿಯಾದ ಬಗ್ಗೆ ಅಧಿಕಾರಿಗಳು ಸಮೀಕ್ಷೆ ನಡೆಸುತ್ತಿದ್ದಾರೆ. ಈ ಸಂಬಂಧದ ವರದಿ ಬಂದ ಕೂಡಲೆ ಪರಿಹಾರ ಕಾರ್ಯ ಕೈಗೊಳ್ಳಲಾಗುವುದು ಎಂದರು.

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದು, ಅತಿವೃಷ್ಟಿ ಪರಿಸ್ಥಿತಿ ನಿಭಾಯಿಸಲು ಸೂಕ್ತ ಸೂಚನೆ ನೀಡಲಿದ್ದಾರೆ. ೨೦೧೯ ರಿಂದ ನಿರಂತರವಾಗಿ ಅತಿವೃಷ್ಟಿಯುಂಟಾಗಿ ಸೇತುವೆ, ರಸ್ತೆಗಳಿಗೆ ಹಾನಿ ಸಂಭವಿಸಿದೆ. ಅಲ್ಲಲ್ಲಿ ಗುಡ್ಡ ಕುಸಿತದಿಂದ ಜಮೀನುಗಳಿಗೆ ಹಾನಿಯಾಗಿದ್ದು, ಅವುಗಳೆಲ್ಲವನ್ನು ಸರಿಪಡಿಸಲಾಗಿದೆ. ಕೆಲವೆಡೆ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.

    ಮೂಡಿಗೆರೆ-ಸಕಲೇಶಪುರ ನಡುವಿನ ೪೦ ಕಿ.ಮೀ. ರಸ್ತೆ ಹಾನಿಗೊಳಗಾಗಿದ್ದು, ಈ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಕ್ರಿಯಾಯೋಜನೆ ತಯಾರಿಸಲಿದ್ದಾರೆ. ಕ್ರಿಯಾಯೋಜನೆ ಸಿದ್ಧವಾದ ಕೂಡಲೇ ಅಗತ್ಯವಾದ ಅನುದಾನ ಒದಗಿಸಲಾಗುವುದು. ೨೦೧೪ ರಲ್ಲಿ ಲೋಕೋಪಯೋಗಿ ಸಚಿವರಾಗಿದ್ದ ಡಾ.ಎಚ್.ಸಿ.ಮಹದೇವಪ್ಪ ಅವರು ರಾಜ್ಯದ ವಿವಿಧೆsಡೆ ೪೦ ಸೇತುವೆ ನಿರ್ಮಿಸಲು ಮಂಜೂರಾತಿ ನೀಡಿದ್ದರು. ಅದರ ನಿರ್ಮಾಣ ಕಾಮಗಾರಿ ಹೊಣೆಯನ್ನು ಕೆಆರ್‌ಡಿಸಿಎಲ್ ಸಂಸ್ಥೆಗೆ ವಹಿಸಲಾಗಿತ್ತು.

    ಅದರಲ್ಲಿ ೨೦ ಸೇತುವೆ ನಿರ್ಮಾಣ ಕಾರ್ಯ ಈಗಾಗಲೇ ಪೂರ್ಣಗೊಂಡಿದ್ದು, ಉಳಿದ ೨೦ ಕಡೆ ಸೇತುವೆ ಕಾಮಗಾರಿ ಪ್ರಗತಿಯಲ್ಲಿದೆ. ಮೂಡಿಗೆರೆ-ಸಕಲೇಶಪುರ ರಾಜ್ಯ ಹೆದ್ದಾರಿಯ ಬೆಟ್ಟದಮನೆ ಗ್ರಾಮದಲ್ಲಿ ಹೇಮಾವತಿ ನದಿಗೆ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ಆರಂಭವಾಗಿ ೧೧ ವರ್ಷವಾದರೂ ತಾಂತ್ರಿಕ ಅಡಚಣೆಯಿಂದಾಗಿ ಪೂಣಗೊಂಡಿಲ್ಲ. ಈ ನಡುವೆ ಕೆಆರ್‌ಡಿಸಿಎಲ್ ಸಂಸ್ಥೆಯನ್ನು ಲೋಕೋಪಯೋಗಿ ಇಲಾಖೆಗೆ ಸೇರ್ಪಡೆಗೊಳಿಸಲು ಚಿಂತನೆ ನಡೆಸಲಾಗಿದೆ ಎಂದು ಹೇಳಿದರು.

    ಕಾಡಾನೆ ಮತ್ತಿತರ ವನ್ಯಪ್ರಾಣಿಗಳ ಉಪಟಳ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಅರಣ್ಯದ ಸುತ್ತ ವಾರ್ಷಿಕ ೧೦೦ ಕಿ.ಮೀ. ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗುವುದು. ಈಗಾಗಲೆ ಗುಂಡ್ಲುಪೇಟೆ, ಹಾಸನ ಮತ್ತಿತರ ಕಡೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಕಾರ್ಯ ನಡೆದಿದೆ. ಜಿಲ್ಲೆಯ ಕಾಡಾನೆ ಇರುವ ಪ್ರದೇಶದ ಅರಣ್ಯ ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ ನೀಲಿ ನಕ್ಷೆ ತಯಾರಿಸಲಾಗಿದೆ. ಕಾಡಾನೆಗಳಿಗೆ ಅರಣ್ಯದಲ್ಲಿ ನೀರು ಮತ್ತು ಆಹಾರವಿಲ್ಲದೆ ಕಂಗಾಲಾಗಿ ನಾಡಿಗೆ ಆಹಾರ, ನೀರು ಹುಡುಕಿಕೊಂಡು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಆನೆಪಥ ನಿರ್ಮಿಸಿ ನೀರು, ಆಹಾರ ಸೇರಿದಂತೆ ಎಲ್ಲ ವ್ಯವಸ್ಥೆ ಒದಗಿಸಿ ಕಾಡಾನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಲಾಗುವುದು ಎಂದು ತಿಳಿಸಿದರು.

    ಹಾಸನ ಸಂಸದ ಶ್ರೇಯಸ್ ಪಟೇಲ್, ಶಾಸಕರಾದ ಟಿ.ಡಿ.ರಾಜೇಗೌಡ, ಎಚ್.ಡಿ.ತಮ್ಮಯ್ಯ, ನಯನ ಮೋಟಮ್ಮ, ಚಿತ್ರದುರ್ಗದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ್ ಅಮಟೆ ಮತ್ತಿತರರು ಗೋಷ್ಠಿಯಲ್ಲಿದ್ದರು.

    ಮೂಡಿಗೆರೆಗೆ ಆಗಮಿಸಿದ ಸಚಿವರು, ಶಿಥಿಲಗೊಂಡಿರುವ ದೇವವೃಂದ-ಜಪಾವತಿ ಸೇತುವೆಯನ್ನು ವೀಕ್ಷಿಸಿದರು. ರಾತ್ರಿ ಮೂಡಿಗೆರೆಯಲ್ಲಿ ವಾಸ್ತವ್ಯ ಹೂಡಿದ್ದು, ಇಂದು ಬೆಳಿಗ್ಗೆ ಮಳೆಹಾನಿಯಾಗಿರುವ ರಸ್ತೆಗಳನ್ನು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ವೀಕ್ಷಿಸಿದರು.

    ಈ ಸಂದರ್ಭದಲ್ಲಿ ಶಾಸಕರಾದ ಟಿ.ಡಿ.ರಾಜೇಗೌಡ, ಎಚ್.ಡಿ.ತಮ್ಮಯ್ಯ, ನಯನ ಮೋಟಮ್ಮ, ಚಿತ್ರದುರ್ಗದ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಸಚಿವ ಬಿ.ಬಿ.ನಿಂಗಯ್ಯ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಶ್ರೀಧರ್ ಹಾಜರಿದ್ದರು.

    Blueprint for construction of 100-kilometer bridge in the state

  • ಪೌರನೌಕರರು ಅರ್ನಿಷ್ಟಾವಧಿ ಮುಷ್ಕರಕ್ಕೆ ಕಸದರಾಶಿಯಾದ ಕಾಪಿನಾಡು

    ಪೌರನೌಕರರು ಅರ್ನಿಷ್ಟಾವಧಿ ಮುಷ್ಕರಕ್ಕೆ ಕಸದರಾಶಿಯಾದ ಕಾಪಿನಾಡು

    ಚಿಕ್ಕಮಗಳೂರು: ಉದ್ಯೋಗ ಕಾಯಂ ಸೇರಿದಂತೆ ವಿವಿಧ ಬೇಡಿಕೆ ಮುಂದಿಟ್ಟು ಹೊರಗುತ್ತಿಗೆ ಪೌರನೌಕರರು ನಡೆಸುತ್ತಿರುವ ಅರ್ನಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ನಗರವೆಲ್ಲ ಗಬ್ಬೆದ್ದು ಕೊಳಕಾಗುತ್ತಿದೆ.

    ಸಂತೆ ಮೈದಾನ, ಎಪಿಎಂಸಿ ಯಾರ್ಡ್, ಮೀನು ಮಾರುಕಟ್ಟೆ, ದಿನನಿತ್ಯ ಕಸ ಸಂಗ್ರಹ ಮಾಡುತ್ತಿದ್ದ ಕಸ ಸಂಗ್ರಹ ಪಾಯಿಂಟ್‌ಗಳಲ್ಲಿ ರಾಶಿರಾಶಿ ಕಸ ಬಿದ್ದಿದ್ದು, ಜಿಲ್ಲಾ ಶಕ್ತಿ ಕೇಂದ್ರವಾದ ಜಿಲ್ಲಾಧಿಕಾರಿಗಳ ಕಚೇರಿ ಆವರಣವನ್ನು ಎರಡು ದಿನದಿಂದ ಸ್ವಚ್ಚಗೊಳಿಸದ ಹಿನ್ನೆಲೆಯಲ್ಲಿ ಕಸ ಕಡ್ಡಿಯಿಂದ ಕಚೇರಿ ಪಾಳುಬಿದ್ದ ಬಂಗಲೆಯಂತೆ ಕಾಣುತ್ತಿದೆ.

    ನೀರುಗಂಟಿಗಳ ಹೊರತುಪಡಿಸಿ ಉಳಿದಂತೆ ಕಸ ಗುಡಿಸುವವರು, ಕಸ ಲೋಡ್ ಮಾಡುವವರು ಸೇರಿದಂತೆ ಹೊರಗುತ್ತಿಗೆ ನೌಕರರೆಲ್ಲರೂ ಮುಷ್ಕರದಲ್ಲಿ ಪಾಲ್ಗೊಂಡಿರುವುದರಿಂದ ನಗರ ಸ್ವಚ್ಛತೆ ಮಾಡುವವರಿಲ್ಲದೆ ಇಡೀ ನಗರ ಸ್ಮಶಾನ ಸದೃಶ್ಯವಾಗಿದೆ.

    ಎಲ್ಲೆಂದರಲ್ಲಿ ಕಸದ ರಾಶಿ, ರಾಶಿ ತುಂಬಾ ಹಂದಿ, ನಾಯಿಗಳ ಹಿಂಡು, ಜಾನುವಾರುಗಳು ಪ್ಲಾಸ್ಟಿಕ್ ಮತ್ತಿತರೆ ವಸ್ತುಗಳನ್ನು ಮೆಲ್ಲುತ್ತಿರುವ ದೃಶ್ಯ ಕಾಣಸಿಗುತ್ತಿದೆ. ನಗರದ ಸಂತೆ ಮಾಳದಲ್ಲಿ ಸಂತೆ ನಂತರ ವ್ಯಾಪಾರಿಗಳು ಬಿಟ್ಟುಹೋದ ತರಕಾರಿ ಗುಡ್ಡೆಗಳು, ಟೊಮೆಟೋ ಮತ್ತಿತರೆ ತ್ಯಾಜ್ಯಗಳು ಸಂತೆ ಆವರಣದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದು ಸುತ್ತುಮುತ್ತಲು ಇರುವ ಜನವಸತಿ ಪ್ರದೇಶದ ಜನ ಮೂಗು ಮುಚ್ಚಿ ತಿರುಗುವಂತಾಗಿದೆ.

    ಮಾರ್ಕೆಟ್ ರಸ್ತೆ ಮೀನು ಮಾರುಕಟ್ಟೆಯಂತೂ ಗಬ್ಬೆದ್ದು ನಾರುತ್ತಿದೆ. ನಗರದ ಹೃದಯ ಭಾಗವಾದ ತೊಗರಿಹಂಕಲ್ ವೃತ್ತದಲ್ಲಿ ಕಸದ ರಾಶಿ ಪ್ರಯಾಣಿಕರು ಹಾಗೂ ಪ್ರವಾಸಿಗರನ್ನು ಸ್ವಾಗತಿಸುತ್ತಿದೆ.

    ವಿಧಾನ ಪರಿಷತ್ ಮಾಜಿ ಶಾಸಕಿ ಗಾಯತ್ರಿ ಶಾಂತೇಗೌಡ ಅವರ ಮನೆ ಆವರಣದಲ್ಲಿ ಕಸದ ರಾಶಿ ಬಿದ್ದಿದೆ. ಇದಲ್ಲದೆ ನಗರದಲ್ಲಿ ದಿನನಿತ್ಯ ಕಸ ಸಂಗ್ರಹಿಸಿ ನಂತರ ಎತ್ತುವಳಿ ಮಾಡುತ್ತಿದ್ದ ಕಸದ ಪಾಯಿಂಟ್‌ಗಳಲ್ಲಿ ಕಸ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ.

    ಒಟ್ಟಾರೆ ಒಂದು ದಿನ ಪೌರನೌಕರರು ಕೆಲಸ ಸ್ಥಗಿತಗೊಳಿಸಿದರೆ ಸ್ವಚ್ಛತೆಯ ಪಾಡು ಏನಾಗುತ್ತದೆ ಎಂಬುದು ಸಾರ್ವಜನಿಕರಿಗೆ ನಿತ್ಯ ದರ್ಶನವಾಗುತ್ತಿದೆ.
    ಪೌರನೌಕರರ ನ್ಯಾಯಯುತ ಬೇಡಿಕೆಗಳನ್ನು ಸರಕಾರ ಶೀಘ್ರ ಇತ್ಯರ್ಥಪಡಿಸಿ ಅವರನ್ನು ಕರ್ತವ್ಯಕ್ಕೆ ಮರಳುವಂತೆ ಮಾಡಬೇಕು ಎಂಬುದು ನಗರವಾಸಿಗಳು, ಸಾರ್ವಜನಿಕರ ಆಗ್ರಹವಾಗಿದೆ.

    Coffee country turned into a garbage dump for civic employees on indefinite strike

  • ವೃದ್ಧಿ ಸಹಕಾರ ಸಂಘ ಸಾರ್ವಜನಿಕರ ಆರ್ಥಿಕ ಪ್ರಗತಿಗೆ ಸಹಕರಿಸಲಿ

    ವೃದ್ಧಿ ಸಹಕಾರ ಸಂಘ ಸಾರ್ವಜನಿಕರ ಆರ್ಥಿಕ ಪ್ರಗತಿಗೆ ಸಹಕರಿಸಲಿ

    ಚಿಕ್ಕಮಗಳೂರು: ನಗರದಲ್ಲಿ ನೂತನವಾಗಿ ಆರಂಭವಾಗಿರುವ ವೃದ್ಧಿ ಸೌಹಾರ್ದ ಸಹಕಾರಿ ಸಂಘ ಯಶಸ್ವಿಯಾಗಿ ನಡೆಯುವ ಮೂಲಕ ಸಾರ್ವಜನಿಕರಿಗೆ ಹಾಗೂ ಷೇರುದಾರರಿಗೆ ಸಾಲಸೌಲಭ್ಯ ನೀಡಿ ಆರ್ಥಿಕ ಪ್ರಗತಿಗೆ ಸಹಕರಿಸಲಿ ಎಂದು ಮಾಜಿ ಶಾಸಕ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್. ಸುರೇಶ್ ಶುಭ ಹಾರೈಸಿದರು.

    ಅವರು ಇಂದು ವೃದ್ಧಿ ಸೌಹಾರ್ದ ಸಹಕಾರಿ ಸಂಘವನ್ನು ಉದ್ಘಾಟಿಸಿ ಮಾತನಾಡಿದರು.ಆಡಳಿತ ಮಂಡಳಿಯಲ್ಲಿ ಹೆಚ್ಚು ಯುವಕರೇ ಇರುವುದರಿಂದ ಹಾಗೂ ಸಿಇಓ ಜವಾಬ್ದಾರಿ ಬಹಾಳ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಸೌಹಾರ್ದ ಸಹಕಾರ ಸಂಘ ಚನ್ನಾಗಿ ನಡೆಯುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಬಿಜೆಪಿ ಅಧ್ಯಕ್ಷ ಎಂ.ಆರ್. ದೇವರಾಜ್ ಶೆಟ್ಟಿ ಮಾತನಾಡಿ, ಚಿಕ್ಕಮಗಳೂರು ನಗರದ ಜನತೆ ಹಾಗೂ ಸುತ್ತಮುತ್ತಲ ಸಾರ್ವಜನಿಕರಿಗೆ ಅನುಕೂಲವಾಗುವಂತೆ ವೃದ್ಧಿ ಸೌಹಾರ್ದ ಸಹಕಾರ ಸಂಘವನ್ನು ಸ್ಥಾಪನೆ ಮಾಡಿದ್ದಾರೆಂದು ಶುಭ ಹಾರೈಸಿದರು.

    ಈಗಾಗಲೇ ಬಹಳಷ್ಟು ಜನ ಅವರವರ ಅನುಕೂಲಕ್ಕೆ ತಕ್ಕಂತೆ ಹಣಕಾಸಿನ ನೆರವು ಪಡೆಯುತ್ತಾರೆ. ಮೈಕ್ರೋಫೈನಾನ್ಸ್ ಮೂಲಕ ಆರ್ಥಿಕ ಸಹಾಯ ಪಡೆದುಕೊಳ್ಳುತ್ತಾರೆ. ಆ ದೃಷ್ಟಿಯಲ್ಲಿ ಈ ಸಹಕಾರ ಸಂಘ ಲಾಭದಾಯಕವಾಗಿ ನಡೆಯಲಿ ಎಂದು ಹೇಳಿದರು.

    ಪಲ್ಲವಿ ಸಿ.ಟಿ. ರವಿ ಮಾತನಾಡಿ. ಹೆಚ್ಚು ಗ್ರಾಹಕರು ಠೇವಣಿ ಇಟ್ಟು ಸಹಕಾರ ಸಂಘಗಳ ಬೆಳವಣಿಗೆಗೆ ಕಾರಣರಾದಾಗ ಹೆಸರೇ ಹೇಳುವಂತೆ ಈ ಸಹಕಾರ ಸಂಘ ವೃದ್ಧಿಯಾಗುತ್ತದೆ, ತಂಡದ ಒಗ್ಗಟ್ಟು ಚನ್ನಾಗಿದೆ ಎಂದು ಶ್ಲಾಘಿಸಿದರು.

    ವೃದ್ಧಿ ಸಹಕಾರ ಸಂಘದ ಅಧ್ಯಕ್ಷ ಸಿ.ಟಿ.ಜಯವರ್ಧನ್ ಸ್ವಾಗತಿಸಿ ಮಾತನಾಡಿ, ಸಂಘದ ಆಡಳಿತ ಕಚೇರಿ, ಆಡಳಿತ ಮಂಡಳಿಯ ಸಭಾ ಕೊಠಡಿ ಅಧ್ಯಕ್ಷರು-ಉಪಾಧ್ಯಕ್ಷರು ನಿರ್ದೇಶಕರ ಪದಗ್ರಹಣ ಹಾಗೂ ಸನ್ಮಾನ ಸಮಾರಂಭವನ್ನು ಇಂದು ಉದ್ಘಾಟನೆ ನೆರವೇರಿಸಲಾಯಿತು ಎಂದರು.

    ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಮಹೇಶ್, ನಿರ್ದೇಶಕರಾದ ಅಣ್ಣಪ್ಪ ಎಂ ಕುಡಲ್ಕರ್, ಉದಯ್ ಶಂಕರ್ ಭಟ್, ಮನೀಶ್ ಜೈನ್, ಪವನ್‌ಕುಮಾರ್, ಪ್ರಶಾಂತ್ ಕುಮಾರ್, ಚಂದನ್, ವೆಂಕಟೇಶ್, ಅರುಣ್ ಭಾರದ್ವಜ್, ಪ್ರಜ್ಞಾಗಣಪತಿ, ದನ್ಯಾ.ಹೆಚ್.ಗೌಡ, ಸಿಇಓ ಮಂಜುನಾಥ.ಎ ಕುಡಲ್ಕರ್ ಮತ್ತಿತರರು ಇದ್ದರು.

    Vriddhi Sahakari Sangha contributes to the economic progress of the public.

  • ಪತ್ರಕರ್ತರ ಸರ್ವತೋಮುಖ ಅಭಿವೃದ್ದಿಯೇ ಸಂಘದ ಧ್ಯೇಯ

    ಪತ್ರಕರ್ತರ ಸರ್ವತೋಮುಖ ಅಭಿವೃದ್ದಿಯೇ ಸಂಘದ ಧ್ಯೇಯ

    ಚಿಕ್ಕಮಗಳೂರು: ಸದಾ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರ ಸ್ಥಿತಿಗತಿಗಳು ಉತ್ತಮವಾಗಿಲ್ಲ ಹಲವರು ನಿತ್ಯ ಬದುಕನ್ನೆ ಸಂಕಷ್ಠದಲ್ಲಿ ಕಳೆಯುತ್ತಾ ಸಾರ್ವಜನಿಕ ಸೇವೆಯಲ್ಲಿ ತೊಡಗಿ ದ್ದಾರೆ ಪತ್ರಕರ್ತರ ಬೇಡಿಕೆಗಳು ಬಹಳ ವರ್ಷದಿಂದ ನೆನೆಗುದಿಗೆ ಬಿದಿದ್ದು ಇಂತಹ ಪರಿಸ್ಥಿತಿಯಲ್ಲಿ ಕರ್ನಾ ಟಕ ಮಾಧ್ಯಮ ಪರ್ತಕರ್ತರ ಸಂಘವು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ಒಂದಿಷ್ಠು ಸಮ ಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಪರ್ತಕರ್ತರ ಸರ್ವತೋಮುಖ ಅಭಿವೃದ್ದಿಯ ಧ್ಯೆಯವನ್ನು ಹೊಂದಿದೆ ಎಂದು ಕರ್ನಾಟಕ ಮಾಧ್ಯಮ ಪರ್ತಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಜಿ,ಎಂ,ರಾಜಶೇಖರ್ ತಿಳಿಸಿದರು.

    ಬುಧವಾರ ಅಜ್ಜಂಪುರ ತಾಲ್ಲೂಕಿನ ಲಕ್ಕವಳ್ಳಿಯಲ್ಲಿ ನಡೆದ ಕರ್ನಾಟಕ ಮಾಧ್ಯಮ ಪರ್ತಕರ್ತರ ಸಂಘದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದರು.

    ಪ್ರಸ್ತುತ ಗ್ರಾಮೀಣ ಭಾಗದ ಪತ್ರಕರ್ತರು ಹಾಗೂ ಪತ್ರಿಕೆಗಳು ತೀರಾ ಸಂಕಷ್ಠದಲ್ಲಿದ್ದು ಇವುಗಳ ಬಗ್ಗೆ ಮುಖ್ಯಮಂತ್ರಿಗಳು ಸೇರಿದಂತೆ ಸಂಭಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಒಂದಿಷ್ಠು ಪರಿಹಾರಕ್ಕೆ ರಾಜ್ಯ ಸಂಘವು ಶ್ರಮಿಸುತ್ತಿದೆ ಎಂದರು.

    ಪ್ರಮುಖವಾಗಿ ಪತ್ರಕರ್ತರು ಹಾಗೂ ಅವರ ಕುಟುಂಬದ ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಿದ್ದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಆರೋಗ್ಯ ವಿಮಾ ಯೋಜನೆಗಳ ಮೂಲಕ ಆರ್ಥಿಕ ಭದ್ರತೆ ಒದಗಿ ಸಲು ಮುಂದಾಗಿದ್ದು ಇದೇ ಮೊದಲ ಬಾರಿಗೆ ಸದಸ್ಯರ ಐಡಿ ಕಾರ್ಡಿನ ಜೊತೆ ೧೦ ಲಕ್ಷದ ಅಪಘಾತ ವಿಮೆ೫ ಲಕ್ಷರೂಗಳ ತುರ್ತು ಚಿಕಿತ್ಸೆ ಸೇರಿದಂತೆ ಹಿರಿಯ ಪತ್ರಕರ್ತರಿಗೂ ವಿಮಾ ಸೌಲಭ್ಯ ನೀಡುವ ಕಾರ್ಯಕ್ಕೆ ಸಂಘ ಮುಂದಾಗಿದೆ ಎಂದರು.

    ಸಂಘದ ಉಪಾಧ್ಯಕ್ಷರಾದ ಟಿ,ಕೃಷ್ಣನ್ ಮಾತನಾಡಿ ಸಂಘವನ್ನು ಸಂಪೂರ್ಣವಾಗಿ ಡಿಜಟಲಿಕರಣ ಮಾಡಿದ್ದು ಸಂಘದ ಸದಸ್ಯರು ಪತ್ರಿಕೋದ್ಯಮಕ್ಕೆ ಪೂರಕವಾದ ಮಾಹಿತಿಗಳನ್ನು ಪಡೆಯುವುದು ಹಾಗೂ ಮಾಹಿತಿಗಳನ್ನು ಹಂಚಿಕೊಳ್ಳಲು ಸಹಾಯವಾಗಲಿದೆ ಎಂದರು.

    ನಿರ್ದೇಶಕರಾದ ಅಮೃತೇಶ್ ಮಾತನಾಡಿ ಪತ್ರಕರ್ತರ ಕ್ಷೇಮನಿಧಿ ಸ್ಥಾಪನೆ, ಪತ್ರಕರ್ತರನ್ನು ಪ್ರೋತ್ಸಾಹಿಸುವ ದೃಷ್ಠಿಯಿಂದ ಕ್ರೀಯಾಶೀಲಾ ಪತ್ರಕರ್ತರಿಗೆ ೧೦ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ, ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ, ಪರ್ತಕರ್ತರ ನಿಯೋಗದೊಂದಿಗೆ ಅಂತರ್ ಜಿಲ್ಲಾ ಆದ್ಯಯನ ಪ್ರವಾಸ,ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಸಂಘ ಹಮ್ಮಿಕೊಳ್ಳಲಿದೆ ಎಂದರು.

    ನಿರ್ದೇಶಕರಾದ ರವೀಂದ್ರಶೆಟ್ಟಿ ಮಾತನಾನಾಡಿ ಇಂದು ಪತ್ರಿಕೋದ್ಯಮ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿದ್ದು ಪತ್ರಕರ್ತರ ಧ್ಯೆಯ ಉದ್ದೇಶಗಳು ಮರೆಯಾಗುತ್ತಿವೆ ಇಂತಹ ಪರಿಸ್ಥಿತಿಯಲ್ಲಿ ಸಮಾಜದ ಸಮಸ್ಯೆಗಳನ್ನು ಎತ್ತಿಹಿಡಿಯುವ ಪತ್ರಕರ್ತರ ಸಮಸ್ಯೆಗಳಿಗೆ ಸ್ಪಂದಿಸುವ ಸಂಘಟನೆಯ ಅವಶ್ಯಕತೆಯಿದ್ದು ಕರ್ನಾಟಕ ಮಾಧ್ಯಮ ಪತ್ರಕರ್ತರ ಸಂಘ ಈ ನಿಟ್ಟಿನಲ್ಲಿ ಉತ್ತಮ ಹೆಜ್ಜೆ ಹಾಕುತ್ತಿರುವುದು ಉತ್ತಮ ಬೆಳವಣಿಗೆ ಎಂದರು.

    ಇದೇ ಸಂಧರ್ಭದಲ್ಲಿ ಮಾಜಿ ಸೈನಿಕರು ಹಿರಿಯ ಪತ್ರಕರ್ತರಾದ ಟಿ.ಕೃಷ್ಣನ್, ಉಚ್ಚನ್ಯಾಯಾಲಯದ ಹಿರಿಯ ವಕೀಲರಾದ ಅಮೃತೇಶ್,ಹಾಗೂ ಪತ್ರಕರ್ತರಾದ ರವಿಂದ್ರಶೆಟ್ಟಿಯವರನ್ನು ರಾಜ್ಯ ಸಂಘದ ವತಿಯಿಂದ ಸನ್ಮಾನಿಸಲಾಯಿತು.

    ಇದೇ ಸಂಧರ್ಭದಲ್ಲಿ ಕಾರ್ಯದರ್ಶಿ ಬಂಗಾರಪ್ಪ,ಖಜಾಂಚಿ,ಮಂಜು ಎಂ,ಹೊಸಹಳ್ಳಿ, ನಿರ್ದೇಶಕ ರಾದ ರೂಪೇಶ್ ಕುಮಾರ್,ಅನಂತ್,ವಸಂತ್ ಕುಮಾರ್, ಸಿದ್ದೇಗೌಡ ಚನ್ನಾಪುರ,ಪ್ರಕಾಶ್, ಕುಮಾರ್, ಸೇರಿದಂತೆ ಹಲವರು ಉಪಸ್ಥಿತಿರಿದ್ದರು.

    The association’s mission is the all-round development of journalists.

  • ಶ್ರೀ ರಂಭಾಪುರಿ ಜಗದ್ಗುರುಗಳವರ ಜೂನ್ ಮಾಹೆಯ ಪ್ರವಾಸ

    ಶ್ರೀ ರಂಭಾಪುರಿ ಜಗದ್ಗುರುಗಳವರ ಜೂನ್ ಮಾಹೆಯ ಪ್ರವಾಸ

    ಚಿಕ್ಕಮಗಳೂರು:   ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು) ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ ೨೦೨೫ನೇ ಸಾಲಿನ ಜೂನ್ ಮಾಹೆಯ ಪ್ರವಾಸ ಕಾರ್ಯಕ್ರಮ ಈ ಕೆಳಗಿನಂತಿದೆ. 

    ದಿನಾಂಕ ೩ ರಂದು ಶಿವಮೊಗ್ಗದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ, ೪ರಂದು ವಿಜಯಪುರ ಜಿಲ್ಲೆ ದೇವರಹಿಪ್ಪರಗಿಯಲ್ಲಿ ಜಡಿಮಠ ಶ್ರೀಗಳವರ ಪಟ್ಟಾಧಿಕಾರದ ರಜತ ಮಹೋತ್ಸವ ಸಮಾರಂಭ, ೬ರಂದು ಹಾಸನ ಜಿಲ್ಲೆ ಆಲೂರು ತಾಲೂಕಿನ ಕಾರ್ಜುವಳ್ಳಿ ಹಿರೇಮಠದಲ್ಲಿ ರಜತ ಸಂಚಿಕೆ ಬಿಡುಗಡೆ ಮತ್ತು ಇಷ್ಟಲಿಂಗ ಮಹಾಪೂಜಾ, ೭ರಂದು ಅಜ್ಜಂಪುರ ತಾಲೂಕ ಹಣ್ಣೆಮಠದಲ್ಲಿ ಧರ್ಮ ಜಾಗೃತಿ ಸಮಾರಂಭ ೮ರಂದು ಕೊರಟಗೆರೆ ತಾಲೂಕ ಸಿದ್ಧರಬೆಟ್ಟ ಕ್ಷೇತ್ರದಲ್ಲಿ ವೀರಭದ್ರ ಶ್ರೀಗಳವರ ಪಟ್ಟಾಧಿಕಾರದ ವರ್ಧಂತಿ ಹಾಗೂ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸುವರು.

    ದಿನಾಂಕ ೯ರಂದು ಮೈಸೂರಿನಲ್ಲಿ ಇಷ್ಟಲಿಂಗ ಮಹಾಪೂಜಾ, ೧೦ರಂದು ಭದ್ರಾವತಿ ತಾಲೂಕ ಹನುಮಂತಪುರದಲ್ಲಿ ಇಷ್ಟಲಿಂಗ ಮಹಾಪೂಜಾ ನಡೆಸುವರು. ದಿನಾಂಕ ೧೧ರಂದು ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಪೌರ್ಣಿಮೆಯ ನಿಮಿತ್ಯ ವಾಸ್ತವ್ಯವಿದ್ದು ಭಕ್ತಾದಿಗಳಿಗೆ ದರ್ಶನಾಶೀರ್ವಾದ ನೀಡುವರು.

    ದಿನಾಂಕ ೧೩ರಂದು ಚಿಕ್ಕಮಗಳೂರಿನಲ್ಲಿ ಶ್ರೀ ಜಗದ್ಗುರು ರೇಣುಕ-ಬಸವ ಜಯಂತಿ ಸಮಾರಂಭ, ೧೪ರಂದು ಕಡೂರು ತಾಲೂಕ ಹುಲಿಕೆರೆಯಲ್ಲಿ ವಿರೂಪಾಕ್ಷಲಿಂಗ ಶ್ರೀಗಳವರ ೮೦ನೇ ವರ್ಷದ ಜನ್ಮ ದಿನೋತ್ಸವ ಸಮಾರಂಭ, ೧೫ರಂದು ಅಜ್ಜಂಪುರ ತಾಲೂಕ ಬಗ್ಗವಳ್ಳಿ ಗ್ರಾಮದಲ್ಲಿ ಇಷ್ಟಲಿಂಗ ಮಹಾಪೂಜಾ, ೧೬ ಮತ್ತು ೧೭ರಂದು ಕೊಪ್ಪಳ ತಾಲೂಕ ಹುಲಿಗಿಯಲ್ಲಿ ಪುರ ಪ್ರವೇಶ- ಇಷ್ಟಲಿಂಗ ಮಹಾಪೂಜಾ ನೆರವೇರಿಸುವರು.

    ದಿನಾಂಕ ೧೯ಮತ್ತು ೨೦ರಂದು ಮಹಾರಾಷ್ಟ್ರ ರಾಜ್ಯದ ಜತ್ ತಾಲೂಕಿನ ಸುಸಲಾದಿ ಗ್ರಾಮದಲ್ಲಿ ಪುರ ಪ್ರವೇಶ ಮತ್ತು ಶ್ರೀ ಮಲ್ಲಯ್ಯನ ಗುಡಿ ಉದ್ಘಾಟನೆ-ಕಳಸಾರೋಹಣ, ೨೨ರಂದು ತಮಿಳು ನಾಡಿನ ಕಾಟೇರಿಯಲ್ಲಿ ಶಾಲಾ ಶತಮಾನೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸುವರು.

    ದಿನಾಂಕ ೨೬ರಂದು ಕೋಲಾರ ಜಿಲ್ಲೆ ಬೆಳ್ಳಾವಿಯಲ್ಲಿ ಇಷ್ಟಲಿಂಗ ಮಹಾಪೂಜಾ, ೨೭ರಂದು ಬೆಂಗಳೂರಿನಲ್ಲಿ ಇಷ್ಟಲಿಂಗ ಮಹಾಪೂಜಾ, ೨೮ರಂದು ಬೆಂಗಳೂರು ಜೆ.ಪಿ,ನಗರದಲ್ಲಿ ಇಷ್ಟಲಿಂಗ ಮಹಾಪೂಜಾ-ಧರ್ಮ ಸಮಾರಂಭ, ೨೯ರಂದು ಬೆಂಗಳೂರು ನಗರದ ಭಾರತಿ ನಗರದಲ್ಲಿ ಧರ್ಮ ಸಮಾರಂಭ-ಮಹಾಪೂಜಾ ಹಾಗೂ ೩೦ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆಯಲ್ಲಿ ಇಷ್ಟಲಿಂಗ ಮಹಾಪೂಜಾ ಹಾಗೂ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸುವರು.

    ಶ್ರೀ ರಂಭಾಪುರಿ ಜಗದ್ಗುರುಗಳವರ ಧಾರ್ಮಿಕ ಕಾರ್ಯಕ್ರಮಗಳ ಲಾಭವನ್ನು ಸಮಸ್ತ ಜನತೆ ಪಡೆದುಕೊಳ್ಳಬೇಕೆಂದು ಶ್ರೀ ಜಗದ್ಗುರು ರಂಭಾಪುರಿ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ ತಿಳಿಸಿದ್ದಾರೆ. 

    Sri Rambhapuri Jagadguru’s June tour

  • ಮುಷ್ಕರ ನಿರತರ ಪೌರಸೇವಾ ನೌಕರರ ಬಳಿಗೆ ಶಾಸಕ ತಮ್ಮಯ್ಯ ಭೇಟಿ

    ಮುಷ್ಕರ ನಿರತರ ಪೌರಸೇವಾ ನೌಕರರ ಬಳಿಗೆ ಶಾಸಕ ತಮ್ಮಯ್ಯ ಭೇಟಿ

    ಚಿಕ್ಕಮಗಳೂರು: ಮುಷ್ಕರ ನಿರತರ ಬಳಿಗೆ ತೆರಳಿದ ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಸ್ವಚ್ಚತೆ ಮೂಲಕ ನಗರವಾಸಿಗಳ ಆರೋಗ್ಯ ಕಾಪಾಡುವ ಪೌರಸೇವಾ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ನಡೆಸುತ್ತಿರುವ ಮುಷ್ಕರಕ್ಕೆ ತಾವು ಸಂಪೂರ್ಣ ಬೆಂಬಲ ನೀಡುವುದಾಗಿ ಭರವಸೆ ನೀಡಿದರು.

    ನಿಮ್ಮೆಲ್ಲರ ಪ್ರತಿನಿಧಿಯಾಗಿ ಶಿಫಾರಸ್ಸು ಪತ್ರವನ್ನು ಮೇ.೩೦ ರಂದು ಶುಕ್ರವಾರ ಪೌರಾಡಳಿತ ಸಚಿವ ರಹೀಂಖಾನ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿಮಾಡಿ ಪತ್ರ ಸಲ್ಲಿಸಿ ಶೀಘ್ರ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸುತ್ತೇನೆಂದು ಹೇಳಿದರು.

    ಇದೇ ಸಂದರ್ಭದಲ್ಲಿ ಪೌರಾಡಳಿತ ಸಚಿವ ರಹೀಂಖಾನ್ ದೂರವಾಣಿ ಮೂಲಕ ಮಾತನಾಡಿದರು ಐದು ದಿನ ಗಡುವು ನೀಡುವಂತೆ ಕೋರಿದ್ದು, ಹಂತಹಂತವಾಗಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದಾರೆಂದು ಮುಷ್ಕರ ನಿರತ ಪೌರಕಾರ್ಮಿಕರಿಗೆ ತಿಳಿಸಿದರು.

    ನಗರಸಭಾಧಕ್ಷೆ ಸುಜಾತ ಶಿವಕುಮಾರ್ ಮಾತನಾಡಿ, ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರು ಮಳೆ ಚಳಿ ಬಿಸಿಲು ಎನ್ನದೆ ವಾಟರ್ ಮ್ಯಾನ್‌ಗಳು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯ ಎಂದರು.

    ಲೋಡರ್‍ಸ್ ಮತ್ತು ಚಾಲಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಸಾರ್ವಜನಿಕರು ಹಾಕಿದ ಕಸವನ್ನು ಎತ್ತುವ ಮೂಲಕ ಸ್ವಚ್ಚತೆ ಕಾಪಾಡುತ್ತಿದ್ದಾರೆ. ಜೊತೆಗೆ ಗುತ್ತಿಗೆ ಆಧಾರದಲ್ಲಿ ನಗರಸಭೆಯಲ್ಲಿ ಕಂಪ್ಯೂಟರ್, ಮತ್ತಿತರೆ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.

    ಕೂಡಲೇ ಈ ಎಲ್ಲಾ ನೌಕರರನ್ನು ಸರ್ಕಾರ ಕಾಯಂ ಸರ್ಕಾರಿ ನೌಕರರೆಂದು ಪರಿಗಣಿಸಿ ಅವರ ಜೀವನ ನಿರ್ವಹಣೆಗೆ ಉತ್ತಮ ವೇತನ ನೀಡಬೇಕು, ಆರೋಗ್ಯ ಸುಧಾರಣೆ, ಮನೆ ಬಾಡಿಗೆ, ಮಕ್ಕಳ ವಿದ್ಯಾಭ್ಯಾಸ ಮತ್ತಿತರ ಸಮಸ್ಯೆಗಳನ್ನು ಪೌರಸೇವಾ ನೌಕರರು ಎದುರಿಸುತ್ತಿದ್ದಾರೆಂದು ವಿವರಿಸಿದರು.

    ಕೇವಲ ಮಹಾನಗರ ಪಾಲಿಕೆಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ನೌಕರರನ್ನು ಕಾಯಂ ಮಾಡಿಕೊಂಡರೆ ಸಾಲದು. ಪಟ್ಟಣ, ಪುರಸಭೆ, ನಗರಸಭೆ ವ್ಯಾಪ್ತಿಯಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗಂಭೀರವಾಗಿ ಪರಿಗಣಿಸಿ ಕಾಯಂ ಸರ್ಕಾರಿ ನೌಕರರೆಂದು ಆದೇಶಿಸಬೇಕೆಂದು ಒತ್ತಾಯಿಸಿದರು.

    ಬಿಜೆಪಿ ಮುಖಂಡ ಸೀತಾರಾಂಭರಣ್ಯ ಮಾತನಾಡಿ, ರಾಜ್ಯಾದ್ಯಂತ ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರನ್ನು ಹಂತಹಂತವಾಗಿ ಕಾಯಂ ಸರ್ಕಾರಿ ನೌಕರರೆಂದು ಪರಿಗಣಿಸುವುದಾಗಿ ಹೇಳಿದ ಸರ್ಕಾರ ಕೊಟ್ಟ ಭರವಸೆಗಳನ್ನು ಈಡೇರಿಸದೆ ವಿಫಲವಾಗಿದೆ ಎಂದು ಆರೋಪಿಸಿದರು.

    ಜಗತ್ತಿಗೆ ಹೆಚ್ಚು ದೊಡ್ಡ ಸವಾಲಾಗಿರುವುದು ಈ ಸ್ವಚ್ಚತಾ ಕಾರ್ಯ. ಪಕ್ಷ ಯಾವುದೇ ಇರಲಿ ಆಳುವಂತ ಸರ್ಕಾರಗಳು ಯಾವುದಕ್ಕೆ, ಯಾರಿಗೆ ಮೊದಲ ಆದ್ಯತೆ ನೀಡಬೇಕಿತ್ತೋ ಅದಾಗದೇ ಇರುವುದರಿಂದ ಅನಿವಾರ್ಯವಾಗಿ ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೀದಿಗಿಳಿದು ಹೋರಾಟ ಮಾಡಬೇಕಾಗಿದೆ ಎಂದು ದೂರಿದರು.

    ಈ ವಿಚಾರದಲ್ಲಿ ಸರ್ಕಾರ ಮೀನಾಮೇಷ ಎಣಿಸದೆ ರಾಜ್ಯದ ೧೦ ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆಗಳಿಗೆ ಎಷ್ಟು ಜನ ಪೌರಕಾರ್ಮಿಕರ ಅವಶ್ಯಕತೆ ಇದೆ ಎಂಬುವುದರ ಬಗ್ಗೆ ಸಮಗ್ರ ಸಮೀಕ್ಷೆಯನ್ನು ನಡೆಸಿ ಎಲ್ಲರನ್ನೂ ಕಾಯಂಗೊಳಿಸಬೇಕೆಂದು ಆಗ್ರಹಿಸಿದರು.

    ನಗರಸಭೆಯ ವಿಪಕ್ಷ ನಾಯಕ ಮುನೀರ್ ಅಹಮದ್ ಮಾತನಾಡಿ, ವಿವಿಧ ೪೫ ನ್ಯಾಯಯುತ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಪೌರಸೇವಾ ನೌಕರರ ಮುಷ್ಕರಕ್ಕೆ ಪಕ್ಷಾತೀತವಾಗಿ ಎಲ್ಲಾ ಸದಸ್ಯರು ಬೆಂಬಲ ವ್ಯಕ್ತಪಡಿಸಿದ್ದು, ಶಾಸಕ ಹೆಚ್.ಡಿ. ತಮ್ಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಪೌರಾಡಳಿತ ಸಚಿವ ರಹೀಂಖಾನ್ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿ ಇವರ ಬೇಡಿಕೆ ಈಡೇರಿಸುವಂತೆ ಮನವಿ ಮಾಡಿದರು.

    ಈಗಾಗಲೇ ಮಳೆಗಾಲ ಆರಂಭವಾಗಿದ್ದು, ಡೆಂಗ್ಯೂ, ಕೊರೊನಾ ಹರಡುತ್ತಿರುವ ಈ ಸಂದರ್ಭದಲ್ಲಿ ಪೌರ ಕಾರ್ಮಿಕರ ಬೇಡಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಈಡೇರಿಸುವ ಮೂಲಕ ಪೌರಕಾರ್ಮಿಕರು ಸ್ವಚ್ಚತೆ ಕರ್ತವ್ಯಕ್ಕೆ ಮರಳುವಂತೆ ಮಾಡಬೇಕೆಂದು ವಿನಂತಿಸಿದರು.

    ಪೌರ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್. ಅಣ್ಣಯ್ಯ ಮಾತನಾಡಿ, ಮಹಾನಗರ ಪಾಲಿಕೆಯಲ್ಲಿರುವ ಪೌರ ಕಾರ್ಮಿಕರನ್ನು ಮಾತ್ರ ಕಾಯಂಗೊಳಿಸಲಾಗಿದೆ. ಆದರೆ, ಸ್ಥಳೀಯ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಸೇವಾ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸುವ ಜೊತೆಗೆ ಆರೋಗ್ಯ ವಿಮೆ, ಕೆಜಿಐಡಿ ಸೌಲಭ್ಯಗಳನ್ನು ಕಳೆದ ೩೦ ವರ್ಷಗಳಿಂದ ವಾಟರ್ ಮ್ಯಾನ್‌ಗಳಾಗಿ ಸೇವೆ ಸಲ್ಲಿಸುತ್ತಿರುವವರಿಗೆ ನೇರ ಪಾವತಿ ಅಡಿಗೆ ತರಬೇಕೆಂದು ಒತ್ತಾಯಿಸಿದರು.

    ಈ ಸಂದರ್ಭದಲ್ಲಿ ನಗರಸಭೆ ಆಯುಕ್ತರಾದ ಬಸವರಾಜ್, ಉಪಾಧ್ಯಕ್ಷೆ ಅನುಮಧುಕರ್, ಸದಸ್ಯರುಗಳಾದ ಗುರುಮಲ್ಲಪ್ಪ, ಇಂದಿರಾ ಶಂಕರ್, ರೂಪಕುಮಾರ್, ರಾಜು, ದೀಪಾ ರವಿಕುಮಾರ್, ಪರಮೇಶ್, ಸೈಯದ್ ಜಾವಿದ್, ಖಲಂದರ್, ಶಾದಾಬ್ ಅಲಂಖಾನ್, ತಬಸ್ಸುಮ್ ಬಾನು, ವಿಫುಲ್‌ಕುಮಾರ್ ಜೈನ್, ಸಿ.ಎಂ.ಸಲ್ಮಾ, ಮಂಜುಳಾ, ಲಕ್ಷ್ಮಣ್, ಗೌಸಿಯಾ ಖಾನಂ, ಭವ್ಯಮಂಜುನಾಥ್, ಎ.ಸಿ.ಕುಮಾರೇಗೌಡ, ಗೋಪಿ, ದಂಟರಮಕ್ಕಿ ಶ್ರೀನಿವಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಂಪಾಪುರ ಮಂಜೇಗೌಡ ಸಂಘದ ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಆರ್.ಓ ಶಿವಾನಂದ್, ಸೂಪರ್‌ಡೆಂಟ್ ಲತಾಮಣಿ. ಆರೋಗ್ಯ ನಿರೀಕ್ಷಕರಾದ ವೆಂಕಟೇಶ್, ಈಶ್ವರ್, ನಾಗಪ್ಪ, ರಂಗಪ್ಪ, ವಿವೇಕ್, ರಮೇಶ್, ಹೊರಗುತ್ತಿಗೆ ನೌಕರರಾದ ಕೃಷ್ಣ, ಮೂರ್ತಿ, ಪ್ರಸನ್ನ ಇತರರು ಉಪಸ್ಥಿತರಿದ್ದರು.

    MLA Thammayya visits striking civil servants

  • ಮೇ.29ಕ್ಕೆ ವೃದ್ಧಿ ಸೌಹಾರ್ದ ಸಹಕಾರಿ ಸಂಘ ನಿ. ಪ್ರಾರಂಭೋತ್ಸವ

    ಮೇ.29ಕ್ಕೆ ವೃದ್ಧಿ ಸೌಹಾರ್ದ ಸಹಕಾರಿ ಸಂಘ ನಿ. ಪ್ರಾರಂಭೋತ್ಸವ

    ಚಿಕ್ಕಮಗಳೂರು:  ನಗರದ ಎಂ.ಜಿ ರಸ್ತೆಯ ೫ನೇ ಕ್ರಾಸ್‌ನಲ್ಲಿರುವ ಸೂರಪ್ಪ ಬೀದಿಯ ಎಂ.ಎಂ ಕಾಂಪ್ಲೆಕ್ಸ್‌ನಲ್ಲಿ ವೃದ್ಧಿ ಸೌಹಾರ್ದ ಸಹಕಾರಿ ಸಂಘವನ್ನು ಮೇ.೨೯ ರಂದು ಗುರುವಾರ ಬೆಳಗ್ಗೆ ೧೧ ಗಂಟೆಗೆ ಪ್ರಾರಂಭಿಸಲಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಸಿ.ಟಿ. ಜಯವರ್ಧನ್ ತಿಳಿಸಿದರು.

    ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ನೂತನ ವೃದ್ಧಿ ಸೌಹಾರ್ದ ಸಹಕಾರಿ ಸಂಘದ ಆಡಳಿತ ಕಚೇರಿ, ಆಡಳಿತ ಮಂಡಳಿಯ ಸಭಾ ಕೊಠಡಿ ಅಧ್ಯಕ್ಷರು-ಉಪಾಧ್ಯಕ್ಷರು ನಿರ್ದೇಶಕರ ಪದಗ್ರಹಣ ಹಾಗೂ ಸನ್ಮಾನ ಸಮಾರಂಭವನ್ನು ಅಂದು ಏರ್ಪಡಿಸಲಾಗಿದೆ ಎಂದರು.

    ನೂತನ ಕಚೇರಿ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಉದ್ಘಾಟಿಸುವರು, ನೂತನ ಭದ್ರತಾ ಕೊಠಡಿಯನ್ನು ಶಾಸಕ ಹೆಚ್.ಡಿ. ತಮ್ಮಯ್ಯ, ಆಡಳಿತ ಮಂಡಳಿಯ ಸಭಾ ಕೊಠಡಿಯನ್ನು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ, ಸಿಇಓ ಕೊಠಡಿಯನ್ನು ಎಂಎಲ್‌ಸಿ ಎಸ್.ಎಲ್. ಭೋಜೇಗೌಡ ಉದ್ಘಾಟಿಸುವರು ಎಂದು ಹೇಳಿದರು.

    ನಿರ್ದೇಶಕರ ಪದಗ್ರಹಣವನ್ನು ವಿಧಾನ ಪರಿಷತ್‌ನ ಉಪಸಭಾಪತಿ ಎಂ.ಕೆ. ಪ್ರಾಣೇಶ್ ನೆರವೇರಿಸುವರು. ವಿಶೇಷ ಆಹ್ವಾನಿತರಾಗಿ ಜಿ. ನಂಜನಗೌಡ, ಬೆಳ್ಳಿಪ್ರಕಾಶ್, ಡಿ.ಎನ್. ಸುರೇಶ್ ಕುಮಾರ್, ಡಾ. ಡಿ.ಎಸ್ ತೇಜಸ್ವಿನಿ, ಎಸ್.ಎಂ. ಶಶಿರೇಖಾ, ಮಹಮದ್ ನಯಾಜ್, ಗಾಯಿತ್ರಿ ಶಾಂತೇಗೌಡ, ಎಂ.ಆರ್. ದೇವರಾಜ್ ಶೆಟ್ಟಿ, ಹೆಚ್.ಪಿ. ಮಂಜೇಗೌಡ ಮತ್ತಿತರರು ಭಾಗವಹಿಸಲಿದ್ದಾರೆಂದು ಹೇಳಿದರು.

    ಪತ್ರಿಕಾಗೋಷ್ಠಿಯಲ್ಲಿ ಆಡಳಿತ ಮಂಡಳಿಯ ನಿರ್ದೇಶಕರಾದ ಉದಯ್ ಶಂಕರ್ ಭಟ್, ಶ್ರೀರಾಂ ರಾವ್, ಸಿಇಓ ಮಂಜುನಾಥ.ಎ ಕುಡಲ್ಕರ್ ಉಪಸ್ಥಿತರಿದ್ದರು.

    Vriddhi Sauharda Cooperative Society N. Inauguration ceremony on May 29th